Author: roovari

ಮಂಗಲ್ಪಾಡಿ : ಕಲಾಕುಂಚ ಕೇರಳ ಗಡಿನಾಡ ಘಟಕದ ವತಿಯಿಂದ ಮಂಗಲ್ಪಾಡಿ ಏಕಾಹ ಭಜನಾ ಮಂದಿರದ 38ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ‘ಕಲಾಕುಸುಮ’ ಎಂಬ ವಿನೂತನ ಕಾರ್ಯಕ್ರಮವು ದಿನಾಂಕ 11 ಅಕ್ಟೋಬರ್ 2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಗೀತಾ ಪಠಣೆ ಮತ್ತು “ಮಹಿಷಾಸುರ ಮರ್ದಿನಿ” ಸ್ತೋತ್ರ ಗಾಯನ, ಕುಮಾರಿ ಸುಪ್ರಜಾ ರಾವ್ ಇವರಿಂದ ವಯಲಿನ್ ವಾದನ, ವಿದುಷಿ ಭಾಗ್ಯಶ್ರೀ ರೈ ಪುತ್ತೂರು ಇವರ ಶಿಷ್ಯರಿಂದ ನೃತ್ಯಂಜಲಿ ಕಾರ್ಯಕ್ರಮ, ಮಾಸ್ಟರ್ ನಂದನ್ ಹೆಬ್ಬಾರ್ ಮತ್ತು ಕುಮಾರಿ ಅದಿತಿ ಕಲ್ಮಾಡಿ ಇವರಿಂದ ಗಾಯನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವು ಗೋಲ್ಡನ್ ಬುಕ್ ರೆಕಾರ್ಡ್ ಇದರಲ್ಲಿ ಪ್ರಶಸ್ತಿ ಪಡೆದ ಕುಮಾರಿ ಅಭಿಜ್ಞಾ ಹರೀಶ್ ಮತ್ತು ಕುಮಾರಿ ಅಪರ್ಣ ಇವರ ಅದ್ಭುತ ಯೋಗ ಪ್ರದರ್ಶನದಿಂದ ಸಮಾಪನಗೊಂಡಿತು.

Read More

ಮಂಗಳೂರು : ದಾವಣಗೆರೆಯ ಕಲಾ ಕುಂಚ ಸಾಂಸ್ಕೃ ತಿಕ ಸಂಸ್ಥೆಯಿಂದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಜ್ಯ ಮಟ್ಟದ ಕರ್ನಾಟಕ ಮುಕುಟಮಣಿ ಪ್ರಶಸ್ತಿಗೆ ಮಂಗಳೂರಿನ ರಂಗನಟ ಸುರೇಶ್ ಕುಮಾರ್ ಆರ್.ಎಸ್. ಆಯ್ಕೆಯಾಗಿದ್ದಾರೆ. ಸುರೇಶ್ ಕುಮಾರ್ ನಾಟಕ ರಚನೆಗಾರರಾಗಿ, ನಿರ್ದೇಶಕನಾಗಿ ಮೂರು ದಶಕಗಳಿಂದ ಸಕ್ರಿಯರಾಗಿದ್ದಾರೆ. 60ಕ್ಕೂ ಹೆಚ್ಚಿನ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹತ್ತಾರು ತುಳು ಚಲನಚಿತ್ರಗಳ ಗೀತೆಗಳಿಗೆ ಸಾಹಿತ್ಯ ರಚಿಸಿದ್ದಾರೆ. ಹಲವು ತುಳು ಹಾಸ್ಯ ಧಾರಾವಾಹಿಗಳನ್ನೂ ರಚಿಸಿ, ನಿರ್ದೇಶಿಸಿದ್ದಾರೆ.

Read More

ಕುಶಾಲನಗರ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ : 50 ಹಾಗೂ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಿನಾಂಕ 11 ನವೆಂಬರ್ 2024ರಂದು ಕುಶಾಲನಗರ ಪಟ್ಟಣದ ರಥಬೀದಿ ಹಾಗೂ ಪ್ರವಾಸಿ ಮಂದಿರ (ಐ.ಬಿ.) ರಸ್ತೆಯಲ್ಲಿ ಏಕಕಾಲದಲ್ಲಿ ಐದು ಸಹಸ್ರ ಮಂದಿಯಿಂದ ಕನ್ನಡ ಕಂಠ ಗಾಯನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಸಂಘಟಿಸುವ ಮೂಲಕ ಕನ್ನಡದ ಕಹಳೆಯನ್ನು ಮೊಳಗಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿನಾಂಕ 19 ಅಕ್ಟೋಬರ್ 2024ರಂದು ನಡೆದ ಸಭೆಯಲ್ಲಿ ಎಲ್ಲರೂ ಜತೆಗೂಡಿ ಕಂಠ ಗಾಯನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಒಕ್ಕೊರಲಿನಿಂದ ನಿರ್ಧಾರ ತೆಗೆದುಕೊಳ್ಳಲಾಯಿತು. ಉದ್ದೇಶಿತ ಕಂಠ ಗಾಯನ ಕಾರ್ಯಕ್ರಮದ ಯಶಸ್ಸಿಗೆ ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರ ಸಹಭಾಗಿತ್ವದಲ್ಲಿ ಏಕಕಾಲದಲ್ಲಿ ಐದು ಸಹಸ್ರ ಮಂದಿಯಿಂದ ವಿನೂತನವಾಗಿ ಕನ್ನಡ ಕಂಠ…

Read More

ಮಲಯಾಳಂನ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲಿ ಉರೂಬ್ (ಪಿ.ಸಿ. ಕುಟ್ಟಿಕೃಷ್ಣನ್) ಅವರ ‘ಸುಂದರಿಗಳುಂ ಸುಂದರನ್‌ಮಾರುಂ’ ಎಂಬ ಕಾದಂಬರಿಯೂ ಒಂದು. ಇದು ಮಲಬಾರಿನ ಸಾಂಸ್ಕೃತಿಕ ಇತಿಹಾಸವಾಗಿದ್ದು ಮೂರು ತಲೆಮಾರುಗಳ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳನ್ನು ಒಳಗೊಂಡಿದೆ. ಮಹಾನುಭಾವರೆಂದು ಹೊಗಳಿಸಿಕೊಂಡ ಚಾರಿತ್ರಿಕ ವ್ಯಕ್ತಿಗಳನ್ನು, ದಿನಾಂಕಗಳನ್ನು ಮತ್ತು ಘಟನೆಗಳನ್ನು ಕೈಬಿಟ್ಟು ಸಾಂಸ್ಕೃತಿಕ ಸಂದರ್ಭಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಜನಸಾಮಾನ್ಯರ ಜೀವನಾನುಭವಗಳನ್ನು ಮೂರ್ತಗೊಳಿಸಿದೆ. ಖಿಲಾಫತ್ ಚಳುವಳಿ, ವಿಶ್ವ ಮಹಾಯುದ್ಧಗಳು ಮತ್ತು 1942ರ ಕ್ವಿಟ್ ಇಂಡಿಯಾ ಚಳುವಳಿವರೆಗಿನ ನಲುವತ್ತು ವರ್ಷಗಳ ವ್ಯಾಪ್ತಿಯಲ್ಲಿ ಮಲಬಾರ್ ಪ್ರದೇಶದ ಕೆಲವು ಕುಟುಂಬಗಳ ಕತೆಯನ್ನು ಹೇಳುವ ಕಾದಂಬರಿಯು ಉತ್ತಮ ಪ್ರಯೋಗಶೀಲ ಕೃತಿಯಾಗಿದೆ. ಈ ಕಾದಂಬರಿಯಲ್ಲಿರುವ ಏಳು ಅಧ್ಯಾಯಗಳು ಸ್ವತಂತ್ರ ನೀಳ್ಗತೆಗಳಾಗಿಯೂ ಓದಿಸಿಕೊಳ್ಳುತ್ತವೆ. ಹಂಪಿ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ ಕುಂಟಾರ್ ಅವರು ಈ ಕಾದಂಬರಿಯನ್ನು ‘ಸುಂದರಿಯರು ಸುಂದರರು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಠೋರವಾದ ನೋವು ಮತ್ತು ಮಿತಿಯಿಲ್ಲದ ದುಃಖಗಳಿಂದ ಕೂಡಿರುವ ಪ್ರಪಂಚದಲ್ಲಿ ಮನುಷ್ಯತ್ವದ ಸೆಲೆಯಿಲ್ಲದಂತೆ ಹೊಗೆಯಾಡುತ್ತಿರುವ ದ್ವೇಷ, ಜಿದ್ದು, ಸ್ವಾರ್ಥಗಳು ಹೆಣೆಯುವ ನರಕದ ಬೇಲಿಯೊಳಗೆ…

Read More

ಕಾಸರಗೋಡು : ಡಾ. ನಾ. ಮೊಗಸಾಲೆ ನೇತೃತ್ವದ ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ದಿನಾಂಕ 1 ನವೆಂಬರ್ 2024ರಂದು ಕನ್ನಡ ಸಂಘದ ಬಯಲು ರಂಗ ಮಂದಿರದಲ್ಲಿ ನಡೆಯುವ ಕಾಂತಾವರ ಉತ್ಸವ – 2024 ಸಮಾರಂಭದಲ್ಲಿ ಕಾಸರಗೋಡಿನ ಮೂವರು ಸಾಹಿತಿಗಳ ನಾಲ್ಕು ಕೃತಿಗಳು ಲೋಕಾರ್ಪಣೆಯಾಗಲಿದೆ. ಕಾಂತಾವರದ ಕನ್ನಡ ಸಂಘವು ಪ್ರತೀ ವರ್ಷವೂ ಪ್ರಕಟಿಸುವ ‘ನಾಡಿಗೆ ನಮಸ್ಕಾರ’ ಗ್ರಂಥ ಮಾಲಿಕೆಯಲ್ಲಿ ಈ ನೂತನ ಕೃತಿಗಳು ಬಿಡುಗಡೆಯಾಗಲಿದೆ. ಕಾಸರಗೋಡಿನ ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು ರಚಿಸಿದ ‘ಕಾಸರಗೋಡಿನ ಕನ್ನಡ ಹೋರಾಟಗಾರ ಅಡೂರು ಉಮೇಶ ನಾಯಕ್’ ಮತ್ತು ‘ಹಾಸ್ಯ ಸಾಹಿತ್ಯದ (ನಿ)ರೂಪಕ ವೈ. ಸತ್ಯನಾರಾಯಣ ಕಾಸರಗೋಡು’ ಎಂಬ ಕೃತಿಗಳು, ಪತ್ರಕರ್ತ ಸಾಹಿತಿ ವಿರಾಜ್ ಅಡೂರು ಬರೆದ ‘ಮಕ್ಕಳ ಸಾಹಿತ್ಯ ಸಂಗಮದ ಜಂಗಮ ಶ್ರೀನಿವಾಸ ರಾವ್’ ಎಂಬ ಕೃತಿ ಹಾಗೂ ಶಿಕ್ಷಕಿ ಆಶಾ ದಿಲೀಪ್ ರೈ ಸುಳ್ಯಮೆ ಇವರು ಬರೆದ ‘ಸಾಹಿತ್ಯ ಶಿಕ್ಷಣ ಸಂಪನ್ನೆ ಸಾವಿತ್ರಿ ಎಸ್. ರಾವ್’ ಎಂಬ ಕೃತಿಗಳು ಬಿಡುಗಡೆಯಾಗಲಿವೆ. ಈ ಕೃತಿಗಳನ್ನು…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಸಾಹಿತ್ಯ, ಕಲೆ ಮತ್ತು ಜಾನಪದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ‘ಗೌರವ ಪ್ರಶಸ್ತಿ’ ಹಾಗೂ ‘ಪುಸ್ತಕ ಪುರಸ್ಕಾರ’ ನೀಡುತ್ತಿದ್ದು, 2023ನೇಯ ಸಾಲಿಗೆ ಸಾಧಕರನ್ನು ಘೋಷಿಸಲಾಗಿದೆ. ಗೌರವ ಪ್ರಶಸ್ತಿಗೆ ಕೊಂಕಣಿ ಸಾಹಿತ್ಯ ವಿಭಾಗದಲ್ಲಿ ಮಾರ್ಸೆಲ್ ಎಂ. ಡಿಸೋಜ ಮಂಗಳೂರು, ಕೊಂಕಣಿ ಕಲೆ ವಿಭಾಗದಲ್ಲಿ ಹ್ಯಾರಿ ಫರ್ನಾಂಡಿಸ್ ಮುಂಬಯಿ ಮತ್ತು ಕೊಂಕಣಿ ಜಾನಪದ ವಿಭಾಗದಲ್ಲಿ ಅಶೋಕ್ ದಾಮು ಕಾಸರಕೋಡು ಇವರನ್ನು ಆಯ್ಕೆ ಮಾಡಲಾಗಿದೆ. ಪುಸ್ತಕ ಪುರಸ್ಕಾರಕ್ಕಾಗಿ ಕೊಂಕಣಿ ಕವನ ವಿಭಾಗದಲ್ಲಿ ಬಂಟ್ವಾಳದ ಲೇಖಕರಾದ ಮೇರಿ ಸಲೋಮಿ ಡಿ’ಸೋಜ ಇವರ ‘ಅಟ್ವೊ ಸುರ್‌’, ಕೊಂಕಣಿ ಸಣ್ಣ ಕತೆ ವಿಭಾಗದಲ್ಲಿ ಲೇಖಕರು ಫಾ. ರೊಯ್ಸನ್ ಫರ್ನಾಂಡಿಸ್ ಹಿರ್ಗಾನ್ ಇವರ ‘ಪಯ್ಲಿ ಭೆಟ್’ ಮತ್ತು ಕೊಂಕಣಿ ಭಾಷಾಂತರ ವಿಭಾಗದಲ್ಲಿ ಮಂಗಳೂರಿನ ಲೇಖಕ ಸ್ಟೀಫನ್‌ ಮಸ್ಕರೇನ್ಹಸ್ (ಹೇಮಾಚಾರ್ಯ) ಇವರ ‘ಎಕ್ಲೊ ಎಕ್ಸುರೊ’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಯು ರೂ.50,000/- ನಗದು, ಪ್ರಮಾಣ ಪತ್ರ, ಶಾಲು, ಹಾರ, ಪೇಟ ಸ್ಮರಣಿಕೆ,…

Read More

ಬೆಂಗಳೂರು : ಎಂ.ಇ.ಎಸ್. ಕಲಾವೇದಿ ಇದರ ವತಿಯಿಂದ ‘ನಾಟಕೋತ್ಸವ 2024’ವನ್ನು ದಿನಾಂಕ 25 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಬೆಂಗಳೂರಿನ ಮಲ್ಲೇಶ್ವರಂ ಎಂ.ಇ.ಎಸ್. ಕಿಶೋರ ಕೇಂದ್ರದಲ್ಲಿ ಆಯೋಜಿಸಲಾಗಿದೆ. ದಿನಾಂಕ 25 ಅಕ್ಟೋಬರ್ 2024ರಂದು ಸಂಜೆ 6-00 ಗಂಟೆಗೆ ಈ ನಾಟಕೋತ್ಸವವನ್ನು ಕರ್ನಾಟಕ ನಾಟಕ ಅಕಾಡೆಮಿ ಇದರ ಮಾಜಿ ಅಧ್ಯಕ್ಷರಾದ ಡಾ. ಬಿ.ವಿ. ರಾಜರಾಮ್ ಇವರು ಉದ್ಘಾಟನೆ ಮಾಡಲಿರುವರು. ಬಳಿಕ ಶರತ್ ಪರ್ವತವಾಣಿ ಇವರ ನಿರ್ದೇಶನದಲ್ಲಿ ‘ಒಂದು ವಿಲಯ ಕಥೆ’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 26 ಅಕ್ಟೋಬರ್ 2024ರಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ರಂಗಸಮೂಹ ಮಂಚಿಕೇರಿ (ರಿ.) ತಂಡದವರು ಹುಲಗಪ್ಪ ಕಟ್ಟಿಮನಿ ಇವರ ನಿರ್ದೇಶನದಲ್ಲಿ ಅಭಿನಯಿಸುವ ಕನ್ನಡ ಸಾಮಾಜಿಕ ನಾಟಕ ‘ಕಾಲಚಕ್ರ’. ದಿನಾಂಕ 27 ಅಕ್ಟೋಬರ್ 2024ರಂದು ಪ್ರೊ. ಟಿ. ಆರ್. ಶೇಷಾದ್ರಿ ಅಯ್ಯಂಗಾರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶೃಂಗೇರಿಯ ನಾಟ್ಯಭಾರತೀ ತಂಡದವರು ಭಾಸ ಮಹಾ ಕವಿ ವಿರಚಿತ ಎಂ.ಕೆ.…

Read More

ಬೆಂಗಳೂರು : ಯಕ್ಷಗಾನದ ಹಾಸ್ಯಚಕ್ರವರ್ತಿ ಎಂದು ಹೆಸರಾಗಿ ಹಾಸ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದ ಬಂಟ್ವಾಳ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ಅ.21ರಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಇಂದಿನಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ ಬೆಳಗ್ಗೆ ಬೆಂಗಳೂರಿನಲ್ಲಿ ಬಂದು ಇಳಿದ ತಂಡದಲ್ಲಿದ್ದ ಬಂಟ್ವಾಳರು ಮುಂಜಾನೆ ತೀವ್ರತರವಾದ ಹೃದಯ ಸ್ತಂಭನವಾದಾಗ ಜೊತೆ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಫಲವಾಗದೆ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದಿ. ಗಣಪತಿ ಆಚಾರ್ಯ ಹಾಗೂ ದಿ. ಭವಾನಿ ದಂಪತಿಗಳ ಸುಪುತ್ರನಾಗಿ ದಿನಾಂಕ 12 ಅಕ್ಟೋಬರ್ 1957ರಂದು ಜನಿಸಿ, ತಮ್ಮ ಹದಿಮೂರನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆಗೈದು, ಸುಮಾರು ಐದು ದಶಕಗಳ ಸುದೀರ್ಘ ತಿರುಗಾಟದಲ್ಲಿ ಆಡ್ವಾಡಿ, ಸುಂಕದಕಟ್ಟೆ, ಸೊರ್ನಾಡು, ಕಟೀಲು, ಪುತ್ತೂರು, ಕದ್ರಿ, ಸುರತ್ಕಲ್‌, ಹೊಸನಗರ, ಹನುಮಗಿರಿ ಮೊದಲಾದ ಮೇಳಗಳಲ್ಲಿ  ತಿರುಗಾಟವನ್ನು ಮಾಡಿದ ಯಕ್ಷರಂಗದ ಅನೂಹ್ಯ ಅನುಭವದ ಸರದಾರರು ಶ್ರೀ ಬಂಟ್ವಾಳ ಜಯರಾಮ ಆಚಾರ್ಯರು.…

Read More

ಹಂಗಾರಕಟ್ಟೆ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇದರ ಐವತ್ತರ ಸಂಭ್ರಮ ಪ್ರಯುಕ್ತ ‘ಯಕ್ಷ ಸಪ್ತೋತ್ಸವ 2024’ವನ್ನು ದಿನಾಂಕ 21 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 21 ಅಕ್ಟೋಬರ್ 2024ರಂದು ವಿದ್ವಾನ್ ಅಶೋಕ ಆಚಾರ್ ಇವರಿಂದ ಭಜನೆ ಹಾಡುಗಳ ಬಳಿಕ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಮದ್ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ‘ಶ್ರೀ ಕೃಷ್ಣ ಜನ್ಮ’ ಎಂಬ ಪ್ರಸಂಗದ ಯಕ್ಷಗಾನ ನಡೆಯಲಿದೆ. ದಿನಾಂಕ 22 ಅಕ್ಟೋಬರ್ 2024ರಂದು ಶ್ರೀ ಅಚ್ಚುತ ಪೂಜಾರಿ ಮತ್ತು ಶ್ರೀ ಚಂದ್ರಕಾಂತ ನಾಯರಿ ಇವರಿಂದ ಸುಗಮ ಸಂಗೀತ ಬಳಿಕ ‘ಕಾಲಯವನ ಸಂಹಾರ’ ಯಕ್ಷಗಾನ, ದಿನಾಂಕ 23 ಅಕ್ಟೋಬರ್ 2024ರಂದು ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಇವರ ನೆನಪಿನಲ್ಲಿ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಹೂವಿನ ಕೋಲು ಪ್ರದರ್ಶನ, ಸಭಾ ಕಾರ್ಯಕ್ರಮದಲ್ಲಿ ಹಿರಿಯ ಭಾಗವತರಾದ…

Read More

ಬಂಟ್ವಾಳ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಿ.ಸಿ.ರೋಡು ಸಂಚಯಗಿರಿ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಏರ್ಪಡಿಸಲಾದ ‘ಮಹರ್ಷಿ ವಾಲ್ಮೀಕಿ ಜಯಂತಿ’ ಕಾರ್ಯಕ್ರಮವು ದಿನಾಂಕ 17 ಅಕ್ಟೋಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳದ ರಾಣಿ ಅಬ್ಬಕ್ಕ ತುಳು‌ ಅಧ್ಯಯನ ಕೇಂದ್ರದ ಸಂಚಾಲಕ ಡಾ. ತುಕಾರಾಮ ಪೂಜಾರಿಯವರು “ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯವನ್ನು ಲೋಕಕ್ಕೆ ಅರ್ಪಣೆ ಮಾಡಿದ ಮಹಾನ್ ದಾರ್ಶನಿಕರು. ಸಹಸ್ರಾರು ವರ್ಷಗಳ ಇತಿಹಾಸದ ಹಿನ್ನಲೆಯಲ್ಲಿ ಶ್ರೀರಾಮನ ವ್ಯಕ್ತಿತ್ವದ ಮೂಲಕ ಪರಮಾತ್ಮನನ್ನು ಜಗತ್ತಿಗೆ ಪರಿಚಯಿಸಿದರು‌” ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಮಾತನಾಡಿ “ರಾಮಾಯಣ ಕಾವ್ಯ ಭಾರತೀಯ ಸಂಸ್ಕೃತಿಯ ಅಡಿಪಾಯ. ಮಾನವ ಮತ್ತು ಪ್ರಕೃತಿಯ ಅವಿನಾಭಾವ ಸಂಬಂಧಗಳನ್ನು ಸುಂದರ ರೂಪಕಗಳ ಮೂಲಕ ಕಟ್ಟಿಕೊಟ್ಟು ಸಾರ್ವಕಾಲಿಕ ಮೌಲ್ಯಗಳನ್ನು ವಾಲ್ಮೀಕಿ ಮಹರ್ಷಿ ತಿಳಿಸಿದ್ದಾರೆ” ಎಂದರು. ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಂಚಾಲಕ ಕೈಯೂರು ನಾರಾಯಣ ಭಟ್, ನಿವೃತ್ತ ಉಪನ್ಯಾಸಕ…

Read More