Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಮಾಹೆ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆಶ್ರಯದಲ್ಲಿ ಡಾ. ಕೆ. ಚಿನ್ನಪ್ಪ ಗೌಡ ಬರೆದ ಮಾಚಾರು ಗೋಪಾಲ ನಾಯ್ಕ ಹೇಳಿದ ‘ಸಿರಿಸಂಧಿ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 10-02-2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ “ಜಗತ್ತಿನಲ್ಲೇ ಕರ್ನಾಟಕ ಜಾನಪದ ಸಂಸ್ಕೃತಿ ಅದ್ಭುತವಾಗಿದ್ದು, ಚಿನ್ನಪ್ಪ ಗೌಡರು ಬರೆದ ‘ಸಿರಿಸಂಧಿ’ ಕೃತಿಯೂ ತುಳುವ ನಾಡು ಸಹಿತ ರಾಜ್ಯದ ಇತರ ಭಾಗದ ಜಾನಪದಗಳ ಅಧ್ಯಯನಕ್ಕೂ ಮೇಲ್ಪಂಕ್ತಿಯಾಗಿದೆ. ತುಳುನಾಡು ವ್ಯಾಪ್ತಿ ಮಾತ್ರವಲ್ಲದೇ ಮಂಟೇಸ್ವಾಮಿ, ಮಲೆಮಹದೇಶ್ವರ, ಹಾಲುಮತ, ಕೃಷ್ಣಗೊಲ್ಲ ಮೊದಲಾದ ಜಾನಪದಗಳ ಅಧ್ಯಯನಕ್ಕೆ ಇದೊಂದು ಮಾರ್ಗದರ್ಶಿಯಾಗಿದೆ. ಸಿರಿ ಸಾಹಿತ್ಯದ ಬಗ್ಗೆ ನಿರಂತರ ಅಧ್ಯಯನ ಮುಂದುವರಿಯಬೇಕು” ಎಂದು ಹೇಳಿದರು. ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, “ಯುವಜನರು ಕಲೆ, ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು” ಎಂದರು. ವಿಮರ್ಶಕ ಡಾ. ಬಿ. ಜನಾರ್ದನ್ ಭಟ್ ಕೃತಿ ಪರಿಚಯಿಸಿದರು.…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾ.ಮಂ. ಕೃಷ್ಣರಾಯರಿಗೆ ದಿ. ಟಿ. ಶ್ರೀನಿವಾಸ್ ಸ್ಮರಣಾರ್ಥ ‘ಶ್ರೀ ಪಿ.ಕೆ. ನಾರಾಯಣ’ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 13-02-2024ರಂದು ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿದ ನಾಡೋಜ ಡಾ. ಮಹೇಶ ಜೋಶಿಯವರು “ಶಾ.ಮಂ. ಕೃಷ್ಣರಾವ್ ಅವರು ಗೋವಾ ಮತ್ತು ಕರ್ನಾಟಕದ ನಡುವಿನ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಿದ್ದಾರೆ. ಸ್ವತ: ತಾವು ಬರೆಯುವುದರ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಬರಹಗಾರರನ್ನು ಬೆಳೆಸಿದ್ದಾರೆ ಎಂದು ವಿಶ್ಲೇಷಿಸಿದರು. ಗೋವಾದಲ್ಲಿ ತಾವು ದೂರದರ್ಶನದ ನಿರ್ದೇಶಕರಾಗಿದ್ದಾಗ ಅಲ್ಲಿದ್ದ ನಿರುದ್ವಿಗ್ನ ವಾತಾವರಣವನ್ನು ನೆನಪು ಮಾಡಿಕೊಂಡ ನಾಡೋಜ ಡಾ. ಮಹೇಶ ಜೋಶಿಯವರು ಅಂತಹ ಕಡೆ ಕನ್ನಡವನ್ನು ಕಟ್ಟಿ ಶಾ.ಮಂ. ಕೃಷ್ಣರಾಯರು ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಗೋವಾದಲ್ಲಿ ಅವರು ಕನ್ನಡ ಶಾಲೆಗಳನ್ನು ಕಟ್ಟಿದರು, ಸೈಕಲ್ಲಿನಲ್ಲಿ ಮನೆ ಮನೆಗೆ ಹೋಗಿ ಕನ್ನಡ ಪತ್ರಿಕೆಗಳನ್ನು ತಲುಪಿಸಿ ವಾಚನಾಭಿರುಚಿ ಬೆಳೆಸಿದರು. ‘ಗೋವಾ ಕನ್ನಡ ಸಂಘ’, ‘ಗೋಮಾಂತ ಭಾರತಿ’, ‘ಕರ್ನಾಟಕ ಸಂಘ’ಗಳನ್ನು ಕಟ್ಟಿ ಕನ್ನಡಿಗರನ್ನು ಸಂಘಟಿಸಿದರು. ಒಮ್ಮೆ ಗೌರೀಶ ಕಾಯ್ಕಿಣಿಯವರು ಗೋವಾಗೆ…
ಮಂಗಳೂರು : ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ರಂಗಸ್ಥಳ ಮಂಗಳೂರು (ರಿ) ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನದಲ್ಲಿ ದಿನಾಂಕ 11-02-2024ರಂದು ಯಕ್ಷಗಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ‘ ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರವನ್ನು ಸ್ವೀಕರಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ 96 ವಯಸ್ಸಿನ ಸೂರಿಕುಮೇರು ಕೆ. ಗೋವಿಂದ ಭಟ್ ಮಾತನಾಡಿ “ಯಕ್ಷರಂಗವು ನನ್ನ ಬದುಕಿಗೆ ಅಭಿಮಾನಿಗಳ ಪ್ರೀತಿ ಮತ್ತು ಹೊಸತನದ ಸ್ಪೂರ್ತಿಯನ್ನು ನೀಡಿದೆ. ಅದು ಮರೆಯಲಾದ ಅವಿಸ್ಮರಣೀ ಕ್ಷಣಗಳು” ಎಂದು ಹೇಳಿದರು. ಇದೇ ಸಂದಂರ್ಭದಲ್ಲಿ ‘ಯಕ್ಷ ಕುಸುಮ ಯುವ ಪುರಸ್ಕಾರ’ವನ್ನು ಯುವ ಕಲಾವಿದ ಸಾತ್ವಿಕ್ ನೆಲ್ಲಿತೀರ್ಥ ಇವರಿಗೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀ ಎಸ್.ಎಸ್. ನಾಯಕ್, ರಂಗಸ್ಥಳ ಮಂಗಳೂರು (ರಿ) ಸಂಸ್ಥೆಯ ಶ್ರೀ ಎಸ್.ಎಲ್. ನಾಯಕ್ ಮತ್ತು ಶ್ರೀ ದಿನೇಶ್ ಪೈ, ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನರೇಂದ್ರ ಎಲ್. ನಾಯಕ್, ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳದ…
ಮಂಗಳೂರು : ಗೌಡ ಸಾರಸ್ವತ ಬ್ರಾಹ್ಮಣ ಮಹಿಳಾ ವೃಂದ ಮಂಗಳೂರು ವತಿಯಿಂದ ‘ಕೊಂಕಣಿ ದಿವಸ ಆಚರಣೆ’ಯು ದಿನಾಂಕ 21-01-2024ರಂದು ಮಂಗಳೂರಿನ ಗೋಕರ್ಣಮಠದ ದ್ವಾರಕಾನಾಥ ಭವನ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಶ್ರೀ ನಂದಗೋಪಾಲ ಶೆಣೈ ಮಾತನಾಡಿ “ಜಿ.ಎಸ್.ಬಿ. ಮಹಿಳಾ ವೃಂದ ತಮ್ಮ ಸಮುದಾಯದ ಮಹಿಳೆಯರನ್ನು ಸಂಘಟನೆ ಮಾಡಿ ನಡೆಸಿಕೊಂಡು ಹೋಗುವ ಕಾರ್ಯ ಶ್ಲಾಘನೀಯ.” ಎಂದರು. ಇದೇ ಸಂದರ್ಭದಲ್ಲಿ ಕೊಂಕಣಿ ಸಮಾಜ ಸೇವಕ ಗಜಾನನ ಪೈ ತೋನ್ಸೆ ಹಾಗೂ ಕೊಂಕಣಿ ಸಾಹಿತಿ ಗೌರಿ ಮೌಲ್ಯ ಇವರನ್ನು ಸಮ್ಮಾನಿಸಲಾಯಿತು. ದಿ. ಸುಧಾ ಆರ್. ಶೆಣೈ ಸ್ಮರಣಾರ್ಥ ಪ್ರಶಸ್ತಿಯನ್ನು ತಾರಾ ಶೆಣೈ ಅವರ ಪರವಾಗಿ ಅವರ ಮಕ್ಕಳು ಸಮ್ಮಾನವನ್ನು ಸ್ವೀಕರಿಸಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಕೊಂಕಣಿ ಭಕ್ತಿಗೀತೆ ಹಾಗೂ ಭಾವಗೀತೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ವಸುಧಾ ಬಾಳಿಗಾ ನಡೆಸಿಕೊಟ್ಟರು. ಅಧ್ಯಕ್ಷೆ ನಯನಾ ರಾವ್ ಸ್ವಾಗತಿಸಿ, ಚಂದ್ರಿಕಾ ಮಲ್ಯ ನಿರೂಪಿಸಿ, ಕಾರ್ಯದರ್ಶಿ ವಿಜಯಲಕ್ಷ್ಮೀ ಕಾಮತ್ ವಂದಿಸಿದರು. ಮರೋಳಿ…
ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಧಮನಿ ಟ್ರಸ್ಟ್ (ರಿ.) ತೆಕ್ಕಟ್ಟೆ ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದೊಂದಿಗೆ ಶ್ರೀಶ ಭಟ್ ಬಳಗದವರಿಂದ ‘ರಂಗ ಸಂಗೀತ ಮತ್ತು ಶೂರ್ಪಣಖಾಯನ’ ನಾಟಕ ಪ್ರದರ್ಶನವು ದಿನಾಂಕ 04-02-2024ರಂದು ನಡೆಯಿತು ಇದೇ ಸಂದರ್ಭದಲ್ಲಿ ‘ಧಮನಿ ಟ್ರಸ್ಟ್’ ಇದರ ಲೋಗೋ ಅನಾವರಣಗೊಂಡಿತು. ಲೋಗೋ ಅನಾವರಣಗೊಳಿಸಿ ಮಾತನಾಡಿದ ಅರೆಹೊಳೆ ಸದಾಶಿವ ರಾವ್ “ಧಮನಿ ಧಮನಿಯಲ್ಲಿ ರಂಗಭೂಮಿಯ ರಕ್ತವನ್ನೇ ಹರಿಸುತ್ತಿರುವ ಶ್ರೀಶ ಅವರು ಹೊಸ ಟ್ರಸ್ಟ್ ಮೂಲಕ ಸಮಾಜಕ್ಕೆ ಬೆಳಕಾಗುವ ನಿಟ್ಟಿನಲ್ಲಿ ಇಂದಿನಿಂದ ನಾಂದಿ ಹಾಡಿದ್ದಾರೆ. ಶ್ರೀಶರ ರಂಗಭೂಮಿಯ ಮೇಲಿನ ಅದಮ್ಯ ಪ್ರೀತಿಗೆ ಮನಸೋಲದವರಿಲ್ಲ. ಅದರಲ್ಲೂ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡುವ ಕನಸನ್ನು ಹೊತ್ತಿರುವುದು ನಿಜಕ್ಕೂ ಶ್ಲಾಘನೀಯ. ಭವಿಷ್ಯಕ್ಕೆ ಕೊಡುಗೆಯಾಗುವ ಮಕ್ಕಳ ಮನಸ್ಸುಗಳೊಂದಿಗೆ ಬೆರೆಯುವ ಕಾಯಕ ನೋರ್ಮಡಿಯಾಗಲಿ.” ಎಂದು ಶುಭಹಾರೈಸಿದರು. ರಂಗ ನಿರ್ದೇಶಕ ಸದಾನಂದ ಬೈಂದೂರು ಮಾತನಾಡಿ “ವಿನಮ್ರ ವಿದ್ಯಾರ್ಥಿಯಾದ ಶ್ರೀಶ ಭಟ್ ಹುಟ್ಟು ಹಾಕಿಕೊಂಡ ಸಂಸ್ಥೆಗೆ ಹಿರಿಯ ಸಂಸ್ಥೆಯ ಸಹಾಯ ಹಸ್ತದ ನೆರವು ಸದಾ ಇರಬೇಕು.…
ಕೋಟ : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ಆಯೋಜಿಸಿದ ಎರಡು ದಿವಸಗಳ ಉಡುಪ ಸಂಸ್ಮರಣ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ‘ಕಲೋತ್ಸವ-2024’ ಇದರ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 11-02-2024ರ ಭಾನುವಾರದಂದು ಕೋಟದ ಪಟೇಲರ ಮನೆ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿ “ವಿದ್ವತ್ತು ಮತ್ತು ಜ್ಞಾನ ಭಂಡಾರದ ವಿಷಯದಲ್ಲಿ ಯಕ್ಷಗಾನ ಕಲಾವಿದರು ಸ್ನಾತಕೋತ್ತರ ಪದವಿ ಪಡೆದವರಿಗಿಂತ ಎಷ್ಟೋ ಮೇಲು. ಇಂದಿನ ಕೆಲವು ಯಕ್ಷಗಾನ ಪ್ರದರ್ಶನ ಕಂಡಾಗ ಮನಸ್ಸಿಗೆ ನೋವಾಗುತ್ತದೆ. ಕಲೆಯಲ್ಲಿ ಬದಲಾವಣೆ ಬೇಕು, ಆದರೆ ಆ ಬದಲಾವಣೆ ಒಳಿತಿನ ಆಶಯ ಹೊಂದಿರಬೇಕು. ಆ ದಿಸೆಯಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಶ್ರೀಧರ ಹಂದೆಯವರ ಮಕ್ಕಳ ಮೇಳ ಆದರ್ಶದ ಬೀಜ ಬಿತ್ತಿದೆ. ಅದು ಎಲ್ಲರಲ್ಲಿಯೂ ಸಾಕಾರಗೊಳ್ಳಬೇಕು” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅಮೃತೇಶ್ವರಿ ಮೇಳದ ಯಕ್ಷಗಾನ ಕಲಾವಿದ ಕೋಟ ಸುರೇಶ್ ದಂಪತಿಗಳಿಗೆ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಪ್ರದಾನ…
ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವ ಪ್ರಯುಕ್ತ ದಿನಾಂಕ 10-02-2024ರಂದು ಸುರತ್ಕಲ್ ಗೋವಿಂದದಾಸ ಕಾಲೇಜಿನ ಕಲಾ ಮಂದಿರದಲ್ಲಿ ಹಮ್ಮಿಕೊಂಡ ಸರಣಿ ನೃತ್ಯ ಕಾರ್ಯಕ್ರಮವನ್ನು ಶ್ರೀ ರಾಜಾರಾಮ್ ಸಾಲ್ಯಾನ್ ಇವರು ಉದ್ಘಾಟಿಸಿದರು. “ಭರತನಾಟ್ಯ ಕಲೆಯ ತಲಸ್ಪರ್ಶಿ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ‘ಭರತನಾಟ್ಯ ರಸಗ್ರಹಣ’ದಂತಹ ಪ್ರಾತ್ಯಕ್ಷಿಕೆಗಳು ಹೆಚ್ಚು ಹೆಚ್ಚು ನಡೆಯಬೇಕು. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಸಾಮಾನ್ಯ ಪ್ರೇಕ್ಷಕರಿಗೂ ಉತ್ತಮ ಕಲಾಪ್ರೇಕ್ಷಕರಗಲು ಸಹಾಯಕ”. ಇಂತಹ ಜ್ಞಾನೋದಯ ಕಾರ್ಯಕ್ರಮವನ್ನು ಸುರತ್ಕಲ್ ಲಲಿತ ಕಲಾ ಸಂಘ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ವಿದ್ಯಾರ್ಥಿ ಸಮಿತಿಯ ಸಹಯೋಗದೊಂದಿಗೆ ಹಮ್ಮಿಕೊಂಡ ನಾಟ್ಯಾರಾಧನಾ ಕಲಾ ಕೇಂದ್ರವನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಶ್ಲಾಘಿಸಿದರು. ವಿದ್ವಾನ್ ಚಂದ್ರಶೇಖರ ನಾವಡ, ವಿದುಷಿ ಶೈಲಜ ಶಿವಶಂಕರ್, ಲಯನ್ ಯಾದವ ದೇವಾಡಿಗ, ಶ್ರೀಮತಿ ಐ ಉಮಾದೇವಿ, ಪ್ರೊ. ಕೃಷ್ಣಮೂರ್ತಿ, ಎಚ್. ಜಯಚಂದ್ರ ಹತ್ವಾರ್, ಶ್ರೀಮತಿ ಶಕುಂತಲಾ ಭಟ್, ವಿದುಷಿ ಅನುಧೀರಜ್, ಸಮಿತಿಯ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿ, ಟ್ರಸ್ಟಿ ರತ್ನಾಕರ ರಾವ್ ವಂದಿಸಿ,…
ಮಂಗಳೂರು : ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರ ‘ನೃತ್ಯ ಭಾರತಿ’ಯ 39ನೇ ವರ್ಷದ ಸಂಭ್ರಮಾಚರಣೆ ಸಂದರ್ಭ ವಿದುಷಿ ವೈಷ್ಣವಿ ವಿ. ಪ್ರಭು ಇವರ ‘ನಟರಾಜ ವಂದನಂ’ ಮೂಲಕ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮವು ದಿನಾಂಕ 02-02-2024 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ “ಜೀವನದಲ್ಲಿ ಪರಿಶ್ರಮ, ಛಲ ಇದ್ದರೆ ಸಾಧನೆ ಸಾಧ್ಯ. ಆ ಛಲ ವೈಷ್ಣವಿ ಪ್ರಭು ಅವರಲ್ಲಿದೆ. ಅವರು ಇನ್ನಷ್ಟು ಕ್ಷೇತ್ರದಲ್ಲಿ ಗುರುತಿಸಿ, ಸಾಧನೆಗೈದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಕಲಾವಿದೆಯಾಗಲಿ.” ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಚಿಂತಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ “ರಂಗಪ್ರವೇಶ ಅಂದರೆ ಸಾಮಾನ್ಯ ಸಂಗತಿಯಲ್ಲ. ಅದು ಆಧ್ಯಾತ್ಮಿಕ ಭಾವನೆಗೆ ಹೊರಡಲು ಸಿಗುವಂತಹ ಅವಕಾಶವಾಗಿದೆ. ಅವರವರ ವೃತ್ತಿಗೆ, ಗುಣಕ್ಕೆ ತಕ್ಕಂತೆ ಕಲಾಪ್ರಾಕಾರಗಳು ಆನಂದ ನೀಡುತ್ತದೆ. ಯಾವಾಗ ಮನುಷ್ಯ ಅಂತರ್ಮುಖಿಯಾಗಲು ಆರಂಭವಾಗುತ್ತಾನೋ ಆಗ ಆತನಿಗೆ ಭಾರತ ಅದ್ಭುತ ಎನಿಸಲು ಆರಂಭವಾಗುತ್ತದೆ.…
ಬೆಂಗಳೂರು : ಶ್ರೀಮಾತಾ ಚಾರಿಟೇಬಲ್ ಟ್ರಸ್ಟ್ ಹುಳಿಯಾರು ಮತ್ತು ಸೆಂಟರ್ ಸ್ಟೇಜ್ ಬೆಂಗಳೂರು ಇವರು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಇವರ ಹೆಸರಿನಲ್ಲಿ ಕೊಡಮಾಡುವ 2024ನೇ ಸಾಲಿನ ‘ಸೆಂಟರ್ ಸ್ಟೇಜ್ ಕಪ್ಪಣ್ಣ ಪ್ರಶಸ್ತಿ -2024’ ಪ್ರದಾನವು ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ದಿನಾಂಕ 13-02-2024ರಂದು ನಡೆಯಿತು. ಈ ಸಮಾರಂಭದಲ್ಲಿ ಹಿರಿಯ ಸಾಹಿತಿ ನಾಡೋಜ ಹಂ.ಪ. ನಾಗರಾಜಯ್ಯ ಅವರು ಸುಳ್ಯ ರಂಗಮನೆಯ ರೂವಾರಿ ಡಾ. ಜೀವನ್ ರಾಂ ಸುಳ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಮಾತನಾಡುತ್ತಾ “ರಂಗಭೂಮಿಯನ್ನೇ ಬದುಕು ಮಾಡಿಕೊಂಡವರಲ್ಲಿ ಜೀವನ್ ರಾಂ ಪ್ರಮುಖರು. ಇವರ ನಾಟಕಗಳಿಗೆ ಎಂದೂ ಪ್ರೇಕ್ಷಕರ ಕೊರತೆ ಆಗಿಲ್ಲ. ತನ್ನ ವಾಸದ ಮನೆಯನ್ನೇ ಸಾಂಸ್ಕೃತಿಕ ಕೇಂದ್ರವನ್ನಾಗಿಸಿದ ಜೀವನ್ ನಾಡು ಕಂಡ ಅಪರೂಪದ ಶ್ರೇಷ್ಠ ರಂಗಕರ್ಮಿ” ಎಂದರು. ಹಿರಿಯ ರಂಗಕರ್ಮಿ, ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ, ಹಿರಿಯ ಐ.ಎ.ಎಸ್. ಅಧಿಕಾರಿ ಚಿರಂಜೀವಿ ಸಿಂಗ್, ಚಿತ್ರ…
ಮಂಗಳೂರು : ಇತ್ತೀಚೆಗೆ ನಿಧನ ಹೊಂದಿದ ಹಿಂದುಸ್ತಾನಿ ಸಂಗೀತ ದಿಗ್ಗಜರಾದ ವಿದುಷಿ ಪ್ರಭಾ ಅತ್ರೆ, ಪಂ. ಮಣಿಪ್ರಸಾದ್, ಪಂ. ರಶೀದ್ ಖಾನ್ ಮತ್ತು ಪಂ. ಕೇದಾರ್ ಬೋಡಸ್ ಸ್ಮರಣಾರ್ಥವಾಗಿ ‘ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟ್’ ಇದರ ವತಿಯಿಂದ ‘ಸ್ವರ ಶ್ರದ್ಧಾಂಜಲಿ’ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 10-02-2024ರಂದು ನಡೆಯಿತು. ಕೊಡಿಯಾಲಬೈಲ್ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯ ಸಂಗೀತ ಕಲಾವಿದ ರವಿಕಿರಣ್ ಮಣಿಪಾಲ ದೀಪ ಬೆಳಗಿಸಿ ಉದ್ಘಾಟಿಸಿದರು. ಕಲಾವಿದ ಪಂ.ಗಣಪತಿ ಭಟ್ ಹಾಸಣಗಿ ಅವರ ಶಿಷ್ಯ ಪಂ.ಸತೀಶ್ ಭಟ್ ಮಾಳಕೊಪ್ಪ ಹಾಗೂ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರ ಶಿಷ್ಯ ಬೆಂಗಳೂರಿನ ರಘುನಂದನ್ ಭಟ್ ಅವರಿಂದ ಹಿಂದುಸ್ತಾನಿ ಗಾಯನ ಕಛೇರಿ ನಡೆಯಿತು. ಕಛೇರಿಯ ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್ ಮತ್ತು ತಬಲಾದಲ್ಲಿ ಭಾರವಿ ದೇರಾಜೆ ಸಹಕರಿಸಿದರು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಲೋಲಾಕ್ಷಿ, ಸಂಸ್ಥಾಪಕ ಕಾರ್ಯದರ್ಶಿ ಶ್ರೀ ಅಮಿತ್ ಕುಮಾರ್ ಬೆಂಗ್ರೆ, ಸದಸ್ಯರಾದ ಶ್ರೀ ಸುಶಾಂತ್ ಉಪಸ್ಥಿತಿಯಲ್ಲಿ ನಡೆದ ಈ…