Author: roovari

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಲೇಖಕಿಯರ ಬದುಕು ಮತ್ತು ಬರಹ ಕುರಿತ ಕಾರ್ಯಕ್ರಮ ‘ಲೇಖ ಲೋಕ -9’ ಎರಡು ದಿನಗಳ ಕಾರ್ಯಕ್ರಮವು ದಿನಾಂಕ 29-08-2023ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ “ಮಹಿಳಾ ಸಾಹಿತ್ಯ ಚರಿತ್ರೆಯನ್ನು ಕಟ್ಟುವ ಪ್ರಯತ್ನದ ಭಾಗವಾಗಿ ಆತ್ಮಕಥನಗಳನ್ನು ಗ್ರಹಿಸಬೇಕಿದೆ. ಮಹಿಳೆ ಎದುರಿಸಿದ ಸವಾಲುಗಳೇನು ?, ಅದು ವೈಯಕ್ತಿಕ, ಸಾಮುದಾಯಿಕ, ದೇಶ‌ಕಾಲಗಳ ಪ್ರಭಾವಗಳನ್ನು ಎದುರಿಸಿದ ರೀತಿಯನ್ನು ತೆರೆದು ತೋರಿಸುವುದು ಆತ್ಮಕತೆಗಳ ಉದ್ದೇಶ. ಇದರ ಮೂಲಕ ಮಹಿಳಾ ಆಸ್ಮಿತೆ ಪ್ರಕಟಗೊಳ್ಳುತ್ತಿದೆ. ಒಬ್ಬಳು ಮಹಿಳೆಯ ಬಿಡುಗಡೆಯ ಹಾದಿ ಅನೇಕರಿಗೆ ಹೊರಳುದಾರಿಯಾಗಬಹುದು” ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ವಿವಿಯ ಕುಲಪತಿ ಪ್ರೊ.ಜಯರಾಜ್ ಅಮೀನ್ ಮಾತನಾಡಿ “ಸಮಾಜವನ್ನು ಗ್ರಹಿಸುವ ಮತ್ತು ವ್ಯಕ್ತಿ ಅನುಭವಗಳ ವಿಶಿಷ್ಟ ನಿರೂಪಣೆಯೇ ಆತ್ಮವೃತ್ತಾಂತಗಳು. ಕರಾವಳಿಯಲ್ಲಿ ಮಾತೃಮೂಲೀಯ…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿ ಎಂ.ಆರ್.ಶ್ರೀನಿವಾಸ ಮೂರ್ತಿಯವರ 131ನೆಯ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ದಿನಾಂಕ 28-08-2023ರಂದು ಆಚರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಇವರು ಪುಷ್ಪನಮನ ಸಲ್ಲಿಸಿ ಮಾತನಾಡುತ್ತಾ “ಹೊಸ ಗನ್ನಡ ಸಾಹಿತ್ಯಕ್ಕೆ ಸೂಕ್ತ ವೇದಿಕೆ ರೂಪಿಸಿದ ಶ್ರೀ ಎಂ.ಆರ್.ಶ್ರೀನಿವಾಸ ಮೂರ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿಗೂ ಮಹತ್ವದ ಕೊಡುಗೆಯನ್ನು ನೀಡಿದರು. ಎಂ.ಆರ್.ಶ್ರೀಯವರು ಕನ್ನಡ ಸಾಹಿತ್ಯದ ಪರಂಪರೆಯ ಬಗ್ಗೆ ಅದರಲ್ಲಿಯೂ ವೀರಶೈವ ಸಾಹಿತ್ಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದರು. ಅವರು ವಿಜ್ಞಾನದ ವಿದ್ಯಾರ್ಥಿಯಾದರೂ ಕನ್ನಡದ ಆಕರ್ಷಣೆಗೆ ಒಳಗಾಗಿ ಕನ್ನಡ ಸಾಹಿತ್ಯದಲ್ಲಿ ಪ್ರಭುತ್ವವನ್ನು ಪಡೆದಿದ್ದರು. ವೀರಶೈವ ಸಾಹಿತ್ಯ, ಅದರಲ್ಲೂ ವಚನ ಸಾಹಿತ್ಯಕ್ಕೆ ಎಂ.ಆರ್.ಶ್ರೀ ಅವರದು ಬೆಲೆಯುಳ್ಳ ಕಾಣಿಕೆ. ‘ವಚನಧರ್ಮಸಾರ’ ಅವರ ಆಳವಾದ ವ್ಯಾಸಂಗಕ್ಕೆ, ವಿದ್ವತ್ತಿಗೆ, ಹೊಸದಾದ ಆಲೋಚನೆಗಳಿಗೆ ಸಂಕೇತವಾಗಿದೆ..’ರಂಗಣ್ಣನ ಕನಸಿನ ದಿನಗಳು’ ಶ್ರೀಯುತರ ಮಹತ್ವದ ಕೃತಿ. ಇದನ್ನು ಕುವೆಂಪು ಅವರು ‘ಚಿತ್ರಕಾವ್ಯ’ ಎಂದು ಕರೆದಿದ್ದಾರೆ. ‘ನಾಗರೀಕ’ ‘ಧರ್ಮದುರಂತ’ ‘ಕಂಠೀರವ ವಿಜಯ’ ಅವರ ಪ್ರಮುಖ ನಾಟಕಗಳಾಗಿದ್ದು, ಸಾವಿತ್ರಿ…

Read More

ಮಡಿಕೇರಿ: ವೀರ ಲೋಕ ಪುಸ್ತಕ ಪ್ರಕಾಶನ ಸಂಸ್ಥೆಯು ರಾಜ್ಯಾಂದ್ಯಂತ ಆಯೋಜಿಸಿರುವ ಕಥಾ ಕಮ್ಮಟ ಯೋಜನೆಯಂತೆ ಕೊಡಗಿನಲ್ಲೂ ಕರ್ನಾಟಕ ಜಾನಪದ ಪರಿಷತ್‌ ಕೊಡಗು ಜಿಲ್ಲಾ ಘಟಕವು ಕೈ ಜೋಡಿಸಿ ಅಕ್ಟೋಬರ್ 7 ಮತ್ತು 8ರಂದು ಮಡಿಕೇರಿಯಲ್ಲಿ ಕಥಾ ಕಮ್ಮಟವನ್ನು ಉಚಿತ ಕಥಾ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಗಿದೆ. ಹಿರಿಯ ಸಾಹಿತಿ, ಬರಹಗಾರ ಪ್ರಭಾಕರ ಶಿಶಿಲ ಅವರು ಶಿಬಿರವನ್ನು ನಡೆಸಿಕೊಡಲಿದ್ದಾರೆಂದು ವೀರಲೋಕ ಜಿಲ್ಲಾ ಸಂಚಾಲಕ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ. ಶಿಬಿರದ ಸಂಚಾಲಕರಾಗಿ ಸಂಪತ್‌ ಕುಮಾರ್ ಹಾಗೂ ಸಹ ಸಂಚಾಲಕರಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ರೇವತಿ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಶಿಬಿರವು ವೀರಲೋಕ ಪ್ರಕಾಶನದ ಮುಖ್ಯಸ್ಥ ಶ್ರೀನಿವಾಸ್, ಸಾಹಿತಿಗಳಾದ ಕಾ.ತ.ಚಿಕ್ಕಣ್ಣ ಮತ್ತು ಲಕ್ಷಣ ಕೊಡಸೆ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. 35 ವರ್ಷ ಮೀರದ ಶಿಭಿರಾರ್ಥಿಗಳು, ನಿಗದಿತ ಅರ್ಜಿಯಲ್ಲಿ ವಿವರಗಳನ್ನು ಸೆಪ್ಟೆಂಬರ್ 30ರ ಒಳಗೆ ಬಿ.ಜಿ. ಅನಂತಶಯನ, ದೇಸಿ ಜಗಲಿ ಕಥಾ ಕಮ್ಮಟ, ‘ಚಿರಂತನ’’ ಕಾನ್ವೆಂಟ್ ಜಂಕ್ಷನ್, ಮಡಿಕೇರಿ…

Read More

ಪುತ್ತೂರು : ಕಸಾಪ ತಾಲೂಕು ಘಟಕ ಮತ್ತು ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆ ನೇತೃತ್ವದಲ್ಲಿ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಮೇಳ ಮತ್ತು ಸಾಹಿತ್ಯ ವೈಭವ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 13-08-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಯಕ್ಷಗಾನ ಕಲಾವಿದ ಪಣಿಯೆ ಸೀತಾರಾಮ ಕುಂಜತ್ತಾಯರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಡೂರು ಸೂರ್ಯನಾರಾಯಣ ಕಲ್ಲೂರಾಯ ಸ್ಮರಣಾರ್ಥ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ನರಿಮೊಗರು ಸರಸ್ವತಿ ವಿದ್ಯಾಮಂದಿರದ ಅವಿನಾಶ ಕೊಡಿಂಕಿರಿ ಹಾಗೂ  ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಾಧ್ಯಕ್ಷ ಹಿರಿಯ ಸಾಹಿತಿ ನಾ.ಕಾರಂತ ಪೆರಾಜೆ ಅತಿಥಿಗಳಾಗಿ ಆಗಮಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಸುಂದರ ನಾಯ್ಕ ಉಪಸ್ಥಿತರಿದ್ದರು. ಕಸಾಪ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಧುರ ಸತೀಶ್ ಪುಣಿಂಚತ್ತಾಯ ಸ್ವಾಗತಿಸಿ,…

Read More

ಗೋಕರ್ಣ : ಪೂಜ್ಯ ರಾಘವೇಶ್ವರ ಸ್ವಾಮೀಜಿಯವರ ಚಾತುರ್ಮಾಸ ವ್ರತದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳ ಆಧಾರಿತ ‘ಮಂಜುನಾದ’ ಸಂಗೀತ ಕಛೇರಿ ದಿನಾಂಕ 26-08-2023ರಂದು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರದಲ್ಲಿ ನಡೆಯಿತು. ಸುಮಾರು ಒಂದು ಒಂದು ಘಂಟೆ ಮೂವತ್ತು ನಿಮಿಷಗಳ ಕಾಲ ನಡೆದ ಈ ಕಛೇರಿಯ ಹಾಡುಗಾರಿಕೆಯಲ್ಲಿ ಮಣಿಪಾಲದ ಉಷಾ ರಾಮಕೃಷ್ಣ ಭಟ್, ಬೆಂಗಳೂರಿನ ಅದಿತಿ ಪ್ರಹ್ಲಾದ್, ಕಿನ್ನಿಗೋಳಿಯ ಆಶ್ವೀಜಾ ಉಡುಪ, ಮಂಗಳೂರಿನ ಮೇಧಾ ಉಡುಪ, ವಯಲಿನ್ ನಲ್ಲಿ ಮಾವೆಯ ಸುನಾದ ಪಿ.ಎಸ್, ಮೃದಂಗದಲ್ಲಿ ಶೃಂಗೇರಿಯ ಪನ್ನಗ ಶರ್ಮನ್ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಅಮೆರಿಕದಲ್ಲಿರುವ ಸಂಗೀತ ಅಭ್ಯಾಸಿಗಳಿಗಾಗಿ ‘ಮಂಜುನಾದ’ ಕೃತಿಯನ್ನು ಕಲಿಸುವ ಉದ್ದೇಶದಿಂದ ರೂಪಿಸಿದ www.manjunada.com ಇದರ ಲೋಕಾರ್ಪಣಾ ಕಾರ್ಯಕ್ರಮವನ್ನು ಪೂಜ್ಯ ರಾಘವೇಶ್ವರ ಸ್ವಾಮೀಜಿಯವರು ನೆರವೇರಿಸಿದರು.

Read More

ಮಂಗಳೂರು : ಬಾಬು ಶಿವ ಪೂಜಾರಿ ಪ್ರಧಾನ ಸಂಪಾದಕತ್ವದಲ್ಲಿ ಮುಂಬೈನ ಗುರುತು ಪ್ರಕಾಶನವು ಪ್ರಕಟಿಸಿರುವ ‘ಬಿಲ್ಲವರ ಗುತ್ತು’ ಸಂಶೋಧನಾ ಕೃತಿಯನ್ನು ಸಮುದಾಯದ ಮುಖಂಡ ಮಾಜಿ ಕೇಂದ್ರ ವಿತ್ತ ಸಚಿವರಾದ ಶ್ರೀ ಬಿ.ಜನಾರ್ದನ ಪೂಜಾರಿ ಅವರು ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ 27-08-2023ರಂದು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ “ಬಿಲ್ಲವರ ಹಿರಿಮೆಯನ್ನು ತಿಳಿಸುವ ಇನ್ನಷ್ಟು ಕೃತಿಗಳು ಪ್ರಕಟವಾಗಬೇಕಿದೆ. ಬಾಬು ಶಿವ ಪೂಜಾರಿ ಅವರ ಅಪ್ರಕಟಿತ ಕೃತಿಗಳ ಪ್ರಕಟಣೆಗೆ ಬೆಂಬಲ ನೀಡುತ್ತೇನೆ” ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ, ಗ್ರಂಥದ ಅಧ್ಯಯನ ತಂಡದ ಪ್ರಮುಖರಾದ ಶ್ರೀಮತಿ ಬಿ.ಎಂ. ರೋಹಿಣಿ “ಬಿಲ್ಲವರ ಗುತ್ತು ಮನೆತನಗಳ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಬಿಲ್ಲವ ಮಹಿಳೆಯರು ಯುದ್ಧದಲ್ಲಿ ಭಾಗವಹಿಸಿದ ಹಾಗೂ ದೈವ ಪಾತ್ರಿಗಳಾಗಿ ಕಾರ್ಯ ನಿರ್ವಹಿಸಿದ ಉದಾಹರಣೆಗಳಿವೆ. ಸೂಲಗಿತ್ತಿ ಕೆಲಸದಲ್ಲೂ ಮುಂಚೂಣಿಯಲ್ಲಿದ್ದರು. ನಮ್ಮ ಸಮಾಜದ ದಾಖಲೆ ನಾವೇ ಮಾಡಬೇಕು. ಶಿವ ಪೂಜಾರಿಯವರ ಈ ಅಧ್ಯಯನ ಯುವ ಸಮಾಜ ಮುಂದುವರಿಸಬೇಕು” ಎಂದರು. “ಬಿಲ್ಲವರು…

Read More

ಬೆಂಗಳೂರು : ಬೆಂಗಳೂರಿನ ಸಂಜಯನಗರದ ರಾಜಮಹಲ್ ವಿಲಾಸ ಸಂಗೀತ ಸಭಾ (ರಿ.) ಪ್ರಸ್ತುತ ಪಡಿಸುವ ಸೆಪ್ಟೆಂಬರ್ ತಿಂಗಳ ಕರ್ನಾಟಕ ಸಂಗೀತ ಕಛೇರಿಯು ದಿನಾಂಕ 02-09-2023 ರಂದು ವಿನಾಯಕ ದೇವಸ್ಥಾನದ ಗಾಯತ್ರಿ ಪರಿಷತ್ತಿನ ಶ್ರೀ ಶಂಕರ ಅಧ್ಯಯನ ಕೇಂದ್ರದಲ್ಲಿ ನಡೆಯಲಿರುವುದು. ಈ ಕಾರ್ಯಕ್ರಮದ ಹಾಡುಗಾರಿಕೆಯಲ್ಲಿ ವಿದುಷಿ ಮಾಧುರಿ ಕೌಶಿಕ್, ಮೃದಂಗದಲ್ಲಿ ವಿದ್ವಾನ್ ನಿಕ್ಷಿತ್ ಪುತ್ತೂರ್, ಪಿಟೀಲಿನಲ್ಲಿ ವಿದ್ವಾನ್ ಕಾರ್ತಿಕೇಯ ಆರ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜಮಹಲ್ ವಿಲಾಸ ಸಂಗೀತ ಸಭಾ ತಮ್ಮೆಲ್ಲರಿಗೂ ಆದರದ ಸ್ವಾಗತ ಬಯಸಿದೆ.

Read More

ಮಡಿಕೇರಿ : ವಿಶ್ವ ಜಾನಪದ ದಿನದ ಅಂಗವಾಗಿ ಆನ್‌ಲೈನ್‌ ಜಾನಪದ ಕಥಾಸ್ಪರ್ಧೆಗೆ ಆಹ್ವಾನ ನೀಡಲಾಗಿದೆ. ಭಾಗವಹಿಸುವವರು ಸೆಪ್ಟೆಂಬರ್ 5ರ ಒಳಗೆ ಕೊಡಗಿನ ಐತಿಹಾಸಿಕ ಜಾನಪದ ಕಥೆಗಳನ್ನು, 5 ನಿಮಿಷ ಮೀರದಂತೆ ವಿಡಿಯೋ ಮಾಡಿ, ಈ 9448048875, 9448614999 ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡುವಂತೆ, ಕೊಡಗು ಜಿಲ್ಲಾ ಜಾನಪದ ಪರಿಷತ್‌ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದ್ದಾರೆ. ಪ್ರಥಮ ಬಹುಮಾನವಾಗಿ ನಗದು ರೂ.750/-, ದ್ವಿತೀಯ ರೂ.500/- ಹಾಗೂ ತೃತೀಯ ರೂ.250/- ನೀಡಲಾಗುತ್ತದೆ. ಅಂಕ ನೀಡುವಾಗ ನಿಗದಿತ ಸಮಯ, ಕಥೆ, ಪ್ರಸ್ತುತಿ ಮತ್ತು ಭಾಷಾ ಸ್ಪಷ್ಟತೆಯನ್ನು ಪರಿಗಣಿಸಲಾಗುತ್ತದೆ.

Read More

ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು (ರಿ) ಇದರ ಮಹಿಳಾ ಘಟಕ ‘ನಾರಿಚಿನ್ನಾರಿ’ಯ ಕಾರ್ಯಕ್ರಮ ‘ಓಣಂ ಸಂಧ್ಯಾ’ವು ಕಾಸರಗೋಡಿನ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ದಿನಾಂಕ 26-08-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಹಿತಿ, ಉಡುಪಿಯ ಎಂಜಿಎಂ ಕಾಲೇಜಿನ ಉಪನ್ಯಾಸಕಿ ಕಾತ್ಯಾಯಿನಿ ಕುಂಜಿಬೆಟ್ಟು ಅವರ ಐದು ಕೃತಿಗಳು ಅನಾವರಣಗೊಂಡವು. ‘ಓಣಂ ಸಂಧ್ಯಾ’ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀ ಇವರು ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಲೆಕ್ಕ ಪರಿಶೋಧಕರು ಹಾಗೂ ನಾರಿ ಚಿನ್ನಾರಿಯ ಗೌರವಾಧ್ಯಕ್ಷರಾದ ತಾರಾ ಜಗದೀಶ್ ಅವರು ವಹಿಸಿದ್ದರು. ರಂಗ ಚಿನ್ನಾರಿ ಇದರ ಮುಖ್ಯಸ್ಥ ಕಲಾವಿದ ಕಾಸರಗೋಡು ಚಿನ್ನಾ ಅವರು ಆಶಯದ ನುಡಿಗಳನ್ನು ನುಡಿದರು . ಇದೇ ಸಂದರ್ಭದಲ್ಲಿ ಏಕತಾರಿ ಸಂಚಾರಿ (ಕವನ ಸಂಕಲನ), ಕೊಕ್ಕೊ ಕೋಕೋ (ಮಕ್ಕಳ ನಾಟಕ), ಶಿವರಾಮ ಕಾರಂತರ ಕನ್ನಡ ಪ್ರಜ್ಞೆ (ಸಂಪಾದಿತ), ಕನಕದಾಸೆರ್ನ ರಾಮಧಾನ್ಯ ಚರಿತೆ (ಅನುವಾದ) ಮತ್ತು ಮೊಗೇರಿ ಗೋಪಾಲಕೃಷ್ಣ ಅಡಿಗ (ವಾಚಿಕೆ) ಈ ಐದು ಕೃತಿಗಳನ್ನು ಗಡಿನಾಡಿನ  ಮಹತ್ವದ ಮಹಿಳಾ ಬರಹಗಾರರಾದ ವಿಜಯಲಕ್ಷ್ಮೀ…

Read More

ಸುಳ್ಯ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ವತಿಯಿಂದ ಯಕ್ಷಧ್ರುವ -ಯಕ್ಷಶಿಕ್ಷಣ ನಾಟ್ಯ ತರಬೇತಿ ಶಿಕ್ಷಣ ಅಭಿಯಾನದ ಉಚಿತ ಯಕ್ಷಗಾನ ತರಬೇತಿ ಉದ್ಘಾಟನಾ ಕಾರ್ಯಕ್ರಮವು ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಿನಾಂಕ 16-08-2023ರಂದು ನಡೆಯಿತು. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಅವರು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ನಮ್ಮಲ್ಲಿರುವ ಪ್ರತಿಭೆಗಳಿಗೆ ಒಂದಲ್ಲೊಂದು ಅವಕಾಶಗಳು ಸಿಕ್ಕೇ ಸಿಗುತ್ತವೆ. ನಮ್ಮ ಪ್ರಯತ್ನ, ಶ್ರಮ, ಪರಿಶ್ರಮದಿಂದ ಯಶಸ್ಸು ಸಾಧ್ಯ. ಯಾವುದೇ ಕ್ಷೇತ್ರದ ಸಾಧನೆಗೆ ತರಬೇತಿ ಅಗತ್ಯವಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಅದೆಷ್ಟೋ ಸಾಧಕರನ್ನು ನಾವು ಕಾಣಬಹುದಾಗಿದೆ. ಇಂದು ಪಟ್ಲ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಉಚಿತ ಯಕ್ಷಗಾನ ತರಬೇತಿ ನೀಡುತ್ತಿರುವುದು ಮಕ್ಕಳಲ್ಲೂ ಯಕ್ಷಗಾನ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಲು ಪೂರಕವಾಗಲಿ” ಎಂದು ಶುಭ ಹಾರೈಸಿದರು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ, ಮಾಜಿ ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಯಕ್ಷಗಾನ ತರಬೇತುದಾರ ಗಿರೀಶ್ ಗಡಿಕಲ್ಲು, ಪ್ರೀತಮ್ ವಿದ್ಯಾಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು. ಮಂಗಳೂರು ಯಕ್ಷಧ್ರುವ…

Read More