Author: roovari

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ದಾವಣಗೆರೆ ಜಿಲ್ಲೆಯ ಅತ್ತಿಗೆರೆಯ ಗ್ರಾಮೀಣ ಪ್ರದೇಶದ ಯುವ ಕವಯತ್ರಿ ಸಾಮಾಜಿಕ ಕಾಳಜಿಯ ಸೇವೆ ನವಯುವತಿಯರಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಹೊಲಿಗೆ, ಬ್ಯೂಟಿಪಾರ್ಲರ್ ತರಬೇತಿಯೊಂದಿಗೆ ಎಲ್ಲರನ್ನೂ ಬೆಳೆಸುವ ವಿಶಾಲ ಸೇವಾಮನೋಭಾವನೆಯ ಸಾಧನೆಗಳನ್ನು ಗುರುತಿಸಿ ಶ್ರೀಮತಿ ಶೈಲಜಾ ಪ್ರಶಾಂತ್‌ರವರಿಗೆ “ಕರ್ನಾಟಕ ಮುಕುಟಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಅತ್ತಿಗೆರೆ ಗ್ರಾಮದ ಗ್ರಾಮಸ್ಥರು ಸೇರಿದಂತೆ ಕಲಾಕುಂಚ ಸರ್ವ ಸದಸ್ಯರು, ಪದಾಧಿಕಾರಿಗಳು, ಶ್ರೀಮತಿ ಶೈಲಜಾ ಪ್ರಶಾಂತ್‌ರವರಿಗೆ ಅಭಿಮಾನದಿಂದ ಅಭಿನಂದಿಸಿದ್ದಾರೆ.

Read More

ಸಾಗರ : ಅಭಿನಯ ಸಾಗರ (ರಿ.) ಸಾಗರ, ರಂಗಮಂಚ (ರಿ.) ಕಾಗೋಡು ಸಾಗರ, ಜೋಷಿ ಫೌಂಡೇಷನ್ ಸಾಗರ ಮತ್ತು ಉದಯ ಕಲಾವಿದರು (ರಿ.) ಸಾಗರ ಇವರ ಸಹಯೋಗದೊಂದಿಗೆ ದಿ. ಎನ್.ಆರ್. ಮಾಸೂರು, ದಿ. ಕಾಗೋಡು ಅಣ್ಣಪ್ಪ ಮತ್ತು ದಿ. ಯೇಸುಪ್ರಕಾಶ್ ಇವರ ಸ್ಮರಣಾರ್ಥ ‘ನೆನಪಿನ ರಂಗಸಂಭ್ರಮ ನಾಟಕೋತ್ಸವ’ವನ್ನು ದಿನಾಂಕ 21 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಪ್ರತಿದಿನ ಸಂಜೆ 5-30 ಗಂಟೆಗೆ ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಮತ್ತು ರಂಗ ಸನ್ಮಾನಗಳು ನಡೆಯಲಿವೆ. ದಿನಾಂಕ 21 ಅಕ್ಟೋಬರ್ 2024ರಂದು ಸಾಗರದ ಉದಯ ಕಲಾವಿದರು ಪ್ರಸ್ತುತ ಪಡಿಸುವ ‘ಗ್ಲಾನಿ’, ದಿನಾಂಕ 22 ಅಕ್ಟೋಬರ್ 2024ರಂದು ಶ್ರೀ ಜಂಬೇಶ್ವರ ಕಲಾ ಬಳಗ ಟ್ರಸ್ಟ್ ಇವರಿಂದ ‘ಅತ್ತೆಗೊಂದು ಕಾಲ ಸೊಸೆಗೊಂದು ಕಾಲ’, ದಿನಾಂಕ 23 ಅಕ್ಟೋಬರ್ 2024ರಂದು ಕಿನ್ನರ ಮೇಳ ತುಮರಿಯವರಿಂದ ‘ಇರುವೆ ಪುರಾಣ’, ದಿನಾಂಕ 24 ಅಕ್ಟೋಬರ್ 2024ರಂದು ಸಾಗರ ಸಾಂಸ್ಕೃತಿಕ ಸೌರಭದವರಿಂದ…

Read More

ಗಂಗಾವತಿ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು, ಕೊಪ್ಪಳ ಜಿಲ್ಲಾ ಘಟಕ ಹಾಗೂ ಗಂಗಾವತಿ ತಾಲೂಕು ಘಟಕಗಳ ಸಹಯೋಗದಲ್ಲಿ ದಿನಾಂಕ 12 ಜನವರಿ 2025ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹಮ್ಮಿಕೊಳ್ಳಲಿರುವ ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ, ಸಂಶೋಧಕ, ಸಂಶೋಧನಾ ಮಾರ್ಗದರ್ಶಿ ಡಾ. ಜಾಜಿ ದೇವೇಂದ್ರಪ್ಪನವರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ. ಗಂಗಾವತಿಯ ನೀಲಕಂಠೇಶ್ವರ ದೇವಾಲಯ ಆವರಣದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ, ದಿನಾಂಕ, ಸ್ಥಳ ಹಾಗೂ ರೂಪುರೇಷೆಗಳ ಕುರಿತು ಚರ್ಚಿಸಲಾಗಿ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಹಿರಿಯ ಸಾಹಿತಿ ಹೇಮಾ ಪಟ್ಟಣಶೆಟ್ಟಿ, ಅಲ್ಲಮಪ್ರಭು ಬೆಟ್ಟದೂರು, ಶರಣಪ್ಪ ಮೆಟ್ರಿ, ವಿನಯ ಒಕ್ಕುಂದ, ಡಾ. ಜಾಜಿ ದೇವೇಂದ್ರಪ್ಪ, ಡಾ. ಮಮ್ತಾಜ್ ಬೇಗಂ, ರಾಘವೇಂದ್ರ ದಂಡಿನ್, ಪವನ್ ಕುಮಾರ್ ಗುಂಡೂರು, ಎಸ್.ವಿ. ಪಾಟೀಲ್ ಗುಂಡೂರು ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು. ಅಂತಿಮವಾಗಿ ಹಿರಿಯ ಸಾಹಿತಿ, ಸಂಶೋಧಕ, ಸಂಶೋಧನಾ ಮಾರ್ಗದರ್ಶಿ…

Read More

ಪಣಂಬೂರು : ನಿವೃತ್ತ ಪ್ರಾಧ್ಯಾಪಕರು ಸಾಹಿತಿ ಎಂ. ಕೃಷ್ಣೇಗೌಡ ಇವರು ದಿನಾಂಕ 20 ಅಕ್ಟೋಬರ್ 2024ರಂದು ಸಂಜೆ 6-00 ಗಂಟೆಗೆ ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ರಾಜರತ್ನ ಸಭಾಂಗಣ ರಾಮರಮಣ ಮಂಟಪದಲ್ಲಿ ನಡೆಯುವ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಲಿದ್ದು, ಪಿರ ಕಾವ್ಯ ನಾಮಾಂಕಿತ ಶ್ರೀ ಪಿ. ರವಿಶಂಕರ ಕಾರಂತ ರಚಿಸಿರುವ ‘ಚಿವುಟುವ ಚುಟುಕುಗಳು’ ಹಾಗೂ ‘ಕುಟುಕುವ ಕವಿತೆಗಳು’ ಎಂಬ ಎರಡು ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕ.ಸಾ.ಪ. ಉಡುಪಿ ಇದರ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಇವರು ವಹಿಸಲಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಹರಿನಾರಾಯಣ ಅಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕೃಷ್ಣಗೌಡ ಇವರಿಂದ ವಿಶೇಷ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

Read More

ಮಂಗಳೂರು :  ವಾಲ್ಮೀಕಿ ಜಯಂತಿಯ ಪ್ರಯುಕ್ತ ಬಂಟ್ವಾಳದ ಶ್ರೀ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ 17 ಅಕ್ಟೋಬರ್ 2024ನೇ ಗುರುವಾರದಂದು ಡಾಕ್ಟರ್ ವಾರಿಜಾ ನೀರ್ಬಯಲು ಮತ್ತು ಶಿಷ್ಯರಿಂದ ‘ಲವಕುಶ ಜನನ ‘ಎಂಬ ಗಮಕ ವಾಚನ ವ್ಯಾಖ್ಯಾನವು ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕು ಘಟಕದ ಕಾರ್ಯದರ್ಶಿ ನ್ಯಾಯವಾದಿ ಶ್ರೀ ರವೀಂದ್ರ ಕುಕ್ಕಾಜೆ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.  ಪುತ್ತೂರಿನಲ್ಲಿ ಗಮಕ  ವಾಲ್ಮೀಕಿ ಜಯಂತಿಯ ಪ್ರಯುಕ್ತ ಮನೆಮನೆ ಗಮಕ ಕಾರ್ಯಕ್ರಮವು ದಿನಾಂಕ 17 ಅಕ್ಟೋಬರ್ 2024ನೇ ಗುರುವಾರದಂದು ಪುತ್ತೂರಿನ ಬಪ್ಪಳಿಗೆಯಲ್ಲಿರುವ  ಡಾ. ಸತೀಶ್ ರಾವ್ ಇವರ ‘ಸ್ವರಧೇನು’ ಮನೆಯಲ್ಲಿ ನಡೆಯಿತು.  ರಾಮಾಯಣದ ‘ಲವಕುಶ’ ಭಾಗವನ್ನು ಶ್ರೀ ಪ್ರಕಾಶ್ ನಾಕೂರು ವಾಚಿಸಿ, ಶ್ರೀ ಈಶ್ವರ ಭಟ್ ಗುಂಡ್ಯಡ್ಕ ವ್ಯಾಖ್ಯಾನಗೈದರು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ಪ್ರೊಫೆಸರ್ ವೇದವ್ಯಾಸ ರಾಮಕುಂಜ, ಕಾರ್ಯದರ್ಶಿ ಶ್ರೀಮತಿ ಶಂಕರಿ ಶರ್ಮ, ಶ್ರೀಮತಿ ಶೋಭಿತ ಸತೀಶ್ ರಾವ್ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

Read More

ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು, ಹಾಸನ ತಾಲೂಕು ಘಟಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಇವುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 20 ಅಕ್ಟೋಬರ್ 2024 ಭಾನುವಾರ ಬೆಳಗ್ಗೆ 10-00 ಗಂಟೆಗೆ ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ‘ಹಾಸನ ದಸರಾ ಕವಿಗೋಷ್ಠಿ’ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾ ತಿಳಿಸಿದ್ದಾರೆ. ನಾಡಿನ ಪ್ರಸಿದ್ಧ ಸಾಹಿತಿ ಬಾನು ಮುಸ್ತಾಕ್ ಕವಿಗೋಷ್ಠಿ ಉದ್ಘಾಟಿಸಲಿದ್ದು, ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಕವಿ ಚಿನ್ನೇನಹಳ್ಳಿ ಸ್ವಾಮಿ ಕವಿಗೋಷ್ಠಿಯ ಆಶಯ ನುಡಿಗಳನ್ನಾಡುವರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ. ವೈ.ಎಸ್. ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ವೇದಿಕೆಯ ತಾಲ್ಲೂಕು ಅಧ್ಯಕ್ಷೆ ಕೆ.ಸಿ. ಗೀತಾ, ಮನೆ ಮನೆ ಕವಿಗೋಷ್ಠಿ ಸಂಚಾಲಕ ಗೊರೂರು ಅನಂತರಾಜು, ಜಿಲ್ಲಾ ಲೇಖಕಿಯರ…

Read More

ಮಂಗಲ್ಪಾಡಿ : ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಇವರು ದಸರಾ ಉತ್ಸವದ ಪ್ರಯುಕ್ತ ಆಯೋಜಿಸಿದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 10 ಅಕ್ಟೋಬರ್ 2024ರಂದು ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ ನಡೆಯಿತು. ಇದೇ ಮೊದಲ ಬಾರಿಗೆ ಆಗರಿ ಶ್ರೀನಿವಾಸ ಭಾಗವತ ವಿರಚಿತ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ‘ಮೇದಿನಿ ನಿರ್ಮಾಣ’ ಪ್ರಸಂಗದ ಹಾಡುಗಳ ವಾಚನ ವ್ಯಾಖ್ಯಾನ ಸಭಿಕರನ್ನು ರಂಜಿಸಿತು. ಶ್ರೀಮತಿ ಶ್ರದ್ಧಾ ಹಾಗೂ ಕುಮಾರಿ ಮೇಧಾ ಸಹೋದರಿಯರು ಗಮಕ ವಾಚನ ವ್ಯಾಖ್ಯಾನ ನಡೆಸಿಕೊಟ್ಟರು.

Read More

ಉಪ್ಪಿನಂಗಡಿ : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಮೂವತ್ತೊಂಬತ್ತನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 12 ಅಕ್ಟೋಬರ್ 2024ರಂದು ಉಪ್ಪಿನಂಗಡಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ “ಸ್ವಾಮಿ ವಿವೇಕಾನಂದರ ಭವ್ಯ ವ್ಯಕ್ತಿತ್ವ – ದಿವ್ಯ ಸಂದೇಶ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಬಂಟ್ವಾಳದ ಪೊಳಲಿಯ ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಸ್ವಾಮಿ ವಿವೇಕ ಚೈತನ್ಯಾನಂದ ಜೀ “ಸ್ವಾಮಿ ವಿವೇಕಾನಂದರು ಭವ್ಯ ವ್ಯಕ್ತಿತ್ವದ ಮಾದರಿ. ಅವರ ವ್ಯಕ್ತಿತ್ವವು ಅಸಾಧಾರಣ ಧೈರ್ಯ, ಜ್ಞಾನ ಮತ್ತು ಸಹಾನುಭೂತಿ ಮಿಶ್ರಿತವಾಗಿತ್ತು. ಅವರು ತಮ್ಮ ಜೀವನವನ್ನು ಮಾನವೀಯತೆ ಮತ್ತು ಸಾಮಾಜಿಕ ಉನ್ನತಿಗಾಗಿ ಸಮರ್ಪಿಸಿದರು. 1893ರ ಚಿಕಾಗೋ ಧರ್ಮಸಮ್ಮೇಳನದಲ್ಲಿ ಅವರು ಮಾಡಿದ ಪ್ರಭಾವಶಾಲಿ ಭಾಷಣವು ಅವರ ಬುದ್ಧಿವಂತಿಕೆಯ ಮತ್ತು ಆತ್ಮಶಕ್ತಿಯ ಸಮ್ಮಿಲನವನ್ನು ಸಿದ್ಧಪಡಿಸಿತು. ವಿವೇಕಾನಂದರು ಯುವಕರಲ್ಲಿ ಶ್ರದ್ಧೆ, ಆತ್ಮವಿಶ್ವಾಸ ಮತ್ತು ಶಕ್ತಿ ತುಂಬಿದವರು. ಅವರ ಪ್ರಸಿದ್ಧ ‘ಪಥೋಪದೇಶ’, ‘ಉತ್ತಿಷ್ಠತ ಜಾಗೃತಃ’, ಯುವಕರಿಗೆ ಶ್ರೇಷ್ಠತೆಯ ಮಾರ್ಗದರ್ಶನ ನೀಡಿದವು. ಅವರ ದಿವ್ಯ…

Read More

ಬೆಳಗಾವಿ : ರಂಗಸಂಪದ ಬೆಳಗಾವಿ ಇದರ ವತಿಯಿಂದ 2024-25 ಆರ್ಥಿಕ ವರ್ಷದ ಪ್ರಥಮ ನಾಟಕ ಪ್ರದರ್ಶನವನ್ನು ದಿನಾಂಕ 20 ಅಕ್ಟೋಬರ್ 2024ರಂದು ಸಂಜೆ 6-30 ಗಂಟೆಗೆ ಬೆಳಗಾವಿ ಕೊನವಾಳ ಗಲ್ಲಿಯಲ್ಲಿರುವ ಲೋಕಮಾನ್ಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ಕಲಾವಕಾಶ ಸಂಸ್ಥೆಯ ಸಹಕಾರದಲ್ಲಿ ‘ಡಿಯರ್ ಅಜ್ಜೋ’ ಎಂಬ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ಶ್ರೀ ವೈಭವ ಲೋಕೂರ ಇವರ ನಿರ್ದೇಶನದಲ್ಲಿ ಬೆಳಗಾವಿಯ ರಂಗಸಂಪದ ತಂಡದ ಡಾ. ಅರವಿಂದ ಕುಲಕರ್ಣಿ ಮತ್ತು ಕುಮಾರಿ ಸ್ನೇಹಾ ಕುಲಕರ್ಣಿ ಇವರು ಈ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ.

Read More

ಮಂಗಳೂರು : ಮಹಾಕವಿ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ಸಂಸ್ಕೃತ ನಾಟಕವನ್ನಾಧರಿಸಿದ ‘ಸತೀ ಶಕುಂತಲೆ’ ಯಕ್ಷಗಾನ ತಾಳಮದ್ದಳೆಯು ಮಂಗಳೂರು ಆಕಾಶವಾಣಿಯಲ್ಲಿ ಎರಡು ಭಾಗಗಳಾಗಿ  ಮೂಡಿ ಬರಲಿದೆ. ಕರ್ನಾಟಕ ಯಕ್ಷಭಾರತಿ ಪುತ್ತೂರು ತಂಡದ ಕಲಾವಿದರು ಭಾಗವಹಿಸಿರುವ ಈ ಯಕ್ಷಗಾನ ತಾಳಮದ್ದಳೆಯ ಮೊದಲನೇ ಭಾಗ ‘ಮುದ್ರಿಕಾ ಪ್ರದಾನ’ವು 25 ಅಕ್ಟೋಬರ್ 2024ರ ಶುಕ್ರವಾರದಂದು ರಾತ್ರಿ ಗಂಟೆ 9.30ಕ್ಕೆ ಪ್ರಸಾರವಾಗಲಿದೆ. ಕಾರ್ಯಕ್ರಮದಲ್ಲಿ ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬ್ಳೆ, ಎಂ.ಕೆ. ರಮೇಶಾಚಾರ್ಯ, ರಮೇಶ ಸಾಲ್ವಣ್ಕರ್ ಹಾಗೂ ಉಮೇಶಾಚಾರ್ಯ ಗೇರುಕಟ್ಟೆ  ಪಾತ್ರ ವಹಿಸಲಿದ್ದಾರೆ. ಭಾಗವತರಾಗಿ ಪ್ರಶಾಂತ ರೈ ಪುತ್ತೂರು, ಹಿಮ್ಮೇಳದಲ್ಲಿ ಪಿ. ಟಿ. ಜಯರಾಮ ಭಟ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಸಹಕರಿಸಿದ್ದಾರೆ.  ‘ಸತೀ ಸಮಾಗಮ’ –  ನವೆಂಬರ್ 1 ಪ್ರಸಂಗದ ಎರಡನೇ ಭಾಗ ‘ಸತೀ ಸಮಾಗಮ’ ದಿನಾಂಕ 1 ನವೆಂಬರ್ 2024ರಂದು ರಾತ್ರಿ 9:30ಕ್ಕೆ ಪ್ರಸಾರವಾಗುವುದು. ಕರ್ನಾಟಕ ಯಕ್ಷಭಾರತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಯೋಜಿಸಿದ ಈ ಯಕ್ಷಗಾನವನ್ನು ಮಂಗಳೂರು ಆಕಾಶವಾಣಿಯ…

Read More