Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಂಗಳೂರಿನ ಖ್ಯಾತ ಹವ್ಯಾಸಿ ಯಕ್ಷಗಾನ ಅರ್ಥಧಾರಿ, ಭಾಗವತ, ಹಿಮ್ಮೇಳ ವಾದಕ, ಸಂಘಟಕ ಮುಂಡ್ಕೂರು ನಾಗೇಶ್ ಪ್ರಭುಗಳು ದಿನಾಂಕ 09-02-2024ರಂದು ಮಂಗಳೂರು ಕೊಡಿಯಾಲಬೈಲ್ ಸ್ವಗೃಹದಲ್ಲಿ ನಿಧನರಾದರು. 86 ವರ್ಷ ಸಾರ್ಥಕ ಜೀವನ ನಡೆಸಿದ್ದ ಪ್ರಭುಗಳು ಶ್ರೀ ರಾಮ ಯಕ್ಷಗಾನ ಸಂಘ, ಬಿ.ಸಿ. ರೋಡ್ ಇದರ ಸ್ಥಾಪಕ ಆಧ್ಯಕ್ಷರಾಗಿದ್ದರು. ಮಂಗಳೂರಿನ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಕಾರ್ಯಾಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದರು. ವಾಗೀಶ್ವರಿ ಸಂಘದ ಶತಮಾನೋತ್ಸವವು ಮಂಗಳೂರು ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ಪ್ರಭುಗಳ ಮಾರ್ಗದರ್ಶನದಲ್ಲಿ 50 ಸನ್ಮಾನ, 50 ಸಂಸ್ಮರಣೆ, 50 ತಾಳಮದ್ದಲೆ ಕಾರ್ಯಕ್ರಮದೊಂದಿಗೆ ಅಭೂತ ಪೂರ್ವ ಯಶಸ್ಸು ಕಂಡಿತ್ತು. ಶ್ರೀಯುತರು 50 ವರ್ಷಗಳ ಕಲಾ ಸೇವೆಯನ್ನು ಗೈದಿದ್ದಾರೆ. ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸುವ ಮಾತುಗಾರಿಕೆಯ ಸೊಗಡು ಸ್ಮರಣೀಯ. ಮೃತರು ಈರ್ವರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವಾಗೀಶ್ವರಿ ಸಂಘದ ಗೌರವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಕದ್ರಿ ನವನೀತ…
ಕೊಣಾಜೆ: ಮಂಗಳೂರು ವಿ. ವಿ. ಯ ಕನಕದಾಸ ಸಂಶೋಧನಾ ಕೇಂದ್ರದ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ‘ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆ ಗಳ, ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮವು ದಿನಾಂಕ 02-02-2024ರ ಶುಕ್ರವಾರದಂದು ಮಂಗಳೂರು ವಿ. ವಿ. ಯ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಪ್ರೊ. ವಿ. ಅರವಿಂದ ಹೆಬ್ಬಾರ್ ಮಾತನಾಡಿ “ಕನಕದಾಸರು, ಪುರಂದರ ದಾಸರು, ವಾದಿರಾಜರು ಸಮಕಾಲೀನರು ಮತ್ತು ಭಕ್ತಿಪಂಥದ ವಕ್ತಾರರಾಗಿ ಗುರುತಿಸಿಕೊಂಡವರು. ಸಂಸ್ಕೃತ ಪಾಂಡಿತ್ಯವೇ ಅಧಿಕವಾಗಿದ್ದ ಕಾಲಘಟ್ಟದಲ್ಲಿ ವ್ಯಾಸಕೂಟದ ಬದಲಾಗಿ ದಾಸಕೂಟ ರಚನೆಯಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಮನ್ನಣೆ ದೊರೆಯಿತು. ದಾಸಕೂಟದ ಕನಕದಾಸರ ಆತ್ಮದ ಭಾಷೆ ಕನ್ನಡವಾಗಿತ್ತು. ಕನ್ನಡದಲ್ಲಿ ತನ್ಮಯರಾಗಿ ಅವರು ಭಕ್ತಿ ಮತ್ತು ವೈಚಾರಿಕತೆಯನ್ನು ಮಂಡಿಸಿದರು.” ಎಂದರು. ಜಾನಪದ ವಿದ್ವಾಂಸ ಪ್ರೊ. ಚಿನ್ನಪ್ಪಗೌಡ ಮಾತನಾಡಿ “ಸಾಹಿತ್ಯದ, ಸಂಗೀತದ ವಿದ್ಯಾರ್ಥಿಗಳಿಗೆ ಕನಕ ಬಹಳ ಮುಖ್ಯವಾಗುತ್ತಾನೆ. ಪ್ರಾಚೀನ ಕನ್ನಡ ಸಾಹಿತ್ಯ…
ನವದೆಹಲಿ : ಕೇಂದ್ರ ಸರಕಾರದ ವತಿಯಿಂದ ಗಣ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ 132 ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದವರು ಮಹಾರಾಷ್ಟ್ರದ ಹೊರ್ ಮುಸ್ ಜೀ ಎನ್. ಕಾಮಾ – ಶಿಕ್ಷಣ, ಪ್ರತಿಕೋದ್ಯಮ, ದತ್ತಾತ್ರೇಯ ಅಂಬಾ ದಾಸ್ ಮಾಯಾಲೂ – ಕಲೆ, ಪ್ಯಾರೆಲಾಲ್ ಶರ್ಮಾ – ಕಲೆ, ಕುಂದನ್ ವ್ಯಾಸ್ – ಶಿಕ್ಷಣ, ಪ್ರತಿಕೋದ್ಯಮ ಹಾಗೂ ಪಶ್ಚಿಮ ಬಂಗಾಳದ ಉಷಾ ಉತುಪ್ – ಗಾಯಕಿ. ಪದ್ಮಶ್ರೀ ಪ್ರಶಸ್ತಿ ಪಡೆದವರು ತೆಲಂಗಾಣ ನಾರಾಯಣ ಪೇಟೆ ದಾಮರ ಗಿಡ್ಡಾ ಗ್ರಾಮದ ದಾಸರಿ ಕೊಂಡಪ್ಪ (ಬುರ್ರಾ ವೀಣಾ ರಕ್ಷಕ), ತೆಲಂಗಾಣ ಜನಗಾಂವ್ ಗದ್ದಂ ಸೋಮಯ್ಯ (ಯಕ್ಷಗಾನಂ ಯಜಮಾನ್), ಆಂಧ್ರ ಪ್ರದೇಶದ ಡಿ. ಉಮಾ ಮಹೇಶ್ವರಿ (ಹರಿಕಥೆ ಕೀರ್ತನಾಕಾರರು), ಕೇರಳ ಕಣ್ಣೂರಿನ ನಾರಾಯಣ (ತೆಯ್ಯಂ ಪರಂಪರೆ ಸಂರಕ್ಷಕ), ಬಿಹಾರದ ಗೋಡ್ನಾ ವರ್ಣಚಿತ್ರಕಾರ ದಂಪತಿಗಳಾದ ಶಾಂತಿ ದೇವಿ ಪಾಸ್ವಾನ್ ಮತ್ತು ಶಿವನ್ ಪಾಸ್ವಾನ್, ಪಶ್ಚಿಮ ಬಂಗಾಳದ ಭಾದು ಜಾನಪದ ಗಾಯಕ…
ಬಂಟ್ವಾಳ : ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಕಳೆದ ಐದು ದಶಕಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಸೇವಾ ಬಯಲಾಟಕ್ಕೆ ಇದೀಗ ಸುವರ್ಣ ಸಂಭ್ರಮ. ಈ ಚಿನ್ನದ ನೋಟದ ಹಿಂದೆ ಊರವರ ಭಕ್ತಿ-ಶ್ರದ್ಧೆಗಳ ಭಾವನಾತ್ಮಕವಾದ ಬೆಸುಗೆ ಇದೆ. ಹಳೆಯ ತಲೆಮಾರಿನ ಹಿರಿಯ ಅರ್ಥಧಾರಿ, ಶಿಕ್ಷಕ ಮತ್ತು ಊರಿನ ಪಟೇಲರಾಗಿದ್ದ ಬೊಂಡಾಲ ಜನಾರ್ದನ ಶೆಟ್ಟಿಯವರ ದಕ್ಷ ನಾಯಕತ್ವದಲ್ಲಿ ಇದು ಸಾಗಿ ಬಂದಿದೆ. ಅವರೊಂದಿಗೆ ಬೊಂಡಾಲದ ಅನೇಕ ಹಿರಿಯರು ಮತ್ತು ಉತ್ಸಾಹೀ ತರುಣರು ಕೈಜೋಡಿಸಿ ಈ ಸುವರ್ಣ ಪಥದಲ್ಲಿ ದಾರಿದೀವಿಗೆಗಳಾಗಿ ಕೆಲಸ ಮಾಡಿರುವುದು ಕಂಡುಬರುತ್ತದೆ. ಬೊಂಡಾಲದ ಬಯಲಾಟವೆಂದರೆ ಊರವರನ್ನು ಒಂದುಗೂಡಿಸುವ ದೊಡ್ಡ ಹಬ್ಬ. ಈ ಸಂದರ್ಭದಲ್ಲಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ಯಜಮಾನರು, ಕಲಾವಿದರು ಮತ್ತು ಹಿಮ್ಮೇಳದವರನ್ನು ಸನ್ಮಾನಿಸುವ ಪರಂಪರೆಯೂ ಬೆಳೆದು ಬಂತು. ದಿ. ಕಲ್ಲಾಡಿ ವಿಠಲ ಶೆಟ್ಟಿ, ಇರಾ ಗೋಪಾಲಕೃಷ್ಣ ಭಾಗವತ, ಬಲಿಪ ನಾರಾಯಣ ಭಾಗವತ, ಕಂಡೇರಿ ಕೊರಗಪ್ಪ ನಾಯ್ಕ, ಕುಬನೂರು ಶ್ರೀಧರಾವ್,…
ಮಂಗಳೂರು : ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಸಂತ ಆಲೋಶಿಯಸ್ ರಂಗ ಅಧ್ಯಯನ ಕೇಂದ್ರ ಕನ್ನಡ ವಿಭಾಗ ಸಹಯೋಗದೊಂದಿಗೆ ಶಶಿರಾಜ್ ರಾವ್ ಕಾವೂರು ಬರೆದ ‘ಪರಶುರಾಮ’ ಮತ್ತು ‘ಛತ್ರಪತಿ ಶಿವಾಜಿ’ ಎರಡು ಕನ್ನಡ ನಾಟಕಗಳ ಲೋಕಾರ್ಪಣೆ ಸಮಾರಂಭವು ದಿನಾಂಕ 14-02-2024ರಂದು ಸಂಜೆ 5 ಗಂಟೆಗೆ ಸಂತ ಆಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಬ್ಲಾಕ್, ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಶ್ರೀ ಜಗದ್ಗುರು ದುರದುಂಡೇಶ್ವರ ಮಠ ನಿಡಸೋಸಿಯ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಅಶೀರ್ವಚನ ನೀಡಲಿದ್ದಾರೆ. ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್, ನಟ ಡಾ. ದೇವದಾಸ್ ಕಾಪಿಕಾಡ್, ಯಕ್ಷರಂಗಾಯಣದ ನಿಕಟಪೂರ್ವ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ಮತ್ತು ಡಾ. ನಾ. ದಾಮೋದರ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೆಗಾಮ್ಯಾಜಿಕ್…
ಮಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಅರ್ಪಿಸುವ ‘ರಾಗ ಸುಧಾ ರಸ’ ಸಂಗೀತೋತ್ಸವವು ದಿನಾಂಕ 15-02-2024ರಿಂದ 18-02-2024 ರವರೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ದಿನಾಂಕ 15-02-2024ರಂದು ಸಂಜೆ 4.30ಕ್ಕೆ ಮಂಗಳೂರಿನ ಕಲಾ ಶಾಲೆಯ ವಿದ್ಯಾರ್ಥಿಗಳು ವಯಲಿನ್ ವಾದನ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮವನ್ನು ಶರವು ಶ್ರೀ ರಾಘವೇಂದ್ರ ಶಾಸ್ತ್ರಿಯವರು ದೀಪ ಬೆಳಗಿ ಉದ್ಘಾಟಿಸಲಿದ್ದು, ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಗಂಟೆ 6ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಬೆಂಗಳೂರಿನ ಸ್ಪೂರ್ತಿ ರಾವ್ ಇವರ ಹಾಡುಗಾರಿಕೆಗೆ ವೈಭವ ರಮಣಿ ವಯಲಿನ್, ಅನೂರ್ ವಿನೋದ್ ಶ್ಯಾಮ್ ಮೃದಂಗ ಹಾಗೂ ಮೈಸೂರಿನ ಶರತ್ ಕೌಶಿಕ್ ಘಟಂನಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 16-02-2024ರಂದು ಸಂಜೆ 4.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಚಿನ್ಮಯಿ ವಿ. ಭಟ್, ಶ್ರೀವರದ ಪಟ್ಟಾಜೆ,…
ಖ್ಯಾತ ನೃತ್ಯಾಚಾರ್ಯ ವಿದುಷಿ ಅಕ್ಷರ ಭಾರಧ್ವಾಜ್ ಅವರ ಪ್ರಯೋಗಾತ್ಮಕ ನೃತ್ಯ ಪ್ರಸ್ತುತಿಗಳು ಎಂದೂ ಸೊಗಸು. ಬಹು ಬದ್ಧತೆಯಿಂದ ನೃತ್ಯಶಿಕ್ಷಣ ನೀಡುವ ಅಕ್ಷರ ತಮ್ಮ ಶಿಷ್ಯರ ಪ್ರತಿ ರಂಗಪ್ರವೇಶಗಳನ್ನೂ ವಿಭಿನ್ನವಾಗಿ ಸಂಯೋಜಿಸುತ್ತಾರೆ. ಅದರಂತೆ ಇತ್ತೀಚೆಗೆ ಎ.ಡಿ.ಎ. ರಂಗಮಂದಿರದಲ್ಲಿ ನಡೆದ ಹನ್ನೆರಡರ ಪುಟ್ಟಬಾಲೆ ಅದಿತಿ ಜಗದೀಶಳ ರಂಗಪ್ರವೇಶದಲ್ಲಿ ಅವಳು, ತನ್ನ ವಯಸ್ಸಿಗೂ ಮೀರಿದ ನರ್ತನ ವೈಖರಿಯಿಂದ ವಿಸ್ಮಯಗೊಳಿಸಿದಳು. ಬಳ್ಳಿಯಂತೆ ಬಾಗುವ ತನು, ಲೀಲಾಜಾಲ ಲವಲವಿಕೆಯ ಚಲನೆಗಳು, ಅಂಗಶುದ್ಧಿ, ಮುದ್ರೆ-ಅಡವುಗಳು, ಸುಮನೋಹರ ಕರಣಗಳು, ರಮ್ಯ ಆಂಗಿಕಾಭಿನಯ, ಅಚ್ಚರಿ ಹುಟ್ಟಿಸುವ ಯೋಗದ ಭಂಗಿಗಳು, ಮೊದಲಿನಿಂದ ಕಡೆಯವರೆಗೂ ಚೈತನ್ಯಭರಿತ ಹಸನ್ಮುಖದ ನಿರಾಯಾಸ ನರ್ತನ ಈ ಕಲಾವಿದೆಯ ಧನಾತ್ಮಕ ಅಂಶಗಳು. ಭರತನಾಟ್ಯದ ಮೈಸೂರುಶೈಲಿಯ ಒಂದು ಪ್ರಮುಖ ಬಂಧ ‘ಮೈಸೂರು ಜತಿ’. ಸಂಕೀರ್ಣ ಜತಿಗಳಿಂದ ಕೂಡಿದ್ದ ಜತಿಗಳನ್ನು ಅದಿತಿ ನಿರ್ವಹಿಸಿದ ಬಗೆ ಮನಸೆಳೆಯಿತು. ರಂಗದ ಮೇಲೆ ತೇಲಾಡುತ್ತಿರುವಂಥ ಭಾಸವುಂಟು ಮಾಡುವ ಹಗುರಹೆಜ್ಜೆಯಲ್ಲಿ ಅದಿತಿ, ಗಾಳಿಯಲ್ಲಿ ಕೈಕಾಲುಗಳು ಒನೆದಾಡುತ್ತಿರುವಂತೆ ಕುಪ್ಪಳಿಸುತ್ತ ಚಿನಕುರುಳಿಯಂತೆ ಮೇಲಕ್ಕೆ ನೆಗೆಯುತ್ತ, ಆಕಾಶಚರಿ, ಅರೆಮಂಡಿ, ಚಮತ್ಕಾರದ ಕರಣಗಳಿಂದ ಕೂಡಿದ ಅಪೂರ್ವ…
ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ನಡೆಯುವ ‘ಅರಿವು ತಿಳಿವು’ ತಿಂಗಳ ಉಪನ್ಯಾಸ ಕಾರ್ಯಕ್ರಮವು ದಿನಾಂಕ 10-02-2024ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಸುಪ್ರಸಿದ್ಧ ಅಂಕಣಕಾರ ಹಾಗೂ ಸಂಸ್ಕೃತಿ ವಿಮರ್ಶಕರಾಗಿರುವ ಡಾ. ಬಿ. ಭಾಸ್ಕರ ರಾವ್ ಕಠೋಪನಿಷತ್ತಿನ ಬಗ್ಗೆ ಮಾತನಾಡಿ “ನಚಿಕೇತನ ಕಥೆಯ ಮೂಲಕ ಒಂದು ರೂಪಕವಾಗಿ ಸಾರ್ವಕಾಲಿಕವಾದ ಸಾವಿನ ಬಗ್ಗೆ ಮಾತ್ರವಲ್ಲ, ಮನುಷ್ಯನ ಅಸ್ತಿತ್ವದ ಬಗ್ಗೆ ಮತ್ತು ಅರ್ಥಪೂರ್ಣ ಬದುಕನ್ನು ಬಾಳಿ ಜೀವನದ ಸಾರ್ಥಕ್ಯವನ್ನು ಕಂಡುಕೊಳ್ಳುವ ಬಗೆಯನ್ನು ಕಠೋಪನಿಷತ್ತು ವಿವರಿಸುತ್ತದೆ. ಆತ್ಮದ ಅವಿನಾಶತ್ವ ಮತ್ತು ಬ್ರಹ್ಮನ ಅಂತರ್ಯಾಮಿತ್ವವನ್ನು ಕಠೋಪನಿಷತ್ತು ವಿವರವಾಗಿ ತಿಳಿಸುತ್ತದೆ. ಎಲ್ಲ ವಿವಿಧ ಪ್ರಲೋಭನೆಗಳನ್ನು ನಿರಾಕರಿಸುತ್ತಾ ಪ್ರಶ್ನೆ ಕೇಳಿ ಯಮನಿಂದ ಆತ್ಮ ತತ್ವದ ಉಪದೇಶವನ್ನು ನಚಿಕೇತನು ಪಡೆದುಕೊಂಡ. ಪ್ರಶ್ನಿಸುವ ಮತ್ತು ಸತ್ಯವನ್ನು ಸ್ವೀಕರಿಸುವ ಇಂತಹ ದೈರ್ಯ ಮನುಷ್ಯರಲ್ಲೂ ಬರಬೇಕಾಗಿದೆ. ಕಲೆ, ಸಾಹಿತ್ಯ, ಸಂಗೀತ,…
ತೆಕ್ಕಟ್ಟೆ: ಕೊಮೆಯ ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಸಾಂಸ್ಕೃತಿಕ ಸಂಘಟನೆ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ‘ಸಿನ್ಸ್-1999 ಶ್ವೇತಯಾನ ಕಾರ್ಯಕ್ರಮವು ದಿನಾಂಕ 18-02-2024 ರಂದು ಸಮುದ್ಯತಾ ಸಂಸ್ಥೆಯ ಸಹಯೋಗದೊಂದಿಗೆ ಕನ್ನುಕೆರೆಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಸಂಜೆ ಗಂಟೆ 5.00ಕ್ಕೆ ತೆಕ್ಕಟ್ಟೆ ಹಯಗ್ರೀವದಿಂದ ಮೆರವಣಿಗೆಯೊಂದಿಗೆ ಕನ್ನುಕೆರೆಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ ತನಕ ಚಲಿಸಿ, ಸಂಜೆ ಗಂಟೆ 6.30ರಿಂದ ಕೇಂದ್ರದ ಕಲಿಕಾ ಮಕ್ಕಳಿಂದ ಕಾರ್ಯಕ್ರಮ ವೈವಿದ್ಯ ಪ್ರದರ್ಶನಗೊಳ್ಳಲಿದೆ. ಬಳಿಕ ಆರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಾಯಕ್ರಮವನ್ನು ಉದ್ಘಾಟಿಸಲಿದ್ದು, ಸುಜಯ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನದ ವಿದ್ವಾಂಸ ಪವನ್ ಕಿರಣ್‌ಕೆರೆ ಶುಭಾಸಂಶನೆ ಮಾಡಲಿದ್ದಾರೆ. ಶಾಸಕ ಕಿರಣ್ ಕುಮಾರ್ ಕೊಡ್ಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕಾಂಗ್ರೆಸ್ ಮುಖಂಡ ದಿನೇಶ ಹೆಗ್ಡೆ ಮೊಳಹಳ್ಳಿ, ತಲ್ಲೂರು ಶಿವರಾಮ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀಮತಿ…
ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ “ಮೊಬೈಲ್ ಬಿಡಿ, ಪುಸ್ತಕ ಹಿಡಿ” ಅಭಿಯಾನವು ದಿನಾಂಕ 6-01-2024 ರಿಂದ 10-01-2024ರ ವರೆಗೆ ನಡೆಯಿತು. ಯುವಜನರು ಮತ್ತು ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಸೆಳೆಯಬೇಕು, ಮೊಬೈಲಿನ ಬಳಕೆಯನ್ನು ಹಿತಮಿತವಾಗಿ ಮಾಡಬೇಕೆಂಬ ಉದ್ದೇಶವಿರಿಸಿಕೊಂಡು ಕಾರ್ಕಳ, ಉಡುಪಿ, ಪುತ್ತೂರು, ಸುಳ್ಯದ ಶಾಲೆಗಳಿಗೆ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಸಾಹಿತ್ಯಕ್ಷೇತ್ರ ಓದುಗರ ಬರ ಎದುರಿಸುತ್ತಿದೆ ಎಂಬ ಮಾತಿನ ನಡುವೆಯೂ “ದಿನಕ್ಕೊಂದು ಪುಸ್ತಕ”ವನ್ನು ಶಾಲೆಗಳಿಗೆ ತಲುಪಿಸುವ ಕಾರ್ಯ ಮಾಡಲಾಯಿತು. ಕಾರ್ಕಳ ತಾಲೂಕಿನ ಸ್ಥಳೀಯ ಶಾಲೆಗಳನ್ನು ಸಂದರ್ಶಿಸಿ ಪುಸ್ತಕವನ್ನು ಕೊಡಮಾಡಲಾಯಿತು. ಸರ್ವಜನಿಕರಿಂದ ಮತ್ತು ವಿದ್ಯಾಭಿಮಾನಿಗಳಿಂದ ಅಪೂರ್ವ ಬೆಂಬಲ ವ್ಯಕ್ತವಾಗಿ ಪ್ರತಿನಿತ್ಯ ಸುಮಾರು ಹತ್ತು ಪುಸ್ತಕಗಳನ್ನು ಪುಸ್ತಕ ದಾನಿಗಳ ನೆರವಿನೊಂದಿಗೆ ವಿತರಿಸಲಾಯಿತು. ಈ ಯೋಜನೆಗೆ ಸಾರ್ವಜನಿಕರು ಹಾಗೂ ಪುಸ್ತಕ ಪ್ರಿಯರಿಂದ ರೂಪಾಯಿ 28,110 ಸಂಗ್ರಹಗೊಂಡು, ದಿನಕ್ಕೆ 10 ಪುಸ್ತಕದಂತೆ ಒಟ್ಟು 312ಪುಸ್ತಕಗಳನ್ನು ಜನವರಿ ತಿಂಗಳಿನಲ್ಲಿ ಕಾರ್ಕಳವಲ್ಲದೆ ದೂರದ ಸುಳ್ಯ, ಪುತ್ತೂರಿನ ಶಾಲೆಗಳನ್ನೂ ಆಯ್ಕೆಮಾಡಿ ಪುಸ್ತಕ ವಿತರಿಸಲಾಯಿತು. ಪುಸ್ತಕ ಸ್ವೀಕರಿಸಿದ…