Subscribe to Updates
Get the latest creative news from FooBar about art, design and business.
Author: roovari
ಕಮತಗಿ : ಕಮತಗಿ ಪಟ್ಟಣದ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಸಂಘದ ಅಧ್ಯಕ್ಷ ರಮೇಶ ಕಮತಗಿ ಅವರ ಗೆಳೆಯ ದಿ. ಶ್ರೀಧರ ಕುಲಕರ್ಣಿ ಅವರ ಸ್ಮರಣಾರ್ಥ ‘ಮೇಘಮೈತ್ರಿ ಗ್ರಂಥಾಲಯ’ದ ಉದ್ಘಾಟನಾ ಸಮಾರಂಭವು ದಿನಾಂಕ 05 ಜನವರಿ 2025 ರಂದು ಕಮತಗಿಯ ಹಿರೇಮಠದಲ್ಲಿ ನಡೆಯಿತು. ಸಮಾರಂಭದಲ್ಲಿ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರೀ ಉಜ್ಜಯಿನಿ ಮಹಾಪೀಠ ಇವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಮೇಶ ಕಮತಗಿ ಮಾತನಾಡಿ “ಗೆಳೆಯ ದಿ. ಶ್ರೀಧರ ಕುಲಕರ್ಣಿ ಅವರ ಸ್ಮರಣಾರ್ಥ ‘ಮೇಘಮೈತ್ರಿ ಗ್ರಂಥಾಲಯ’ ಮಾಡಿದ್ದು ಗೆಳೆಯನ ಹೆಸರು ಅಮರವಾಗಲಿ ಹಾಗೂ ಅವನ ಹೆಸರಲ್ಲಿ ಒಂದಿಷ್ಟು ಜನರಿಗೆ ಜ್ಞಾನಾರ್ಜನೆಯಾಗಲಿ ಎಂಬ ಇಚ್ಛೆಯಿಂದ ನನ್ನ ಬಯಕೆ ಈಡೇರಿತು. ಎಲ್ಲರ ಸಹಾಯ ಸಹಕಾರದಿಂದ ಈ ಕೆಲಸವಾಗಿದೆ ಆದ್ದರಿಂದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು” ಎಂದರು. ಈ ಸಂಧರ್ಭದಲ್ಲಿ ಹಿರೇಮಠದ ಷ. ಬ್ರ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು,…
ಮಂಗಳೂರು: ‘ಮಂಗಳೂರು ಲಿಟ್ ಫೆಸ್ಟ್’ನ ಈ ವರ್ಷದ ಪ್ರಶಸ್ತಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಾಮರ್ಥ್ಯ ಅಭಿವೃದ್ಧಿ ಆಯೋಗದ ಸದಸ್ಯ ಹಾಗೂ ‘ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್’ ಇದರ ಸಂಸ್ಥಾಪಕ ಅಧ್ಯಕ್ಷರಾದ ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರನ್ನು ಆಯ್ಕೆ ಮಾಡಲಾಗಿದೆ. ಮಂಗಳೂರು ಲಿಟ್ ಫೆಸ್ಟ್ (ಸಾಹಿತ್ಯ ಹಬ್ಬ) 11 ಮತ್ತು 12 ಜನವರಿ 2025ರಂದು ನಡೆಯಲಿದ್ದು, ಜನವರಿ 12ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಭಾರತ ಫೌಂಡೇಷನ್ ಇದರ ಸುನಿಲ ಕುಲಕರ್ಣಿ ಹಾಗೂ ಶ್ರೀರಾಜ ಗುಡಿ ತಿಳಿಸಿದರು. ಸಾಹಿತ್ಯ ಹಬ್ಬವನ್ನು ಎಸ್.ಎಲ್.ಭೈರಪ್ಪ ಉದ್ಘಾಟಿಸಲಿದ್ದು, ಇದರಲ್ಲಿ 34 ಗೋಷ್ಠಿಗಳಲ್ಲಿ 72 ಪರಿಣತರು ವಿಷಯ ಮಂಡಿಸಲಿದ್ದಾರೆ. 6 ಇಂಗ್ಲಿಷ್ ಹಾಗೂ 8 ಕನ್ನಡ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಅಂಧರಿಗಾಗಿ ಒಂದು ಗೋಷ್ಠಿ ಏರ್ಪಡಿಸಲಾಗಿದ್ದು, ಒಂದು ಗೋಷ್ಠಿಯನ್ನು ಸಂಪೂರ್ಣವಾಗಿ ಸಂಸ್ಕೃತದಲ್ಲಿ ನಡೆಸಲಾಗುವುದು. ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಳ್ಳುವವರು ತಮ್ಮ ಹೆಸರನ್ನಾದರೂ ತುಳುವಿನಲ್ಲಿ ಬರೆಯುವಂತಾಗಬೇಕು ಎಂಬ ಆಶಯದೊಂದಿಗೆ ತುಳು ಲಿಪಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಆಲೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ಹಾಸನ ಜಿಲ್ಲೆ ಆಲೂರು ತಾಲ್ಲೂಕು ಘಟಕದ ವತಿಯಿಂದ ಆಲೂರು ತಾಲ್ಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 12 ಜನವರಿ 2025ರ ಭಾನುವಾರದಂದು ನಡೆಯಲಿದೆ. ಆಲೂರು ತಾಲ್ಲೂಕಿನ ಕೆ. ಹೊಸಕೋಟೆ ಹೋಬಳಿಯ ಹರಿಹಳ್ಳಿ ಕೆಂಚಾಂಬ ದೇವಸ್ಥಾನ ಆವರಣದಲ್ಲಿ ನಡೆಯಲಿರುವ ಈ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾದ ಹಿರಿಯ ಪತ್ರಕರ್ತೆ ಹಾಗೂ ಬರಹಗಾರ್ತಿಯಾದ ಶ್ರೀಮತಿ ಲೀಲಾವತಿಯವರನ್ನು ದಿನಾಂಕ 06ಜನವರಿ 2025 ರಂದು ಅವರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ರವಿ ನಾಕಲಗೂಡು, ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಕೃಷ್ಣೇಗೌಡ ಮಣಿಪುರ, ಗೌರವಾಧ್ಯಕ್ಷರಾದ ಎಂ. ಬಾಲಕೃಷ್ಣ, ಕ. ಸಾ. ಪ. ಮಾಜಿ ಅಧ್ಯಕ್ಷರಾದ ಎಸ್. ಎಸ್. ಶಿವಮೂರ್ತಿ, ಉಪಾಧ್ಯಕ್ಷರಾದ ಟಿ. ಕೆ. ನಾಗರಾಜ್, ಕಾರ್ಯದರ್ಶಿಯಾದ ಧರ್ಮ ಕೆರಲೂರು, ಮಹಿಳಾ ಕಾರ್ಯದರ್ಶಿಯಾದ ಎಂ. ಚಂದ್ರಕಲಾ ಆಲೂರು,…
ಮಂಗಳೂರು : ಹವ್ಯಾಸಿ ಬಳಗ ಕದ್ರಿ ಮಂಗಳೂರು ಸಂಸ್ಥೆಯ 30ನೇ ವರ್ಷಾಚರಣೆ ‘ತ್ರಿಂಶತಿ ಸಂಭ್ರಮ’ ಕಾರ್ಯಕ್ರಮ ದಿನಾಂಕ 05 ಜನವರಿ 2025ರ ಭಾನುವಾರದಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಯಕ್ಷಗಾನ ಉಳಿದು ಬೆಳೆಯಲು ಮುಖ್ಯ ಕಾರಣವೇ ಯಕ್ಷ ಸಂಘಟನೆಗಳು ಮತ್ತು ಸಂಘಟಕರು. ಹವ್ಯಾಸಿ ಬಳಗ ಕದ್ರಿ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. ಕೀರ್ತಿಶೇಷ ಕಲಾವಿದರನ್ನು ನೆನಪು ಮಾಡುವುದು ಮತ್ತು ನೇಪಥ್ಯಕ್ಕೆ ಸರಿದ ಕಲಾವಿದರನ್ನು ಗುರುತಿಸುವ ಕಾರ್ಯ ಅಭಿನಂದನೀಯ. ಯಕ್ಷಗಾನ ಎಲ್ಲ ಭಾಷಿಗರನ್ನು ಹಾಗೂ ಎಲ್ಲಾ ಸಂಸ್ಕೃತಿಯವರನ್ನು ಸೆಳೆಯುವ ಕಲೆ. ನೃತ್ಯ, ವೇಷ-ಭೂಷಣ, ಸಂಗೀತ ಆಕರ್ಷಣೀಯವಾಗಿದ್ದು ಸಮಷ್ಟಿಯ ಕಲೆಯಾದ ಕಾರಣ ಎಲ್ಲ ಭಾಷಿಗರೂ ನೋಡಿ ಆನಂದಿಸುತ್ತಾರೆ. ಕನ್ನಡ, ತುಳು, ಮಲಯಾಳ, ಇಂಗ್ಲಿಷ್ ಹಿಂದಿ ಸಹಿತ ಹಲವು ಭಾಷೆಗಳಲ್ಲಿ ಯಕ್ಷಗಾನ ಪ್ರಸ್ತುತಗೊಳ್ಳುತ್ತಿದೆ. ಈ ಶ್ರೀಮಂತ ಕಲೆ ನಮ್ಮ ಕರಾವಳಿಯಲ್ಲಿ ಹುಟ್ಟಿ ಬೆಳೆದು ದೇಶ ಮತ್ತು ದೇಶದ ಹೊರಗೆ ಬೆಳಕು ಚೆಲ್ಲುತ್ತಿರುವುದು…
musicಮಂಗಳೂರು : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 277ನೇ ಹಾಗೂ 24ನೇ ವರ್ಷದ ಮೊದಲ ಕಾರ್ಯಕ್ರಮ 05 ಜನವರಿ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ಸಂಗೀತ ರಸಮಂಜರಿ ನೀಡಿದ ಒಂಬತ್ತರ ಹರಯದ ಬಾಲೆ ಅಲನಿ ಡಿ’ಸೋಜ ಒಂಬತ್ತು ಹಾಡುಗಳನ್ನು ಹಾಡಿ ಮನ ರಂಜಿಸಿದಳು. ಕಾರ್ಯಕ್ರಮದಲ್ಲಿ ಮೊದಲಿಗೆ ಮಾಂಡ್ ನಾಟಕ ತಂಡದ ರಜತ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸುವ ಕೊಂಕಣಿ ನಾಟಕ `ಸರ್ದಾರ್ ಸಿಮಾಂವ್’ ಇದರ ಬ್ಯಾನರ್ ಅನ್ನು ಕಲಾಂಗಣದ ಚೇರ್’ಮ್ಯಾನ್ ಆಗಿರುವ ರೊನಾಲ್ಡ್ ಮೆಂಡೊನ್ಸಾ ಲೋಕಾರ್ಪಣೆಗೊಳಿಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ `ಗುಮಟ್’ ಸಂಗೀತ ವಾದ್ಯವನ್ನು ಅಲನಿಗೆ ನೀಡಿ ಕೊಂಕಣಿ ಗಾಯನ ಪರಂಪರೆಯನ್ನು ಮುಂದುವರೆಸುವಂತೆ ಕೋರಿ ಶುಭ ಹಾರೈಸಿದರು. ದುಬಾಯಿಯ ಉದ್ಯಮಿ ಮತ್ತು ದಾನಿ ವಿಜಯ್ ಡಿ’ಸೋಜ ಗಂಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಲುವಿ ಜೆ. ಪಿಂಟೊ, ಕೇರನ್ ಮಾಡ್ತಾ ಹಾಗೂ ಮಾಂಡ್ ನಾಟಕ ತಂಡದ ಪರವಾಗಿ ಅರುಣ್ ರಾಜ್…
ರಾಮಾಶಾಸ್ತ್ರಿ ಮತ್ತು ಲಕ್ಷ್ಮೀದೇವಮ್ಮ ದಂಪತಿಗಳ ಸುಪುತ್ರರಾಗಿ ದಿನಾಂಕ 09 ಜನವರಿ 1927ರಂದು ಜನಿಸಿದ ಎಚ್.ಆರ್. ಶಂಕರನಾರಾಯಣ ಅವರು ಮೂಲತಃ ತುಮಕೂರಿನವರು. ಹಾ.ರಾ. ಕಾವ್ಯನಾಮದಲ್ಲಿ ಬರವಣಿಗೆ ಆರಂಭಿಸಿದ ಇವರು ಖ್ಯಾತ ವಕೀಲರು. ಕೊರವಂಜಿ, ನಗುವನಂದ, ಅಪರಂಜಿ, ವಿಕಟ ವಿನೋದ ಹಾಗೂ ಇತರ ಪತ್ರಿಕೆಗಳಲ್ಲಿ ಹಾ.ರಾ. ಅವರ ಹಾಸ್ಯ ಲೇಖನಗಳು ಪ್ರಕಟವಾಗಿದ್ದವು. ಬೆಂಗಳೂರಿನ ಲಾ ಕಾಲೇಜಿನಿಂದ ಬಿ.ಎಲ್. ಪಡೆದ ಇವರು ಕೆಲ ಕಾಲ ಪತ್ರಕರ್ತರಾಗಿದ್ದರು. ನಂತರ ತುಮಕೂರಿನ ಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ವಕೀಲಿ ವೃತ್ತಿಯನ್ನೂ ಮಾಡುತ್ತಿದ್ದರು. ತುಮಕೂರಿನಲ್ಲಿ ಜಿಲ್ಲಾ ಸಾಹಿತ್ಯ ಸಂಘವನ್ನು ಸ್ಥಾಪಿಸಿ, ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡ ಇವರ ‘ಸಮರಸ’ ಗ್ರಂಥವು ಜಿಲ್ಲಾ ಸಾಹಿತಿಗಳ ಕೈಪಿಡಿಯಾಗಿದೆ. ಹಾಸ್ಯ ಬರಹಗಳು ಹಾಗೂ ಹಾಸ್ಯ ಉಪನ್ಯಾಸಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಹಾಸ್ಯ ಲೇಖನಗಳನ್ನು ಬರೆದ ಕೀರ್ತಿ ಹಾ.ರಾ. ಅವರಿಗೆ ಸಲ್ಲುತ್ತದೆ. ಇವರ ಗುಲಾಬಿ ಪ್ರಕಾಶನದಲ್ಲಿ ‘ಕಬ್ಬು ಕುಡುಗೋಲು’, ‘ನಗೆ-ನಾಣ್ಯ’, ‘ಹಿಂದೇನಾ ಮುಂದೇನಾ ಎಂದೆಂದೂ ಹಿಂಗೇನಾ’, ‘ಗಿಲ್ಟ್ ಆರ್ ನಾಟ್ ಗಿಲ್ಟ್’, ‘ಯಾರಿಗೆ ತಲೆ ಸರಿಯಾಗಿದೆ’,…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಾ. ಡಿಸೋಜರಿಗೆ ಶ್ರದ್ದಾಂಜಲಿ ಕಾರ್ಯಕ್ರಮವು ದಿನಾಂಕ 06 ಜನವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಡೋಜ ಡಾ. ಮಹೇಶ ಜೋಶಿ ಇವರು ಮಾತನಾಡಿ “ಪ್ರಕೃತಿ ಕಾಳಜಿಯ ಮನವುಳ್ಳ ಬರಹಗಾರರೆಂದು ಪ್ರಖ್ಯಾತರಾಗಿದ್ದ ನಾರ್ಬರ್ಟ್ ಡಿಸೋಜಾ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದರೂ ಹೋರಾಟದ ವಿಷಯಕ್ಕೆ ಬಂದಾಗ ಮಂಚೂಣಿಯಲ್ಲಿರುತ್ತಿದ್ದರು. ಅವರು 2014 ವರ್ಷದಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕಳೆದ ವರ್ಷ ಅವರಿಗೆ ಫಾದರ್ ಚೆಸೇರಾ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ನಾ. ಡಿಸೋಜರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 6ರಂದು ಜನಿಸಿದರು. ಇವರ ತಂದೆ ಫಿಲಿಪ್ ಡಿಸೋಜರು ಶಾಲಾ ಮಾಸ್ತರರಾಗಿದ್ದರು. ಅವರು ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಓದತೊಡಗಿದ ಬಾಲಕ ನಾ ಡಿಸೋಜ ಅವರಲ್ಲಿ ತಾನೇ ತಾನಾಗಿ ಸಾಹಿತ್ಯದೊಲವು ಮೊಳೆಯಿತು. ಜೊತೆಗೆ ತಾಯಿ ರೊಪೀನಾ ಅವರು ಹೇಳುತ್ತಿದ್ದ ಜನಪದ ಹಾಡುಗಳು ಮತ್ತು…
‘ಶತಾಮೃತಧಾರೆ’ ಇದು ಅಶೋಕ ಪಕ್ಕಳರ ಚೊಚ್ಚಲ ಕೃತಿ. ಮುಂಬೈನ ಬಂಟರ ಸಂಘದ ಮುಖವಾಣಿ ಬಂಟರವಾಣಿಯಲ್ಲಿ ಅವರು ಬರೆದ ನೂರು ಸಂಪಾದಕೀಯಗಳ ದೊಡ್ಡ ಸಂಕಲನವಿದು. ಇದರಲ್ಲಿ ವೈವಿಧ್ಯಮಯವಾದ ಓದಿಸಿಕೊಂಡು ಹೋಗುವ ನೂರು ಲೇಖನಗಳಿವೆ. ಇವೆಲ್ಲ ನಮ್ಮ ಸಾಂಪ್ರತ ಸಂದರ್ಭಗಳಿಗೆ ಸಂಬಂಧಿಸಿದ ಗಂಭೀರ ಕಾಳಜಿಯುಳ್ಳ ಲೇಖಕನೊಬ್ಬನ ತುಡಿತವೂ ಆಗಿವೆ. ಕವಿ ಮನದ ಚಿಂತಕರಾಗಿರುವ ಪಕ್ಕಳ ಇವರು ಸಮಕಾಲೀನ ತವಕ ತಲ್ಲಣಗಳಿಗೆ ಮುಖಾಮುಖಿಯಾದ ಪ್ರತಿಭೆಯ ಸ್ವರೂಪ ಇಲ್ಲಿ ವಿಸ್ತ್ರತವಾಗಿ ಅನಾವರಣಗೊಂಡಿದೆ. ಹಾಗೆ ನೋಡಿದರೆ ಸಂಪಾದಕೀಯ ಬರಹಗಳು, ಅಂಕಣ ಬರಹಗಳು ಸಮಯ ಸಾಹಿತ್ಯವೇ. ಆದರೆ ಅಶೋಕ ಪಕ್ಕಳ ಇವರ ಪ್ರತಿಭೆ, ಸೃಜನಶೀಲ ಚಿಂತನೆಯಿಂದ ಇಲ್ಲಿನ ಬರವಣಿಗೆ ಸಮಯಾತೀತವೂ ಆಗಿ ತಾಳುವ ಬಾಳುವ ಗುಣವನ್ನು ಹೊಂದಿರುವುದು ವಿಶೇಷ. ಇಲ್ಲಿನ ಲೇಖನಗಳಲ್ಲಿ ಬದುಕನ್ನು ನೋಡುವ, ಅನ್ವೇಷಿಸುವ ಪರಿ ಮನಂಬುಗುವಂತಿದೆ. ಅಶೋಕ ಪಕ್ಕಳ ಅವರದು ನಾನಾ ಮುಖಗಳ ವ್ಯಕ್ತಿತ್ವ, ಅವರು ಉತ್ತಮ ಕಾರ್ಯಕ್ರಮ ನಿರೂಪಕರಾಗಿ, ಯಕ್ಷಗಾನ ತಾಳಮದ್ದಳೆಯ ಕಲಾವಿದರಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಹೀಗೆ ನಾನಾ ನೆಲೆಗಳಲ್ಲಿ ದೂರದ ಮುಂಬೈ ಮಹಾನಗರದಲ್ಲಿ…
ನಮ್ಮ ಭಾರತೀಯ ಪರಂಪರೆಯ ಅಸ್ಮಿತೆಯಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳು ನಮ್ಮ ಸಾಂಸ್ಕೃತಿಕ ಜಗತ್ತಿನ ಒಂದು ಅವಿಭಾಜ್ಯ ಅಂಗವಾಗಿ ಹಾಸುಹೊಕ್ಕಾಗಿದೆ. ಸಂಗೀತ-ನೃತ್ಯ-ನಾಟಕ ಯಾವುದೇ ಕಲಾಪ್ರಕಾರದ ಹೂರಣ ಈ ಮಹಾಕಾವ್ಯಗಳನ್ನು ಬಿಟ್ಟು ಬೇರಿಲ್ಲ. ಎಲ್ಲ ಕಥೆಗಳ ಆಗರ ಅವು. ಎಲ್ಲಕ್ಕೂ ಸ್ಫೂರ್ತಿ-ಪ್ರೇರಣೆ. ಅದರಲ್ಲೂ ನೃತ್ಯಗಳಲ್ಲಿ ಇವು ಬಹು ಬಳಕೆಯಲ್ಲಿದ್ದು ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ. ರಾಮಾಯಣ – ಮಹಾಭಾರತದ ಕಥಾವಸ್ತುಗಳನ್ನು ಕಾಲಾನುಕಾಲದಿಂದ ಯಶಸ್ವಿಯಾಗಿ ನೃತ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಜನಜನಿತ ಕಥೆಯಾಗಿದ್ದು, ಇವು ಅನೇಕ ತಿರುವುಗಳನ್ನು, ಸ್ವಾರಸ್ಯವಾದ ಕಥಾ ಓಟವನ್ನು ಉಳ್ಳದ್ದಾದ್ದರಿಂದ ಇವುಗಳು ಬಹು ಜನಪ್ರಿಯ ಕೂಡ. ಅದರಂತೆ ದಿನಾಂಕ 05 ಜನವರಿ 2025ರಂದು ಜಯನಗರದ ವಿವೇಕ ಸಭಾಂಗಣದಲ್ಲಿ ಸಾಧನ ನೃತ್ಯ ಶಾಲೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಪ್ರದರ್ಶಿತವಾದ ‘ರಾಮಾಯಣ’ ನೃತ್ಯರೂಪಕ ಸೊಗಸಾಗಿ ಮೂಡಿಬಂದು, ನೋಡುಗರನ್ನು ಆಕರ್ಷಿಸಿತು. ತೆರೆ ಸರಿದೊಡನೆ ಸರ್ವರ ಪ್ರಥಮ ದೃಷ್ಟಿಯನ್ನು ಆಕರ್ಷಿಸಿದ್ದು ಶ್ರೀರಾಮ-ಲಕ್ಷ್ಮಣ-ಸೀತಾ ಸಮೇತನಾದ ಆಂಜನೇಯ ಮೂರ್ತಿ. ಆಲಂಕೃತ ಪ್ರಭಾವಳಿಯ ಏಕಚ್ಛತ್ರದಡಿ ದಿವ್ಯಮೂರ್ತಿಗಳು ಅನಾವರಣಗೊಂಡ ಹೃನ್ಮನ ತಣಿಸುವ ದೃಶ್ಯ ಆಕರ್ಷಿಸಿತು. ಇಡೀ ರಾಮಾಯಣದ…
ಪುತ್ತೂರು : ಕಾವು ಸಮೀಪದ ಪೆರ್ನಾಜೆಯಲ್ಲಿ ಶ್ರೀ ಸುಬ್ರಹ್ಮಣ್ಯ ಉಂಗ್ರುಪುಳಿತ್ತಾಯ ಹಾಗೂ ಶ್ರೀಮತಿ ಶ್ರೀಲತಾರ ಷಷ್ಠೀ ಪೂರ್ತಿ ಕಾರ್ಯಕ್ರಮದ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ‘ಸ್ಯಮಂತಕ ಮಣಿ’ ತಾಳಮದ್ದಳೆಯು ದಿನಾಂಕ 08 ಜನವರಿ 2025ರಂದು ನಡೆಯಿತು. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟ್ರಮಣ ಭಟ್, ನಿತೀಶ್ ಎಂಕಣ್ಣಮೂಲೆ, ಬೇಂಗ್ರೋಡಿ ಲಕ್ಷ್ಮೀಶ ಭಟ್, ಮುರಳೀಧರ ಕಲ್ಲೂರಾಯ ಕುಂಜೂರುಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಶೆಟ್ಟಿ ಸಾಲ್ಮರ (ಶ್ರೀ ಕೃಷ್ಣ), ಭಾಸ್ಕರ್ ಬಾರ್ಯ (ಬಲರಾಮ), ಗುಂಡ್ಯಡ್ಕ ಈಶ್ವರ ಭಟ್ (ಜಾಂಬವ), ಪೂಕಳ ಲಕ್ಷ್ಮೀ ನಾರಾಯಣ ಭಟ್ (ನಾರದ) ಸಹಕರಿಸಿದರು. ಮುರಳೀಧರ ಆಚಾರ್ ಸ್ವಾಗತಿಸಿ, ಗುರುಮೂರ್ತಿ ಪುಣಿಚ್ಚಿತ್ತಾಯ ವಂದಿಸಿದರು.