Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವಿಂಶತಿ ಕಾರ್ಯಕ್ರಮದ ಹತ್ತನೇ ಸರಣಿ ತಾಳಮದ್ದಳೆಯು ದಿನಾಂಕ 29 ಅಕ್ಟೋಬರ್ 2024ರಂದು ಬನ್ನೂರು ಭಾರತೀ ನಗರದ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ‘ಪಾರ್ಥಸಾರಥ್ಯ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್ ಬಟ್ಯಮೂಲೆ, ನಿತೀಶ್ ಮನೊಳಿತ್ತಾಯ ಎಂಕಣ್ಣಮೂಲೆ, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಮತ್ತು ಪ್ರರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ಕಿಶೋರಿ ದುಗ್ಗಪ್ಪ ನಡುಗಲ್ಲು), ಕೌರವ (ಶುಭಾ ಜೆ.ಸಿ. ಅಡಿಗ), ಬಲರಾಮ (ಹರಿಣಾಕ್ಷಿ ಜೆ. ಶೆಟ್ಟಿ), ಅರ್ಜುನ (ಶಾರದಾ ಅರಸ್) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ದೇವಳದ ಚಂದ್ರಶೇಖರ್ ಭಟ್ ಬಡೆಕ್ಕಿಲ ವಂದಿಸಿದರು. ದೇವಳದ ಆಡಳಿತ ಮಂಡಳಿ ಸದಸ್ಯರು ಸಹಕರಿಸಿದರು. ಶ್ರೀಮತಿ ಮತ್ತು ಶ್ರೀ ದುಗ್ಗಪ್ಪ ನಡುಗಲ್ಲು ಪ್ರಾಯೋಜಿಸಿದ್ದರು.
ಪುತ್ತೂರು : ಕರ್ನಾಟಕ ಸಂಘ ಪುತ್ತೂರು ಇದರ ವತಿಯಿಂದ ಕನ್ನಡ ರಾಜ್ಯೋತ್ಸವದ ಶುಭಾವಸರದಲ್ಲಿ ಬೊಳಂತಕೋಡಿ ಈಶ್ವರ ಭಟ್ಟರ ಸ್ಮರಣಾರ್ಥ ‘ಕನ್ನಡ ಕವಿಗೋಷ್ಠಿ’ಯನ್ನು ದಿನಾಂಕ 01 ನವೆಂಬರ್ 2024ರಂದು ಸಂಜೆ 3-45 ಗಂಟೆಗೆ ಪುತ್ತೂರಿನ ರಾಧಾಕೃಷ್ಣ ಮಂದಿರ ರಸ್ತೆ (ಬ್ಲಡ್ ಬ್ಯಾಂಕ್ ಬಳಿ) ಅನುರಾಗ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದ ಹಿರಿತನ ಪುತ್ತೂರಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಾಹಿತಿ ಡಾ. ನರೇಂದ್ರ ರೈ ದೇರ್ಲರವರದ್ದು ಹಾಗೂ ಪ್ರೊಫೆಸರ್ ವಿ.ಬಿ. ಅರ್ತಿಕಜೆ, ಪ್ರೊಫೆಸರ್ ಹರಿನಾರಾಯಣ ಮಾಡಾವು, ಶ್ರೀ ಪರೀಕ್ಷಿತ ತೋಳ್ಪಾಡಿ, ಶ್ರೀ ಜಯಾನಂದ ಪೆರಾಜೆ, ಶ್ರೀ ಜನಾರ್ದನ ದುರ್ಗ, ಶ್ರೀ ಸಿ.ಶೇ. ಕಜೆಮಾರ್, ಶ್ರೀ ವಿಶ್ವನಾಥ ಕುಲಾಲ್, ಶ್ರೀಮತಿ ಕವಿತ ಅಡೂರು, ಡಾ. ಮೈತ್ರಿ ಭಟ್, ಶ್ರೀಮತಿ ಮಲ್ಲಿಕ ಜೆ. ರೈ, ಶ್ರೀಮತಿ ಶಾಂತ ಪುತ್ತೂರು ಮತ್ತು ಕುಮಾರಿ ಅಕ್ಷರ ಕೆ.ಟಿ. ಈ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿ – ಕವಯತ್ರಿಯರು. ಕರ್ನಾಟಕ ಸಂಘ, ಪುತ್ತೂರು, ದ.ಕ. ಸಂಪರ್ಕ ದೂರವಾಣಿ…
ಉಡುಪಿ : ಸ್ವಾಮಿ ಶ್ರೀ ಬ್ರಹ್ಮಲಿಂಗೇಶ್ವರನ ತಾಣದಲ್ಲಿ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ.) ಇದರ 2ನೇ ವರ್ಷದ ‘ಜನ್ಸಾಲೆ ಯಕ್ಷ ಪರ್ವ 2024’ವನ್ನು ದಿನಾಂಕ 3 ನವೆಂಬರ್ 2024ರಂದು ಮಾರಣಕಟ್ಟೆ ಮೂಕಾಂಬಿಕಾ ಕಲಾ ಮಂಟಪದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಯಕ್ಷ ರಾಘವ ಪ್ರಶಸ್ತಿ, ಕಲಾ ಗೌರವ, ವೈದ್ಯಕೀಯ ನೆರವು, ಗೃಹ ನಿರ್ಮಾಣಕ್ಕೆ ನೆರವು, ಪ್ರತೀಕ್ಷಾ ಪುರಸ್ಕಾರ, ಯಕ್ಷ ಪಂಚ ಸ್ವರ, ಯಕ್ಷಗಾನ ಪ್ರದರ್ಶನಗಳು ನಡೆಯಲಿದೆ. ಮಧ್ಯಾಹ್ನ 2-00 ಗಂಟೆಗೆ ಬಡಗು ತಿಟ್ಟಿನ ಭಾಗವತರಾದ ಶ್ರೀ ದಿನೇಶ್ ಶೆಟ್ಟಿ, ಶ್ರೀ ಸೃಜನ್ ಗಣೇಶ್ ಹೆಗಡೆ ಮತ್ತು ಶ್ರೀರಕ್ಷಾ ಹೆಗಡೆ ಹಾಗೂ ತೆಂಕು ತಿಟ್ಟಿನ ಭಾಗವತರಾದ ಶ್ರೀಮತಿ ಕಾವ್ಯಶ್ರೀ ಮತ್ತು ಡಾ. ಪ್ರಖ್ಯಾತ್ ಶೆಟ್ಟಿ ಇವರಿಂದ ಯಕ್ಷ ಪಂಚ ಸ್ವರ ಪ್ರಸ್ತುತಗೊಳ್ಳಲಿದ್ದು, ಇವರಿಗೆ ಶ್ರೀ ಎನ್.ಜೆ. ಹೆಗಡೆ, ಶ್ರೀ ಶಶಾಂಕ ಆಚಾರ್ಯ, ಶ್ರೀ ಚಂದ್ರಶೇಖರ ಆಚಾರ್ಯ, ಶ್ರೀ ಶ್ರೀಕಾಂತ್ ಶೆಟ್ಟಿ, ಶ್ರೀ ಶ್ರೀವತ್ಸ ಮತ್ತು ಶ್ರೀ ಪ್ರಶಾಂತ್ ಶೆಟ್ಟಿಯವರು ಸಹಕರಿಸಲಿದ್ದಾರೆ. ಸಂಜೆ 4-30…
ಮುಡಿಪು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ಮಂಗಳೂರು ವಿ. ವಿ.ಇಲ್ಲಿನ ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಅಂಬಲಪಾಡಿ ವ್ಯಾಸ ಬಲ್ಲಾಳ ಜಾನಕಿ ದತ್ತಿ ನಿಧಿ, ಸೇಡಿಯಾಪು ಕೃಷ್ಣಭಟ್ಟರ ಬಗ್ಗೆ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 29 ಅಕ್ಟೋಬರ್ 2024ರ ಮಂಗಳವಾರದಂದು ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಕಾಸರಗೋಡು ಕೇಂದ್ರೀಯ ವಿ. ವಿ. ಯ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ ಪದ್ಯಾಣ ಮಾತನಾಡಿ ಸೇಡಿಯಾಪು ಅವರು ಕವಿಯಾಗಿ, ಸಾಹಿತಿಯಾಗಿ, ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದರು. ಪ್ರಗತಿಪರ ಚಿಂತಕರಾಗಿದ್ದ ಅವರದ್ದು ವಸ್ತುನಿಷ್ಠವಾಗಿ ಆಲೋಚನೆ ಮಾಡುವ ವ್ಯಕ್ತಿತ್ವ. ಪ್ರಗತಿಯು ಹೇಗಿರಬೇಕೆಂದರೆ ಸಾತ್ವಿಕತೆ, ಒಗ್ಗೂಡಿಸುವ ಮೂಲಕ ಆಗಬೇಕು ಎಂದು ನಂಬಿದ್ದ ಅವರದ್ದು ತಾತ್ವಿಕ ಸಮೃದ್ಧಿಯ ಬರವಣಿಗೆಯಾಗಿತ್ತು. ಸಾಹಿತ್ಯವು ಇಡೀ ಸಮಾಜವನ್ನು ಕಟ್ಟುವ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಬೆಳಗಿಸುವಂತಿರಬೇಕು ಎಂದಿದ್ದ ಅವರು ಅಕ್ಷರ, ವರ್ಣಗಳ ಬಗ್ಗೆ ಹಾಗೂ ಭಾಷಾ ವಿಚಾರಗಳ ಬಗ್ಗೆಯೂ…
ಸುರತ್ಕಲ್ : ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ “ಯಕ್ಷಸಿರಿ” ಯಕ್ಷಗಾನ ತರಬೇತಿ ಕೇಂದ್ರದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 1 ನವಂಬರ್ 2024ರಂ ಶುಕ್ರವಾರದಂದು ಸಂಜೆ ಘಂಟೆ 5.00 ರಿಂದ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಯಕ್ಷಸಿರಿಯ ವಿದ್ಯಾರ್ಥಿಗಳ ಮತ್ತು ಇತರ ಕಲಾವಿದರ ಕೂಡುವಿಕೆಯಿಂದ ರಾಕೇಶ್ ರೈ ಅಡ್ಕ ಅವರ ನಿರ್ದೇಶನದಲ್ಲಿ “ಕೃಷ್ಣಂ ವಂದೇ ಜಗದ್ಗುರು” ಯಕ್ಷಗಾನ ಬಯಲಾಟ ಪ್ರದರ್ಶನವಾಗಲಿದೆ. ಸಭಾ ಕಾರ್ಯಕ್ರಮ ಸಂಜೆ ಘಂಟೆ 7.00 ರಿಂದ ನಡೆಯಲಿದ್ದು, ಕಾರ್ಯಕ್ರಮವನ್ನು ಮುಂಬೈ ಇಲ್ಲಿನ ವಿ. ಕೆ. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾದ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರತ್ಕಲ್ ಶ್ರೀ ಶಾರದಾ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ವೈ ರಾಘವೇಂದ್ರ ರಾವ್, ಶ್ರೀ ಡೆವಲಪರ್ಸ್ ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಎಂ. ಶೆಟ್ಟಿ ಕಟೀಲು, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ…
ಡಾ. ಸುರೇಶ ನೆಗಳಗುಳಿಯವರು ಬಂಟ್ವಾಳ ತಾಲೂಕಿನ ಆಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ಜನಿಸಿದವರು. ಇವರ ತಂದೆ ಶ್ರೀ ತಿಮ್ಮಣ್ಣ ಭಟ್ಟ ಮತ್ತು ತಾಯಿ ಶ್ರೀಮತಿ ಸಾವಿತ್ರಿಯವರ ಕೊನೆಯ ಪುತ್ರ. 1980ರಿಂದ 1988 ತನಕ ವೈದ್ಯಕೀಯ ಸೇವೆ 1988-1997 ಕೊಪ್ಪ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಾಧಿಕಾರಿಯಾಗಿ, ಪ್ರಾಧ್ಯಾಪಕರಾಗಿ ಪ್ರಾಂಶುಪಾಲರಾಗಿ ದುಡಿದವರು. ಬಳಿಕ 1997-2012-ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ವೈದ್ಯಾಧಿಕಾರಿಯಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಂತರ 2012-2017 ತನಕ ಕೇರಳ ಶೋರನೂರು ಪಿ.ಎನ್.ಎನ್.ಎಮ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಾಧಿಕಾರಿಯಾಗಿ, ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ 2017ರಿಂದ ಇಂದಿನ ತನಕ ಮಣಿಪಾಲದ ಎಂ.ಐ.ಎ.ಎಮ್.ಎಸ್. ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಡುವೆ 2012ರಿಂದ ಈ ತನಕ ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ಮೂಲವ್ಯಾಧಿ ಶಸ್ತ್ರಚಿಕಿತ್ಸಕರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಕರುನಾಡಿನ ಸಾಹಿತ್ಯ ಲೋಕಕ್ಕೆ ಇವರು :- ‘ತುಷಾರ ಬಿಂದು’ ಎಂಬ ತುಷಾರ ಮಾಸಪತ್ರಿಕೆಯ ಚಿತ್ರಕವನ ವಿಭಾಗದಲ್ಲಿ ವಿಜೇತವಾದ ತಮ್ಮ ಕವನಗಳ ಸಂಕಲನ…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ‘ನಮ್ಮ ಸಾಧಕರೊಂದಿಗೆ ಸಂಭ್ರಮ’ ಎಂಬ ಆಪ್ತ ಕಾರ್ಯಕ್ರಮ ನಗರದ ಶಾರದಾ ವಿದ್ಯಾಲಯದಲ್ಲಿ ದಿನಾಂಕ 29 ಅಕ್ಟೋಬರ್ 2024ರಂದು ಜರುಗಿತು. ಘಟಕದ ಸದಸ್ಯ, ಕನ್ನಡ ತುಳು ಸಾಹಿತಿ, ಪೊಳಲಿ ಶೀನಪ್ಪ ಹೆಗ್ಡೆ ಪ್ರಶಸ್ತಿ ಪುರಸ್ಕೃತ ಬೆನೆಟ್ ಜಿ. ಅಮ್ಮನ್ನ ಮತ್ತು ಘಟಕದ ಗೌರವ ಕಾರ್ಯದರ್ಶಿ, ಕ.ಸಾ.ಪ. ಕೇಂದ್ರ ಮಾರ್ಗದರ್ಶಿ ಸಮಿತಿಯ ಪದಾಧಿಕಾರಿ ಅಲ್ಲದೆ ಇದೀಗ ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶೀ ರಾಯಭಾರಿಯಾಗಿ ನಿಯೋಜಿತರಾಗಿರುವ ಡಾ. ಮುರಲೀಮೋಹನ್ ಚೂಂತಾರು ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಸಮ್ಮಾನಿಸಲಾಯಿತು. ಚೂಂತಾರು ಅವರ, ಕ.ಸಾ.ಪ. ಅಧ್ಯಕ್ಷ ನಾಡೋಜ ಮಹೇಶ್ ಜೋಶಿಯವರೊಂದಿಗಿನ ವಿದೇಶ ಪ್ರವಾಸ, ಅಲ್ಲಿನ ಕನ್ನಡ ಸಂಘಗಳಿಗೆ ಭೇಟಿ ಮತ್ತು ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಇಂಚರ ತಂಡದ ಗಾಯಕಿಯರಾದ ರತ್ನಾವತಿ ಜೆ. ಬೈಕಾಡಿ , ಗೀತಾ ಮಲ್ಯ, ಜಯಲಕ್ಷ್ಮೀ ಬಾಲಕೃಷ್ಣ, ಜಯಶ್ರೀ, ಉಮಾ ಫಾಲಾಕ್ಷಪ್ಪ ಸಮೂಹ ಗಾಯನದಲ್ಲಿ ಮತ್ತು…
ಕಾಸರಗೋಡು:ನವೋದಯದಿಂದ ನವ್ಯದೆಡೆಗೆ ಹೊರಳಿದ ಕನ್ನಡ ಸಾಹಿತ್ಯ ವಲಯದ ಸಂಧಿ ಕಾಲಘಟ್ಟದಲ್ಲಿ ಕಾಸರಗೋಡಿನ ಸಾಹಿತ್ಯ ವಲಯದಲ್ಲಿ ಪ್ರಧಾನ ಭೂಮಿಕೆಯೊದಗಿಸಿದ ಪ್ರಮುಖರಲ್ಲಿ ದಿ. ಎಂ. ಗಂಗಾಧರ ಭಟ್ಟರು ಮಹತ್ತರ ಪಾತ್ರ ವಹಿಸಿದ್ದರು ಎಂದು ಸಾಹಿತಿ, ರಂಗಕರ್ಮಿ ಬಿ. ರಾಮಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಕಲ ವಲಯದ ಆದ್ಯ ಪ್ರವರ್ತಕರಾಗಿ ಗಂಗಾಧರ ಭಟ್ಟರ ಬದುಕು-ಬರಹ ಸ್ತುತ್ಯರ್ಹ: ಬಿ.ರಾಮಮೂರ್ತಿ-ಗಂಗಾಧರ ಭಟ್ ಸಂಸ್ಮರಣೆಯಲ್ಲಿ ಅಭಿಮತ ಸಾಮಾಜಿಕ, ಸಾಂಸ್ಕಂತಿಕ ಸಂಘಟನೆಯಾದ ರಂಗಚಿನ್ನಾರಿ ಕಾಸರಗೋಡು ನೇತೃತ್ವದಲ್ಲಿ ದಿನಾಂಕ 28 ಅಕ್ಟೋಬರ್ 2024ರ ಸೋಮವಾರ ಅಪರಾಹ್ನ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆದ ಕವಿ, ಕನ್ನಡ ಹೋರಾಟಗಾರ, ಪತ್ರಕರ್ತ, ಅಧ್ಯಾಪಕ ದಿ. ಎಂ. ಗಂಗಾಧರ ಭಟ್ ಅವರ 29ನೇ ಸಂಸ್ಮರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಕಲ ಕಲಾ ಸಾಧಕರಾಗಿ ಶತಾಯುಷ್ಯದಲ್ಲಿ ಮಾಡಬಹುದಾದ ಸಾಧನೆಗಳನ್ನು ಅಲ್ಪ ಅವಧಿಯಲ್ಲೇ ನಿರ್ವಹಿಸಿ ಅಕಾಲದಲ್ಲಿ ಅಗಲಿದ ಗಂಗಾಧರ ಭಟ್ಟರು ಕಾಸರಗೋಡಿನ ಕನ್ನಡ ಚಳವಳಿಯ 1972ರ ಕಾಲಘಟ್ಟದ ಹೊಸ ಹೊರಳುವಿಕೆಯಲ್ಲಿ ನೇತೃತ್ವ ವಹಿಸಿದ್ದವರು. ಇಲ್ಲಿಯ ಸಾಹಿತ್ಯ, ಸಾಂಸ್ಕøತಿಕ, ಭಾಚಾ ಚಳವಳಿಯ…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮತ್ತು ತುಳು ನಾಟಕ ಕಲಾವಿದರ ಒಕ್ಕೂಟ ವತಿಯಿಂದ ಇತ್ತೀಚೆಗೆ ನಿಧನರಾದ ಯಕ್ಷಗಾನದ ಹಿರಿಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ದಿನಾಂಕ 25 ಅಕ್ಟೋಬರ್ 2024ರ ಶುಕ್ರವಾರದಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ತುಳು ಅಕಾಡೆಮಿಯ ತುಳು ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಹಿರಿಯ ಯಕ್ಷಗಾನ ಅರ್ಥದಾರಿ ಹಾಗೂ ವಿದ್ವಾಂಸರಾದ ಡಾ. ಪ್ರಭಾಕರ ಜೋಶಿ ಮಾತನಾಡಿ “ಜಯರಾಮ ಆಚಾರ್ಯ ಅತ್ಯಂತ ಸೂಕ್ಷ್ಮ ಪ್ರಜ್ಞೆಯ ಕಲಾವಿದರಾಗಿದ್ದರು. ಕಲಾ ಶಿಸ್ತು ಹಾಗೂ ನೈಪುಣ್ಯತೆ ಮೂಲಕ ಬಂಟ್ವಾಳ ಜಯರಾಮ ಆಚಾರ್ಯರು ಯಕ್ಷಗಾನದ ಹಾಸ್ಯ ಪಾತ್ರಕ್ಕೆ ಗೌರವ ತಂದವರು. ಸ್ವಾಭಿಮಾನಿಯಾಗಿದ್ದ ಜಯರಾಮ ಆಚಾರ್ಯರ ಕುಟುಂಬದ ಜತೆಗೆ ಅಭಿಮಾನಿಗಳು ನಿಲ್ಲುವ ಆವಶ್ಯವಿದೆ.” ಎಂದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಅತ್ಯಂತ ಸಜ್ಜನ ಹಾಗೂ ಸ್ವಾಭಿಮಾನಿ…
ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘ, ಪ್ರವರ್ತಿತ ರೇಡಿಯೋ ಪಾಂಚಜನ್ಯದ ಆಶ್ರಯದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಮತ್ತು ರೋಟರಿ ಯುವ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕನ್ನಡ ಗೀತೆ ಗಾಯನ ಸ್ಪರ್ಧೆ’ಯನ್ನು ದಿನಾಂಕ 11 ನವೆಂಬರ್ 2024ರಂದು ಪುತ್ತೂರಿನ ರೇಡಿಯೋ ಪಾಂಚಜನ್ಯ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಯಲಿದ್ದು, ಕನ್ನಡ ಭಾಷೆ, ಕನ್ನಡ ನಾಡು, ಕನ್ನಡ ನುಡಿಗೆ ಸಂಬಂಧಿಸಿದ ಉತ್ತಮ ಸಾಹಿತ್ಯ ಉಳ್ಳ ಭಾವಗೀತೆ, ಸಿನಿಮಾ ಹಾಡುಗಳಿಗೆ ಅವಕಾಶವಿದೆ. ಹೆಸರು ನೋಂದಾಯಿಸಲು 8050809885 ಮತ್ತು 9164070290 ಸಂಪರ್ಕಿಸಿರಿ.