Author: roovari

ಬಂಟ್ವಾಳ : ಕರ್ನಾಟಕದ ಸುವರ್ಣ ಸಂಭ್ರಮದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯು ಬಂಟ್ವಾಳ ತಾಲೂಕಿಗೆ ದಿನಾಂಕ 2 ಅಕ್ಟೋಬರ್ 2024ರಂದು ಪ್ರವೇಶಿಸಿದ್ದು, ಬಿ.ಸಿ.ರೋಡ್ ನಲ್ಲಿ ಬಂಟ್ವಾಳ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಿತ ನಾನಾ ಇಲಾಖೆಗಳ ವತಿಯಿಂದ ಗೌರವಪೂರ್ಣವಾಗಿ ಸ್ವಾಗತಿಸಲಾಯಿತು. ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಬಿಂದಿಯಾ ನಾಯಕ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಇವರು, ಕರ್ನಾಟಕದ ಸಾಧಕರು, ಸಂಸ್ಕೃತಿಯ ದೃಶ್ಯಾವಳಿಯನ್ನು ಒಳಗೊಂಡಿರುವ ಸುವರ್ಣ ಕರ್ನಾಟಕ ರಥದಲ್ಲಿರುವ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಈ ಸಂದರ್ಭ ಮಾತನಾಡಿದ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಕರ್ನಾಟಕವೆಂದು ಹೆಸರಾಗಿ ರಾಜ್ಯ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರಥ ಸಾಗುತ್ತಿದ್ದು, ನಮ್ಮ ನೆಲ, ಜಲ, ವಿಚಾರಗಳನ್ನು ಅರಿಯಲು ಇದು ಸಾಧ್ಯವಾಗುತ್ತದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ…

Read More

ತೆಕ್ಕಟ್ಟೆ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಸಿನ್ಸ್ 1999 ಶ್ವೇತಯಾನ-63ರ ಕಾರ್ಯಕ್ರಮದಡಿಯಲ್ಲಿ ನವರಾತ್ರಿ ಸಂದರ್ಭದಲ್ಲಿನ ಕಲಾ ಪ್ರಕಾರ ‘ಹೂವಿನಕೋಲು’ ಅಭಿಯಾನದ ಉದ್ಘಾಟನಾ ಸಮಾರಂಭವು ದಿನಾಂಕ 03 ಅಕ್ಟೋಬರ್ 2024 ರಂದು ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಆನೆಗುಡ್ಡೆ ವಿನಾಯಕ ದೇಗುಲದ ಪ್ರಧಾನ ಅರ್ಚಕರಾದ ಕೃಷ್ಣಾನಂದ ಉಪಾಧ್ಯ ಮಾತನಾಡಿ “ಮಕ್ಕಳ ಕಲಾಸಕ್ತಿಯನ್ನು ಉತ್ತೇಜಿಸುವ ಕಾರ್ಯಕ್ರಮ ಹೂವಿನಕೋಲು. ನಾಡಿನಾದ್ಯಂತ ಹಲವು ವರ್ಷಗಳಿಂದ ಹೂವಿಕೋಲು ತಂಡವನ್ನು ಮನೆ ಮನೆಗಳಿಗೆ ಕೊಂಡೊಯ್ದು ಯಕ್ಷ ಕಲಾ ಪ್ರಕಾರವನ್ನು ಬಿತ್ತರಗೊಳಿಸುವುದರ ಜೊತೆಗೆ ಮಕ್ಕಳನ್ನು ಬೆಳೆಸಿ ನಾಡಿಗೆ ಕೊಡುವ ಕಾಯಕವನ್ನು ಯಶಸ್ವೀ ಕಲಾವೃಂದ ಕೊಮೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ನಾಲ್ಕು ತಂಡಗಳಾಗಿ ಮಾಡಿಕೊಂಡು ಕರಾವಳಿ ಭಾಗದ ಹಲವು ಕಡೆಗಳಲ್ಲಿ ಕರಾವಳಿಯ ಕಂಪನ್ನು ಸೊಗಸಾಗಿ ಮಕ್ಕಳ ಮೂಲಕ ಬಿತ್ತರಿಸುವ ಕಾರ್ಯ ಬೆರಗು ಮೂಡಿಸುವಂತಹುದು.” ಎಂದರು. ಯಶಸ್ವೀ ಕಲಾವೃಂದದ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಮಲ್ಯಾಡಿ ಮಾತನಾಡಿ “ಕಲಾ ಪ್ರಪಂಚದಿಂದ ಮರೆಯಾಗಿದ್ದ ಕಲೆ ಹೂವಿನಕೋಲು. ಈ ಕಲೆಯನ್ನು ಕಳೆದ ಹಲವಾರು…

Read More

ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾ ಗಮಕ ಪರಿಷತ್ ವಿಜಯಪುರ ಇವರ ಸಂಘಟನೆಯಲ್ಲಿ ಏರ್ಪಡಿಸಿದ ‘ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ’ವು ದಿನಾಂಕ 05 ಅಕ್ಟೋಬರ್ 2024ರಂದು ಮುಂಜಾನೆ 11-00 ಗಂಟೆಗೆ ವಿಜಯಪುರದ ವಜ್ರ ಹನುಮಾನ ನಗರ, ಶ್ರೀ ಶಂಕರಮಠದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರದ ಶ್ರೀ ಶಂಕರಮಠದ ಅಧ್ಯಕ್ಷರಾದ ಶ್ರೀ ಮಹೇಶ್ ದೇಶಪಾಂಡೆ ಇವರು ವಹಿಸಲಿದ್ದು, ಶ್ರೀ ಕನಕದಾಸರ ‘ನಳ ದಮಯಂತಿ ಚರಿತ್ರೆ’ ಕಾವ್ಯದಲ್ಲಿ ‘ನಳ ದಮಯಂತಿ ವಿವಾಹ ಸಮಾರಂಭ’ದ ವಾಚನವನ್ನು ಶ್ರೀಮತಿ ಪುಷ್ಪಾ ಕುಲಕರ್ಣಿ ಮತ್ತು ಶ್ರೀಮತಿ ಭೂದೇವಿ ಕುಲಕರ್ಣಿ ಹಾಗೂ ವ್ಯಾಖ್ಯಾನವನ್ನು ಶ್ರೀ ಕಲ್ಯಾಣರಾವ್ ದೇಶಪಾಂಡೆ ಇವರು ನಿರ್ವಹಿಸಲಿರುವರು.

Read More

ಪಿರಿಯಾಪಟ್ಟಣ : ಧಾನ್ ಫೌಂಡೇಶನ್ ನೇತೃತ್ವದ ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟದ ಸಮೂಹ ಮಹಾಸಭೆ ಹಾಗೂ ನಾರಾಯಣ ಹೆಗಡೆಯವರಿಗೆ ಅಭಿನಂದನಾ ಸಮಾರಂಭ ಮತ್ತು ‘ಸಂಘಂ ಶರಣಂ ಗಚ್ಛಾಮಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 21 ಸೆಪ್ಟೆಂಬರ್ 2024ರಂದು ಸಾಯಿ ಸಮುದಾಯ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಗತಿಪರ ಚಿಂತಕಿ ಡಾ. ಶ್ವೇತಾ ಮಡಪ್ಪಾಡಿ ಇವರು ಮಾತನಾಡಿ “ಸಮಾಜದ ಏಳಿಗೆಯಲ್ಲಿ ಪುರುಷರಷ್ಟೇ ಪಾತ್ರ ಮಹಿಳೆಯರದ್ದು ಇದೆ. ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕೆ ಧಾನ್ ಫೌಂಡೇಶನ್ ಕೊಡುಗೆ ಶ್ಲಾಘನೀಯ, ಕಳೆದ ಏಳು ವರ್ಷಗಳಿಂದ ಧಾನ್ ಫೌಂಡೇಶನ್ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡಿ ನಿರ್ಗಮಿಸುತ್ತಿರುವ ಯೋಜನಾ ಕಾರ್ಯ ನಿರ್ವಾಹಕ ನಾರಾಯಣ ಹೆಗಡೆಯವರ ಕೆಲಸ ಇತರರಿಗೆ ಮಾದರಿಯಾಗಿದೆ” ಎಂದರು. ಧಾನ್ ಫೌಂಡೇಶನ್ ಪ್ರಾದೇಶಿಕ ಸಂಯೋಜಕ ಶಂಕರ್ ಪ್ರಸಾದ್ ಮಾತನಾಡಿ “30 ವರ್ಷಗಳಿಂದ 16 ರಾಜ್ಯಗಳಲ್ಲಿ ಧಾನ್ ಫೌಂಡೇಶನ್ ಕರ್ತವ್ಯ ನಿರ್ವಹಿಸುತ್ತಿದ್ದು, ನಾರಾಯಣ ಹೆಗಡೆ ಇವರ ಕೆಲಸ ಒಕ್ಕೂಟದ ಅಭಿವೃದ್ಧಿಗೆ ಬಹಳಷ್ಟು ಸಹಕಾರಿಯಾಗಿತ್ತು. ಸಮಾಜದ ಅಭಿವೃದ್ಧಿಗಾಗಿ…

Read More

ಬೆಂಗಳೂರು : ಯಕ್ಷದೇಗುಲ (ರಿ.) ಬೆಂಗಳೂರು ಅರ್ಪಿಸುವ ‘ರಾಮಾಯಣ ದರ್ಶನ’ ಯಕ್ಷಗಾನ ಉತ್ಸವವನ್ನು ದಿನಾಂಕ 5 ಅಕ್ಟೋಬರ್ 2024ರಂದು ಬೆಂಗಳೂರಿನ ಕೆಂಪೇಗೌಡ ನಗರ, ಉದಯಭಾನು ಕಲಾಸಂಘ ಗವಿಪುರಂ ಇಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಳೆ, ಮಕ್ಕಳ ಯಕ್ಷಗಾನ, ರಾಮಾಯಣ ದರ್ಶನ ನೃತ್ಯ ಸ್ಪರ್ಧೆ, ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಾಲೋಕಮ್ ಮ್ಯಾನೇಜರ್ ಶ್ರೀ ಅನುಭೂತಿ ಶ್ರೀ ವಾತ್ಸವ್ ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಹೆರಂಜಾಲು ಸುಬ್ಬಣ್ಣ ಗಾಣಿಗ ಇವರುಗಳು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪಾರ್ಥಿಸುಬ್ಬ ವಿರಚಿತ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ಮತ್ತು ಪ್ರೊ. ಪವನ್ ಕಿರಣಕೆರೆ ಪರಿಕಲ್ಪನೆಯ ‘ಕೃಷ್ಣಂ ವಂದೇ ಜಗದ್ಗುರುಂ’ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 2-00 ಗಂಟೆಗೆ ಭಾಗವತ ಸುಬ್ರಹ್ಮಣ್ಯ ಹೊಳ್ಳರವರ ನೆನಪಿನಲ್ಲಿ ‘ರಾಮಾಯಣ ದರ್ಶನ ನೃತ್ಯ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದ್ದು, ಸಭಾ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನ್ ದಾಸ್ ಶೆಣೈ…

Read More

ಕಾಸರಗೋಡು : “ಸಂಗೀತವು ಭಗವಂತ ಹಾಗೂ ಭಕ್ತನನ್ನು ಹೆಣೆಯುವ ಮಾಧ್ಯಮ. ಸಂಗೀತದಲ್ಲಿರುವ ಮಾಧುರ್ಯ ಹಾಗೂ ಆ ಕೃತಿಯಲ್ಲಿ ಹುದುಗಿರುವ ಸಾಹಿತ್ಯದ ಸೌಂದರ್ಯವು, ಪವಾಡಸದೃಶವಾಗಿ ಕಾರ್ಯವೆಸಗಿ ಕಲಾವಿದನ ಹಾಗೂ ಕೇಳುಗನ ಮನದಾಳದಲ್ಲಿ ಭಗವಂತನ ಕುರಿತಾದ ಪೂಜ್ಯ ಭಾವನೆಯನ್ನು ಬಿಂಬಿಸುತ್ತದೆ. ಸಂಗೀತಕ್ಕೆ ಮರುಳಾಗದ ಜೀವಿಗಳೇ ಇಲ್ಲ. ಅಂತಹ ಸಂಗೀತವು ಭಕ್ತಿಗೀತೆಯಾಗಿರಬಹುದು, ಭಾವಗೀತೆಯಾಗಿರಬಹುದು, ಜಾನಪದ ಗೀತೆಯಾಗಿರಬಹುದು. ಅದರಲ್ಲಿರುವ ಸಾಹಿತ್ಯ ಹಾಗೂ ಸಂಗೀತಗಳೆರಡೂ ಎರಡು ಕಣ್ಣುಗಳಷ್ಟೇ ಪ್ರಧಾನ, ಅಂತಹ ಗೀತೆಗಳನ್ನು ಸ್ವತಃ ಕಲಿಯುವುದಕ್ಕಿಂತ ಇಂತಹ ಶಿಬಿರಗಳ ಮೂಲಕ ಕಲಿಯುವುದರಿಂದ ಪ್ರಬುದ್ಧತೆ ಹೆಚ್ಚಾಗುತ್ತದೆ.” ಎಂಬುದಾಗಿ ಖ್ಯಾತ ಚಿತ್ರನಟ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ವಿ. ಮನೋಹರರವರು ನುಡಿದರು. ಕಾಸರಗೋಡಿನ ಪ್ರಸಿದ್ಧ ಕಲಾಸಂಸ್ಥೆ ರಂಗಚಿನ್ನಾರಿ (ರಿ) ಇದರ ಸಾರಥ್ಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಾಗೂ ಸ್ಥಳೀಯ ಭಕ್ತಿರಸ ಸಮಿತಿಯ ಸಮರ್ಥ ಸಹಕಾರದಲ್ಲಿ ಅಂತರ್ರಾಷ್ಟ್ರೀಯ ಖ್ಯಾತಿಯ ಗಾಯಕ ಶಂಕರ ಶಾನುಭೋಗ್ ಕಳಸ ಇವರ ನೇತೃತ್ವದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 29 ಸೆಪ್ಟೆಂಬರ್ 2024ರಂದು…

Read More

ರಾಮನಗರ : ವಿಶ್ವ ಕನ್ನಡ ವಾಗ್ವಿಲಾಸ ಸಾಹಿತ್ಯ ಬಳಗ ಇದರ ವತಿಯಿಂದ ಮಹಮದ್ ರಫಿ ಇವರ ಸಾರಥ್ಯದಲ್ಲಿ ‘ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಕವಿಗೋಷ್ಠಿ’ಯನ್ನು ದಿನಾಂಕ 06 ಅಕ್ಟೋಬರ್ 2024ರಂದು ಬೆಳಿಗ್ಗೆ 4-00 ಗಂಟೆಗೆ ರಾಮನಗರ ಜಿಲ್ಲೆ ಚನ್ನಪಟ್ಟಣ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ. ಆದರ್ಶ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ ಪ್ರದಾನ, ವಿಶ್ವ ಕನ್ನಡ ವಾಗ್ವಿಲಾಸ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ, ಆದರ್ಶ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿ ಪ್ರದಾನ, ಉಪನ್ಯಾಸ, ಕೃತಿ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಹಿರಿಯ ಸಾಹಿತಿಗಳಾದ ಶ್ರೀಮತಿ ಎಂ.ಎಸ್. ಆಶಾಲತ (ಶಿವೆಸುತೆ) ಇವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನವರಾತ್ರಿ ಪ್ರಯುಕ್ತ ಪ್ರಸ್ತುತ ಪಡಿಸುವ ‘ವಿಶೇಷ ಸಂಗೀತ ಕಛೇರಿ’ಯನ್ನು ದಿನಾಂಕ 6 ಅಕ್ಟೋಬರ್ 2024ರಂದು ಸಂಜೆ 5-30 ಗಂಟೆಗೆ ಸುರತ್ಕಲ್ಲಿನ ಅನುಪಲ್ಲವಿಯ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಇವರ ಶಿಷ್ಯೆ ಚೆನ್ನೈಯ ನಮೃತಾ ಎಸ್. ಇವರ ಹಾಡುಗಾರಿಕೆಗೆ ಪುತ್ತೂರಿನ ಅನನ್ಯ ಪಿ.ಎಸ್. ಮಯಲಿನ್ ಮತ್ತು ಆಚಿಂತ್ಯ ಕೃಷ್ಣ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗ ಪ್ರಭಾರ ಮುಖ್ಯಸ್ಥರಾದ ಡಾ. ಸಾಯಿಗೀತಾ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More

ಪುತ್ತೂರು: ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ .(ಸ್ವಾಯತ್ತ) ಕಾಲೇಜಿನ ಸುವರ್ಣ ಮಹೋತ್ಸವ ಸಭಾಭನದಲ್ಲಿ ಹಿಂದಿ ದಿವಸ್ ಸಮಾರೋಹ್ ಹಾಗೂ ಡಾ. ಶ್ರೀಧರ ಎಚ್.ಜಿ. ಇವರ ‘ಶಿಖಂಡಿ’ ಪುಸ್ತಕವನ್ನು ಡಾ. ದುರ್ಗಾರತ್ನ ಸಿ. ಅವರು ಹಿಂದಿಯಲ್ಲಿ ಅನುವಾದಿಸಿದ ಕೃತಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 25 ಸೆಪ್ಟೆಂಬರ್ 2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಇದರ ಹಿಂದಿ ವಿಭಾಗ ಮುಖ್ಯಸ್ಥರಾದ ಡಾ. ಮುಕುಂದ ಪ್ರಭು ಮಾತನಾಡಿ “ಯಾವುದೇ ರಾಜ್ಯ, ರಾಷ್ಟ್ರ ಭಾಷೆಯ ಹೊರತಾಗಿ ಹಿಂದಿಗೆ ಸಮಸ್ತ ರಾಷ್ಟ್ರವನ್ನು ಒಗ್ಗೂಡಿಸುವ ಶಕ್ತಿ ಇದೆ. ಎಂದರು. ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದ ಕಾಲೇಜಿನ ಶ್ರೀಪತಿ ಕಲ್ಲೂರಾಯ ಮಾತನಾಡಿ “ಸಮಯ ಬದಲಾಗುತ್ತಾ ಹೋದಂತೆ ಹಿಂದಿ ಭಾಷೆಯ ಜ್ಞಾನವನ್ನು ಜನರು ಮರೆಯುತ್ತಿದ್ದಾರೆ. ಮಾತನಾಡಲು ಮಾತ್ರ ಭಾಷೆಯನ್ನು ಬಳಕೆ ಮಾಡದೆ, ಶೈಕ್ಷಣಿಕ ತಳಹದಿಯಲ್ಲಿ ಬಳಕೆ ಮಾಡಿದಾಗ ಅದು ಅದರ ಹೊಳಪು ಕಳೆದುಕೊಳ್ಳುವುದಿಲ್ಲ.” ಎಂದು ಹೇಳಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ…

Read More

ಧರ್ಮಸ್ಥಳ : ‘ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ’ ಇದರ ವತಿಯಿಂದ ಐವತ್ತರ ವರುಷ – ನವೋಲ್ಲಾಸದ ಹರುಷ ಪ್ರಯುಕ್ತ ದಿನಾಂಕ 10 ಅಕ್ಟೋಬರ್ 2024ರ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಗ್ಗಡೆಯವರ ಬೀಡಿನಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ‘ಸುವರ್ಣ ಪರ್ವ’ವನ್ನು ಉದ್ಘಾಟಿಸಲಿದ್ದಾರೆ. ಮಕ್ಕಳ ಮೇಳದ ಬಾಲ ಕಲಾವಿದರಿಂದ ‘ಹೂವಿನ ಕೋಲು’ ಪ್ರದರ್ಶನ ನಡೆಯಲಿದೆ. ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಎಚ್. ಶ್ರೀಧರ ಹಂದೆಯವರ ಕನಸಿನ ಕೂಸು ‘ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ’. ಈ ಇಬ್ಬರೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು. 1975ರ ಅಕ್ಟೋಬರ್ 10ರಂದು ಸಾಂಕೇತಿಕ ಉದ್ಘಾಟನೆ ಕಂಡ ಮಕ್ಕಳ ಮೇಳವು ಮಂಗಳೂರಿನಲ್ಲಿ ಮೊದಲ ದಾಖಲೆಯ ಪ್ರದರ್ಶನ ನೀಡಿದ್ದು ಇದೀಗ ಇತಿಹಾಸ. 1978ರಲ್ಲಿ ಯಕ್ಷಗಾನವನ್ನು ಪ್ರಪ್ರಥಮ ಸೀಮೋಲ್ಲಂಘನಗೈದ ಜಾಗತಿಕ ದಾಖಲೆಯ ಮಕ್ಕಳ ಮೇಳವು ಮತ್ತೆ ಎರಡು ಬಾರಿ ವಿದೇಶದ ಮಣ್ಣಿನಲ್ಲಿ ಕಾಲಿಟ್ಟಿತು. ಇದುವರೆಗೂ ದೇಶದ ನಾನಾ ರಾಜ್ಯಗಳಲ್ಲಿ, ರಾಜ್ಯದ ಬೇರೆ ಬೇರೆ…

Read More