Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡಲಾಗುವ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024’ಕ್ಕೆ ರಾಜ್ಯದ ಮೂವರು ಹಿರಿಯ ಸಾಹಿತಿಗಳು ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ಅಂಬ್ರಯ್ಯ ಮಠ (ಇತಿಹಾಸ ಸಂಶೋಧನೆ), ಚಿಕ್ಕಮಂಗಳೂರಿನ ಎಚ್.ಎಸ್. ಸತ್ಯನಾರಾಯಣ (ವಿಮರ್ಶೆ), ಕುಂದಾಪುರದ ಡಾ. ಉಮೇಶ್ ಪುತ್ರನ್ (ವೈದ್ಯ ಸಾಹಿತ್ಯ) ಇವರುಗಳಿಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ದಿನಾಂಕ 01 ನವೆಂಬರ್ 2024ರಂದು ನಡೆಯುವ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024’ ಪ್ರದಾನ ಮಾಡಲಾಗುವುದು ಎಂದು ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ ಸಮಿತಿಯ ಸಂಚಾಲಕಿಯಾದ ಉಡುಪಿ ಸಂಧ್ಯಾ ಶೆಣೈ ತಿಳಿಸಿರುತ್ತಾರೆ. ಅಂಬ್ರಯ್ಯ ಮಠ ಎಚ್.ಎಸ್. ಸತ್ಯನಾರಾಯಣ ಡಾ. ಉಮೇಶ್ ಪುತ್ರನ್
ಮಂಗಳೂರು : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಸಹಯೋಗದಲ್ಲಿ ದಿ. ಪ್ರೊ. ಅಮೃತ ಸೋಮೇಶ್ವರ ಸವಿ ನೆನಪಿನಲ್ಲಿ ‘ಬಹುಭಾಷಾ ಕವಿಗೋಷ್ಠಿ ಮತ್ತು ತುಳು ಕವಿಗೋಷ್ಠಿ’ಯನ್ನು ದಿನಾಂಕ 4 ಅಕ್ಟೋಬರ್ 2024ರಂದು ಸಂಜೆ 4-00 ಗಂಟೆಗೆ ಕುದ್ರೋಳಿ ಸಂತೋಷಿ ಕಲಾ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ರಂಗಸಂಗಾತಿಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಶೆಟ್ಟಿ ಇವರು ಉಪಸ್ಥಿತಿಯಲ್ಲಿ ಹಿರಿಯ ವಕೀಲರಾದ ಶ್ರೀ ಪದ್ಮರಾಜ್ ಆರ್. ಪೂಜಾರಿ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಡಾ. ಮೀನಾಕ್ಷಿ ರಾಮಚಂದ್ರ ಇವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ಮತ್ತು ಡಾ. ವಸಂತ ಕುಮಾರ್ ಪೆರ್ಲ ಇವರ ಅಧ್ಯಕ್ಷತೆಯಲ್ಲಿ ತುಳು ಕವಿಗೋಷ್ಠಿ ನಡೆಯಲಿದೆ.
ಮಡಿಕೇರಿ : ಕನ್ನಡಸಿರಿ ಸ್ನೇಹ ಬಳಗ ಕೊಡಗು ಜಿಲ್ಲೆ ಮತ್ತು ಸೋಮವಾರಪೇಟೆ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ‘ಶರದೃವಿನ ಐಸಿರಿ’ ಕವಿಗೋಷ್ಠಿ ಮತ್ತು ಸಮೂಹ ಜಾನಪದ ನೃತ್ಯ ಮತ್ತು ಘಟಕ ಉದ್ಘಾಟನೆ ಕಾರ್ಯಕ್ರಮವನ್ನು ದಿನಾಂಕ 04 ಅಕ್ಟೋಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ಸೋಮವಾರಪೇಟೆಯ ಮಹಿಳಾ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಶ್ರೀ ಲೋಕೇಶ್ ಸಾಗರ್ ಬಿ.ಎಸ್. ಇವರ ಅಧ್ಯಕ್ಷತೆಯಲ್ಲಿ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿಗಳು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಶಿಕ್ಷಕರು ಮತ್ತು ಸಾಹಿತಿ ಶ್ರೀ ಕಾಜೂರು ಸತೀಶ್ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ಮಂಗಳೂರು: ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸಲಿರುವ 12ನೇ ವರ್ಷದ ನುಡಿಹಬ್ಬ, ಯಕ್ಷಗಾನ ತಾಳಮದ್ದಳೆ ಸಪ್ತಾಹ ‘ದ್ವಾದಶ ಸರಣಿ’ಯು ದಿನಾಂಕ 11 ನವೆಂಬರ್ 2024ರಿಂದ ನವಂಬರ್ 17ರ ವರೆಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ವಿವಿಧ ತಂಡಗಳ ಸಂಯೋಜನೆಯಲ್ಲಿ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಇತ್ತೀಚೆಗೆ ಕದ್ರಿ ದೇವಳದ ವಠಾರದಲ್ಲಿ ಜರಗಿದ ಯಕ್ಷಾಂಗಣದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿ ಮಾತನಾಡಿದರು. ‘ನವಂಬರ 11 ರ ಸೋಮವಾರ ಸಂಜೆ ಘಂಟೆ 4.00ಕ್ಕೆ ಉದ್ಘಾಟನೆಯೊಂದಿಗೆ ಆರಂಭವಾಗುವ ಸಪ್ತಾಹದಲ್ಲಿ ಜಿಲ್ಲೆಯ ಹೆಸರಾಂತ ಏಳು ಯಕ್ಷಗಾನ ಕಲಾಸಂಘಗಳು ಭಾಗವಹಿಸಲಿದ್ದು, ಈಗಾಗಲೇ ತಾಳಮದ್ದಳೆ ಕ್ಷೇತ್ರದಲ್ಲಿ ಖ್ಯಾತರಾದ ಹಿರಿಯ ಯಕ್ಷಗಾನ ಕಲಾವಿದರನ್ನು ಬಳಸಿಕೊಂಡು ವಿವಿಧ ಪ್ರಸಂಗಗಳನ್ನು ಪ್ರಸ್ತುತಪಡಿಸಲಿವೆ’ ಎಂದವರು ತಿಳಿಸಿದರು. ‘ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಮೂಡಿ ಬರಲಿರುವ ದ್ವಾದಶ…
ಬೆಳ್ತಂಗಡಿ : ಉಜಿರೆಯ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿಯ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಲ್ಲಿ ದಿನಾಂಕ 23 ಸೆಪ್ಟೆಂಬರ್ 2024ರಂದು ಬೆಳ್ತಂಗಡಿ ಲಾಯಿಲ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ಯಕ್ಷಗಾನ ಮಹೋಪಾಧ್ಯಾಯ ನೆಡ್ಲೆ ನರಸಿಂಹ ಭಟ್ ಸಂಸ್ಮರಣೆಯ ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ ‘ಯಕ್ಷಾವತರಣ -5’ ಮತ್ತು ‘ಯಶೋ’ ಯಕ್ಷ ನಮನ ಗಾನ-ನೃತ್ಯ-ಚಿತ್ರ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಹಿರಿಯ ಯಕ್ಷಗಾನ ಅರ್ಥಧಾರಿ, ವಿಮರ್ಶಕ ಡಾ. ಪ್ರಭಾಕರ ಜೋಶಿ ಇವರು ಮಾತನಾಡಿ “ತೆಂಕು-ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಚೆಂಡೆ-ಮದ್ದಳೆ ವಾದನವನ್ನು ಅಳವಡಿಸಿಕೊಂಡು, ಸರಳ ಬದುಕು ವ್ಯಕ್ತಿತ್ವ, ತ್ಯಾಗಶೀಲತೆಯಿಂದ ಶ್ರೇಷ್ಠ ಕಲಾವಿದರಾಗಿ ನೆಡ್ಲೆನರಸಿಂಹ ಭಟ್ ಪರಿಪೂರ್ಣ ಅಧ್ಯಾಪಕರಾಗಿ ಪ್ರಾತಃಸ್ಮರಣೀಯರು. ರಸಭಾವಪೂರ್ಣವಾಗಿ ಚೆಂಡೆ ನುಡಿಸಿ ಎಲ್ಲರಿಗೂ ಗುರುಗಳಾಗಿ ಕುಲಪತಿಯಂತೆ ಮಾರ್ಗದರ್ಶನ ನೀಡಿ ಶಿಷ್ಯಗಡಣವನ್ನೇ ಸೃಷ್ಟಿಸಿದವರು. ಯಕ್ಷಾವತರಣ ಮೂಲಕ ಅವರನ್ನು ಕುರಿಯ ಪ್ರತಿಷ್ಟಾನ ಸಂಸ್ಮರಿಸುತ್ತಿರುವುದು ಔಚಿತ್ಯಪೂರ್ಣ” ಎಂದು ನುಡಿದರು. ಸಪ್ತಾಹವನ್ನು ದೀಪ ಪ್ರಜ್ವಲಿಸಿ…
ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 16 ನವೆಂಬರ್ 2024ರಂದು ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜರುಗಲಿದ್ದು, ಆ ಪ್ರಯುಕ್ತ ಸಮ್ಮೇಳನದ ಸಿದ್ಧತಾ ಪೂರ್ವಭಾವಿ ಸಭೆಯು ದಿನಾಂಕ 27 ಸೆಪ್ಟೆಂಬರ್ 2024ರಂದು ಕ.ಸಾ.ಪ. ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆಯವರ ಅಧ್ಯಕ್ಷತೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕ.ಸಾ.ಪ. ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ “ಕಾಪು ತಾಲೂಕು ಕಲೆ, ಸಾಹಿತ್ಯ, ಜಾನಪದ, ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ವಿಶಿಷ್ಠ ಪರಂಪರೆಯನ್ನು ಹೊಂದಿದ ತಾಲೂಕು ಆಗಿದೆ. ಕಾಪು ನೂತನ ತಾಲೂಕು ಆಗಿ ರಚನೆಯಾದಂದಿನಿಂದ ನಿರಂತರ ಐದು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ರಾಜ್ಯದ ಏಕೈಕ ತಾಲೂಕು ಎಂಬ ಹೆಗ್ಗಳಿಕೆ ಈ ತಾಲೂಕು ಹೊಂದಿದ್ದು 6ನೇ ಸಮ್ಮೇಳನಕ್ಕೆ ಸಿದ್ಧತೆಯಲ್ಲಿರುವುದು ಅಭಿನಂದನೀಯ” ಎಂದರು. ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮಾತನಾಡಿ ಸಾಹಿತ್ಯ ಸಮ್ಮೇಳನ ಎಂಬುದು ತಾಲೂಕಿನ…
ಬೆಂಗಳೂರು : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಯಾಜಿ ಪ್ರಕಾಶನ ಪ್ರಕಟಿಸಿರುವ ನಾಡಿನ ಖ್ಯಾತ ವಕೀಲರು ಹಾಗೂ ಅತ್ಯಂತ ಸರಳ ಜೀವಿ ವೈಯಕ್ತಿಕವಾಗಿ ಯುವಕರಿಗೆ ಮಾರ್ಗದರ್ಶನ ನೀಡುವ ಶ್ರೀ ಪ್ರಕಾಶ ವಸ್ತ್ರದ ಇವರು ವಿಶೇಷವಾಗಿ ತಮ್ಮ ಬರಹದ ಮೂಲಕ ಸಾಹಿತ್ಯ ಲೋಕಕ್ಕೆ ವೃತ್ತಿ ಬದುಕಿನ ಬುತ್ತಿ ‘ಅಡ್ವೋಕೇಟ್ ಡೈರಿ’ ಎಂಬ ಕೃತಿಯನ್ನು ಓದುಗರ ಕೈಗೆ ನೀಡುತ್ತಿದ್ದಾರೆ. ಈ ಕೃತಿಯನ್ನು ದಿನಾಂಕ 06 ಅಕ್ಟೋಬರ್ 2024ರ ಭಾನುವಾರ ಸಾಯಂಕಾಲ 4-00 ಗಂಟೆಗೆ ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಾಡಿನ ಹಿರಿಯ ಲೇಖಕರು, ಜನಪ್ರತಿನಿಧಿಗಳು ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಗುವುದು.
ಪುತ್ತೂರು : ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಯ ಪ್ರಯುಕ್ತ ‘ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ‘ಕನ್ನಡ ಜ್ಯೋತಿ ರಥಯಾತ್ರೆ’ಯನ್ನು ದಿನಾಂಕ 01 ಅಕ್ಟೋಬರ್ 2024ರಂದು ಕನಕಮಜಲಿನಲ್ಲಿ ತಾಲೂಕು ಆಡಳಿತ ವತಿಯಿಂದ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ನವೀನ್ ಭಂಡಾರಿ, ಉಪತಹಸೀಲ್ದಾರ್ ಶ್ರೀ ದಯಾನಂದ ಆರ್.ಐ., ಶ್ರೀ ಗೋಪಾಲ, ಸಾಹಿತ್ಯ ಪರಿಷತ್ ವತಿಯಿಂದ ಪುತ್ತೂರು ಉಮೇಶ್ ನಾಯಕ್, ಶ್ರೀ ಬಿ. ಐತಪ್ಪ ನಾಯ್ಕ್ ಹಾಗೂ ಇನ್ನಿತರರು ಸ್ವಾಗತಿಸಿದರು. ಬಳಿಕ 11-00 ಗಂಟೆಗೆ ಆಡಳಿತ ಸೌಧದ ಬಳಿ ಆಗಮಿಸಿದ ಈ ಕನ್ನಡ ಜ್ಯೋತಿ ರಥವನ್ನು ಮಾನ್ಯ ಸಹಾಯಕ ಆಯುಕ್ತರಾದ ಶ್ರೀ ಜುಬಿನ್ ಮೋಹಪಾತ್ರ, ಚೀಫ್ ಕಮಾಂಡೆಂಟ್ ಹಾಗೂ ಶ್ರೀ ವೆಂಕಟರಮಣ ಕಳುವಾಜೆ ಇವರುಗಳು ಕನ್ನಡ ಭುವನೇಶ್ವರಿಗೆ ಹೂಮಾಲೆಯನ್ನು ಹಾಕಿ ಗೌರವಾರ್ಪಣೆ ಸಲ್ಲಿಸಿದರು. ಆಡಳಿತ ಸೌಧದ ಬಳಿ ಸಹಾಯಕ ಆಯುಕ್ತರಾದ ಶ್ರೀ ಜುಬಿನ್ ಮೋಹಪಾತ್ರ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ನವೀನ್ ಭಂಡಾರಿಯವರು ತೆಂಗಿನಕಾಯಿಯನ್ನು ಹೊಡೆದು ಪುರ ಮೆರವಣಿಗೆಗೆ ಚಾಲನೆ ನೀಡಿದರು.…
ಹೊನ್ನಾವರ : ಹೊನ್ನಾವರ ತಾಲೂಕಿನ ಗುಣವಂತೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಸಂಸ್ಥೆಗೆ ವಿಶ್ವಸಂಸ್ಥೆಯ ಮಾನ್ಯತೆ, ಗೌರವ ದೊರೆತಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ. 2024ರ ಜೂನ್ ತಿಂಗಳಿನಲ್ಲಿ ಯುನೆಸ್ಕೊ ಮುಖ್ಯ ಕಚೇರಿಯಲ್ಲಿ ನಡೆದ 10ನೇ ಅಧಿವೇಶನದಲ್ಲಿ ಮಂಡಳಿಗೆ ಮಾನ್ಯತೆ ಘೋಷಿಸಲಾಗಿದೆ. ಯುನೆಸ್ಕೊ 2003ರ ಅಮೂರ್ತ ಸಾಂಸ್ಕೃತಿಕ ಪರಂಪರೆ, ಸಂರಕ್ಷಣೆ, ಆಂತರಿಕ ಸಮಿತಿಗೆ ಸಲಹೆ ಮಾಡಲು ಮಂಡಳಿ ಮಾನ್ಯತೆ ಪಡೆದಿದೆ ಎಂದು ತಿಳಿಸಿದ್ದಾರೆ. ಯಕ್ಷಗಾನ ಸಂಸ್ಥೆಯೊಂದು ವಿಶ್ವಸಂಸ್ಥೆಯ ಮಾನ್ಯತೆಗೆ ಪಾತ್ರರಾಗಿರುವುದು ಇದೇ ಪ್ರಥಮ ಬಾರಿ. ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದಿರುವ ಕೆರೆಮನೆ ಯಕ್ಷಗಾನ ಮಂಡಳಿ ಯಕ್ಷಗಾನ ರಂಗ ಭೂಮಿಯ ಇತಿಹಾಸವನ್ನು ಹಲವು ಸರ್ವ ಪ್ರಥಮಗಳ ದಾಖಲೆ ನಿರ್ಮಿಸಿದ್ದು, ವಿಶ್ವಸಂಸ್ಥೆಯ ಗೌರವ ಪಡೆದುಕೊಂಡಿದೆ. ಯುನೆಸ್ಕೋ ಮಾನ್ಯತೆಯು ಇಡಗುಂಜಿ ಮಂಡಳಿ ಸುಧೀರ್ಘವಾಗಿ ನಡೆಸುತ್ತಾ ಬಂದ ಯಕ್ಷಗಾನದ ಸಂವರ್ಧನೆ, ಪರಂಪರೆಯ ಪ್ರಸಾರ, ಪ್ರಚಾರ ಹಾಗೂ ದಾಖಲಾತಿ ಈ ಎಲ್ಲಾ ಪ್ರಯತ್ನ ಹಾಗೂ ಅಂತಾರಾಷ್ಟ್ರೀಯ ಸಾಧನೆಗೆ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ…
ಕಟೀಲು : ಯಕ್ಷಗಾನ ಆಟ ಕೂಟಗಳ ಖ್ಯಾತ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಅರವತ್ತು ವರ್ಷ ತುಂಬಿದ ಈ ಸುಸಂದರ್ಭದಲ್ಲಿ ಆಯೋಜಿಸಲಾದ ಸಂಮಾನ ಕಾರ್ಯಕ್ರಮವು ದಿನಾಂಕ 28 ಸೆಪ್ಟೆಂಬರ್ 2024ರ ಶನಿವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿದ ವಿದ್ವಾಂಸ ಉಮಾಕಾಂತ ಭಟ್ “ಪಾತ್ರ ಪ್ರಸಂಗ ನಿರ್ವಹಣೆಯನ್ನು ಆಟ ಕೂಟಗಳಲ್ಲಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ಪ್ರಸಂಗದ ಜೊತೆಗೆ ಪಾತ್ರವನ್ನು ಮೆರೆಸುವ ಕಲಾವಿದರಲ್ಲಿ ಅದ್ವಿತೀಯರು ಸುಣ್ಣಂಬಳ ವಿಶ್ವೇಶ್ವರ ಭಟ್ಟರು. ಪ್ರತಿಭೆ ಮತ್ತು ಪಾಂಡಿತ್ಯವನ್ನು ಸಮಸಮವಾಗಿ ನಿರ್ವಹಿಸಿದ ಸುಣ್ಣಂಬಳರು ಕೇವಲ ಕಲಾವಿದರಲ್ಲ, ಯಕ್ಷಗಾನ ಕಲೆಯ ವಿಶ್ವ ವಿದ್ಯಾಲಯ ಆಗಿದ್ದಾರೆ.” ಎಂದು ಹೇಳಿದರು. ಮಾನವ ಹಕ್ಕು ಆಯೋಗದ ಟಿ. ಶ್ಯಾಮ್ ಭಟ್ ಮಾತನಾಡಿ “ಆಟಕೂಟಗಳ ಮೂಲಕ ಪ್ರಸ್ತುತ ಯಕ್ಷಗಾನದ ನಂಬರ್ ಒನ್ ಕಲಾವಿದ ಎಂದು ಗುರುತಿಸಬಹುದಾದ ಕಲಾವಿದ ಸುಣ್ಣಂಬಳ ನಯವಿನಯತೆಯಿಂದ ಎಲ್ಲರನ್ನೂ ಗೌರವಿಸಿ ಬೆಳೆಯುತ್ತ ಬಂದವರು. ಇವರು ಎಲ್ಲಾ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುವಲ್ಲಿ ಶ್ರೇಷ್ಠರಾಗಿದ್ದಾರೆ.” ಎಂದರು. ಅರ್ಚಕರಾದ ಲಕ್ಷ್ಮೀನಾರಾಯಣ…