Subscribe to Updates
Get the latest creative news from FooBar about art, design and business.
Author: roovari
ಪಣಂಬೂರು : ‘ನಗುವ ನಗಿಸುವ ಗೆಳೆಯರು ( ನನಗೆ) ಕುಳಾಯಿ ಪಣಂಬೂರು ವತಿಯಿಂದ ಆಯೋಜಿಸಿದ ಸಾಹಿತಿ ಪಿ. ರವಿಶಂಕರ್ ಅವರ ‘ಚಿವುಟುವ ಚುಟುಕಗಳು, ಕುಟು ಕುವ ಕವಿತೆಗಳು’ ಕೃತಿಗಳ ಲೋಕರ್ಪಣಾ ಸಮಾರಂಭವು ದಿನಾಂಕ 20 ಅಕ್ಟೋಬರ್ 2024ರ ರವಿವಾರದಂದು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ರಾಜರತ್ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ನಿವೃತ್ತ ಪ್ರೊಫೆಸರ್ ಹಾಗೂ ಸಾಹಿತಿ ಡಾ. ಎಂ. ಕೃಷ್ಣ ಗೌಡ ಮಾತನಾಡಿ “ಇಂದು ಬರೆಯುವ, ಓದುವ ಹವ್ಯಾಸ ಕಡಿಮೆಯಾಗುತ್ತಿರುವ ದಿನ ಮಾನಸದಲ್ಲಿ ಮತ್ತೆ ಪುಸ್ತಕದತ್ತ ಎಳೆಯುವ ರವಿಶಂಕರ ಕಾರಂತ ಅವರ ಪ್ರಯತ್ನ ಮೆಚ್ಚುವಂತಹುದು. ಕಾರಂತರ ಕವಿತೆಗಳು ಮನಸ್ಸಿಗೆ ಮುದ ನೀಡುತ್ತವೆ. ಜತೆಗೆ ಕಚಗುಳಿ ಸಹ ಇಡುತ್ತವೆ. ಕೆಲವೊಂದು ಹಾಸ್ಯ ಭರಿತವಾಗಿದ್ದರೆ, ದೇಶ – ಪ್ರೇಮ, ಮಕ್ಕಳಿಗೆ ಬುದ್ದಿವಾದ ಹೇಳುವ ಸಂದೇಶವೂ ಆಡಗಿದೆ. ಕವಿತೆಗಳು ಪ್ರಶ್ನಾರ್ಥಕವಾಗಿದ್ದಾಗ ಇತರರನ್ನು ಚಿಂತನೆಗೊಳಪಡಿಸುತ್ತವೆ ಅಂತಹ ಕವಿತೆಗಳು ಇವರಿಂದ ಮೂಡಿಬಂದಿದೆ.” ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಘಟಕದ ಅಧ್ಯಕ್ಷರಾದ…
ಕಾಸರಗೋಡು : ಯಕ್ಷಗಾನ ಎಂಬ ಶ್ರೇಷ್ಠಕಲೆಯನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕೆಲಸವನ್ನು ಶ್ರೀಸ್ಕಂದ ಯಕ್ಷಗಾನ ಕೇಂದ್ರ, ಪಾಯಿಚ್ಚಾಲು ಎಂಬ ಗ್ರಾಮೀಣ ಪ್ರದೇಶದಲ್ಲಿ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಕಾಸರಗೋಡು ಚಿನ್ನಾರವರು ಅಭಿಪ್ರಾಯಪಟ್ಟರು. ಯಕ್ಷಗಾನವು ನಾಟ್ಯ, ಅಭಿನಯ, ಮುದ್ರೆ, ಮಾತುಗಾರಿಕೆ ಇವೆಲ್ಲವನ್ನೂ ಒಳಗೊಂಡ ಪರಿಪೂರ್ಣ ಕಲೆಯಾಗಿದೆ. ಭಾರತೀಯ ಯಾವುದೇ ಕಲಾಪ್ರಕಾರಗಳಲ್ಲಿ ಹೀಗೆ ಕಾಣುವುದಕ್ಕೆ ಸಾಧ್ಯವಿಲ್ಲ ಹಾಗಾಗಿಯೇ ಯಕ್ಷಗಾನವು ಈಗಲೂ ಉನ್ನತ ಸ್ಥಾನದಲ್ಲಿದೆ ಎಂದು ಹೇಳಿದರು, ಅವರು ದಿನಾಂಕ 20 ಅಕ್ಟೋಬರ್ 2024 ರಂದು ಸ್ಕಂದ ಯಕ್ಷಗಾನಕೇಂದ್ರದ ರಂಗಪ್ರವೇಶ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾದ್ಯಾಯರು, ಕ್ಷೇತ್ರಕಲೆಯಾದ ಯಕ್ಷಗಾನವನ್ನು ಬೆಳೆಸುವಲ್ಲಿ ಕ್ಷೇತ್ರದ ಪಾತ್ರಹಿರಿದು. ಅದನ್ನು ಪೂರೈಸುವಲ್ಲಿ ಶ್ರೀಸ್ಕಂದ ಯಕ್ಷಗಾನ ಕೇಂದ್ರಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ಕೂಡ್ಲು ಯಕ್ಷಗಾನದ ತವರು. ಆ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಯಕ್ಷಗಾನ ಕೇಂದ್ರಗಳು ಅನಿವಾರ್ಯ ಮಾತ್ರವಲ್ಲ ಮಕ್ಕಳಿಗೆ ಪುರಾಣಗಳ ಅರಿವೂ ಸಾಧ್ಯ ಎಂದು ಕೇಂದ್ರದ…
ಉಪ್ಪಿನಕುದ್ರು : ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ.) ಮತ್ತು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇದರ ಜಂಟಿ ಆಶ್ರಯದಲ್ಲಿ ಹಾಗೂ ಡಾ. ಸುಧಾಮೂರ್ತಿ ಮತ್ತು ಡಾ. ಪಿ. ದಯಾನಂದ ಪೈ ಪ್ರಾಯೋಜಿತ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 100ನೇ ತಿಂಗಳ ಕಾರ್ಯಕ್ರಮವನ್ನು ದಿನಾಂಕ 27 ಅಕ್ಟೋಬರ್ 2024ರಂದು ಪ್ರಾತಃಕಾಲ 5-00 ಗಂಟೆಗೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 5-00 ಗಂಟೆಗೆ ಉದಯರಾಗದ ಉದ್ಘಾಟನೆ, ವೇದಮೂರ್ತಿ ಅರೆಹೊಳೆ ವೆಂಕಟೇಶ ಶಾಸ್ತ್ರಿಯವರ ಶಿಷ್ಯರಿಂದ ‘ವೇದಘೋಷ’, ಕುಂದಾಪರದ ಖ್ಯಾತ ಶಿಶುತಜ್ಞರಾದ ಡಾ. ಹೆಚ್.ಆರ್. ಹೆಬ್ಬಾರ್ ಇವರಿಂದ ‘ಹಿಂದೂಸ್ತಾನಿ ಸಂಗೀತ’, ಶ್ರೀ ಸುಬ್ರಹ್ಮಣ್ಯ ನಾವುಡ, ಶ್ರೀ ಉಮೇಶ ಸುವರ್ಣ ಹಾಗೂ ತಂಡದವರಿಂದ ‘ಯಕ್ಷಗಾನ ಹಾಡುಗಳು’, ಕುಂದಾಪುರದ ವಿದುಷಿ ನಳಿನಿ ವೆಂಕಟರಮಣ ರಾವ್ ಇವರಿಂದ ‘ಕರ್ನಾಟಕ ಸಂಗೀತ’, ಶ್ರೀಮತಿ ವಸಂತಿ ಆರ್. ಪಂಡಿತ್ ಹಾಗೂ ತಂಡದವರಿಂದ ‘ವಿಷ್ಣು ಸಹಸ್ರನಾಮ’, ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವಿದ್ಯಾರ್ಥಿಗಳಿಂದ ‘ಗೊಂಬೆಯಾಟ ಪ್ರಾತ್ಯಕ್ಷಿಕೆ’…
ಕಲಬುರಗಿ : ರಂಗಮಂಡಲ ಬೆಂಗಳೂರು ಮತ್ತು ಜಾನಪದ ಲೋಕ ರಾಮನಗರ ಆಯೋಜಿಸಿರುವ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ನಾಲ್ಕನೇ ಕವಿಗೋಷ್ಠಿಯನ್ನು ದಿನಾಂಕ 27 ಅಕ್ಟೋಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ರೇಷ್ಮೆನಗರಿ ರಾಮನಗರದ ಬೆಂಗಳೂರು ಮೈಸೂರು ಹಳೇ ಹೆದ್ದಾರಿಯಲ್ಲಿರುವ ಜಾನಪದ ಲೋಕದ ಜಾನಪದ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಕವಿಗಳು ಮತ್ತು ಕಥೆಗಾರರಾದ ಡಾ. ಬೈರಮಂಗಲ ರಾಮೇಗೌಡ ಇವರು ರಾಮನಗರ ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಹಿರಿಯ ಕವಿ ಮತ್ತು ಕಥೆಗಾರರಾದ ಡಾ. ಕಾಶಿನಾಥ ಅಂಬಲಗೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 11-30 ಗಂಟೆಗೆ ಕವಿಗೋಷ್ಠಿ 1 ಹಿರಿಯ ಕವಿಗಳು ಹಾಗೂ ಕಾದಂಬರಿಕಾರರಾದ ಎಂ. ಶಿವನಂಜಯ್ಯ ಹಾಗೂ ಮಧ್ಯಾಹ್ನ 1-30 ಗಂಟೆಗೆ ಕವಿಗೋಷ್ಠಿ 2 ಜಾನಪದ ವಿದ್ವಾಂಸ ಹಾಗೂ ಕವಿಗಳಾದ ಡಾ. ಕುರುವ ಬಸವರಾಜು ಇವರುಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಜೆ 4-00 ಗಂಟೆಗೆ ಸರ್ವಾಧ್ಯಕ್ಷರೊಂದಿಗೆ ಸಂವಾದ, ಚನ್ನಪಟ್ಟಣ ಶಾರದ ನಾಗೇಶ್ ಮತ್ತು…
ಮೈಸೂರು : ನಟನ ರಂಗಶಾಲೆಯ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದೊಂದಿಗೆ 2024-25ನೇ ಸಾಲಿನ ವಾರಾಂತ್ಯ ರಂಗ ಶಾಲೆಯ ಮಕ್ಕಳ ಅಭ್ಯಾಸಿ ಪ್ರಯೋಗದ ಪಯುಕ್ತ ದಿನಾಂಕ 27 ಅಕ್ಟೋಬರ್ 2024 ಮತ್ತು 03 ನವೆಂಬರ್ 2024ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ‘ನಾಯಿ ಬಂತ್ರಪ್ಪೋ ನಾಯಿ’ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ನಾಟಕದ ರಚನೆ ಗುರುರಾಜ ವೆಂಕಟೇಶ ಶಿರಹಟ್ಟಿ ಇವರು ಮಾಡಿದ್ದು, ಸಂಗೀತ ಪಾಣಿನಿ ದೇರಾಜೆ ಇವರು ನೀಡಿದ್ದು ಮತ್ತು ನಟನ ಮಂಜು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್) ಇದರ ವತಿಯಿಂದ ಛಾಯಾಚಿತ್ರದ ಬಗ್ಗೆ ಮಾತುಕತೆ ಕಾರ್ಯಕ್ರಮವನ್ನು ದಿನಾಂಕ 26 ಅಕ್ಟೋಬರ್ 2024ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಬಲ್ಲಾಳ್ ಭಾಗ್, ಜಿ.ಜಿ. ರೋಡ್, ಕೊಡಿಯಾಲ್ ಗುತ್ತು (ಪಶ್ಚಿಮ), ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಫೋಟೋ ಜರ್ನಲಿಸ್ಟ್ ವಿಶ್ವನಾಥ ಸುವರ್ಣ ಇವರು ‘ಐತಿಹಾಸಿಕ ಸಂಪತ್ತುಗಳ ಛಾಯಾಚಿತ್ರ’ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸುಭಾಸ್ ಬಸು 87623 68048 ಮತ್ತು ರಾಜೇಂದ್ರ ಕೇದಗೆ 94800 14812 ಇವರನ್ನು ಸಂಪರ್ಕಿಸಿರಿ.
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 28-10-2024ರಂದು ಸಂಜೆ ಗಂಟೆ 6-25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಮಧುಶ್ರೀ ಕಿದಿಯೂರು ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಉಡುಪಿ ಕಿದಿಯೂರಿನ ಶ್ರೀಯುತ ವಾಸುದೇವ ಭಟ್ ಮತ್ತು ಶ್ರೀಮತಿ ಮನೋರಮ ದಂಪತಿಗಳ ಸುಪುತ್ರಿಯಾದ ಕುಮಾರಿ ಮಧುಶ್ರೀ ಕಿದಿಯೂರು, ಸರಕಾರಿ ಮಹಿಳೆಯರ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಇಲ್ಲಿ ತನ್ನ ಬಿ.ಎಸ್ಸಿ. ಪದವಿಯನ್ನು ಮುಗಿಸಿ ಕಿದಿಯೂರಿನ ಶ್ರೀ ವಿದ್ಯಾ ಸಮುದ್ರ ತೀರ್ಥ ಪ್ರೌಢ ಶಾಲೆಯಲ್ಲಿ ವಿಜ್ಞಾನ ಗೌರವ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಎಂಟನೇ ವಯಸ್ಸಿನಲ್ಲಿಯೇ ತನ್ನ ನೃತ್ಯಭ್ಯಾಸವನ್ನು ವಿದ್ವಾನ್ ಶ್ರೀಧರ್ ರಾವ್ ಬನ್ನಂಜೆ ಇವರಲ್ಲಿ ಪ್ರಾರಂಭಿಸಿದ್ದು, ಪ್ರಸ್ತುತ ಕಳೆದ ಮೂರು ವರ್ಷಗಳಿಂದ ವಿದ್ವಾನ್ ಸುಧೀರ್ ರಾವ್ ಕೊಡವೂರು ಹಾಗೂ ಮಾನಸಿ ಸುಧೀರ್ ಇವರ…
ಹೊಸಪೇಟೆ : ಭಾವೈಕ್ಯತಾ ವೇದಿಕೆ ಟ್ರಸ್ಟ್ ಹೊಸಪೇಟೆ ಇದರ ವತಿಯಿಂದ ನಿರ್ದಿಗಂತ ಮತ್ತು ರಂಗ ಪಯಣ ಇವರ ಸಹಯೋಗದೊಂದಿಗೆ ಶಕೀಲ್ ಅಹ್ಮದ್ ಇದರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನವನ್ನು ದಿನಾಂಕ 29 ಅಕ್ಟೋಬರ್ 2024ರಂದು ಸಂಜೆ 6-30 ಗಂಟೆಗೆ ಹೊಸಪೇಟೆಯ ಸಿದ್ಧಲಿಂಗಪ್ಪ ಚೌಕಿ, 2ನೇ ಕ್ರಾಸ್, ಅಮೀನ ಬೆಡ್ಸ್, ಸಂತ ಶಿಶುನಾಳ ಶರೀಫ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರು : ಥಂಡರ್ ಕಿಡ್ಸ್ ಮಂಗಳೂರು ಮತ್ತು ವಿದ್ಯಾ ಪ್ರಕಾಶನ ಸಂಸ್ಥೆ ಆಯೋಜಿಸಿದ ರಘು ಇಡ್ಕಿದು ಸಾಹಿತ್ಯ ರಚಿಸಿ, ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸರಾವ್ ಸಂಗೀತ ನೀಡಿದ, ವಿದ್ಯಾ ಯು. ನಿರ್ಮಾಣ, ನಿರ್ದೇಶನ ಹಾಗೂ ಸಂಕಲನ ಮಾಡಿದ ಮಕ್ಕಳ ತುಳು ಹಾಡುಗಳ ಲೋಕರ್ಪಣಾ ಸಮಾರಂಭವು ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಸಭಾಭವನದಲ್ಲಿ ದಿನಾಂಕ 17 ಅಕ್ಟೋಬರ್ 2024ರಂದು ನಡೆಯಿತು. ಮಕ್ಕಳಿಂದಲೇ ಹಾಡುಗಳನ್ನು ಹಾಡಿಸಿ, ದೃಶ್ಯೀಕರಿಸಿದ ಈ ಮಕ್ಕಳ ತುಳು ಹಾಡುಗಳನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಬಿಡುಗಡೆಗೊಳಿಸಿ ಮಾತನಾಡಿ “ಮಕ್ಕಳಿಗಾಗಿ ತುಳುವನ್ನು ಈ ರೀತಿ ಡಿಜಿಟಲ್ ಸ್ವರೂಪಗಳಲ್ಲಿ ತಂದರೆ, ಇಂದಿನ ಮಕ್ಕಳಿಗೆ ಅದು ಬಹಳ ಆಪ್ತವಾಗುತ್ತದೆ ಮತ್ತು ಜಗದಗಲದ ಜನರಿಗೆ ತಲುಪುತ್ತದೆ. ಮಕ್ಕಳಿಗೆ ದೊಡ್ಡ ದೊಡ್ಡ ಗ್ರಂಥಗಳನ್ನು ನೀಡಿದರೆ ತುಳುವಿನ ಬಗೆಗೆ ಆಸಕ್ತಿ ಬರದು. ಮಕ್ಕಳಿಗೆ ಅವರ ವಯಸ್ಸಿಗೆ ಸಂಬಂಧಪಟ್ಟ ರೀತಿಯಲ್ಲಿ ಸಾಹಿತ್ಯವನ್ನು ನೀಡಿ ಭಾಷೆಯ ಬಗ್ಗೆ ಜಾಗೃತಿಗೊಳಿಸಬೇಕಾಗಿದೆ. ನಮಗೆ ಬಂದ ಅನುಭವಗಳನ್ನು…
ವೇಣೂರು : ವೇಣೂರಿನ ವಿದ್ಯೋದಯ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿ ನಿರಂಜನ ಶಿವಾನಂದ ಅಗಸಿಮನಿಯವರು ರಚಿಸಿದ ಕವನ ಸಂಕಲನ ‘ನಿರ್ಮಲ ಚಿತ್ತ ಲಹರಿ’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 19 ಅಕ್ಟೋಬರ್ 2024ರಂದು ನಡೆಯಿತು. ಶಾಲಾ ಮುಖ್ಯ ಪ್ರಬಂಧಕರಾದ ಕೆ. ಶಿವರಾಮ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಸುಬ್ರಹ್ಮಣ್ಯ ಭಟ್ ಕೃತಿ ಲೋಕಾರ್ಪಣೆಗೊಳಿಸಿದರು. ಕವನ ಸಂಕಲನದ ಪರಿಚಯವನ್ನು ಸರಕಾರಿ ಪದವಿಪೂರ್ವ ಕಾಲೇಜು ಕೋಣಾಲಿನ ಉಪನ್ಯಾಸಕಿ ಶ್ರೀಮತಿ ಸುಪ್ರೀತಾ ಚರಣ್ ಮಾಡಿದ್ದು, ಶಾಲಾ ಸಂಚಾಲಕಿ ಶ್ರೀಮತಿ ಶೀಲಾ ಎಸ್. ಹೆಗ್ಡೆ ಶುಭಾಂಸನೆಗೈದರು. ಇದೇ ಸಂದರ್ಭದಲ್ಲಿ ಭಾರತೀಯ ಭೂಸೇನೆಗೆ ಅಗ್ನಿವೀರ್ ಯೋಜನೆಯಲ್ಲಿ ಸೇರ್ಪಡೆಯಾದ ಶಾಲೆಯ ಹಳೆ ವಿದ್ಯಾರ್ಥಿ ಯಂ.ಜಿ. ಮಣಿಕಂಠ ಇವರನ್ನು ಸನ್ಮಾನಿಸಲಾಯಿತು. ಶಾಲಾ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ರಾಜೇಶ್ ಮೂಡುಕೋಡಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತರವರು ವೇದಿಕೆಯಲ್ಲಿ…