Author: roovari

ಧಾರವಾಡ : ಸಾವಿರದ ಸಹಸ್ರಮಾನದ ಕವಿ, ಗಾರುಡಿಗ ಡಾ. ದ.ರಾ. ಬೇಂದ್ರೆ ನಮ್ಮನ್ನಗಲಿ ಇದೇ 26 ಅಕ್ಟೋಬರ್ 2024ಕ್ಕೆ 43 ವರ್ಷಗಳಾದವು. ಮನೆ ಮನೆಗಳಲ್ಲಿ ಕಾವ್ಯ ನಂದಾದೀಪ ಬೆಳಗಿಸಿದ ಕವಿ ಅಂಬಿಕಾತನಯದತ್ತರು ನಮ್ಮನ್ನು ಅಗಲಿದ್ದು ದೀಪಾವಳಿಯ ನರಕ ಚತುರ್ದಶಿಯಂದು. 1932ರಲ್ಲಿ ಬೇಂದ್ರೆಯವರ ‘ಗರಿ’ ಕವನ ಸಂಕಲನ ಪ್ರಕಟವಾಯಿತು. ‘ಗರಿ’ ಕವನ ಸಂಕಲನದೊಳಗಿನ ‘ನರಬಲಿ’ ಕವಿತೆ ಬ್ರಿಟಿಷ್ ಆಡಳಿತಗಾರರ ಕೆಂಗಣ್ಣಿಗೆ ಗುರಿಯಾಯಿತು. ಬ್ರಿಟಿಷ್ ಸರ್ಕಾರ ಅವರ ವಿಚಾರ ಮಾಡಿ ಕ್ಷಮೆ ಕೋರಲು ಕೇಳಿದರು. ಸ್ವಾಭಿಮಾನದ ಕವಿ ಕ್ಷಮೆ ಕೇಳಲು ಒಪ್ಪಲಿಲ್ಲ. ಅದಕ್ಕೆ ಬೇಂದ್ರೆಯವರಿಗೆ ಶಿಕ್ಷೆ ವಿಧಿಸಿ ಬೆಳಗಾವಿಯ ಹಿಂಡಲಗಿ ಜೈಲಿಗೆ ಕಳಿಸಲಾಯಿತು. ಅಲ್ಲಿ ಬೇಂದ್ರೆಯವರು ತಮ್ಮ ಗೆಳೆಯರಾದ ಜೋಗ ಅವರಿಗೆ ಸಮರ್ಥ ರಾಮದಾಸ ರಚಿಸಿದ ‘ದಾಸಬೋಧೆ’ಯನ್ನು ಓದಿ ಹೇಳುತ್ತಿದ್ದರು. ಆಗ ಉಳಿದ ಕೈದಿಗಳೂ ಸೇರುತ್ತಿದ್ದರು. ಬೇಂದ್ರೆಯವರ ಕಕ್ಕಂದಿರಾದ ಬಂಡೋಪಂತರ ಆರೋಗ್ಯ ಹಾಳಾದ ಕಾರಣ ಬೇಂದ್ರೆಯವರು ಜೈಲಿನಿಂದ ಹೊರಬಂದರು. ಧಾರವಾಡ ಹತ್ತಿರದ ‘ಮುಗದ’ ಎಂಬ ಹಳ್ಳಿಯಲ್ಲಿ ನಜರಬಂದಿಯಾಗಿ 9 ತಿಂಗಳುಗಳ ಕಾಲ ಇಡಲಾಯಿತು. ಅವರನ್ನು…

Read More

ಬೆಂಗಳೂರು: ಚಿತ್ರಕಲೆಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಲಾಶಿಬಿರ, ತರಬೇತಿ ಕಾರ್ಯಾಗಾರಗಳಲ್ಲಿ ಅವಕಾಶ ಕಲ್ಪಿಸಲು ಕರ್ನಾಟಕ ಲಲಿತಕಲಾ ಅಕಾಡೆಮಿ ನಿರ್ಧರಿಸಿದೆ. 2024-25ನೇ ಸಾಲಿನ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅಕಾಡೆಮಿ ಹಮ್ಮಿಕೊಳ್ಳುವ ಕಲಾಶಿಬಿರ, ತರಬೇತಿ ಕಾರ್ಯಾಗಾರ ಮತ್ತು ಕಮ್ಮಟಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದ್ದು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. 18 ವರ್ಷ ಮೇಲ್ಪಟ್ಟ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಪೂರ್ಣ ವಿವರಗಳೊಂದಿಗೆ ಪಾಸ್‌ಪೋರ್ಟ್ ಅಳತೆಯ ಎರಡು ಭಾವಚಿತ್ರ, 5*6 ಅಳತೆಯ ನಾಲ್ಕು ಚಿತ್ರಕಲಾಕೃತಿಗಳ ಛಾಯಾಚಿತ್ರಗಳನ್ನು ದಿನಾಂಕ 15 ನವೆಂಬರ್ 2024ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ. ಸಿ. ರಸ್ತೆ, ಬೆಂಗಳೂರು- 560 002 ಇಲ್ಲಿಗೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ : 080-22480297.

Read More

ಉಜಿರೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿಂದ ಪ್ರಥಮ ಬಾರಿಗೆ ರಾಜ್ಯ ಮಹಿಳಾ ಗೋಷ್ಠಿ ದಿನಾಂಕ 27 ಅಕ್ಟೋಬರ್ 2024ರಂದು ಧರ್ಮಸ್ಥಳದ ನೇತ್ರಾವತಿ ಬಳಿಯ ಸೂರ್ಯ ಕಮಲ್‌ ಸಭಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ 9.30ಕ್ಕೆ ‘ಆಸರೆ’ ಚಾರಿಟೆಬಲ್ ಟ್ರಸ್ಟ್ ಇದರ ಅಧ್ಯಕ್ಷೆಯಾದ ಡಾ. ಆಶಾಜ್ಯೋತಿ ರೈ ಗೋಷ್ಠಿಯನ್ನು ಉದ್ಘಾಟಿಸಲಿದ್ದು, ವಿನುತಾ ಕೆ. ಆ‌ರ್. ರಾಮನಗರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಡಾ. ಪ್ರಮೀಳಾ ರಾವ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಕವಯತ್ರಿ ಸಮ್ಮಿಲನ ನಡೆಯಲಿದ್ದು, ಸಾಹಿತಿ ಶೈಲಜಾ ಗೋರನಮನೆ ಅವಲೋಕನ ಮಾಡಲಿದ್ದಾರೆ. ಕವಿಗೋಷ್ಠಿಯಲ್ಲಿ ನಾಡಿನ ಸುಮಾರು 20 ಮಂದಿ ಕವಯತ್ರಿಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಘಂಟೆ 2.00ರಿಂದ ‘ಕನ್ನಡ ಸಾಹಿತ್ಯದಲ್ಲಿ ಸ್ತ್ರೀ’ ಎಂಬ ವಿಷಯದಲ್ಲಿ ಸಾಹಿತ್ಯ ಗೋಷ್ಠಿ ನಡೆಯಲಿದ್ದು, ವಚನ ಸಾಹಿತಿ ಡಾ. ಶಕುಂತಲಾ ಗೋಪಶೆಟ್ಟಿ ರಾಯಚೂರು ಉಪನ್ಯಾಸ ನೀಡಲಿದ್ದಾರೆ. ‘ಜನಪದ ಸಾಹಿತ್ಯದಲ್ಲಿ ಸ್ತ್ರೀ’ ವಿಷಯದ ಕುರಿತು  ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಮಂಜುಳಾ ಕಲ್ಬುರ್ಗಿ ವಿಚಾರ…

Read More

ಬೆಂಗಳೂರು : ಶ್ರೀ ಗಣೇಶ ನೃತ್ಯಾಲಯ ಬೆಂಗಳೂರು ಸಂಸ್ಥೆ ಅರ್ಪಿಸುವ ಸಂಸ್ಥೆಯ ನಾಲ್ಕು ಪ್ರತಿಭಾವಂತ ನೃತ್ಯ ಕಲಾ ವಿದ್ಯಾರ್ಥಿಗಳಾದ ಕುಮಾರಿ ಐಶ್ವರ್ಯ ಎನ್., ಕುಮಾರಿ ಮಾನವಿ ಎಂ., ಕುಮಾರಿ ಸಿಂಚನ ಬಿ.ಎಲ್. ಹಾಗೂ ಕುಮಾರಿ ತನ್ಮಯಿ ಎಂ.ಆರ್. ಇವರ ರಂಗಾಭಿವಂದನ ‘ಕಲಾ ಚಾತುರಿ’ ಕಾರ್ಯಕ್ರಮವು ದಿನಾಂಕ 27 ಅಕ್ಟೋಬರ್ 2024ರಂದು ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನ ಆಡಿಟೋರಿಯಂನಲ್ಲಿ ಜರುಗಲಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಪ್ರತಿಭಾವಂತ ದಂಪತಿ ನೃತ್ಯ ಕಲಾವಿದರಾದ ಗುರು ಶ್ರೀ ಗಣೇಶ ದತ್ತಾತ್ರೇಯ ಮತ್ತು ಅವರ ಧರ್ಮಪತ್ನಿ ಗುರು ಶ್ರೀಮತಿ ಭವಾನಿ ಗಣೇಶ್ ಇವರು ತಿಳಿಸಿರುತ್ತಾರೆ.

Read More

ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಂಗಳೂರು ಇದರ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್, ಮಂಗಳೂರು ಹಾಗೂ ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ಕಡಬ ಸಂಸ್ಮರಣಾ ಸಮಿತಿ, ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ., ಶ್ರೀ ಕಾಳಿಕಾಂಬಾ ವಿನಾಯಕ ಯಕ್ಷಗಾನ ತರಬೇತಿ ಕೇಂದ್ರ, ಬೈಕಾಡಿ ಪ್ರತಿಷ್ಠಾನ (ರಿ.), ಶ್ರೀ ಗುರುಸೇವಾ ಪರಿಷತ್ ಮಂಡಲ, ವಿಶ್ವಕರ್ಮ ಬಂಧುಗಳು ಭವಂತಿ ರಸ್ತೆ ಮಂಗಳೂರು ಸಮಾಜದ ಈ ಎಲ್ಲಾ ಸಂಘಟನೆಗಳ ಸಹಯೋಗದಲ್ಲಿ ಯಕ್ಷಗಾನರಂಗದ ಹಾಸ್ಯರತ್ನ, ಮೇರು ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇವರಿಗೆ ಶ್ರದ್ಧಾಂಜಲಿ ಸಭೆಯನ್ನು ದಿನಾಂಕ 27 ಅಕ್ಟೋಬರ್ 2024ರಂದು ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಡೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಅಗಲಿದ ಈ ಮಹಾನ್ ಕಲಾವಿದರಿಗೆ ನುಡಿನಮನ ಸಲ್ಲಿಸಲಾಗುವುದು.

Read More

ಮುಂಬೈ : ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭವು ದಿನಾಂಕ 19 ಅಕ್ಟೋಬರ್ 2024ರ ಶನಿವಾರದಂದು ಕಲೀನಾ ಕ್ಯಾಂಪಸ್ ನಲ್ಲಿರುವ  ಜೆ. ‌ಪಿ. ನಾಯಕ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ  ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ  ಪ್ರಾಧ್ಯಾಪಕರಾದ ಪ್ರೊ. ಜಿ. ಎನ್. ಉಪಾಧ್ಯ ಮಾತನಾಡಿ “ಮುಂಬೈ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಕೃತಿಗಳನ್ನು ಪ್ರಕಟಣೆ ಮಾಡಿದ ಹಿರಿಮೆ ಕನ್ನಡ ವಿಭಾಗದ್ದಾಗಿದೆ. ಕನ್ನಡದ ಪ್ರಚಾರ ಹಾಗೂ ಪ್ರಸಾರದ ಕೈಂಕರ್ಯವನ್ನು ವಿಭಾಗ ಸತತವಾಗಿ ಮಾಡುತ್ತಿದೆ. ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದುದು ಹಾಗೂ ಸಮೃದ್ಧವಾದುದು. ವಿದ್ಯಾರ್ಥಿಗಳು ಒಳ್ಳೆಯ ಸಾಹಿತ್ಯವನ್ನು ಓದುವ, ಬೆಳೆಯುವ, ಕಟಾವು ಮಾಡುವ, ಆನಂದ ಪಡುವ ಕಾರ್ಯವನ್ನು ಮಾಡಬೇಕಾಗಿದೆ.” ಎಂದರು ಭರತನ ನಾಟ್ಯ ಶಾಸ್ತ್ರದಲ್ಲಿ ಹೇಳಿರುವಂತೆ ಕಾವ್ಯವನ್ನು ಓದುವುದರಿಂದ ಆಗುವ ಬದಲಾವಣೆ , ನಮ್ಮ ಚಿತ್ತದಲ್ಲಿ ಆಗುವ ವಿಕಾಸ, ವಿಸ್ತಾರ, ಮಥನ ಮತ್ತು ವಿಕ್ಷೇಪ ಎಂಬ ನಾಲ್ಕು ರೀತಿಯ ಪ್ರಕ್ರಿಯೆಗಳನ್ನು ಅವರು ಈ ಸಂದರ್ಭದಲ್ಲಿ…

Read More

ಬೆಂಗಳೂರು : ಬಿ.ಎಂ.ಶ್ರೀ. ಪ್ರತಿಷ್ಠಾನ ಮತ್ತು ಎಂ.ವಿ.ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರ ಶಾ. ಬಾಲುರಾವ್ ಅನುವಾದ ಪ್ರಶಸ್ತಿ ಮತ್ತು ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 26 ಅಕ್ಟೋಬರ್ 2024ರಂದು ಬೆಳಗ್ಗೆ 10-30 ಗಂಟೆಗೆ ಬಿ.ಎಂ.ಶ್ರೀ. ಕಲಾಭವನದ ಎಂ.ವಿ.ಸೀ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಹಿತಿ ಸಂಸ್ಕೃತಿ ಚಿಂತಕರಾದ ಶ್ರೀ ಅಗ್ರಹಾರ ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಶ್ರೀಮತಿ ಕಮಲಿನಿ ಶಾ. ಬಾಲುರಾವ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಡಿ.ಎ. ಶಂಕರ್ ಇವರಿಗೆ ‘ಶಾ. ಬಾಲುರಾವ್ ಅನುವಾದ ಪ್ರಶಸ್ತಿ’ ಮತ್ತು ಯುವ ಕವಿ ಶ್ರೀ ಶಂಕರ್ ಸಿಹಿಮೊಗ್ಗೆ ಇವರಿಗೆ ‘ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

Read More

ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ದಿನಾಂಕ 17 ಅಕ್ಟೋಬರ್ 2024ರಂದು ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ಘಟಕದ ಉಪಾಧ್ಯಕ್ಷರಾದ ಡಾ. ಶೋಭಿತಾ ಸತೀಶ್ ರಾವ್ ಮತ್ತು ಡಾ. ಸತೀಶ್ ರಾವ್ ದಂಪತಿ ಸ್ವಗೃಹ ಪುತ್ತೂರಿನ ಬಪ್ಪಳಿಗೆಯ ‘ಸ್ವರಧೇನು’ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಲ್ಮೀಕಿ ಜನ್ಮದಿನಕ್ಕೆ ಪೂರಕವಾಗಿ, ತೊರವೆ ರಾಮಾಯಣದಿಂದ ಆಯ್ದ ‘ವಾಲ್ಮೀಕಿ ವೃತ್ತಾಂತ’ ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರು ಗಮಕಿ ಜಯಪ್ರಕಾಶ್ ನಾಕೂರು ಇವರು ಗಮಕ ವಾಚನಗೈದರು. ಈಶ್ವರ ಭಟ್ ಗುಂಡ್ಯಡ್ಕ ಇವರು ವ್ಯಾಖ್ಯಾನಗೈದರು. ವ್ಯವಸ್ಥಿತವಾಗಿ ನಡೆದ ಕಾರ್ಯಕ್ರಮವು ನೆರೆದ ಕಲಾಪ್ರಿಯರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಡಾ. ಶೋಭಿತಾ ಸತೀಶ್ ರಾವ್ ಇವರು ಸರ್ವರನ್ನು ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು. ಘಟಕದ ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲರಾದ ಪ್ರೊ. ವೇದವ್ಯಾಸ ರಾಮಕುಂಜ ಇವರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತ್ತು ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.…

Read More

ಮಂಗಳೂರು : ಸೋಮೇಶ್ವರ ಕೊಲ್ಯದಲ್ಲಿರುವ ನಾಟ್ಯನಿಕೇತನ (ರಿ.) ಅರ್ಪಿಸುವ ‘ಕರ್ನಾಟಕ ರಾಜ್ಯೋತ್ಸವ’, ‘ಶಾಂತಲಾ ನಾಟ್ಯ’ ಪ್ರಶಸ್ತಿ’ ಪುರಸ್ಕೃತ ನೃತ್ಯ ಗುರು ನಾಟ್ಯಾಚಾರ್ಯ ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರ 90ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯ ಸರಣಿ-ಮಾಲಿಕೆ 10 ‘ನಾಟ್ಯ ಮೋಹನ ನವತ್ಯೋತ್ಸವ’ ಕಾರ್ಯಕ್ರಮವನ್ನು ದಿನಾಂಕ 26 ಅಕ್ಟೋಬರ್ 2024ರಂದು ಸಂಜೆ 6-00 ಗಂಟೆಗೆ ಕೊಲ್ಯದ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕಲಾತಿಲಕ, ನಾಟ್ಯಾಚಾರ್ಯ ಉಳ್ಳಾಲ್ ಮೋಹನ್ ಕುಮಾರ್ ಇವರಿಂದ ದೇವತಾ ಜ್ಯೋತಿ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಉಳ್ಳಾಲ್ ಮೋಹನ್ ಕುಮಾರ್ ಇವರ ಶಿಷ್ಯೆ ಶ್ರೀಮತಿ ಸ್ವರೂಪ್ ದೇವಯ್ಯ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶ್ರೀ ನಾಟ್ಯ ನಿಕೇತನದ ನೃತ್ಯ ವಿದುಷಿ ಮೃದುಲಾ ರೈ ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

Read More

ಬೆಂಗಳೂರು: ಈ ಹೊತ್ತಿಗೆ ಕಥೆ ಹಾಗೂ ಕಾವ್ಯ ಪ್ರಶಸ್ತಿಗೆ ಅಪ್ರಕಟಿತ ಕಥೆ ಹಾಗೂ ಅಪ್ರಕಟಿತ ಕಾವ್ಯ ಸಂಕಲನಗಳನ್ನು ಆಹ್ವಾನಿಸಲಾಗಿದೆ. ವಿಜೇತ ಕಥಾ ಮತ್ತು ಕವನ ಸಂಕಲನಕ್ಕೆ ತಲಾ 10,000 ರೂ. ಬಹುಮಾನವಿದೆ. ಕಥಾ ಸಂಕಲನವು 8 ರಿಂದ 10 ಸ್ವತಂತ್ರ ಕಥೆಗಳನ್ನು ಒಳಗೊಂಡಿರಬೇಕು. ಕವನ ಸಂಕಲನವು 35 ರಿಂದ 40 ಕವನಗಳನ್ನು ಒಳಗೊಂಡಿರಬೇಕು. ಡಿ. ಟಿ. ಪಿ. ಮಾಡಿಸಿ, ಬೈಂಡ್ ಮಾಡಿಸಿದ ಸಂಕಲನದ 3 ಪ್ರತಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಕಲನದ ಹೆಸರು, ಸಂಪೂರ್ಣ ವಿಳಾಸ ಹಾಗೂ ಫೋಟೊ ಜೊತೆಗೆ ಕಳುಹಿಸಬೇಕು. ವಿಜೇತ ಕೃತಿಗಳು ಬಹುಮಾನ ಘೋಷಣೆಯಾದ ತಿಂಗಳೊಳಗೆ ಪ್ರಕಟಗೊಳ್ಳಬೇಕು. ಸ್ಪರ್ಧೆಗೆ ಪ್ರವೇಶ ಕಳುಹಿಸಲು ಕೊನೆಯ 20 ನವಂಬರ್ 2024, ವಿಳಾಸ: ಈ ಹೊತ್ತಿಗೆ, ನಂ.65, ಮುಗುಳ್ನಗೆ, 3ನೇ ಕ್ರಾಸ್, ಪಿ. ಎನ್. ಬಿ. ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ, ಬೆಂಗಳೂರು- 560062.

Read More