Author: roovari

ಪುತ್ತೂರು : ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಬಡಗನ್ನೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಪೋಷಕತ್ವದಲ್ಲಿ ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಡಗನ್ನೂರು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಸುವ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ-17 ಈ ಕಾರ್ಯಕ್ರಮವನ್ನು ದಿನಾಂಕ 26 ಅಕ್ಟೋಬರ್ 2024ರ ಶನಿವಾರ ಬೆಳಿಗ್ಗೆ 9-30 ಗಂಟೆಗೆ ಬಡಗನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಸ.ಉ.ಹಿ.ಪ್ರಾ. ಶಾಲೆ ಬಡಗನ್ನೂರು ಇಲ್ಲಿನ ವಿದ್ಯಾರ್ಥಿನಿ ಕುಮಾರಿ ವಿಸ್ಮಿತಾ ಎಂ.ರವರು ವಹಿಸಲಿದ್ದು, ಮಧ್ಯಾಹ್ನ 3-00 ಗಂಟೆಗೆ ನಡೆಯುವ ಸಮಾರೋಪ ಭಾಷಣವನ್ನು ಸರ್ವೋದಯ ಪ್ರೌಢ ಶಾಲೆ ಸುಳ್ಯಪದವು ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಫಾತಿಮತ್ ರಮೀಸ ಮಾಡಲಿದ್ದಾರೆ.…

Read More

ವೇಣೂರು : ವೇಣೂರಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ಸದಸ್ಯರಿಂದ ‘ಸುದರ್ಶನ ಚಕ್ರಗ್ರಹಣ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 19 ಅಕ್ಟೋಬರ್ 2024 ರಂದು ವೇಣೂರಿನ ವಿದ್ಯೋದಯ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ಶಿವಶಂಕರ ಭಟ್, ಚೆಂಡೆ ಮದ್ದಳೆಗಳಲ್ಲಿ ಕೊಂಕಣಾಜೆ ಚಂದ್ರಶೇಖರ ಭಟ್ ಹಾಗೂ ಬೆಳಾಲು ಗಣೇಶ ಭಟ್, ಚಕ್ರತಾಳದಲ್ಲಿ ಇದೇ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ ಸುಷೇಣ ಇವರು ಸಹಕರಿಸಿದರು. ಶಾಲಾ ವಿದ್ಯಾರ್ಥಿಗಳಾದ ಒಂಬತ್ತನೆಯ ತರಗತಿಯ ರಂಜನಿ ಹಾಗೂ ನಾಲ್ಕನೇ ತರಗತಿಯ ಸುಷೇಣರು ಆಸಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಒಂಬತ್ತನೇ ತರಗತಿಯ ಕನ್ನಡ ಪಾಠದಲ್ಲಿ ಇರುವ ಈ ಭಾಗವನ್ನು ನಡೆಸಲು ಶಾಲಾ ಮುಖ್ಯ ಪ್ರಬಂಧಕರಾದ ಕೆ. ಶಿವರಾಮ ಹೆಗ್ಡೆಯವರು ಅವಕಾಶವನ್ನು ನೀಡಿದ್ದು, ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ಶ್ರೀಮತಿ ಶೀಲಾ ಕೆ. ಎಸ್ ಹೆಗ್ಡೆ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಭಾಗವತರಾಗಿದ್ದ ದಿ. ಬಲಿಪ ಪ್ರಸಾದ ಭಟ್ ಇವರ…

Read More

ಸುಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯರು ಇಂದು ಮುಂಜಾನೆ ದೈವಾಧೀನರಾದ ಖೇದಕರ ಸಂಗತಿ ಯಕ್ಷಗಾನ ರಸಿಕರಲ್ಲಿ ಧಿಗ್ಭ್ರಮೆ ತಂದಿದೆ. ಚಂದ್ರಶೇಖರ ಧರ್ಮಸ್ಥಳದವರ ಮಳೆಗಾಲದ ತಿರುಗಾಟದ ತಂಡದಲ್ಲಿ (ಹಿಂದಿನ ಶ್ರೀಧರ ಭಂಡಾರಿಯವರ ತಂಡ) ಯಕ್ಷಗಾನ ಪ್ರದರ್ಶನಕ್ಕಾಗಿ ಬೆಂಗಳೂರಿಗೆ ತೆರಳಿದ್ದ ತಂಡವು ಬೆಂಗಳೂರಿನ ಯಕ್ಷಗಾನ ಪೋಷಕರಾದ ಶ್ರೀ ಆರ್.ಕೆ. ಭಟ್ ರ ಮನೆಯ ಮಾಳಿಗೆಯಲ್ಲಿ ವಸತಿ ಹೂಡಿತ್ತು. ಆಚಾರ್ಯರಿಗೆ ಇಂದು ಮುಂಜಾನೆ 2-00 ಗಂಟೆ ಹೊತ್ತಿಗೆ ತೀವ್ರ ಕೆಮ್ಮಿನ ಬಾಧೆ ಕಂಡಿತು. ಆಗ ಅವರೊಂದಿಗೆ ರೂಮಿನಲ್ಲಿದ್ದ ವೇಣೂರು ಸದಾಶಿವ ಆಚಾರ್ಯ ಹಾಗೂ ಅರಳ ಗಣೇಶರು ಕೂಡಲೇ ಆರೈಕೆ ಮಾಡಿದರು . ಚಂದ್ರಶೇಖರರಿಗೂ ವಿಷಯ ತಿಳಿದು ,  ಪ್ರಥಮ ಚಿಕಿತ್ಸೆಗೆ ಸ್ಪಂದಿಸದ ಆಚಾರ್ಯರನ್ನು ಆರ್.ಕೆ. ಭಟ್ಟರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲೇ, ಸುಮಾರು ಮುಂಜಾವಿನ 4-00 ಗಂಟೆಗೆ ಆಚಾರ್ಯರು ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದ ದಾರುಣ ವಾರ್ತೆಯನ್ನು ವೈದ್ಯರು ಧೃಢೀಕರಿಸಿದರು. ಈ ವಾರ್ತೆಯು ಇಂದು ಮುಂಜಾವಿನಲ್ಲೇ ಆಚಾರ್ಯರ ಕುಟುಂಬಸ್ತರಿಗೆ ಹಾಗೂ ಅಭಿಮಾನಿಗಳಿಗೆ…

Read More

ಕಡಬ: ಕೊಯಿಲ ಹಾಗೂ ಹಿರೆಬಂಡಾಡಿ ಗ್ರಾಮಗಳ ಗಡಿ ಭಾಗವಾದ ಕೆಮ್ಮಾರದಲ್ಲಿ ನೂತನವಾಗಿ ಪ್ರಾರಂಭವಾದ ಮನೆ ಮನೆ ತಿರುಗಾಟದ ಶ್ರೀ ಚೌಡೇಶ್ವರಿ ಕೃಪಾಪೋಷಿತ ಯಕ್ಷಗಾನ ಚಿಕ್ಕ ಮೇಳದ ಉದ್ಘಾಟನಾ ಸಮಾರಂಭವು ದಿನಾಂಕ 14 ಅಕ್ಟೋಬರ್ 2024ರಂದು ಕೆಮ್ಮಾರ ಶ್ರೀ ಚೌಡೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೇವಸ್ಥಾನದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಾರಂಭಿಸಿದ ನಿಧಿ ಸಂಚಯನವನ್ನು ಉದ್ಘಾಟಿಸಿದ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ “ನಮ್ಮ ಜಿಲ್ಲೆಯ ಹೆಮ್ಮೆಯ ಕಲೆ ಯಕ್ಷಗಾನ ನಮ್ಮ ಧರ್ಮ ಹಾಗೂ ಸಂಸ್ಕೃತಿಯ ಉಳಿವಿಗೆ ಪೂರಕವಾಗಿದೆ. ಅನೇಕ ಪೌರಾಣಿಕ ವಿಚಾರಗಳು ಯಕ್ಷಗಾನ ಪ್ರದರ್ಶನಗಳಿಂದ ತಿಳಿಯುತ್ತದೆ. ಮುಂದಿನ ಪೀಳಿಗೆಗೆ ಧರ್ಮದ ಅರಿವು ಮೂಡಿಸುವ ಕಾರ್ಯ ಚಿಕ್ಕ ಮೇಳಗಳಿಂದ ನಡೆಯಬೇಕು.” ಎಂದರು. ಈ ಚಿಕ್ಕ ಮೇಳವನ್ನು ಉದ್ಘಾಟಿಸಿದ ತೆಂಕುತಿಟ್ಟಿನ ಖ್ಯಾತ ಭಾಗವತ ಆನೆಕಲ್ ಗಣಪತಿ ಭಟ್ ಶುಭಹಾರೈಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅತಿಥಿ ಸ್ಥಾನದಿಂದ ಶುಭ ಹಾರೈಸಿದರು. ಗೋಕುಲನಗರ ‘ಯಕ್ಷನಂದನ’…

Read More

ಮಂಗಳೂರು : ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಇದರ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷಗುರು ಶ್ರೀ ಜಯಕರ್ ಪಂಡಿತ್ ಬಜಾಲ್ ಇವರ ನಿರ್ದೇಶನದಲ್ಲಿ ‘ಸುದರ್ಶನ ಗರ್ವಭಂಗ’ ಹಾಗೂ ಶ್ರೀದೇವಿ ಲಲಿತೋಪಖ್ಯಾನ’ ಎಂಬ ಕನ್ನಡ ಯಕ್ಷಗಾನ ಬಯಲಾಟವು ದಿನಾಂಕ 26 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಬೋಳಾರ ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿದೆ. ಮಧ್ಯಾಹ್ನ 2-300 ಗಂಟೆಗೆ ದಯಾನಂದ ಕೋಡಿಕಲ್ ಇವರ ಶಿಷ್ಯ ವೃಂದದವರಿಂದ ‘ಯಕ್ಷಗಾನಾರ್ಚನೆ’, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಅರುಣ್ ಐತಾಳ್ ಇವರು ವಹಿಸಲಿದ್ದು, ಅನುವಂಶಿಕ ಮೊಕ್ತೇಸರರಾದ ಶ್ರೀ ಜಿ. ರಘುರಾಮ ಉಪಾಧ್ಯಾಯ ಮತ್ತು ಶ್ರೀ ಎಸ್. ಹರೀಶ್ ಐತಾಳ್ ಇವರು ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಕಟೀಲು ಮೇಳದ ಕಲಾವಿದರಾದ ಶ್ರೀ ಅಶ್ವಥ್ ಮಂಜನಾಡಿ ಇವರಿಗೆ ‘ದಿ. ಚಂದ್ರಶೇಖರ ಬಲ್ಯಾಯ ಸಂಸ್ಮರಣಾ ಪ್ರಶಸ್ತಿ’ ನೀಡಲಾಗುವುದು. ಯಕ್ಷಗಾನ ಕಲಾವಿದರಾದ ಭಾಸ್ಕರ್ ಕೋಳ್ಯೂರು ಮತ್ತು ಕಿನ್ನಿಗೋಳಿ ಮೋಹಿನಿ…

Read More

ಬೆಂಗಳೂರು : ಬೆಂಗಳೂರಿನ ಸಿರಿಕಲಾ ಮೇಳದ 14ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 20 ಅಕ್ಟೋಬರ್ 2024 ರಂದು ನಂದಿನಿ ಬಡಾವಣೆಯ ಉತ್ತರ ಕನ್ನಡ ಸಂಘದಲ್ಲಿ ನಡೆಯಿತು. ಪಿ. ವಾಸುದೇವ ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಭಾಗವತ ಕೆ. ಪಿ. ಹೆಗಡೆ, ನ್ಯಾಯವಾದಿ ಡಾ. ಸುಧಾಕರ್ ಪೈ, ಉತ್ತರ ಕನ್ನಡ ಸಂಘದ ಅಧ್ಯಕ್ಷ ಅರವಿಂದ ನಾಯಕ್ ಅವರನ್ನು ಸಿರಿಕಲಾ ಪುರಸ್ಕಾರ ಮತ್ತು ಪೋಷಕ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಗವತ ಕೆ. ಪಿ. ಹೆಗಡೆ “ಸಿರಿಕಲಾ ಮೇಳದ 14 ವರ್ಷಗಳ ಸಾಧನೆ ಅಭೂತಪೂರ್ವ, ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಇವರ ಈ ಕಾರ್ಯ ಅಭಿನಂದನಾರ್ಹ.” ಎಂದರು. ಸಿರಿಕಲಾ ಪೋಷಕ ಪುರಸ್ಕಾರ ಸ್ವೀಕರಿಸಿದ ಡಾ. ಸುಧಾಕರ್ ಪೈ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಶ್ರೀಮಂತ ಕಲಾವಿದರನ್ನು ಗುರುತಿಸಿ ರೂಪಾಯಿ 25000 ಗೌರವಧನದ ಜೊತೆ ಸನ್ಮಾನಿಸುವ ಕಾರ್ಯ ಶ್ಲಾಘನೀಯ. ಇವರ ಈ ಕಾರ್ಯಕ್ಕೆ ಹಿಂದಿನಿಂದಲೂ ಸಹಕರಿಸುತ್ತಿದ್ದು ಇನ್ನು ಮುಂದೆಯೂ ಸಹಕಾರ…

Read More

ಬೆಳಗಾವಿ ಮಹಾನಗರದ ‘ರಂಗಸಂಪದ’ ತಂಡದವರು ಕಳೆದ ರವಿವಾರ ದಿನಾಂಕ 20 ಅಕ್ಟೋಬರ್ 2024ರಂದು ಪ್ರದರ್ಶಿಸಿದ ‘ಡಿಯರ್ ಅಜ್ಜೋ’ ಎಂಬ ಕನ್ನಡ ನಾಟಕ ತುಂಬಾ ಯಶಸ್ವಿಯಾಯ್ತು. ಮರಾಠಿ ನಾಟಕಕಾರ್ತಿ ಶ್ರೀಮತಿ ಮಯೂರಿ ದೇಶಮುಖ ರಚಿಸಿದ ನಾಟಕವನ್ನು ಕನ್ನಡಕ್ಕೆ ತಂದವರು ಹೆಸರಾಂತ ರಂಗಕರ್ಮಿ ಡಾ. ಯಶವಂತ ಸರದೇಶಪಾಂಡೆ. ನಿವೃತ್ತ ಪ್ರಾಧ್ಯಾಪಕರು ಪತ್ನಿಯನ್ನು ಕಳೆದುಕೊಂಡು ಏಕಾಂಗಿಯಾಗಿದ್ದಾರೆ. ಅವರ ಮಗ ಸೊಸೆ ಸಾಫ್ಟ್ ವೇರ್ ಇಂಜಿನಿಯರ್ಸ್ ಅಮೇರಿಕಾದ ಅಟ್ಲಾಂಟಾದಲ್ಲಿದ್ದವರು. ಆಕಸ್ಮಿಕ ಅಪಘಾತವೊಂದರಲ್ಲಿ ಅವರು ಸಾವನ್ನಪ್ಪುತ್ತಾರೆ. ಹದಿಹರೆಯದ ಮಗಳು ಅಲ್ಲಿ ಏಕಾಂಗಿ. ಅಲ್ಲಿಯೇ ಹುಟ್ಟಿ ಬೆಳೆದವಳು. ಅನಿವಾರ್ಯ ಸಂದರ್ಭದಲ್ಲಿ ಆಕೆ ಭಾರತಕ್ಕೆ ಬರುತ್ತಾಳೆ. ಅಜ್ಜ ಮೊಮ್ಮಗಳಲ್ಲಿನ ಜನರೇಷನ್ ಗ್ಯಾಪ್ ದೊಡ್ಡದು. ಸಂಪ್ರದಾಯಸ್ಥ ಅಜ್ಜ, ಅಲ್ಟ್ರಾ ಮಾಡ್ರನ್ ಮೊಮ್ಮಗಳು. ವೇಷ ಭೂಷಣ, ನಡೆ ನುಡಿ, ಆಹಾರ ವಿಹಾರಗಳಲ್ಲಿ ಪರಸ್ಪರ ಹೊಂದಿಕೆ ಆಗುವುದು ಹೇಗೆ ? ಹೀಗೆಯೇ ವರ್ಷಗಳೆರಡು ಉರುಳುತ್ತದೆ. ಅವರಿಬ್ಬರು ಪರಸ್ಪರ ಅರಿತುಕೊಳ್ಳಲು ಸಮಯ ಹಿಡಿದರೂ ಕಾಲಕ್ರಮೇಣ ಅವರಲ್ಲಿ ಹೊಂದಾಣಿಕೆಯಾಗತೊಡಗುತ್ತದೆ. ಸಂಬಂಧ ಸೆಳೆದು ಕಟ್ಟುತ್ತದೆ. ಏಕಾಂಗಿ ಅಜ್ಜನೊಂದಿಗೆ ಇರುತ್ತ, ಬದುಕಿನಲ್ಲಿ…

Read More

ಮಂಗಳೂರು : ತಲಪಾಡಿಯ ಯಕ್ಷಮಿತ್ರ ಸೇವಾ ಬಳಗ ಇದರ ದಶಮ ಸಂಭ್ರಮದ ಪ್ರಯುಕ್ತ ‘ತಲಪಾಡಿ ಯಕ್ಷೋತ್ಸವ’ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಮೋಘ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 26 ಅಕ್ಟೋಬರ್ 2024ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ 4-00 ಗಂಟೆಗೆ ದೀಪ ಪ್ರಜ್ವಲನೆಯಿಂದ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ‘ತ್ರಿಶಂಕು ಸ್ವರ್ಗ’, ‘ಗಜೇಂದ್ರ ಮೋಕ್ಷ’, ‘ಕಾಳಿಂಗ ಮರ್ದನ’ ಮತ್ತು ‘ತಾಮ್ರಧ್ವಜ ಕಾಳಗ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ‘ಕನ್ನಡ ಕಾಯಕ ದತ್ತಿ’ ಪ್ರಶಸ್ತಿಗೆ 2023ನೆಯ ಸಾಲಿಗೆ ಕನ್ನಡ ಪರ ಹೋರಾಟ ಕ್ಷೇತ್ರದಿಂದ ಬೆಂಗಳೂರಿನ ಗೋಮೂರ್ತಿ ಯಾದವ್, ರಂಗಭೂಮಿ ಕ್ಷೇತ್ರದಿಂದ ತುಮಕೂರಿನ ಕೆ. ರೇವಣ್ಣ, ಸಾಹಿತ್ಯ ಕ್ಷೇತ್ರದಿಂದ ಚಿತ್ರದುರ್ಗದ ಡಾ. ಮೀರ ಸಾಬಹಳ್ಳಿ ಶಿವಣ್ಣ ಮತ್ತು 2024ನೆಯ ಸಾಲಿಗೆ ಕನ್ನಡ ಪರ ಹೋರಾಟ ಕ್ಷೇತ್ರದಿಂದ ಚಿಕ್ಕ ಬಳ್ಳಾಪುರದ ಜಿ. ಬಾಲಾಜಿ, ರಂಗಭೂಮಿ ಕ್ಷೇತ್ರದಿಂದ ದಕ್ಷಿಣ ಕನ್ನಡದ ಕೃಷ್ಣಮೂರ್ತಿ ಕವತ್ತಾರ್ ಮತ್ತು ಸಾಹಿತ್ಯ ಕ್ಷೇತ್ರದಿಂದ ವಿಜಯಪುರದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದ ವ.ಚ. ಚನ್ನೇಗೌಡರು ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ ಸ್ಥಾಪಿಸಿದ್ದು ನಾಡು-ನುಡಿ, ನೆಲ-ಜಲ ಕುರಿತು ಸೇವೆ ಸಲ್ಲಿಸಿದವರಿಗೆ, ಕನ್ನಡಪರ ಹೋರಾಟಗಾರರಿಗೆ ಮತ್ತು ರಂಗಭೂಮಿ/ಸಂಗೀತ ಕ್ಷೇತ್ರದಲ್ಲಿ ದುಡಿದ ಮೂರು ಜನ ಮಹನೀಯರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಬೇಕೆನ್ನುವುದು ದತ್ತಿ ದಾನಿಗಳ ಆಶಯ.…

Read More

ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ರಂಗಪಯಣ (ರಿ.) ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ನಾಲ್ಕನೇ ಕವಿಗೋಷ್ಠಿ ಜನಸಾಮಾನ್ಯರ ದನಿಯಾಗಲಿ ಕಾವ್ಯ ರಾಜಧಾನಿ ಬೆಂಗಳೂರಿನಿಂದ ರೇಷ್ಮೆನಗರಿ ರಾಮನಗರದ ಕಡೆಗೆ ‘ಕಾವ್ಯದೀವಟಿಗೆಯ ಪಯಣ’ವು ದಿನಾಂಕ 26 ಅಕ್ಟೋಬರ್ 2024ರಂದು ಇಳಿ ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ ಕರ್ನಾಟಕ ನಾಟಕ ಅಕಾಡೆಮಿ ಚಾವಡಿಯಲ್ಲಿ ನಡೆಯಲಿದೆ. ಬೆಂಗಳೂರು ಗೋಷ್ಠಿಯ ಅಧ್ಯಕ್ಷತೆಯನ್ನು ಕ.ಸಾ.ಪ.ದ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಮನ ಬಳಿಗಾರ್ ವಹಿಸಲಿದ್ದು, ಉದ್ಘಾಟಕರಾಗಿ ಹಿರಿಯ ಕವಿಗಳು ಮತ್ತು ಬರಹಗಾರ್ತಿ ಡಾ. ಎಲ್.ಜಿ. ಮೀರಾ ಆಗಮಿಸಲಿದ್ದಾರೆ. ನಾಡಿನ ಖ್ಯಾತ ಕವಿಗಳಿಂದ ‘ಕವಿತಾ ವಾಚನ’ ಮತ್ತು ರಂಗ ಪಯಣ ಹಾಗೂ ಸಾತ್ವಿಕ ನಾಟಕ ಬಳಗದವರು ‘ಪದ ಪಾದ’ ಕಾರ್ಯಕ್ರಮ ನೀಡಲಿದ್ದು, ‘ರಂಗಪಯಣ’ದ ಮಿತ್ರರಾದ ರಾಜಗುರು ಮತ್ತು ನಯನ ಸೂಡ ಇವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

Read More