Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಭಾರತದ ಅತಿ ದೊಡ್ಡ ಪುಸ್ತಕ ಭಂಡಾರ ಸಪ್ನ ಬುಕ್ ಹೌಸ್ ಹಾಗೂ ಎನ್. ನರಸಿಂಹಯ್ಯ ಶತಮಾನೋತ್ಸವ ಸಂಭ್ರಮ ಸಮಿತಿ ಇದರ ವತಿಯಿಂದ ಎನ್. ನರಸಿಂಹಯ್ಯನವರ 10 ಕಾದಂಬರಿಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 06 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಗಾಂಧಿನಗರದಲ್ಲಿ ‘ಸಪ್ನ ಬುಕ್ ಹೌಸ್’ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡೋಜ ಪ್ರೊ. ಹಂಪ ನಾಗರಾಜಯ್ಯ ಇವರು ವಹಿಸಲಿದ್ದು, ಡಾ. ಬೈರಮಂಗಲ ರಾಮೇಗೌಡ, ರಾ.ನಂ. ಚಂದ್ರಶೇಖರ, ಡಾ. ಉದ್ದಂಡಯ್ಯ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ 114ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ವನ್ನು ದಿನಾಂಕ 09 ಸೆಪ್ಟೆಂಬರ್ 2025ರಂದು ಪೂರ್ವಾಹ್ನ ಗಂಟೆ 02-45ಕ್ಕೆ ಮಂಗಳೂರು ರಥಬೀದಿಯಲ್ಲಿರುವ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ರಥಬೀದಿಯಲ್ಲಿರುವ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಭಾರತಿ ಬಾಯಿ ಕೆ. ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮೈ ಅಂತರಾತ್ಮ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಇದರ ಸಂಸ್ಥಾಪಕರು ಹಾಗೂ ಅಂಕಣಕಾರರಾದ ವೇಣು ಶರ್ಮ, ಉಪನ್ಯಾಸಕಿ ಪ್ರೊ. ಅಕ್ಷಯ ಆರ್. ಶೆಟ್ಟಿ ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಇದರ ಅಧ್ಯಕ್ಷರಾದ ಚಂಚಲ ತೇಜೋಮಯ ಇವರುಗಳು ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಭಾಗವಹಿಸಲಿರುವರು.
ಕೊಪ್ಪಳ : ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಕೊಪ್ಪಳದ ವಿಸ್ತಾರ್ ರಂಗ ಶಾಲೆ 2025-26ನೇ ಸಾಲಿನ ನಾಟಕ ವಿಭಾಗದ ಸರ್ಟಿಫಿಕೇಟ್ ಮತ್ತು ಡಿಪ್ಲೋಮ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದೆ. ಉತ್ತರ ಕರ್ನಾಟಕದ ಭಾಗದ ಏಕೈಕ ರಂಗಶಾಲೆ ಇದಾಗಿದ್ದು, ಪರಿವರ್ತನಾತ್ಮಕ ರಂಗಭೂಮಿ ಕಲಿಕೆ ಇದರ ಮುಖ್ಯ ಉದ್ದೇಶವಾಗಿದೆ. ಕಳೆದ 10 ವರ್ಷಗಳಿಂದ ನಾಟಕ ಡಿಪ್ಲೋಮದ ಜೊತೆಗೆ ವಿವಿಧ ಅಲ್ಪಾವಧಿ ರಂಗತರಬೇತಿಗಳನ್ನು ನಡೆಸುತ್ತ ಬಂದಿದೆ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಸೆಪ್ಟೆಂಬರ್ 2025 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9535383161, 7026972770. viewform
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಇತ್ತೀಚೆಗೆ ದಿವಂಗತರಾದ ಅಕಾಡೆಮಿಯ ಮಾಜಿ ಅಧ್ಯಕ್ಷ ಎರಿಕ್ ಒಝೇರಿಯೊರವರಿಗೆ ನುಡಿನಮನ ಸಲ್ಲಿಸಲು ‘ಉತ್ರಾಂಜಲಿ; ಕಾರ್ಯಕ್ರಮವನ್ನು ಬೆಂದೂರು ಸಂತ ಸೆಬೆಸ್ಟಿಯನ್ ಮಿನಿ ಹಾಲಿನಲ್ಲಿ ದಿನಾಂಕ 04 ಸೆಪ್ಟೆಂಬರ್ 2025ರಂದು ಆಯೋಜಿಸಿತ್ತು. ಪ್ರಸ್ತಾವನೆಗೈದು ಸ್ವಾಗತ ಕೋರಿದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ತನ್ನ ಮತ್ತು ಎರಿಕ್‌ರವರ 37 ವರ್ಷಗಳ ಒಡನಾಟವನ್ನು ಮೆಲುಕು ಹಾಕಿದರು. ಎರಿಕ್‌ರವರ ಪತ್ನಿ ಜೊಯ್ಸ್‌ರವರು, ಒಝೇರಿಯೊ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಗಳು ಡಾ. ರಶ್ಮಿ, ಅಳಿಯ ಸಂಗೀತಗಾರ ಆಲ್ವಿನ್ ಫೆರ್ನಾಂಡಿಸ್, ಮೊಮ್ಮಕ್ಕಳಾದ ಅಮನ್, ಜಿಯಾ ಹಾಗೂ ಅಕಾಡಮಿ ಅಧ್ಯಕ್ಷರು, ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಅಕ್ಷತಾ ನಾಯಕ್, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಮಂಗಳೂರು ಧರ್ಮಪ್ರಾಂತ್ಯದ ಪಿ.ಆರ್.ಒ. ರೊಯ್ ಕ್ಯಾಸ್ತೆಲಿನೊ, ಕೊಂಕಣಿ ಲೇಖಕರ ಒಕ್ಕೂಟದ ಮುಖ್ಯಸ್ಥ ರಿಚ್ಚಾರ್ಡ್ ಮೊರಾಸ್, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಪ್ರಮುಖ ಭಾಷಣಕಾರರು, ಲೇಖಕರು, ಸಂಘಟಕರು…
ಉಡುಪಿ : ಉಡುಪಿಯ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಇದರ ಮಹಾಸಭೆಯು ದಿನಾಂಕ 02 ಸೆಪ್ಟೆಂಬರ್ 2025ರ ಮಂಗಳವಾರ ಉಡುಪಿಯ ಹೋಟೆಲ್ ಮಧುರ ಕಂಫರ್ಟ್ಸ್ ಸಭಾಂಗಣದಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಉಡುಪಿ ವಿಶ್ವನಾಥ ಶೆಣೈ ಹಾಗೂ ಅಧ್ಯಕ್ಷರಾಗಿ ಪ್ರೊ. ಶಂಕರ್ ಪುನರ್ ಆಯ್ಕೆ ಆಗಿರುತ್ತಾರೆ. ಉಪಾಧ್ಯಕ್ಷರಾಗಿ ಮರವಂತೆ ನಾಗರಾಜ ಹೆಬ್ಬಾರ್, ಪ್ರಭಾವತಿ ವಿ. ಶೆಣೈ, ಸಂಧ್ಯಾ ಶೆಣೈ, ಜೀವನ್ ರಾಂ ಸುಳ್ಯ, ವಿಘ್ನೇಶ್ವರ ಅಡಿಗ, ಆಸ್ಟ್ರೋ ಮೋಹನ್, ಡಾ. ಭಾರ್ಗವಿ ಐತಾಳ್, ಮನೋಹರ್ ನಾಯಕ್, ಮಧುಸೂದನ್ ಹೇರೂರು, ಸುಗುಣ ಸುವರ್ಣ, ಗೌರವ ಸಲಹೆಗಾರರಾಗಿ ಜಯಕರ್ ಶೆಟ್ಟಿ ಇಂದ್ರಾಳಿ, ರವೀಂದ್ರ ಪೂಜಾರಿ ತೆಳ್ಳಾರು, ಜನಾರ್ದನ ಕೊಡವೂರು, ರಾಜಗೋಪಾಲ್ ಬಲ್ಲಾಳ, ಡಾ. ಸುರೇಶ್ ಶೆಣೈ, ಡಾ. ವಿರೂಪಾಕ್ಷ ದೇವರಮನೆ, ಡಾ. ವಿಜಯೇಂದ್ರ ವಸಂತ್, ಮನೋಹರ್ ಶೆಟ್ಟಿ ತೊನ್ಸೆ, ಪ್ರಧಾನ ಕಾರ್ಯದರ್ಶಿಯಾಗಿ ಶಿಲ್ಪಾ ಜೋಶಿ, ಕಾರ್ಯದರ್ಶಿಯಾಗಿ ಪೂರ್ಣಿಮಾ ಜನಾರ್ದನ್, ಜನಾರ್ದನ ಹಾವಂಜೆ, ಕೋಶಾಧಿಕಾರಿಯಾಗಿ ರಾಜೇಶ್ ಭಟ್ ಪಣಿಯಾಡಿ, ಕಾನೂನು ಸಲಹೆಗಾರರಾಗಿ ಶಶಿರಾಜ್ ಕಾವೂರು,…
ಮಂಗಳೂರು: ಕರ್ನಾಟಕ ಸರ್ಕಾರವು ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬಸವಾದಿ ಶಿವ ಶರಣರ ತತ್ವಾದರ್ಶಗಳನ್ನು ಜನಮನದಲ್ಲಿ ಬಿತ್ತುವ, ಜನರ ಮನಸ್ಸುಗಳನ್ನು ಕಟ್ಟುವ ಜೊತೆಗೆ ಪರಸ್ಪರ ಭಾಂದವ್ಯದ ಬೆಸುಗೆ ಹಾಕುವ ಸದುದ್ದೇಶದಿಂದ ಲಿಂಗಾಯತ ಮಠಾದೀಶರ ಒಕ್ಕೂಟವು ರಾಜ್ಯದ್ಯಂತ ಸೆಪ್ಟೆಂಬರ್ 01 ರಿಂದ ಅಕ್ಟೋಬರ್ 5ರ ವರೆಗೆ ‘ಬಸವ ಸಂಸ್ಕೃತಿ ಅಭಿಯಾನ’ವನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ ದ.ಕ. ಜಿಲ್ಲಾ ಸಹಮತ ವೇದಿಕೆಯ ಆಶ್ರಯದಲ್ಲಿ ದಿನಾಂಕ 19 ಸೆಪ್ಟೆಂಬರ್ 2025ರಂದು ಮಂಗಳೂರಿನ ಉರ್ವಸ್ಟೋರ್ ಬಳಿಯ ತುಳು ಭವನದಲ್ಲಿ ಅಭಿಯಾನದ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಪದವಿ ವಿದ್ಯಾರ್ಥಿಗಳಿಗೆ ದ.ಕ. ಜಿಲ್ಲಾ ಮಟ್ಟದ ಸಮೂಹ ವಚನ ಗಾಯನ ಸ್ಪರ್ಧೆ ಏರ್ಪಡಿಲಾಗಿದೆ. ಸೆಪ್ಟೆಂಬರ್ 16 ರಂದು ಈ ಸ್ಪರ್ಧೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಳಿಗಾಗಿ 9980951074 ಪ್ರವೀಣ ಬಿ. ಎಂ. ಹಾಗೂ 9448911777 ಮೀನಾಕ್ಷಿ ರಾಮಚಂದ್ರ ಇವರನ್ನು ಸಂಪರ್ಕಿಸಬಹುದು.
ಮಂಗಳೂರು : ಚಕ್ರಪಾಣಿ ನೃತ್ಯ ಕಲಾಕೇಂದ್ರ ಅತ್ತಾವರ ಮಂಗಳೂರು ಇವರ ವತಿಯಿಂದ ಅತ್ತಾವರ ಕಟ್ಟೆಯಿಂದ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ತನಕ ಭವ್ಯ ಮೆರವಣಿಗೆಯ ಸ್ವಾಗತದೊಂದಿಗೆ “170 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ಮಾಡಿ ಮ್ಯಾರಥಾನ್ ಗೋಲ್ಡನ್ ಬುಕ್ ದಾಖಲೆ ನಿರ್ಮಿಸಿದ” ರೆಮೋನಾ ಎವೆಟ್ ಪಿರೇರಾ ಇವರ ಅಭಿನಂದನಾ ಕಾರ್ಯಕ್ರಮವು ದಿನಾಂಕ 24 ಆಗಸ್ಟ್ 2025ರಂದು ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಕಲಾ ಮಂಟಪದಲ್ಲಿ ವೈಭವದಿಂದ ಜರುಗಿತು. ‘ಶಾಂತಲಾ’ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಶ್ರೀ ಮೋಹನ್ ಕುಮಾರ್ ದೇವತಾಜ್ಯೋತಿ ಪ್ರಜ್ವಲನಗೈದು, “ರೆಮೋನಾರ ಸಾಧನೆ ಪೋಷಕರು, ಗುರುಗಳು, ವಿದ್ಯಾಕೇಂದ್ರ, ಊರು, ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು. ಸನ್ಮಾನಿತ ನುಡಿಯಲ್ಲಿ ರೆಮೋನಾ ಪಿರೇರಾ ತಮ್ಮ ಭಾವನೆ ಹಂಚಿಕೊಂಡು “ಚಕ್ರಪಾಣಿ ನೃತ್ಯ ಕಲಾಮಂದಿರವೇ ನನ್ನ ಭರತನಾಟ್ಯದ ಮೊದಲ ಹೆಜ್ಜೆ. ಗುರು ಹಾಗೂ ಕಲೆಗೆ ಸಮರ್ಪಣೆಯಿಂದ ಮಾಡಿದ ಸಾಧನೆಯ ಫಲವೇ ಇಂದಿನ ಈ ಗೌರವ. ಭರತನಾಟ್ಯ ಆರಾಧಕರ ಉಸಿರಾಗಲಿ; ಭರತನಾಟ್ಯಕ್ಕೆ…
ಡೊಂಬಿವಲಿ : ಕಲೆ, ಶಿಕ್ಷಣ, ಅನಿಮೇಷನ್ ಹಾಗೂ ಸಮಾಜಮುಖಿ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿರುವ ಕಲಾವಿದ, ಅನಿಮೇಟರ್, ಗುರು ಹಾಗೂ ಅನಿಮೇಷನ್ ಚಿತ್ರ ನಿರ್ದೇಶಕ ಜಯ ಸಾಲಿಯನ್ ಇವರನ್ನು ಡೊಂಬಿವಲಿ ತುಳುವ ಮಹಾಸಭಾ ಘಟಕದ ಸಂಚಾಲಕರಾಗಿ ನೇಮಕ ಮಾಡಲಾಗಿದೆ. ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಮಾಡುತ್ತಿರುವ ಜಯ ಸಾಲಿಯನ್ ಇವರು ಎಂ.ಎಸ್.ಸಿ. (ಅನಿಮೇಷನ್ ಮತ್ತು ವಿಎಫ್‌ಎಕ್ಸ್ – ಗುಜರಾತ್ ವಿಶ್ವವಿದ್ಯಾಲಯ), ಬಿ.ವಿ.ಎ. (ದೃಶ್ಯಕಲೆ – ಕನ್ನಡ ವಿಶ್ವವಿದ್ಯಾಲಯ ಹಂಪಿ), ಎಂ.ಎ. (ಕನ್ನಡ – ಮುಂಬೈ ವಿಶ್ವವಿದ್ಯಾಲಯ), ಎಂ.ಎಫ್.ಎ. (ಫೈನ್ ಆರ್ಟ್ಸ್ – ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿ ಮೈಸೂರು), ಡಿಪ್ಲೊಮಾ ಇನ್ ಆರ್ಟ್ ಎಜುಕೇಷನ್ (ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ ಮುಂಬೈ), ಬಿ.ಎಫ್.ಎ./ಜಿ.ಡಿ. ಆರ್ಟ್ (ಥಾಣೆ ಸ್ಕೂಲ್ ಆಫ್ ಆರ್ಟ್), ಎಟಿಡಿ (ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ ಮುಂಬೈ) ಸೇರಿದಂತೆ ಅನೇಕ ಪದವಿಗಳನ್ನು ಪಡೆದಿದ್ದಾರೆ. ಪ್ರಸ್ತುತ ಎ.ಎಂ. ನಾಯಕ್ ಸ್ಕೂಲ್ ಕಲಾವಿಭಾಗದ ಮುಖ್ಯಸ್ಥರಾಗಿರುವ ಇವರು, ಹಿಂದೆ ಐ.ಟಿ.ಎಂ.…
ಕಾರ್ಕಳ : ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಇವರ ವತಿಯಿಂದ ದಿನಾಂಕ 5 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಮಾರ್ಪಳ್ಳಿಯ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಸದಸ್ಯರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.
ಮೈಸೂರು : ವಿದುಷಿ ಕುಮಾರಿ ವೃಂದಾ ಜಿ. ರಾವ್ ಇವರು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ಮೈಸೂರಿನ ಇವರು ನಡೆಸಿದ 2025ನೇ ಸಾಲಿನ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ 89.83% ನೊಂದಿಗೆ ತೃತೀಯ ರ‍್ಯಾಂಕ್ ಪಡಿದಿರುತ್ತಾರೆ. ಮಂಗಳೂರಿನ ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರದ ಗುರು ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಇವರ ಶಿಷ್ಯೆಯಾಗಿರುವ ಈಕೆ ಕಳೆದ 15 ವರ್ಷಗಳಿಂದ ಈ ಸಂಸ್ಥೆಯಲ್ಲಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾಳೆ. ಉರ್ವದ ಶ್ರೀ ಗಣೇಶ್ ರಾವ್ ಮತ್ತು ಶ್ರೀಮತಿ ಜಯಲಕ್ಷ್ಮೀ ರಾವ್ ದಂಪತಿಯ ಸುಪುತ್ರಿಯಾಗಿರುವ ಈಕೆ ಈಗಷ್ಟೆ ತೃತೀಯ ಬಿ.ಕಾಂ. ಪೂರೈಸಿದ್ದು, ಜತೆಗೆ ಸಿ.ಎಸ್. ಪರೀಕ್ಷೆಯನ್ನೂ ಪ್ರಥಮ ಬಾರಿಯೇ ತೇರ್ಗಡೆ ಹೊಂದಿರುತ್ತಾರೆ. ಇವರು ಪ್ರಸ್ತುತ ಬೆಂಗಳೂರಿನ ಮಹೇಶ್ ವಿ. ಅಂಡ್ ಅಸೋಸಿಯೇಟ್ಸ್ ನಲ್ಲಿ ಸಿ.ಎ.ಯ ಆರ್ಟುಕಲ್ಶಿಪ್ ನಡೆಸುತ್ತಿದ್ದಾರೆ.