Subscribe to Updates
Get the latest creative news from FooBar about art, design and business.
Author: roovari
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-94’ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ‘ನಾಟಕಾಷ್ಟಕ’ದ ಆರನೇದಿನದ ಕಾರ್ಯಕ್ರಮ ದಿನಾಂಕ 31 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಿದ ಶ್ರೀನಿವಾಸ ಸೋಮಯಾಜಿ ಮಾತನಾಡಿ “ಕಲಾ ಪೋಷಕರ ನೆಲೆಯಲ್ಲಿ ‘ಪುರಾಣ ಕಥಾ ಕಲ್ಯಾಣಿ ಆಖ್ಯಾನ’ದಲ್ಲಿ ಪಾತ್ರ ನಿರ್ವಹಿಸಿ ಮನಗೆದ್ದು, ಕಲಾವಿದರ ಶಕ್ತಿಯಾಗಿ ಹೆಸರಾದ ‘ಯಕ್ಷಧಾಮ’ಇದರ ಜನಾರ್ದನ ಹಂದೆ ಹಾಗೂ ಕೋಟ ಸುಬ್ರಾಯ ಆಚಾರ್ ಬಾಲ್ಯದಿಂದಲೂ ಸ್ವತಃ ಕಲಾವಿದರು. ಸಮಾಜದ ಕಲಾವಿದರಿಗಾಗಿ ಹಾಗೂ ಕಲಾ ಸಂಘಟನೆಗಾಗಿ ತಮ್ಮ ದುಡಿಮೆಯ ಒಂದಂಶವನ್ನು ದೇಣಿಗೆಯಾಗಿ ತೆತ್ತು ಸಾಧಕರೆನಿಸಿದವರು. ಇವರನ್ನು ಅಭಿನಂದಿಸುವುದು ಸರ್ವ ಸೂಕ್ತ.” ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜನಾರ್ದನ ಹಂದೆ “ಬಾಲ್ಯದಿಂದಲೂ ನಾಟಕದಲ್ಲಿ ತೊಡಗಿಕೊಂಡದ್ದರಿಂದ ಕಲಾವಿದರ ಬದುಕನ್ನು ಅರ್ಥೈಸಿಕೊಂಡು, ಸಂಘಟನೆಯ ಕಷ್ಟ ನಷ್ಟಗಳ ಬಗ್ಗೆ ಅರಿವು ಇದ್ದುದರಿಂದ ನಮ್ಮ ಸ್ಪಂದನೆ ಅನಿವಾರ್ಯವಾಗಿ ನಡೆದು ಹೋಗುತ್ತದೆ.” ಎಂದರು. ಕಾರ್ಯಕ್ರಮದಲ್ಲಿ…
ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಪ್ರಸ್ತುತ ಪಡಿಸುವ ಆನ್ಲೈನ್ ಸಂಗೀತ ಕಾರ್ಯಾಗಾರವು ದಿನಾಂಕ 18 ಜನವರಿ 2025 ಮತ್ತು 19 ಜನವರಿ 2025ರಂದು ಸಂಜೆ 8-00 ಗಂಟೆಯಿಂದ 9-30 ಗಂಟೆ ತನಕ ವಿದುಷಿ ಎಸ್.ಕೆ. ಮಹತಿಯವರಿಂದ ನಡೆಯಲಿದೆ. ಡಾ. ಎಂ. ಬಾಲಮುರಳೀಕೃಷ್ಣ ಇವರ ‘ಮುರಳಿ ಗಾನಂ’ ಸಂಯೋಜನೆಯಲ್ಲಿ ಕಾರ್ಯಾಗಾರವು ನಡೆಯಲಿದ್ದು, ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ +91 7411916098 ವಿಭು ರಾವ್ ಇವರನ್ನು ಸಂಪರ್ಕಿಸಬಹುದು.
ಹಾಸನ : ಚೈತ್ರೋದಯ ಪ್ರಕಾಶನ ಇವರ ವತಿಯಿಂದ ಶ್ರೀಮತಿ ಲಕ್ಷ್ಮೀದೇವಿ ದಾಸಪ್ಪನವರ ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 05 ಜನವರಿ 2024ರಂದು ಬೆಳಿಗ್ಗೆ 10-30 ಗಂಟೆಗೆ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತ ವಿದ್ವಾಂಸರಾದ ಶ್ರೀ ಪರಮೇಶ್ವರ ವಿ. ಭಟ್ ಇವರು ವಹಿಸಲಿದ್ದು, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ನಾಯಕರಹಳ್ಳಿ ಮಂಜೇಗೌಡ ಇವರು ಉದ್ಘಾಟನೆ ಮಾಡಲಿದ್ದಾರೆ. ಬಿಡುಗಡೆಗೊಳ್ಳಲಿರುವ ಕೃತಿ ‘ಬಿಡಿ ಹೂಗಳು’ ಇದರ ಪರಿಚಯವನ್ನು ಹಿರಿಯ ಸಾಹಿತಿ ಶ್ರೀಮತಿ ಸುಶೀಲಾ ಸೋಮಶೇಖರ್ ಮತ್ತು ‘ಮಹಾನ್ ಚೇತನಗಳಿಗೆ ನಮನಗಳು’ ಎಂಬ ಕೃತಿಯ ಪರಿಚಯವನ್ನು ಹಿರಿಯ ಗಮಕ ವ್ಯಾಖ್ಯಾನಕಾರರಾದ ಕೆ.ಆರ್. ಕೃಷ್ಣಯ್ಯ ಇವರುಗಳು ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಕಲಾಶ್ರೀ ಗಣೇಶ ಉಡುಪ ಮತ್ತು ಶ್ರೀ ದಿಬ್ಬೂರು ರಮೇಶ್ ಇವರಿಂದ ಕವನ ಗಾಯನ ಮತ್ತು ಚಿ.ರಾ. ಸುಧನ್ವ ಎಸ್. ಇವರಿಂದ ಕವನ ವಚನ ನಡೆಯಲಿದೆ.
ಮಂಗಳೂರು : ಮಹಾಲಸ ಕಾಲೇಜ್ ಆಫ್ ವಿಷುವಲ್ ಆರ್ಟ್ ಆಯೋಜಿಸಿದ ‘ಮಂಡಲ ಮತ್ತು ಕೊಲಾಜ್ ಆರ್ಟ್’ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭವು ದಿನಾಂಕ 27 ಡಿಸೆಂಬರ್ 2024ರ ಶುಕ್ರವಾರದಂದು ಕಾಲೇಜಿನಲ್ಲಿ ನಡೆಯಿತು. ಸರಳವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಮಹಾಲಸ ಶಿಕ್ಷಣ ಸಮಿತಿ ನಿರ್ದೇಶಕ ಬಾಬು ರಾವ್, ಕಾಲೇಜಿನ ಸ್ಥಾಪಕ ತಾರಾನಾಥ ಪೈ, ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ, ಪ್ರದರ್ಶನದ ನಿರ್ದೇಶಕ ಸೈಯದ್ ಆಸಿಫ್ ಅಲಿ ಹಾಗೂ ಕಾಲೇಜಿನ ಪ್ರಾಂಶುಪಾಲ ಮೋಹನ್ ಕುಮಾರ್ ಉಪಸ್ಥಿತರಿದ್ದರು. ಪ್ರದರ್ಶನದಲ್ಲಿ ನಿರುಪಯುಕ್ತ ಪೇಪರ್, ಮ್ಯಾಗಝಿನ್ ಚೂರುಗಳಿಂದ ಮೂಡಿ ಬಂದ ಪ್ರಧಾನಿ ನರೇಂದ್ರ ಮೋದಿ, ಅಬ್ದುಲ್ ಕಲಾಂ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಹಂಪಿ ಕಲ್ಲಿನರಥ, ವಿವಿಧ ಪ್ರಾಣಿಗಳು ಸಹಿತ ಸುಮಾರು 35ಕ್ಕೂ ಹೆಚ್ಚಿನ ಕಲಾಕೃತಿಗಳು ಆಕರ್ಷಿಸುತ್ತಿವೆ. ಅದೇ ರೀತಿ, ಸಾಂಪ್ರದಾಯಿಕ ಮಂಡಲ ಕಲೆಯ ಸುಮಾರು 50ರಷ್ಟು ಚಿತ್ರಕಲೆಗಳು ಇಲ್ಲಿದೆ. ಲ್ಯಾಂಡ್‌ಸ್ಕೇಪ್, ಪ್ರಾಣಿಗಳು, ಹೂವುಗಳು ಸಹಿತ ಡಾಟ್ ಪೈಂಟಿಂಗ್…
ಉಡುಪಿ : ತುಳುಕೂಟ ಉಡುಪಿ (ರಿ.) ಇದರ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರ ಸಹಯೋಗದೊಂದಿಗೆ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಇವರ ಸ್ಮರಣಾರ್ಥ ‘ತುಳು ನಾಟಕ ಹಬ್ಬ’ ಕಾರ್ಯಕ್ರಮವನ್ನು ದಿನಾಂಕ 05 ಜನವರಿ 2025ರಿಂದ 10 ಜನವರಿ 2025ರವೆರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 05 ಜನವರಿ 2025ರಂದು ಸಂಜೆ 5-00 ಗಂಟೆಗೆ ತುಳುಕೂಟದ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ಶಾಸಕರಾದ ಶ್ರೀ ಯಶ್ ಪಾಲ್ ಎ. ಸುವರ್ಣ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಇವರಿಂದ ರವಿರಾಜ್ ಎಚ್.ಪಿ. ನಿರ್ದೇಶನದಲ್ಲಿ ‘ತುದೆ ದಾಂಟಿ ಬೊಕ್ಕ’ ನಾಟಕ ಪ್ರದರ್ಶನ, ದಿನಾಂಕ 06 ಜನವರಿ 2025ರಂದು ಉಡುಪಿ ಮಲ್ಪೆಯ ಕರಾವಳಿ ಕಲಾವಿದರು (ರಿ.) ಇವರಿಂದ ಅಕ್ಷಯ್ ಆರ್. ಶೆಟ್ಟಿ ರಚಿಸಿರುವ ನಾಗರಾಜ್ ವರ್ಕಾಡಿ ನಿರ್ದೇಶನದಲ್ಲಿ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಾರ್ಷಿಕೋತ್ಸವ ‘ಆಂಜನೇಯ-56’ ಕಾರ್ಯಕ್ರಮವು ದಿನಾಂಕ 25 ಡಿಸೆಂಬರ್ 2024ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು. ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ ಇವರಿಗೆ ‘ಯಕ್ಷಾಂಜನೇಯ ಪ್ರಶಸ್ತಿ’ ಹಾಗೂ ಖ್ಯಾತ ಭಾಗವತೆ ಭವ್ಯಶ್ರೀ ಕುಲ್ಕುಂದ ಇವರಿಗೆ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ‘ವಿಂಶತಿ ಗೌರವ’ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಆಶೀವರ್ಚನ ನೀಡಿದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ವೇದಮೂರ್ತಿ ಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ “ಕಳೆದ 56 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಂಜನೇಯ ಯಕ್ಷಗಾನ ಕಲಾ ಸಂಘದ ಸೇವೆ ಇನ್ನಷ್ಟು ಪಸರಿಸಲಿ. ಮಹಿಳಾ ತಂಡವನ್ನು ಸ್ಥಾಪಿಸಿ ಕಳೆದ 20 ವರ್ಷಗಳಿಂದ ಮುನ್ನಡೆಯುತ್ತಿರುವುದು ಯಕ್ಷಗಾನ ಕ್ಷೇತ್ರದ ಬಹುದೊಡ್ಡ ಸಾಧನೆಯಾಗಿದೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕಕ್ಕೆ ವಿಶೇಷ ಸಂಭ್ರಮದ ಕ್ಷಣ. ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶಿ ರಾಯಭಾರಿ ಡಾ. ಮುರಲೀ ಮೋಹನ್ ಚೂಂತಾರ್ ಇವರ ಮನೆ ‘ಸರೋಜಿನಿ’ಯಲ್ಲಿ ‘ಜೂರಿಕ್ ನಲ್ಲಿ ಕನ್ನಡ ಡಿಂಡಿಮ’ ಎಂಬ ಸಂಭ್ರಮದ ಕಾರ್ಯಕ್ರಮವನ್ನು ದಿನಾಂಕ 26 ಡಿಸೆಂಬರ್ 2024ರಂದು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಸ್ವಿಟ್ಜರ್ಲೆಂಡ್ ಜೂರಿಕ್ ಕನ್ನಡ ಕೂಟದ ಸಂಚಾಲಕರಾದ ಡಾ. ಪ್ರಭಿತಾ ಇವರು ಆಗಮಿಸಿದ್ದರು. ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಆಗಮಿಸಿದ್ದ ಇವರು ಹಿಂತಿರುಗುವ ಹಾದಿಯಲ್ಲಿ ದ.ಕ. ಜಿಲ್ಲಾ ಮಂಗಳೂರು ತಾಲೂಕು ಘಟಕದ ಪರಿಷತ್ತಿಗೆ ಭೇಟಿ ನೀಡಿದರು. ನಗರದ ಬಿಜೈ ‘ಸರೋಜಿನಿ’ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರತ್ನಾವತಿ ಜೆ. ಬೈಕಾಡಿಯವರು ಪ್ರಾರ್ಥಿಸಿ, ಕಾರ್ಯಕ್ರಮವನ್ನು ಪ್ರಾಯೋಜಿಸಿ ಆತಿಥ್ಯ ವಹಿಸಿಕೊಂಡಿದ್ದ ಡಾ. ಮುರಲೀ ಮೋಹನ್ ಚೂಂತಾರ್ ಇವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪರಿಷತ್ತಿನ ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.…
ಮಂಗಳೂರು : ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ, ಕೆನರಾ ಕಲ್ಚರಲ್ ಅಕಾಡೆಮಿ ಮತ್ತು ಕಲಾಭಿ (ರಿ.) ಮಂಗಳೂರು ಜಂಟಿಯಾಗಿ ಆಯೋಜಿಸುವ ರಂಗಸಂಗಾತಿ, ಅಸ್ತಿತ್ವ (ರಿ.) ಮತ್ತು ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಹಭಾಗಿತ್ವದಲ್ಲಿ ಶ್ರೀ ಸದಾನಂದ ಸುವರ್ಣರ ಗೌರವಾರ್ಥ ‘ಸದಾನಂದ ಸುವರ್ಣ ನಾಟಕೋತ್ಸವ 2025’ವನ್ನು ದಿನಾಂಕ 06 ಜನವರಿ 2025 ಮತ್ತು 07 ಜನವರಿ 2025ರಂದು ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 06 ಜನವರಿ 2025ರಂದು ಭವಭೂತಿ ರಚನೆ ಹಾಗೂ ಅಕ್ಷರ ಕೆ.ವಿ. ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಮಾಲತೀ ಮಾಧವ’ ಮತ್ತು ದಿನಾಂಕ 07 ಜನವರಿ 2025ರಂದು ಅಭಿರಾಮ್ ಭಡ್ಕಮ್ಕರ್ ರಚಿಸಿರುವ ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿರುವ ವಿದ್ಯಾನಿಧಿ ವನಾರಸೆ ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಅಂಕದ ಪರದೆ’ ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 9632794477.
ಮಡಿಕೇರಿ. ಕನ್ನಡ ನಾಡಿನ ಹಿರಿಯ ಸಾಹಿತಿ ಶಿಶು ಸಾಹಿತ್ಯದ ಪಿತಾಮಹ “ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೊ” ಕೊಡಗಿನ ನಾಡಗೀತೆಯ ರಚನಾಕಾರ ಮಡಿಕೇರಿ ಸೆಂಟ್ರಲ್ ಹೈಸ್ಕೂಲ್ ನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಏಕೈಕ ಭಾರತೀಯ ಕನ್ನಡ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ, ಬ್ರಿಟಿಷರ ಕಾಲದಲ್ಲಿ ಕೊಡಗಿನ ಶಾಲಾ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ ಅಪ್ರತಿಮಾ ಸಂಘಟಕ, ದಿ. ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಲುವಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ದಿನಾಂಕ 06 ಜನವರಿ 2025ರ ಸೋಮವಾರ ಬೆಳಿಗ್ಗೆ ಘಂಟೆ 10.30ಕ್ಕೆ ಮಡಿಕೇರಿಯ ಜೂನಿಯರ್ ಕಾಲೇಜು ಆವರಣದ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಕರೆಯಲಾಗಿದೆ. ಈ ಸಭೆಯಲ್ಲಿ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಚರ್ಚಿಸಬೇಕಾಗಿದೆ. ಶ್ರೇಷ್ಠ ಶಿಕ್ಷಕರಾದ ಹಿರಿಯ ತಲೆಮಾರಿನ ಹಿರಿಯ ಸಾಹಿತಿಗಳಾದ ಪಂಜೆ ಮಂಗೇಶರಾಯರ 150ನೇ ವರ್ಷಾಚರಣಾ ಕಾರ್ಯಕ್ರಮವನ್ನು ಯಶಸ್ವಿ ಪೂರ್ಣವಾಗಿ ನಡೆಸಲು ತಮ್ಮ ಪೂರ್ಣ…
ಬೆಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವು ದಿನಾಂಕ 29 ಡಿಸೆಂಬರ್ 2024ರ ಭಾನುವಾರದಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಹಿರಿಯ ಸಾಹಿತಿ ಯೂಸಫ್. ಹೆಚ್ .ಬಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವನ್ನು ಹಿರಿಯ ಸಾಹಿತಿ ಹಾಗೂ ದೂರದರ್ಶನದ ವಿಶ್ರಾಂತ ಅಧಿಕಾರಿಯಾದ ರಾ. ಸು. ವೆಂಕಟೇಶ ಉದ್ಘಾಟಿಸಿದರು. ಪತ್ರಕರ್ತ ಸಿನಾನ್ ಇಂದಬೆಟ್ಟು ಕುವೆಂಪು ಮತ್ತು ವೈಚಾರಿಕತೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಡಾ ಸುರೇಶ್ ಬಾಬು ಬಿ. ಎನ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡರು. ಎಂ.ಎಂ ಭಾಷಾ ನಂದಿ ಸಂದೇಶ ಭಾಷಣ ಮಾಡಿದರು ಮಾಡಿದರು. ಡಾ.ಶಾಂತ ಜಯಾನಂದ್, ಕಾವ್ಯ ಎಸ್.ಟಿ ಚಂದ್ರಪ್ಪ, ಕುಮಾರಿ ಗೌತಮಿ ಜೈನ್, ಹಾಶಿಂ ಬನ್ನೂರು, ಅಮಿತಾ ಅಶೋಕ್ ಪ್ರಸಾದ್, ಬಸವರಾಜ್, ಸರಸ್ವತಿ ಎಲ್. ಮಂಜು ಹಾಗೂ ಮಂಜು ಟಿ. ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ಮತ್ತು ಸಾಂಸ್ಕೃತಿಕ ಕಲಾವಿದರು ಸಾಹಿತ್ಯದ…