Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : “ರಂಗಚಾವಡಿ” ಮಂಗಳೂರು ಇದರ ಆಶ್ರಯದಲ್ಲಿ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ಸುರತ್ಕಲ್ ಸಹಯೋಗದೊಂದಿಗೆ ರಂಗಚಾವಡಿ ವರ್ಷದ ಹಬ್ಬ ಹಾಗೂ ರಂಗಚಾವಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 03-12-2023 ರಂದು ಸುರತ್ಕಲ್ಲಿನ ಬಂಟರ ಭವನದಲ್ಲಿ ಜರುಗಿತು. ಖ್ಯಾತ ರಂಗಕರ್ಮಿ, ನಾಟಕ ರಚನೆಕಾರ-ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ದಂಪತಿಯನ್ನು ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರಿಗೆ ‘ರಂಗಚಾವಡಿ-2023’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉದ್ಘಾಟನೆ ನೆರವೇರಿಸಿ ಮಾತಾಡಿದ ಹೇರಂಬ ಇಂಡಸ್ಟ್ರೀಸ್ ಮುಂಬೈ ಇದರ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಅವರು, “ರಂಗಚಾವಡಿ ಸಂಘಟನೆ ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದು ಶ್ಲಾಘನೀಯ ವಿಚಾರ. ಇಂದು ಸನ್ಮಾನಿಸಲ್ಪಟ್ಟಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ಸಾಧನೆ ಹಾಗೂ ಮಹಾ ವ್ಯಕ್ತಿತ್ವ ಮೆಚ್ಚುವಂತದ್ದು. ರಂಗಚಾವಡಿ ಮಂಗಳೂರು ಸಂಸ್ಥೆ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತಿದೆ. ಅತ್ಯಂತ ಯೋಗ್ಯ ವ್ಯಕ್ತಿಯನ್ನು ಸನ್ಮಾನಿಸಿರುವುದು ಖುಷಿ ತಂದಿದೆ. ದೇವರು ಕೊಡಿಯಾಲ್ ಬೈಲ್…
ಮುಡಿಪು : ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಯಕ್ಷ ಕಲಾವಿದರ ಸ್ವಗತ ‘ಯಕ್ಷಾಯಣ’ ಸರಣಿ ಕಾರ್ಯಕ್ರಮದ ಉದ್ಘಾಟನೆ ಮಂಗಳೂರು ವಿವಿಯ ಯಕ್ಷಗಾನ ಕಲಾಕೇಂದ್ರದಲ್ಲಿ ದಿನಾಂಕ 01-12-2023ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ “ಕಲಾವಿದನ ಬದುಕು, ಯಕ್ಷಗಾನ ಕಟ್ಟಿಕೊಡುವ ಹಾಗೂ ಅದನ್ನು ಮುಂದಿನ ಪರಂಪರೆಗೆ ದಾಟಿಸುವ ಪ್ರಯತ್ನವನ್ನು ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರವು ದಾಖಲೀಕರಣದ ಮೂಲಕ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಕಲಾವಿದರ ಸ್ವಗತದಿಂದ ಸಾಂಸ್ಕೃತಿಕ ಚರಿತ್ರೆ ಅನಾವರಣಗೊಳ್ಳಲಿದೆ. ಯಕ್ಷಗಾನ ಸ್ಥಳೀಯವಾಗಿ ನಮ್ಮ ಕರಾವಳಿಯಲ್ಲಿ ಹುಟ್ಟಿ ಬೆಳೆದ ಕಲೆಯಾದರೂ ಯಕ್ಷಗಾನ ಅದೊಂದು ರಾಷ್ಟ್ರೀಯ ಕಲೆ. ದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿರುವ ಯಕ್ಷಗಾನ ಬೆಳೆಯುವುದಕ್ಕೆ ಅನೇಕ ಕಲಾವಿದರ ಕೊಡುಗೆಯೂ ಇದೆ. ಯಕ್ಷಗಾನ ರಂಗಕ್ಕೆ ಡಾ.ಪ್ರಭಾಕರ ಜೋಶಿಯರ ಕೊಡುಗೆ ಅಪಾರವಾಗಿದ್ದು, ಹಲವು ದಶಕಗಳ ಯಕ್ಷಪಯಣದ…
ದೇವರನ್ನು ಕಾಣಲು ತಪಸ್ಸು ಮಾಡಬೇಕಾಗಿಲ್ಲ. ಕಾಶಿ, ಕೈಲಾಸ, ಮಂದಿರ, ಬಸದಿ, ದರ್ಗಾಗಳಿಗೆ ಹೋಗಬೇಕಾಗಿಲ್ಲ. “ದಿವ್ಯಾಂಗ ಪ್ರತಿಭೆಗಳಿರುವ ಬಿರುಮಲೆ ಬೆಟ್ಟದಲ್ಲಿ ಇರುವ ‘ಪ್ರಜ್ಞಾಶ್ರಮ’ಕ್ಕೆ ಹೋದರೆ ಸಾಕು. ಅಲ್ಲಿ ದೇವರಂಥ ‘ಪ್ರಜ್ಞೆಯ ಬೆಳಕು’ಗಳಿವೆ. ಡಿಸೆಂಬರ್ 03 ‘ವಿಶ್ವ ವಿಕಲಚೇತನರ ದಿನ’ ನಾವೆಲ್ಲ ಅಂಗಾಂಗ ಸರಿ ಇದ್ದು ಹುಟ್ಟಿದ್ದೇವೆ.. ಆದರೂ ‘ವಿವೇಕ, ಆ-ನಂದದಾ ಬೆಳಕು ಇನ್ನೂ ಬೆಳಗಿಲ್ಲ.’ ಯಾವುದೋ ಕಾರಣದಿಂದ ಭಿನ್ನವಾಗಿ, ತಾಯಿಯ ಗರ್ಭದಿಂದ ಈ ಲೋಕದ ಬೆಳಕು ಕಂಡ ಮಗು, ಕಣ್ಣು, ಕಿವಿ, ಬಾಯಿ ಬಾರದೆ, ನಡೆಯಲು ಕಾಲಿಲ್ಲದೆ…ಬರೆಯಲು-ದುಡಿಯಲು ಕೈಗಳಿಲ್ಲದೆ, ಎಲ್ಲಾ ಇದ್ದು ಪ್ರಜ್ಞೆಯೇ ಇಲ್ಲದ ಮಗುವನ್ನು “ತನಗೆ ವರ ಎಂದು ಕಾಣುವ ತಾಯಿ ಕ್ಷಮಯಾಧರಿತ್ರಿ.” ಒಂದು ಕಾಲದಲ್ಲಿ ಅಂತಹ ಮಕ್ಕಳು ಶಾಪ ಎಂದು ಭಾವಿಸಿ ಕತ್ತಲ ಕೋಣೆಯೊಳಗೆ, ಕೈ-ಕಾಲುಗಳಿಗೆ ಸರಪಳಿಹಾಕಿ ಕೂಡಿಟ್ಟದ್ದೂ ಇದೆ. ಆದರೆ, ಕಾಲ ಬದಲಾಗಿದೆ. ವಿಶ್ವ ಸಂಸ್ಥೆ ಭಿನ್ನ ರೀತಿಯಲ್ಲಿ ಹುಟ್ಟಿದ ಮಗುವೂ ರಾಷ್ಟ್ರದ-ವಿಶ್ವದ ಆಸ್ತಿ ಎಂದು ಪರಿಗಣಿಸಿ, 03-12-1992ರಿಂದ “ವಿಶ್ವ ಅಂಗವಿಕಲರ ದಿನ” (International days of persons…
ಬೆಂಗಳೂರು : ರಂಗ ವಿಸ್ಮಯ ನಾಟಕ ತಂಡವು ಪ್ರತಿ ಭಾನುವಾರ ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ 18ನೇ ಕ್ರಾಸ್, ಬಸ್ ನಿಲ್ದಾಣದ ಹಿಂಭಾಗ ಮಲ್ಲೇಶ್ವರದ ವಿಸ್ಮಯ ಅಂಗಳದಲ್ಲಿ, ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣ ಇಡೀ ದಿನ ‘ಅಭಿನಯ ತರಬೇತಿ’ ನೀಡುತ್ತಿದೆ. ಈ ಶಿಕ್ಷಣ ಮುಜುಗರ, ನಾಚಿಕೆ, ಸಂಕೋಚ ಹಾಗೂ ಅಂಜಿಕೆಗಳನ್ನು ಹೋಗಲಾಡಿಸಿ ವಾಕ್ಚಾತುರ್ಯ ಬೆಳೆಸುವುದಲ್ಲದೆ, ಕನ್ನಡ ಭಾಷಾಜ್ಞಾನ, ನೆನಪಿನ ಶಕ್ತಿ ಮತ್ತು ಆಲೋಚನಾ ಮಟ್ಟವನ್ನು ಹೆಚ್ಚಿಸಲಿದೆ. ಇದರೊಂದಿಗೆ, ಅಭಿನಯದ ಎಲ್ಲಾ ಆಯಾಮಗಳಲ್ಲಿ ತರಬೇತಿ ನೀಡಲಾಗುವುದು. ಯಾವುದೇ ವಯಸ್ಸಿನ ಆಸಕ್ತರು ಇದರಲ್ಲಿ ಭಾಗವಹಿಸಬಹುದಾಗಿದೆ. ಇನ್ನಿತರ ವಿವರಗಳಿಗೆ ನಿರ್ದೇಶಕರಾದ ಅ.ನಾ.ರಾವ್ ಜಾದವ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಕರೆಮಾಡಿ ಬನ್ನಿ. ಹಾಗೇ ಇನ್ನಿತರ ಆಸಕ್ತರಿಗೂ ತಿಳಿಸಿ – ಸಂಪರ್ಕ: ಮೊ.9880841290 / 8951656099. ರಂಗ ವಿಸ್ಮಯ : ಹೊಸ ಪ್ರತಿಭೆಗಳನ್ನು ರಂಗಕ್ಕೆ ತರುವ ಸಲುವಾಗಿಯೇ ರಂಗವಿಸ್ಮಯ ಪ್ರತಿ ಭಾನುವಾರ ವಿದ್ಯಾರ್ಥಿಗಳಿಗೆ ಅಭಿನಯ ತರಬೇತಿ ನೀಡುತ್ತಿದೆ. ಭಾಷೆ ಮತ್ತು ಅದರ ಬಳಕೆಗೆ ಹೆಚ್ಚು ಪ್ರಾಶಸ್ತ್ಯ ನೀಡಿ, ಅಭಿನಯದ ವಿವಿಧ…
ಬಂಟ್ವಾಳ : ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕದ ವತಿಯಿಂದ ವಿಶ್ವಶಾಂತಿಗಾಗಿ ಸಾಮಾಜಿಕ ಸ್ವಚ್ಛತಾ ಅಭಿಯಾನ ಎಂಬ ವಿನೂತನ ಕಾರ್ಯಕ್ರಮ ಬಿ.ಸಿ. ರೋಡಿನ ಕನ್ನಡ ಭವನದಲ್ಲಿ ದಿನಾಂಕ 02-12-2023ರಂದು ಉದ್ಘಾಟನೆಗೊಂಡಿದೆ. ಕುಮಾರ ಶಿವಕುಮಾರ್ ಬೋಳಂತೂರು ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು “ಪರಿಸರ ಸ್ವಚ್ಛತೆಯಂತೆ ಸಾಮಾಜಿಕ ಸ್ವಚ್ಛತೆಯನ್ನೂ ಮಾಡಲೇಬೇಕಾದ ಕಾಲಘಟ್ಟವಿದು. ಪರಸ್ಪರ ಹೊಂದಾಣಿಕೆ, ಸ್ನೇಹ, ಸಹಜೀವನ, ಸಹಕಾರ, ಪ್ರೀತಿ, ಸಮಯ ಪಾಲನೆ ಮುಂತಾದ ಬದುಕಿನ ಅನಿವಾರ್ಯ ಅಂಶಗಳ ಕೊರತೆಯನ್ನು ನೀಗಿ, ಸದ್ಭಾವಪೂರ್ಣ, ಶಾಂತ ಮನಸ್ಕ ಸಮಾಜ ನಿರ್ಮಾಣದಲ್ಲಿ ಸಾಮಾಜಿಕ ಸ್ವಚ್ಛತಾ ಅಭಿಯಾನ ಬೆಂಬಲವಾಗಿ ಕೂಡಿ ಬರಲಿ” ಎಂದರು. ಇದೇ ಸಂದರ್ಭದಲ್ಲಿ ಸಾಹಿತಿ ಭಾಸ್ಕರ ಅಡ್ವಳ ವಿರಚಿತ ‘ಘಮ ಘಮಿಸುವ ಗುಟ್ಟು’ ಎಂಬ ಜೀವನ ಮೌಲ್ಯಗಳ ಚಿಂತನಾ ಕೃತಿಯನ್ನು ಓಜಾಲ ಸ.ಹಿ.ಪ್ರಾ ಶಾಲಾ 7ನೇ ತರಗತಿ ವಿದ್ಯಾರ್ಥಿನಿ, ಎಳೆಯ ಸಾಹಿತಿ ಕುಮಾರಿ ಶ್ರುತಿಕಾ ಬಾಕಿಮಾರು ಅನಾವರಣಗೊಳಿಸಿದರು. ಈ ಕೃತಿಯು ಸಾಮಾಜಿಕ ಸ್ವಚ್ಛತಾ ಅಭಿಯಾನ…
ಮುಂಬೈ : ಮುಂಬೈ ವಿವಿ ಕನ್ನಡ ವಿಭಾಗ, ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬೈ ಇವರ ಸಂಯುಕ್ತ ಆಯೋಜನೆಯಲ್ಲಿ ಮುಂಬಯಿಯ ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್ಸಿನಲ್ಲಿರುವ ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ. ನಾಯಕ್ ಭವನದಲ್ಲಿ ‘ವ್ಯಾಸರಾಯ ಬಲ್ಲಾಳ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮವು ದಿನಾಂಕ 01-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವ್ಯಾಸರಾಯ ಬಲ್ಲಾಳ ಚೊಚ್ಚಲ ‘ಕಥಾ ಪ್ರಶಸ್ತಿ’ ಸ್ವೀಕರಿಸಿದ ಹಿರಿಯ ಸಾಹಿತಿ ಪ್ರೊ. ಕೃಷ್ಣಮೂರ್ತಿ ಹನೂರ ಅವರು ಅಂದು ‘ಕತೆಗಾರರಾಗಿ ವ್ಯಾಸರಾಯ ಬಲ್ಲಾಳ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. “ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ ಅವರಂತಹ ದೊಡ್ಡ ದೊಡ್ಡ ಲೇಖಕರೆಲ್ಲ ತಮ್ಮ ಬರಹಗಳಲ್ಲಿ ಬದುಕಿನ ಪ್ರಯಾಣದ ಕುರಿತಾಗಿ ನಿರಂತರವಾಗಿ ಬರೆಯುತ್ತಾರೆ. ಬಲ್ಲಾಳರು ತಮ್ಮ ಕೃತಿಗಳಲ್ಲಿ ತಮ್ಮ ತೊಳಲಾಟಗಳನ್ನು, ಪಯಣವನ್ನು, ಅನುಭವಗಳನ್ನು ಬರೆಯುತ್ತಾ ಅದರ ಮೂಲಕ ಓದುಗರನ್ನು ಜಾಗೃತಗೊಳಿಸುವ ಮತ್ತು ಬದುಕಿನ ಪಥದಲ್ಲಿ ಒಳ್ಳೆಯದನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಾರೆ. ಕ್ಷಮಿಸುವುದರಲ್ಲಿಯೇ ಘನತೆ, ದೊಡ್ಡಸ್ತಿಕೆ ಇದೆಯೆಂಬ ಭಾವ ಅವರ ಎಲ್ಲಾ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆಯಲ್ಲಿ ಇರುವ ಪರಿಷತ್ತಿನ ಕೃಷ್ಣರಾಜ ಮಂದಿರದಲ್ಲಿ ಹಮ್ಮಿಕೊಂಡ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 03-12-2023ರಂದು ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಎಲ್ಲ ಧರ್ಮಗಳ ಗುರಿಯೂ ಒಂದೇ. ಕೃಷ್ಣ-ಕ್ರೈಸ್ತರ ವಿಚಾರಗಳಲ್ಲಿ ವ್ಯತಾಸಗಳಿಲ್ಲ. ಅದರಂತೆ ಸಾಹಿತ್ಯಕ್ಕೂ ಯಾವುದೇ ಗಡಿ ಎನ್ನುವುದಿಲ್ಲ. ಕನ್ನಡ ಭಾಷೆಗೆ ಕ್ರೈಸ್ತ ಧರ್ಮದ ಕೊಡುಗೆ ಅಪಾರ. ಕನ್ನಡಕ್ಕೆ ನಿಘಂಟು ಸೇರಿದಂತೆ ಅನೇಕ ಐತಿಹಾಸಿಕ ಕೊಡುಗೆಯನ್ನು ನೀಡುವ ಮೂಲಕ ಭಾಷೆಗೆ ಧರ್ಮ ಅಡ್ಡಿಯಲ್ಲ ಎನ್ನುವುದು ಸ್ಪಷ್ಟ. ಫಾದರ್ ಚೌರಪ್ಪ ಸೆಲ್ವರಾಜ್ ಸಾಹಿತ್ಯಿಕ, ಸಾಂಸ್ಕೃತಿಕ, ಬಳಗದಲ್ಲಿ ‘ಚಸರಾ’ ಎಂದೇ ಪರಿಚಿತರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚಸರಾ ಚರ್ಚ್ಗಳಲ್ಲಿ ಕನ್ನಡ ಬಳಕೆ, ಕನ್ನಡಿಗರಿಗೆ ದೊರೆಯಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ಮಾಡಿದವರು. ಕನ್ನಡಪರ ಕಾಳಜಿ ಮತ್ತು ಜನಪರ ಕಾಳಜಿಯಿಂದ ಚಸರಾ ಪ್ರಗತಿಪರ ಹೋರಾಟಗಾರರಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇವರ ವತಿಯಿಂದ 2023-24ನೇ ಸಾಲಿನ ತಿಂಗಳ ಸರಣಿ ತಾಳಮದ್ದಳೆಯ ಕೂಟವು ಪಾರ್ತಿಸುಬ್ಬ ವಿರಚಿತ ‘ಸೀತಾ ಕಲ್ಯಾಣ’ ಎಂಬ ಆಖ್ಯಾನದೊಂದಿಗೆ ದಿನಾಂಕ 25-11-2023ರಂದು ಪುತ್ತೂರು ಸಮೀಪದ ಭಾರತಿ ನಗರದ ಬನ್ನೂರು ಇಲ್ಲಿರುವ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಇರ್ದೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಮಾ.ಪರೀಕ್ಷಿತ್ ಮತ್ತು ಮಾ.ಅಭಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ದಶರಥ), ಜಯರಾಮ ದೇವಸ್ಯ (ವಿಶ್ವಾಮಿತ್ರ), ಶುಭಾ ಅಡಿಗ (ಜನಕ), ಮಾಂಬಾಡಿ ವೇಣುಗೋಪಾಲ್ ಭಟ್ (ಪರಶುರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು ಮತ್ತು ಗುಡ್ಡಪ್ಪ ಬಲ್ಯ (ಶ್ರೀ ರಾಮ), ಚಂದ್ರಶೇಖರ ಭಟ್ ಬಡೆಕ್ಕಿಲ (ಗೌತಮ), ದುಗ್ಗಪ್ಪ ನಡುಗಲ್ಲು (ಅಹಲ್ಯೆ) ಹಾಗೂ ಅಚ್ಯುತ ಪಾಂಗಣ್ಣಾಯ (ಶತಾನಂದ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಚಂದ್ರಶೇಖರ ಭಟ್ ಬಡೆಕ್ಕಿಲ ಪ್ರಾಯೋಜಿಸಿದರು
ಉಡುಪಿ : ಸುಹಾಸಂ ಉಡುಪಿ ಮತ್ತು ಕಲ್ಕೂರ ಪ್ರತಿಷ್ಠಾನ (ರಿ.), ಮಂಗಳೂರು ವತಿಯಿಂದ ಲೇಖಕ ಎಚ್. ಶಾಂತರಾಜ ಐತಾಳರ ‘ಬಿಸಿಲುದುರೆಯ ಬೆನ್ನೇರಿದವ’ (ಆತ್ಮಕಥನ) ಮತ್ತು ‘ಬಾಲಂಗೋಚಿ’ (ಮಂದಹಾಸ ಮೂಡಿಸುವ ಮಾತ್ರೆಗಳು) ಎರಡು ಕೃತಿಗಳನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಿದಿಯೂರು ಹೊಟೇಲಿನ ರೂಫ್ ಟಾಪ್ ನಲ್ಲಿ ದಿನಾಂಕ 02-12-2023 ಶನಿವಾರದಂದು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಭುವನ ಪ್ರಸಾದ್ ಹೆಗಡೆ ಮಣಿಪಾಲ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸುಹಾಸಂ ಕಾರ್ಯದರ್ಶಿ ಎಚ್.ಗೋಪಾಲ ಭಟ್ ಉಪಸ್ಥಿತರಿದ್ದರು. ಲೇಖಕ ದಂಪತಿಗಳನ್ನು ಹಾಗೂ ಶಾಸಕ ಗುರ್ಮೆ ಸುರೇಶ ಶೆಟ್ಟಿಯವರನ್ನು ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ ಇವರು ಅಭಿನಂದಿಸಿ, ಗೌರವಿಸಿದರು. ಡಾ. ಸಂಧ್ಯಾ ಅಡಿಗ ಕುಂದಾಪುರ ಪ್ರಾರ್ಥಿಸಿ, ಎಚ್. ಶಾಂತರಾಜ್ ಐತಾಳ್ ಸ್ವಾಗತಿಸಿ, ಕೃತಿ ಪರಿಚಯವನ್ನು ವಿದ್ಯಾ ಪ್ರಸಾದ್ ಉಡುಪಿ ಮಾಡಿದರು. ಡಾ. ಸಪ್ಪಾ ಜೆ. ಉಕ್ಕಿನಡ್ಕ ವಂದಿಸಿ, ಸುಹಾಸಂ ಶ್ರೀನಿವಾಸ ಉಪಾಧ್ಯ ನಿರೂಪಿಸಿದರು.
ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ, ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಈ ಬಾರಿಯ ‘ಕಿಶೋರ ಯಕ್ಷಗಾನ ಸಂಭ್ರಮ -2023’ವು ಬ್ರಹ್ಮಾವರದ ಬಂಟರ ಸಭಾಭವನದ ಮುಂಭಾಗದಲ್ಲಿ ದಿನಾಂಕ 29-11-2023ರಂದು ಉದ್ಘಾಟನೆಗೊಂಡಿತು. ಉಡುಪಿ ಶಾಸಕರೂ, ಯಕ್ಷಶಿಕ್ಷಣ ಟ್ರಸ್ಟ್ ಅಧ್ಯಕ್ಷರೂ ಆದ ಯಶ್ ಪಾಲ್ ಎ. ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭವನ್ನು ಡಾ. ಜಿ. ಶಂಕರ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಇರ್ಮಾಡಿ ತಿಮ್ಮಪ್ಪ ಹೆಗ್ಡೆ, ರಘುರಾಮ ಮಧ್ಯಸ್ಥ, ಬಿ.ಭುಜಂಗ ಶೆಟ್ಟಿ, ಬಿ.ಎನ್.ಶಂಕರ ಪೂಜಾರಿ, ಪ್ರತಾಪ್ ಹೆಗ್ಡೆ, ಬಿರ್ತಿ ರಾಜೇಶ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಧನಂಜಯ ಅಮೀನ್, ಜ್ಞಾನ ವಸಂತ ಶೆಟ್ಟಿ, ಎಂ.ಗಂಗಾಧರ ರಾವ್, ಶ್ರೀಮತಿ ಉಮಾ, ಕೇಶವ ಕುಂದರ್, ನಿತ್ಯಾನಂದ ಬಿ.ಆರ್. ಅಭ್ಯಾಗತರಾಗಿ ಭಾಗವಹಿಸಿದರು. ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ ಮುರಲಿ ಕಡೆಕಾರ್ ಪ್ರಸ್ತಾವನೆಗೈದರು. ಗಣೇಶ್ ಬ್ರಹ್ಮಾವರ…