Subscribe to Updates
Get the latest creative news from FooBar about art, design and business.
Author: roovari
ಮುಡಿಪು: ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ 2024-25ನೇ ಸಾಲಿನ ಯಕ್ಷನಾಟ್ಯ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 19 ಡಿಸೆಂಬರ್ 2024ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿ. ವಿ. ಕುಲಸಚಿವ ರಾಜು ಮೊಗವೀರ ಮಾತನಾಡಿ “ಹಿಂದೆ ಪುರಾಣ ಜ್ಞಾನವನ್ನು ಜನಸಾಮಾನ್ಯರಿಗೂ ತಲುಪಿಸುವಲ್ಲಿ ಯಕ್ಷಗಾನವು ಮಹತ್ತರವಾದ ಪಾತ್ರ ವಹಿಸಿತ್ತು. ಯಕ್ಷಗಾನವು ಕುಣಿತ, ಸಂಗೀತ, ಬಣ್ಣಗಾರಿಕೆ, ವೇಷಭೂಷಣ, ಅಭಿನಯ ಸೇರಿದಂತೆ ಎಲ್ಲವನ್ನೂ ಹೊಂದಿರುವ ಪರಿಪೂರ್ಣ ಕಲೆಯಾಗಿ ರೂಪುಗೊಂಡಿದೆ. ಅನೇಕ ಹಿರಿಯ ಕಲಾವಿದರು ತಮ್ಮ ಅನುಭವಗಳ ಮೂಲಕ ಯಕ್ಷಗಾನವನ್ನು ಬೆಳೆಸಿದ್ದಾರೆ. ಯುವ ಕಲಾವಿದರು ಅಂತಹ ಅನುಭವಿ ಕಲಾವಿದರ ಜೊತೆಗೆ ಒಡನಾಟ ಬೆಳೆಸಿಕೊಂಡಾಗ, ಪರಂಪರೆ ಮತ್ತು ವರ್ತಮಾನದ ಅನುಸಂಧಾನ ಸಾಧ್ಯ. ಯಕ್ಷಗಾನದಲ್ಲಿ ಸುಂದರ ಕನ್ನಡ ಇದೆ. ಕನ್ನಡ ಭಾಷೆಯ ಬೆಳವಣಿಗೆಗೂ ಯಕ್ಷಗಾನದ ಪ್ರಭಾವ ಮಹತ್ತರವಾದುದು. ಇಂದಿನ ಆಧುನಿಕತೆಯಲ್ಲಿ ಯಕ್ಷಗಾನದ ಪರಂಪರೆಗೆ ಯಾವುದೇ ಧಕ್ಕೆಯಾಗದಂತೆ ಕ್ರಮಬದ್ಧವಾಗಿ ಮುಂದುವರಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಂಗಳೂರು…
ತುಮಕೂರು ಜಿಲ್ಲೆಯ ಉರುಡುಗೆರೆ ಹೋಬಳಿಯ ತಾಳೇನಹಳ್ಳಿಯಲ್ಲಿ ಜನ್ಮ ತಾಳಿದ ಅಪರೂಪದ ಸಾಹಿತಿ ಕೆ. ಎಸ್. ಧರಾಣೇಂದ್ರಯ್ಯ. 1903 ನೇ ಇಸವಿ ಡಿಸೆಂಬರ್ 31ರಂದು ಇವರ ಜನನವಾಯಿತು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದ ಇವರು ಪಂಪ, ರನ್ನ ಮತ್ತು ಜನ್ನರ ಕೃತಿಗಳ ಪದ್ಯಗಳನ್ನು ನಿರರ್ಗಳವಾಗಿ ಹಾಡುತ್ತಿದ್ದರು. ಇವರ ವೃತ್ತಿಜೀವನ ಆರಂಭವಾದದ್ದು ಶಿಕ್ಷಣ ಇಲಾಖೆಯಿಂದ. ಕರ್ನಾಟಕ ಸರಕಾರದ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದು. ಆಗಲೇ ಸಾಹಿತ್ಯ ಕೃಷಿಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮೇಧಾವಿ ಇವರು. ಪಂಪ ಆದಿಪುರಾಣ, ಭಾರತ ವಸ್ತು ಪ್ರದರ್ಶನ, ಪದ್ಮಾವತಿ ಮಹಾತ್ಮೆ, ಆಡಳಿತ ಶಬ್ದಗಳ ಕನ್ನಡ ಕೋಶ, ಭಗವಾನ್ ಮಹಾವೀರ, ಭಕ್ತಿ ಕುಸುಮಾಂಜಲಿ, ಇತ್ಯಾದಿ ಅನರ್ಘ್ಯ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದವರು. ಕನ್ನಡ – ಕನ್ನಡ ಕೋಶ, ಕನ್ನಡ ವಿಶ್ವಕೋಶ, ಕುಮಾರವ್ಯಾಸ ಭಾರತ ಮುಂತಾದ ಸಾಹಿತ್ಯ ಯೋಜನೆಗಳನ್ನು ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ಮೂಲಕ ಕಾರ್ಯರೂಪಕ್ಕೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿದವರು. “ಜೈನ ಶಾಸ್ತ್ರ…
ಉಡುಪಿ ಜಿಲ್ಲೆಯ ಕಡೆಕಾರಿನ ವಿಜಯ ಶೆಟ್ಟಿ ಹಾಗೂ ಜಯಂತಿ ಶೆಟ್ಟಿ ದಂಪತಿಯರ ಮಗಳಾಗಿ 12.12.1994 ರಂದು ಚೈತ್ರ ಅವರ ಜನನ. ಬಿಎಸ್ಸಿ ನರ್ಸಿಂಗ್, ಎಂಎಸ್ಸಿ ನರ್ಸ್ ಪ್ರಾಕ್ಟಿಶನರ್ ಕ್ರಿಟಿಕಲ್ ಕೇರ್ MAHE, ಮಣಿಪಾಲದಲ್ಲಿ ಕಲಿತು ಪ್ರಸ್ತುತ ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲದಲ್ಲಿ ನರ್ಸ್ ಪ್ರಾಕ್ಟಿಶನರ್ ಇನ್ ಕ್ರಿಟಿಕಲ್ ಕೇರ್ ನಲ್ಲಿ ವೃತ್ತಿಯನ್ನು ಮಾಡುತ್ತಿದ್ದಾರೆ. ಯಕ್ಷಗಾನ ಗುರುಗಳು:- ಶ್ರೀ ರಾಜೀವ್ ತೋನ್ಸೆ (ಮಟ್ಟು) ಶ್ರೀ ಕೆ. ಜೆ. ಗಣೇಶ್. ಯಕ್ಷಗಾನಕ್ಕೆ ಕ್ಷೇತ್ರಕ್ಕೆ ಬರಲು ಪ್ರೇರಣೆ:- ಅಷ್ಟಮಿಯಂದು ಬರುವ ರಕ್ಕಸ ವೇಷ, ಯಕ್ಷಗಾನದ ವೇಷ ಭೂಷಣ ನೋಡಿ ಹೆದರಿ ಅಡಗಿ ಕುಳಿತುಕೊಳ್ಳುತ್ತಿದ್ದೆ. ಆದರೆ ನೃತ್ಯ, ನಾಟಕ ರಂಗದಲ್ಲಿ ಬಹು ಆಸಕ್ತಿ ಇತ್ತು. ಅದರಲ್ಲಿ ಮುಂದುವರಿಯಬೇಕು ಎಂಬ ಕನಸೂ ಇತ್ತು. ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ನಾನು ಕಲಿಯುತ್ತಿದ್ದ ಸರಕಾರಿ ಪ್ರಾಥಮಿಕ ಶಾಲೆ ಕಡೆಕಾರ್ ನ ಹೆಣ್ಣು ಮಕ್ಕಳಿಗೆ, ಪಡುಕೆರೆಯಿಂದ ವರ್ಗಾವಣೆಯಾಗಿ ಕಡೆಕಾರಿಗೆ ಬಂದ ಗಂಗಾಧರ್ ಜಿ. ಅವರ ಸಾರಥ್ಯದಲ್ಲಿ ಗುರುಗಳಾದಂತಹ ಶ್ರೀಯುತ ರಾಜೀವ್ ತೋನ್ಸೆಯವರ ಶಿಕ್ಷಣದೊಂದಿಗೆ ದುರ್ಗಾಂಬಿಕಾ…
ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ವಾರ್ಷಿಕ ಮಹಾಸಭೆ ದಿನಾಂಕ 24 ಡಿಸೆಂಬರ್ 2024ರಂದು ಒಕ್ಕೂಟದ ಅಧ್ಯಕ್ಷ ದೀಪಕ್ ರಾಜ್ ಉಳ್ಳಾಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಒಕ್ಕೂಟದ ನೂತನ ಅಧ್ಯಕ್ಷರಾಗಿ ಕೇಶವ ಕನಿಲ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಧನುರಾಜ್ ಅತ್ತಾವರ, ಸುಭಾಷಿತ್ ಕುಮಾರ್ ಉಡುಪಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮ್ ಕುಮಾರ್ ಅಮೀನ್, ಕೋಶಾಧಿಕಾರಿಯಾಗಿ ಹರಿಣಿ ಉದಯ್, ಜತೆ ಕಾರ್ಯದರ್ಶಿಯಾಗಿ ಶಿಶಾನ್ ಕೌಡೂರು ಮಂಗಳೂರು, ಮುಕ್ತ ಶ್ರೀನಿವಾಸ್ ಉಡುಪಿ, ಸಂಘಟನಾ ಕಾರ್ಯದರ್ಶಿಯಾಗಿ ಐವನ್ ಮಂಗಳೂರು, ರಾಧಾಕೃಷ್ಣ ಭಟ್ ಉಡುಪಿ, ಸಂಚಾಲಕರಾಗಿ ಸಂತೋಷ್ ಅಂಚನ್ ಮಂಗಳೂರು ಹಾಗೂ ಸ್ವಪ್ನ ರಾಜ್ ಉಡುಪಿ ಆಯ್ಕೆಯಾದರು.
ಕರಾವಳಿಯ ಹಾಸ್ಯ ಲೇಖಕರೆಂದೇ ಪ್ರಸಿದ್ಧರಾದವರು ಪಡುಕೋಣೆ ರಮಾನಂದ ರಾಯರು. ಇವರು 1896ರ ಡಿಸೆಂಬರ್ 30ರಂದು ಉಡುಪಿ ಜಿಲ್ಲೆಯ ಪಡುಕೋಣೆಯಲ್ಲಿ ಜನಿಸಿದರು. ತಂದೆ ನರಸಿಂಗರಾಯರು, ತಾಯಿ ಚಂದ್ರಭಾಗಿ. ಇವರ ಆರಂಭದ ಶಿಕ್ಷಣವೆಲ್ಲವೂ ಮಂಗಳೂರಿನ ಶಾಲಾ ಕಾಲೇಜುಗಳಲ್ಲಿ. ವಿದ್ಯಾರ್ಥಿ ದೆಸೆಯಲ್ಲಿ ಸಾಹಿತ್ಯದ ಒಲವು ಅಧಿಕವಾಗಿತ್ತು. ಪಠ್ಯಪುಸ್ತಕದ ಭಾಷೆಗಿಂತ ಭಿನ್ನವಾದ ಭಾಷೆ ಇರುವ ಪಿ. ಜಿ. ವುಡ್ಹೌಸ್ ಅವರ ಪುಸ್ತಕಗಳು ಮತ್ತು ವಿಶ್ವದ ಅತ್ಯಂತ ಜನಪ್ರಿಯ ಹಾಸ್ಯಗಾರ, ಶಿಕ್ಷಣ ತಜ್ಞ ಮತ್ತು ಉಪನ್ಯಾಸಕರಾದ ಕೆನಡಾದ ಸ್ಟೀಫನ್ ಲೀಕಾಕ್ ಇವರ ಬರಹಗಳು ರಮಾನಂದರಿಗೆ ಅಚ್ಚುಮೆಚ್ಚಿನದಾಗಿದ್ದವು. ಇಂಟರ್ಮೀಡಿಯಟ್ ನಲ್ಲಿ ಓದುತ್ತಿರುವಾಗ ಸೀತಾ ಎಂಬ ಪ್ರತಿಭಾನ್ವಿತೆಯೊಂದಿಗೆ ವಿವಾಹವಾದ ಕಾರಣ ಇವರ ವಿದ್ಯಾಭ್ಯಾಸ ಅಲ್ಲಿಗೆ ಮೊಟಕುಗೊಂಡಿತು. ಮತ್ತೆ ವಿದ್ಯಾಭ್ಯಾಸವನ್ನು ಮುಂದುವರಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ ಬಿ. ಎ., ಎಂ. ಎ. ಮತ್ತು ಎಲ್. ಟಿ. ಪದವಿಗಳನ್ನು ಪಡೆದರು. ರಸಾಯನ ಶಾಸ್ತ್ರದ ಅಧ್ಯಾಪಕರಾಗಿ ರಾಜಮಹೇಂದ್ರಿ, ತಲಚೇರಿ, ಪಾಲ್ಘಾಟ್ ಮತ್ತು ಈಗಿನ ಚೆನ್ನೈಗಳಲ್ಲಿ ಸೇವೆ ಸಲ್ಲಿಸಿದರು. ಮಂಗಳೂರಿನಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಿಸಿ ನಿವೃತ್ತರಾದ ನಂತರ…
ಮಂಗಳೂರು: ಚಿತ್ರಕಲಾ ಗುರು ದಿ. ಬಿ. ಜಿ. ಮುಹಮ್ಮದ್ ಇವರ 104ನೆ ಜನ್ಮದಿನಾಚರಣೆ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯು ದಿನಾಂಕ 05 ಜನವರಿ 2025 ರಂದು ಮಂಗಳೂರಿನ ಮಿನಿ ಪುರಭವನದಲ್ಲಿ ನಡೆಯಲಿದೆ. ಚಿತ್ರಕಲಾ ಸ್ಪರ್ಧೆಯು ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಯ ಶಾಲಾ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ಬೆಳಗ್ಗೆ ಘಂಟೆ 9.30 ರಿಂದ 11.30 ರವರೆಗೆ ನಡೆಯಲಿದ್ದು, 2 ರಿಂದ 4ನೇ ತರಗತಿಯವರಿಗೆ ಯಾವುದೇ ವಿಷಯದಲ್ಲಿ, 5ರಿಂದ 7ನೇ ತರಗತಿಯವರಿಗೆ ವಿಷಯ ‘ಸವಿ ನೆನಪು’ ಹಾಗೂ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಜಿಲ್ಲೆಯ ಸಂಸ್ಕೃತಿ’ ಬಗ್ಗೆ ಚಿತ್ರ ರಚಿಸಲು ತಿಳಿಸಲಾಗಿದೆ. ಅದೇ ದಿನ ಬಹುಮಾನ ವಿತರಣೆಯೂ ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಗಣೇಶ ಸೋಮಯಾಜಿ ತಿಳಿಸಿದ್ದಾರೆ. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು. ಪ್ರತಿ ವಿಭಾಗದಲ್ಲಿ 8 ಮಂದಿ ವಿಜೇತರಂತೆ 24 ಮಂದಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು. ಆರ್ಟಿಸ್ಟ್ ಕಂಬೈನ್ ಅಧ್ಯಕ್ಷ ಟ್ರೆವರ್ ಪಿಂಟೊ ಸ್ಪರ್ಧೆ ಉದ್ಘಾಟಿಸಲಿದ್ದು, ಅತಿಥಿಗಳಾಗಿ…
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಏರ್ಯ ಆಳ್ವ ಫೌಂಡೇಶನ್ ಮೊಡಂಕಾಪು ಇದರ ಸಹಯೋಗದೊಂದಿಗೆ ಏರ್ಯ ಲಕ್ಷ್ಮೀನಾರಾಯಣ ಆಳ್ವರವರ ಸ್ಮರಣಾರ್ಥ 2ನೇ ವರ್ಷದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ‘ವರ್ಣಾಂಜಲಿ 2024’ ದಿನಾಂಕ 22 ಡಿಸೆಂಬರ್ 2024ರಂದು ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ರಂಗಭೂಮಿ ಕಲಾವಿದೆ ಸರೋಜಿನಿ ಶೆಟ್ಟಿ ಮಾತನಾಡಿ “ವಿದ್ಯಾರ್ಥಿಗಳಲ್ಲಿ ಬೇರೆ ಬೇರೆ ಪ್ರತಿಭೆಗಳಿರುತ್ತದೆ. ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿಯಿರುತ್ತದೆ. ಅವುಗಳನ್ನು ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಿದಾಗ ವಿದ್ಯಾರ್ಥಿಗಳು ಪ್ರತಿಭಾವಂತರಾಗುತ್ತಾರೆ. ಸೇವಾಂಜಲಿ ಸಂಸ್ಥೆ ಮೂಲಕ ಬಡವರಿಗೆ, ರೋಗಿಗಳಿಗೆ ಶಕ್ತಿ ತುಂಬುವ ಕಾರ್ಯ ಕೃಷ್ಣಕುಮಾರ್ ಪೂಂಜ ಮಾಡುತ್ತಿದ್ದಾರೆ. ಈ ಸೇವೆ ನಿರಂತರವಾಗಿ ನಡೆಯಲಿ.” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಮಾತನಾಡಿ “ಚಿತ್ರಕಲೆಯಂತಹ ಸಹಪಠ್ಯ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಂಡರೆ ಅವರ ಕಲಿಕೆಗೆ ಅಡ್ಡಿಯಾಗುವುದಿಲ್ಲ ಬದಲಾಗಿ ಕಲಿಕೆಗೆ ಪೂರಕವಾಗಲಿದೆ.” ಎಂದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿ, ಚಿತ್ರಕಲಾ ಶಿಕ್ಷಕ ಬಾಲಕೃಷ್ಣಶೆಟ್ಟಿ…
ಧಾರವಾಡ : ಧಾರವಾಡದ ನೆಲದ ಸತ್ವವನ್ನು ಹೀರಿ ಧಾರವಾಡದಲ್ಲಿಯೇ ಹುಟ್ಟಿ ಬೆಳೆದ ವರಕವಿ ಬೇಂದ್ರೆ ಅವರು ಜನಮಾನಸ ಕವಿ, ದಿನನಿತ್ಯದ ಆಡು ಮಾತಿನಲ್ಲಿ ಜೀವನದರ್ಶನದ ಒಳನೋಟಗಳನ್ನು ನೀಡುವ ಸಾವಿರಾರು ಕವಿತೆಗಳನ್ನು ಬರೆದು ಇಂದಿಗೂ ಹಳ್ಳಿಗರ ಮುಗ್ಧ ಮನಸ್ಸು ಹಾಗೂ ಪ್ರಜ್ಞಾವಂತ ನಾಗರಿಕರ ನರ ನಾಡಿಗಳಲ್ಲಿ ಚೈತನ್ಯ ತುಂಬುವಂತೆ ಮಾಡಿದ್ದಾರೆ. ‘ಗಂಗಾವತರಣ’ ವರಕವಿ ಬೇಂದ್ರೆಯವರ ಬದುಕು ಬರಹಗಳನ್ನು ಆಧರಿಸಿ ಬರೆದ ನಾಟಕ, ಬೆಂಗಳೂರಿನ ರಂಗ ಸೌರಭ ತಂಡದವರು ಈ ನಾಟಕವನ್ನು ಧಾರವಾಡದ ಸೃಜನಾರಂಗ ಮಂದಿರದಲ್ಲಿ ದಿನಾಂಕ 26 ಡಿಸೆಂಬರ್ 2024ರ ಸಂಜೆ ಹೃದಯಂಗಮವಾಗಿ ಪ್ರಸ್ತುತಪಡಿಸಿದರು. ಬೇಂದ್ರೆ ಅವರ ಬದುಕಿನ ಹಲವು ಪುಟಗಳನ್ನು ತೆರೆಯುತ್ತ, ಅವರ ಉದಾತ್ತ ಜೀವನದ ತಾದಾತ್ಮತೆಯನ್ನು ತೋರುವ ಹಲವು ಹಾಡುಗಳಿಂದ ಹಾಗೂ ನೃತ್ಯ ರೂಪಕಗಳಿಂದ ಜನಮನವನ್ನು ರಂಜಿಸಿದರು. ಆಧುನಿಕ ಜೀವನದ ಶುಷ್ಕ ಆಡಂಬರಕ್ಕೆ ಮನಸೋತ ಇಂದಿನ ಪೀಳಿಗೆಯವರ ತೊಳಲಾಟವನ್ನು ಸಮರ್ಥವಾಗಿ ಬಿಂಬಿಸಿ ಬೇಂದ್ರೆಯವರ ಆತ್ಮ ಸಾಕ್ಷಾತ್ಕಾರದ ನೆಲೆಯಲ್ಲಿ ಜೀವನ ದರ್ಶನ ಮೂಡಿಸಿದ ಪರಿ ಅದ್ಭುತವಾಗಿತ್ತು. ಲೇಖಕ ಹಾಗೂ ನಿರ್ದೇಶಕರಾದ ಶ್ರೀ…
ಬೆಂಗಳೂರು : ‘ಅನೇಕ’ ಪ್ರಸ್ತುತ ಪಡಿಸುವ ‘ಅಭಿನಯ ಹಾಗೂ ನಾಟಕ ನಿರ್ಮಾಣ ಕಾರ್ಯಾಗಾರ’ವನ್ನು ದಿನಾಂಕ 04 ಜನವರಿ 2025ರಂದು ಪ್ರತಿ ದಿನ ಸಂಜೆ 6-00 ಗಂಟೆಯಿಂದ 8-30 ಗಂಟೆಗೆ ತನಕ ಬೆಂಗಳೂರಿನ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ಹತ್ತಿರವಿರುವ ಅನೇಕ ಸ್ಟುಡಿಯೋ ಥಿಯೇಟರ್ ಇಲ್ಲಿ ಆಯೋಜಿಸಲಾಗಿದೆ. ಈ ತರಬೇತಿಯು ಉಚಿತವಾಗಿದ್ದು, ಐದು ವಾರಗಳವರೆಗೆ ನಡೆಯಲಿರುವ ಈ ಕಾರ್ಯಾಗಾರದ ಸಾರಥ್ಯವನ್ನು ಅಪೂರ್ವ ಆನಗಳ್ಳಿ ಇವರು ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9448050950 ಮತ್ತು 9718080422.
ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-92’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ‘ನಾಟಕಾಷ್ಟಕ’ದ ನಾಲ್ಕನೇ ದಿನದ ಕಾರ್ಯಕ್ರಮ ದಿನಾಂಕ 29 ಡಿಸೆಂಬರ್ 2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಮಕ್ಕಳಿಗೆ ಮುಖವಾಡ ತೊಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚಿತ್ರಕಾರ ಹಾಗೂ ಅಧ್ಯಾಪಕ ಅಶೋಕ್ ತೆಕ್ಕಟ್ಟೆ ಮಾತನಾಡಿ “ರಂಗಭೂಮಿಯ ಸಂಗತಿಗಳು ಭಿನ್ನಭಿನ್ನವಾಗಿರುತ್ತವೆ. ಪ್ರತೀ ನಿರ್ದೇಶಕರ ಯೋಚನೆಗನುಸಾರವಾಗಿ ರಂಗ ತಂತ್ರಗಳು ವಿಭಿನ್ನವಾಗಿ ರಂಗದಲ್ಲಿ ಚಿತ್ರಿತಗೊಳ್ಳುತ್ತವೆ. ಅದರಲ್ಲಿಯೂ ಮಕ್ಕಳ ರಂಗಭೂಮಿ ಬಹು ಕ್ಲಿಷ್ಠಕರವಾಗಿರುತ್ತದೆ. ಮಕ್ಕಳನ್ನು ಒಟ್ಟುಗೂಡಿಸಿ ರಂಗತಂತ್ರದಲ್ಲಿ ಮಾರ್ಪಾಡುಗೊಳಿಸಿ, ಕಾರ್ಯರೂಪಕ್ಕೆ ತರುವ ಕಾರ್ಯ ಸುಲಭಸಾಧ್ಯವಲ್ಲ. ಇದು ಸಾಧಕ ಕ್ಷೇತ್ರ. ಈ ನಿಟ್ಟಿನಲ್ಲಿ ಮಕ್ಕಳ ರಂಗಭೂಮಿಗಾಗಿ ಕೆಲಸ ಮಾಡುತ್ತಿರುವ ಕಲಾಭಿ ಚಿಲ್ಡ್ರನ್ಸ್ ಥಿಯೇಟರ್‌ನ ಕೆಲಸವನ್ನು ಮೆಚ್ಚಲೇ ಬೇಕು.” ಎಂದರು. ರಂಗ ನಿದೇರ್ಶಕ ರಂಜಿತ್ ಶೆಟ್ಟಿ ಕುಕ್ಕುಡೆ, ರೊ. ಶ್ರೀಧರ ಆಚಾರ್ ತೆಕ್ಕಟ್ಟೆ, ಉದ್ಯಮಿ ಗೋಪಾಲ್ ಪೂಜಾರಿ ಬಾಳೆಹಿತ್ಲು, ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ, ಕಾರ್ಯದರ್ಶಿ…