Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು, ಕನ್ನಡ ಸಂಘ ವಿಶ್ವ ವಿದ್ಯಾನಿಲಯ ಕಾಲೇಜು ಮಂಗಳೂರು ಇವರ ಆಶ್ರಯದಲ್ಲಿ ಚಂದ್ರಹಾಸ ಕಣಂತೂರು ಇವರ ತುಳುನಾಡಿನ ದೈವಾರಾಧನೆಯ ಕತೆಗಳ ‘ಪಡಿಯಕ್ಕಿ’ ಕೃತಿಯ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 28 ಸೆಪ್ಟೆಂಬರ್ 2024ರಂದು ಅಪರಾಹ್ನ 3-30 ಗಂಟೆಗೆ ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಆಯೋಜಿಸಲಾಗಿದೆ. ಕವಿಗಳು ಮತ್ತು ನಿವೃತ್ತ ಉಪನ್ಯಾಸಕರಾದ ಶ್ರೀ ಕೆ.ಟಿ. ಆಳ್ವ ಇವರ ಅಧ್ಯಕ್ಷತೆಯಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕರಾದ ಪ್ರೊ. ತುಕಾರಾಮ ಪೂಜಾರಿ ಇವರು ಕೃತಿ ಬಿಡುಗಡೆ ಮಾಡಲಿರುವರು. ಉಪನ್ಯಾಸಕರಾದ ಡಾ. ಅರುಣ್ ಉಳ್ಳಾಲ ಇವರು ಕೃತಿ ಸಮೀಕ್ಷೆ ನಡೆಸಲಿದ್ದಾರೆ.
ಕಾಸರಗೋಡು : ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರಿಯ ನಾಟ್ಯ ಗುರುಗಳಾದ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ಯಕ್ಷಗಾನ ಶಿಕ್ಷಕರಿಗೆ ಯಕ್ಷ ಶಿಕ್ಷಣವನ್ನು ಸಿರಿ ಬಾಗಿಲು ಪ್ರತಿಷ್ಠಾನದಲ್ಲಿ ದಿನಾಂಕ 20 ಸೆಪ್ಟೆಂಬರ್ 2024ರಂದು ಆರಂಭಿಸಲಾಯಿತು. ಕಾರ್ಯಕ್ರಮಕ್ಕೆ ಅಮೇರಿಕಾದಿಂದ ಆಗಮಿಸಿದ ಕಲಾಪೋಷಕರಾದ ಶ್ರೀ ದಿನೇಶ ಶ್ರೀನಿವಾಸರಾವ್ ಮತ್ತು ಪಣಂಬೂರು ವೆಂಕಟರಾಯ ಐತಾಳರ ಪುತ್ರಿ ಶ್ರೀಮತಿ ಮನೋರಮಾ ದಿನೇಶ ಶ್ರೀನಿವಾಸರಾವ್ ಹಾಗೂ ಕರ್ನಾಟಕ ಬ್ಯಾಂಕಿನ ಡಿ.ಜಿ.ಎಂ. ಶ್ರೀ ವಸಂತ ಹೇರ್ಳೆ ಇವರುಗಳು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು. ಶ್ರೀಮತಿ ಮನೋರಮಾ ದಿನೇಶ ಶ್ರೀನಿವಾಸರಾವ್ ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ “ಯಕ್ಷಗಾನ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿದ ಪ್ರತಿಷ್ಠಾನ ಮತ್ತು ಪ್ರತಿಷ್ಠಾನದಲ್ಲಿರುವ ಪಣಂಬೂರು ವೆಂಕಟ್ರಾಯ ಐತಾಳರ ಹೆಸರಿನ ತೆಂಕುತಿಟ್ಟು ಯಕ್ಷಗಾನ ಮ್ಯೂಸಿಯಂ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿದೆ. ಸಾಂಸ್ಕೃತಿಗೆ ಭವನಕ್ಕೆ ಅಧ್ಯಯನಕ್ಕೆ ಬರುವವರಿಗೆ ಮುಂದಿನ ದಿನಗಳಲ್ಲಿ ಉಪಯುಕ್ತವಾಗಲಿ. ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ” ಎಂದು ತಿಳಿಸಿದರು. ಸಾಂಸ್ಕೃತಿಕ ವಲಯಕ್ಕೆ, ಶಿಕ್ಷಣ ಕ್ಷೇತ್ರಕ್ಕೆ ಕರ್ನಾಟಕ ಬ್ಯಾಂಕ್…
ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ತನ್ನ 60ನೇ ವರ್ಷದಲ್ಲಿ, ಇದೇ ನವಂಬರ್ ತಿಂಗಳ 3ನೇ ವಾರದಲ್ಲಿ ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ ರಾಜ್ಯ ಮಟ್ಟದ 45ನೇ ಕನ್ನಡ ನಾಟಕ ಸ್ಪರ್ಧೆಯನ್ನು ನಡೆಸಲಿದೆ. ಕರ್ನಾಟಕ ರಾಜ್ಯದ (ಕಾಸರಗೋಡು ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಟ 1 ಘಂಟೆ 30 ನಿಮಿಷ ಹಾಗೂ ಗರಿಷ್ಠ 2 ಘಂಟೆ 15 ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು. ಈ ಬಾರಿ ಸ್ಪರ್ಧೆಗೆ ಗರಿಷ್ಠ 12 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಅನುಕ್ರಮವಾಗಿ ರೂ.35,000/-, ರೂ.25.000/-, ರೂ.15.000/-ದ ನಗದು ಬಹುಮಾನಗಳನ್ನು ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. ಅಲ್ಲದೆ ಶ್ರೇಷ್ಠ ನಿರ್ದೇಶನ,…
ಉಡುಪಿ : ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದಿಂದ ಅಭಿನವ ಪಾರ್ತಿಸುಬ್ಬ ಸೀತಾನದಿ ಗಣಪಯ್ಯ ಶೆಟ್ಟಿ ಅವರ 37ನೇ ವರ್ಷದ ಸಂಸ್ಮರಣೆ ಸಂದರ್ಭದಲ್ಲಿ ನೀಡುವ ಪ್ರಶಸ್ತಿಗೆ ರಾಜ್ಯಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಕೆ. ಗೋವಿಂದ ಭಟ್ ಸೂರಿಕುಮೇರು ಅವರು ಆಯ್ಕೆಯಾಗಿದ್ದಾರೆ ಎಂಬುದಾಗಿ ಪ್ರತಿಷ್ಠಾನದ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 07 ಅಕ್ಟೋಬರ್ 2024ರ ಸೋಮವಾರ ಸಂಜೆ ಘಂಟೆ 4.30ಕ್ಕೆ ಉಡುಪಿಯ ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಕೆ. ಗೋವಿಂದ ಭಟ್ ಅವರು ಉನ್ನತ ಶೈಲಿಯ ನಾಟ್ಯ, ಶ್ರುತಿಬದ್ಧ ಮಾತಿನ ಪ್ರಭುದ್ಧತೆಯಿಂದ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರಾಗಿ ಸಕೀರ್ತಿ ಗಳಿಸಿದವರು. ಶ್ರೀಯುತರು ಶ್ರೀ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಪ್ರದಾನ ಕಲಾವಿದರಾಗಿ ಮೆರೆದವರು. ಸುಮಾರು 84 ವರ್ಷ ಪ್ರಾಯದ ಈ ಹಿರಿಯರು ಸುಮಾರು 60ವರ್ಷ ಧರ್ಮಸ್ಥಳ ಒಂದೇ ಮೇಳದಲ್ಲಿ ತಿರುಗಾಟ ನೆಡೆಸಿ ದಾಖಲೆ ನಿರ್ಮಿಸಿದವರು. ಪ್ರಸಿದ್ಧ ಕಲಾವಿದರಾದ ಕುರಿಯ ವಿಠಲ್…
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸಿದ ಆಳ್ವಾಸ್ ಪದವಿ ಪೂರ್ವ ಕಾಲೇಜು ಹಾಗೂ ಶಾಲೆಗಳ ತ್ರೈಮಾಸಿಕ ಸಂಚಿಕೆ ‘ಆಳ್ವಾಸ್ ಹೊಂಗಿರಣ’ ಇದರ ಲೋಕಾರ್ಪಣಾ ಸಮಾರಂಭವು 19 ಸೆಪ್ಟೆಂಬರ್ 2024ರ ಗುರುವಾರದಂದು ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿದ ಉಜಿರೆಯ ಎಸ್. ಡಿ. ಎಂ. ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ “ಪುಟವಿಟ್ಟ ಚಿನ್ನದಂತಿರುವ ಆಳ್ವಾಸ್ ಸಂಸ್ಥೆಯ ಮಾಹಿತಿಯನ್ನು ಹೊತ್ತು ತರುವ ‘ಆಳ್ವಾಸ್ ಹೊಂಗಿರಣ’ವು ಪ್ರಕಾಶಮಾನವಾಗಲಿ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೂರು ದಶಕಗಳಿಗೂ ಅಧಿಕ ಯಶೋಗಾಥೆ ಹೊಂದಿದ್ದು, ಇಲ್ಲಿನ ಮಾಹಿತಿಯನ್ನು ನೀಡುವ ಪತ್ರಿಕೆಯನ್ನು ನಾನು ಅತ್ಯಂತ ಸಂತಸದಿಂದ ಬಿಡುಗಡೆ ಮಾಡುತ್ತಿದ್ದೇನೆ.ಹಾಲನ್ನು ‘ಕ್ಷೀರ’ ಎನ್ನುವುದು ಉತ್ಪ್ರೇಕ್ಷೆಯಲ್ಲ. ಅಂತೆಯೇ ಆಳ್ವಾಸ್ ಅನ್ನು ನೀವು ಎಷ್ಟು ಬಣ್ಣಿಸಿದರೂ ಅದು ವಿಶೇಷವಲ್ಲ. ಆಳ್ವಾಸ್ ‘ಕ್ಷೀರ ಸಾಗರ’. ಆಳ್ವಾಸ್ ಆವರಣವು ನಮ್ಮೆಲ್ಲರಿಗೂ ಎರಡನೇ ಮನೆ. ಈ ಭಾವನೆ ಮೂಡಿಸಿದ ಡಾ. ಎಂ. ಮೋಹನ…
ಬೆಳ್ತಂಗಡಿ: ಮಂಗಳೂರಿನ ನಾಟ್ಯಾರಾಧನಾ ಸಂಸ್ಥೆಯ ತ್ರಿಂಶೋತ್ಸವದ ಅಂಗವಾಗಿ ಆಯೋಜಿಸಿದ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಮೃತ – 9’ರ ‘ದೃಷ್ಟಿ – ಸೃಷ್ಟಿ’ ಕಾರ್ಯಕ್ರಮವು ಉಜಿರೆಯ ಶ್ರೀ ರಾಮಕೃಷ್ಣ ಸಭಾಭವನದಲ್ಲಿ 14 ಸೆಪ್ಟೆಂಬರ್ 2024ರ ಶನಿವಾರದಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳದ ಆಡಳಿತ ಮೊಕ್ತಸರ ಶರತ್ಕೃಷ್ಣ ಪಡ್ಡೆಟ್ನಾಯ ಮಾತನಾಡಿ “ಹಿರಿಯರು ಬೆಳೆಸಿದ ಕಲಾಪರಂಪರೆಯನ್ನು ಉಳಿಸುವ ಕಾರ್ಯ ಮಂಗಳೂರಿನ ನಾಟ್ಯಾರಾಧನಾ ಕಲಾಕೇಂದ್ರ ಮಾಡುತ್ತಿರುವುದು ಶ್ಲಾಘನೀಯ. ಭಾರತೀಯ ಪರಂಪರೆಯಲ್ಲಿ ಕಲೆಗಳಿಗೆ ದೈವತ್ವದ ಸ್ಥಾನ ನೀಡಲಾಗಿದೆ.” ಎಂದರು. ಉಜಿರೆ ಎಸ್. ಡಿ. ಎಂ.ಕಾಲೇಜಿನ ಪ್ರಾಚಾರ್ಯ ಬಿ. ಎಂ. ಕುಮಾರ ಹೆಗ್ಡೆ, ಕಲಾನಿಕೇತನ ಕಲ್ಲಡ್ಕ ಇದರ ನಿರ್ದೇಶಕಿ ವಿದುಷಿ ವಿದ್ಯಾ ಮನೋಜ್, ನೀನಾಸಂ ಕಲಾವಿದೆ ಸಂಗೀತಾ ಭಿಡೆ, ಪುರೋಹಿತ ಗಣಪತಿ ಚಿಪಳೂಣ್ಕರ್, ಕಲಾಕೇಂದ್ರದ ಟ್ರಸ್ಟಿ ಬಿ. ರತ್ನಾಕರ ರಾವ್ ಉಪಸ್ಥಿತರಿದ್ದರು. ಸಂಯೋಜಕಿ ಚಿತ್ರಾ ಭಿಡೆ ಸ್ವಾಗತಿಸಿ, ಪ್ರಧಾನ ಟ್ರಸ್ಟಿ ವಿದುಷಿ ಸುಮಂಗಲಾ ರಾವ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಭಾಕಾರ್ಯಕ್ರಮದ ಬಳಿಕ ವಿದುಷಿ ಸುಮಂಗಲಾ ರಾವ್,…
ಬೆಂಗಳೂರು : ನಾಗರಾಜ್ ಶೆಟ್ಟಿ ನೈಕಾಂಬ್ಳಿ ಸಂಯೋಜನೆಯಲ್ಲಿ ಆಯೋಜಿಸುವ ಹತ್ತು ಮೇಳಗಳ ಕಲಾವಿದರು ಮತ್ತು ಅತಿಥಿ ಕಲಾವಿದರ ಸಮಾಗಮದಲ್ಲಿ ‘ಯಕ್ಷ ಸಂಕ್ರಾಂತಿ’ ಕಾರ್ಯಕ್ರಮವು 21 ಸೆಪ್ಟೆಂಬರ್ 2024ರ ಶನಿವಾರದಂದು ರಾತ್ರಿ ಘಂಟೆ 9.00 ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ನಾಡಿನ ಪ್ರಬುದ್ಧ ಕಲಾವಿದರ ಕೂಡುವಿಕೆಯಲ್ಲಿ ಕವಿ ದೇವಿದಾಸ ವಿರಚಿತ ‘ಕೃಷ್ಣ ಸಂದಾನ’, ಕವಿ ಮೂಲಿಕೆ ರಾಮಕೃಷ್ಣ ವಿರಚಿತ ‘ಸುಧನ್ವ’, ಕವಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಧರ್ಮಾಂಗದ’ ಹಾಗೂ ಕವಿ ರತ್ನಾಪುರದ ರಾಮ ವಿರಚಿತ ‘ತಾಮ್ರ ಧ್ವಜ’ ಪ್ರಸಂಗಳು ಪ್ರದರ್ಶನಗೊಳ್ಳಲಿದ್ದು, ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಚಂದ್ರಕಾಂತ ರಾವ್ ಮೂಡುಬೆಳ್ಳೆ, ಉದಯ್ ಕುಮಾರ್ ಹೊಸಾಳ್, ಸೃಜನ್ ಗಣೇಶ ಹೆಗಡೆ, ಶ್ರೀನಿವಾಸ ಪ್ರಭು, ಅಕ್ಷಯ್ ಆಚಾರ್ಯ, ಶಶಾಂಕ್ ಆಚಾರ್ಯ ಹಾಗೂ ಪ್ರಜ್ವಲ್ ಮುಂಡಾಡಿ ಸಹಕರಿಸಲಿದ್ದಾರೆ. ‘ಕೃಷ್ಣ ಸಂದಾನ’ ಪ್ರಸಂಗದಲ್ಲಿ ಕೌರವನಾಗಿ ಕೃಷ್ಣ ಯಾಜಿ ಬಳ್ಕೂರು, ಕೃಷ್ಣನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ, ವಿದುರನಾಗಿ ರಮೇಶ್ ಭಂಡಾರಿ, ದೂತನಾಗಿ ದ್ವಿತೇಶ್ ಕಾಮತ್, ಕರ್ಣನಾಗಿ…
ಮಂಗಳೂರು : ರತ್ನ ಕಲಾಲಯ ಮಂಗಳೂರು ಇದರ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ‘ಅನುಪದಮ್ – 2024’ ಇದರಲ್ಲಿ ರತ್ನ ಕಲಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ತಾಳ ಪ್ರವೀಣ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರಿಂದ ವಿದ್ಯಾರ್ಥಿಗಳು ಹಾಗೂ ಹೆತ್ತವರಿಗಾಗಿ ನೃತ್ಯದ ಬಗ್ಗೆ ಪ್ರೇರಣೆ ನೀಡುವ ಕಾರ್ಯಾಗಾರ ದಿನಾಂಕ 14 ಸೆಪ್ಟೆಂಬರ್ 2024ರಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಿತು. ನಾಟರಾಜನ ಮೂರ್ತಿಗೆ ಮಂಗಳ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ‘ಕರ್ನಾಟಕ ರಾಜ್ಯೋತ್ಸವ’ ಹಾಗೂ ‘ನಾಟ್ಯರಾಣಿ ಶಾಂತಲಾ’ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರನ್ನು ಚಂಡೆ ವಾದನಗಳ ಮೂಲಕ ಬರಮಾಡಿಕೊಳ್ಳಲಾಯಿತು ಹಾಗೂ ವಿದ್ಯಾರ್ಥಿಗಳಿಂದ ಭಕ್ತಿ – ಗೌರವಪೂರ್ಣವಾದ ಪಾದ ಪೂಜೆ ನಡೆಯಿತು. ಕಲಾಸಕ್ತರನ್ನು ಉದ್ದೇಶಿಸಿ ಮಾತನಾಡಿದ ನಾಟ್ಯಗುರು “ಶಾಸ್ತ್ರೀಯತೆಯನ್ನು ಉಳಿಸಿಕೊಂಡು ಏನೂ ತೊಂದರೆಯಾಗದಂತೆ ಸನಾತನ ಕಲೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲಾ ನೃತ್ಯಗುರುಗಳಿಗೂ ಇದೆ” ಎನ್ನುತ್ತಾ ರತ್ನ ಕಲಾಲಯದ ಉತ್ತಮ…
ಬೆಂಗಳೂರು : ಮೂಡ್ನಾಕೂಡು ಚಿನ್ನಸ್ವಾಮಿ ಅಭಿನಂದನಾ ಸಮಿತಿ ವತಿಯಿಂದ ಮೂಡ್ನಾಕೂಡು ಚಿನ್ನಸ್ವಾಮಿ ಜನ್ಮದಿನಾಚರಣೆ ಮತ್ತು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ದಿನಾಂಕ 22 ಸೆಪ್ಟೆಂಬರ್ 2024ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕ ಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಹಿರಿಯ ಸಾಹಿತಿಗಳಾದ ಡಾ. ಎಲ್. ಹನುಮಂತಯ್ಯ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಸುಪ್ರಸಿದ್ಧ ಸಾಹಿತಿಗಳಾದ ಶ್ರೀ ಅಗ್ರಹಾರ ಕೃಷ್ಣಮೂರ್ತಿ ಇವರು ಈ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಲಿರುವರು. ಬಿಡುಗಡೆಯಾಗಲಿರುವ ಪುಸ್ತಕಗಳಾದ ‘ಆ ಮಹಾ ಮುಗುಳು ನಗೆ’ – ಕಾವ್ಯ ಇದರ ಬಗ್ಗೆ ಲೇಖಕರು ಮತ್ತು ಪತ್ರಕರ್ತರಾದ ಶ್ರೀ ಚ.ಹ. ರಘುನಾಥ, ‘ಧಮ್ಮಯಾನ – ಬೌದ್ಧತತ್ವ ಮೀಮಾಂಸೆ ಇದರ ಬಗ್ಗೆ ಬೆಂಗಳೂರಿನ ಸುಪ್ರಸಿದ್ಧ ಸಾಹಿತಿಗಳಾದ ಶ್ರೀ ಅಗ್ರಹಾರ ಕೃಷ್ಣಮೂರ್ತಿ, ‘ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ-ಮೂ.ಚಿ. ಸಾಹಿತ್ಯ ವಿಮರ್ಶೆ’ ಇದರ ಬಗ್ಗೆ ಬೆಂಗಳೂರಿನ ಅಕ್ಕ ಐ.ಎ.ಎಸ್. ಅಕಾಡೆಮಿ ಇದರ ನಿರ್ದೇಶಕರಾದ ಡಾ. ಶಿವಕುಮಾರ ಇವರುಗಳು ಮಾತನಾಡಲಿರುವರು. ಇದೇ ಸಂದರ್ಭದಲ್ಲಿ ಪ್ರಖ್ಯಾತ ಜಂಬೆ ಕಲಾವಿದರಾದ…
ಬೆಂಗಳೂರು : ಸಂಚಾರಿ ಥಿಯೇಟರ್ ಇದರ ವತಿಯಿಂದ 20 ವರ್ಷದ ರಂಗ ಸಂಭ್ರಮದ ಪ್ರಯುಕ್ತ ಆರು ತಿಂಗಳ ವಾರಾಂತ್ಯ ‘ಅಭಿನಯ ತರಗತಿಗಳು’ ದಿನಾಂಕ 19 ಅಕ್ಟೋಬರ್ 2024ರಿಂದ ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಸಂಚಾರಿ ಥಿಯೇಟರ್ ಎಂಟಿಸ್ಪೇಸಿನಲ್ಲಿ ಪ್ರಾರಂಭವಾಗಲಿವೆ. ಹೆಚ್ಚಿನ ಮಾಹಿತಿಗಾಗಿ 8884345569, 8971186882, 9844115903 ಮತ್ತು 9611234993 ಸಂಪರ್ಕಿಸಿರಿ. ಸಂಚಾರಿ ಥಿಯೇಟರ್ : 2004ರಲ್ಲಿ ಅಸ್ತಿತ್ವಕ್ಕೆ ಬಂದ ಸಂಚಾರಿ ಥಿಯೇಟರ್, ಬೆಂಗಳೂರಿನ ಪ್ರಮುಖ ರಂಗ ಸಂಸ್ಥೆಗಳಲ್ಲಿ ಒಂದು. ನಾಟಕಗಳು, ಅಭಿನಯ ಕಾರ್ಯಾಗಾರಗಳು, ನೇಪಥ್ಯ ಹಾಗೂ ರಂಗ ಸಂಗೀತ ಕುರಿತ ಶಿಬಿರಗಳನ್ನು ಪ್ರತಿವರ್ಷ ನಡೆಸುತ್ತಾ ಬಂದಿರುವ ಸಂಚಾರಿ ಥಿಯೇಟರ್ ಮಕ್ಕಳ ರಂಗಭೂಮಿ ಕುರಿತಂತೆ ನಿರಂತರವಾಗಿ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಾಹಿತ್ಯಿಕ ಚಟುವಟಿಕೆಗಳು ಮತ್ತು ರಂಗಭೂಮಿಯಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕುವ ರಂಗ ಪ್ರಯೋಗಗಳೊಂದಿಗೆ ಯುವಕರನ್ನು ರಂಗಭೂಮಿಗೆ ಕರೆತರುವ ನಿಟ್ಟಿನಲ್ಲಿ “ಪೂರ್ವರಂಗ” ಅಭಿನಯ ಕಾರ್ಯಾಗಾರವನ್ನು ಪ್ರತಿವರ್ಷ ನಡೆಸುತ್ತಾ ಬಂದಿದೆ. ಸಾಮಾಜಿಕ ಕಳಕಳಿ ಹಾಗೂ ಬದ್ಧತೆ ಇರುವ ಉತ್ಸಾಹಿ, ಪ್ರತಿಭಾವಂತ ಯುವಕರ ತಂಡವನ್ನು ಹೊಂದಿರುವ ಸಂಚಾರಿ…