Subscribe to Updates
Get the latest creative news from FooBar about art, design and business.
Author: roovari
ಕಲಬುರುಗಿ : ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ಮತ್ತು ಮೈಸೂರಿನ ‘ಪರಂಪರೆ ಸಂಸ್ಥೆ’ ಇವರ ಸಹಯೋಗದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಗಮಕ ಸಮ್ಮೇಳನವನ್ನು ದಿನಾಂಕ 21 ಸೆಪ್ಟೆಂಬರ್ 2024 ಮತ್ತು 22 ಸೆಪ್ಟೆಂಬರ್ 2024ರಂದು ಕಲಬುರುಗಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 21 ಸೆಪ್ಟೆಂಬರ್ 2024ರಂದು ಬೆಳಗ್ಗೆ 9-30 ಗಂಟೆಗೆ ವಾದ್ಯ ಮೇಳಗಳು, ಗಮಕಿಗಳ ಹಾಡುಗಳು, ಪೂಜಾ ಕುಣಿತ ಮತ್ತು ಜಾನಪದ ಕಲಾ ಮೇಳದೊಂದಿಗೆ ಮೆರವಣಿಗೆ ನೆರವೇರಲಿದೆ. ಪೂಜ್ಯ ಮತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪ ಇವರ ದಿವ್ಯ ಸಾನಿಧ್ಯದಲ್ಲಿ ಮಾನ್ಯ ಲೋಕ ಸಭಾ ಸದಸ್ಯರಾದ ಶ್ರೀ ರಾಧಾಕೃಷ್ಣ ದೊಡ್ಡಮನಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸ್ಮರಣ ಸಂಚಿಕೆ ಮತ್ತು ಪುಸ್ತಕ ಬಿಡುಗಡೆ ಈ ಸಮಾರಂಭ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 1-30ರಿಂದ ಗಮಕ ಕಾರ್ಯಕ್ರಮ ನಡೆಯಲಿದ್ದು, ಗಮಕ 1ರಲ್ಲಿ ‘ಕುಮಾರವ್ಯಾಸ ಭಾರತ ಪಾಶುಪತಾಸ್ತ್ರ ಪ್ರದಾನ’ ಇದರ ವಾಚನ ವಿದ್ವಾನ್ ಗಣೇಶ ಉಡುಪ ಹಾಗೂ ವ್ಯಾಖ್ಯಾನ ವಿದ್ವಾನ್…
ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪದವಿಪೂರ್ವ ಕಾಲೇಜು ಮೂರ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ವಿಷಯ ಸಂಕಲನ ಪುಸ್ತಕ ಬಿಡುಗಡೆ ಕಾರ್ಯಕ್ರಮವು 16 ಸೆಪ್ಟೆಂಬರ್ 2024ರಂದು ಮೂರ್ನಾಡುವಿನಲ್ಲಿರುವ ಪದವಿ ಪೂರ್ವ ಕಾಲೇಜಿನ ಕಾವೇರಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂರ್ನಾಡು ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಚೌರಿರ ಜಗತ್ ತಿಮ್ಮಯ್ಯ ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ನಡೆಸುತ್ತಾ ಬಂದಿದ್ದು, ಅದರ ಮೂರ್ನಾಡು ಹೋಬಳಿ ಘಟಕವನ್ನು ನಾನು ಉದ್ಘಾಟಿಸುತ್ತಿರುವುದು ಸಂತಸದ ವಿಚಾರ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಅವರ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಇರುತ್ತದೆ.” ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ…
ಮಂಗಳೂರು : ಯಕ್ಷಗಾನದ ಖ್ಯಾತ ಸ್ತ್ರೀ ಪಾತ್ರಧಾರಿಗಳಾದ ಸಂಜಯ ಕುಮಾರ್ ಶೆಟ್ಟಿ ಇವರ ಯಕ್ಷಗಾನ ರಂಗಪ್ರವೇಶದ 50ನೇ ವರ್ಷದ ಸಂಭ್ರಮ ‘ಸಂಜಯ 50’ ಕಾರ್ಯಕ್ರಮವು ದಿನಾಂಕ 15 ಸೆಪ್ಟೆಂಬರ್ 2024ರಂದು ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ವೇ. ಮೂ. ಶ್ರೀ ಲಕ್ಮೀನಾರಾಯಣ ಆಸ್ರಣ್ಣ ಮಾತನಾಡಿ “ಕಲೆಯ ಆರಾಧಕರು ಕಲಾವಿದರು. ಆ ಕಾರಣಕ್ಕಾಗಿ ಅದು ಅವರಿಗೆ ಒಲಿಯುತ್ತದೆ. ಆ ಮೂಲಕ ಕಲಾವಿದ ಪ್ರಕಾಶಕ್ಕೆ ಬಂದು ಬೆಳಗುತ್ತಾನೆ. ಗೋಣಿಬೀಡಿಂದ ಬಂದ ಸಂಜಯ ಕುಮಾರ್ ಯಕ್ಷಗಾನವನ್ನು ಪ್ರೀತಿಸುತ್ತಾ, ಕಟೀಲಮ್ಮನನ್ನು ಆರಾಧಿಸುತ್ತಾ ಯಕ್ಷ ಕಣ್ಮಣಿಯಾದರು. ಅವರ ಕಲಾಯಾನದ 50ರ ವರ್ಷಪೂರ್ತಿಯ ಕಾರ್ಯಕ್ರಮಗಳು ನೂರಾರು ನಡೆದು ಅವರಿಗೆ ಕಟೀಲ ಉಳ್ಳಾಲ್ದಿ ವರವಾಗಿ ಹರಸಲಿ” ಎಂದು ಹರಿಸಿದರು. ಕ. ಸಾ. ಪ. ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ “ಸಂಜಯ ಕುಮಾರ್ ಇವರಂತಹ ಕಲಾವಿದರು ಮಾತು ಕಡಿತ ಮಾಡಿ ಉತ್ತಮ ಸಾಧನೆ ಮಾಡಿ ಸಾಧಕರಾಗಿದ್ದಾರೆ.…
ಧಾರವಾಡ : ಸುಮಾರು ಐದು ದಶಕಗಳಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಸಂಗೀತ ರಿಸರ್ಚ್ ಅಕಾಡೆಮಿಯ ಮೂಲಕ ಪೋಷಿಸಿ ಪ್ರಚಾರ ಮಾಡುತ್ತಿರುವಂಥ ಪ್ರತಿಷ್ಠಿತ ಸಂಸ್ಥೆಯೆಂದರೆ ಅದು ಐ.ಟಿ.ಸಿ. ಐ.ಟಿ.ಸಿ.-ಎಸ್.ಆರ್.ಎ. ಎಂದೇ ಪ್ರಸಿದ್ಧಿ ಪಡೆದಿರುವ ಕೋಲ್ಕತ್ತಾದ ಈ ಸಂಸ್ಥೆ ದೇಶದ ಶ್ರೀಮಂತ ಪರಂಪರೆಯನ್ನು ಸಾಕಾರಗೊಳಿಸುವ ಅನನ್ಯ ಗುರು-ಶಿಷ್ಯ ಪರಂಪರೆಯ ಮೂಲಕ ಅಮೂಲ್ಯ ಜ್ಞಾನ ಹಾಗೂ ತರಬೇತಿಯನ್ನು ನೀಡುತ್ತಲಿದೆ. ಶ್ರೇಷ್ಠ ಹಿರಿಯ ಕಲಾವಿದರು, ಶ್ಲಾಘನೀಯ ಗುರುಗಳ ಮಾರ್ಗದರ್ಶನ ನೀಡುತ್ತ ವೃತ್ತಿಪರ ಕಲಾವಿದರನ್ನು ಸಿದ್ಧಗೊಳಿಸುವಂಥ ವಿಶೇಷ ಕಾರ್ಯವನ್ನು ಮಾಡುತ್ತಲಿದೆ. ದೇಶದ ವಿವಿಧೆಡೆಗಳಲ್ಲಿ ಸಂಗೀತ ಸಮ್ಮೇಳನಗಳನ್ನು ಹಮ್ಮಿಕೊಂಡು ಭಾರತೀಯ ಸಂಗೀತದ ಪ್ರಚಾರ ಹಾಗೂ ಪ್ರಸಾರವನ್ನು ಐ.ಟಿ.ಸಿ.-ಎಸ್.ಆರ್.ಎ. ಮಾಡುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾನಗರಿ ಧಾರವಾಡದಲ್ಲಿಯೂ ಕೂಡ ಎರಡು ದಿನಗಳ ಐ.ಟಿ.ಸಿ. ಮಿನಿ ಸಂಗೀತ ಸಮ್ಮೇಳನವನ್ನು ಹಮ್ಮಿಕೊಳ್ಳುವ ಕಾರ್ಯಕ್ಕೆ ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಸಜ್ಜಾಗಿವೆ. ಇದಕ್ಕೆ ಕೋಲ್ಕತ್ತಾದ ಐ.ಟಿ.ಸಿ. ಸಂಗೀತ ರಿಸರ್ಚ್ ಅಕಾಡೆಮಿಯೂ ಕೈಜೋಡಿಸಿದೆ. ದಿನಾಂಕ 21 ಸೆಪ್ಟೆಂಬರ್ ಮತ್ತು 22 ಸೆಪ್ಟೆಂಬರ್…
ಬೈಂದೂರು : ಶಾರದಾ ವೇದಿಕೆಯಲ್ಲಿ ಸುರಭಿ (ರಿ.) ಬೈಂದೂರು ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ 25ರ ರಜತಯಾನ ಚಾಲನೆ ಹಾಗೂ ಲಾಂಛನ ಅನಾವರಣವು ದಿನಾಂಕ 14 ಸೆಪ್ಟೆಂಬರ್ 2024ರಂದು ನಡೆಯತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ. ಜಯಪ್ರಕಾಶ್ ಮಾವಿನಕುಳಿ ಇವರು ಮಾತನಾಡಿ “ಮರೆಯುವ-ಮೆರೆಯುವ ಇಂದಿನ ಕಾಲಘಟ್ಟದಲ್ಲಿ ಉದಾತ್ತವಾಗಿ ಚಿಂತನೆ ಮಾಡುವ ಮನಸ್ಸುಗಳು ಬೇಕಾಗಿವೆ. ಮಕ್ಕಳಿಗೆ ನಿಜವಾಗಿಯೂ ಅಗತ್ಯವಿರುವ ಪ್ರೀತಿ, ವಿಶ್ವಾಸ, ವಿಶಾಲ ಮನೋಭಾವವನ್ನು ತುಂಬಲು ಮರೆತಿರುವ ನಾವುಗಳು ಪರಸ್ಪರ ನಂಬಿಕೆಯನ್ನು ಕಳೆದುಕೊಂಡು ಯಾಂತ್ರಿಕ ಜಗತ್ತಿನ ದಾಸರಾಗಿ ಬದುಕುತ್ತಿರುವುದು ವಿಪರ್ಯಾಸ. ಧಾವಂತದ ಬದುಕಿನಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಹಿಂದಿಕ್ಕಿ ಹೋಗುತ್ತಿದ್ದೇವೆ. ಆಧುನಿಕ ಬದುಕಿನ ಅಗತ್ಯತೆಗಳ ನಡುವೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಬದುಕು ಸುಂದರವಾಗುತ್ತದೆ. ಸಾಹಿತಿ, ಕಲಾವಿದರು, ಚಿಂತಕರಿಂದ ಊರಿಗೆ ಘನತೆ ಹೆಚ್ಚುತ್ತದೆಯೇ ಹೊರತು ಹಣವಂತರಿಂದ ಅಲ್ಲ ಎಂಬುದನ್ನು ಮರೆಯಬಾರದು” ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಇವರು ಸುರಭಿ ರಜತಯಾನಕ್ಕೆ…
ಬೆಂಗಳೂರು : ಕನ್ನಡ ಯುವಜನ ಸಂಘ (ರಿ.) ಇದರ ವತಿಯಿಂದ ಡಾ. ಎಸ್.ಎಲ್. ಭೈರಪ್ಪರವರ ‘ಪರ್ವ’ ಕಾದಂಬರಿಯ ಒಂದು ವಿಶ್ಲೇಷಣೆಯನ್ನು ದಿನಾಂಕ 19 ಸೆಪ್ಟೆಂಬರ್ 2024ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಕನ್ನಡ ಯುವಜನ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಲೇಖಕರು, ಕಲಾವಿದರು ಹಾಗೂ ಖ್ಯಾತ ವಕೀಲರಾದ ಶ್ರೀ ನೊಣವಿನಕೆರೆ ರಾಮಕೃಷ್ಣಯ್ಯ ಇವರು ಉಪನ್ಯಾಸ ನೀಡಲಿದ್ದು, ಕನ್ನಡ ಯುವಜನ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ ರೆಡ್ಡಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಕನ್ನಡ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮಹಾಂತೇಶ ದೇಗಾವಿ ಇವರು ಪ್ರಸ್ತಾವನೆ ನೀಡಲಿದ್ದಾರೆ.
ಗುಂಡ್ಮಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ, ಸಾಸ್ತಾನ ರೋಟರಿ ಕ್ಲಬ್ ಸಹಕಾರದಲ್ಲಿ ಗುಂಡ್ಮಿ ಸಾಲಿಗ್ರಾಮದ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ದಿನಾಂಕ 15 ಸೆಪ್ಟೆಂಬರ್ 2024ರಂದು ಜಿ. ಸರೋಜಮ್ಮ ಪ್ರಾಯೋಜಿತ ಪುಂಡಲೀಕ ಹಾಲಂಬಿ ದತ್ತಿ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಇವರಿಗೆ ‘ಪುಂಡಲೀಕ ಹಾಲಂಬಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪತ್ರಕರ್ತ ಎಸ್. ಜನಾರ್ದನ ಮರವಂತೆ ಪ್ರಶಸ್ತಿ ಪ್ರದಾನ ಮಾಡಿದರು. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ. ಕುಂದರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ಭಾಷಣ ಮಾಡಿದರು. ಶಿಕ್ಷಕ ನರೇಂದ್ರ ಕುಮಾರ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ಹಾಲಂಬಿ ಅವರ ಪತ್ನಿ ಜಿ. ಸರೋಜಮ್ಮ, ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ಗೋಳಿಗರಡಿ ಮೇಳದ…
ಕುಂಬಳೆ : ತೆಂಕುತಿಟ್ಟು ಯಕ್ಷಗಾನದ ತವರೂರು ಕುಂಬಳೆಯ ಕಣಿಪುರ ಕ್ಷೇತ್ರದಲ್ಲಿ ದಿನಾಂಕ 29 ಸೆಪ್ಟೆಂಬರ್ 2024ರಂದು ಇಡೀ ದಿನ ವಿಶೇಷ ಭಜನಾ ಕಮ್ಮಟ ಜರುಗಲಿದೆ. ಕನ್ನಡದ ಖ್ಯಾತ ಗಾಯಕ ಶ್ರೀ ಶಂಕರ್ ಶ್ಯಾನುಭೋಗ್ ಸಾರಥ್ಯದಲ್ಲಿ ಜರಗುವ ಕಮ್ಮಟವನ್ನು ಕಾಸರಗೋಡಿನ ಜನಪ್ರಿಯ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ಸಹ ಸಂಸ್ಥೆಗಳಾದ ನಾರಿ ಚಿನ್ನಾರಿ ಮತ್ತು ಸ್ವರ ಚಿನ್ನಾರಿ ಆಯೋಜಿಸಿದೆ. ಕನ್ನಡದ ಖ್ಯಾತ ಗಾಯಕ ಶ್ರೀ ಶಂಕರ್ ಶ್ಯಾನುಭೋಗ್ ನೇತೃತ್ವದಲ್ಲಿ ನಡೆಯುವ ಭಕ್ತಿರಸ ಕಾರ್ಯಾಗಾರವು ಭಜನೆ, ಭಾವಗೀತೆ ಕಲಿಕೆಗೆ ಸೀಮಿತವಾಗಿದ್ದು. ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರುಗಲಿದೆ. ಕನ್ನಡನಾಡಿನ ದಾಸ ಪರಂಪರೆಯ ಗಾಯನ ಮತ್ತು ಭಾವಗೀತೆಗಳನ್ನು ವಿನೂತನ ಧಾಟಿಯಲ್ಲಿ ಕಲಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ. ಇದರಲ್ಲಿ ಪಾಲ್ಗೊಳ್ಳುವವರಿಗೆ ಹಾಡುವುದಕ್ಕಿಂತ ಭಿನ್ನವಾಗಿ ಹೊಸ ರಾಗ, ಶೈಲಿ ಕಲಿಯುವ ಅವಕಾಶ ಒದಗಲಿದೆ. ಬೆಳಿಗ್ಗೆ ಉದ್ಘಾಟನೆಗೊಂಡು ಸಂಜೆ 4ರ ತನಕ ನಡೆಯುವ ‘ಭಕ್ತಿರಸ’ ಗಾಯನ ಕಲಿಕಾ ಕಮ್ಮಟದಲ್ಲಿ ಕುಂಬಳೆ ಸಮೀಪದ ಸುಮಾರು 500 ಭಜನಾರ್ಥಿಗಳು ಪಾಲ್ಗೊಳ್ಳುವುದನ್ನು ಕಣಿಪುರ ಕ್ಷೇತ್ರದಲ್ಲಿ ನಡೆದ ಭಜಕರ…
ಬದಿಯಡ್ಕ : ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಸಭಾಂಗಣದಲ್ಲಿ ದಿನಾಂಕ 15 ಸೆಪ್ಟೆಂಬರ್ 2024ರಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಕೇಂದ್ರ ಕಚೇರಿ, ಹಾಸನ, ಕಾಸರಗೋಡು ಜಿಲ್ಲಾ ಘಟಕ, ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕಾಸರಗೋಡಿನ ವಿಸ್ಡಮ್ ಇನ್ಸ್ಟಿಟ್ಯೂಷನ್ಸ್ ನೆಟ್ವರ್ಕ್ ಸಂಯುಕ್ತ ಆಶ್ರಯದಲ್ಲಿ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ, ಸಂಸ್ಕೃತಿ ಸಮ್ಮೇಳನವು ನಡೆಯಿತು. ಈ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು ‘ಯಾರು ಏನೇ ಹೇಳಿದರೂ ಕೃಷಿಕರು ದೇಶದ ಕಾಯಕ ಯೋಗಿಗಳು. ಕೃಷಿಕರು ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಾರೆ. ದೇಶದ ಪ್ರಗತಿಯಲ್ಲಿ ಅವರ ಕೊಡುಗೆ ಮಹತ್ವ ಪಡೆದಿದೆ. ಸಾಹಿತ್ಯ, ಶಿಕ್ಷಣ, ಕೃಷಿ, ಸಂಸ್ಕೃತಿ ಎಂಬ ಪ್ರಧಾನ ಅಂಶಗಳನ್ನು ಸೇರಿಸಿಕೊಂಡು ನಡೆಯುವ ಈ ಸಮ್ಮೇಳನವು ಯಾವ ಅಖಿಲ ಭಾರತ ಮಟ್ಟದ ಸಮ್ಮೇಳನಕ್ಕೂ ಕಡಿಮೆಯಲ್ಲ’ ಎಂದು ಶ್ಲಾಘಿಸಿದರು. ಶಿಕ್ಷಣ ತಜ್ಞ ವಿ.ಬಿ.…
ಬೆಳ್ತಂಗಡಿ : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಹಯೋಗದಲ್ಲಿ ಯಕ್ಷಗಾನ ಮಹೋಪಾಧ್ಯಾಯ ನೆಡ್ಲೆ ನರಸಿಂಹ ಭಟ್ ಅವರ ಸಂಸ್ಮರಣೆಗಾಗಿ ‘ಯಕ್ಷಾವತರಣ-5’ ಎಂಬ ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ ಹಾಗೂ ‘ಯಶೋ’ ಯಕ್ಷನಮನ – ಗಾನ ನೃತ್ಯ ಚಿತ್ರ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿನಾಂಕ 23-09-2024ರಿಂದ 30-09-2024ರವರೆಗೆ ಬೆಳ್ತಂಗಡಿ ಲಯ್ಲಾದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 23 ಸೆಪ್ಟೆಂಬರ್ 2024ರಂದು ‘ಭೀಷ್ಮಪರ್ವ’, ದಿನಾಂಕ 24 ಸೆಪ್ಟೆಂಬರ್ 2024ರಂದು ‘ಇಂದ್ರತಂತ್ರ – ಪ್ರಹ್ಲಾದಶಾಪ’, ದಿನಾಂಕ 25 ಸೆಪ್ಟೆಂಬರ್ 2024ರಂದು ‘ಶಲ್ಯ ಸಾರಥ್ಯ’, ದಿನಾಂಕ 26 ಸೆಪ್ಟೆಂಬರ್ 2024ರಂದು ‘ವಾಮನ ಚರಿತ್ರೆ’, ದಿನಾಂಕ 27 ಸೆಪ್ಟೆಂಬರ್ 2024ರಂದು ‘ಕರ್ಣಭೇದನ’, ದಿನಾಂಕ 28 ಸೆಪ್ಟೆಂಬರ್ 2024ರಂದು ‘ಅಗ್ನಿಪರೀಕ್ಷೆ – ನಿಜಪಟ್ಟಾಭಿಷೇಕ’, ದಿನಾಂಕ 29 ಸೆಪ್ಟೆಂಬರ್ 2024ರಂದು ‘ಗುರುದಕ್ಷಿಣೆ’, ದಿನಾಂಕ 30 ಸೆಪ್ಟೆಂಬರ್…