Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಹಾಕವಿ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ಸಂಸ್ಕೃತ ನಾಟಕವನ್ನಾಧರಿಸಿದ ‘ಸತೀ ಶಕುಂತಲೆ’ ಯಕ್ಷಗಾನ ತಾಳಮದ್ದಳೆಯು ಮಂಗಳೂರು ಆಕಾಶವಾಣಿಯಲ್ಲಿ ಎರಡು ಭಾಗಗಳಾಗಿ ಮೂಡಿ ಬರಲಿದೆ. ಕರ್ನಾಟಕ ಯಕ್ಷಭಾರತಿ ಪುತ್ತೂರು ತಂಡದ ಕಲಾವಿದರು ಭಾಗವಹಿಸಿರುವ ಈ ಯಕ್ಷಗಾನ ತಾಳಮದ್ದಳೆಯ ಮೊದಲನೇ ಭಾಗ ‘ಮುದ್ರಿಕಾ ಪ್ರದಾನ’ವು 25 ಅಕ್ಟೋಬರ್ 2024ರ ಶುಕ್ರವಾರದಂದು ರಾತ್ರಿ ಗಂಟೆ 9.30ಕ್ಕೆ ಪ್ರಸಾರವಾಗಲಿದೆ. ಕಾರ್ಯಕ್ರಮದಲ್ಲಿ ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬ್ಳೆ, ಎಂ.ಕೆ. ರಮೇಶಾಚಾರ್ಯ, ರಮೇಶ ಸಾಲ್ವಣ್ಕರ್ ಹಾಗೂ ಉಮೇಶಾಚಾರ್ಯ ಗೇರುಕಟ್ಟೆ ಪಾತ್ರ ವಹಿಸಲಿದ್ದಾರೆ. ಭಾಗವತರಾಗಿ ಪ್ರಶಾಂತ ರೈ ಪುತ್ತೂರು, ಹಿಮ್ಮೇಳದಲ್ಲಿ ಪಿ. ಟಿ. ಜಯರಾಮ ಭಟ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಸಹಕರಿಸಿದ್ದಾರೆ. ‘ಸತೀ ಸಮಾಗಮ’ – ನವೆಂಬರ್ 1 ಪ್ರಸಂಗದ ಎರಡನೇ ಭಾಗ ‘ಸತೀ ಸಮಾಗಮ’ ದಿನಾಂಕ 1 ನವೆಂಬರ್ 2024ರಂದು ರಾತ್ರಿ 9:30ಕ್ಕೆ ಪ್ರಸಾರವಾಗುವುದು. ಕರ್ನಾಟಕ ಯಕ್ಷಭಾರತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಯೋಜಿಸಿದ ಈ ಯಕ್ಷಗಾನವನ್ನು ಮಂಗಳೂರು ಆಕಾಶವಾಣಿಯ…
ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಮಧುರಧ್ವನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಪ್ರಭಾತ 50ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಸೇವಾ ಕಾರ್ಯಕ್ರಮವು ದಿನಾಂಕ 13 ಅಕ್ಟೋಬರ್ 2024ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆಯಿತು. ಕುಮಾರಿ ಆಶ್ವೀಜ ಉಡುಪ ಇವರ ಹಾಡುಗಾರಿಕೆಗೆ ಕುಮಾರಿ ಮೇಧಾ ಉಡುಪ ಕೊಳಲಿನಲ್ಲಿ ಕುಮಾರಿ ಧನಶ್ರೀ ಶಬರಾಯ ಪಿಟೀಲಿನಲ್ಲಿ ಮತ್ತು ಶ್ರೀ ಶೈಲೇಶ್ ರಾವ್ ಕಟೀಲು ಇವರು ಮೃದಂಗದಲ್ಲಿ ಸಹಕರಿಸಿದರು.
ಕಿನ್ನಿಗೋಳಿ : ಖ್ಯಾತ ಸಾಹಿತಿ ಅಚ್ಚುತ ಗೌಡ ಕಿನ್ನಿಗೋಳಿ ಇವರ ಶತಮಾನೋತ್ಸವ ಆಚರಣೆ ಹಾಗೂ ಡಾ. ಬಿ. ಜನಾರ್ದನ ಭಟ್ ಇವರ 99, 100 ಹಾಗೂ 101ನೇ ಕೃತಿಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 20 ಅಕ್ಟೋಬರ್ 2024ರಂದು ಸಂಜೆ 4-00 ಗಂಟೆಗೆ ಕಿನ್ನಿಗೋಳಿ ಮೇರಿವೆಲ್ ಶಾಲೆ ಬಳಿಯಿರುವ ‘ಶ್ರೀಗಂಧ’ ನಿವಾಸದಲ್ಲಿ ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಡಾ. ಕೆ. ಚಿನ್ನಪ್ಪ ಗೌಡ ಅ.ಗೌ. ಸಂಸ್ಮರಣೆ ಮಾತುಗಳನ್ನಾಡಲಿದ್ದು, ಆಶ್ವೇಜಾ ಉಡುಪ ಅಚ್ಯುತ ಗೌಡರ ಕಾವ್ಯಗಳ ಗಾಯನ ಮಾಡಲಿದ್ದಾರೆ. ಡಾ. ಬಿ. ಜನಾರ್ದನ ಭಟ್ ಇವರ 99ನೇ ಕೃತಿ ‘ಕಪ್ಪೆ ಹಿಡಿಯುವವನ’ ಕಥಾ ಸಂಕಲನವನ್ನು ಶ್ರೀ ಬಿ. ರಾಮಚಂದ್ರ ಆಚಾರ್ಯ, 100ನೇ ಕೃತಿ ‘ಕನ್ನಡ ಕಾದಂಬರಿ ಮಾಲೆ’ಯನ್ನು ಕ.ಸಾ.ಪ. ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹಾಗೂ ‘ಹೊಸನೋಟಗಳ ಸಮಾಜ ವಿಮರ್ಶಕ ಸಾಹಿತಿ ಅ.ಗೌ. ಕಿನ್ನಿಗೋಳಿ’ ಎಂಬ 101ನೇ ಕೃತಿಯನ್ನು ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ…
ಉಪ್ಪಳ: ಜೋಡುಕಲ್ಲು ಕಯ್ಯಾರು ಸೊಂದಿ ಶ್ರೀ ದುರ್ಗಾಲಯದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಮಂಗಲ್ಪಾಡಿ ಯಕ್ಷ ಮೌಕ್ತಿಕ ಮಹಿಳಾ ಕೂಟದ ಸದಸ್ಯೆಯರಿಂದ ‘ಮತ್ಸ್ಯಾವತಾರ’ ಎಂಬ ಯಕ್ಷಗಾನ ತಾಳಮದ್ದಳೆ ದಿನಾಂಕ 05 ಅಕ್ಟೋಬರ್ 2024ರ ಶನಿವಾರದಂದು ನಡೆಯಿತು. ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ರಮೇಶ ಭಟ್ ಪುತ್ತೂರು, ಚೆಂಡೆ ಮದ್ದಳೆಯಲ್ಲಿ ಸಮರ್ಥ ಉಡುಪ ಹಾಗೂ ತೇಜಸ್ ಬಲ್ಲಾಳ್ ಸಹಕರಿಸಿದರು. ಅರ್ಥಧಾರಿಗಳಾಗಿ ಶ್ರೀಮತಿಯರಾದ ರಾಜಶ್ರೀ ನಾವಡ, ಜಯಲಕ್ಷ್ಮೀ ಮಯ್ಯ, ಸರಸ್ವತಿ ಹೊಳ್ಳ, ಲತಾ ನಾವಡ ಹಾಗೂ ಜಯಲಕ್ಷ್ಮೀ ಕಾರಂತ ಭಾಗವಹಿಸಿದ್ದರು. ಐಲ ಕ್ಷೇತ್ರದಲ್ಲಿ ತಾಳಮದ್ದಳೆ ಉಪ್ಪಳ : ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಯಕ್ಷ ಮೌಕ್ತಿಕ ಮಹಿಳಾ ಕೂಟ ಮಂಗಲ್ಪಾಡಿ ಇದರ ಸದಸ್ಯೆಯರಿಂದ ‘ಗರುಡ ಗರ್ವಭಂಗ’ ಯಕ್ಷಗಾನ ತಾಳಮದ್ದಳೆ ದಿನಾಂಕ 08 ಅಕ್ಟೋಬರ್ 2024ರ ಮಂಗಳವಾರದಂದು ನಡೆಯಿತು. ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಹರೀಶ್ ಬಳಂತಿಮೊಗರು, ಚೆಂಡೆ ಮದ್ದಳೆಯಲ್ಲಿ ಲಕ್ಷ್ಮೀಶ ಬೇಂಗ್ರೋಡಿ ಹಾಗೂ ರಾಜೇಂದ್ರ ಪ್ರಸಾದ್ ಪುಂಡಿಕಾಯಿ ಸಹಕರಿಸಿದರು. ಅರ್ಥಧಾರಿಗಳಾಗಿ ಶ್ರೀಮತಿಯರಾದ ಲತಾ ನಾವಡ,…
ಮೂಲ್ಕಿ : ಕಾಳಿಕಾಂಬಾ ದೇವಸ್ಥಾನ ಕೊಲಕಾಡಿ, ಮೂಲ್ಕಿಯ ಅಂಗ ಸಂಸ್ಥೆ ಜೈ ಜಗದಂಬಾ ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ ಹಾಗೂ ಸಮ್ಮಾನ ಸಮಾರಂಭವು ದಿನಾಂಕ 12 ಅಕ್ಟೋಬರ್ 2024ರಂದು ಕ್ಷೇತ್ರದ ಕೀರ್ತಿಶೇಷ ಪಂಜಿನಡ್ಕ ನಾರಾಯಣ ಕಾಮತ್ (ಭಾಗವತರು) ಸಭಾವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿಯ ಹಿರಿಯ ವಕೀಲರಾದ ಆತ್ರಾಡಿ ಪೃಥ್ವಿರಾಜ ಹೆಗ್ಡೆ ಮಂಡಳಿಯ ಕಾರ್ಯ ವೈಖರಿಯನ್ನು ಶ್ಲಾಘಿಸಿ “ಉತ್ತಮ ಸಮಾಜಕ್ಕೆ ಪ್ರೇರಣೆಯಾಗಲಿ.” ಎಂದು ಹಾರೈಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶೈಲೇಶ್ ಆಚಾರ್ಯ ಪನ್ವೇಲ್ ನವಿ ಮುಂಬಯಿ, ಕೆ. ಉಮೇಶ್ ಆಚಾರ್ಯ ಪೊಳಲಿ ಕೈರಂಗಳ, ರಾಮದಾಸ ಶೆಟ್ಟಿ ಬಾಳಿಕೆ ಮನೆ ಪುತ್ತೂರು ಭಾಗವಹಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೆ. ಸುಧಾಕರ ಆಚಾರ್ಯ, ಮೊಕ್ತೇಸರ ಜಗದೀಶ ಆಚಾರ್ಯ ಮಾನಂಪಾಡಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಕೆ. ಸುಬ್ರಾಯ ಆಚಾರ್ಯ, ಕೂಡುವಳಿಕೆ ಮೊಕ್ತೇಸರರಾದ ಸದಾಶಿವ ಆಚಾರ್ಯ, ವಿಶ್ವಬ್ರಾಹ್ಮಣ ಯುವಕ ವೃಂದದ ಅಧ್ಯಕ್ಷರಾದ ಶರತ್ ಕುಮಾರ್, ಮಹಿಳಾ ಬಳಗದ ಅಧ್ಯಕ್ಷೆಯಾದ ಪ್ರೇಮಾ ಸುಧಾಕರ್ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.…
ಮಂಗಳೂರು : ಮಂಗಳೂರಿನ ಪ್ರತಿಷ್ಟಿತ ನೃತ್ಯ ಸಂಸ್ಥೆಯಾದ ನೃತ್ಯಾಂಗನ್ ಮತ್ತು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಮಂಗಳೂರು ಇವರು ಪ್ರಸ್ತುತ ಪಡಿಸುವ ‘ನೃತ್ಯ ಲಹರಿ’ ಎಂಬ ಶಾಸ್ತ್ರೀಯ ನೃತ್ಯ ಸರಣಿ ಕಾರ್ಯಕ್ರಮವನ್ನು ಅಕ್ಟೋಬರ್ ನಿಂದ ದಶಂಬರ ತಿಂಗಳಿನವರೆಗೆ ಆಯೋಜಿಸಿದ್ದು, ಅದರ ಮೊದಲ ಕಾರ್ಯಕ್ರಮವು ದಿನಾಂಕ 20 ಅಕ್ಟೋಬರ್ 2024ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯ ನೃತ್ಯ ಗುರುಗಳ ಎಂಟು ವಿದ್ಯಾರ್ಥಿಗಳು ಮಂಗಳೂರಿನ ಖ್ಯಾತ ನೃತ್ಯ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ನಿರ್ದೇಶನದಲ್ಲಿ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ. ಬಳಿಕ ಬೆಂಗಳೂರಿನ ಪ್ರಸಿದ್ಧ ನೃತ್ಯ ಪಟು ವಿದ್ವಾನ್ ಪ್ರವೀಣ್ ಕುಮಾರ್ ಹಾಗೂ ಅವರ ಸಂಸ್ಥೆ ಚಿತ್ಕಲ ಇದರ ಕಲಾವಿದೆಯರು ‘ತ್ಯಾಗರಾಜ ಹೃತ್ ಸಾಧನ’ ನೃತ್ಯ ಪ್ರಸ್ತುತಿಯನ್ನು ಪ್ರದರ್ಶಿಸಲಿದ್ದಾರೆ. ಟಿಕೇಟ್ ಖರೀದಿಸಿ ನೃತ್ಯಾಸಕ್ತರು ಕಲಾಸ್ವಾದನೆಗೆ ಬರಬೇಕೆಂದು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ ರಾಧಿಕಾ ಶೆಟ್ಟಿ ತಿಳಿಸಿರುತ್ತಾರೆ.
ಉಡುಪಿ : ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ರಂಗಭೂಮಿ (ರಿ.) ಉಡುಪಿ ಇವರು ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ ನೀಡಲಿರುವ ‘ಪುಸ್ತಕ ಪ್ರಶಸ್ತಿ’ಗೆ ಸ್ವತಂತ್ರ ನಾಟಕ ಕೃತಿಗಳನ್ನು ಆಹ್ವಾನಿಸಲಾಗಿದೆ. ಆದರ್ಶ ಆಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ರಂಗಭೂಮಿ (ರಿ.) ಉಡುಪಿಯು, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ ನಾಟಕರಂಗಕ್ಕೆ ಪ್ರಸ್ತುತವಾದ ಪುಸ್ತಕ ಪ್ರಶಸ್ತಿಯೊಂದನ್ನು ಕಳೆದ (2023) ವರ್ಷದಿಂದ ಆರಂಭಿಸಿತ್ತು. ಈ ಪ್ರಶಸ್ತಿಯು ರಂಗಭೂಮಿಗೆ ಪ್ರಸ್ತುತವಾದ, ಪರಿಶೀಲನ ಅವಧಿಯಲ್ಲಿ ಪ್ರಕಟವಾದ ನಾಟಕೇತರ ಸಾಹಿತ್ಯಕೃತಿ ಅಥವಾ ಅತ್ಯುತ್ತಮ ನಾಟಕ ಕೃತಿಯನ್ನು ಪರ್ಯಾಯ ವರ್ಷಗಳಲ್ಲಿ ಸ್ಪರ್ಧೆಯ ಮೂಲಕ ಗುರುತಿಸಿ ಪುರಸ್ಕರಿಸುವ ಮೂಲಕ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯನ್ನು ನಿರಂತರವಾಗಿ ನಡೆಸುವ ಯೋಜನೆಯಾಗಿದೆ. ‘ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರ’ ಎಂದು ಕರೆಯಲ್ಪಡುವ ಈ ‘ಪುಸ್ತಕ ಪ್ರಶಸ್ತಿ’ಯು ರಂಗಭೂಮಿ (ರಿ.) ಉಡುಪಿಯು ಆಯೋಜಿಸುವ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನಗೊಳ್ಳಲಿದ್ದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಹದಿನೈದು…
ಜಗನ್ನಾಥ ಗಾಣಿಗ ಸಿಪಾಯಿ ಮನೆ ಇವರು ರತ್ನ ಗಾಣಿಗ ಹಾಗೂ ಅಂತ ಗಾಣಿಗ ಇವರ ಸುಪುತ್ರರಾಗಿ 12-02-1979ರಂದು ಜನಿಸಿದರು. ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸದ ನಂತರ ನಮ್ಮ ಭೂಮಿ ಎಂಬ ಎನ್.ಜಿ.ಒ. ಸಂಸ್ಥೆ ಇವರ ಕಾರ್ಯಕ್ಷೇತ್ರ. ಈ ಸಂಸ್ಥೆಯೇ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಪ್ರಸಂಗಕರ್ತರಾಗಿ, ಭಾಗವತರಾಗಿ, ಯಕ್ಷ ಗುರುಗಳಾಗಿ ಅನೇಕ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಶ್ರೀಯುತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪಾತ್ರದ ಬಗ್ಗೆ, ಪ್ರಸಂಗದ ಬಗ್ಗೆ ಅಧ್ಯಯನ ಮಾಡಿಕೊಂಡು, ಹಿರಿಯ, ಅನುಭವಿ ಕಲಾವಿದರಲ್ಲಿ ಮಾರ್ಗದರ್ಶನ ಪಡೆದು, ಸಾಂದರ್ಭಿಕವಾಗಿ, ಸಕಾಲಿಕವಾಗಿ, ಸ್ವಂತ ನಿಲುವನ್ನು ಸೇರಿಸಿಕೊಂಡು ರಂಗವನ್ನು ಪ್ರವೇಶಿಸುವ ಇವರ ಪೂರ್ವ ಭಾವಿ ತಯಾರಿ ಶ್ಲಾಘನೀಯ. ಕಂಸ ವಧೆ, ಶ್ರೀ ದೇವಿ ಮಹಾತ್ಮೆ, ರತ್ನಾವತಿ ಕಲ್ಯಾಣ, ಸುಂದೋಪಸುಂದ ಕಾಳಗ, ಶ್ವೇತ ಕುಮಾರ ಚರಿತ್ರೆ, ಜಾಂಬವತಿ ಕಲ್ಯಾಣ ಇವರ ನೆಚ್ಚಿನ ಪ್ರಸಂಗಗಳಾದರೆ ಕಂಸ, ಜಾಂಬವ, ದುರ್ಜಯ, ಭಧ್ರಸೇನ, ಮಧು, ಕೈಟಭ, ಚಂಡ, ಮುಂಡ, ಅರ್ಜುನ ಇವು ನೆಚ್ಚಿನ…
ಮಂಗಳೂರು : ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇದರ ತ್ರಿಂಶೋತ್ಸವ ಸಂಭ್ರಮದ ಅಂಗವಾಗಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಇದರ ಸಹಯೋಗದೊಂದಿಗೆ ಅರ್ಪಿಸುವ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಮೃತ -10’ದಲ್ಲಿ ‘ಭಾವ ನವನವೀನ’ ದಿನಾಂಕ 19-10-2024ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಅಡಿಟೋರಿಯಂನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಬೋಳೂರು ದ್ರಾವಿಡ ಸಮಾಜೋದ್ಧಾರಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಸುಮಂತ ಕುಮಾರ್ ಇವರು ಉದ್ಘಾಟಿಸಲಿದ್ದು, ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. 5-50 ಗಂಟೆಗೆ ನಡೆಯಲಿರುವ ಮೇಳ ಪ್ರಾಪ್ತಿಗೆ ನಟುವಾಂಗ ಮತ್ತು ನೃತ್ಯ ನಿರ್ದೇಶನ ಗುರು ಸುಮಂಗಲಾ ರತ್ನಾಕರ್ ರಾವ್ ಹಾಗೂ ಹಾಡುಗಾರಿಕೆ ವಿದ್ವಾನ್ ರೋಹಿತ್ ಭಟ್ ಉಪ್ಪೂರ್. ಇವರಿಗೆ ಬೆಂಗಳೂರಿನ ವಿದ್ವಾನ್ ಕಾರ್ತಿಕ್ ವೈಧಾತ್ರಿ ಮೃದಂಗ ಮತ್ತು ವಿದ್ವಾನ್ ರಾಕೇಶ್ ದತ್ತ್ ಕೊಳಲಿನಲ್ಲಿ ಸಹಕರಿಸಲಿರುವರು. ಬಳಿಕ ವಿದುಷಿ ಸುಮಂಗಲಾ ರತ್ನಾಕರ್ ರಾವ್, ವಿದುಷಿ ಅನು…
ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕರ್ನಾಟಕ ಸಂಭ್ರಮ-50ರ ಅಭಿಯಾನದ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವಿಭಾಗವಾರು ‘ಯುವಕವಿ ಗೋಷ್ಠಿ’ಗಳನ್ನು ಆಯೋಜಿಸಲಾಗಿದ್ದು, ಆಸಕ್ತ 20ರಿಂದ 40ವರ್ಷ ವಯಸ್ಸಿನ ಯುವ ಕವಿಗಳಿಂದ ಕವಿತೆಗಳ ಆಹ್ವಾನಿಸಲಾಗಿದೆ. ರಾಜ್ಯದ ಎಲ್ಲಾ ಭಾಗದ ಆಸಕ್ತ ಕವಿಗಳು ಕನಿಷ್ಠ 3 ಕವಿತೆಗಳನ್ನು ಕಳುಹಿಸಿಕೊಡಬಹುದು. ಕವಿತೆಗಳನ್ನು ಕಳುಹಿಸಲು 30 ಅಕ್ಟೋಬರ್ 2024 ಕೊನೆಯ ದಿನ. ಆಸಕ್ತ ಕವಿಗಳು ಕವಿತೆಗಳನ್ನು ಸಲ್ಲಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜಾಲತಾಣದಿಂದ ಮಾಹಿತಿ ಪಡೆದುಕೊಳ್ಳುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.