Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ 164ನೆಯ ಜನ್ಮದಿನ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 15 ಸೆಪ್ಟೆಂಬರ್ 2024ರಂದು ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಇಂದು ನಮ್ಮ ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ಅವರ ಪ್ರತಿಭೆಯನ್ನು ಮನಗಂಡು ಅವರೊಡನೆ ಸಹಕರಿಸಿದ ಮೈಸೂರು ಮಹಾರಾಜರು, ದಿವಾನರುಗಳ ಸಹಯೋಗವೂ ಇದೆ. ನಿಜವಾದ ಅರ್ಥದಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಭಾಗ್ಯವಿಧಾತ, ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಕಾರಣರಾದವರು. ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರ ಸ್ತಂಬಗಳಲ್ಲೊಬ್ಬರಾದ ಸರ್ ಎಂ. ವಿಶ್ವೇಶ್ವರಯ್ಯನವರು ಇಡೀ ದೇಶದ ಬೆಳವಣಿಗೆಗೆ ನೀಲಿನಕ್ಷೆಯನ್ನು ಹಾಕಿದವರು. ಶಿಸ್ತು ಮತ್ತು ಪ್ರಾಮಾಣಿಕತೆಗೆ ಒಂದು ರೂಪಕದಂತಿದ್ದ ಅವರು ತಮ್ಮ ಜೀವಿತ ಕಾಲದಲ್ಲಿಯೇ ದಂತಕತೆಯಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಶ್ರದ್ಧೆಯಿಂದ ಸ್ಮರಿಸಿಕೊಳ್ಳುತ್ತಾ ಅವರು ಹಾಕಿ ಕೊಟ್ಟ ದಾರಿಯಲ್ಲಿ ಮುಂದೆ ಸಾಗಲಿದೆ”…
ಪುತ್ತೂರು : ಬಹುವಚನಂ ಇವರ ವತಿಯಿಂದ ಕೀರ್ತಿಶೇಷ ಪಾದೆಕಲ್ಲು ನಾರಾಯಣ ಭಟ್ಟರ ಜನ್ಮ ಶತಮಾನದ ಸ್ಮರಣಾರ್ಥ ರಾಮಾಯಣದ ಪಾತ್ರಗಳ ಅಂತರಂಗ ಪರಿಚಯ ‘ರಾವಣಾಂತರಂಗ’ ಸ್ವಗತಕಥನ ಕಾರ್ಯಕ್ರಮವನ್ನು ದಿನಾಂಕ 22-09-2024ರಂದು ಸಂಜೆ 4-00 ಗಂಟೆಗೆ ಪುತ್ತೂರಿನ ದರ್ಬೆ ವಿದ್ಯಾನಗರದ ಪದ್ಮಿನೀ ಸಭಾಭವನದಲ್ಲಿ ಆಯೋಜಿಸಿಲಾಗಿದೆ. ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರು ಈ ಕಾರ್ಯಕ್ರಮವನ್ನು ನಡೆಸಲಿರುವರು.
ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಭಾಗವಾಗಿರುವ ‘ಬಹುಭಾಷಾ ಕವಿಗೋಷ್ಠಿ’ಯನ್ನು 2024ನೇ ಸಾಲಿನಲ್ಲಿ ಅಕ್ಟೋಬರ್ 9ರ ಬುಧವಾರದಂದು ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಕವನಗಳನ್ನು ವಾಚನ ಮಾಡಲು ಅಸಕ್ತರಾಗಿರುವ ಕವಿ/ಕವಿಯಿತ್ರಿಯರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಕವಿ/ ಕವಿಯಿತ್ರಿಯರು ಯಾವುದೇ ಒಂದು ಭಾಷೆಯ ಒಂದು ಕವನವನ್ನು ಸೆಪ್ಟೆಂಬರ್ 23ರ ಒಳಗಾಗಿ ಕಳಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ. ಈ ಬಾರಿಯ ಕವಿಗೋಷ್ಠಿಯಲ್ಲಿ ವರ್ಷಂಪ್ರತಿಯಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ಉರ್ದು, ತಮಿಳು, ಮಲೆಯಾಳಂ, ತೆಲುಗು, ಮರಾರಿ, ಸಂಸ್ಕೃತ ಹೀಗೆ ಯಾವುದೇ ಭಾಷೆಯ ಕವನಗಳನ್ನು ‘ಕನ್ನಡ’ ಲಿಪಿಯಲ್ಲಿ ಹಾಗೂ ಹಿಂದಿ, ಇಂಗ್ಲೀಷ್ ಕವನವನ್ನು ಅದೇ ಭಾಷೆಯಲ್ಲಿ ಕಳುಹಿಸಿಕೊಡತಕ್ಕದ್ದು. ಕನ್ನಡ ಭಾಷೆಯ ಚುಟುಕು ಕವನ (4 ಸಾಲಿನ ಗರಿಷ್ಠ 4 ಕವನಗಳಿಗೆ ಮಾತ್ರ ಅವಕಾಶ)ಗಳು, ಮಕ್ಕಳ ಕವನ (6ರಿಂದ 12 ವರ್ಷ ಒಳಪಟ್ಟವರು)ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಕವನಗಳನ್ನು…
ಮಂಗಳೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಶ್ರೀ ಸುಬ್ರಹ್ಮಣ್ಯ ಸಭಾ (ರಿ.) ಇದರ ವತಿಯಿಂದ ಹಬ್ಬಗಳ ಮಹೋತ್ಸವದ ಸಂಭ್ರಮಾಚರಣೆಯ ಸಲುವಾಗಿ ಸಂಗೀತ, ನೃತ್ಯ ಕಾರ್ಯಕ್ರಮವನ್ನು ದಿನಾಂಕ 16 ಸೆಪ್ಟೆಂಬರ್ 2024ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಬಿಜೈ ರಸ್ತೆಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಅತಿಥಿ ಕಲಾವಿದರು ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ವತಿಯಿಂದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರದರ್ಶನ ಫಲಕಗಳ ಅನಾವರಣ, ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯರವರ ಜನ್ಮದಿನಾಚರಣೆ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 15 ಸೆಪ್ಟೆಂಬರ್ 2024ರಂದು ಸಂಜೆ 5-00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಭಾ.ಆ.ಸೇ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದರ್ಶನ್ ಪುಟ್ಟಣ್ಣಯ್ಯರವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಮೇಶಚಂದ್ರ ಲಹೋಟಿಯವರು ಮುಖ್ಯ…
ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಇದರ 2024-25ನೇ ಸಾಲಿನ ರಂಗ ಚಟುವಟಿಕೆಗಳ ‘ನಾಂದಿ ಆರಂಭೋತ್ಸವ’ವನ್ನು ದಿನಾಂಕ 15 ಸೆಪ್ಟೆಂಬರ್ 2024ರಂದು ದಾವಣಗೆರೆಯ ಮೆಡಿಕಲ್ ಕಾಲೇಜ್ ಆವರಣ, ಜೆ.ಜೆ.ಎಂ. ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 10-30 ಗಂಟೆಗೆ ‘ವರ್ತಮಾನ ವೃತ್ತಿ ರಂಗಭೂಮಿ : ಬಿಕ್ಕಟ್ಟು ಮತ್ತು ಪರಿಹಾರ’ ಎಂಬ ವಿಷಯದ ಬಗ್ಗೆ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ಡಾ. ಪ್ರಕಾಶ ಗರುಡ ಇವರು ‘ನಾಟಕ ಕಂಪನಿ ಪರಂಪರೆ ಮತ್ತು ಪ್ರಯೋಗಶೀಲತೆ’, ಶ್ರೀ ಬಸವರಾಜ ಬೆಂಗೇರಿ ಇವರು ‘ಸಾಹಿತ್ಯ ಮತ್ತು ಸಂಗೀತ’ ಮತ್ತು ಶ್ರೀ ಅರುಣ್ ಸಾಗರ್ ಇವರು ‘ರಂಗ ಪರಿಕರ ಮತ್ತು ರಂಗಸಜ್ಜಿಕೆ” ಎಂಬ ವಿಷಯಗಳ ಬಗ್ಗೆ ಪ್ರಬಂಧ ಮಂಡನೆ ಮಾಡಲಿರುವರು. ಬಳಿಕ ರಂಗ ಗೀತೆಗಳ ಗಾಯನ ನಡೆಯಲಿದೆ. ಸಂಜೆ 4-00 ಗಂಟೆಗೆ ಸಾಣೇಹಳ್ಳಿಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇವರ ರಂಗ ಸಾನಿಧ್ಯದಲ್ಲಿ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ಇವರು ಉದ್ಘಾಟನೆ ಮಾಡಲಿದ್ದಾರೆ. ಶಾಸಕರಾದ ಡಾ. ಶಾಮ…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆ ಗೋಣಿಕೊಪ್ಪಲು ಇವರ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ಶ್ರೀಮತಿ ದಿ. ಪುಟ್ಟಮ್ಮ ಮತ್ತು ದಿ. ಹೆಬ್ಬಾಲೆ ನಂಜಾಚಾರ್ ಜ್ಞಾಪಕಾರ್ಥ ದತ್ತಿ ಕಾರ್ಯಕ್ರಮವು ದಿನಾಂಕ 11 ಸೆಪ್ಟೆಂಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ, ಪತ್ರಕರ್ತ ಡಾ. ಜೆ ಸೋಮಣ್ಣ ಇವರು ದತ್ತಿ ಉಪನ್ಯಾಸ ನೀಡುತ್ತಾ “ಹಿಂದಿನ ಕಾಲದ ಎಲ್ಲಾ ದೇವಾಲಯಗಳು ಪ್ರಾಚೀನ ವಿಶೇಷ ಕಟ್ಟಡಗಳು ತಯಾರಾದದ್ದು ವಿಶ್ವಕರ್ಮರಿಂದ. ದ್ವಾರಕ, ಶ್ರೀಲಂಕಾ, ಇಂದ್ರಪ್ರಸ್ಥ ಇವುಗಳೆಲ್ಲದರ ಅರಮನೆಗಳು, ದೇವಾಲಯಗಳ ನಿರ್ಮಾತರು ವಿಶ್ವಕರ್ಮರು. ವಿಶ್ವಕರ್ಮ ಸಮುದಾಯದಲ್ಲಿ ಆಚಾರಿ, ಸಂಚಾರಿ, ಅಕ್ಕಸಾಲಿಗ, ಕಂಚುಗಾರ, ಬಡಗಿ, ಜಾಚಾರ, ಕಲ್ಲುಕುಟಿಗ ಹೀಗೆ ಹತ್ತು ಹಲವು ಪಂಗಡಗಳಿದ್ದು ಅವರೆಲ್ಲರೂ ಕೂಡ ಮರಗೆಲಸ, ಕಲ್ಲು ಕೆಲಸ, ಚಿತ್ರಕಲೆ, ಚಿನ್ನದ ಕೆಲಸ, ಕಬ್ಬಿಣದ ಕೆಲಸ ಇವೆಲ್ಲದರಲ್ಲೂ ಪರಿಣಿತರಾಗಿದ್ದು ಇಂದಿನ ಯಾವುದೇ ಇಂಜಿನಿಯರಿಂಗ್ ತಜ್ಞರಿಗಿಂತಲೂ…
ಬೆಂಗಳೂರು : ಬೆಂಗಳೂರಿನ ಯಕ್ಷದೇಗುಲ ತಂಡ ಆಯೋಜಿಸಿದ 2ನೇ ಶ್ರೀ ರಾಧಾ ಅಷ್ಟಮಿ ಲಲಿತಕಲಾ ಸಾಂಸ್ಕೃತಿಕ ಉತ್ಸವ ಹಾಗೂ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ಯಕ್ಷದೇಗುಲದ ಮಕ್ಕಳ ತಂಡದಿಂದ `ಕಂಸವಧೆ’ ಯಕ್ಷಗಾನ ಪ್ರದರ್ಶನ ದಿನಾಂಕ 12 ಸೆಪ್ಟೆಂಬರ್ 2024ರಂದು ಬೆಂಗಳೂರಿನ ಮಲ್ಲೇಶ್ವರದ ಸೇವಾ ಸದನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗುರು ಪ್ರಿಯಾಂಕ ಕೆ. ಮೋಹನರಿಗೆ ‘ಗಾಂಧರ್ವಿಕಾ ಪ್ರಶಸ್ತಿ–2024’ ನೀಡಿ ಗೌರವಿಸಲಾಯಿತು. ಬಳಿಕ ನಡೆದ ‘ಕಂಸವಧೆ’ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನ ಹೆಗಡೆ, ಮದ್ದಲೆಯಲ್ಲಿ ಸಂಪತ್ ಕುಮಾರ್, ಚಂಡೆಯಲ್ಲಿ ಕಾರ್ತಿಕ್ ಧಾರೇಶ್ವರರವರು ಭಾಗವಹಿಸಿದರು. ಮುಮ್ಮೇಳದಲ್ಲಿ ಮಕ್ಕಳಾದ ಅನಿಕಾ, ಸರಸ್ವತಿ, ಸುಹಾಸ್ ಹೊಳ್ಳ, ಪ್ರತ್ಯೂಷಾ ಶೆಟ್ಟಿ, ಅನೀಶಾ, ಮಾನ್ಯ, ಶ್ರೀ ಗೌರಿ, ಧನ್ಯ ಮತ್ತು ಶಾಶ್ವತ ಹೊಳ್ಳ ಭಾಗವಹಿಸಿದರು. ರಂಗದ ಹಿಂದೆ ಸುದರ್ಶನ ಉರಾಳ, ಉದಯ ಬೋವಿ ಹಾಗೂ ಶ್ರೀರಾಮ ಹೆಬ್ಬಾರ್ ಸಹಕರಿಸಿದರು.
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ‘ಸಿನ್ಸ್ 1999 ಶ್ವೇತಯಾನ-58’ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿರುವ ಆರ್. ವಿ. ಮೆಲೋಡೀಸ್ ಕೋಟೇಶ್ವರ ತಂಡದ ಭಾವಗೀತೆ ಹಾಗೂ ಭಕ್ತಿ ರಸಮಂಜರಿ ಕಾರ್ಯಕ್ರಮವು ದಿನಾಂಕ 12 ಸೆಪ್ಟೆಂಬರ್ 2024ರಂದು ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ದ್ರಾವಿಡ ಬ್ರಾಹ್ಮಣ ಪರಿಷತ್ ಇದರ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ವೈದ್ಯ ಮಾತನಾಡಿ “ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತಿರುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ದೇಗುಲದ ಸೋಣೆ ಆರತಿ ಸಂದರ್ಭ ಭಕ್ತಿ ಸುಧೆಯನ್ನು ಹರಿಸಿ ಮನಸ್ಸನ್ನು ಹಗುರಾಗಿಸಿ, ಭಕ್ತಿ ಮಾರ್ಗಕ್ಕೆ ಕೊಂಡೊಯ್ಯುವ ಪರಿಪಾಟ ಆರೋಗ್ಯಕರ ಲಕ್ಷಣ. ಭಕ್ತಿ ಮಾರ್ಗವು ಮನಸ್ಸಿನ ತುಡಿತಗಳನ್ನು, ಜಂಜಾಟಗಳನ್ನು, ನೋವುಗಳನ್ನು ಮರೆಸುತ್ತದೆ. ಭಕ್ತಿ ಮಾರ್ಗದಲ್ಲಿ ಆನಂದವಿದೆ, ತನ್ಮಯತೆಯ ಭಕ್ತಿಯು ಸರ್ವವನ್ನೂ ಸಮತೋಲನದಲ್ಲಿರಿಸುತ್ತದೆ.” ಎಂದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗಣಪತಿ ಟಿ. ಶ್ರೀಯಾನ್ ಮಾತನ್ನಾಡಿ “ಸಂಸ್ಥೆಯ 25ನೇ ವರ್ಷದ ಕಾರ್ಯಕ್ರಮದ ಉದ್ಘಾಟನೆ ಅವಿಸ್ಮರಣೀಯ. ವರ್ಷಕ್ಕೆ 108 ಕಾರ್ಯಕ್ರಮವನ್ನು…
ಕೋಟ : ಕೋಟತಟ್ಟು ಗ್ರಾ. ಪಂ. ಇವರು ಡಾ. ಕಾರಂತ ಹುಟ್ಟೂರು ಪ್ರತಿಷ್ಠಾನ ಕೋಟ ಇದರ ಸಹಭಾಗಿತ್ವದಲ್ಲಿ ಕೊಡಮಾಡುವ 2024ನೇ ಸಾಲಿನ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಸಾಹಿತಿ ಪ್ರೊ. ಕೃಷ್ಣ ಗೌಡ ಮೈಸೂರು ಅವರು ಅಯ್ಕೆಯಾಗಿದ್ದಾರೆ. “ಕನ್ನಡ ಮಾತುಗಾರಿಕೆಗೆ ಹೊಸ ನೆಲೆಕಟ್ಟು ಮತ್ತು ಚೌಕಟ್ಟು ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ದಿನಾಂಕ 10 ಅಕ್ಟೋಬರ್ 2024ರ ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನದಂದು ಕೋಟ ಕಾರಂತ ಕಲಾಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.” ಎಂದು ಕಾರಂತ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್ ತಿಳಿಸಿದ್ದಾರೆ. 19 ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ.