Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು, ಉಡುಪಿ ಜಿಲ್ಲೆ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳ, ಕರಾವಳಿ ಲೇಖಕರ ವಾಚಕಿಯರ ಸಂಘ, ದಕ್ಷಿಣ ಕನ್ನಡ ಜಿಲ್ಲೆ (ರಿ), ಕಾಸರಗೋಡು ಮತ್ತು ಗೋವಿಂದ ದಾಸ ಕಾಲೇಜು, ಸುರತ್ಕಲ್ ಇವರ ಸಂಯುಕ್ತ ಅಶ್ರಯದಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಬುಡಕಟ್ಟು ಯುವ ಬರಹಗಾರರ ಕಮ್ಮಟದ ಸಮಾರೋಪ ಸಮಾರಂಭವು ದಿನಾಂಕ 14-01-2024 ರಂದು ಶಿಬಿರಾರ್ಥಿಗಳ ಅನುಭವದ ಹಂಚಿಕೆಯೊಂದಿಗೆ ಮೂಡಿ ಬಂತು. ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಮಾತನಾಡಿ “ಶಿಬಿರಾರ್ಥಿಗಳು ತಮ್ಮ ಬರೆಯುವ ಹವ್ಯಾಸದ ಜೊತೆಗೆ ಬದುಕನ್ನು ಉನ್ನತೀಕರಿಸುವ ನೆಲೆಯಲ್ಲಿ ಶ್ರಮಿಸುವುದನ್ನು ಮರೆಯಬಾರದು. ನಮ್ಮನ್ನು ಅರೋಗ್ಯವಂತ ಮನಸ್ಥಿತಿಯಲ್ಲಿ ಇಡಲು ಸಾಹಿತ್ಯ ಸಹಕರಿಸುತ್ತದೆ.” ಎಂದರು. ಸಂಪನ್ಮೂಲ ವ್ಯಕ್ತಿಯಾದ ಶಂಶುದ್ದೀನ್ , ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ‘ನಮ್ಮ ನ್ಯಾಯ ಕೂಟ’ದ ಅಧ್ಯಕ್ಷ ಬಾಲರಾಜ್ ಕೋಡಿಕಲ್, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳದ ಅಧ್ಯಕ್ಷೆ ಸುಶೀಲ ನಾಡ, ಕಮ್ಮಟದ ನಿರ್ದೇಶಕರಾದ ಡಾ. ಸಬಿತಾ ಗುಂಡ್ಮಿ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ…
ಉಡುಪಿ : ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವ ಪ್ರಯುಕ್ತ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ‘ಹರ್ಷ’ ಸ್ವರಾಂಜಲಿ ಕಾರ್ಯಕ್ರಮವು ದಿನಾಂಕ 17-01-2024ರಂದು ಅಜ್ಜರಕಾಡು ಟೌನ್‌ಹಾಲ್‌ನಲ್ಲಿ ನೆರವೇರಿತು. ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಹರ್ಷ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸೂರ್ಯಪ್ರಕಾಶ್ ಕೆ., ಆಪರೇಶನ್ ಡೈರೆಕ್ಟರ್ ಅಶೋಕ್ ಕುಮಾರ್ ಕೆ., ಮಾರ್ಕೆಟಿಂಗ್ ಡೈರೆಕ್ಟರ್ ಹರೀಶ್ ಎಂ., ಎಚ್.ಆರ್. ಡೈರೆಕ್ಟರ್ ಸುರೇಶ್ ಎಂ., ಇನ್ಫ್ರಾಸ್ಟ್ರಕ್ಟರ್ ಡೈರೆಕ್ಟರ್ ರಾಜೇಶ್ ಉದ್ಘಾಟಿಸಿದರು. ಚಿತ್ರನಟಿ ವಿನಯಾ ಪ್ರಸಾದ್ ಕಾರ್ಯಕ್ರಮ ನಡೆಸಿಕೊಟ್ಟರು. ಈ ಬಾರಿಯ ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ‘ಅರಾಜ್’ ಎಂಬ ಯುವ ಪ್ರತಿಭೆಗಳ ತಂಡ ‘ಹರ್ಷ ಸ್ವರಾಂಜಲಿ’ ಕಾರ್ಯಕ್ರಮದ ಮೂಲಕ ಸಂಗೀತ ಲೋಕವನ್ನೇ ಸೃಷ್ಟಿಸಿ, ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು. ಪ್ರತೀಕ್ ಸಿಂಗ್ ಗಾಯನಕ್ಕೆ ಇಶಾನ್ ಘೋಷ್ (ತಬಲಾ), ಮೆಹ್ತಾಬ್ ಅಲಿ ನಿಯಾಝ್ (ಸಿತಾರ್), ವನರಾಜ್ ಶಾಸ್ತ್ರೀ (ಸಾರಂಗಿ), ಎಸ್.…
ಬೆಂಗಳೂರು : ಸಂಪತ್ ಮರಾಠೆ ಮತ್ತು ಮಮತಾ ಮರಾಠೆ ಅವರ ಪುತ್ರಿ ಮಾಹಿ ಮರಾಠೆ ಅವರ ಭರತನಾಟ್ಯ ರಂಗ ಪ್ರವೇಶ ಬೆಂಗಳೂರಿನ ಜಯನಗರದ ವಿವೇಕ ಆಡಿಟೋರಿಯಂನಲ್ಲಿ ದಿನಾಂಕ 06-01-2024ರಂದು ನಡೆಯಿತು. ಸಾಂಪ್ರದಾಯಿಕ ಪುಷ್ಪಾಂಜಲಿಯೊಂದಿಗೆ ನೃತ್ಯ ಆರಂಭವಾಯಿತು. ನಂತರ ರುದ್ರ ಶ್ಲೋಕ ಪ್ರಸ್ತುತಪಡಿಸಲಾಯಿತು. ಶಿವನ ಗುಣ ಮತ್ತು ಶಕ್ತಿಯನ್ನು ಕಲಾವಿದೆ ಪರಿಪೂರ್ಣವಾಗಿ ಅಭಿವ್ಯಕ್ತಪಡಿಸಿದರು. ಪುರಂದರದಾಸರ ಕೃತಿ ಜಗದೋದ್ಧಾರನ ಆಡಿಸಿದಳೆಶೋದೆ ಮೂಲಕ ವಿಸ್ಮಯ, ಭಕ್ತಿ ಮುಂತಾದ ಹಲವು ಭಾವಗಳನ್ನು ನಿರ್ವಹಿಸಿ ಪ್ರೇಕ್ಷಕರನ್ನು ಮೂಕವಿಸ್ಮಿತಗೊಳಿಸಿದರು. ವಿಠಲನನ್ನು ಸ್ತುತಿಸುವ ಬೃಂದಾವನಿ ವೇಣು ಅಭಂಗ್ ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು. ಭರತನಾಟ್ಯದ ಕೊನೆಯ ಭಾಗ ತಿಲ್ಲಾನ ಮತ್ತು ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಉದಯ ಕುಮಾರ್ (ನಟುವಾಂಗ), ವಿದ್ವಾನ್ ಶ್ರೀವತ್ಸ (ಹಾಡುಗಾರಿಕೆ), ವಿದ್ವಾನ್ ಗುರುಮೂರ್ತಿ (ಮೃದಂಗ), ವಿದ್ವಾನ್ ಶಂಕರ್ ರಾಮನ್ (ವೀಣೆ), ವಿದ್ವಾನ್ ಭಾರ್ಗವ ಹಾಲಂಬಿ (ರಿದಮ್ ಪ್ಯಾಡ್), ವಿದ್ವಾನ್ ಕಾರ್ತಿಕ್ (ಕೊಳಲು) ಉತ್ತಮ ಸಹಕಾರ ನೀಡಿದರು.
ಮಂಗಳೂರು : ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಂಗಣ ಪುರಭವನದಲ್ಲಿ ದಿನಾಂಕ 23-03-2024 ಮತ್ತು 24-03-2024ರಂದು ನಡೆಯಲಿರುವ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಪುಸ್ತಕಗಳ ಬಿಡುಗಡೆಗೆ ಅವಕಾಶವಿದೆ. ಪುಸ್ತಕ ಬಿಡುಗಡೆ ಮಾಡಲಿಚ್ಛಿಸುವವರು ದಿನಾಂಕ 31-01-2024ರ ಒಳಗೆ ಕೃತಿಯ ವಿವರಗಳೊಂದಿಗೆ ದೂರವಾಣಿ ಮೂಲಕ ಹೆಸರನ್ನು ವಿನಯ ಆಚಾರ್ಯ ಎಚ್. ಗೌರವ ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 9008851030 ಇವರಲ್ಲಿ ನೋಂದಣಿ ಮಾಡಬಹುದು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ತಿಳಿಸಿದ್ದಾರೆ.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 25-01-2024ರಂದು ನಡದ ಕುಮಾರ ವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡುತ್ತಾ “ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬರಾದ ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. ‘ಗದುಗಿನ ನಾರಣಪ್ಪ’ ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಕುವೆಂಪು ‘ಕುಮಾರ ವ್ಯಾಸ ಯುಗ’ವೆಂದು ಕರೆದಿದ್ದು ಅದು ರೂಪಿಸಿದ ಪರಂಪರೆಯ ಹಿನ್ನೆಲೆಯಲ್ಲಿ ಎಂದು ಅಭಿಪ್ರಾಯಪಟ್ಟರು. “ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸ ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದ್ದಾರೆ. ರೂಪಕಗಳೊಂದಿಗೆ ಕುಮಾರವ್ಯಾಸನ…
ಸಾಲಿಗ್ರಾಮ : ಬೆಂಗಳೂರಿನ ಸಮಸ್ತರು ರಾಗ ಸಂಶೋಧನಾ ಕೇಂದ್ರ ಪ್ರಸ್ತುತ ಪಡಿಸುವ ದೇಶಿ ಖ್ಯಾತಿಯ ರಂಗ ನಿರ್ದೇಶಕ, ಸಾಂಸ್ಕೃತಿಕ ಸಂಘಟಕ ಗೋಪಾಲಕೃಷ್ಣ ನಾಯರಿಯವರ ಪ್ರಥಮ ವರ್ಷದ ‘ಸಂಸ್ಮರಣೆ ಕಾರ್ಯಕ್ರಮ’ವು ದಿನಾಂಕ 28-01-2024 ಸಂಜೆ ಗಂಟೆ 5-00ಕ್ಕೆ ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ. ಐರೊಡಿ ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷರಾದ ಶ್ರೀ ಆನಂದ್ ಸಿ. ಕುಂದರ್ ಅಧ್ಯಕ್ಷತೆ ವಹಿಸಲಿದ್ದು, ಉಡುಪಿಯ ರಂಗಕರ್ಮಿ, ರಂಗ ನಿರ್ದೇಶಕರಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್ ಇವರು ಸಂಸ್ಮರಣಾ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ರಂಗಭೂಮಿ ಕಲಾವಿದರು ಹಾಗೂ ನಿರ್ದೇಶಕರಾದ ಶ್ರೀ ಜಯರಾಮ್ ನೀಲಾವರ ಇವರಿಗೆ 2024ರ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೇಬಿ ಸಾನಿಧ್ಯ ನಾಯರಿ, ಕುಮಾರ ನೂತನ ಎಂ. ನಾಯರಿ, ಕುಮಾರಿ ಸಮೀಕ್ಷಾ, ಕುಮಾರಿ ಉನ್ನತಿ ಎಮ್. ನಾಯರಿ ಮತ್ತು ಕುಮಾರಿ ವೈಷ್ಣವಿ ಎನ್. ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿಯವರಿಂದ ಪ್ರೊ. ಎಂ.ಎ. ಹೆಗಡೆ ರಚಿತ ಯಕ್ಷಗಾನ ‘ಲವ…
ಮಂಗಳೂರು : ದೇಶದ ನಾನಾ ಪ್ರತಿಷ್ಠಿತ ವೇದಿಕೆಗಳಲ್ಲಿ ಯಶಸ್ವಿಯಾಗಿ ನಡೆದ ‘ಉತ್ತರ್- ದಕ್ಷಿಣ್’ ಸರಣಿ ಸಂಗೀತ ಕಾರ್ಯಕ್ರಮವನ್ನು ದಿನಾಂಕ 28-01-2024ರಂದು ಸಂಜೆ 5.30ಕ್ಕೆ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ಆಯೋಜಿಸಲಾಗಿದೆ. ನಗರದ ಪ್ರತಿಷ್ಠಿತ ಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಮುಂಬೈನ ವಿವಿದ್ ಆರ್ಟ್ಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಪ್ರಸ್ತುತ ಪಡಿಸುತ್ತಿದ್ದು, 12 ವರ್ಷಗಳಿಂದ ನಡೆಯುತ್ತಿರುವ ಈ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಸಂಗೀತ ಪ್ರಿಯರಿಗೆ ಅಚ್ಚುಮೆಚ್ಚಿನ ಕಚೇರಿಗಳಲ್ಲಿ ಒಂದಾಗಿದೆ. ಇದು ಉತ್ತರಾದಿ ಮತ್ತು ದಕ್ಷಿಣಾದಿ ಹೀಗೆ ಎರಡು ರೀತಿಯ ಸಂಗೀತದೊಂದಿಗೆ ಪ್ರಾದೇಶಿಕ ಸಾಮರಸ್ಯಕ್ಕೆ ಕೊಡುಗೆ ನೀಡುತ್ತದೆ. ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರು, ರಾಂಚಿ ಮತ್ತು ಈಗ ಮಂಗಳೂರಿನಲ್ಲಿ 13ನೇ ಆವೃತ್ತಿಯ ಸಂಗೀತ ಕಚೇರಿಯನ್ನು ಆಯೋಜಿಸಲಾಗಿದೆ. ಉತ್ಕೃಷ್ಟ ಮಟ್ಟದ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು, ಉತ್ತರಾದಿ ಹಾಗೂ ದಕ್ಷಿಣಾದಿ ವಿಭಾಗದ ಸಂಗೀತಪ್ರಿಯರಿಗೆ ಇದೊಂದು ರಸದೌತಣವಾಗಲಿದೆ. ವರ್ಣರಂಜಿತ ಹಿನ್ನಲೆ, ಕಲಾವಿದರ ಕೌಶಲ್ಯ, ಬೆಳಕು, ಧ್ವನಿ ಮತ್ತು ಸಂಗೀತ ಸಭಾಂಗಣದಲ್ಲಿ…
ಮೈಸೂರು : ರಂಗಾಂತರಂಗ ಮೈಸೂರು (ರಿ) ಮತ್ತು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಗಾಂಧಿನಗರ ಮೈಸೂರು ಇವರ ವತಿಯಿಂದ ‘ಮಕ್ಕಳ ರಂಗ ತರಬೇತಿ’ ಉದ್ಘಾಟನಾ ಸಮಾರಂಭವು ದಿನಾಂಕ 28-01-2024ರಂದು ಸಂಜೆ 4.30ಕ್ಕೆ ಗಾಂಧಿನಗರದ ಹರಳಯ್ಯ ರಂಗಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಲಹೆಗಾರರಾದ ಬಸವರಾಜ್ ದೇವನೂರು, ಮೈಸೂರಿನ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿಗಳಾದ ಎನ್. ಮುನಿರಾಜು, ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಮ್.ಡಿ. ಸುದರ್ಶನ್, ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಲಹೆಗಾರರಾದ ಡಾ. ಎಸ್. ತುಕರಾಮ್, ಮೈಸೂರು ತಾಲೂಕು ಮತ್ತು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ದಲಿಂಗು ಕೆ. ಮತ್ತು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಎಮ್. ನಮ್ಮೊಂದಿಗೆ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ…
ಬಂಟ್ವಾಳ : ತೆಂಕುತಿಟ್ಟಿನ ಪರಂಪರೆಯ ಪ್ರಾತಿನಿಧಿಕ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ (82) ದಿನಾಂಕ 24-01-2024ರಂದು ಬಂಟ್ವಾಳ ತಾಲೂಕಿನ ಪೆರುವಾಯಿಯಲ್ಲಿ ನಿಧನರಾದರು. ಅಳಿಕೆ ರಾಮಯ್ಯ ರೈಯವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ 12ರ ಹರೆಯದಲ್ಲಿ ಯಕ್ಷಗಾನ ರಂಗ ಪ್ರವೇಶಿಸಿದ ಇವರು ಇರಾ, ಧರ್ಮಸ್ಥಳ, ಕಟೀಲು, ಬಪ್ಪನಾಡು, ಕದ್ರಿ, ಪುತ್ತೂರು ಮೇಳಗಳಲ್ಲಿ ಸುಮಾರು ಆರು ದಶಕಗಳ ಕಲಾಸೇವೆಗೈದಿರುತ್ತಾರೆ. ರಕ್ತಬೀಜ, ಹಿರಣ್ಯಕಶಿಪು, ಕಂಸ, ಋತುಪರ್ಣ, ಹನುಮಂತ ಮೊದಲಾದ ಪೌರಾಣಿಕ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದಿದ್ದರು. ತುಳು ಪ್ರಸಂಗದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸುವುದರೊಂದಿಗೆ ತಾಳ ಮದ್ದಲೆ, ಅರ್ಥಧಾರಿಯಾಗಿಯೂ ಭಾಗವಹಿಸುತ್ತಿದ್ದರು. ಇವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. 2009ರಲ್ಲಿ ಯಕ್ಷಗಾನ ಕಲಾರಂಗವು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು.
ಮಂಗಳೂರು : ಕರ್ನಾಟಕ ಕೊಂಕಣಿ ಭಾಷಾ ಮಂಡಳ್ ಇದರ ಸುವರ್ಣ ಮಹೋತ್ಸವದ ಸಮಾರೋಪ ಹಾಗೂ ಕೊಂಕಣಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ‘ಭಾಂಗಾರೋತ್ಸವ್’ವು ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 09-01-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಂಗಳೂರಿನ ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ರೊನಾಲ್ಡ್ ಫೆರ್ನಾಂಡಿಸ್ ಇವರು “ಕೊಂಕಣಿ ಭಾಷೆಗೆ ಅದರದ್ದೇ ಆದ ಸ್ಥಾನಮಾನವಿದೆ. ತನ್ನದೇ ವ್ಯಾಪ್ತಿಯನ್ನು ಒಳಗೊಂಡಿದೆ. ಕೊಂಕಣಿ ಉಳಿವಿಗೆ ಅನೇಕರು ಶ್ರಮಿಸಿದ್ದಾರೆ. ಕರಾವಳಿಯ ಕೊಂಕಣಿ ಭಾಷಿಗರು ದೇಶಕ್ಕಾಗಿ ಸೇವೆ ಸಲ್ಲಿಸಿರುವುದು ಅವಿಸ್ಮರಣೀಯ. ಕೊಂಕಣಿ ಭಾಷೆ ಎಲ್ಲಿಯೂ ಬಂಧಿಯಾಗಿಲ್ಲ. ಕೊಂಕಣಿ ಮಾತನಾಡುವ ಜನರಿಂದ ಭಾಷೆ ಬೆಳೆಯುತ್ತಿದೆ. ಸಾಹಿತಿಗಳೊಂದಿಗೆ ಓದುಗರ ಪಾತ್ರವೂ ಕೊಂಕಣಿಗೆ ಮಹತ್ವದ್ದಾಗಿದೆ. ಸಂಘಟನೆ, ಸರಕಾರದ ಪ್ರೋತ್ಸಾಹವು ಸಾಹಿತ್ಯ ಭಾಷೆಯ ಬೆಳವಣಿಗೆ ಪೂರಕವಾಗಿವೆ. ಮುಂದೆಯೂ ಭಾಷೆಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು” ಎಂದು ಹೇಳಿದರು. ಕೊಂಕಣಿ ಭಾಷಾ ಮಂಡಳ್‌ನ ಸ್ಥಾಪಕ ಖಜಾಂಚಿ ವಂದನೀಯ ಮಾರ್ಕ್ ವಾಲ್ಟರ್ ಮಾತನಾಡಿ ಭಾಷಾ ಮಂಡಳ್ ಇದರ ಆರಂಭದ ದಿನಗಳನ್ನು ನೆನಪಿಸಿಕೊಂಡರು. “ಕೊಂಕಣಿ ಭಾಷೆ ಉಳಿವಿಗಾಗಿ…