Subscribe to Updates
Get the latest creative news from FooBar about art, design and business.
Author: roovari
ಕುಂದಾಪುರ : ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ (ಮಾಹೆ), ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ (ಮಾಹೆ) ಮತ್ತು ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ವಿಸ್ತರಣಾ ಉಪನ್ಯಾಸ ಮಾಲಿಕೆ ದಿನಾಂಕ 25 ಆಗಸ್ಟ್ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಕನಕದಾಸರು– ವರ್ತಮಾನದ ಮುಖಾಮುಖಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಸುಧಾಕರ ದೇವಾಡಿಗ ಬಿ. “ಕನಕದಾಸರಲ್ಲಿ ನಾವು ಕಾಣುವ ಅತ್ಯಂತ ಉತ್ತಮ ಗುಣವೆಂದರೆ ಸಮಾಜಕೆ ಹಂಚುವ ಗುಣ. ಅವರು ಎಲ್ಲರಲ್ಲೂ ದೇವರನ್ನು ಕಂಡವರು. ಈ ಎಲ್ಲರಲ್ಲೂ ದೇವರನ್ನು ಕಂಡಾಗ ಮತೀಯ ಸಾಮರಸ್ಯ ನೆಲೆಗೊಳ್ಳುತ್ತದೆ. ವ್ಯಕ್ತಿ ವ್ಯಕ್ತಿಯ ನಡುವೆ ಇರುವ ತಾರತಮ್ಯ ಮರೆಯಾಗುತ್ತದೆ. ಅವರ ಬೋಧನೆಯಲ್ಲಿ ನಾವು ಕಾಣುವ ಇತರ ಪ್ರಮುಖ ಅಂಶಗಳೆಂದರೆ ಸಮಾನತೆಯ ಪ್ರಜ್ಞೆ, ಜಾತಿಜಾತಿಗಳ ನಡುವೆ ಬೇದಭಾವ ಇಲ್ಲವೆಂಬ ಚಿಂತನೆ, ಯುದ್ಧ ವಿರೋಧಿ ನೆಲೆ ಇತ್ಯಾದಿ. ನಮಗೆ ಇಂದು…
ಬದಿಯಡ್ಕ : ಮಂಗಳೂರು ರಥಬೀದಿಯಲ್ಲಿರುವ ‘ಕಡಬ ಸಂಸ್ಮರಣಾ ಸಮಿತಿ’ಯ 6ನೇ ವರ್ಷದ ವಾರ್ಷಿಕೋತ್ಸವ ಮತ್ತು ಯಕ್ಷಗಾನದಲ್ಲಿ ಮೆರೆದು ಖ್ಯಾತರಾಗಿ ಆಗಲಿದ ದಿ. ಕಡಬ ನಾರಾಯಣ ಆಚಾರ್ಯ ಮತ್ತು ದಿ. ಕಡಬ ವಿನಯ ಆಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 31 ಆಗಸ್ಟ್ 2025ರಂದು ಎಡನೀರು ಮಠದಲ್ಲಿ ನಡೆಯಿತು. ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯ ದಂಪತಿಗೆ ಕಡಬ ಸಂಸ್ಮರಣಾ ಪ್ರಶಸ್ತಿಯನ್ನು ರಜತ ಪದಕದೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ಅರ್ಪಿಸಿ ಗೌರವಿಸಲಾಯಿತು. ಈ ವೇಳೆ ಕಡಬ ಸಂಸ್ಮರಣಾ ಸಮಿತಿ ಪದಾಧಿಕಾರಿಗಳು ಮತ್ತು ಕಡಬ ಕುಟುಂಬದವರು ಉಪಸ್ಥಿತರಿದ್ದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಆಶೀರ್ವಚನ ನೀಡಿ “ಕಡಬ ಪ್ರಶಸ್ತಿ ಪಡೆದ ದಿನೇಶ್ ಅಮ್ಮಣ್ಣಾಯರಿಗೆ ಇನ್ನಷ್ಟು ಕಲಾ ಸೇವೆ ಮಾಡುವ ಯೋಗ ಭಾಗ್ಯ ಒದಗಲಿ” ಎಂದು ಆಶಿಸಿದರು. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶಾಮ ಭಟ್ ಉದ್ಘಾಟಿಸಿ “ದಕ್ಷಿಣ ಕನ್ನಡ ಸಹಿತ ಕರಾವಳಿಯಲ್ಲಿ ಇತ್ತೀಚಿನ ಗಣೇಶೋತ್ಸವ ಸಂದರ್ಭಗಳಲ್ಲಿ ರಾತ್ರಿ 10ರ…
ಸಿಂಗಾಪುರ : ಸದಾ ಸಾಂಸ್ಕೃತಿಕ, ಶೈಕ್ಷಣಿಕ, ವಿನೋದ, ಶುಭ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಿಸುವ ಸಿಂಗಾಪುರ ಕನ್ನಡ ಸಂಘದ ಆಹ್ವಾನದ ಮೇರೆಗೆ ದಿನಾಂಕ 30 ಆಗಸ್ಟ್ 2025ರಂದು ಅನುಭವಿ ಕಲಾವಿದರಿಂದ ಹಿಡಿದು ಉದಯೋನ್ಮುಕ ಕಲಾವಿದರನ್ನು ಒಳಗೊಂಡ ಕೆ. ಮೋಹನ್ ನಿರ್ದೇಶನದ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಸಿಂಗಾಪುರದ ಆರ್.ಇ.ಎಲ್.ಸಿ. ಇಂಟರ್ನ್ಯಾಷನಲ್ ಹೋಟೆಲ್ನ ಸಭಾಂಗಣದಲ್ಲಿ ‘ರತ್ನಾವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಿತು. ಈ ಪ್ರದರ್ಶನವು 400ಕ್ಕೂ ಹೆಚ್ಚು ಕನ್ನಡಿಗರ ಉತ್ಸಾಹ ಭರಿತ ಪ್ರೇಕ್ಷಕರನ್ನು ಸೆಳೆಯಿತು. ರತ್ನಾವತಿ ಕಲ್ಯಾಣ ಪ್ರಸಂಗದಲ್ಲಿ ಯಕ್ಷದೇಗುಲವು ಸಿಂಗಾಪುರದಲ್ಲಿ ಹುಟ್ಟಿ, ಬೆಳೆದ 10 ಮಕ್ಕಳಿಗೆ ತಂಡದ ಉಸ್ತುವಾರಿ ಹೊತ್ತ ಗುರು ಪ್ರಿಯಾಂಕ ಕೆ. ಮೋಹನ್ರು ಯಕ್ಷಗಾನ ತರಬೇತಿ ನೀಡಿ ತಂಡದ ಕಾರ್ಯಕ್ರಮದಲ್ಲಿ ಸೇರಿಸಿಕೊಂಡರು. ಇದು ಅಲ್ಲಿನ ಮಕ್ಕಳಿಗೆ ವಿಶಿಷ್ಟ ಸಾಂಸ್ಕೃತಿಕ ಅನುಭವದೊಂದಿಗೆ ಹಿರಿಯ ಕಲಾವಿದರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಅವಕಾಶ ನೀಡಿತು. ಇದರಿಂದ ಸಮೂದಾಯದಿಂದ ಆತ್ಮೀಯ ಮೆಚ್ಚುಗೆಯನ್ನು ಪಡೆದದಲ್ಲದೆ, ಪ್ರೇಕ್ಷಕರು ಈ ಪ್ರದರ್ಶನವು ಅವರ ಸಾಂಸ್ಕೃತಿಕ ಸಂಪರ್ಕ ಮತ್ತು ಹೆಮ್ಮೆಯನ್ನು ಹೆಚ್ಚಿಸಿತು. ಕಲಾವಿದರಾಗಿ ಸುದರ್ಶನ…
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕಾವ್ಯಾಂ ವ್ಹಾಳೊ-6’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ದಿನಾಂಕ 06 ಸಪ್ಟೆಂಬರ್ 2025ರಂದು ಸಂಜೆ 4-00 ಗಂಟೆಗೆ ಅಕಾಡೆಮಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರು ವಹಿಸಿಕೊಳ್ಳಲಿದ್ದು, ಕೊಂಕಣಿಯ ಹಿರಿಯ ಸಾಹಿತಿಗಾರರಾದ ಹೇಮಾಚಾರ್ಯಯವರು ಮುಖ್ಯ ಅತಿಥಿಯಾಗಿ ಹಾಗೂ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಶ್ರೀ ರೊನಿ ಕ್ರಾಸ್ತಾ ಕೆಲರಾಯ್ ಇವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಶ್ರೀ ರೋಶನ್ ಎಮ್. ಕಾಮತ್ ವಾಮಂಜೂರು, ಕು. ಅಲ್ರೀಶಾ ರೊಡ್ರಿಗಸ್, ಶ್ರೀಮತಿ ಚಂದ್ರಿಕಾ ಮಲ್ಯ, ಶ್ರೀ ರೋಮನ್ಸ್ ಲೋಬೊ ಗುರುಪುರ, ಸ್ಟೆಫನ್ ವಾಸ್ ಕೆಲರಾಯ್, ಶ್ರೀಮತಿ ಎಸ್. ಜಯಶ್ರೀ ಶೆಣೈ, ಶ್ರೀ ಪೆದ್ರು ಪ್ರಭು ತಾಕೊಡೆ (ಪೀಟರ್ ಡಿಸೋಜ), ಶ್ರೀಮತಿ ಸೋನಿಯಾ ಡಿ’ಕೋಸ್ತ, ಶ್ರೀ ಕೆರನ್ ಮಾಡ್ತಾ, ಶ್ರೀ ವಲೇರಿಯನ್ ಮೊರಾಸ್ ತಾಕೊಡೆ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
ದಾವಣಗೆರೆ : ಪ್ರಸಕ್ತ ಸಾಲಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯಕ್ರಮ, ಯೋಜನೆಗಳ ಕುರಿತು ಜಾನಪದ ಕಲಾ ತಂಡಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಾನಪದ ಕಲಾ ತಂಡಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಷಣ್ಮುಖಪ್ಪ ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವ ತಂಡಗಳು ಸಾಂಗ್ ಮತ್ತು ಡ್ರಾಮಾ ಡಿವಿಜನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇತರೆ ವಿವಿಧ ಸರ್ಕಾರಿ ಇಲಾಖೆಯಲ್ಲಿ ಭಾಗವಹಿಸಿ ಗುರುತಿಸಲ್ಪಟ್ಟಿದ್ದು, ಜಿಲ್ಲಾ ನೋಂದಣಿ ಇಲಾಖೆಯಲ್ಲಿ ನೋಂದಾಯಿತ ಸಂಸ್ಥೆಯಾಗಿರಬೇಕು. ಕಲಾ ತಂಡದಲ್ಲಿ ಕನಿಷ್ಠ 06ರಿಂದ 08 ಜನ ಕಲಾವಿದರು ಇರಬೇಕು. ಈ ಪೈಕಿ ಇಬ್ಬರು ಮಹಿಳಾ ಕಲಾವಿದರು, ಒಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರನ್ನೊಳಗೊಂಡಿರಬೇಕು. ಸಂಗೀತ ಸಲಕರಣೆಗಳನ್ನು ಹಾಗೂ ಸಮವಸ್ತ್ರ ಹೊಂದಿರಬೇಕು. ಆಸಕ್ತ ಅರ್ಹ ಜಾನಪದ ಬೀದಿ ನಾಟಕ ಕಲಾತಂಡಗಳು ತಮ್ಮ…
ಮಂಗಳೂರು : ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು ಪ್ರಸ್ತುತ ಪಡಿಸುವ ‘ಆರೋಹಣ’ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವನ್ನು ದಿನಾಂಕ 07 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ಆಯೋಜಿಸಲಾಗಿದೆ. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಇವರು ಅತಿಥಿಯಾಗಿ ಭಾಗವಹಿಸಲಿದ್ದು, ಗಾನ ನೃತ್ಯ ಅಕಾಡೆಮಿಯ ಮಯೂರ ಮತ್ತು ಚಾತುರ ತಂಡಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಹಾಡುಗಾರಿಕೆಯಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ನಟುವಾಂಗದಲ್ಲಿ ವಿದುಷಿ ರಶ್ಮಿ ಉಡುಪ, ಮೃದಂಗದಲ್ಲಿ ಉಡುಪಿಯ ವಿದ್ವಾನ್ ಬಾಲಚಂದ್ರ ಭಾಗವತ್ ಮತ್ತು ಕೊಳಲಿ ನಲ್ಲಿ ವಿದ್ವಾನ್ ರಾಜಗೋಪಾಲ ಕಂಞಗಾಡ್ ಇವರು ಸಹಕರಿಸಲಿದ್ದಾರೆ.
ಬೆಂಗಳೂರು : ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ) ಇದರ ವತಿಯಿಂದ ‘ರಾಜ್ಯೋತ್ಸವ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಲಾಗಿದೆ. ಡಾ. ಎಸ್.ಎಲ್. ಭೈರಪ್ಪ, ನಾ. ಡಿಸೋಜ, ಕುಂ. ವೀರಭದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ, ಕೌಂಡಿನ್ಯ, ಎಂ.ಕೆ. ಇಂದಿರಾ, ಡಾ. ಎಸ್. ನಾರಾಯಣ್ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ, ಚಲನಚಿತ್ರ, ಕಿರುತೆರೆ, ಸಮಾಜಸೇವೆ, ಯಕ್ಷಗಾನ, ಯೋಗ, ಪತ್ರಕರ್ತರು ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ದಿನಾಂಕ 30 ಸೆಪ್ಟೆಂಬರ್ 2025ರ ಒಳಗಾಗಿ ತಮ್ಮ ಫೋಟೋ ಮತ್ತು ಬಯೋಡೆಟಾವನ್ನು 88614 95610 ನಂಬರ್ ಗೆ ವಾಟ್ಸ್ ಆ್ಯಪ್ ಮಾಡಬಹುದು.
ಮಂಗಳೂರು : ಜೀರುಂಡೆ ಪುಸ್ತಕ ಇದರ ವತಿಯಿಂದ ಫಾತಿಮಾ ರಲಿಯಾ ಅವರ ‘ಕೀಮೋ’ ಅನುಭವ ಕಥನ ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 07 ಸೆಪ್ಟೆಂಬರ್ 2025ರಂದು ಸಂಜೆ 4-00 ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನ ರೊಬರ್ಟ್ ಸಿಕ್ವೇರಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಶ್ರೀನಿವಾಸ ಕಕ್ಕಿಲ್ಲಾಯ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ರಮ್ಯಾ ಕೆ.ಜಿ. ಮೂರ್ನಾಡು ಮತ್ತು ಶರೀಫ್ ಹಿಮಮಿ ಶೆಟ್ಟಿಕೊಪ್ಪ ಪುಸ್ತಕದ ಬಗ್ಗೆ ಮಾತನಾಡಲಿದ್ದಾರೆ. ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಕನ್ನಡ ವಿಭಾಗ ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾಲಯ ಮಂಗಳೂರು ಮತ್ತು ಉಡುಗೊರೆ ಪ್ರಕಾಶನ ಇವುಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು : ‘ಸಮಷ್ಟಿ’ ಅಭಿನಯಿಸುವ 3 ಮೆಟಾ ಪ್ರಶಸ್ತಿ ವಿಜೇತ ‘ಚಿತ್ರಪಟ’ ನಾಟಕ ಪ್ರದರ್ಶನವನ್ನು ದಿನಾಂಕ 04 ಸೆಪ್ಟೆಂಬರ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ರಚನೆ : ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಸಂಗೀತ ಸಂಯೋಜನೆ : ಗಜಾನನ ಹೆಗಡೆ ವಸ್ತ್ರ ವಿನ್ಯಾಸ ಹಾಗೂ ನೃತ್ಯ ಸಂಯೋಜನೆ : ಶ್ವೇತಾ ಶ್ರೀನಿವಾಸ್ ಬೆಳಕು : ರವೀಂದ್ರ ಪೂಜಾರಿ ವಿನ್ಯಾಸ ಹಾಗೂ ನಿರ್ದೇಶನ : ಮಂಜುನಾಥ ಎಲ್. ಬಡಿಗೇರ 2015ಕ್ಕೆ ‘ಚಿತ್ರಪಟ’ ನಾಟಕ ಕಟ್ಟಿದ್ದು, 2025ಕ್ಕೆ ಸತತ 10 ವರ್ಷಗಳು. ಈ ನಾಟಕದ ಪ್ರದರ್ಶನವನ್ನು ನಿರಂತರವಾಗಿ ಸಮಷ್ಟಿ ರಂಗತಂಡದಿಂದ ಮಾಡುತ್ತಾ ಬಂದಿದ್ದು, ಈ ನಾಟಕಕ್ಕೆ 2015ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೆಟಾ ಪ್ರಶಸ್ತಿ – ಉತ್ತಮ ನಟಿ ಹಾಗೂ ಉತ್ತಮ ವಸ್ತ್ರ ವಿನ್ಯಾಸಕಿ ವಿಭಾಗಕ್ಕೆ ದೊರೆತಿದೆ. ಸೀತೆಯಾಗಿ ನಾನು ಪ್ರತಿ ಪ್ರದರ್ಶನದಿಂದ ಪ್ರದರ್ಶನಕ್ಕೆ ಹೊಸ ಹೊಸ ಹೊಳಹುಗಳನ್ನು ಕಂಡುಕೊಳ್ಳುತ್ತ, ಪಾತ್ರದ ಅಂತರಾಳವನ್ನು ಅನ್ವೇಷಿಸಲು, ನಟನಾಭ್ಯಾಸಿಯಾಗಿ ನನ್ನನ್ನು ಇನ್ನಷ್ಟು ಹುರಿಗೊಳಿಸಿಕೊಳ್ಳಲು, ಸ್ಫೂರ್ತಿ…
ಬೆಂಗಳೂರು : ಭಾರತೀಯ ವಿದ್ಯಾಭವನ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಜಂಟಿಯಾಗಿ ನೀಡುವ 2025ನೇ ಸಾಲಿನ ‘ವಿ.ಕೃ. ಗೋಕಾಕ್ ಪ್ರಶಸ್ತಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕೃತ ಮಗುತನ ಸಾಹಿತಿ ಆನಂದ ಪಾಟೀಲ ಅವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ರೂ.25,000/- ನಗದು ಮತ್ತು ಪದಕವನ್ನು ಒಳಗೊಂಡಿದೆ. ವಿ.ಕೃ ಗೋಕಾಕ್ ಟ್ರಸ್ಟ್ ಅಧ್ಯಕ್ಷರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರ ಅಧ್ಯಕ್ಷತೆಯ ಸಮಿತಿಯಲ್ಲಿ ಅನಿಲ್ ಗೋಕಾಕ್, ಸುನೀಲ್ ಗೋಕಾಕ್, ಪ್ರೊ. ನಾಗರಾಜ ಹೆಗಡೆ ಅಪಗಾಲ, ನಿಶಾ ಗೋಕಾಕ್, ಅಭಿನವ ರವಿಕುಮಾರ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಉಪಸ್ಥಿತರಿದ್ದರು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಕೆಆರ್ಜಿ ಸಭಾಂಗಣದಲ್ಲಿ ದಿನಾಂಕ 07 ಸೆಪ್ಟೆಂಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ರಾಯಚೂರಿನ ಮಹರ್ಷಿ ಆದಿಕವಿ ವಾಲ್ಮೀಕಿ ವಿ.ವಿ. ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಪ್ರಶಸ್ತಿ ಪ್ರದಾನ ಮಾಡುವರು. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಪ್ರಸ್ತಾವನೆಯ ಮಾತುಗಳನ್ನಾಡುವರು. ಅಂಕೋಲದ ಕವಯಿತ್ರಿ ಶ್ರೀದೇವಿ ಕೆರೆಮನೆ ಅಭಿನಂದನಾ ನುಡಿಗಳನ್ನಾಡುವರು.…