Subscribe to Updates
Get the latest creative news from FooBar about art, design and business.
Author: roovari
ಪಡುಬಿದ್ರಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲ್ಲೂಕು ಘಟಕದ ವತಿಯಿಂದ ಆಯೋಜಿಸುವ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪಲಿಮಾರಿನಲ್ಲಿ ಜರುಗುವ ಕಾಪು ತಾಲ್ಲೂಕಿನ ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕವನ ಸ್ಪರ್ಧೆ, ಪದವಿ ಹಾಗೂ ಸಾರ್ವಜನಿಕ ವಿಭಾಗದವರಿಗಾಗಿ ಕಥಾ ಸ್ಪರ್ಧೆಯನ್ನು ದಿನಾಂಕ 16 ನವಂಬರ್ 2024ರಂದು ಆಯೋಜಿಸಲಾಗಿದೆ. ಎರಡೂ ಸ್ಪರ್ಧೆಗಳಲ್ಲಿ ವಿಜೇತರಾದ ತಲಾ ಐದು ಮಂದಿಗೆ ಆಕರ್ಷಕ ಬಹುಮಾನದೊಂದಿಗೆ ಸಮ್ಮೇಳನದಂದು ಗೋಷ್ಠಿಯಲ್ಲಿ ಕಥೆ ಹಾಗೂ ಕವನಗಳನ್ನು ವಾಚನ ಮಾಡುವ ಅವಕಾಶವೂ ಲಭಿಸಲಿದೆ. ಕವನ ಹಾಗೂ ಕಥೆಗಳನ್ನು ದಿನಾಂಕ 25 ಅಕ್ಟೋಬರ್ ಒಳಗಾಗಿ ನೀಲಾನಂದ ನಾಯ್ಕ ಗೌರವ ಕಾರ್ಯದರ್ಶಿಗಳು(ಕ. ಸಾ. ಪ.) ಹಾಗೂ ಪ್ರಾಂಶುಪಾಲರು, ದಂಡತೀರ್ಥ ಪದವಿ ಪೂರ್ವ ಕಾಲೇಜು, ಉಳಿಯಾರಗೋಳಿ, ಕಾಪು – 574106 ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ – 9845954853
ಕಡಬ : ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕುಂತೂರು ಪದವಿನ ಸಂತ ಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ದಿನಾಂಕ 30 ನವೆಂಬರ್ 2024ರಂದು ಜರಗಲಿರುವ ಕಡಬ ತಾಲೂಕು 4ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬರಹಗಾರ, ಸಾಮಾಜಿಕ ಮುಂದಾಳು ಎನ್. ಕರುಣಾಕರ ಗೋಗಟೆ ಹೊಸಮಠ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಹಳ್ಳಿ ಬದುಕಿನ ಚಿತ್ರಣ ನೀಡುವ ಕೃತಿ ‘ಒಂದು ಸೇತುವೆಯ ಕಥೆ’ ಹಾಗೂ ಉರುಂಬಿ ಜಲ ವಿದ್ಯುತ್ ಯೋಜನೆಯ ವಿರುದ್ದ ನಡೆದ ಹೋರಾಟದ ಹಾದಿಯನ್ನು ನೆನಪಿಸುವ ‘ಉರುಂಬಿ ಸಂರಕ್ಷಣೆಯ ಯಶಸ್ಸಿನಲ್ಲಿ’ ಎನ್ನುವ ಪುಸ್ತಕಗಳನ್ನು ಬರೆದಿರುವ ಇವರು ‘ಸಹಕಾರಿ ರತ್ನ’ ಹಾಗೂ ‘ಆರ್ಯಭಟ’ ಪ್ರಶಸ್ತಿ ಪುರಸ್ಕೃತರು. ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕುಮಾರಧಾರ ಪರಿಸರ ಸಂರಕ್ಷಣ ಸಮಿತಿಯ ಅಧ್ಯಕ್ಷರಾಗಿ, ಅತ್ಯುತ್ತಮ ಭಜನ ಪಟುವಾಗಿ, ಪರಿಸರವಾದಿಯಾಗಿ, ಸಹಕಾರ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಯಕ್ಷಗಾನ, ಸಾಹಿತ್ಯ ಸಂಘಟನೆ, ಲೇಖನ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಕಡಬದ…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 14-10-2024ರಂದು ಸಂಜೆ ಗಂಟೆ 6.25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಮೇಘಾ ಸಿ.ಕೆ. ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ವಿದುಷಿ ಮೇಘಾ ಸಿ.ಕೆ. ಇವರು ನುರಿತ ಭರತನಾಟ್ಯ ಕಲಾವಿದೆ, ನೃತ್ಯ ನಿರ್ದೇಶಕಿ, ಗುರು ಮತ್ತು ಕರ್ನಾಟಕ ಸಂಗೀತ ಕಲಾವಿದೆ. ಇವರು ತಮ್ಮ ಆರನೇ ವಯಸ್ಸಿನಿಂದಲೇ ಶಾಸ್ತ್ರೀಯ ನಾಟ್ಯ ಪ್ರಕಾರದಲ್ಲಿ ತರಬೇತಿ ಪಡೆಯಲಾರಂಬಿಸಿದ್ದು, ಬೆಂಗಳೂರಿನ ಶ್ರೇಷ್ಠ ನೃತ್ಯಗುರುಗಳಿಂದ ಭರತನಾಟ್ಯ ತರಬೇತಿ ಪಡೆದಿರುವ ಇವರು ನಾಟ್ಯದ ಹಲವು ಬಾನಿಗಳಲ್ಲಿ ತರಬೇತಿ ಪಡೆದಿದ್ದಾರೆ. ಇವರು ಎಳವೆಯಲ್ಲಿ ಗುರು ವಿದುಷಿ ಸಂಧ್ಯಾ ಕೇಶವ ರಾವ್ ಮತ್ತು ಅನಿತಾ ಕೃಷ್ಣಾನಂದ ಇವರ ಬಳಿ ಈ ಕಲೆಯ ಕಲಿಕೆಗೆ ಕಾಲಿಟ್ಟರು. ನಂತರ ಗುರು ವಿದುಷಿ ಲತಾ ಲಕ್ಷ್ಮೀಶ…
ಕೋಟ : ಸಾಲಿಗ್ರಾಮ ಮಕ್ಕಳ ಮೇಳದ ಐವತ್ತರ ಸಂಭ್ರಮ ‘ಸುವರ್ಣ ಪರ್ವ’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 10 ಅಕ್ಟೋಬರ್ 2024ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧಾರ್ಮಿಕ ಪ್ರವಚನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ “ಮಕ್ಕಳ ಮನಸ್ಸಿನಲ್ಲಿ ಕಲೆಯ ಬೀಜವನ್ನು ಬಿತ್ತಿದಾಗ ಅದು ಸಾರ್ಥಕವಾಗಿ ಮುಂದೆ ಕಲಾ ಶ್ರೀಮಂತಿಕೆಯನ್ನು ಮೆರೆಯುವುದುಕ್ಕೆ ಸಾಧ್ಯವಾಗುತ್ತದೆ. ಆದಷ್ಟು ಹೆಚ್ಚು ಹೆಚ್ಚು ಮಕ್ಕಳನ್ನು ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಆ ನಿಟ್ಟಿನಲ್ಲಿ ಚಾರಿತ್ರಿಕ ದಾಖಲೆಯನ್ನು ನಿರ್ಮಿಸಿ, ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ ಬೆಳೆಸಿ, ಸಾಂಪ್ರದಾಯಿಕ ರಂಗ ಪ್ರದರ್ಶನದೊಂದಿಗೆ ಐವತ್ತು ವರ್ಷಗಳ ಕಾಲ ಮುನ್ನೆಡಿಸಿದ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರ ಸಾಧನೆ ಅಪೂರ್ವವಾದುದು. ಅದೆಷ್ಟೋ ಮಕ್ಕಳು ಈ ತಂಡದಿಂದ ಕಲಾವಿದರಾಗಿ, ಕಲಾಭಿಮಾನಿಗಳಾಗಿ ಹೊರಬಂದಿದ್ದಾರೆ. ಮೇಳವನ್ನು ಈಗಲೂ ಮುನ್ನೆಡೆಸುತ್ತಿರುವ ಈಗಿನ ನಿರ್ದೇಶಕರ ಸಾಹಸ ಶ್ಲಾಘನೀಯವಾದುದು. ಸುವರ್ಣ ಪರ್ವವನ್ನು ಆಚರಿಸುತ್ತಿರುವ ಮಕ್ಕಳ ಮೇಳದ ಯಕ್ಷ ರಥವು…
ಉಡುಪಿ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಗಾಂಧಿನಗರ, ಬ್ರಹ್ಮಾವರ ಉಡುಪಿ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ 2024ನೇ ಸಾಲಿನ ‘ಹೊಸ ನಾಟಕ ತಯಾರಿ ಶಿಬಿರ’ದ ಉದ್ಘಾಟನಾ ಸಮಾರಂಭವು ದಿನಾಂಕ 10 ಅಕ್ಟೋಬರ್ 2024ರಂದು ಸಾಲಿಕೇರಿಯ ಅಂಬೇಡ್ಕರ್ ಭವನದಲ್ಲಿ ನೆರವೇರಿತು. ಹೊಸ ನಾಟಕ ತಯಾರಿ ಶಿಬಿರವನ್ನು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರಂಗಕರ್ಮಿ ರಾಜು ಮಣಿಪಾಲ ಇವರು ಉದ್ಘಾಟಿಸಿದರು. ಬಳಿಕ ಮಾತನಾಡಿ “ಕಲಾವಿದ ಎಲ್ಲದಕ್ಕೂ ಒಗ್ಗಬೇಕು, ರಂಗಕರ್ಮಿ ಯಾವುದೇ ಆಮಿಷಕ್ಕೊಳಗಾಗದೇ ತನ್ನ ನಿಲುವನ್ನ ಪ್ರದರ್ಶಿಸಬೇಕು” ಎಂದು ಅಭಿಪ್ರಾಯಪಟ್ಟರು. ಈ ವೇಳೆ ಯುವ ಸಾಹಿತಿ ಸಚಿನ್ ಅಂಕೋಲಾ ಉಪಸ್ಥಿತರಿದ್ದರು. ಮಂದಾರದ ಕಾರ್ಯದರ್ಶಿ ಪ್ರಸಾದ್ ಬ್ರಹ್ಮಾವರ, ನಿರ್ದೇಶಕರಾದ ರೋಹಿತ್ ಎಸ್. ಬೈಕಾಡಿ ಸೇರಿ ತಂಡದ ಸದಸ್ಯರೆಲ್ಲರೂ ಭಾಗಿಯಾಗಿದ್ದರು.
ಉಡುಪಿ : ಸುಳ್ಯದ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ದಿನಾಂಕ 06 ಅಕ್ಟೋಬರ್ 2024ರಂದು ಹಮ್ಮಿಕೊಂಡ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಬಣ್ಣದ ಮಾಲಿಂಗ ಅವರ 15 ಅಡಿ ಎತ್ತರದ ಮಹಿರಾವಣ ವೇಷದ ಯಕ್ಷ ಪ್ರತಿಮೆಯ ಉದ್ಘಾಟನೆ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಮೋಹನ್ ಆಳ್ವ ಇವರು ಮಾತನಾಡಿ “ಬಣ್ಣದ ಮಾಲಿಂಗ ಅವರು ಚೌಕಿಗೆ ಬಂದು ತಪಸ್ಸಿನಂತೆ ವೇಷ ಹಾಕುವುದನ್ನು ಕಂಡಿದ್ದೇನೆ. ಅವರು ಬದುಕಿದ್ದಾಗಲೇ ದಂತಕತೆಯಾಗಿದ್ದವರು. ಈ ದಂತಕಥೆಯನ್ನು ಅವರ ಪ್ರತಿಮೆ ಮೂಲಕ ಇತಿಹಾಸ ಮಾಡಿದ ರಂಗಕರ್ಮಿ ಜೀವನ್ ರಾಮ್ ಸುಳ್ಯ ಅವರ ಸಾಧನೆ ಪ್ರಶಂಸನೀಯ. ಇದು ರಂಗಮನೆಯ ಹೆಗ್ಗಳಿಕೆಯಾಗಿದೆ. ಜೀವನ್ ರಾಮ್ ಸುಳ್ಯ ಅವರೊಂದಿಗೆ ಕಳೆದ 32 ವರ್ಷಗಳಿಂದ ಸಾಂಸ್ಕೃತಿಕವಾಗಿ ಅರ್ಥಪೂರ್ಣ ಸಂಬಂಧವನ್ನು ಹೊಂದಿದ್ದೇನೆ. ಅವರು ನಮ್ಮ ವಿದ್ಯಾ ಸಂಸ್ಥೆಗೆ ನೀಡಿದ ಸಾಂಸ್ಕೃತಿಕ ಕೊಡುಗೆಗೆ ಅಭಿನಂದಿಸುತ್ತೇನೆ. ಬಣ್ಣದ ಮಾಲಿಂಗರ ಈ ಪ್ರತಿಮೆ ಪುನಃ ನಿರ್ಮಾಣ ಮಾಡಿರುವುದು ಕಲೆಯ ಮೇಲಿನ ಅವರ ಪ್ರೀತಿಗೆ ಸಾಕ್ಷಿ. ಸ್ತ್ರೀ ವೇಷ, ಪುಂಡುವೇಷ ಹಾಕಿಯೇ ಮೇಲೆ ಬಂದವರು…
ಮೈಸೂರು : ನಿರಂತರ ಫೌಂಡೇಶನ್ (ರಿ.), ಪ್ರಥ್ವಿ ಟ್ರಸ್ಟ್ (ರಿ.) ಮತ್ತು ಕಲಾಸುರುಚಿ ಇವುಗಳ ಸಹಯೋಗದಲ್ಲಿ ಲೇಖಕ ಉಮೇಶ್ ತೆಂಕನಹಳ್ಳಿಯವರ ‘ಕಪ್ಪು ಹಲ್ಲಿನ ಕಥೆ’ ಎಂಬ ಕಾದಂಬರಿಯ ಲೋಕಾರ್ಪಣೆ ಸಮಾರಂಭವು ದಿನಾಂಕ 06 ಅಕ್ಟೋಬರ್ 2024ರಂದು ಮೈಸೂರಿನ ಕುವೆಂಪು ನಗರ, ಚಿತ್ರಭಾನು ರಸ್ತೆ, ಸುರುಚಿ ರಂಗಮನೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು. ನನ್ನ ಈ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಹಾಜರಿದ್ದ ಖ್ಯಾತ ರಂಗಕರ್ಮಿ, ಹಿರಿತೆರೆ, ಕಿರುತೆರೆ ನಟರಾದ ಶ್ರೀ ಮಂಡ್ಯ ರಮೇಶ್. ಮತ್ತೋರ್ವ ಗಣ್ಯ ವ್ಯಕ್ತಿಗಳಾದ ದಕ್ಷ, ಹಾಗೂ ಪ್ರಾಮಾಣಿಕ ಸರಳ ವ್ಯಕ್ತಿಗಳಾದ ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಡಾ. ಎಚ್.ಎಲ್. ನಾಗರಾಜ್ ಸರ್, ಮೈಸೂರಿನ ಹಿರಿಯ ಸಾಹಿತಿಗಳು ಚಿಂತಕರು ಆದ ಶ್ರೀಮತಿ ಪ್ರೊ. ಚ. ಸರ್ವಮಂಗಳ ಅವರ ಜೊತೆಗೆ ಮೈಸೂರಿನ ಕನ್ನಡ ಪ್ರಭ ಸ್ಥಾನಿಕ ಸಂಪಾದರು ಹಾಗೂ ವಿಮರ್ಶಕರು, ಜೊತೆಗೆ ಸಾಹಿತಿಗಳಾದ ಅಂಶಿ ಪ್ರಸನ್ನ ಕುಮಾರ್ ಕಾರ್ಯಕ್ರಮಕ್ಕೆ ಹೊಸ ಮೆರಗು ತಂದು ಕೊಟ್ಟರು. ಈ ಕಾರ್ಯಕ್ರಮಕ್ಕೆ ಬಹಳ ಮುಜುಗರದಿಂದಲೇ ಬಂದೆ.…
ತೀರ್ಥಹಳ್ಳಿ : ದಸರಾ ಉತ್ಸವ ಸಮಿತಿ ಆಶ್ರಯದಲ್ಲಿ ದಿನಾಂಕ 10 ಅಕ್ಟೋಬರ್ 2024ರಂದು ತೀರ್ಥಹಳ್ಳಿಯಲ್ಲಿ ಜರಗಿದ ಅಂತರ ಜಿಲ್ಲಾ ದಸರಾ ಕವಿಗೋಷ್ಟಿಯಲ್ಲಿ ತೀರ್ಥಹಳ್ಳಿಯ ಶಿಕ್ಷಕಿ ಜಿ.ಎಸ್. ನಾಗರತ್ನ ನಿಲ್ಸಿಕಲ್ ಅವರು ಪ್ರಥಮ ಸ್ಥಾನದೊಂದಿಗೆ ರೂ.5,000/- ನಗದು ಬಹುಮಾನ ಪಡೆದರು. ದ್ವಿತೀಯ ಸ್ಥಾನವನ್ನು ಚಿಕ್ಕಮಗಳೂರಿನ ಪ್ರವೀಣ್ ಕುಮಾರ್, ತೃತೀಯ ಸ್ಥಾನವನ್ನು ತೀರ್ಥಹಳ್ಳಿಯ ಡಾ. ಮುರುಳೀಧರ ಕಿರಣಕೆರೆ ಹಾಗೂ ನಾಲ್ಕನೇ ಬಹುಮಾನವನ್ನು ಭದ್ರಾವತಿಯ ಪದ್ಮಶ್ರೀ ಗೋವಿಂದರಾಜ್ ತಮ್ಮದಾಗಿಸಿಕೊಂಡರು. ಎಲ್ಲಾ ನಾಲ್ವರು ವಿಜೇತರಿಗೂ ನಗದು ಬಹುಮಾನ ಹಾಗೂ ಫಲಕವನ್ನು ನೀಡಲಾಯಿತು. ಹಿರಿಯ ಸಾಹಿತಿ ಹಾಗೂ ಯಕ್ಷಗಾನ ತಾಳಮದ್ದಲೆ ಕಲಾವಿದ ನಿಟ್ಟೂರು ಶಾಂತರಾಮ ಪ್ರಭು ಹಾಗೂ ದಸರಾ ಸಾಂಸ್ಕೃತಿಕ ಸಮಿತಿಯ ಸದಸ್ಯರು ಬಹುಮಾನಗಳನ್ನು ವಿತರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ದಸರಾ ಉತ್ಸವ ಸಮಿತಿ ಸಂಚಾಲಕ ಸಂದೇಶ್ ಜವಳಿ ಮುಂತಾದವರು ಪಾಲ್ಗೊಂಡಿದ್ದರು. ಹಿರಿಯ ಸಾಹಿತಿ ನಿಟ್ಟೂರು ಶಾಂತರಾಮ ಪ್ರಭು ಕವಿಗೋಷ್ಟಿಯನ್ನು ಉದ್ಘಾಟಿಸಿದರು. ದಸರಾ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾನ್ ರಾಮಣ್ಣ,…
ಶಿವರಾಮ ಕಾರಂತರು ಕೇವಲ ಕಾದಂಬರಿಕಾರರಲ್ಲ. ಹುಚ್ಚು ಮನಸ್ಸಿನ ಹತ್ತು ಮುಖಗಳ ಮೂಲಕ ಅವರ ದಶಾವತಾರವನ್ನು ಕಾಣದವರಿಲ್ಲ. ಎಲ್ಲವೂ ಅನುಭವಕ್ಕಾಗಿ ಎಂಬ ನಿಲುವು ಅವರನ್ನು ಅನೇಕ ರಂಗಗಳಲ್ಲಿ ದುಡಿಸಿದೆ. ಇದರಿಂದಾಗಿ ಆ ಮಹಾ ಚಿಂತಕನ ಶೈಲಿ ನಿಸ್ಪೃಹವೂ ನಿರ್ಲಿಪ್ತವೂ ಆಗಿದೆ. ಕಾದಂಬರಿಗಳೇ ಈ ಯುಗದ ಮಹಾಕಾವ್ಯಗಳೆಂಬ ಅಭಿಪ್ರಾಯ ಬರುವುದಕ್ಕೆ ಕಾರಂತರ ದುಡಿಮೆಯೂ ಕಾರಣವಾಗಿದೆ. ಅಮ್ಮನಾಗದೆಯೂ ಹೆಣ್ತನದ ವಿರಾಟ್ ರೂಪವನ್ನು ಮೆರೆದ ಮೂಕಜ್ಜಿಯ ಕನಸುಗಳ ನೋಟವು ಆಸ್ವಾದನೀಯವಾಗಿದೆ. ಇತರ ಕಾದಂಬರಿಗಳ ಅಂತರಂಗವನ್ನು ಕಾಣುವುದರ ನಡುವೆ ಕಾರಂತರ ಮಗುವಿನಂತಹ ಮನ ಮತ್ತು ಬದ್ಧತೆಗಳು ಪುಳಕವನ್ನು ಉಂಟು ಮಾಡುತ್ತವೆ. ದೇಶಕ್ಕೆ ಸ್ವಾತಂತ್ರ್ಯ ದೊರಕುವ ಮೊದಲು ಬರೆದು ನಂತರ ಪ್ರಕಟಗೊಂಡ ‘ಕರುಳಿನ ಕರೆ’ ಎಂಬ ಕಾದಂಬರಿಯಲ್ಲಿ ಕೋರ್ಟು ಕಛೇರಿಗಳು, ಹೋಟೆಲ್, ಎತ್ತಿನ ಗಾಡಿ, ಪ್ಲೇಗು, ಮೈ ಮುರಿಯುವ ದುಡಿಮೆ, ವಿಲಾಸೀ ಬದುಕು, ನಡೆನುಡಿಯನ್ನು ಛಿದ್ರಗೊಳಿಸುವ ವ್ಯಸನ, ಬ್ಯಾಂಕುಗಳಿಲ್ಲದ್ದರಿಂದ ಬೆಳೆದ ಹಣದ ಲೇವಾದೇವಿ, ಅದರಿಂದಾದ ಎಡವಟ್ಟಿನಿಂದ ಮುನ್ನೆಲೆಗೆ ಬಂದ ವ್ಯಾಜ್ಯಗಳು, ಮೇಲು ಚೀಟಿ, ಬಡ್ಡಿಖರ್ಚುಗಳ ಸಹಿತ ಡಿಕ್ರಿ, ವಾಯ್ದೆಗೆ ಬಿಡುವು…
ಬೆಂಗಳೂರು : ವೀಣಾ ಮೋಹನ್ ಸಾರಥಿಯ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ನವರಾತ್ರಿಯ ಉತ್ಸವದ ಪ್ರಯುಕ್ತ ಮಕ್ಕಳ ತಂಡದಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನವು ದಿನಾಂಕ 09 ಅಕ್ಟೋಬರ್ 2024ರಂದು ಬೆಂಗಳೂರಿನ ಬುಲ್‌ಟೆಂಪಲ್ ರಸ್ತೆ ಹತ್ತಿರದ ಅನ್ನಪೂರ್ಣ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವತರಾಗಿ ಸುಬ್ರಾಯ ಹೆಬ್ಬಾರ್, ಮದ್ದಲೆಯಲ್ಲಿ ಅಕ್ಷಯ್‌ಕುಮಾರ್, ಚಂಡೆವಾದಕರಾಗಿ ಶ್ರೀನಿವಾಸ ಪ್ರಭು ಭಾಗವಹಿಸಿದರು. ಮಕ್ಕಳಾದ ಶ್ರೀವತ್ಸ, ಶ್ರೀರಾಮ, ಶ್ರೀ ವಿದ್ಯಾ, ಧನ್ಯ, ಚಿನ್ಮಯಿ, ಮೇಘನ, ಅಹನಾ ಮತ್ತು ಶ್ರೇಯಾ ಇವರು ಭಾಗವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದ ಯಕ್ಷಗಾನ ಪ್ರಸಂಗದ ನಿರ್ದೇಶನವನ್ನು ಪ್ರಿಯಾಂಕ ಕೆ. ಮೋಹನ್ ಮಾಡಿದರು.