Subscribe to Updates
Get the latest creative news from FooBar about art, design and business.
Author: roovari
ಹೊಸದಿಲ್ಲಿ: ಕನ್ನಡದ ಭಾಷಾ ವಿಜ್ಞಾನಿ ಹಾಗೂ ಹಿರಿಯ ವಿಮರ್ಶಕರಾದ ಪ್ರೊ. ಕೆ. ವಿ. ನಾರಾಯಣ್ ಇವರು 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೆ. ವಿ. ಎನ್. ಇವರ ‘ನುಡಿಗಳ ಅಳಿವು- ಬೇರೆ ದಿಕ್ಕಿನ ನೋಟ’ ಎಂಬ ಬಹುಜ್ಞಾನ ಶಾಸ್ತ್ರೀಯ ವಿಮರ್ಶಾ ಕೃತಿ ಈ ಹಿರಿಮೆಗೆ ಪಾತ್ರವಾಗಿದೆ. ಪ್ರಶಸ್ತಿಯು ರೂಪಾಯಿ 1 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 08 ಮಾರ್ಚ್ 2025ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ ಕೆ. ವಿ. ಎನ್. ಸೇರಿದಂತೆ 21 ಭಾಷೆಗಳ ಲೇಖಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ವಿಮರ್ಶಕ ಹಾಗೂ ಅನುವಾದಕ ಓ. ಎಲ್. ನಾಗಭೂಷಣ ಸ್ವಾಮಿ, ಬರಹಗಾರರಾದ ಡಾ. ಹಳೆಮನಿ ರಾಜಶೇಖರ್ ಹಾಗೂ ಡಾ. ಸರಜೂ ಕಾಟ್ಕರ್ ಇದ್ದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ಹಿರಗಾ ಚಲವಾದಿ ಮತ್ತು ಕಮಲಮ್ಮ ದಂಪತಿಯ ಪುತ್ರರಾಗಿ 31 ಅಕ್ಟೋಬರ್1950ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶ್ರೀ ಮಾರೀಕಾಂಬಾ ಪ್ರಾಥಮಿಕ ಶಾಲೆ ಶಿರಸಿಯಲ್ಲಿ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಪ್ರೋಗ್ರೆಸ್ಸಿವ್ ಹೈಸ್ಕೂಲ್ ಶಿರಸಿ ( ಉ. ಕ )ಯಲ್ಲಿ ಪಡೆದರು. ಶಿರಸಿಯ ಎಮ್. ಇ. ಎಸ್. ಕಾಲೇಜಿನಲ್ಲಿ ಪದವಿ ಪಡೆಯಲೆಂದು ಸೇರಿದರಾದರೂ ಆರ್ಥಿಕ ಅಡಚಣೆಯಿಂದಾಗಿ ಬಿ. ಎ. ಎರಡನೆಯ ವರ್ಷಕ್ಕೆ ಕಾಲೇಜು ಶಿಕ್ಷಣ ಮೊಟಕುಗೊಳಿಸುವಂತಾಯಿತು. ವೃತ್ತಿಯಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಗುಮಾಸ್ತನಾಗಿ ನೌಕರಿಗೆ ಸೇರಿ ತಂತಿ ಮಾಸ್ತರ್ ( ಟೆಲಿಗ್ರಾಫರ್ ) ಹಾಗೂ ಪೋಸ್ಟ್ ಮಾಸ್ತರ್ ಆಗಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಕೊಡಗಿನ ವಿರಾಜಪೇಟೆ, ಸಿದ್ಧಾಪುರ, ಕುಟ್ಟ, ಕುಶಾಲನಗರ, ಗೋಣಿಕೊಪ್ಪಲು, ಪೊನ್ನಂಪೇಟೆ, ಹಾಸನ ಹಾಗೂ ಹಾಸನ ತಾಲೂಕಿನ ಎಲ್ಲಾ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರವೃತ್ತಿಯಿಂದ ಹವ್ಯಾಸಿ ನಾಟಕಕಾರ, ಪ್ರವಾಸ ಸಾಹಿತಿ ಹಾಗೂ ವಿವಿಧ ಪ್ರಕಾರಗಳಲ್ಲಿ ಓದು ಹಾಗೂ ಬರವಣಿಗೆಯನ್ನು ಮೈಗೂಡಿಸಿಕೊಂಡವರು. ಪ್ರೌಢಶಾಲೆಯ ವ್ಯಾಸಾಂಗದಲ್ಲಿ…
ಮೂಲ್ಕಿ : ಕ. ಸಾ. ಪ. ಮೂಲ್ಕಿ ಹೋಬಳಿ ಘಟಕದ ಉದ್ಘಾಟನಾ ಸಮಾರಂಭವು ದಿನಾಂಕ 14 ಡಿಸೆಂಬರ್ 2024ರಂದು ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ದ. ಕ. ಜಿಲ್ಲಾಧ್ಯಕ್ಷ ಡಾ. ಎಂ. ಪಿ .ಶ್ರೀನಾಥ್ ಮಾತನಾಡಿ “ಗ್ರಾಮ ಗ್ರಾಮಗಳಲ್ಲಿ ಕನ್ನಡ ಮತ್ತು ಸಾಹಿತ್ಯದ ಕೆಲಸದಲ್ಲಿ ನಿರಂತರತೆ ಕಾಯ್ದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಹಿರಿಯ ಸಾಹಿತಿಗಳನ್ನು ಅವರ ಮನೆಗಳಲ್ಲಿ ಭೇಟಿ ಮಾಡಿ ಮಾತಾಡಿಸುವ ಹಾಗೂ ಗೌರವಿಸುವ ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದೇವೆ.”ಎಂದು ಹೇಳಿದರು. ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಿನ್ನಿಗೋಳಿ ಚರ್ಚ್ ಇದರ ರೆ. ಫಾ. ಜೊಕಿಂ ಫೆರ್ನಾಂಡಿಸ್, ಕ. ಸಾ. ಪ. ಮಾಜಿ ಗೌರವ ಕಾರ್ಯದರ್ಶಿ ಭುವನಾಭಿರಾಮ ಉಡುಪ, ಮಂಗಳೂರು ತಾಲೂಕು ಕ. ಸಾ. ಪ. ಮಾಜಿ ಅಧ್ಯಕ್ಷ ಮೋಹನದಾಸ ಸುರತ್ಕಲ್, ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ್ ಕೊಡೆತ್ತೂರು, ರೋಟರಿಯ ಧನಂಜಯ ಶೆಟ್ಟಿಗಾರ್, ಸಾಹಿತಿ ಉದಯಕುಮಾರ ಹಬ್ಬು ಹಾಗೂ ಹೇಮಾಚಾರ್ಯ ಉಪಸ್ಥಿತರಿದ್ದರು. ಹೋಬಳಿ ಘಟಕದ ನೂತನ ಅಧ್ಯಕ್ಷ…
ಬೆಳಗಾವಿ : ರಂಗ ಸಂಪದ (ರಿ.) ಬೆಳಗಾವಿ ಮತ್ತು ಅಭಿಷೇಕ ಅಲಾಯ್ಸ್ ಸಹಯೋಗದೊಂದಿಗೆ ಬೆಂಗಳೂರಿನ ರಂಗ ಸೌರಭ ತಂಡದವರು ಶ್ರೀ ರಾಜೇಂದ್ರ ಕಾರಂತ ಇವರ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರಸ್ತುತ ಪಡಿಸುವ ‘ಗಂಗಾವತರಣ’ ವರಕವಿ ಡಾ. ದ.ರಾ. ಬೇಂದ್ರೆಯವರ ಕವನ ಮತ್ತು ಬರಹಗಳ ಆಧಾರಿತ ನಾಟಕ ಪ್ರದರ್ಶನವನ್ನು ದಿನಾಂಕ 25 ಡಿಸೆಂಬರ್ 2024ರಂದು ಸಂಜೆ 6-00 ಗಂಟೆಗೆ ಬೆಳಗಾವಿ ಕೊನವಾಳ ಗಲ್ಲಿಯಲ್ಲಿರುವ ಲೋಕಮಾನ್ಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 98450 25638
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.) ಬೆಂಗಳೂರು ವತಿಯಿಂದ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ ರಾಜ್ಯದ ವಿವಿಧ ಕ್ಷೇತ್ರದ ಆರು ಸಾಧಕರಿಗೆ 2024ನೇ ಸಾಲಿನ “ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ. ಟ್ರಸ್ಟಿಗಳಾದ ನಾಗರಾಜ್ ದೊಡ್ಡಮನಿ, ಎಚ್. ಎಸ್. ಬಸವರಾಜ್, ವಾಸು ಸಮುದ್ರವಳ್ಳಿ, ಡಾ. ಪಿ. ದಿವಾಕರ ನಾರಾಯಣ, ದೇಸು ಆಲೂರು, ಡಾ. ಎಚ್. ಕೆ. ಹಸೀನಾ, ಲತಾಮಣಿ ಎಂ. ಕೆ. ತುರುವೇಕೆರೆ ಮುಂತಾದವರನ್ನೊಳಗೊಂಡ ಆಯ್ಕೆ ಸಮಿತಿಯು ಎನ್. ಶೈಲಜಾ ಹಾಸನ (ಸಾಹಿತ್ಯ ಕ್ಷೇತ್ರ), ಸೈಯದ್ ಮುಹೀಬುಲ್ಲಾ ಖಾದ್ರಿ (ಪಾರಂಪರಿಕ ವೈದ್ಯಕೀಯ ಕ್ಷೇತ್ರ), ಮಹೇಶ್ ಎನ್. (ಮಾಧ್ಯಮ ಕ್ಷೇತ್ರ), ಚಂದ್ರಪ್ಪ ಕೆ. ಆರ್. (ಮುದ್ರಣ ಕ್ಷೇತ್ರ), ಸಿದ್ದೇಶ್ ಕುಮಾರ್ ವೈ.ಟಿ. (ಸಂಗೀತ ಕ್ಷೇತ್ರ) ಹಾಗೂ ವೈ. ಎಸ್.…
ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಗೌರವ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ ‘ಸುವರ್ಣ ಪರ್ವ -5’ | ಡಿಸೆಂಬರ್ 25
ತೆಕ್ಕಟ್ಟೆ : ಐವತ್ತರ ವಸಂತದಲ್ಲಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇವರ ನೆರವಿನೊಂದಿಗೆ ಸುವರ್ಣ ಪರ್ವ -5ರ ಸರಣಿಯಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಐವತ್ತು ವರ್ಷಗಳ ಹಿರಿಯ ಕಿರಿಯ ಕಲಾವಿದರ ‘ಗೌರವ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ’ವನ್ನು ದಿನಾಂಕ 25 ಡಿಸೆಂಬರ್ 2024ರಂದು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಯಕ್ಷಗುರುಗಳಾದ ನರಸಿಂಹ ತುಂಗ ಇವರನ್ನು ಸನ್ಮಾನಿಸಲಾಗುವುದು. ಬೆಳಿಗ್ಗೆ ಗಂಟೆ 10-30ಕ್ಕೆ ಸವಿ ನೆನಪು ಗುರು ಶಿಷ್ಯ ಸಂವಾದ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮೇಳದ ಪ್ರಾಕ್ತನ ಕಲಾವಿದರಿಂದ ‘ವೃಷಸೇನ-ಕೃಷ್ಣಾರ್ಜುನ-ಬಬ್ರುವಾಹನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಬಂಟ್ವಾಳ : ಬಂಟ್ವಾಳ ತಾಲೂಕು ಕುಕ್ಕಾಜೆ ಶ್ರೀ ನರಸಿಂಹ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಬಾಬ್ತು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಯಕ್ಷಗಾನ ತಾಳಮದ್ದಳೆ ‘ಜಾಂಬವತಿ ಕಲ್ಯಾಣ’ ಪ್ರಸಂಗವು ದಿನಾಂಕ 18 ಡಿಸೆಂಬರ್ 2024ರಂದು ಶ್ರೀ ದೇವಳದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ರವರ ಸ೦ಯೋಜನೆಯಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ಭಾಸ್ಕರ್ ಶೆಟ್ಟಿ ಸಾಲ್ಮರ (ಬಲರಾಮ), ಗುಂಡ್ಯಡ್ಕ ಈಶ್ವರ ಭಟ್ (ಜಾಂಬವ) ಸಹಕರಿಸಿದರು. ಕಯ್ಯೂರು ನಾರಾಯಣ ಭಟ್ ಸ್ವಾಗತಿಸಿ ವಂದಿಸಿದರು.
ಸುಮಾರು ನಾಲ್ಕು ದಶಕಗಳಿಂದ ಮಲಯಾಳಂ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುತ್ತಾ ಬಂದಿರುವ ಮೋಹನ ಕುಂಟಾರ್ ಅವರು 1981ರಿಂದ 2021ರವರೆಗೆ ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ ಹತ್ತು ಕತೆಗಳು ‘ಶಬ್ದಗಳು’ ಎಂಬ ಹೆಸರಿನಲ್ಲಿ ಸಂಗ್ರಹಗೊಂಡಿವೆ. ಮಲಯಾಳಂನ ಎಲ್ಲ ಪ್ರಮುಖ ಕತೆಗಾರರ ಕತೆಗಳು ಇಲ್ಲಿ ಇಲ್ಲದಿದ್ದರೂ ಕನ್ನಡದ ಪ್ರಗತಿಶೀಲ, ನವ್ಯ ಮತ್ತು ಬಂಡಾಯ ಸಾಹಿತ್ಯಗಳಿಗೆ ಸಂವಾದಿಯಾದ ರಿಯಲಿಸಂ, ಪುರೋಗಮನವಾದಂ, ನವೀನ ಭಾವಕತ್ವಂ ಮತ್ತು ಆಧುನಿಕೋತ್ತರ ಸಾಹಿತ್ಯ ಘಟ್ಟಗಳಿಗೆ ಸೇರಿದ ಕಾರೂರ್ ನೀಲಕಂಠ ಪಿಳ್ಳೆ (ಬುತ್ತಿ), ವೈಕಂ ಮಹಮ್ಮದ್ ಬಷೀರ್ (ಶಬ್ದಗಳು), ಎಂ.ಟಿ. ವಾಸುದೇವನ್ ನಾಯರ್ (ಭಾಗ್ಯ), ಮಾಧವಿ ಕುಟ್ಟಿ (ಕಳೆದು ಹೋದ ನೀಲಾಂಬರಿ), ಪುನತ್ತಿಲ್ ಕುಂಞಬ್ದುಲ್ಲ (ಹದಿನಾಲ್ಕರ ಪ್ರಾಯದಲ್ಲಿ), ಇ. ಹರಿಕುಮಾರ್ (ಮುಗಿಸಲಾರದ ಪಯಣ), ಪಾಲ್ ಸಕ್ಕರಿಯ (ತಟ್ಟಿಂಗಲ್ ಕುಂಞುವರೀದ್ ಹಿಂತಿರುಗಿ ನೋಡುತ್ತಾನೆ), ಸಿ.ವಿ. ಬಾಲಕೃಷ್ಣನ್ (ದೇವರು ಹೋಗುವ ದಾರಿ), ಅಶಿತಾ (ಪೆಸಹಾ ಹಬ್ಬ), ಶೋಭಾ ವಾರಿಯರ್ (ಹೂವಾಡಗಿತ್ತಿ) ಮುಂತಾದವರ ಕತೆಗಳ ಅನುವಾದವನ್ನು ಕಾಣಬಹುದು. ಆದ್ದರಿಂದ ಇಲ್ಲಿರುವ ಕತೆಗಳ ವಸ್ತು, ಆಶಯ, ನಿರೂಪಣೆ, ಕಥನ ತಂತ್ರಗಳು…
ಯಲ್ಲಾಪುರ : ಯಕ್ಷ ಸಂಸ್ಕೃತಿ ಪರಿವಾರ ಹಸರಪಾಲ, ಪ್ರೇರಣಾ ಸಂಸ್ಥೆ ಗುಂದ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರ ಸಹಯೋಗದಲ್ಲಿ ವಿನೂತನ ತಾಳಮದ್ದಳೆ ಕಮ್ಮಟ ‘ಸಂವಾದ ಪಂಚಕ’ ಆಯ್ದ ಐದು ಯಕ್ಷಗಾನ ಪ್ರಸಂಗಗಳ ಸಂವಾದ ಕಾರ್ಯಕ್ರಮವನ್ನು ದಿನಾಂಕ 22 ಡಿಸೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಮಹೇಶ ಭಟ್ಟರ ಮನೆ ಹಸರಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಸಿದ್ಧ ಅರ್ಥದಾರಿಗಳಾದ ಶ್ರೀ ಎಮ್.ಎನ್. ಹೆಗಡೆ ಹಳವಳ್ಳಿ ಇವರು ಕಮ್ಮಟದ ಸಮಗ್ರ ಅವಲೋಕನಕ್ಕಾಗಿ ಮತ್ತು ಪ್ರಸಿದ್ಧ ಅರ್ಥದಾರಿ, ಚಿಂತಕ ಮತ್ತು ಬರಹಗಾರರಾದ ಶ್ರೀ ರಾಧಾಕೃಷ್ಣ ಕಲ್ಚಾರ್ ವಿಟ್ಲ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ತಿಮ್ಮಪ್ಪ ಹೆಗಡೆ ಶಿರಳಗಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ‘ಧರ್ಮಾಂಗದ ದಿಗ್ವಿಜಯ’, ‘ಜಾಂಬವತೀ ಕಲ್ಯಾಣ’, ‘ಶರಸೇತು ಬಂಧನ’, ‘ಶ್ರೀರಂಗ ತುಲಾಭಾರ’, ‘ರಾಮನಿರ್ಯಾಣ’ ಎಂಬ ಪ್ರಸಂಗಗಳ ಸಂವಾದ ನಡೆಯಲಿದೆ.
ಪುತ್ತೂರು : ಬಹುವಚನಂ ಮತ್ತು ಚಿರಂತನ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಶ್ರೀ ಕಿರಣ್ ಹೆಗ್ಡೆ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಕೊಳಲು ವಾದನ ಕಾರ್ಯಕ್ರಮವನ್ನು ದಿನಾಂಕ 22-12-2024ರಂದು ಸಂಜೆ 6-00 ಗಂಟೆಗೆ ಪುತ್ತೂರಿನ ದರ್ಬೆ ವಿದ್ಯಾನಗರದ ಪದ್ಮಿನೀ ಸಭಾಭವನದಲ್ಲಿ ಆಯೋಜಿಸಿಲಾಗಿದೆ.