Author: roovari

ಮಂಗಳೂರು : ನೃತ್ಯಾಂಗನ್ ನೃತ್ಯ ಸಂಸ್ಥೆ ಮತ್ತು ಸಂತ ಅಲೋಶಿಯಸ್ ಸ್ವಾಯತ್ತ ವಿವಿಯ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ದಿನಾಂಕ 21 ಡಿಸೆಂಬರ್ 2024ರಂದು ‘ಶಾಸ್ತ್ರೀಯ ಭರತನಾಟ್ಯ ಉತ್ಸವ’ವನ್ನು ‘ನೃತ್ಯ ಲಹರಿ’ಯು ಆಯೋಜಿಸಿದೆ. ಕಾಲೇಜಿನ ಎಲ್‌.ಸಿ.ಆರ್.ಐ. ಸಭಾಂಗಣದಲ್ಲಿ ಸಂಜೆ 6-00 ಗಂಟೆಗೆ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ಚೆನ್ನೈಯ ಕಲಾವಿದೆ ಕಾವ್ಯಾ ಗಣೇಶ್ (ಡಾನ್ಸಿಂಗ್ ಟು ಹರ್ ಓನ್ ಟ್ಯೂನ್) ಏಕವ್ಯಕ್ತಿ ನೃತ್ಯವನ್ನು ಪ್ರಸ್ತುತಪಡಿಸುವರು. ಅನಂತರ ಮುಂಬೈಯ ಕಲಾವಿದೆ ಪ್ರಾಚಿ ಸಾಥಿ ‘ವೆನ್ ವಾಲ್ಸ್ ಡಾನ್ಸ್’ ಭರತನಾಟ್ಯ, ವರ್ಲಿ ಕಲೆ ಮತ್ತು ತಲ್ಲೀನತೆಯ ಆನಿಮೇಷನ್ ಎಂಬ ಕಲ್ಪನೆಯ ಜುಗಲ್ಬಂದಿ ಎಂಬ ಏಕವ್ಯಕ್ತಿ ನೃತ್ಯವನ್ನು ಸಾದರಪಡಿಸುವರು. ಕಾರ್ಯಕ್ರಮಕ್ಕೆ ಆಸಕ್ತರಿಗೆ ಮುಕ್ತ ಪ್ರವೇಶ ಎಂದು ನೃತ್ಯಾಂಗನ್ ಸಂಸ್ಥೆ ನಿರ್ದೇಶಕಿ ವಿದುಷಿ ರಾಧಿಕಾ ಶೆಟ್ಟಿ ತಿಳಿಸಿದ್ದಾರೆ.

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಅರ್ಪಿಸುವ ಕಾರ್ಯಕ್ರಮ -36 ಉಪನಿಷದ್ ವರ್ಷದ ಪ್ರಯುಕ್ತ ‘ತಿಂಗಳ ಉಪನ್ಯಾಸ ಮಾಲೆ’ಯನ್ನು ದಿನಾಂಕ 21 ಡಿಸೆಂಬರ್ 2024ರಂದು ಸಂಜೆ 5-00 ಗಂಟೆಗೆ ಕಾರ್ಕಳ ಹೊಟೇಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಶ್ರೀ ಲಕ್ಷ್ಮೀಶ ತೋಳ್ಪಾಡಿ ಇವರು ಸಮಾರೋಪ ಉಪನ್ಯಾಸ ನೀಡಲಿರುವರು.

Read More

ಕವಲಕ್ಕಿ : ಅಭಿನೇತ್ರಿ ಆರ್ಟ್ ಟ್ರಸ್ಟ್ (ರಿ.) ನೀಲ್ಕೋಡ್ ಅರ್ಪಿಸುವ ‘ಅಭಿನೇತ್ರಿ ಯಕ್ಷೋತ್ಸವ’ವನ್ನು ದಿನಾಂಕ 21 ಡಿಸೆಂಬರ್ 2024 ಮತ್ತು 22 ಡಿಸೆಂಬರ್ 2024ರಂದು ಕವಲಕ್ಕಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 21 ಡಿಸೆಂಬರ್ 2024ರಂದು ಪ್ರಾಚಾರ್ಯರಾದ ಡಾ. ನಾಗಪತಿ ಭಟ್ ಇವರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಗಜಪುರ ನಾಗಪ್ಪಯ್ಯ ವಿರಚಿತ ‘ನಳದಮಯಂತಿ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ದಿನಾಂಕ 22 ಡಿಸೆಂಬರ್ 2024ರಂದು ಮಧ್ಯಾಹ್ನ 3-00 ಗಂಟೆಗೆ ‘ಕರ್ಣಭೇದನ’ ತಾಳಮದ್ದಳೆ ಮತ್ತು ಸಂಜೆ 6-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ಅಭಿನೇತ್ರಿ ಪ್ರಶಸ್ತಿ’, ‘ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿ’ ಮತ್ತು ‘ಕಣ್ಣಿ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಶಿರಿಯಾರ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ‘ಮಹಾಕಲಿ ಮಗಧೇಂದ್ರ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.

Read More

ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ನಿರಂತರ ರಂಗ ಉತ್ಸವ – 2024’ ಕಾರ್ಯಕ್ರಮವನ್ನು ದಿನಾಂಕ 25 ಡಿಸೆಂಬರ್ 2024ರಿಂದ 30 ಡಿಸೆಂಬರ್ 2024ರವರಗೆ ಆರು ದಿನಗಳ ನಾಟಕೋತ್ಸವವನ್ನು ಪ್ರತಿ ದಿನ ಸಂಜೆ 7-00 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 25 ಡಿಸೆಂಬರ್ 2024ರಂದು ಮೈಸೂರಿನ ಸಮತೆಂತೋ ಪ್ರಸ್ತುತಿಯ ಏಕವ್ಯಕ್ತಿ ರಂಗ ಪ್ರಯೋಗ ಡಾ. ಶ್ರೀಪಾದ ಭಟ್ ಇವರ ರಂಗಪಠ್ಯ ವಿನ್ಯಾಸ ನಿರ್ದೇಶನದಲ್ಲಿ, ಇಂದಿರಾ ನಾಯರ್ ಅಭಿನಯಿಸುವ ‘ನೀರ್ಮಾದಳ ಹೂವಿನೊಂದಿಗೆ…’ ನಾಟಕದಲ್ಲಿ ಮೊದಲ ಬಾರಿಗೆ ಕಮಲಾ ದಾಸ್ ರಂಗದ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ದಿನಾಂಕ 26 ಡಿಸೆಂಬರ್ 2024ರಂದು ಅಭಿನವ ವೀರಭದ್ರೇಶ್ವರ ತಂಡದ ವೀರಗಾಸೆ ಜನಪದ ನೃತ್ಯ ನಡೆಯಲಿದೆ. ಇದೇ ದಿನ ನಡೆಯಲಿರುವ ‘ನಿರಂತರ ರಂಗ ಉತ್ಸವ-2024’ದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿ ಮತ್ತು…

Read More

ಪಣಂಬೂರು : ಶ್ರೀ ಕೊಲ್ಲಂಗಾನ ಮೇಳದ ವತಿಯಿಂದ ‘ಯಕ್ಷ ಪಂಚಕ’ ಎಂಬ ಯಕ್ಷಗಾನ ಕಾರ್ಯಕ್ರಮವು ದಿನಾಂಕ 16 ಡಿಸೆಂಬರ್ 2024ರಂದು ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಇವರು ಮಾತನಾಡಿ “ಯಕ್ಷ ರಂಗ ಸದಾ ಲಾಲಿತ್ಯ ಹೊಂದಿದ್ದು, ಭಾರತೀಯ ಲಲಿತಕಲೆಗಳಲ್ಲಿ ಮೇರು ಸ್ಥಾನವನ್ನು ಪಡೆದಿದೆ. ಹಲವು ರಂಗ ಪ್ರಾಕಾರಗಳೂ ಇದರಲ್ಲಿ ಮಿಳಿತವಾಗಿದ್ದು, ಸರ್ವ ಜನಾಂಗಕ್ಕೂ ಒಪ್ಪಿತವಾದ ರಂಗ ಕಲೆ. ಗಡಿನಾಡ ಮೇಳವೊಂದು ಪಣಂಬೂರಿಗೆ ಬಂದು ಈ ಪಂಚಕವನ್ನು ನಡೆಸುತ್ತಿರುವುದು ಕಲೆಯನ್ನು ಕಾಪಾಡಿಕೊಳ್ಳುವಲ್ಲಿ ಉತ್ತಮ ಪ್ರಯತ್ನ” ಎಂದು ಹೇಳಿದರು. ವೇದಮೂರ್ತಿ ಸುಬ್ರಹ್ಮಣ್ಯ ಮಯ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. “ಬಿಡುಗಡೆಗೊಂಡ ಅತ್ಯಲ್ಪ ಸಮಯದಲ್ಲಿ 60ಕ್ಕೂ ಮಿಕ್ಕಿದ ಪ್ರದರ್ಶನಗಳನ್ನು ಹೊಂದಿದ ತಾನು ನೀಡಿದ ಕಥೆ ಶೂರ್ಪನಖಾವಧಾ ಪ್ರಸಂಗ ಈ ಮೇಳದಲ್ಲಿ ಪ್ರದರ್ಶಿತವಾಗುತ್ತಿರುವುದು ಸಂತಸದ ವಿಷಯ” ಎಂದು ನಿವೃತ್ತ ಯೋಧ ಹಾಗೂ ಕಲಾ ಸಂಘಟಕ ಪಿ. ಮಧುಕರ ಭಾಗವತ್ ಹೇಳಿದರು. ಹಿರಿಯ ಕಲಾವಿದ ಶ್ರೀಧರ ಐತಾಳ್, ಪಿ.…

Read More

ಶಿವಮೊಗ್ಗ: ತೀರ್ಥಹಳ್ಳಿಯ ಕುವೆಂಪು ಕವಿಶೈಲದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವರಾದ ಬಿ. ಎಲ್. ಶಂಕರ್ ಇವರನ್ನು ಸರ್ಕಾರ ನೇಮಿಸಿದೆ. ಪ್ರತಿಷ್ಠಾನದ ಪದನಿಮಿತ್ತ ಉಪಾಧ್ಯಕ್ಷರಾಗಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಪದನಿಮಿತ್ತ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ,  ಸಮಕಾರ್ಯದರ್ಶಿಯಾಗಿ ಕಡಿದಾಳ್ ಪ್ರಕಾಶ್, ಖಜಾಂಚಿಯಾಗಿ ಡಿ. ಎಂ. ಮನುದೇವ್ ಹಾಗೂ ಸದಸ್ಯರುಗಳಾಗಿ ಹಿರಿಯ ಪತ್ರಕರ್ತ ಹಾಗೂ ಜಾನಪದ ತಜ್ಞ ಶಿವಾನಂದ ಕರ್ಕಿ, ಸಿ. ಬಸವಲಿಂಗಯ್ಯ, ಎಸ್. ವಿ. ದಯಾನಂದ, ಕುವೆಂಪು ವಿ. ವಿ. ಇದರ ಮಾಜಿ ಕುಲಪತಿ ಡಾ. ಚಿದಾನಂದಗೌಡ, ಎಂ. ಸಿ. ನರೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಶಿವಮೊಗ್ಗ ಉಪಅರಣ್ಯ ಸಂರಕ್ಷಣಾಧಿಕಾರಿ, ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷರು, ಲೋಕೋಪಯೋಗಿ ಇಲಾಖೆಯ ವೃತ್ತ ಅಧೀಕ್ಷಕ ಇಂಜಿನಿಯರ್, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರುಗಳು, ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳು ಮತ್ತು ಪದನಿಮಿತ್ತ…

Read More

ಧಾರವಾಡ: ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಹಾವೇರಿ, ಮನೋಹರ ಗ್ರಂಥ ಮಾಲಾ ಆಶ್ರಯದಲ್ಲಿ ಡಾ. ಕೃಷ್ಣಮೂರ್ತಿ ಕಿತ್ತೂರ ಸಂಶೋಧಿಸಿ ಬರೆದ ‘ಗಳಗನಾಥರು ಮತ್ತು ಅವರ ಕಾದಂಬರಿಗಳು’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 15 ಡಿಸೆಂಬರ್ 2024ರ ಶನಿವಾರದಂದು ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ “ಗಳಗನಾಥರು ಮತ್ತು ಅವರ ಕಾದಂಬರಿಗಳು’ ಕೃತಿ ಗಳಗನಾಥರ ಬರಹವನ್ನು ಅಮೂಲಾಗ್ರವಾಗಿ ಚರ್ಚಿಸುವುದಾಗಿದೆ. ಈ ಪುಸ್ತಕ ಭಾಷಾ ಸಂಪತ್ತನ್ನು ಒಳಗೊಂಡಿದೆ. ಗಳಗನಾಥರ ವ್ಯಕ್ತಿತ್ವವನ್ನು ಈ ಕೃತಿ ತೋರ್ಪಡಿಸುತ್ತದೆ. ಹೊಸಗನ್ನಡ ಭಾಷೆ-ಸಾಹಿತ್ಯಗಳಿಗೆ ಭದ್ರ ಬುನಾದಿ ಹಾಕಿದ ಪುಣ್ಯ ಪುರುಷರಲ್ಲಿ ಗಳಗನಾಥರೂ ಒಬ್ಬರು. 70ರ ದಶಕದಲ್ಲಿ ಕಾದಂಬರಿಗಳು ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿದವು. ಆಧುನಿಕ ಕಲಾತ್ಮಕ ಕೃತಿಗಳನ್ನು ತುಲನೆ ಮಾಡುವ ಕಾರ್ಯವನ್ನು ಡಾ. ಕೃಷ್ಣಮೂರ್ತಿ ಕಿತ್ತೂರ ಮಾಡಿದ್ದಾರೆ. ಗಳಗನಾಥರ ಸಾಹಿತ್ಯವನ್ನು ವಿಸ್ತಾರವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಭಾಷಾಂತರ, ರೂಪಾಂತರ, ಅನುವಾದದ ರೀತಿಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ.…

Read More

ಉಡುಪಿ : ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಇವರ ವಿನೂತನ ಪ್ರಯೋಗ ‘ಮೈಂಡ್ ಮಿಸ್ಟರಿ’ ಕಾರ್ಯಕ್ರಮವು ದಿನಾಂಕ 21 ಹಾಗೂ 22 ಡಿಸೆಂಬರ್ 2024ರಂದು ಉಡುಪಿಯ ಐ. ವೈ. ಸಿ. ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ನಿಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ಬಹಿರಂಗ ಪಡಿಸುವ ‘ಮೈಂಡ್ ರೀಡಿಂಗ್’, ಮನಸ್ಸಿನಿಂದ ಮನಸ್ಸಿನ ಮಧ್ಯೆ ಅಗೋಚರ ಸಂಪರ್ಕ ಕಲ್ಪಿಸುವ ‘ಟೆಲಿಪತಿ’, ಪಂಚೇಂದ್ರಿಯಗಳ ಪ್ರಜ್ಞೆ ಮೀರಿ ಆರನೇ ಇಂದ್ರಿಯದ ಅನುಭೂತಿಯ ‘ಎಕ್ಸ್ಟ್ರಾ ಸೆನ್ಸರಿ ಪರ್ಸೆಪ್ಶನ್’ (ಇ. ಎಸ್. ಪಿ. ), ವ್ಯಕ್ತಿಯ ವರ್ತನೆಯ ಮೇಲೆ ಪ್ರಭಾವ ಬೀರುವ ಪ್ರಯೋಗ ‘ಎನ್. ಎಲ್. ಪಿ.’ ಹಾಗೂ ಮುಂಬರುವ ವಿಚಾರಗಳನ್ನು ಪೂರ್ವದಲ್ಲೇ ಸೂಚಿಸುವ ಚಮತ್ಕಾರವಾದ ‘ಭವಿಷ್ಯವಾಣಿ’ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮ 2 ದಿನಗಳಲ್ಲಿ 3 ಪ್ರದರ್ಶನ ನಡೆಯಲಿದ್ದು, ಡಿಸೆಂಬರ್ 21ರಂದು ಸಂಜೆ ಘಂಟೆ 6.30ಕ್ಕೆ ಒಂದು ಪ್ರದರ್ಶನ ಹಾಗೂ ಡಿಸೆಂಬರ್ 22 ರಂದು ಮಧ್ಯಾಹ್ನ 3.30ಕ್ಕೆ ಹಾಗೂ ಸಂಜೆ 6.30ಕ್ಕೆ ಒಟ್ಟು ಎರಡು ಪ್ರದರ್ಶನಗಳು ನಡೆಯಲಿದೆ. ಕಾರ್ಯಕ್ರಮದ ಟಿಕೆಟ್ ಗಳಿಗಾಗಿ…

Read More

ಮಂಗಳೂರು: ಖ್ಯಾತ ನೃತ್ಯ ಗುರು ಕರ್ನಾಟಕ ಕಲಾಶ್ರೀ ಪುರಸ್ಕೃತ ಕಮಲಾ ಭಟ್ ಇವರು 17 ಡಿಸೆಂಬರ್ 2024ರ ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಕಮಲಾಭಟ್ ಇವರು ನಾಟ್ಯಾಲಯ ಉರ್ವ ಸಂಸ್ಥೆಯ ನಿರ್ದೇಶಕಿಯಾಗಿದ್ದು, ಸುಮಾರು 45 ವರ್ಷಗಳಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ರಾಜ್ಯ, ದೇಶ ಹಾಗೂ ಹೊರದೇಶಗಳಲ್ಲೂ ನೃತ್ಯ ಶಿಕ್ಷಕರಾಗಿ, ಕಲಾವಿದರಾಗಿ ಮಿಂಚಿ ಅನೇಕ ಶಿಷ್ಯರನ್ನು ರಂಗಕ್ಕೆ ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರ ಹಿರಿಯ ಶಿಷ್ಯರಾಗಿ ಪ್ರತಿಮಾ ಶ್ರೀಧರ್, ಸೌಮ್ಯ ಸುಧೀಂದ್ರ, ಬೆಂಗಳೂರಿನಲ್ಲಿ ಸರಿತಾ ಕೊಟ್ಟಾರಿ ಇನ್ನು ಅನೇಕ ಶಿಷ್ಯರು ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಕಮಲಾ ಭಟ್ ಇವರು ಗುರು ಉಳ್ಳಾಲ ಮೋಹನ್ ಕುಮಾರರ ಶಿಷ್ಯರಾಗಿ ಗಮನ ಸೆಳೆದವರು. ತಮ್ಮ ಸಂಸ್ಥೆಯಿಂದ ರಾಜ್ಯದ ಪ್ರತಿಷ್ಠಿತ ವೇದಿಕೆಗಳಲ್ಲಿ ಸಾವಿರಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದರು. ಇವರ ಸಾಧನೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ಶ್ರೀ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಪೇಜಾವರ ಮಠದ…

Read More

ಮಂಡ್ಯ : ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು ಇದರ ವತಿಯಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 20 ಡಿಸೆಂಬರ್ 2024ರಿಂದ 22 ಡಿಸೆಂಬರ್ 2024ರವರೆಗೆ ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 20 ಡಿಸೆಂಬರ್ 2024ರಂದು ಪ್ರಧಾನ ವೇದಿಕೆಯಲ್ಲಿ ಬೆಳಿಗ್ಗೆ 6-00 ಗಂಟೆಗೆ ಧ್ವಜಾರೋಹಣ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ನಾಡೋಜ ಡಾ. ಗೊ.ರು. ಚನ್ನಬಸಪ್ಪ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಇವರ ದಿವ್ಯ ಸಾನಿಧ್ಯದಲ್ಲಿ ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಇವರು ಈ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆ, ಮಹಾಮಂಟಪ, ಮಹಾದ್ವಾರ, ಪ್ರವೇಶ ದ್ವಾರ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ, ಪುಸ್ತಕ ಬಿಡುಗಡೆ, ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 2-00 ಗಂಟೆಗೆ ಖ್ಯಾತ…

Read More