Subscribe to Updates
Get the latest creative news from FooBar about art, design and business.
Author: roovari
ಲಕ್ಕೋ : ಖ್ಯಾತ ಉರ್ದು ಕವಿ ಮುನಾವ್ವರ್ ರಾಣಾ ಅವರು ಹೃದಯಾಘಾತದಿಂದ ದಿನಾಂಕ 14-01-2024ರ ಭಾನುವಾರದ ರಾತ್ರಿ ಉತ್ತರ ಪ್ರದೇಶದ ಲಕ್ಕೋದಲ್ಲಿ ನಿಧನ ಹೊಂದಿದರು. ಅವರಿಗೆ (71) ವರ್ಷ ವಯಸ್ಸಾಗಿತ್ತು. ಮೂತ್ರಪಿಂಡ ಮತ್ತು ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರಾಣಾರನ್ನು ಲಕ್ಕೋದ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆ ಯುಸಿರೆಳೆದಿದ್ದಾರೆ. ಶ್ರೀಯುತರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ 26-11-1952ರಂದು ಜನಸಿದ ರಾಣಾ ಅವರು, ಉರ್ದು ಘಜಲ್ ಗಳಿಂದ ಖ್ಯಾತರಾಗಿದ್ದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಮೀರ್ ಖುಸ್ರೋ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮಂಗಳೂರು: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರರ ಸ್ಮರಣಾರ್ಥ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವು ಆಯೋಜಿಸಿದ ‘ಅಮೃತ ನಮನ’ ಕಾರ್ಯಕ್ರಮವು ದಿನಾಂಕ 15-01-2024ರಂದು ಕುತ್ತಾರಿನ ವೆಜಿನೇಷನ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಬದುಕಿನುದ್ದಕ್ಕೂ ಪ್ರೀತಿಯನ್ನೇ ಹಂಚಿ ಸರ್ವ ಸಮಾಜದ ಒಲುಮೆ ಗಳಿಸಿದ ಅಮೃತ ಸೋಮೇಶ್ವರರು ಶ್ರೇಷ್ಠ ಮಾನವತಾವಾದಿ. ಕನ್ನಡ, ತುಳು, ಮಲೆಯಾಳ ಭಾಷೆಗಳ ಅಂತಸ್ಸತ್ವವನ್ನರಿತು ಸಾಹಿತ್ಯದ ಎಲ್ಲಾ ವಿಭಾಗಗಳಲ್ಲೂ ಕೈಯಾಡಿಸಿದ ಅವರು ಸಾರಸ್ವತ ಲೋಕದ ಹಿರಿಯಣ್ಣನಂತೆ ಬದುಕಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರ ಜೀವಮಾನ ಸಾಧನೆಗಾಗಿ ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ನಡೆಸಿದ ‘ನಮ್ಮ ಅಬ್ಬಕ್ಕ ಅಮೃತ ಸ್ವಾತಂತ್ರ್ಯ ಸಂಭ್ರಮ – 2022’ ಕಾರ್ಯಕ್ರಮದಲ್ಲಿ ‘ಅಮೃತ ಸ್ವಾತಂತ್ರ್ಯ ಸಾಧನಾ ಪ್ರಶಸ್ತಿ’ ನೀಡಿದ ಧನ್ಯತೆ ಪ್ರತಿಷ್ಠಾನಕ್ಕಿದೆ. ನಾಡಿನ ಹಲವು ಬಗೆಯ ಮಾನ – ಸಮ್ಮಾನಗಳಿಗೆ ಪಾತ್ರರಾದ ಅಮೃತರಿಗೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ…
ಮಂಗಳೂರು : ಕಾಸರಗೋಡಿನ ಸಾಂಸ್ಕೃತಿಕ ಸಂಸ್ಥೆಯಾದ ‘ರಂಗ ಚಿನ್ನಾರಿ’ಯು ಮಂಗಳೂರಿನ ‘ರಂಗಸಂಗಾತಿ’ ಸಹಕಾರದಲ್ಲಿ ಆಯೋಜಿಸಿದ ಪ್ರೊ. ಬಿ.ಎ. ವಿವೇಕ ರೈ ಅವರೊಡನೆ ‘ಸರಳ ವಿರಳ ಸಲ್ಲಾಪ’ ಕಾರ್ಯಕ್ರಮವು ದಿನಾಂಕ 13-01-2024ರ ಶನಿವಾರದ ಸಂಜೆ ನಡೆಯಿತು. ಪ್ರೊ. ವಿವೇಕ ರೈಯವರ ಮನೆ ‘ಸುಯಿಲ್’ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೈಯವರಿಗೆ ತೀರಾ ಆಪ್ತರಾದ ಸುಮಾರು 25 ಸಮಾನ ಮನಸ್ಕರೊಡನೆ ಎರಡು ಗಂಟೆಗಳ ಕಾಲ ನಡೆದ ಅನೌಪಚಾರಿಕ ಮಾತು ಸಂವಾದ ಇದಾಗಿತ್ತು. ಆರಂಭದಲ್ಲಿ ಕಾಸರಗೋಡು ಚಿನ್ನಾ ಕಾರ್ಯಕ್ರಮ ಆಯೋಜಿಸಲು ಕಾರಣ ಹಾಗೂ ಅದರ ರೂಪುರೇಷೆಗಳನ್ನು ತಿಳಿಸಿದರು. ಡಾ. ನಾ.ದಾ.ಶೆಟ್ಟಿ ಬಂದ ಎಲ್ಲರನ್ನೂ ಸಭೆಗೆ ಪರಿಚಯಿಸಿದರು. ವಿವೇಕ ರೈಯವರು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆದ ನಾಲ್ಕು ಕವನಗಳನ್ನು ಡಾ. ಧನಂಜಯ ಕುಂಬ್ಳೆ, ಡಾ. ಮೀನಾಕ್ಷಿ ರಾಮಚಂದ್ರ, ಡಾ. ಅಕ್ಷಯ ಶೆಟ್ಟಿ ಹಾಗೂ ಡಾ. ನಾ.ದಾ. ಶೆಟ್ಟಿ ವಾಚನ ಮಾಡಿದರು. ಪ್ರತಿಯೊಂದು ಕವನ ರಚನೆಯ ಸಂದರ್ಭದ ವಿಶೇಷತೆಗಳನ್ನು ಪ್ರೊಫೆಸರ್ ವಿವೇಕ ರೈ ವಿವರಿಸಿದರು. ಪ್ರೊಫೆಸರ್ ಅವರ ಬಗ್ಗೆ…
ಚೆಟ್ಟೋಳಿರ ಶರತ್ ಸೋಮಣ್ಣ ಇವರು ಮಡಿಕೇರಿಯ ಕಗ್ಗೋಡ್ಲು ಗ್ರಾಮದ ಚೆಟ್ಟೋಳಿರ ಗಣಪತಿ ಮತ್ತು ಸ್ವಾತಿ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಡಿಕೇರಿಯ ಸಂತ ಮೈಕಲರ ಪ್ರಾಥಮಿಕ ಶಾಲೆ ಮತ್ತು ಕೊಡ್ಲಿಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಮುಗಿಸಿದ್ದಾರೆ. ನಂತರ ಹಾಸನದ ಕೃಷ್ಣ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುವ ಯತ್ನ ಮಾಡಿದ್ದಾರೆ. ಪ್ರವೃತ್ತಿಯಿಂದ ಸಮಾಜ ಸೇವೆ, ಲೇಖಕ, ಸಂಘಟಕರೆಂದು ಗುರುತಿಸಿಕೊಂಡಿರುವ ಇವರು ವೃತ್ತಿಯಿಂದ ವ್ಯವಸಾಯ ಮತ್ತು ವ್ಯವಹಾರವನ್ನು ಅಪ್ಪಿಕೊಂಡಿದ್ದಾರೆ. ಸಾರಸ್ವತ ಲೋಕಕ್ಕೆ ಇವರು ಕೊಡವ ಭಾಷೆಯಲ್ಲಿ ಒಡಂಗತೆರ ಒಡ್ಡ್ ಎಂಬ ಒಗಟುಗಳನ್ನು ಸಂಗ್ರಹಿಸಿರುವ ಕೃತಿಯನ್ನು ಕೊಡವಾಮೆರ ಕೊಂಡಾಟ ಕೂಟದ ಸಹಾಯದೊಂದಿಗೆ ಲೋಕಾರ್ಪಣೆ ಮಾಡಿದ್ದಾರೆ. ಕೊಡವ ಹಾಗೂ ಕನ್ನಡ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವರ ಅನೇಕ ಕಥೆ, ಕವನಗಳು, ಚುಟುಕು, ಹಾಡುಗಳು ಪ್ರಕಟಗೊಂಡಿವೆ. ಕೊಡವ ಕೂಟಾಳಿಯಡ ಕೂಟ ಸಂಘಟನೆಯಲ್ಲಿ ಎರಡನೇ ಅವಧಿಗೆ 5 ಕಾರ್ಯದರ್ಶಿಯಾಗಿ, ಜೂನಿಯರ್ ಚೇಂಬರ್ ಆಫ್ ಇಂಟರ್ನ್ಯಾಶನಲ್ ಇಂಡಿಯಾದ ಪೊನ್ನಂಪೇಟೆ ನಿಸರ್ಗ ಘಟಕದಲ್ಲಿ ಸತತ ಮೂರನೇ ಅವಧಿಗೆ ಕಾರ್ಯದರ್ಶಿಯಾಗಿ, ಕೊಡಗು…
ಬದಿಯಡ್ಕ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ಬಳ್ಳಂಬೆಟ್ಟು ಶ್ರೀ ಪರಿವಾರ ಸಹಿತ ಶಾಸ್ತಾರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಶುಭ ಸಂದರ್ಭ ದಿನಾಂಕ 14-01-2024ನೇ ರವಿವಾರ ಶ್ರೀ ದೇವಳದಲ್ಲಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ವೀರಮಣಿ ಕಾಳಗ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟರಮಣ ಭಟ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪುಂಡಿಕಾಯಿ ರಾಜೇಂದ್ರ ಪ್ರಸಾದ್ ಮತ್ತು ಲಕ್ಷ್ಮೀಶ ಬೇಂದ್ರೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಹನೂಮಂತ), ಶುಭಾ ಗಣೇಶ್ (ಶತ್ರುಘ್ನ), ಕಿಶೋರಿ ದುಗ್ಗಪ್ಪ ನಡುಗಲ್ಲು (ಈಶ್ವರ), ಹರಿಣಾಕ್ಷಿ ಜೆ. ಶೆಟ್ಟಿ (ವೀರಮಣಿ) ಮತ್ತು ಶಾರದಾ ಅರಸ್ (ಶ್ರೀ ರಾಮ) ಸಹಕರಿಸಿದರು. ಉದ್ಯಮಿ ಬದಿಯಡ್ಕ ಗಿರಿಧರ್ ಪೈ ಪ್ರಾಯೋಜಿಸಿ, ಕುಂಬ್ಳೆ ಶ್ರೀಧರ್ ರಾವ್ ಸಂಯೋಜಸಿದ ಕಾರ್ಯಕ್ರಮಕ್ಕೆ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ದೇವಳದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸಹಕರಿಸಿದರು.
ಪುತ್ತೂರು : ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ಪುತ್ತೂರಿನ ರೋಟರಿ ಬ್ಲಡ್ ಬ್ಯಾಂಕಿನ ಬಳಿ ಇರುವ ಅನುರಾಗ ವಠಾರದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನುಡಿನಮನ ಕಾರ್ಯಕ್ರಮವು ದಿನಾಂಕ 13-01-2024ರಂದು ನಡೆಯಿತು. “ಅಮೃತ ಸೋಮೇಶ್ವರ ಅವರು ಬಹುಭಾಷಾ ಪಂಡಿತರು, ಅವರು ಮಲಯಾಳಂ, ಕನ್ನಡ, ತುಳು ಭಾಷೆಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ, ಯಕ್ಷಗಾನ, ನಾಟಕ ರಂಗಗಳಲ್ಲಿ ಇವರ ಕೊಡುಗೆ ಅಪಾರ, ಎಳ್ಳಷ್ಟು ಕೋಪವಿಲ್ಲದ, ಸಾಧು ಧರ್ಮವನ್ನು ಅಳವಡಿಸಿಕೊಂಡ ಮಹಾನ್ ಚೇತನ ಅಮೃತ ಸೋಮೇಶ್ವರ ಅವರು” ಎಂದು ಹಿರಿಯ ಸಾಹಿತಿಗಳಾದ ಪ್ರೊ. ವಿ.ಬಿ. ಅರ್ತಿಕಜೆ ಅವರು ಅಮೃತ ಸೋಮೇಶ್ವರ ಅವರ ಜೊತೆಗಿನ ಒಡನಾಟವನ್ನು ಸ್ಮರಿಸುತ್ತಾ ಶ್ರದ್ಧಾಂಜಲಿ ಅರ್ಪಿಸಿದರು. ಹಿರಿಯ ಸಾಹಿತಿಗಳಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಜಯಾನಂದ ಪೆರಾಜೆ, ನಲ್ಕ ಗೋಪಾಲಕೃಷ್ಣ ಆಚಾರ್, ಭಾಸ್ಕರ್ ಬಾರ್ಯ, ಹರಿನಾರಾಯಣ ಮಾಡವು, ಡಾ.ಹೆಚ್.ಜಿ. ಶ್ರೀಧರ್, ಅಬೂಬಕ್ಕರ್ ಆರ್ಲಪದವು, ಪುತ್ತೂರು ಉಮೇಶ್ ನಾಯಕ್ ಮುಂತಾದವರು ಅಮೃತ…
ಬೆಂಗಳೂರು : ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರ ‘ವಿಷಾದ ಗಾಥೆ’ ಗಾಥೆ (ಕವಿತೆ)ಗಳ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 28-01-2024ರಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಮಲ್ಲತ್ತ ಹಳ್ಳಿ ಕಲಾಗ್ರಾಮದಲ್ಲಿ ನಡೆಯಲಿದೆ. ಸಾಂಸ್ಕೃತಿಕ ಚಿಂತಕರು ಹಾಗೂ ಪತ್ರಕರ್ತೆ ಡಾ. ವಿಜಯಾ ಇವರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಚಿಂತಕರು ಹಾಗೂ ಬರಹಗಾರರಾದ ಪ್ರೊ. ಬರಗೂರು ರಾಮಚಂದ್ರಪ್ಪ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಟಿ.ಎಸ್. ವಿವೇಕಾನಂದ, ಉಮೇಶ ಸಾಲಿಯಾನ್, ನಿರ್ಮಲಾ ನಾದನ್, ಕಗ್ಗೆರೆ ಮಂಜುನಾಥ ಇವರಿಂದ ಕವಿತಾ ವಾಚನ ಮತ್ತು ಭಾಗವತ ಶ್ರೀ ಎ.ಆರ್. ಪುಟ್ಟಸ್ವಾಮಿ ಅರಳಗುಪ್ಪೆ ಮತ್ತು ಸಂಗಡಿಗರಿಂದ ಮೂಡಲಪಾಯ ಯಕ್ಷಗಾನದ ಭಾಗವಂತಿಕೆ ನಡೆಯಲಿದೆ. ಯಾಜಿ ಪ್ರಕಾಶನ, ಮಹಾಮನೆ ಬಳಗ ತಮ್ಮೆಲರಿಗೂ ನಲ್ಮೆಯ ಸ್ವಾಗತ ಕೋರಿದ್ದಾರೆ.
ಬಲ್ಲಡಿಚಂಡ ಕಸ್ತೂರಿ ಸೋಮಯ್ಯನವರು ಹೈಸೊಡ್ಲೂರು ಗ್ರಾಮದ ಬಲ್ಯಮೀದರಿರ ಅಪ್ಪಯ್ಯ ಮತ್ತು ಚೋಂದಮ್ಮ ದಂಪತಿಯ ಪುತ್ರಿ. ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹುದಿಕೇರಿಯಲ್ಲಿ ಮುಗಿಸಿದ್ದಾರೆ. ಬಳಿಕ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ.ಯವರೆಗೆ ಮುಂದುವರಿಸಿದ್ದಾರೆ. ಮುಂದೆ ಕಾವೇರಿ ಕಾಲೇಜು ಗೋಣಿಕೊಪ್ಪಲಿನಲ್ಲಿ ಬಿ.ಎ. ಪದವಿ ಪಡೆದ ನಂತರ ಡಿ.ಎಡ್., ಬಿ.ಎಡ್. ತರಬೇತಿಗಳನ್ನು ಸರ್ವೋದಯ ಮಹಾ ವಿದ್ಯಾಲಯ ವಿರಾಜಪೇಟೆಯಲ್ಲಿ ಸಂಪೂರ್ಣಗೊಳಿಸಿದ್ದಾರೆ. ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮ್ಯಾನೇಜೆಂಟ್ ಚೆನ್ನೈಯಲ್ಲಿ ಡಿ.ಇಡಿವರೆಗೆ ವಿದ್ಯಾಬ್ಯಾಸ ಮಾಡಿದ್ದಾರೆ. ವೃತ್ತಿಯಿಂದ ಪ್ರಸ್ತುತ ಸಂತ ಅಂತೋಣಿ ಶಾಲೆ ಪೊನ್ನಂಪೇಟೆಯಲ್ಲಿ ಕಳೆದ 27ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೂರ್ವದಲ್ಲಿ ಶ್ರೀಮಂಗಲ ಪ್ರೌಢಶಾಲೆ ಮತ್ತು ಸರ್ವದೈವತಾ ಶಾಲೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಓದು, ಗಾಯನ, ಹಾಡು ರಚನೆ ಹಾಗೂ ಲೇಖನ ಪ್ರಬಂಧ ರಚನೆಯನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ದಿನಾಂಕ 23-07-2023ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ “ಕೊಡವ ತಕ್ಕ್ ಎಳ್ತ್‌ಕಾರಡ ಕೂಟ”ದ ಇಪ್ಪತೈದನೆಯ ವರ್ಷಾಚರಣೆಯ (ಬೊಳ್ಳಿನಮ್ಮೆ) ಸಮಾರಂಭದಲ್ಲಿ ಇವರ ‘ನಂಗ ಕೊಡವ’, ‘ಕೊಡವಾಮೆಲ್ ಪೊಂಗ’, ‘ಕಸ್ತೂರಿರ ಕವನ’…
ಮಂಗಳೂರು : ಬೋಳೂರಿನ ಅಮೃತ ವಿದ್ಯಾಲಯಂ ಆವರಣದಲ್ಲಿ ಜರಗಿದ ಮಠದ 25ನೇ ವರ್ಷದ ಸಂಭ್ರಮಾಚರಣೆ ಹಾಗೂ ರಾಷ್ಟ್ರೀಯ ಯುವದಿನದ ಅಂಗವಾಗಿ ಅಮೃತ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ಆಯೋಜಿಸಲಾದ ‘ಯುವ ಸಾಹಿತ್ಯ ಸಮ್ಮೇಳನ’ವು ದಿನಾಂಕ 13-01-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರಿನ ಮಾತಾ ಅಮೃತನಂದಮಯಿ ಮಠದ ಸ್ವಾಮಿನಿ ಮಂಗಲಾಮೃತ ಪ್ರಾಣ ಅವರು ಮಾತನಾಡುತ್ತಾ “ಸಾಹಿತ್ಯದ ಓದು ಮತ್ತು ರಚನೆಯಿಂದ ವ್ಯಕ್ತಿತ್ವದ ಬೆಳವಣಿಗೆ ಆಗುತ್ತದೆ. ಇದು ಶಿಕ್ಷಣಕ್ಕೆ ಪೂರಕವಾದ ಒಂದು ಚಟುವಟಿಕೆಯಾಗಿದ್ದು ಯುವಜನರು ತಮ್ಮ ಆಂತರ್ಯದ ಅಭಿವ್ಯಕ್ತಿಗಾಗಿ ಸಾಹಿತ್ಯವನ್ನು ಅವಲಂಬಿಸುವುದು ಸೂಕ್ತ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರು “ಸಾಹಿತ್ಯದ ಬೆಳವಣಿಗೆಗೆ ನಾವು ಯುವಜನರ ಕಡೆಗೆ ಹೆಚ್ಚಾಗಿ ಗಮನ ಹರಿಸಿದ್ದೇವೆ. ಯುವಜನರಿಗೆ ಅನ್ವಯವಾಗುವ ಕಾರ್ಯಕ್ರಮಗಳ ಮೂಲಕ ಅವರನ್ನು ತಲಪುವ ಪ್ರಯತ್ನ ಮಾಡುತ್ತಿದ್ದೇವೆ” ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕವಿ ಸಾಹಿತಿ ಹಾಗೂ ಅಮೃತ ಸಂಸ್ಕೃತಿ ಮತ್ತು…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ದಿನಾಂಕ 07-01-2024ನೇ ರವಿವಾರದಂದು ಮಂಗಳೂರಿನ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು. ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನಪದ ವಿದ್ವಾಂಸ ಡಾ. ಚಿನ್ನಪ್ಪ ಗೌಡ “ಡಾ. ಅಮೃತ ಸೋಮೇಶ್ವರರ ಗ್ರಂಥಗಳಲ್ಲಿರುವ ಮಾಹಿತಿ ಸಾರ್ವಕಾಲಿಕವಾಗಿದ್ದು, ಅವುಗಳು ಕರಾವಳಿಯ ಸಾಂಸ್ಕೃತಿಕ ಸಾಕ್ಷಿ ಪ್ರಜ್ಞೆಯಾಗಿ ಉಳಿಯಲಿವೆ. ಅಮೃತರು ವ್ಯಕ್ತಿತ್ವ, ವಿನಯ ಮತ್ತು ವಿದ್ವತ್ತಿನ ಅಪೂರ್ವ ಸಂಗಮ. ಕರಾವಳಿಯಲ್ಲಿ ಲಲಿತ ಕಲಾ ಮಹಾವಿದ್ಯಾಲಯ ಸ್ಥಾಪಿಸುವುದು ಅವರ ಕನಸಾಗಿತ್ತು. ಅಂತಹ ಮಹಾವಿದ್ಯಾಲಯವನ್ನು ಸ್ಥಾಪಿಸಿದರೆ ಕರಾವಳಿ ಭಾಗದ ಸಂಸ್ಕೃತಿ ಉಳಿಸಲು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ.” ಎಂದು ಹೇಳಿದರು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ “ಡಾ. ಅಮೃತ ಸೋಮೇಶ್ವರ ಅವರು ಬರೆಯದ ವಿಷಯವೇ ಇಲ್ಲ. ವಿಷಯದಲ್ಲಿ ಖಚಿತವಾಗಿದ್ದರು. ತಮ್ಮ ನಿಲುವನ್ನು ಬಿಟ್ಟು ಕೊಡುತ್ತಿರಲಿಲ್ಲ. ಪುರಾಣಕ್ಕೆ ಹೊಸ ಅರ್ಥ ಹಾಗೂ ಹೊಸರೂಪ ನೀಡಿದ…