Author: roovari

ಕಾಸರಗೋಡು : ಕರ್ನಾಟಕ ರಾಜ್ಯ ‘ಸ್ಪಂದನ ಸಿರಿ’ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ದಿನಾಂಕ 15 ಸಪ್ಟೆಂಬರ್ 2024 ರಂದು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆಯುವ ಕೇರಳ -ಕರ್ನಾಟಕ ‘ಸ್ಪಂದನ ಸಿರಿ’ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕೃತಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಲೋಕಾರ್ಪಣಾ ಸಮಾರಂಭವು ದಿನಾಂಕ 31 ಆಗಸ್ಟ್ 2024ರ ಶನಿವಾರದಂದು ಕಾಸರಗೋಡಿನ ಎಡನೀರು ಮಠದಲ್ಲಿ ನಡೆಯಿತು. ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಆಧ್ಯಾತ್ಮಿಕ, ಸಾಂಸ್ಕೃತಿಕ ವಿಚಾರಗಳ ಜತೆಗೆ ಕೃಷಿ ಸಂಸ್ಕೃತಿಯನ್ನು ಯುವಜನತೆ ಅಳವಡಿಸಿಕೊಯಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಸಾಹಿತ್ಯ ಹಾಗೂ ಕೃಷಿಯ ಕುರಿತು ಜಾಗೃತಿ ಮೂಡಿಸಬೇಕು.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸ್ಪಂದನ ಸಿರಿ ವೇದಿಕೆಯ ಗೌರವ ಸಲಹೆಗಾರರಾದ ಕೆ. ವಾಮನ್ ರಾವ್ ಬೇಕಲ್, ಸ್ಪಂದನ ಸಿರಿ ಜಿಲ್ಲಾ ಅಧ್ಯಕ್ಷರಾದ ವಿರಾಜ್ ಅಡೂರು, ಸಾಮಾಜಿಕ ಮುಖಂಡರಾದ ಕಾಸರಗೋಡು ವೆಂಕಟ್ರಮಣ ಹೊಳ್ಳ, ಸಂಗೀತ ವಿದ್ವಾಂಸರಾದ ಬಳ್ಳಪದವು ಯೋಗೀಶ ಶರ್ಮ,…

Read More

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಶ್ರೀಸುಶೀಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ 01 ಆಗಸ್ಟ್ 2024 ರಂದು ಆರಂಭಗೊಂಡ ಶ್ರೀಕೃಷ್ಣ ಮಾಸೋತ್ಸವದ ಸಮಾರೋಪ ಸಮಾರಂಭವು ದಿನಾಂಕ 01 ಸೆಪ್ಟೆಂಬರ್ 2024ರಂದು ಸಮಾರೋಪಗೊಳ್ಳಲಿದ್ದು, ಅಂದು ಶ್ರೀಕೃಷ್ಣನಿಗೆ ‘ಉದಯಾಸ್ತಮಾನ ಸೇವೆ’ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಿಗಮಪ ಸೀಸನ್-15ರ ರನ್ನರ್ ಅಪ್ ಕಲಾವಿದೆ ವಿದುಷಿ ಸಾಧ್ವಿನಿ ಕೊಪ್ಪ ಅವರಿಂದ ಬೆಳಗ್ಗೆ ಘಂಟೆ 10.00 ರಿಂದ 12.00ರ ವರೆಗೆ ಶಾಸ್ತ್ರೀಯ ಸಂಗೀತ ಕಛೇರಿ ,ಅಪರಾಹ್ನ ಘಂಟೆ 3.00 ರಿಂದ 5.00ರ ವರೆಗೆ ಸಂಯುಕ್ತ ಸಂಸ್ಥಾನ (ಯು. ಕೆ.) ಇಲ್ಲಿನ ನೃತ್ಯ ನಿರ್ದೇಶಕಿ ದಿವ್ಯಾ ಭಟ್ ಇವರಿಂದ ಕಥಕ್ ನೃತ್ಯ ಹಾಗೂ ರಾತ್ರಿ ಘಂಟೆ 7.00 ರಿಂದ 9.00ರ ವರೆಗೆ ಸ್ವೀಡನ್‌ ಇಲ್ಲಿನ ವಿದುಷಿ ದಿವ್ಯಾ ಸುರೇಶ್ ಇವರಿಂದ ಭರತನಾಟ್ಯ ಪ್ರದರ್ಶನ ಗೊಳ್ಳಲಿದೆ. ಅಂದು ಸಂಜೆ ಘಂಟೆ 5.00 ರಿಂದ ರಾಜಾಂಗಣದಲ್ಲಿ ನಡೆಯಲಿರುವ ಶ್ರೀಕೃಷ್ಣ…

Read More

ಪೆರುವಾಯಿ: ಮುರುವ ಬಳಿಯ ಮಾಣಿಲದ ನಿವಾಸಿ ಖ್ಯಾತ ಕಾಷ್ಠ ಶಿಲ್ಪಿ ನಾರಾಯಣ ಆಚಾರ್ಯ ಹೃದಯಾಘಾತದಿಂದ ದಿನಾಂಕ 30 ಆಗಸ್ಟ್ 2024ರ ರಾತ್ರಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಶ್ರೀಯುತರು ದಿ. ಪಕೀರ ಆಚಾರ್ಯ ಹಾಗೂ ದಿ. ಪುಟ್ಟಮ್ಮ ದಂಪತಿಗಳ ಪುತ್ರನಾಗಿದ್ದು, ಮರದ ಕೆತ್ತನೆ ಕೆಲಸದ ಜೊತೆ ಖ್ಯಾತ ಕಾಷ್ಠ ಶಿಲ್ಪಿಯಾಗಿ ಹೆಸರುವಾಸಿಯಾಗಿದ್ದರು. ತಂದೆಯ ಜೊತೆ ಹಾಗೂ ಮಂಜೇಶ್ವರದ ರಥದ ಶಿಲ್ಪಿ ದಿ. ಈಶ್ವರ ಆಚಾರ್ಯರ ಮಾರ್ಗದರ್ಶನದಲ್ಲಿ ರಥದ ಶಿಲ್ಪದ ಭವ್ಯ ಪರಂಪರೆಯನ್ನು ವಿನೂತನ ಶೈಲಿಯಲ್ಲಿ ರಚಿಸಿ ಕೀರ್ತಿ ಪಡೆದಿದ್ದರು. ಮುರುವದ ಗ್ರಾಮ ದೈವ ಪಂಜುರ್ಲಿ, ಹುಲಿ ಭೂತಗಳ ವರಾಹ ಮತ್ತು ವ್ಯಾಘ್ರ ಬಂಡಿಯಲ್ಲಿ ಇವರ ಕೈಚಳಕದ ಕೆತ್ತನೆಯನ್ನು ಈಗಲೂ ಕಾಣಬಹುದು. ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ಮಾಣಿಲ, ಕೇಪು, ಚೆಲ್ಲಡ್ಗ ಮುಂತಾದ ಕಡೆಗಳಲ್ಲಿ ರಚಿತವಾದ ಶಿಲ್ಪ ಕಲೆಗಳಲ್ಲಿ ಇವರ ಕಲಾ ಪ್ರೌಢಿಮೆ ಎದ್ದು ಕಾಣುವಂತಿದೆ. ಅದೇ ರೀತಿ ಬೆಂಗಳೂರು ಗಿರಿನಗರ ಗಣೇಶ ದೇವಾಲಯದಲ್ಲಿ ಕೂಡ ಇವರ ಕಾಷ್ಠ ಶಿಲ್ಪ…

Read More

ಮೂಡುಬಿದಿರೆ: ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಗದಗ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಹಾಗೂ ಬಾಲಭವನ ಸೊಸೈಟಿ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ಮಕ್ಕಳ ಚಿತ್ರ ಕಲೋತ್ಸವ ‘ಚಿಣ್ಣರ ಚಿತ್ರ ಚಿತ್ತಾರ 2023-24’ ಇದರ ಬಹುಮಾನ ವಿತರಣಾ ಸಮಾರಂಭವು ದಿನಾಂಕ 14 ಆಗಸ್ಟ್ 2024 ರಂದು ಧಾರಾವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು. ದೇಶದಾದ್ಯಂತ ಸುಮಾರು 27,000 ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ ಈ ಚಿತ್ರಕಲಾ ಸ್ಪರ್ಧೆಯಲ್ಲಿ ಮೂಡುಬಿದಿರೆ ಮೌಂಟ್ ಕಾರ್ಮೆಲ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಅಶ್ವಿಲ್ ನೀಲ್ ಲೋಬೋ ‘ಪುಟ್ಟ ಕಲಾವಿದ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರು ಮೂಡುಬಿದಿರೆ ಅಪೂರ್ವ ನಗರದ ಅರುಣ್ ವಿನೀತ ಲೋಬೋ ದಂಪತಿಯ ಪುತ್ರ.

Read More

ಉಡುಪಿ : ಕೋಟದ ಸು.ವಿ.ಕಾ. ಸಾಂಸ್ಕೃತಿಕ ಸಂಘಟನೆಯು ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಆಯೋಜಿಸಿದ ಖ್ಯಾತ ರಂಗನಿರ್ದೇಶಕ ಡಾ. ಶ್ರೀಪಾದ ಭಟ್ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಕುಮಾರಿ ಕಾವ್ಯ ಹಂದೆ ಅಭಿನಯದ ಏಕವ್ಯಕ್ತಿ ಕಾವ್ಯಾಭಿನಯ ‘ಹಕ್ಕಿ ಮತ್ತು ಅವಳು’ ಇದರ ಪ್ರದರ್ಶನವು 30 ಆಗಸ್ಟ್ 2024ರ ಶುಕ್ರವಾರದಂದು ನಡೆಯಿತು. ಹಿನ್ನೆಲೆಯಲ್ಲಿ ಶಿಕ್ಷಕಿ ವಿನಿತಾ ಹಂದೆ ಮತ್ತು ಉಪನ್ಯಾಸಕ ಸುಜಯೀಂದ್ರ ಹಂದೆ ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಕುಮಾರ್ ಇವರು ಸಾಹಿತ್ಯ ವೇದಿಕೆಯ ಪರವಾಗಿ ನಟಿ ಕಾವ್ಯ ಹಂದೆಯವರನ್ನು ಸಂಮಾನಿಸಿ ಗೌರವಿಸಿದರು. ಕಾಲೇಜಿನ ಹಿರಿಯ ಉಪನ್ಯಾಸಕಿ ಸುಮಾ, ಸಾಹಿತ್ಯ ಸಂಘದ ಸಂಚಾಲಕಿ ಹಾಗೂ ಲೇಖಕಿ ಸುಧಾ ಆಡುಕಳ, ಉಪನ್ಯಾಸಕರಾದ ಪ್ರೇಮ, ಭವ್ಯ, ಶಾಲಿನಿ, ಡಾ. ಉಷಾ, ಗಂಗಾಧರ, ಛಾಯಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಾಹಿತ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಗ್ರೀಷ್ಮಿತಾ ಪಿಂಟೊ ಹಾಗೂ ಕುಮಾರಿ ಲವಿಕಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Read More

ಉಡುಪಿ : ಕನ್ನಡ ಜಾನಪದ ಪರಿಷತ್ ಉಡುಪಿ ತಾಲೂಕು ಘಟಕವು ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಉದ್ಘಾಟನಾ ಸಮಾರಂಭವು ದಿನಾಂಕ 27 ಆಗಸ್ಟ್ 2024 ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು “ಜಾನಪದ ಕಲೆ ಹಾಗೂ ಕ್ರೀಡೆಯ ಸೊಬಗು, ಸಹಜತೆ, ಆತ್ಮೀಯತೆ ಯಾವುದೇ ಕಲೆಗಳಲ್ಲಿ ನೋಡಲು ಸಾಧ್ಯವಿಲ್ಲ. ಇದು ಎಂದಿಗೂ ಶಾಶ್ವತವಾಗಿರುತ್ತದೆ. ಈ ಮಣ್ಣಿನ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಅಗತ್ಯವಾಗಿ ಮಾಡಬೇಕಾಗಿದೆ. ಈ ಜಾನಪದವು ಈ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ.” ಎಂದರು. ಜನಪದ ವಿದ್ವಾಂಸ ಡಾ. ಗಣನಾಥ್ ಎಕ್ಕಾರು ಮಾತನಾಡಿ “ಪ್ರಕೃತಿ ಹಾಗೂ ಕೃಷಿ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸದಿದ್ದರೆ ಜಾನಪದವು ಅಪಾಯದಂಚಿಗೆ ತಲುಪಬಹುದು. ಪ್ರಕೃತಿ ಮತ್ತು ಸಂಸ್ಕೃತಿಯ ಅವಿನಾಭಾವ ಸಂಬಂಧದ ಕುರಿತು ಚರ್ಚಿಸಿ ಅಭಿವೃದ್ಧಿಯ ಚಿಂತನೆ ರೂಪಿಸಬೇಕಿದೆ.…

Read More

ಬೆಳಗಾವಿ : ರಂಗ ಸಂಪದ ಬೆಳಗಾವಿ ಆಯೋಜಿಸುವ ‘ಹಾಸ್ಯ ಸಂಜೆ’ ಗದ್ಯ– ಪದ್ಯ- ವೈವಿಧ್ಯ ಕಾರ್ಯಕ್ರಮವು 01 ಸೆಪ್ಟೆಂಬರ್ 2024ರ ಭಾನುವಾರದಂದು ಸಂಜೆ ಘಂಟೆ 5.30 ರಿಂದ ಬೆಳಗಾವಿಯ ತಿಳಕವಾಡಿಯಲ್ಲಿರುವ ವಿದ್ಯಾಪೀಠದ ಸಮೀಪದ ಐ. ಎಮ್. ಇ. ಆರ್. ಸಭಾಭವನದಲ್ಲಿ ನಡೆಯಲಿದೆ. ಶ್ರೀ ಶ್ರೀಪತಿ ಮಂಜನಬೈಲು ಇವರ ಸಂಯೋಜನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಂಕಣಕಾರ ಹಾಗೂ ಹಾಸ್ಯೋಕ್ತಿ ಪಟುಗಳಾದ ಶ್ರೀ ಎನ್. ರಾಮನಾಥ ಮತ್ತು ಪ್ರಸಿದ್ಧ ವಾಗ್ಮಿ, ಹರಟೆ ಪಟು ಹಾಗೂ ಹಾಸ್ಯ ಮಾತುಗಾರರಾದ ಶ್ರೀ ವೈ. ವಿ. ಗುಂಡುರಾವ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಸಬೇಕೆಂದು ರಂಗಸಂಪದ ಇದರ ಅಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿ ವಿನಂತಿಸಿದ್ದಾರೆ.

Read More

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕೊಡಮಾಡುವ 2022 ಮತ್ತು 2023ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಆರು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. 2022ನೇ ಸಾಲಿನಲ್ಲಿ ಮರಿಯಮ್ಮ ಇಸ್ಮಾಈಲ್‌ ಉಳ್ಳಾಲ (ಬ್ಯಾರಿ ಸಾಹಿತ್ಯ), ಹಂಝತುಲ್ಲಾ ಕುವೇಂಡ ಬೆಂಗಳೂರು (ಬ್ಯಾರಿ ಭಾಷೆ ಮತ್ತು ಸಂಘಟನೆ) ಮತ್ತು ಎಂ.ಜಿ. ಶಾಹುಲ್‌ ಹಮೀದ್‌ ಗುರುಪುರ (ಬ್ಯಾರಿ ಕಲೆ ಮತ್ತು ಸಂಸ್ಕೃತಿ) ಹಾಗೂ 2023ನೇ ಸಾಲಿನಲ್ಲಿ ಮುಹಮ್ಮದ್‌ ಶರೀಫ್‌ ನಿರ್ಮುಂಜೆ (ಬ್ಯಾರಿ ಸಾಹಿತ್ಯ), ಹಾಜಿ ಟಿ.ಎ. ಆಲಿಯಬ್ಬ ಜೋಕಟ್ಟೆ (ಬ್ಯಾರಿ ಭಾಷೆ ಮತ್ತು ಸಂಘಟನೆ) ಮತ್ತು ಅಶ್ರಫ್‌ ಅಪೋಲೋ ಕಲ್ಲಡ್ಕ (ಬ್ಯಾರಿ ಕಲೆ ಮತ್ತು ಸಂಸ್ಕೃತಿ) ಇವರುಗಳು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ‘ಗೌರವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಅಕಾಡೆಮಿಯ ಮಾಜಿ ಅಧ್ಯಕ್ಷ ಮುಹಮ್ಮದ್‌ ಕರಂಬಾರು, ಮಾಜಿ ಸದಸ್ಯರಾದ ಅತ್ತೂರು ಚೆಯ್ಯಬ್ಬ, ಆಯಿಶಾ ಯು.ಕೆ. ಮತ್ತು ಹುಸೈನ್‌ ಕಾಟಿಪಳ್ಳ ಇವರನ್ನು ಒಳಗೊಂಡ ಆಯ್ಕೆ ಸಮಿತಿಯು ಈ ಆಯ್ಕೆ ಮಾಡಿದ್ದು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಯಿ ಸಮಿತಿ…

Read More

ಮೂಡಬಿದ್ರೆ : ತುಳುನಾಡಿನ ಮೂಲ ಜನಾಂಗದಲ್ಲಿ ಹುಟ್ಟಿದ ಕಾರಣಿಕ ಪುರುಷರ ಚರಿತ್ರೆಯನ್ನು ಲೋಕಮುಖಕ್ಕೆ ಸಾರುವರೆ ಸಿದ್ಧತೆ ನಡೆಸುತ್ತಿದೆ ಮೂಡಬಿದ್ರೆಯ ಯಕ್ಷ ಸಂಭ್ರಮ. ಬಿಲ್ಲವ, ಬಂಟ, ಮುಗೇರ ಹಾಗೂ ಸತ್ಯ ಸಾರಮಾನಿ ಜನಾಂಗದ ಕೋಟಿ – ಚೆನ್ನಯರು, ಕಾಂತಬಾರೆ – ಬುದಬಾರೆ, ಸಿರಿ – ಸೊನ್ನೆ – ಅಬ್ಬಯ – ದಾರಯ, ದೈಯು – ಪೆರ್ಣು – ಮಾನಿಗ, ಕಾನದ – ಕಟದರ ಇತಿಹಾಸವನ್ನು ಲೋಕ ಮುಖಕ್ಕೆ ಸಾರುವ ತುಳು ಯಕ್ಷ ಪರ್ಬವನ್ನು ಜಾತ್ರೆಯನ್ನಾಗಿಸುವರೇ ತೆಂಕು ತಿಟ್ಟಿನ 60ಕ್ಕೂ ಮಿಕ್ಕಿ ದಿಗ್ಗಜ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಯ ಯಶಸ್ವೀ ಜೋಡಿ ಶ್ರೀ ನಿತಿನ್ ಕುಮಾರ್ ತೆಂಕಕಾರಂದೂರು ರಚಿಸಿ, ನಿರ್ದೇಶಿಸುವ ಶ್ರೀ ಯೋಗೀಶ್ ರಾವ್ ಚಿಗುರುಪಾದೆ ಪದ್ಯ ರಚನೆಯ ತುಳು ಪ್ರಸಂಗ ‘ಕುಲದೈವೋ ಬ್ರಹ್ಮ’ ಇದರ ಯಕ್ಷಗಾನ ಬಯಲಾಟವು ದಿನಾಂಕ 01 ಸೆಪ್ಟೆಂಬರ್ 2024ರಂದು ಮಧ್ಯಾಹ್ನ 2-00 ಗಂಟೆಗೆ ಮೂಡಬಿದ್ರೆಯ ಕನ್ನಡ ಭವನದಲ್ಲಿ ನಡೆಯಲಿದೆ. ಕೆಮ್ಮಲೆ ಬೆರ್ಮೆರೆ ಕ್ಷೇತ್ರದ…

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣಮಠ ಇವುಗಳ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಶ್ರಾವಣ ಸಂಗೀತೋತ್ಸವ 2024’ವನ್ನು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 01 ಸೆಪ್ಟೆಂಬರ್ 2024ರಂದು ಆಯೋಜಿಸಲಾಗಿದೆ. ಸಂಗೀತ ಪರಿಷತ್ ಮಂಗಳೂರು ಇದರ ಗೌರವ ಅಧ್ಯಕ್ಷರಾದ ಡಾ. ಸಿ.ಆರ್.ಬಲ್ಲಾಳ್ ಇವರ ಪ್ರಾಯೋಜಕತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ಗಂಟೆ 10-00ರಿಂದ ಮಂಗಳೂರಿನ ಜಿ.ಎನ್. ಕೃಷ್ಣಪವನ್ ಕುಮಾರ್ ಇವರ ಹಾಡುಗಾರಿಕೆಗೆ ಬೆಂಗಳೂರಿನ ಶ್ರೀ ಕಾರ್ತಿಕೇಯ ರಾಮಚಂದ್ರ ವಯೋಲಿನ್, ಬೆಂಗಳೂರಿನ ಸುನಿಲ್ ಸುಬ್ರಹ್ಮಣ್ಯ ಮೃದಂಗದಲ್ಲಿ ಮತ್ತು ಮಂಗಳೂರಿನ ಸುಮುಖ ಕಾರಂತ್ ಖಂಜೀರದಲ್ಲಿ ಸಹಕರಿಸಲಿದ್ದಾರೆ. ಮಧ್ಯಾಹ್ನ 1-30 ಗಂಟೆಗೆ ಬೆಂಗಳೂರಿನ ಶ್ರೀ ಶ್ರೀಕೃಷ್ಣ ಭಟ್ ಎನ್.ಆರ್. ಇವರ ಕೊಳಲು ವಾದನಕ್ಕೆ ಬೆಂಗಳೂರಿನ ಅಭಯ್ ಸಂಪಿಗೆತಾಯ ವಯೋಲಿನ್ ಮತ್ತು ಮಂಗಳೂರಿನ ಶ್ರೀ ಅವಿನಾಶ್ ಬೆಳ್ಳಾರೆ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಂಜೆ 4-45 ಗಂಟೆಗೆ ಬೆಂಗಳೂರಿನ ಕುಮಾರಿ…

Read More