Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಪ್ರಕಟಿಸಿದ ಪತ್ರಕರ್ತ ಸಾಹಿತಿ ರಘುನಾಥ ಎಂ. ವರ್ಕಾಡಿ ಬರೆದಿರುವ ‘ಸೂರ್ಯೆ ಚಂದ್ರೆ ಸಿರಿ’ ದೇವಕಿ ಬೈದ್ಯೆತಿ ಹೇಳಿರುವ ತುಳು ಜನಪದ ಕಥಾ ಸಂಕಲನ ಲೋಕಾರ್ಪಣೆಯ ಕಾರ್ಯಕ್ರಮ ದಿನಾಂಕ 04-01-2024ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಕೃತಿಕಾರ ರಘುನಾಥ ಎಂ. ವರ್ಕಾಡಿ ಸ್ವಾಗತಿಸಿದರು. ಶ್ರೀನಿವಾಸ ವಿಶ್ವವಿದ್ಯಾನಿಲಯ ಮುಕ್ಕದ ಪ್ರೊ. ಎಂ.ಎಸ್. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷರು ಡಾ. ತುಕಾರಾಮ ಪೂಜಾರಿ ‘ಸೂರ್ಯೆ ಚಂದ್ರೆ ಸಿರಿ’ ಕೃತಿ ಲೋಕಾರ್ಪಣೆಗೊಳಿಸಿದರು. ಡಾ. ತುಕಾರಾಮ ಪೂಜಾರಿ ಮಾತನಾಡಿ “ಕೃತಿಕಾರರು 30 ಕತೆಗಳನ್ನು ಬಾರೀ ಅಂದವಾಗಿ ಜೋಡಣೆ ಮಾಡಿದ್ದಾರೆ. ಮೊದಲ ಕತೆಯೆ ಅತಿಕಾರ ತಳಿಯ ಬಗ್ಗೆ ಇದೆ. ಈ ತಳಿಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದನ್ನು ಎಣೆಲ್ ನಲ್ಲಿ ಬಿತ್ತಿದರೂ ಪೈರು ಆಗುವುದು ಸುಗ್ಗಿಯಲ್ಲಿ. ತುಳುನಾಡನ್ನು ಯಾವ ರೀತಿಯಲ್ಲಿ ನೋಡುವುದಾದರೂ ಶಾಸನ ಆಧಾರವಾಗಿದೆ. ಶಾಸನ ಬರೆಸುವವನು ರಾಜ.…
ಅಲ್ಲಿ ಒಂದು ಹಬ್ಬದ ಸಂಭ್ರಮವಿತ್ತು. ಸುಂದರ ಕಲಾಕೃತಿಗಳನ್ನು ನೋಡುವ ಕುತೂಹಲವಿತ್ತು. ಕಲಾಕೃತಿಗಳಿಂದ ಮನೆಯನ್ನು ಅಲಂಕರಿಸುವ ತವಕವಿತ್ತು. ಹಲವು ಮನಸ್ಸಿನ ಬಣ್ಣದ ಬೆಡಗಿತ್ತು. ಇದೆಲ್ಲಾ ಇದ್ದದ್ದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ. 2003ರಲ್ಲಿ ಪ್ರಾರಂಭವಾದ ಚಿತ್ರಸಂತೆ ವರ್ಷದಿಂದ ವರ್ಷಕ್ಕೆ ಕಲಾಸಕ್ತರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಆರಂಭದಲ್ಲಿ ಕೇವಲ ಸಾವಿರದಷ್ಟು ಜನ ಬರುತ್ತಿದ್ದ ಚಿತ್ರಸಂತೆ ಇವತ್ತು ಲಕ್ಷ ಲಕ್ಷ ಜನರನ್ನು ಸೆಳೆಯುತ್ತಿದೆ. ಮನೆಗೊಂದು ಕಲಾಕೃತಿ ಬೇಕೆಂದರೆ ಮುಂದಿನ ಚಿತ್ರಸಂತೆಯವರೆಗೆ ಕಾಯುವಂತೆ ಮಾಡಿದೆ. ಯುವ ಕಲಾವಿದರಿಗಂತೂ ಇದೊಂದು ಪ್ರಧಾನ ಕಲಾವೇದಿಕೆ. ಚಿತ್ರಸಂತೆಗಂದೇ ಚಿತ್ರ ರಚಿಸುವ ಕಲಾವಿದರಿದ್ದಾರೆ. ಅಲ್ಲಿ ಕಲಾಕೃತಿಗಳನ್ನು ಖರೀದಿಸುವವರ ಮನದ ಮಿಡಿತವನ್ನು ಯುವ ಕಲಾವಿದರು ಅರಿತಿದ್ದಾರೆ. ಒಂದು ವಾರ್ಷಿಕ ಸಂಭ್ರಮವನ್ನು ಮುಂದಿಟ್ಟುಕೊಂಡು ವರ್ಷಪೂರ್ತಿ ಕಲಾಕೃತಿಗಳನ್ನು ನಿರ್ಮಿಸುವುದು ಅದೊಂದು ಪೂಜೆಯೇ ಸರಿ. 2024ರ ಚಿತ್ರಸಂತೆ, ಬೆಂಗಳೂರಿನ ಜನರು ಕಲಾಪ್ರಿಯರು ಎನ್ನುವುದನ್ನು ಸಾಬೀತು ಪಡಿಸಿದೆ. ಮಾನ್ಯಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡು , ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಲಕ್ಷ ಲಕ್ಷ ಜನರ ಮನಸೂರೆಗೊಂಡ ಚಿತ್ರಸಂತೆ. ಕರೋನಾಕ್ಕೂ ಕ್ಯಾರೇ ಅನ್ನದ ಜನ ಸಾಗರೋಪಾದಿಯಲ್ಲಿ ಹರಿದು…
ಮೂಡುಬಿದಿರೆ : ಮೂಡುಬಿದಿರೆಯ ಕನ್ನಡ ಭವನದಲ್ಲಿರುವ ತುಳುಕೂಟದ ಕಛೇರಿಯಲ್ಲಿ ಮಾಸಿಕ ಸಭೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 06-01-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ‘ನಾಗಾರಾಧನೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಜೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ತಜ್ಞರಾಗಿರುವ ಪೊಳಲಿಯ ಶ್ರೀ ರಾಜಶೇಖರ ರಾವ್ ಎನ್. “ನಾಗಲೋಕ ಎನ್ನುವುದು ಭೂಮಿಯ ಗರ್ಭವಾಗಿದ್ದು ಅದರಿಂದ ಉಂಟಾಗುವ ತೊಂದರೆಗಳಿಗೆ ವಾಹಕವಾಗಿ ಸರ್ಪವನ್ನು ಕಾಣುತ್ತೇವೆ. ನಾಗ ಎಂದರೆ ಸರ್ಪ ಎನ್ನುವ ಹೆಸರಿರುವುದಾದರೂ ನಾಗಾರಾಧನೆಯಲ್ಲಿ ಬರುವ ನಾಗ ಎಂದರೆ ಸರ್ಪವಲ್ಲ. ನಾಗರ ಹಾವು ತೊಂದರೆಗಳನ್ನು ಮನಗಾಣಿಸುವ ಮಾಧ್ಯಮವಾಗಿ ಮಾತ್ರ ಮುಖ್ಯವಾಗುವುದರಿಂದಲೇ ಅದು ಆರಾಧನೆಗೆ ಯೋಗ್ಯವಾಗಿದೆ.”ಎಂದರು. ನಾಗಾರಾಧನೆಯ ನಂಬಿಕೆ ಬೆಳೆದು ಬಂದ ಹಿನ್ನೆಲೆಯನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಿದ ಅವರು ನಂತರ ಸಂವಾದದಲ್ಲಿ ಪಾಲ್ಗೊಂಡು ಸದಸ್ಯರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳನ್ನೂ ನೀಡಿದರು. ತುಳುಕೂಟದ ಅಧ್ಯಕ್ಷರಾದ ಶ್ರೀ ಧನಕೀರ್ತಿ ಬಲಿಪ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಥಾಪಕಾಧ್ಯಕ್ಷರಾದ ಚಂದ್ರಹಾಸ ದೇವಾಡಿಗರು ಸ್ವಾಗತಿಸಿ, ಕಾರ್ಯದರ್ಶಿಗಳಾದ ವೇಣುಗೋಪಾಲ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಆಯೋಜಿಸಿದ ‘ಅರ್ಥಾಂಕುರ-6’ ಹೊಸ ತಲೆಮಾರಿನ ಅರ್ಥಧಾರಿಗಳ ಪರಿಶೋಧ ಹಾಗೂ ಗ್ರಾಮೀಣ ಕಲಾ ಪ್ರತಿಭೆ ಸಂಜೀವ ಕದ್ರಿಕಟ್ಟು ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 07-01-2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಮರಣಾ ನುಡಿಗಳನ್ನಾಡಿದ ಹೆರಿಯ ಮಾಸ್ಟರ್ “ಉರಿಯುವ ದೀಪದಂತೆ ಸಮಾಜಕ್ಕೆ ಕಲೆಯ ಬೆಳಕಾಗಿ ಬೆಳೆದವರು ಸಂಜೀವ ಕದ್ರಿಕಟ್ಟು. ಎಷ್ಟೋ ಜನ ಕಲಾವಿದರನ್ನು ಬಾಲ್ಯದಿಂದಲೇ ಹುಟ್ಟು ಹಾಕಿದವರು. ರಂಗಭೂಮಿಯ ಪ್ರೇರಣೆಯಿಂದಲೇ ಸ್ತಬ್ಧ ಚಿತ್ರ ರಚನೆಯಿಂದ ಹಲವಾರು ಪಾತ್ರಗಳಾಗಿ ಸಂಘ ಸಂಸ್ಥೆಗಳಲ್ಲಿ ಕಾಣಿಸಿಕೊಳ್ಳುತ್ತ ಕಲಾಭಿರುಚಿಯನ್ನು ಸಮಾಜಕ್ಕೆ ಪಸರಿಸಿದವರು ಸಂಜೀವಣ್ಣ. ಅವರ ಅಗಲುವಿಕೆ ಕುಟುಂಬಕ್ಕಷ್ಟೇ ಮೀಸಲಾಗಿರದೇ ಸಮಾಜಕ್ಕೂ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ” ಎಂದು ಹೇಳಿದರು. “ಕಲಿಯುವ ಉತ್ಸಾಹಿಗಳಿಗೆ ಈ ಅಭ್ಯಾಸ ಕೂಟ ಹೆಚ್ಚು ಉಪಯುಕ್ತವಾಗಿದೆ. ವೇದಿಕೆಯೇನೋ ಯಶಸ್ವೀ ಕಲಾವೃಂದ ಸಿದ್ಧಗೊಳಿಸಿದೆ. ತಾಳಮದ್ದಳೆಗೆ ಅರ್ಥ ಹೇಳುವ ಮನಸ್ಸುಳ್ಳವರು ಈ ವೇದಿಕೆಯನ್ನು ಉಪಯೋಗಿಸಿಕೊಳ್ಳಬೇಕು. ಉಡುಪಿಯಿಂದೀಚೆ ವಿರಳವಾದ ಅಭ್ಯಾಸಕೂಟ ತೆಕ್ಕಟ್ಟೆಯಲ್ಲಿ ಸಾಹಸದಿಂದ ಮೈದೋರಿದೆ. ಇಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಲಾವಿದರುಗಳು ಪ್ರಬುದ್ಧ ಕಲಾವಿದರಾಗಿ ರೂಪುಗೊಳ್ಳಲಿ” ಎಂದು ಯುವ…
ಮಂಗಳೂರು : ಸುರತ್ಕಲ್ಲಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ ಗೋವಿಂದ ದಾಸ ಕಾಲೇಜು ವತಿಯಿಂದ ‘ನೀನಾಸಂ ತಿರುಗಾಟ ನಾಟಕೋತ್ಸವ 2024’ ಕಾರ್ಯಕ್ರಮವು ದಿನಾಂಕ 14-01-2024 ಮತ್ತು 15-01-2024ರಂದು ಸಂಜೆ ಗಂಟೆ 6.50ಕ್ಕೆ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ನಡೆಯಲಿದೆ. ಈ ನಾಟಕೋತ್ಸವವನ್ನು ಪ್ರೊ. ಯಚ್.ಜಿ.ಕೆ. ರಾವ್ ದತ್ತಿನಿಧಿ, ಸುರತ್ಕಲ್ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘ, ಬಿ.ಎ.ಎಸ್.ಎಫ್. ಬಾಳ, ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, 1982ರ ವಿಜ್ಞಾನ ತಂಡದ ದತ್ತಿನಿಧಿ, ಶಿಕ್ಷಕ ರಕ್ಷಕ ಸಂಘ, ಅಲ್ಯುಮ್ನಿ ಅಸೋಸಿಯೇಶನ್ ಇವುಗಳ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 14-01-2024ರಂದು ಡಾ. ಚಂದ್ರಶೇಖರ ಕಂಬಾರ ರಚಿಸಿದ, ಕೆ.ಜಿ. ಕೃಷ್ಣಮೂರ್ತಿಯವರ ನಿರ್ದೇಶನದ ‘ಹುಲಿಯ ನೆರಳು’ ಮತ್ತು ದಿನಾಂಕ 15-01-2024ರಂದು ಲೂಯಿ ನ ಕೋಶಿ ಅವರ ರಚನೆಯ ಶ್ವೇತಾರಾಣಿ ಎಚ್.ಕೆ. ಇವರ ನಿರ್ದೇಶನದ ‘ಆ ಲಯ ಈ ಲಯ’ ನಾಟಕ ಪ್ರದರ್ಶನಗೊಳ್ಳಲಿದೆ. ‘ಹುಲಿಯ ನೆರಳು’ ಹುಲಿ ಬೇಟೆಯೊಂದರ ಹೆಳೆಯಲ್ಲಿ ಪ್ರಾರಂಭವಾಗುವ ಈ ನಾಟಕ ಕಣ್ಣಿಗೆ…
ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರ ಇದರ ವತಿಯಿಂದ ‘ಕನಕ ಕೀರ್ತನ ಗಂಗೋತ್ರಿ’ ಕಾರ್ಯಕ್ರಮವು ದಿನಾಂಕ 31-01-2024ರಂದು ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಕೀರ್ತನ ಗಾಯನವು ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ, ಅಧ್ಯಾಪಕ, ಅಧ್ಯಾಪಕೇತರ ಹಾಗೂ ಸಾರ್ವಜನಿಕ ಹೀಗೆ 7 ವಿಭಾಗಗಳಲ್ಲಿ ನಡೆಯಲಿದೆ. ಆಸಕ್ತರು ದಿನಾಂಕ 30-01-2024ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರತಿ ವಿಭಾಗದಲ್ಲಿ ಆಯ್ಕೆಯಾದ ಮೂವರು ಅಭ್ಯರ್ಥಿಗಳಿಗೆ ಮತ್ತು ಮೂರು ತಂಡಗಳಿಗೆ ತಲಾ ರೂಪಾಯಿ ಎರಡು ಸಾವಿರ ನಗದು ಬಹುಮಾನ ಇರಲಿದೆ. ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಡೆಯುವ ‘ಕನಕ ಸ್ಮೃತಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ [email protected] ಅಥವಾ ವಾಟ್ಸ್ಆ್ಯಪ್ – 8310300875 / 9632346126 ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಧನಂಜಯ ಕುಂಬ್ಳೆ ತಿಳಿಸಿದ್ದಾರೆ.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಹತ್ವದ ಪ್ರಶಸ್ತಿಗಳಲ್ಲೊಂದಾದ ಡಾ. ಎಚ್. ವಿಶ್ವನಾಥ್ ಮತ್ತು ಇಂದಿರಾ ದತ್ತಿ ಪ್ರಶಸ್ತಿಗಾಗಿ ಅರ್ಹ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ದತ್ತಿ ಪ್ರಶಸ್ತಿಯು ವಿಶೇಷ ದೃಷ್ಟಿಚೇತನರಿಗೆ ಮೀಸಲಾಗಿದ್ದು, ಕರ್ನಾಟಕದಲ್ಲಿ ಹೀಗೆ ಸ್ಥಾಪಿತವಾದ ಮೊದಲ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿಗಳ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ವಿಶೇಷ ದೃಷ್ಟಿಚೇತನರು ಯಾವುದೇ ಪ್ರಕಾರದಲ್ಲಿ ಬರೆದ ಕೃತಿಗಳನ್ನು ಪ್ರಶಸ್ತಿಗಾಗಿ ಸಲ್ಲಿಸಬಹುದು. ಕೃತಿಯು ನಿರ್ದಿಷ್ಟ ವರ್ಷದಲ್ಲಿಯೇ ಪ್ರಕಟವಾಗಿರಬೇಕು ಎನ್ನುವ ನಿಯಮವಿಲ್ಲ. ತಾವು ರಚಿಸಿದ ಅರ್ಹವಾದ ಕನಿಷ್ಟ ಒಂದು ಕೃತಿಯೊಂದಿಗೆ ತಮ್ಮ ಸ್ವವಿವರವನ್ನು ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-560 018 ಇಲ್ಲಿಗೆ ದಿನಾಂಕ 31-01-2024ರ ಒಳಗೆ ತಲುಪುವಂತೆ ಕಳುಹಿಸಿಕೊಡಬೇಕು.
ಉಡುಪಿ : ನಾಡಿನ ಹಿರಿಯ ಕವಿ ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ 1978ರಲ್ಲಿ ಸ್ಥಾಪಿತವಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಈ ವರ್ಷ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನಗಳನ್ನು ಕಳುಹಿಸಲು ಕೊನೆಯ ದಿನಾಂಕ 15-03-2024. ಕಳುಹಿಸಬೇಕಾದ ವಿಳಾಸ – ಆಡಳಿತಾಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ 576102. ಕಾವ್ಯ ಪ್ರಕಟಣೆಗೆ ನೆರವು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ 10,000/- ರೂಪಾಯಿಗಳ ಒಂದು ವಾರ್ಷಿಕ ಬಹುಮಾನವನ್ನು ನೀಡಲಾಗುತ್ತದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ, 50ಕ್ಕಿಂತ ಹೆಚ್ಚಿಲ್ಲದ ಕನ್ನಡ ಕವಿತೆಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು. ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಬ್ಲಾಗ್ https://govindapairesearch.blogspot.com ಅಥವಾ ದೂರವಾಣಿ ಸಂಖ್ಯೆ – 9448868868, 9480575783. ಕಛೇರಿ: 0820 -2521159 ಸಂಪರ್ಕಿಸಬಹುದು. ಬಹುಮಾನದ ಉಳಿದ ನಿಯಮಗಳು…
ಮಂಗಳೂರು : ಬಿ.ಜಿ.ಎಂ.ಆರ್ಟ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಕಲಾಗುರು ದಿ. ಬಿ.ಜಿ. ಮಹಮ್ಮದ್‌ರವರ 103ನೇ ಜನ್ಮ ದಿನದ ಸಂಭ್ರಮಾಚರಣೆಯ ಪ್ರಯುಕ್ತ ದಿನಾಂಕ 14-01-2024ರ ರವಿವಾರದಂದು ಬೆಳಿಗ್ಗೆ 9.30ಕ್ಕೆ ಮಂಗಳೂರಿನ ಮಿನಿ ಟೌನ್ ಹಾಲ್ ನಲ್ಲಿ ‘ಬಿ.ಜಿ.ಎಂ. ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ನಡೆಯಲಿದೆ. ಇದೇ ಸಮಾರಂಭದಲ್ಲಿ ಚಿತ್ರಕಲಾ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಮಾನ್ಯ ಶ್ರೀ ಸುಧೀರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಂಗಳೂರಿನ ಆರ್ಟಿಸ್ಟ್ಸ್ ಕಂಬೈನ್ (ರಿ.) ಇದರ ಅಧ್ಯಕ್ಷರಾದ ಲ. ಟ್ರೆವರ್ ಪಿಂಟೋ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ ಹಾಗೂ ಗಲ್ಸ್ ಬಿಸಿನೆಸ್ ಮೆಶಿನ್ಸ್ (ಐ.ಬಿ.ಎಮ್.)ಇದರ ನಿವೃತ್ತ ಹಣಕಾಸು ಪ್ರಬಂಧಕರಾದ ಸಿಎ. ಜೋಸೆಫ್ ರೋಡ್ರಿಗಸ್ ಇವರು ಹೆಸರಾಂತ ಹಿರಿಯ ಚಿತ್ರಕಲಾವಿದರು, ಕಲಾ ಸಂಘಟಕರು ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಶ್ರೀ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ 2023-24ನೇ ಸಾಲಿನ ತಿಂಗಳ ಸರಣಿ ತಾಳಮದ್ದಳೆ ಕೂಟವು ದಿನಾಂಕ 01-01-2024ನೇ ಸೋಮವಾರದಂದು ಪಾರ್ತಿಸುಬ್ಬ ವಿರಚಿತ ‘ಖರಾಸುರ ವಧೆ – ರಾವಣನಿಗೆ ಶೂರ್ಪನಖಿ ದೂರು’ ಎಂಬ ಆಖ್ಯಾನದೊಂದಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷೀನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು, ನಿತೀಶ್ ಕುಮಾರ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪ್ರೊ. ದಂಬೆ ಈಶ್ವರ ಶಾಸ್ತ್ರೀ ಮತ್ತು ಮಾ. ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಜಯರಾಮ ಭಟ್ ದೇವಸ್ಯ (ಶ್ರೀ ರಾಮ), ಭಾಸ್ಕರ ಬಾರ್ಯ ಮತ್ತು ಶ್ರೀಧರ್ ರಾವ್ ಕುಂಬ್ಳೆ (ಶೂರ್ಪನಖಿ), ಗುಡ್ಡಪ್ಪ ಬಲ್ಯ (ರಾವಣ), ದುಗ್ಗಪ್ಪ ನಡುಗಲ್ಲು (ದೂಷಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಖರಾಸುರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಗುಡ್ಡಪ್ಪ ಬಲ್ಯ ವಂದಿಸಿದರು.