Author: roovari

ಕಾಸರಗೋಡು : ಪೆರಿಯ ಅಲಕ್ಕೋಡ್ ಗೋಕುಲಂ ಗೋ ಶಾಲೆಯಲ್ಲಿ ದಿನಾಂಕ 15-07-2023ರಂದು ನಡೆದ ಮಲ್ಲಾಡಿ ಸಹೋದರರ ಸಂಗೀತ ಕಛೇರಿಯು ಅಕ್ಷರಶಃ ಅಪೂರ್ವ ರಾಗಗಳ ಅಮೃತವರ್ಷಿಣಿಯಂತಿದ್ದು ಗಮನ ಸೆಳೆಯಿತು. ಗೋವುಗಳಿಗಾಗಿ ನಡೆಸಿಕೊಂಡು ಬರುವ ಪ್ರತೀ ತಿಂಗಳ ಸಂಗೀತ ಕಛೇರಿಯಲ್ಲಿ ಮೂರೂವರೆ ಗಂಟೆಗಳ ಕಾಲ ಗೋವುಗಳು ಮೌನವಾಗಿ ಆಲಿಸಿ, ತಲೆ ಅಲ್ಲಾಡಿಸಿ, ನರ್ತನ ಮಾಡಿಯೂ ಸಂಗೀತ ಆಸ್ವಾದನೆ ಮಾಡಿದ್ದನ್ನು ಕಂಡು ಶ್ರೇಷ್ಠ ಗಾಯಕ ಸಹೋದರರಿಗೂ ಹಾಗೂ ಇತರ ಶೋತೃಗಳಿಗೂ ಸಂಭ್ರಮ ಉಂಟಾಗಿ ರೋಮಾಂಚನವಾಯಿತು. ಇದು ಸಾಮಾನ್ಯ ಸಂಗೀತ ಕಛೇರಿಯಲ್ಲ, ಪ್ರಕೃತಿಗೆ ಸಮರ್ಪಣೆ ಆಗಿದೆ. ಮತ್ತೊಮ್ಮೆ ದೀಪಾವಳಿ ಸಂಗೀತೋತ್ಸವಕ್ಕೆ ಬರುತ್ತೇವೆ ಎಂದು ಮಲ್ಲಾಡಿ ಸಹೋದರರು ಹೇಳಿದರು. ಮಲ್ಲಾಡಿ ಸಹೋದರರು ಹಂಸಧ್ವನಿ ರಾಗದಲ್ಲಿ ವರ್ಣದಿಂದ ಪ್ರಾರಂಭಿಸಿ ಅತೀ ಅಪೂರ್ವವಾದ ಸುಪ್ರದೀಪರಾಗದ ಏಕೈಕ ಕೃತಿಯಾದ ತ್ಯಾಗರಾಜ ಸ್ವಾಮಿಗಳ ‘ವರಶಿಕಿವಾಹನ’ ಮತ್ತು ಧೇನುಕರಾಗದಲ್ಲಿ ‘ಕಾಮಧೇನುಕಾಂ ಆಶ್ರಯೇ’ ಮೊದಲ್ಗೊಂಡು ನಂತರ ಗಾನಮೂರ್ತಿ-ಮೋಹನ ರಾಗವೂ ಬಳಿಕ ರೇವತಿ ರಾಗದ ‘ಜಯತಿ ಜಯತಿ ಗೋಮಾತೆ’, ಸೌರಾಷ್ಟ್ರ ರಾಗದಲ್ಲಿ ‘ಶಿವ ಶಿವ ಭವ ಶರಣಂ’ ಆಲಾಪಿಸಿ…

Read More

ಮೂಡುಬಿದಿರೆ : ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ದಿನಾಂಕ 19-07-2023 ಬುಧವಾರ ನಡೆದ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಾಂತಾರದ ಕಮಲಕ್ಕ ಖ್ಯಾತಿಯ ವಿದುಷಿ ಮಾನಸಿ ಸುಧೀರ್ ಉದ್ಘಾಟಿಸಿ ಮಾತನಾಡಿ, “ಎಲ್ಲಾ ಕಲಾವಿದರ ಆರಾಧ್ಯ ದೈವ ಶಿವ. ಸತತ ಪ್ರಯತ್ನದಿಂದ ಕೌಶಲ್ಯ ಬರುತ್ತದೆ. ಕಲೆ ಕೌಶಲ್ಯವನ್ನು ಮೀರಿದ್ದು ಕಲಾ ಆರಾಧಕರಾಗಿ ಕಲೆಯನ್ನು ಪ್ರೀತಿಸಿದಾಗ ಮಾನಸಿಕ ನೆಮ್ಮದಿಯ ಜೊತೆಗೆ ಸಾಧಕರಾಗಲು ಸಾಧ್ಯವಾಗುತ್ತದೆ. ಎಕ್ಸಲೆಂಟ್ ವಿದ್ಯಾಸಂಸ್ಥೆ ಧನಾತ್ಮಕ ಚಿಂತನೆ ಹೊಂದಿದೆ. ಈ ಚಿಂತನೆಯಡಿಯಲ್ಲಿ ಪ್ರತಿಭಾವಂತ ಗುರುಗಳನ್ನು ಹೊಂದಿರುವುದು ಹೆಗ್ಗಳಿಕೆ. ಅವರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಬೇಕು. ತಂತ್ರಜ್ಞಾನಕ್ಕೂ ಮೀರಿದ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು” ಎಂದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್‌ ಮಾತನಾಡಿ, “ಕಲಾ ಚಟುವಟಿಕೆಗಳನ್ನು ಪ್ರೀತಿಯಿಂದ ಆಸ್ವಾದಿಸಿ ವಿದ್ಯಾರ್ಥಿಗಳನ್ನು ಕಲೆಯಲ್ಲಿ ಮಾಸ್ ಮಾಡುವುದು ನಮ್ಮ ಕನಸಾಗಿದೆ” ಎಂದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್‌ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕಲೆ ಮನುಷ್ಯನನ್ನ ಸಂತೋಷವಾಗಿಡುತ್ತದೆ. ಪ್ರತಿದಿನ ತಮ್ಮ ಕಲೆಯ ಮೂಲಕ ಸಂತೋಷವನ್ನು ಉಣಬಡಿಸುತ್ತಿರುವ ನಟಿ ಮಾನಸಿ ಸುಧೀರ್ ಇವರಿಗೆ ‘ಅಭಿನಯ…

Read More

ಸುರತ್ಕಲ್: ಮಣಿ ಕೃಷ್ಣಸ್ವಾಮಿ ಅಕಾಡೆಮಿ ಸಂಸ್ಥೆಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳ ಕಾರ್ಯಾಗಾರವು ದಿನಾಂಕ 23-0 7-2023, ಭಾನುವಾರ ಬೆಳಗ್ಗೆ ಗಂಟೆ 9.30 ರಿಂದ ಸಂಜೆ 5.00ರ ವರೆಗೆ ಸುರತ್ಕಲ್ ನ ಅನುಪಲ್ಲವಿಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೇಯ ಕೊಳತ್ತಾಯ ಮತ್ತು ಶರಣ್ಯ ಕೆ ಎನ್ ಭಾಗವಹಿಸುತ್ತಿದ್ದಾರೆ. ಶಿಬಿರಾರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆಸಕ್ತರಿಗೆ ಮುಕ್ತ ಪ್ರವೇಶ. ಹೆಚ್ಚಿನ ವಿವರಗಳಿಗಾಗಿ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿಯಾದ ಪಿ ನಿತ್ಯಾನಂದ ರಾವ್ 9742792669 ಇವರನ್ನು ಸಂಪರ್ಕಿಸಬಹುದು.

Read More

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್‌.ಎಸ್‌. ಕಾಲೇಜಿನಲ್ಲಿ ಎರಡು ದಿನಗಳ ತರಗತಿವಾರು ಸಾಂಸ್ಕೃತಿಕ ಸ್ಪರ್ಧೆ ‘ಸಾಂಸ್ಕೃತಿಕ ಹಬ್ಬ’ ಕಾರ್ಯಕ್ರಮವು ದಿನಾಂಕ : 10-07-2023 ಮತ್ತು 11-07-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಕಾಲೇಜಿನ ಪೂರ್ವ ವಿದ್ಯಾರ್ಥಿ ಹಾಗೂ ಕಾಮಿಡಿ ಕಿಲಾಡಿಗಳು ಕಲಾವಿದ ದೀಕ್ಷಿತ್ ಗೌಡ ಕುಂತೂರು ಪದವು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಘದ ಸಂಯೋಜಕ ವಿನ್ಯಾಸ್ ಹೊಸೊಳಿಕೆ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ವಿದ್ಯಾ ಕೆ. ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಕಲಾವಿದ ದೀಕ್ಷಿತ್ ಗೌಡ ಕುಂತೂರು ಪದವು ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ತದನಂತರ ದೀಕ್ಷಿತ್ ಗೌಡ ಇವರಿಂದ ಮಿಮಿಕ್ರಿ, ಪೂರ್ವ ವಿದ್ಯಾರ್ಥಿಗಳಾದ ಸ್ವರಾಜ್ ಇವರಿಂದ ಗಾಯನ, ದೇವಿ ದಾಸ್ ಇವರಿಂದ ಕೊಳಲು ವಾದನ, ಹರ್ಷಿತ್ ಇವರಿಂದ ತಬಲಾ ವಾದನ ನಡೆಯಿತು. ಸ್ಪರ್ಧೆಯಲ್ಲಿ ಒಂಬತ್ತು ತರಗತಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು, ದ್ವಿತೀಯ ಬಿಕಾಂ ‘ಎ’ – ಪ್ರಥಮ ಸ್ಥಾನ, ಪ್ರಥಮ ಬಿಎ – ದ್ವಿತೀಯ…

Read More

ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ತೃತೀಯ ವ್ರತಾಚರಣೆ ಅಂಗವಾಗಿ ಶ್ರೀಮಠದಲ್ಲಿ ಶ್ರೀ ಬೊಡ್ಡಜ್ಜ ಯಕ್ಷ ಭಾರತಿ ಮಧೂರು ಕಾಸರಗೋಡು ಇವರಿಂದ ಶ್ರೀಕೃಷ್ಣ ಲೀಲೆ ಕಂಸ ವಧೆ ಎಂಬ ಯಕ್ಷಗಾನ ತಾಳಮದ್ದಳೆ ದಿನಾಂಕ 12/07/2023ರಂದು ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸುರೇಶ್ ಆಚಾರ್ಯ ನೀರ್ಚಾಲು, ಉದಯಶಂಕರ ಭಟ್ ಮಜಲು, ಬಾಲಕೃಷ್ಣ ಆಚಾರ್ಯ ನೀರ್ಚಾಲು, ಪ್ರತಾಪ ಕುಂಬಳೆ, ಪ್ರಸನ್ನ ಕೆದಿಲ್ಲಾಯ ಕಾಞಂಗಾಡು, ಸುಧಾ ನಟರಾಜ ಕಲ್ಲೂರಾಯ ಮಧೂರು ಭಾಗಹಿಸಿದ್ದರು. ರವಿರಾಜ್ ಪನೆಯಾಲ ಸಾಗತಿಸಿ, ವಂದಿಸಿದರು.

Read More

ಮಂಗಳೂರು : ಯಕ್ಷ ರಂಗದ ಪ್ರತಿಭಾವಂತ ಕಲಾವಿದ ದೀಪಕ್ ರಾವ್ ಪೇಜಾವರ ಅವರ ಪರಿಕಲ್ಪನೆ, ನಿರ್ಮಾಣ, ನಿರ್ದೇಶನದಲ್ಲಿ ‘ಹರಿ ದರುಶನ’ ಏಕವ್ಯಕ್ತಿ ನವ ರೂಪಂ ಎಂಬ ಯಕ್ಷಗಾನದ ಟ್ರೈಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ದಿನಾಂಕ : 16-07-2023ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರು ಮಾತನಾಡುತ್ತಾ “ಯಕ್ಷಗಾನ ವಿಮರ್ಶೆ ಅಂದರೆ ಕಲಾಕೃತಿಯನ್ನು ಅರ್ಥ ಮಾಡುವ ಪ್ರಯತ್ನವೇ ಹೊರತು ದೋಷ ಹೇಳುವುದಲ್ಲ ಪ್ರಯೋಗ ರಂಗಭೂಮಿಯಲ್ಲಿ ಅನೇಕ ಸವಾಲುಗಳಿವೆ. ಕಲಾವಿದರು ತಮ್ಮ ವೇಷದಲ್ಲಿ ತನ್ನನ್ನೇ ಮೀರುವ ಪ್ರಯತ್ನ ಮಾಡಲು ಮುಂದಾಗಬೇಕು” ಎಂದು ಹೇಳಿದರು. ಹಿರಿಯ ಯಕ್ಷಗಾನ ಕಲಾವಿದರಾದ ಸೂರಿಕುಮೇರು ಗೋವಿಂದ ಭಟ್, ಅಶೋಕ್ ಭಟ್ ಉಜಿರೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮ೦ಡಳಿ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರ…

Read More

ಮಂಗಳೂರು : ಕೊಟ್ಟಾರದ ಭರತಾಂಜಲಿ ಹಾಗೂ ಶ್ರೀ ಮಹಾಗಣಪತಿ ದೇವಸ್ಥಾನ, ಗಣೇಶಪುರ, ಕಾಟಿಪಳ್ಳ ಇವರ ಆಶ್ರಯದಲ್ಲಿ ದಿನಾಂಕ : 23-07-2023ನೇ ಆದಿತ್ಯವಾರ, ಬೆಳಿಗ್ಗೆ ಗಂಟೆ 10:00ಕ್ಕೆ ‘ಗುರು ಪೂರ್ಣಿಮಾ ಉತ್ಸವ’ ಗುರು ನಮನ, ಮಾತಾಪಿತರ ಚರಣ ಪೂಜನ ಕಾರ್ಯಕ್ರಮವು ಕಾಟಿಪಳ್ಳದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಗಣೇಶಪುರದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಧರ್ಮೇಂದ್ರ ಗಣೇಶಪುರ ವಹಿಸಲಿದ್ದು, ಮ.ನ.ಪಾ. ಸದಸ್ಯರಾದ ಶ್ರೀ ಲೋಕೇಶ್ ಬೊಳ್ಳಾಜೆ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪಾವಂಜೆಯ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಇವರಿಗೆ ಗುರು ನಮನ ನಡೆಯಲಿದ್ದು, ಶಕ್ತಿ ರೆಸಿಡೆನ್ಶಿಯಲ್ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್ ರವಿಶಂಕರ್ ಹೆಗಡೆ ದೊಡ್ನಲ್ಲಿ ಇವರು ಉಪನ್ಯಾಸ ನೀಡಲಿದ್ದಾರೆ. ಭರತಾಂಜಲಿಯ ಮ್ಯಾನೇಜಿಂಗ್ ಟ್ರಸ್ಟಿಗಳು ಸರ್ವರಿಗೂ ಗೌರವದ ಸ್ವಾಗತ ಬಯಸಿದ್ದಾರೆ.

Read More

ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ದಿನಾಂಕ : 19-07-2023ರಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಇವರ ಆಶಯದಂತೆ ಶಿರ್ವದ ಹಿಂದು ಪ್ರೌಢಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆಗೊಂಡಿತು. ನಿವೃತ್ತ ಉಪನ್ಯಾಸಕ, ಕಲಾವಿದ ಪ್ರೊ.ಕೆ.ಜಿ. ಮಂಜುನಾಥ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಸಂತಿ ಸ್ವಾಗತಿಸಿದರು. ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಸದಸ್ಯ ಕೆ. ಅಜಿತ್ ಕುಮಾರ್, ಪ್ರಾಂಶುಪಾಲರಾದ ಭಾಸ್ಕರ ಎ. ಅಭ್ಯಾಗತರಾಗಿ ಶುಭಾಶಂಸನೆಗೈದರು. ಶಿರ್ವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರೊ. ವೈ. ಭಾಸ್ಕರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ಈ ಸಂದರ್ಭದಲ್ಲಿ ಯಕ್ಷಗಾನದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಯಕ್ಷ ಗುರುಗಳಾದ ಸತೀಶ್ ಆಚಾರ್ಯರು ಉಪಸ್ಥಿತರಿದ್ದ ಕಾರ್ಯಕ್ರಮವನ್ನು ಶಿಕ್ಷಕಿ ಸುಪ್ರೀತಾ ಶೆಟ್ಟಿ ನಿರ್ವಹಿಸಿದರು. ಶಿಕ್ಷಕ ಗಣೇಶ ಶೆಟ್ಟಿ ಸಂಯೋಜಿಸಿದ ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕಿ ವೀಣಾ ಧನ್ಯವಾದ ಸಮರ್ಪಿಸಿದರು. ಈ ಯಕ್ಷಗಾನ ತರಬೇತಿಯಲ್ಲಿ…

Read More

ಬಂಟ್ವಾಳ : ಅಮು೦ಜೆಯಲ್ಲಿ ಇತ್ತೀಚಿಗೆ ನಡೆದ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಜ್ಞಾನ ಫಲ್ಗುಣಿ’ ಬಿಡುಗಡೆ ಕಾರ್ಯಕ್ರಮ ಬಿ.ಸಿ.ರೋಡ್ ಕೈಕುಂಜೆಯಲ್ಲಿರುವ ಬಂಟ್ವಾಳ ಕನ್ನಡ ಭವನದಲ್ಲಿ ದಿನಾಂಕ : 15-07-2023ರಂದು ನಡೆಯಿತು. ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್‌ ಕಾರ್ಯಕ್ರಮ ಉದ್ಘಾಟಿಸಿ, “ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲೆಯಲ್ಲಿರುವ ಹಿರಿಯ ಸಾಹಿತಿಗಳಾದ ಪ್ರೊ. ಕೆ.ಟಿ. ಗಟ್ಟಿ, ಡಾ. ವಾಮನ ನಂದಾವರ, ಶ್ರೀ ಸದಾನಂದ ಸುವರ್ಣ ಹಾಗೂ ಶ್ರೀ ಕೇಶವ ಕುಡ್ಲ ಇವರುಗಳ ಮನೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಲಾಯಿತು. ನಿರಂತರ ಕಾರ್ಯಕ್ರಮದ ಮೂಲಕ ಸಾಹಿತ್ಯವನ್ನು ಮನೆ, ಮನೆಗೆ ಪರಿಚಯಿಸುವ ಕಾರ್ಯದಲ್ಲಿ ಕಸಾಪ ನಿರತವಾಗಿದೆ. ಸಮ್ಮೇಳನದ ದಾಖಲೀಕರಣ ಮತ್ತು ಇದನ್ನು ಶಾಶ್ವತವಾಗಿ ನೆನಪಿನಲ್ಲಿಡುವ ನಿಟ್ಟಿನಲ್ಲಿ ಸ್ಮರಣ ಸಂಚಿಕೆಯ ಅಗತ್ಯವಿದೆ. ಬಹುತೇಕ ತಾಲೂಕಿನ ಸಾಹಿತ್ಯ ಸಮ್ಮೇಳನಗಳ ಸ್ಮರಣ ಸಂಚಿಕೆ ಬಿಡುಗಡೆಯಾಗಿದ್ದು, ಶೀಘ್ರವೇ ಜಿಲ್ಲಾ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ” ಎಂದರು. ಪೊಳಲಿ ಶ್ರೀ…

Read More

ಚನ್ನರಾಯಪಟ್ಟಣ: ಪ್ರತಿಮಾ ಟ್ರಸ್ಟ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯದಲ್ಲಿ ಒಂದು ತಿಂಗಳ ಸೋಬಾನೆ ಪದಗಳ ಕಲಿಕಾ ತರಬೇತಿ ದಿನಾಂಕ 16-07-2023 ರಂದು ಪ್ರಾರಂಭಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನೀನಾಸಂ ರಂಗ ನಿರ್ದೇಶಕ ಶಿವಶಂಕ‌ರ್ “ಜಾನಪದ ಪ್ರಕಾರಗಳಲ್ಲಿ ಒಂದಾದ ಸೋಬಾನೆ ಪದಗಳ ಬಗ್ಗೆ ಇತ್ತೀಚಿನ ಮಕ್ಕಳಿಗೆ ಪರಿಚಯವೇ ಇಲ್ಲದಿರುವುದು ವಿಪರ್ಯಾಸ. ಈ ಸಂದರ್ಭದಲ್ಲಿ ಪ್ರತಿಮಾ ಟ್ರಸ್ಟ್ ಸೋಬಾನೆ ಪದಗಳನ್ನು ಪರಿಚಯಾತ್ಮಕ ದೃಷ್ಟಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಒಂದು ತಿಂಗಳ ತರಬೇತಿ ಶಿಬಿರವನ್ನು ಆಯೋಜಿಸಿರುವುದು ಅಭಿನಂದನೀಯ” ಎಂದರು. ಉಮೇಶ್ ತೆಂಕನಹಳ್ಳಿ ಮಾತನಾಡಿ “ಪ್ರತಿಮಾ ಟ್ರಸ್ ಜಾನಪದ ಸೊಗಡಿನ ಬಹಳಷ್ಟು ತರಬೇತಿ ಶಿಬಿರ ಆಯೋಜನೆ ಮಾಡುತ್ತಿದ್ದು, ಈ ಬಾರಿ ಸೋಬಾನೆ ಪದಗಳನ್ನು ತರಬೇತಿಗೊಳಿಸುವುದು ಶಿಬಿದ ವಿಶೇಷತೆ. ಬಹಳ ದಿನಗಳಿಂದ ಈ ಸೋಬಾನೆ ಪದಗಳ ತರಬೇತಿ ಶಿಬಿರ ಆಯೋಜನೆ ಮಾಡಬೇಕು ಎಂದು ಅಂದುಕೊಂಡಿದ್ದರೂ ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಅದರಲ್ಲೂ ನಮ್ಮ ಹಳ್ಳಿ…

Read More