Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ವಿದ್ಯಾಪ್ರಕಾಶನ ಮಂಗಳೂರು ವತಿಯಿಂದ ಸಾಹಿತಿ ರಘು ಇಡ್ಕಿದು ಅವರ 29ನೇ ಕೃತಿ ‘ಎಲ್ಲವೂ ಬದಲಾಗುತ್ತದೆ’ ಬಿಡುಗಡೆ ಸಮಾರಂಭ ನಗರದ ಪತ್ರಿಕಾಭವನದಲ್ಲಿ ದಿನಾಂಕ 21-12-2023ರಂದು ನಡೆಯಿತು. ‘ಎಲ್ಲವೂ ಬದಲಾಗುತ್ತದೆ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, “ಪರಿವರ್ತನೆ ಜಗದ ನಿಯಮ ಎಂಬಂತೆ ಕಾವ್ಯ ಹಾಗೂ ಸಾಹಿತ್ಯವೂ ಕಾಲಕಾಲಕ್ಕೆ ಮಾರ್ಪಾಡನ್ನು ಹೊಂದಿ, ಪ್ರಸ್ತುತ ವಿಶೇಷ ಪ್ರಕಾರಗಳನ್ನು ಹೊಂದುತ್ತಿದೆ. ಅದೇ ರೀತಿ ಎಲ್ಲವೂ ಬದಲಾಗುತ್ತದೆ ಎನ್ನುವ ಕವನ ಸಂಕಲನ ಶ್ರೇಷ್ಠ ಮತ್ತು ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ” ಎಂದರು. ಮುಖ್ಯ ಅತಿಥಿಯಾಗಿದ್ದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ, “ರಘು ಇಡ್ಕಿದು ಅವರು ಉಪನ್ಯಾಸಕರಾಗಿ, ಅಂಕಣಕಾರರಾಗಿ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡು ಬರೆಯುವವರು ಮತ್ತು ಪ್ರಯೋಗಶೀಲರು ಆಗಿದ್ದಾರೆ. ಕನ್ನಡ ಮತ್ತು ತುಳು ಸಾಹಿತ್ಯ ಲೋಕಕ್ಕೆ ರಘು ಅವರು ನೀಡಿದ ಕೊಡುಗೆ ಮೆಚ್ಚುವಂತಹುದು” ಎಂದರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ…
ಕಾಸರಗೋಡು : ಕಾಸರಗೋಡು ಜಿಲ್ಲೆಯ ಪುರಾಣ ಪ್ರಸಿದ್ಧ ದೇವಸ್ಥಾನವಾದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಸನ್ನಿಧಿಯಲ್ಲಿ ದಿನಾಂಕ 18-12-2023ರ ಸೋಮವಾರದಂದು ಷಷ್ಠಿ ಮಹೋತ್ಸವವು ಅತ್ಯಂತ ಭಕ್ತಿ ಶ್ರದ್ಧೆಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರುಗಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಭಗವದ್ಭಕ್ತರು ಭಾಗವಹಿಸಿ ಶ್ರೀ ದೇವರ ಸೇವೆಗೈದು ಅನ್ನ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಈ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 12.00 ಘಂಟೆಯ ತನಕ ದೇವಸ್ಥಾನದ ಮಯೂರ ಮಂಟಪದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ದೇವಸ್ಥಾನದ ಆಡಳಿತ ವರ್ಗದವರಾದ ಶ್ರೀ ಶ್ರೀಧರ ಮಾಸ್ಟರ್ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸುವುದರ ಮೂಲಕ ಆರಂಭಗೊಂಡು ಬಹಳ ವಿಜೃಂಭಣೆಯಿಂದ ನಡೆದು ನೆರೆದಿರುವ ಸಾವಿರಾರು ಪ್ರೇಕ್ಷಕರ ಮನ ಸೂರೆಗೊಂಡಿತು. ಡಾ. ವಾಣಿಶ್ರೀ…
ಮೂಡುಬಿದಿರೆ : ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ‘ವಿಶೇಷ ಪ್ರೇರಣಾ ಕಾರ್ಯಾಗಾರ’ ನಡೆಯುತ್ತಿದ್ದು, ಡಾ. ಸುರೇಶ ನೆಗಳಗುಳಿಯವರು ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ನಡುಹಗಲ ಕಾರ್ಯಾಗಾರವನ್ನು ದಿನಾಂಕ 22-12-2023ರಂದು ನಡೆಸಿಕೊಟ್ಟರು. “ಸ್ನಾತಕೋತ್ತರ ಪದವಿ ಪಡೆಯಬೇಕಾದರೆ ಕೇವಲ ಪ್ರವೇಶ ಗಿಟ್ಟಿಸಿದರೆ ಸಾಲದು. ಪ್ರತ್ಯುತ್ಪನ್ನ ಮತಿ ಸಹಿತವಾದ ಸಾಧನೆ ಅಗತ್ಯ. ಗ್ರಂಥೋಕ್ತ ವಿಚಾರಗಳನ್ನು ದಾಖಲೀಕರಣ ಮಾಡಲು ಸರಿಯಾದ ಅನುಸಂಧಾನದ ಅಗತ್ಯವಿದೆ. ಆದ ಕಾರಣ ಯೋಗ್ಯ ಉಪನಿದೇಶಕನ ಜೊತೆಗೆ ಪೂರ್ಣ ಪ್ರಮಾಣದ ಕ್ರಮಬದ್ಧವಾದ ಅನುಸಂಧಾನ ಪ್ರಕ್ರಿಯೆ ಅಗತ್ಯ. ತೌಲನಾತ್ಮಕ ಅಧ್ಯಯನ, ವೈಜ್ಞಾನಿಕ ಸಲಕರಣೆಗಳಾದ ಸಿ.ಟಿ.ಸ್ಕಾನ್, ಕ್ಷ-ಕಿರಣ, ಲ್ಯಾಬೊರೇಟರಿ ಇತ್ಯಾದಿಗಳನ್ನು ಬಳಸಿ ಸತ್ಯಾನ್ವೇಷಣೆ ಮಾಡಬೇಕು. ಎಷ್ಟೋ ಉತ್ತಮ ಅಂಶಗಳು ಅಧ್ಯಯನದ ಕೊರತೆಯಿಂದ ಮಾಸಿ ಹೋಗಿವೆ. ಅಂಥವುಗಳ ಪುನರುಜ್ಜೀವನಕ್ಕೆ ಈ ರೀತಿಯ ಅಧ್ಯಯನ ಅಗತ್ಯ ಎನ್ನುತ್ತಾ ಹಲವಾರು ಪೂರಕ ಉದಾಹರಣೆಗಳನ್ನೂ ಸ್ವರಚಿತ ಮುಕ್ತಕ ಮಾಲೆಯನ್ನೂ ವಾಚಿಸಿದರು. ಕಾಲೇಜು ಪ್ರಾಚಾರ್ಯ ಡಾ. ಸಜೀತ್ ಎಂ. ಹಾಗೂ ಸ್ನಾತಕೋತ್ತರ ಡೀನ್ ಡಾ. ರವಿರಾಜ ಹೆಗ್ಡೆ ಸಹಿತ ಎಪ್ಪತ್ತು ಮಂದಿ…
ಮಂಗಳೂರು : ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಮಂಗಳೂರು ವಿ.ವಿ. ಮತ್ತು ಕೆನರಾ ಕಾಲೇಜು ಜಂಟಿಯಾಗಿ ಆಯೋಜಿಸಿದ ಅಂತರ ಕಾಲೇಜು ಜಾನಪದ ಬುಡಕಟ್ಟು ಮತ್ತು ಶಾಸ್ತ್ರೀಯ ಏಕವ್ಯಕ್ತಿ ನೃತ್ಯ ಸ್ಪರ್ಧಾವಳಿ ‘ನಾಟ್ಯ ಸಂಭ್ರಮ -2023’ವು ಕೆನರಾ ಕಾಲೇಜಿನಲ್ಲಿ ದಿನಾಂಕ 18-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀದೇವಿ ನೃತ್ಯ ಕೇಂದ್ರದ ನಿರ್ದೇಶಕಿ ಡಾ. ಆರತಿ ಹೆಚ್. ಶೆಟ್ಟಿ ಮಾತನಾಡಿ “ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ವ್ಯಕ್ತಿತ್ವ ವಿಕಸನಕ್ಕೆ ಪೂರಕ. ಅದಕ್ಕೆ ಹೆತ್ತವರ ಪ್ರೋತ್ಸಾಹ ಬಹಳ ಮುಖ್ಯ. ನಮ್ಮ ಶಾಲಾ-ಕಾಲೇಜು ದಿನಗಳಲ್ಲಿ ಇಂತಹ ಚಟುವಟಿಕೆಗಳು ಇರಲಿಲ್ಲ” ಎಂದು ಹೇಳಿದರು. ಯಾವುದೇ ತಂತ್ರಜ್ಞಾನವಿಲ್ಲದ ಆ ದಿನಗಳಲ್ಲಿ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವುದನ್ನು ನೆನಪಿಸಿಕೊಂಡರು. ವಿದ್ಯಾರ್ಥಿ ಕ್ಷೇಮ ಪಾಲನ ನಿರ್ದೇಶನಾಲಯ ಮಂಗಳೂರು ವಿ.ವಿ. ಇದರ ನಿರ್ದೇಶಕರಾದ ಡಾ. ಗಣೇಶ್ ಸಂಜೀವ್ ಮುಖ್ಯ ಅತಿಥಿಯಾಗಿದ್ದು “ಕಾಲೇಜುಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಅವಕಾಶ ಕಲ್ಪಿಸಿ ಕೊಡಬೇಕಾಗುತ್ತದೆ. ಸ್ಪರ್ಧೆಯಲ್ಲಿ…
ಮೂಡುಬಿದಿರೆ : ಸಂಗೀತ ಲೋಕದ ದಿಗ್ಗಜರಾದ ವಯೋಲಿನ್ ವಾದಕ ಮೈಸೂರು ಮಂಜುನಾಥ, ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಹಾಗೂ ಖ್ಯಾತ ಚಲನಚಿತ್ರ ಹಿನ್ನೆಲೆಗಾಯಕ ವಿಜಯ ಪ್ರಕಾಶ್ ಇವರಿಗೆ ದಿನಾಂಕ 17-12-2023 ರಂದು ‘ಆಳ್ವಾಸ್ ವಿರಾಸತ್-2023’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದ ವಿಶಾಲ ವೈಭವದ ವೇದಿಕೆಯಲ್ಲಿ ಆಸೀನರಾದ ಮೂವರು ಸಾಧಕರಿಗೆ ಅವರದ್ದೇ ರಾಗ ಸಂಯೋಜನೆಯ ವಯೋಲಿನ್, ಬಾನ್ಸುರಿ ಹಾಗೂ ಸಂಗೀತದ (ಜೈ ಹೋ) ಮೂಲಕ ಅಭಿಮಾನದ ಪ್ರೀತಿಯನ್ನು ಧಾರೆ ಎರೆಯಲಾಯಿತು. ಶಾಲು, ಹೂಹಾರ, ಸ್ಮರಣಿಕೆ, ಪ್ರಶಸ್ತಿ ಪತ್ರದ ಜೊತೆಗೆ ಒಂದು ಲಕ್ಷ ರೂಪಾಯಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪನ್ನೀರು, ತಿಲಕ, ಪುಷ್ಪಾರ್ಚನೆ ಹಾಗೂ ಆರತಿ ಮೂಲಕ ಗೌರವಿಸಲಾಯಿತು. ಆಳ್ವಾಸ್ ಸಾಂಸ್ಕೃತಿಕ ತಂಡವು ‘ಸ್ವರಗಾನದ ಆರತಿ’ ಗಾನಸುಧೆ ಹರಿಸಿತು. ಪ್ರಶಸ್ತಿಗೆ ಪ್ರತಿಕ್ರಿಯಿಸಿ ವಿನಮ್ರತೆಯಿಂದ ಮಾತನಾಡಿದ ಮೈಸೂರು ಮಂಜುನಾಥ, “ನನ್ನ ಲೋಕದ ಸಮಸ್ತ ಸಂಭ್ರಮ ಮೂಡುಬಿದಿರೆಗೆ ಆಳ್ವರು ತಂದಿದ್ದಾರೆ. ದೇವೇಂದ್ರ…
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆಯ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂಟಪದಲ್ಲಿ ದಿನಾಂಕ 16-12-2023ರಂದು ನಡೆಯುತ್ತಿರುವ ಆಳ್ವಾಸ್ ವಿರಾಸತ್‌ನ ಮೂರನೇ ದಿನ ‘ಭಾವ ಲಹರಿ’ ಕಾರ್ಯಕ್ರಮವನ್ನು ಪ್ರಸಿದ್ಧ ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಪ್ರಸ್ತುತಪಡಿಸಿದರು. ಶ್ರೇಯಾ ಜತೆಗೆ ಕಿಂಜಲ್ ಚಟರ್ಜಿ ಸಹ ಗಾಯಕರಾಗಿದ್ದರು. ಆಳ್ವಾಸ್ ವಿದ್ಯಾರ್ಥಿಗಳು ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಸಾಹಸ ನೃತ್ಯಗಳ ಮೂಲಕ ಮೆರುಗು ನೀಡಿದರು. ‘ಇಂಥ ಪ್ರೇಕ್ಷಕರನ್ನು, ಇಂಥ ಸೊಬಗಿನ, ಸಂಭ್ರಮೋಲ್ಲಾಸದ ಉತ್ಸವವನ್ನು ನಾನೆಂದೂ ಕಂಡಿಲ್ಲ. ಎಂಥ ಪ್ರೀತಿ, ಗೌರವದ ಸ್ವಾಗತ, ವೇದಿಕೆ, ಸಂಗೀತವನ್ನು ಆಸ್ವಾದಿಸುವವರ ದಂಡು ದೂರ ದಿಗಂತದವರೆಗೂ ಹಬ್ಬಿದೆಯೇನೋ ಎಂಬ ಭಾವನೆ ಹುಟ್ಟಿಸುವ ಸಭೆ, ತನ್ಮಯರಾಗಿ ಸಂಗೀತದೊಂದಿಗೆ ಮನಸ್ಸನ್ನು ಬೆಸೆದುಕೊಂಡಂತಿರುವ ನಿಮ್ಮನ್ನೆಲ್ಲ ಕಂಡಾಗ ನಾನೊಬ್ಬ ಭಾರತೀಯಳೆನ್ನಲು ಹೆಮ್ಮೆ ಪಡುತ್ತೇನೆ’ ಎಂದು ಉದ್ಗರಿಸಿದ ಶ್ರೇಯಾ ಘೋಷಾಲ್ “ಈ ಊರಲ್ಲಿ ಇಷ್ಟೊಂದು ಅಗಾಧ ಸಂಖ್ಯೆಯಲ್ಲಿ ಸಂಗೀತಾಸಕ್ತರು ಸೇರುತ್ತಾರೆಂದು ನಿರೀಕ್ಷಿಸಿರಲಿಲ್ಲ. ಆಳ್ವಾಸ್ ವಿರಾಸತ್ ಅನ್ನು ಸುಂದರವಾಗಿ ನಿರ್ವಹಿಸಲಾಗಿದೆ” ಎಂದರು. ‘ನಾನು ಹೃದಯಾಂತರಾಳದಿಂದ ಹಾಡುವೆ,…
ಮೂಡುಬಿದಿರೆ : ಪಡುವಣದಲ್ಲಿ ನೇಸರ ಹೊಂಗಿರಣ ಬೀರಿ ಬೈ ಬೈ ಹೇಳುತ್ತಿದ್ದರೆ, ಇತ್ತ ಮೂಡಣ ದಿಕ್ಕಿನ ಬಿದಿರೆಯ ನಾಡಲ್ಲಿ, ಶಿಕ್ಷಣ- ಸಾಂಸ್ಕೃತಿಕ ಕಾಶಿಯ ಬೀಡಲ್ಲಿ ನಾದ ನಿನಾದ ‘ಗಾನ ವೈಭವ’ ಮೊಳಗಿತು. ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಗುಜರಾತಿ ಮತ್ತು ಮರಾಠಿ ಸೇರಿದಂತೆ 19ಕ್ಕೂ ಅಧಿಕ ಭಾಷೆಗಳಲ್ಲಿ 3500 ಹಾಡುಗಳನ್ನು ಹಾಡಿದ ಖ್ಯಾತ ಹಿನ್ನೆಲೆ ಗಾಯಕ ಬಿನ್ನಿ ದಯಾಲ್ ಅವರ ಬಾಲಿವುಡ್, ಪಂಜಾಬ್, ತಮಿಳು ಸೇರಿದಂತೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ ಸ್ವರ ಮಾಧುರ್ಯಕ್ಕೆ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ತುಂಬಿದ ಪ್ರೇಕ್ಷಕರ ಕರತಾಡನ, ಜಯಕಾರ ಮುಗಿಲು ಮುಟ್ಟಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ಆಳ್ವಾಸ್ ವಿರಾಸತ್ ನ ಎರಡನೇ ದಿನ ದಿನಾಂಕ 15-12-2023ರಂದು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿದ ಸಭಾಂಗಣದ ಮುಂಭಾಗದ ಭವ್ಯ ವೇದಿಕೆಯಲ್ಲಿ ಬಿನ್ನಿ ಗಾನದ ಬೆಳಕು ಹರಿಯಿತು. ‘ಈ ಹಾಡಲ್ಲಿ ನಾನು ಹೆಚ್ಚು…
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ‘ಆಳ್ವಾಸ್ ವಿರಾಸತ್’ ದಿನಾಂಕ 14-12-2023ರಂದು ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಅದ್ದೂರಿಯಾಗಿ ಪ್ರಾರಂಭಗೊಂಡಿತು. ಈ ಕಾರ್ಯಕ್ರಮವನ್ನು ರಾಜ್ಯಪಾಲ ಡಾ. ಥಾವರ್ ಚಂದ್ ಗೆಹ್ಲೋಟ್ ಇವರು ಉದ್ಘಾಟಿಸಿ ಮಾತನಾಡುತ್ತಾ “ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದೇಶ, ಧರ್ಮ, ಸಂಸ್ಕೃತಿಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ. ವಿರಾಸತ್ ನ ಉದ್ಘಾಟನೆ ಬಹಳ ಖುಷಿ ನೀಡಿದೆ. ಸಂಸ್ಕಾರಯುತ ಶಿಕ್ಷಣ ನೀಡುವುದು ಆಳ್ವಾಸ್ ಗೆ ಶ್ರೇಯ. ಸಾಂಸ್ಕೃತಿಕ ಶಿಕ್ಷಣವು ವ್ಯಕ್ತಿತ್ವ ವಿಕಸನಕ್ಕೆ ಸ್ಫೂರ್ತಿಯಾಗಿದೆ. ಸಂಗೀತ ಹಾಗೂ ಕಲೆ ಎಲ್ಲರಿಗೂ ಖುಷಿ ನೀಡುತ್ತದೆ” ಎಂದು ಅಭಿನಂದಿಸಿದರು. ಆಳ್ವಾಸ್ ಕನ್ನಡ ಮಾಧ್ಯಮ ಶಾಲಾ ಶಿಕ್ಷಣವನ್ನು ಶ್ಲಾಘಿಸಿದ ಅವರು, “ಇದನ್ನು ಸರ್ವಶ್ರೇಷ್ಠ ಶಾಲೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಜಗತ್ತಿನ ಪ್ರಮುಖ ಐದು ಅಭಿವೃದ್ಧಿಶೀಲ ರಾಷ್ಟ್ರಗಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿವೆ. ಮಾತೃಭಾಷೆ ವೃದ್ಧಿಗೆ ಆಳ್ವಾಸ್ ಇನ್ನಷ್ಟು ಕೊಡುಗೆ ನೀಡಲಿ. ಮೂರೂವರೆ ಸಾವಿರ…
ಕೋಟ : ಬೆಂಗಳೂರಿನ ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆಯ 2023ರ ಸಾಲಿನ ‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ ಸಮಾರಂಭವು ಕೋಟದ ಹಂದಟ್ಟು ಉರಾಳಕೇರಿಯ ವೇದಿಕೆಯಲ್ಲಿ ದಿನಾಂಕ 25-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವೇದ ಬಹ್ಮಶ್ರೀ ಅನಂತ ಪದ್ಮನಾಭ ಐತಾಳ ಇವರು ಮಾತನಾಡಿ “ಯಕ್ಷಗಾನಕ್ಕೆ ಮೆರುಗು ನೀಡಿ, ಯಕ್ಷಗಾನದ ಪರಿಚಯವೂ ಇಲ್ಲದಂತೆ ಪ್ರದೇಶಗಳಲ್ಲಿಯೂ ಯಕ್ಷಗಾನದ ಮಹತ್ವವನ್ನು ತಮ್ಮ ಗಾಯನದ ಮೂಲಕ ಸಾರಿ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿದವರು ಕಾಳಿಂಗ ನಾವಡರು. ಕಾಳಿಂಗ ನಾವಡರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಹಿರಿಯ ಭಾಗವತ, ಪ್ರಸಂಗಕರ್ತ ಶ್ರೀ ಸುರೇಶ್ ರಾವ್ ಬಾರ್ಕೂರು ಅವರಿಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದರು. ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ, ಯಕ್ಷಗಾನ ಕಲಾವಿದರಾದ ಗೋವಿಂದ ಉರಾಳರು, ಗಣಪಯ್ಯ ಉರಾಳ, ಕಲಾಕದಂಬದ ಅಧ್ಯಕ್ಷ ಅಂಬರೀಶ್ ಭಟ್ ಹಾಗೂ ಕಲಾಕದಂಬದ ನಿರ್ದೇಶಕ ಡಾ. ರಾಧಾಕೃಷ್ಣ ಉರಾಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ತೆಕ್ಕಟ್ಟೆ ಯಶಸ್ವಿ ಕಲಾಕೇಂದ್ರದ ಕಲಾವಿದರಿಂದ ‘ಗಾನ ವೈಭವ’ ಮತ್ತು…
‘ನಾಯಿ ನಾನು’ ನರೇಂದ್ರ ಎಸ್. ಗಂಗೊಳ್ಳಿಯವರ ಚೊಚ್ಚಲ ಕಥಾ ಸಂಕಲನ. ಇದರಲ್ಲಿ ಹದಿನೇಳು ಹೃದಯಸ್ಪರ್ಶಿ ಕಥೆಗಳಿವೆ. ಇವು ಜಗತ್ತಿನ ಸಮಸ್ತ ಜೀವಿಗಳಲ್ಲಿ ತಾನೇ ಎಲ್ಲಕ್ಕಿಂತ ಶ್ರೇಷ್ಠನೆಂದು ಬೀಗುವ ಮನುಷ್ಯನ ಹುಳುಕುಗಳನ್ನೂ, ಸ್ವಾರ್ಥ-ವಂಚನೆಗಳನ್ನೂ, ಮೂರ್ಖ ಆಲೋಚನೆಗಳನ್ನೂ ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸುತ್ತವೆ. ಆದ್ದರಿಂದ ವಿಷಾದವೇ ಈ ಕಥೆಗಳ ಸ್ಥಾಯೀಭಾವ. ಹೊರಗಿನಿಂದ ಸಭ್ಯನಾಗಿ ಕಾಣುವ ಒಬ್ಬ ವ್ಯಕ್ತಿಯಲ್ಲೂ ವಿಕೃತ ಕಾಮದ ಬೇರುಗಳು ಆಳಕ್ಕಿಳಿದಿರುತ್ತವೆ ಎಂಬುದಕ್ಕೆ ನಿದರ್ಶನವಾಗಿ ನಿಲ್ಲುವ ‘ಒಳ್ಳೆಯವನು’ ಎಂಬ ಕಥೆ ಇಂದಿನ ಸಮಾಜದಲ್ಲಿ ಪುಟ್ಟ ಹುಡುಗಿಯರ ಮೇಲೂ ಅತ್ಯಾಚಾರ ನಡೆಸುವ ಕ್ರೂರ ಪುರುಷರನ್ನು ಸ್ವವಿಮರ್ಶೆಗೊಳಪಡಿಸುತ್ತದೆ. ದೇವದಾಸಿ ಪದ್ಧತಿಯ ಪುರುಷ ಕ್ರೌರ್ಯವನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ ನಡೆಸ ಹೊರಟ ವ್ಯಕ್ತಿ ಆಂತರ್ಯದಲ್ಲಿ ಇನ್ನೂ ಬದಲಾಗದಿರುವ ಗೋಸುಂಬೆಯಾಗಿರುವುದನ್ನು ‘ಒಂದು ದೇವಿಯ ಕತೆ ‘ ತೆರೆದಿಡುತ್ತದೆ. ‘ಒಂದು ಚಪ್ಪಲಿಯ ಕತೆ ‘ ಆನ್ ಲೈನ್ ಖರೀದಿಯ ಥಳಕು ಬಳಕುಗಳ ಹಿಂದಿನ ಮೋಸದ ಕಥೆಯನ್ನು ಬಿತ್ತರಿಸುತ್ತದೆ. ಮಿತ್ರನಿಂದ ಪ್ರೇರಿತನಾಗಿ ಆನ್ ಲೈನ್ ಮೂಲಕ ದುಬಾರಿ ಹಣ ತೆತ್ತು ಆಕರ್ಷಕ ಚಪ್ಪಲಿ…