Author: roovari

ಅಂಕೋಲಾ : ಡಾ. ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಯು ಹೊನ್ನಾಳಿಯ ಶಿಕ್ಷಕ ಹಾಗೂ ಲೇಖಕ ಸದಾಶಿವ ಸೊರಟೂರು ಇವರ ‘ಗಾಯಗೊಂಡ ಸಾಲುಗಳು’ ಕಾವ್ಯ ಸಂಕಲನಕ್ಕೆ ಲಭಿಸಿದೆ. ಡಾ. ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ 72 ಸಂಕಲನಗಳು ಬಂದಿದ್ದವು. ಬೆಂಗಳೂರಿನ ಎಚ್.ಎಲ್. ಪುಷ್ಪಾ, ಸುಬ್ಬು ಹೊಲಿಯಾರ, ಧಾರವಾಡದ ಬಸು ಬೇವಿನಗಿಡದ ಹಾಗೂ ಡಾ. ಶ್ರೀಧರ ಹೆಗಡೆ ಭದ್ರನ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಪ್ರಶಸ್ತಿಯನ್ನು ದಿನಾಂಕ 10 ನವೆಂಬರ್ 2024ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ದಿನಕರ ದೇಸಾಯಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮೋಹನ ಹಬ್ಬು ತಿಳಿಸಿದ್ದಾರೆ. ಸದಾಶಿವ ಸೊರಟೂರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಮಲೇ ಬೆನ್ನೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ (ಕವನ ಸಂಕಲನ), ದೇವರೆ ಅವಳು ಸಿಗದಿರಲಿ (ಪ್ರೇಮಪತ್ರಗಳು), ಆ ಹಾದಿ ( ಒಂದು ರಸ್ತೆಯ ಕಥಾನಕ), ಅರ್ಧ ಬಿಸಿಲು…

Read More

ಉಡುಪಿ : ಆಂಧ್ರ ಪ್ರದೇಶದ ಹಿಂದೂಪುರದ ‘ಅಭಿಜ್ಞಾನ ನೃತ್ಯಾಲಯಂ ಅಕಾಡೆಮಿ’ ಇದರ ಆಶ್ರಯದಲ್ಲಿ ಪರ್ಯಾಯ ಪುತ್ತಿಗೆ ಕೃಷ್ಣ ಮಠದ ಸಹಯೋಗದೊಂದಿಗೆ ಶ್ರೀಕೃಷ್ಣ ಮಠದ ಮಧ್ವಮಂಟಪ ಹಾಗೂ ರಾಜಾಂಗಣದಲ್ಲಿ 100 ಮಂದಿ ನೃತ್ಯ ಕಲಾವಿದರಿಂದ ಸತತ 14 ಗಂಟೆಗಳ ಶಾಸ್ತ್ರೀಯ ನೃತ್ಯ ಪ್ರದರ್ಶನ ಗುರುವಾರ ದಿನಾಂಕ 17 ಅಕ್ಟೋಬರ್ 2024ರಂದು ನಡೆಯಿತು. ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಆಯ್ದ 100 ನೃತ್ಯ ಕಲಾವಿದರು ಪ್ರದರ್ಶನದಲ್ಲಿ ಭಾಗವಹಿಸಿದರು. 5ರಿಂದ 60 ವರ್ಷದವರೆಗಿನ ಹಿರಿ ಕಿರಿಯ ಒಟ್ಟು 100 ಮಂದಿ ಕಲಾವಿದೆಯರು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಾಗಿ ಸತತ 14 ಗಂಟೆಗಳ ಕಾಲ ಎಡೆಬಿಡದೆ ಕೂಚುಪುಡಿ, ಭರತನಾಟ್ಯ,ಆಂಧ್ರ ನೃತ್ಯ ಹಾಗೂ ತೆಲಂಗಾಣ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನೃತ್ಯ ಪ್ರದರ್ಶನ ಉದ್ಘಾಟಿಸಿ, ಶುಭ ಹಾರೈಸಿದರು. ಅಭಿಜ್ಞಾನ ನೃತ್ಯಾಲಯಂ ಅಕಾಡೆಮಿ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಚಾಲಕಿ ಚಂದ್ರಭಾನು ಚತುರ್ವೇದಿ, ಪುತ್ತಿಗೆ…

Read More

ಯಕ್ಷಗಾನ ಅಂದಕೂಡಲೇ ನೆನಪಾಗುವುದು ಚೆಂಡೆಯ ಶಬ್ದ, ಕಲಾವಿದನ ಮಾತಿನ ಝೇಂಕಾರ, ಕಾಲ್ಗೆಜ್ಜೆಯ ಸ್ವಚ್ಛವಾದ ನಡೆ – ನಾಟ್ಯ.  ಯಕ್ಷಗಾನ ರಂಗದಲ್ಲಿ ತಮ್ಮ ವೇಷ ಹಾಗೂ ನಾಟ್ಯದಿಂದ ರಂಗಸ್ಥಳ ರಂಗೇರಿಸುತ್ತಿರುವ ಕಲಾವಿದ ಪ್ರವೀಣ್ ಗಾಣಿಗ ಕೆಮ್ಮಣ್ಣು. 01.10.1978ರಂದು ಆನಂದ ಗಾಣಿಗ ಹಾಗೂ ಹೆಚ್. ಪಾರ್ವತಿ ಇವರ ಮಗನಾಗಿ ಜನನ. ಮಾವ ಹಾರಾಡಿ ಸರ್ವೋತ್ತಮ ಗಾಣಿಗ ಅವರ ಪ್ರೇರಣೆಯಿಂದ ಪ್ರವೀಣ್ ಅವರು ಯಕ್ಷಗಾನ ರಂಗಕ್ಕೆ ಬಂದರು. ತೋನ್ಸೆ ಜಯಂತ್ ಕುಮಾರ್ ಹಾಗೂ ಬಡಾನಿಡಿಯೂರು ಕೇಶವ ರಾವ್ ಇವರ ಯಕ್ಷಗಾನ ಗುರುಗಳು. ಭಾಗವತರೊಡನೆ ಮಾತುಕತೆ, ಸಹಕಲಾವಿದರೊಡನೆ ಚರ್ಚೆ, ಮುಖವರ್ಣಿಕೆಯ ಸಮಯದಲ್ಲಿ ನನ್ನ ಪಾತ್ರದ ಬಗ್ಗೆ ಅವಲೋಕನ ಮಾಡಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರವೀಣ್ ಗಾಣಿಗ ಕೆಮ್ಮಣ್ಣು. ಅಭಿಮನ್ಯು ಕಾಳಗ, ಸುಧನ್ವ ಕಾಳಗ, ಶ್ರೀ ರಾಮ ಪಟ್ಟಾಭಿಷೇಕ, ಭೀಷ್ಮ ಪ್ರತಿಜ್ಞೆ, ಲವ ಕುಶ, ರಂಗನಾಯಕಿ, ಹಿರಿಯಡ್ಕ ಕ್ಷೇತ್ರ ಮಹಾತ್ಮೆ, ಮಂದಾರ್ತಿ ಕ್ಷೇತ್ರ ಮಹಾತ್ಮೆ, ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಇತ್ಯಾದಿ ನೆಚ್ಚಿನ…

Read More

ಮಂಗಳೂರು : ಶ್ರೀ ಶಾರದಾ ಮಹೋತ್ಸವದ ಶೋಭಾ ಯಾತ್ರೆಯ ಪ್ರಯುಕ್ತ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾ ವರ್ಧಕ ಸಂಘ ಆಯೋಜಿಸಿದ್ದ ಯಕ್ಷಗಾನ ಬಯಲಾಟ ಕಾರ್ಯಕ್ರಮವು ದಿನಾಂಕ 14 ಅಕ್ಟೋಬರ್ 2024ರಂದು ಮಂಗಳೂರಿನ ಮಹಾಮಾಯಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಮಿತ್ತಬೈಲು ಬಾಲಚಂದ್ರ ನಾಯಕ್ ಮಾತನಾಡಿ “ಯಕ್ಷಗಾನದಂತಹ ಕಲೆ ಎಲ್ಲರಿಗೂ ಒಲಿಯುವುದಿಲ್ಲ.ಹಾಗಾಗಿ ಈ ಕಲೆಯಲ್ಲಿ ತೊಡಗಿಸಿಕೊಂಡ ಇಂತಹ ಸಂಸ್ಥೆಗಳಿಗೆ ಸಾಧ್ಯವಾದಷ್ಟು ಧನ ಸಹಾಯ ಮಾಡುವ ಮೂಲಕ ಆಸಕ್ತರು ಈ ಕಲೆಯನ್ನು ಸವಿಯಲು ಅವಕಾಶ ಮಾಡಿ ಕೊಡೋಣ.” ಎಂದರು. ಇದೇ ಸಂದರ್ಭದಲ್ಲಿ ಪ್ರವೃತ್ತಿಯಲ್ಲಿ ಯಕ್ಷಗಾನ ಅರ್ಥಧಾರಿ ಹಾಗೂ ಹರಿದಾಸರಾಗಿ ಪ್ರಸಿದ್ಧರಾದ ಮಹಾಬಲ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರು “ನಾನು ಅರ್ಥಧಾರಿಯಾಗಲು ಶೇಣಿ ಗೋಪಾಲಕೃಷ್ಣ ಭಟ್ಟರು ಹಾಗೂ ಹರಿಕಥಾ ಕ್ಷೇತ್ರಕ್ಕೆ ಕಾಲಿಡಲು ಮಲ್ಪೆ ರಾಮದಾಸ ಸಾಮಗರು ಸ್ಪೂರ್ತಿ. ಹರಿಕಥಾ ಕ್ಷೇತ್ರ ಪೌರಾಣಿಕ ಜ್ಞಾನವನ್ನು ಹಾಗೂ ಜೀವನ ಕ್ರಮಗಳನ್ನು ತಿಳಿಸಿಕೊಡಲು ಅತ್ಯಂತ ಸೂಕ್ತ ಎಂದರು.”  ಸಮ್ಮಾನ ಪತ್ರವನ್ನು ಅಶೋಕ್…

Read More

ದಿನಾಂಕ16-10-24ರಂದು ಚಿತ್ರಕಲಾ ಪರಿಷತ್ತಿನಲ್ಲಿ ಏಳು ಕಲಾವಿದರಿಂದ ‘ಸಪ್ತ’ ಎನ್ನುವ ಹೆಸರಿನಲ್ಲಿ ಸಮೂಹ ಕಲಾಪ್ರದರ್ಶನ ಅನಾವರಣಗೊಂಡಿತು. ತುಂಬಾ ಆಪ್ತವೆನಿಸುವ ಕಲಾಕೃತಿಗಳು ಅವು ಆಗಿದ್ದವು. ಅಲ್ಲೊಂದು ಹದವಾದ ಸಂಗೀತವಿತ್ತು. ನಾವು ದಿನನಿತ್ಯ ನೋಡುವ, ಬಳಸುವ, ಆರಾಧಿಸುವ ವಿಷಯಗಳನ್ನು ಕಲಾವಿದರು ಆಯ್ದು ಕೊಂಡಾಗ ನೋಡುಗರಿಗೆ ಕಲಾಕೃತಿಗಳು ಹತ್ತಿರವಾಗುತ್ತವೆ. ಇಂತಹ ವಿಷಯಗಳನ್ನೇ ಮುಖ್ಯವಾಗಿಸಿಕೊಂಡು ಕಲಾ ಪ್ರದರ್ಶನ ಏರ್ಪಡಿಸಿದವರು ರಾಜ್ಯದ ವಿವಿಧ ಭಾಗದ ಕಲಾವಿದರು. ಇಲ್ಲಿ ಬೇಲೂರು, ಹಳೇಬೀಡು ಶೈಲಿಯ ಶಿಲ್ಪದಿಂದ ಸ್ಪೂರ್ತಿ ಪಡೆದಂತ ಕಲಾಕೃತಿಗಳು ಗದುಗಿನ ನವೀನ್ ಪತ್ತಾರ್ ಅವರದಾದರೆ, ಬೆಳಗಾವಿಯ ಸುಶೀಲ್ ತರ್ಬಾರ್, ತಿಮ್ಮಣ್ಣಗೌಡ ಪಾಟೀಲ್ ಮತ್ತು ದರ್ಶನ್ ಚೌಧರಿ ಅವರ ಚಿತ್ರಗಳು ನಿಸರ್ಗ ಮತ್ತು ಸಮುದ್ರ ತೀರದ ಅನುಭವಗಳನ್ನು ಕಟ್ಟಿಕೊಡುತ್ತದೆ. ವಿಜಯ ಧೊಂಗಡಿ ಅವರ ಚಿತ್ರಗಳು ನಮ್ಮ ಸಂಸ್ಕೃತಿ, ಸಂಸ್ಕಾರದ  ಪ್ರತೀಕವಾದ ದೊಡ್ಡ ತಿಲಕವಿಟ್ಟುಕೊಂಡ ಭಾರತೀ ನಾರಿಯರ ಚಿತ್ರಗಳನ್ನು ಪ್ರತಿಬಿಂಬಿಸುತ್ತಿವೆ. ತುಮಕೂರಿನ  ಬಿ. ಎನ್. ಹರಿಪ್ರಸಾದ್ ಅವರ ಚಿತ್ರಗಳು ಹಳ್ಳಿಯ ಜನಜೀವನ, ಹೂ ಮಾರುವ ಹೆಂಗಸು ಇತ್ಯಾದಿ ಚಿತ್ರಗಳು ನಿಮ್ಮನ್ನು ಹಿಡಿದ ನಿಲ್ಲಿಸುತ್ತವೆ. ಚೇತನ್ ಕುಮಾರ್…

Read More

ಮಂಗಲ್ಪಾಡಿ : ಕಲಾಕುಂಚ ಕೇರಳ ಗಡಿನಾಡ ಘಟಕದ ವತಿಯಿಂದ ಮಂಗಲ್ಪಾಡಿ ಏಕಾಹ ಭಜನಾ ಮಂದಿರದ 38ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ‘ಕಲಾಕುಸುಮ’ ಎಂಬ ವಿನೂತನ ಕಾರ್ಯಕ್ರಮವು ದಿನಾಂಕ 11 ಅಕ್ಟೋಬರ್ 2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಗೀತಾ ಪಠಣೆ ಮತ್ತು “ಮಹಿಷಾಸುರ ಮರ್ದಿನಿ” ಸ್ತೋತ್ರ ಗಾಯನ, ಕುಮಾರಿ ಸುಪ್ರಜಾ ರಾವ್ ಇವರಿಂದ ವಯಲಿನ್ ವಾದನ, ವಿದುಷಿ ಭಾಗ್ಯಶ್ರೀ ರೈ ಪುತ್ತೂರು ಇವರ ಶಿಷ್ಯರಿಂದ ನೃತ್ಯಂಜಲಿ ಕಾರ್ಯಕ್ರಮ, ಮಾಸ್ಟರ್ ನಂದನ್ ಹೆಬ್ಬಾರ್ ಮತ್ತು ಕುಮಾರಿ ಅದಿತಿ ಕಲ್ಮಾಡಿ ಇವರಿಂದ ಗಾಯನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವು ಗೋಲ್ಡನ್ ಬುಕ್ ರೆಕಾರ್ಡ್ ಇದರಲ್ಲಿ ಪ್ರಶಸ್ತಿ ಪಡೆದ ಕುಮಾರಿ ಅಭಿಜ್ಞಾ ಹರೀಶ್ ಮತ್ತು ಕುಮಾರಿ ಅಪರ್ಣ ಇವರ ಅದ್ಭುತ ಯೋಗ ಪ್ರದರ್ಶನದಿಂದ ಸಮಾಪನಗೊಂಡಿತು.

Read More

ಮಂಗಳೂರು : ದಾವಣಗೆರೆಯ ಕಲಾ ಕುಂಚ ಸಾಂಸ್ಕೃ ತಿಕ ಸಂಸ್ಥೆಯಿಂದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಜ್ಯ ಮಟ್ಟದ ಕರ್ನಾಟಕ ಮುಕುಟಮಣಿ ಪ್ರಶಸ್ತಿಗೆ ಮಂಗಳೂರಿನ ರಂಗನಟ ಸುರೇಶ್ ಕುಮಾರ್ ಆರ್.ಎಸ್. ಆಯ್ಕೆಯಾಗಿದ್ದಾರೆ. ಸುರೇಶ್ ಕುಮಾರ್ ನಾಟಕ ರಚನೆಗಾರರಾಗಿ, ನಿರ್ದೇಶಕನಾಗಿ ಮೂರು ದಶಕಗಳಿಂದ ಸಕ್ರಿಯರಾಗಿದ್ದಾರೆ. 60ಕ್ಕೂ ಹೆಚ್ಚಿನ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹತ್ತಾರು ತುಳು ಚಲನಚಿತ್ರಗಳ ಗೀತೆಗಳಿಗೆ ಸಾಹಿತ್ಯ ರಚಿಸಿದ್ದಾರೆ. ಹಲವು ತುಳು ಹಾಸ್ಯ ಧಾರಾವಾಹಿಗಳನ್ನೂ ರಚಿಸಿ, ನಿರ್ದೇಶಿಸಿದ್ದಾರೆ.

Read More

ಕುಶಾಲನಗರ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ : 50 ಹಾಗೂ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಿನಾಂಕ 11 ನವೆಂಬರ್ 2024ರಂದು ಕುಶಾಲನಗರ ಪಟ್ಟಣದ ರಥಬೀದಿ ಹಾಗೂ ಪ್ರವಾಸಿ ಮಂದಿರ (ಐ.ಬಿ.) ರಸ್ತೆಯಲ್ಲಿ ಏಕಕಾಲದಲ್ಲಿ ಐದು ಸಹಸ್ರ ಮಂದಿಯಿಂದ ಕನ್ನಡ ಕಂಠ ಗಾಯನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಸಂಘಟಿಸುವ ಮೂಲಕ ಕನ್ನಡದ ಕಹಳೆಯನ್ನು ಮೊಳಗಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿನಾಂಕ 19 ಅಕ್ಟೋಬರ್ 2024ರಂದು ನಡೆದ ಸಭೆಯಲ್ಲಿ ಎಲ್ಲರೂ ಜತೆಗೂಡಿ ಕಂಠ ಗಾಯನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಒಕ್ಕೊರಲಿನಿಂದ ನಿರ್ಧಾರ ತೆಗೆದುಕೊಳ್ಳಲಾಯಿತು. ಉದ್ದೇಶಿತ ಕಂಠ ಗಾಯನ ಕಾರ್ಯಕ್ರಮದ ಯಶಸ್ಸಿಗೆ ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರ ಸಹಭಾಗಿತ್ವದಲ್ಲಿ ಏಕಕಾಲದಲ್ಲಿ ಐದು ಸಹಸ್ರ ಮಂದಿಯಿಂದ ವಿನೂತನವಾಗಿ ಕನ್ನಡ ಕಂಠ…

Read More

ಮಲಯಾಳಂನ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲಿ ಉರೂಬ್ (ಪಿ.ಸಿ. ಕುಟ್ಟಿಕೃಷ್ಣನ್) ಅವರ ‘ಸುಂದರಿಗಳುಂ ಸುಂದರನ್‌ಮಾರುಂ’ ಎಂಬ ಕಾದಂಬರಿಯೂ ಒಂದು. ಇದು ಮಲಬಾರಿನ ಸಾಂಸ್ಕೃತಿಕ ಇತಿಹಾಸವಾಗಿದ್ದು ಮೂರು ತಲೆಮಾರುಗಳ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳನ್ನು ಒಳಗೊಂಡಿದೆ. ಮಹಾನುಭಾವರೆಂದು ಹೊಗಳಿಸಿಕೊಂಡ ಚಾರಿತ್ರಿಕ ವ್ಯಕ್ತಿಗಳನ್ನು, ದಿನಾಂಕಗಳನ್ನು ಮತ್ತು ಘಟನೆಗಳನ್ನು ಕೈಬಿಟ್ಟು ಸಾಂಸ್ಕೃತಿಕ ಸಂದರ್ಭಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಜನಸಾಮಾನ್ಯರ ಜೀವನಾನುಭವಗಳನ್ನು ಮೂರ್ತಗೊಳಿಸಿದೆ. ಖಿಲಾಫತ್ ಚಳುವಳಿ, ವಿಶ್ವ ಮಹಾಯುದ್ಧಗಳು ಮತ್ತು 1942ರ ಕ್ವಿಟ್ ಇಂಡಿಯಾ ಚಳುವಳಿವರೆಗಿನ ನಲುವತ್ತು ವರ್ಷಗಳ ವ್ಯಾಪ್ತಿಯಲ್ಲಿ ಮಲಬಾರ್ ಪ್ರದೇಶದ ಕೆಲವು ಕುಟುಂಬಗಳ ಕತೆಯನ್ನು ಹೇಳುವ ಕಾದಂಬರಿಯು ಉತ್ತಮ ಪ್ರಯೋಗಶೀಲ ಕೃತಿಯಾಗಿದೆ. ಈ ಕಾದಂಬರಿಯಲ್ಲಿರುವ ಏಳು ಅಧ್ಯಾಯಗಳು ಸ್ವತಂತ್ರ ನೀಳ್ಗತೆಗಳಾಗಿಯೂ ಓದಿಸಿಕೊಳ್ಳುತ್ತವೆ. ಹಂಪಿ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ ಕುಂಟಾರ್ ಅವರು ಈ ಕಾದಂಬರಿಯನ್ನು ‘ಸುಂದರಿಯರು ಸುಂದರರು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಠೋರವಾದ ನೋವು ಮತ್ತು ಮಿತಿಯಿಲ್ಲದ ದುಃಖಗಳಿಂದ ಕೂಡಿರುವ ಪ್ರಪಂಚದಲ್ಲಿ ಮನುಷ್ಯತ್ವದ ಸೆಲೆಯಿಲ್ಲದಂತೆ ಹೊಗೆಯಾಡುತ್ತಿರುವ ದ್ವೇಷ, ಜಿದ್ದು, ಸ್ವಾರ್ಥಗಳು ಹೆಣೆಯುವ ನರಕದ ಬೇಲಿಯೊಳಗೆ…

Read More

ಕಾಸರಗೋಡು : ಡಾ. ನಾ. ಮೊಗಸಾಲೆ ನೇತೃತ್ವದ ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ದಿನಾಂಕ 1 ನವೆಂಬರ್ 2024ರಂದು ಕನ್ನಡ ಸಂಘದ ಬಯಲು ರಂಗ ಮಂದಿರದಲ್ಲಿ ನಡೆಯುವ ಕಾಂತಾವರ ಉತ್ಸವ – 2024 ಸಮಾರಂಭದಲ್ಲಿ ಕಾಸರಗೋಡಿನ ಮೂವರು ಸಾಹಿತಿಗಳ ನಾಲ್ಕು ಕೃತಿಗಳು ಲೋಕಾರ್ಪಣೆಯಾಗಲಿದೆ. ಕಾಂತಾವರದ ಕನ್ನಡ ಸಂಘವು ಪ್ರತೀ ವರ್ಷವೂ ಪ್ರಕಟಿಸುವ ‘ನಾಡಿಗೆ ನಮಸ್ಕಾರ’ ಗ್ರಂಥ ಮಾಲಿಕೆಯಲ್ಲಿ ಈ ನೂತನ ಕೃತಿಗಳು ಬಿಡುಗಡೆಯಾಗಲಿದೆ. ಕಾಸರಗೋಡಿನ ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು ರಚಿಸಿದ ‘ಕಾಸರಗೋಡಿನ ಕನ್ನಡ ಹೋರಾಟಗಾರ ಅಡೂರು ಉಮೇಶ ನಾಯಕ್’ ಮತ್ತು ‘ಹಾಸ್ಯ ಸಾಹಿತ್ಯದ (ನಿ)ರೂಪಕ ವೈ. ಸತ್ಯನಾರಾಯಣ ಕಾಸರಗೋಡು’ ಎಂಬ ಕೃತಿಗಳು, ಪತ್ರಕರ್ತ ಸಾಹಿತಿ ವಿರಾಜ್ ಅಡೂರು ಬರೆದ ‘ಮಕ್ಕಳ ಸಾಹಿತ್ಯ ಸಂಗಮದ ಜಂಗಮ ಶ್ರೀನಿವಾಸ ರಾವ್’ ಎಂಬ ಕೃತಿ ಹಾಗೂ ಶಿಕ್ಷಕಿ ಆಶಾ ದಿಲೀಪ್ ರೈ ಸುಳ್ಯಮೆ ಇವರು ಬರೆದ ‘ಸಾಹಿತ್ಯ ಶಿಕ್ಷಣ ಸಂಪನ್ನೆ ಸಾವಿತ್ರಿ ಎಸ್. ರಾವ್’ ಎಂಬ ಕೃತಿಗಳು ಬಿಡುಗಡೆಯಾಗಲಿವೆ. ಈ ಕೃತಿಗಳನ್ನು…

Read More