Subscribe to Updates
Get the latest creative news from FooBar about art, design and business.
Author: roovari
ಸೃಷ್ಟಿಯ ಅನಾದಿ ಕಾಲದಿಂದಲೂ ಬದುಕು ಜೀವನ ಕಾವ್ಯ ಸಂಸ್ಕೃತಿಗಳು ನಿರಂತರ ಪ್ರಯಾಣ ಮಾಡುತ್ತಿರುತ್ತವೆ, ಸಂಚಾರ ಮಾಡುತ್ತಿರುತ್ತವೆ. ಅವು ಕಾಲ ಕಾಲಕ್ಕೆ ಬೇರೆ ಬೇರೆ ಹೆಸರು, ಭಾಷೆ, ಕ್ಷೇತ್ರಗಳನ್ನು ಪಡೆದುಕೊಳ್ಳುತ್ತವೆ. ಕಾಲಕ್ಕೆ ತಕ್ಕಂತೆ ತಜ್ಞರು, ವಿದ್ವಾಂಸರು ತಮ್ಮ ಸಮಕಾಲೀನ ಸಮಾಜದ ಸಾಮಾನ್ಯರಿಗೆ ಅವುಗಳ ತಿಳಿವಳಿಕೆ ನೀಡುತ್ತಾರೆ. ಕಾವ್ಯ ಸಂಸ್ಕೃತಿಯ ಯಾನದ ಅಂಥ ಪಯಣ ಈ ಸಲ ಒಂದು ವಿಶಿಷ್ಟ ಉದ್ದೇಶ, ಗುರಿಗಳನ್ನು ಹೊಂದಿಕೊಂಡು ನಾಡಿನ ತುಂಬ ಪಸರಿಸಲಿದೆ. ನಾಡು ನುಡಿಯ ಅಭಿಮಾನದ ಪರಿಮಳವನ್ನು ಬೀರುತ್ತ, ಹೊರನಾಡ ಕನ್ನಡಿಗರು, ಗಡಿನಾಡು ಮತ್ತು ಒಳಭಾಗದ ಎಲ್ಲಾ ಕಾವ್ಯಪ್ರೇಮಿಗಳ ಪರಿಚಯವನ್ನು ನವೀಕರಿಸಲಿದೆ. ಕಾವ್ಯಕ್ಕೆ ಹೊಸತು ಹಳತು ಎಂಬುದಿಲ್ಲ. ಅದು ನಿತ್ಯ ನವೀನವಾದುದು. ಓದುವ ಮನಸ್ಸು ಪ್ರತಿದಿನವೂ ಹೊಸದನ್ನು ಸ್ವೀಕರಿಸುತ್ತದೆ. ಆ ಮೂಲಕ ಮನುಕುಲದ ನೋವಿಗೆ ಮತ್ತೆ ಮತ್ತೆ ಮುಲಾಮು ಲೇಪಿಸಬೇಕಾಗುತ್ತದೆ. ಕಾವ್ಯದ ಓದು ಮತ್ತು ಪ್ರಚಾರ ಇಂದಿನ ದಿನಮಾನದಲ್ಲಿ ಸ್ವಲ್ಪ ಮಸುಕಾದಂತೆ ಕಂಡಿರಬಹುದಾದರೂ, ಸಂಗೀತ ಸಾಹಿತ್ಯ ರಂಗಭೂಮಿ ಮುಂತಾದವುಗಳ ಮೂಲಕ ವಿವಿಧ ಕಲಾಪ್ರೇಮಿಗಳ ಮನಸ್ಸನ್ನು ಮುದಗೊಳಿಸಿ ಹದಗೊಳಿಸಿ…
ಕೋಟ : ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ (ರಿ.) ಕೋಟ ಇದರ ವತಿಯಿಂದ ದಶಮಾನ ಪೂರ್ವ ಕಾರ್ಯಕ್ರಮ ಶ್ರಾವಣ ಸಂಭ್ರಮದಲ್ಲಿ ‘ಸೌರಭ ಸಪ್ತಮಿ’ ಯಕ್ಷಗಾನ ಸಪ್ತಾಹವು ದಿನಾಂಕ 25-08-2024ರಿಂದ 31-08-2024ರವರೆಗೆ ಸಂಜೆ 6-00 ಗಂಟೆಗೆ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದಲ್ಲಿ ನಡೆಯಲಿದೆ. ದಿನಾಂಕ 25 ಆಗಸ್ಟ್ 2024ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಇದರ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕರ್ಕೇರ ಕೋಡಿ ಇವರು ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾಲ್ಲೂರು ಶಿವರಾಮ ಶೆಟ್ಟಿಯವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೀರ್ತಿಶೇಷ ಹಂದಾಡಿ ಬಾಲಕೃಷ್ಣ ನಾಯಕ್ ಸಂಸ್ಮರಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕವಿ ದೇವಿದಾಸ ವಿರಚಿತ ‘ಚಿತ್ರಸೇನ ಕಾಳಗ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದಿನಾಂಕ 26 ಆಗಸ್ಟ್ 2024ರಂದು ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಮೈಂದ ದ್ವಿವಿಧ ಕಾಳಗ’, ದಿನಾಂಕ 27 ಆಗಸ್ಟ್ 2024ರಂದು…
ಧಾರವಾಡ : ಆಲೂರು ವೆಂಕಟರಾವ್ ಸಭಾಭವನದಲ್ಲಿ ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ‘ಅನಂತ ಸ್ವರ ನಮನ’ ಮೂರು ದಿನಗಳ ಸಂಗೀತೋತ್ಸವವು ದಿನಾಂಕ 23 ಆಗಸ್ಟ್ 2024ರಂದು ಪ್ರಾರಂಭವಾಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಇವರು ಮಾತನಾಡಿ “ಸಂಗೀತ ಹಾಗೂ ಸಾಹಿತ್ಯಕ್ಕೆ ಧಾರವಾಡ ಪ್ರಸಿದ್ಧವಾಗಿದೆ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಅನಂತ ಹರಿಹರ ನೀಡಿದ ಕೊಡುಗೆ ಅಪಾರವಾಗಿದೆ. ಅನಂತ ಹರಿಹರರು ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಅವರ ಮಾರ್ಗದರ್ಶನಲ್ಲಿ ಸಾಕಷ್ಟು ಕಲಾವಿದರಿಗೆ ಉತ್ತಮ ವೇದಿಕೆ ದೊರೆಯುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶವಾಯಿತು. ಅವರು ಯಾವುದೇ ಅಪೇಕ್ಷೆ ಇಲ್ಲದೆ ಸಂಗೀತಕ್ಕೆ ಸೇವೆ ಸಲ್ಲಿಸಿದ್ದಾರೆ. ಅದೇ ಮಾರ್ಗದಲ್ಲಿ ಯುವ ಕಲಾವಿದರು ಸಾಗಬೇಕು. ಅನಂತ ಹರಿಹರ ಅವರು ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರ ಹಾಗೂ ಶ್ರೋತೃವರ್ಗದ ಕೊಂಡಿಯಾಗಿದ್ದರು. ಯಶಸ್ವಿ ಸಂಘಟಕ, ಸಂಸ್ಕೃತಿಯ ರಾಯಭಾರಿಯಾಗಿ ಎಲ್ಲರ ಮನದಲ್ಲಿ…
ಕಾಸರಗೋಡು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ.) ಇದರ ವತಿಯಿಂದ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 26 ಆಗಸ್ಟ್ 2024ರಂದು ಸಂಜೆ 6-00 ಗಂಟೆಗೆ ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ. ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸಂಸ್ಮರಣೆಯನ್ನು ಶ್ರೀ ನಾರಾಯಣ ದೇಲಂಪಾಡಿ ಇವರು ನಡೆಸಿಕೊಡಲಿದ್ದು, ಸುಳ್ಯದ ಶ್ರೀ ವೆಂಕಟ ರಾಮ ಭಟ್ಟ ಇವರಿಗೆ ‘ಕೀರಿಕ್ಕಾಡು ವನಮಾಲ ಕೇಶವ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ‘ಶ್ರೀ ಕೃಷ್ಣ ಜನನ – ರಾಜಸೂಯ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ 112ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 23 ಆಗಸ್ಟ್ 2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕಟ್ಟಡ ಭವ್ಯವಾಗಿ ನಿಂತ ನಂತರ ಕೆಳಗಡೆ ಇರುವ ಭದ್ರ ಅಡಿಪಾಯ ಮರೆಯಾಗಿರುತ್ತದೆ. ಆದರೆ ಕಟ್ಟಡ ಸುಭದ್ರವಾಗಿ ನಿಲ್ಲಲು ಅಡಿಪಾಯವೇ ಮುಖ್ಯವೆನ್ನುವುದನ್ನು ನಾವು ಮರೆಯಬಾರದು. ಅದೇ ರೀತಿಯಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಪಾಯವನ್ನು ಭದ್ರಗೊಳಿಸಿದವರು. ಹೀಗಾಗಿ ಅವರ ಸ್ಮರಣೆಗೆ ವಿಶೇಷ ಮಹತ್ವವಿದೆ. ಕನ್ನಡ ಸಾಹಿತ್ಯ ಪರಿಷತ್ ಜೊತೆಗಿನ ವೆಂಕಟಸುಬ್ಬಯ್ಯನವರ ಒಡನಾಟಕ್ಕೆ ಸುದೀರ್ಘ ಪರಂಪರೆ ಇದೆ. ಮೈಸೂರು ಪ್ರಾಂತ್ಯಕ್ಕೆ ಹೆಚ್ಚು ಸೀಮಿತವಾಗಿದ್ದ ಪರಿಷತ್ತಿಗೆ ಅಖಿಲ ಕರ್ನಾಟಕದ ಸ್ವರೂಪ ನೀಡಿದ್ದೂ ಕೂಡ ಜಿ.ವಿ.ಯವರ ಹೆಗ್ಗಳಿಕೆ. ಜಿ.ವಿಯವರಿಗೆ ಎಲ್ಲಾ ರೀತಿಯ ಗೌರವಗಳು ಬಹಳ ವಿಳಂಬವಾಗಿಯೇ ಬಂದರೂ ಇದರ ಕುರಿತು ಎಂದಿಗೂ ಅವರು ಆಕ್ಷೇಪ ವ್ಯಕ್ತಪಡಿಸಲಿಲ್ಲ. ಕನ್ನಡದಲ್ಲಿ ನಿಘಂಟು ಎನ್ನುವ ಪದ ಕೇಳಿದ ಕೂಡಲೇ ನೆನಪಾಗುವುದೇ…
ಬೆಂಗಳೂರು : ಪ್ರಜಾಕವಿ, ಪ್ರಜಾಗಾಯಕ ಗದ್ದರ್ ಪ್ರಥಮ ಪರಿನಿಬ್ಬಾಣ ಕಾರ್ಯಕ್ರಮವನ್ನು ದಿನಾಂಕ 26 ಆಗಸ್ಟ್ 2024ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತಿ ಡಾ. ಎಲ್. ಹನುಮಂತಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಜನಪರ ಗಾಯಕರಾದ ರಾಯ ಚೂರಿನ ಶ್ರೀ ಅಂಬಣ್ಣ ಅರೋಲಿಕರ್ ಆಶಯ ನುಡಿಗಳನ್ನಾಡಲಿದ್ದಾರೆ. ಹಿರಿಯ ದಲಿತ ಹೋರಾಟಗಾರರಾದ ಶ್ರೀ ಎನ್. ವೆಂಕಟೇಶ್ ಇವರು ಪರಿನಿಬ್ಬಾಣದ ಚಾಲನೆ ಮಾಡಲಿದ್ದು, ಸಂಸ್ಕೃತಿ ಚಿಂತಕರಾದ ಕೋಲಾರದ ಶ್ರೀ ಕೋಟಿಗಾನಹಳ್ಳಿ ರಾಮಯ್ಯ ಇವರು ನುಡಿಯ ಗುಡಿಗಾರ ಗದ್ದರ್ ಗೆ ನುಡಿ ನಮನ ಸಲ್ಲಿಸಲಿರುವರು. ಸಂಸ್ಕೃತಿ ಚಿಂತಕರಾದ ಬೆಂಗಳೂರಿನ ಡಾ. ಬಂಜಗೆರೆ ಜಯಪ್ರಕಾಶ್ ಇವರು ‘ಗದ್ದರ್ ಹೋರಾಟದ ಬದುಕು ಬೌದ್ಧತ್ವದೆಡೆಗೆ ಪಯಣ’ ಎಂಬ ವಿಷಯ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ.
ಮಂಗಳೂರು : ಸಂಸ್ಕೃತ ಭಾರತೀ ಮಂಗಳೂರು ಇದರ ವತಿಯಿಂದ ಹತ್ತು ದಿನಗಳವರೆಗೆ ಉರ್ವ ಮಾರಿಗುಡಿ ದೇವಾಲಯದ ಆವರಣದಲ್ಲಿ ನಡೆದ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 20 ಆಗಸ್ಟ್ 2024ರಂದು ನಡೆಯಿತು. ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶಾರದಾ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ರಮೇಶ್ ಆಚಾರ್ಯ ಮಾತನಾಡಿ “ದೇವ ಭಾಷೆಯೆಂದು ಪರಿಗಣಿಸಲ್ಪಟ್ಟ ಸಂಸ್ಕೃತದ ಮಹತ್ವವನ್ನು ವಿವರಿಸಿ ಅದರ ಕಲಿಕೆ ಹಾಗೂ ಪ್ರಚಾರಕ್ಕೆ ಒತ್ತು ನೀಡಬೇಕು.” ಎಂದು ಕರೆ ನೀಡಿದರು. ಉರ್ವ ಮಾರಿಯಮ್ಮ ದೇವಾಲಯದ ಆಡಳಿತ ಮೊಕ್ತೇಸರರಾದ ಲಕ್ಷ್ಮಣ ಅಮೀನ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ ರಾಧಾಕೃಷ್ಣ ಅಶೋಕನಗರ ಮಾತನಾಡಿದರು. ಮಣ್ಣಗುಡ್ಡೆ ಗುರ್ಜಿ ಸಮಿತಿಯ ಅಧ್ಯಕ್ಷರಾದ ರಮಾನಂದ ಪಾಂಗಾಳ ಪ್ರಸ್ತಾವಿಸಿ, ಶಿಬಿರಾರ್ಥಿ ಗಣೇಶ್ ಶೆಣೈ ನಿರ್ವಹಿಸಿದರು. ಬಳಿಕ ಶಿಬಿರಾರ್ಥಿಗಳಿಂದ ಸಮೂಹ ಸಂಸ್ಕೃತ ಗೀತ ಗಾಯನ ಪ್ರಹಸನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಶಿಬಿರಾರ್ಥಿಯಾದ ದರ್ಶನ್ ನೀಡಿದ ಶಿಬಿರದ ಅನುಭವ ಕಥಾನಕದೊಂದಿಗೆ ಈ ಶಿಬಿರ ಮುಕ್ತಾಯಗೊಂಡಿತು.…
ಮಂಡ್ಯ : ರಂಗ ಬಂಡಿ ಮಳವಳ್ಳಿ ಹಮ್ಮಿಕೊಂಡ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ರಂಗೋತ್ಸವದ ಉದ್ಘಾಟನಾ ಸಮಾರಂಭವು 21 ಆಗಸ್ಟ್ 2024ರಂದು ಮಳವಳ್ಳಿಯ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಂಗ ಸನ್ಮಾನ ಸ್ವೀಕರಿಸಿದ ರಂಗಭೂಮಿ ಹಾಗೂ ಚಲನಚಿತ್ರ ರಂಗದ ಹಿರಿಯ ನಟಿ ಉಮಾಶ್ರೀ ಮಾತನಾಡಿ “ಪೌರಾಣಿಕ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲಘಟ್ಟದಲ್ಲಿ ಚಂದನವನಕ್ಕೆ ಮೊಟ್ಟಮೊದಲ ಬಾರಿಗೆ ಕಾಲಿಟ್ಟ ಮಳವಳ್ಳಿ ಸುಂದ್ರಮ್ಮ ರಂಗಭೂಮಿ ಕಲೆಯಲ್ಲಿ ಹೊಸ ಇತಿಹಾಸಕ್ಕೆ ನಾಂದಿಯಾಡಿದ ಕಲಾವಿದೆಯಾಗಿದ್ದರು. 1905ರಲ್ಲಿ ಮಳವಳ್ಳಿಯಲ್ಲಿ ಜನಿಸಿದ ಸುಂದ್ರಮ್ಮ ತಮ್ಮ ಪ್ರತಿಭೆಯ ಮೂಲಕ ನಾಟಕ ರಂಗ ಪ್ರವೇಶ ಮಾಡಿದರು. ಉತ್ತರ ಕರ್ನಾಟಕದಲ್ಲಿ ಪ್ರಥಮ ಮಹಿಳಾ ನಾಟಕ ಕಂಪನಿಯನ್ನು ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ನಾಟಕ ರಂಗದ ಸಾಧನೆಗೆ “ನಾಟ್ಯ ಶಾರದೆ” ಎಂಬ ಬಿರುದು ನೀಡಿ ಸನ್ಮಾನಿಸಲಾಗಿತ್ತು. ಜೊತೆಗೆ ಹಲವು ಕನ್ನಡ ಚಲನಚಿತ್ರಗಳಲ್ಲಿಯೂ ತಮ್ಮಅಭಿನಯದ ಮೂಲಕ ಗಮನಸೆಳೆದಿದ್ದಾರೆ. ಜಾನಪದ, ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸುವ ಹಾಗೂ ಬೆಳೆಸುವ ಜವಾಬ್ದಾರಿ…
ಆಂಧ್ರಪ್ರದೇಶ: ಆಂಧ್ರಪ್ರದೇಶದ ಮಂತ್ರಾಲಯದಲ್ಲಿರುವ ಜಗದ್ಗುರು ಶ್ರೀಮದ್ ಮಧ್ವಾಚಾರ್ಯ ಮೂಲ ಮಠ ಸಂಸ್ಥಾನಂ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ‘ನೃತ್ಯೋಹಂ’ ಭರತನಾಟ್ಯ ಕಾರ್ಯಕ್ರಮ 19 ಆಗಸ್ಟ್ 2024ರಂದು ನಡೆಯಿತು. ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 353ನೇ ಆರಾಧನಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕಲಾ ಅಕಾಡೆಮಿ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ಮಾರ್ಗದರ್ಶನದಲ್ಲಿ ನೃತ್ಯ ತಂಡದ ಕಲಾವಿದರು ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದರು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ 108 ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ನೃತ್ಯ ತಂಡದ ಕಲಾವಿದರಿಗೆ ಫಲಮಂತ್ರಾಕ್ಷತೆ ನೀಡಿ ಹರಸಿದರು. ವೇದಿಕೆಯಲ್ಲಿ ಶ್ರೀಮಠದ ಆನಂದ ರಾವ್, ಪದ್ಮನಾಭ ಆಚಾರ್, ಜಯಪ್ರಕಾಶ್ ಮತ್ತಿತರರಿದ್ದರು. ಕಲಾ ತಂಡದ ಕಲಾವಿದರಾದ ಹಂಸಾನಂದಿನಿ, ಪೃಥ್ವಿಶ್ರೀ, ಶ್ರದ್ಧಾ ಎ., ತನುವಿ, ಫಲ್ಗುಣಿ ತೇಜಸ್ವೀ ರಾಜ್, ಭಾರತೀ, ನಿಹಾರಿಕಾ, ಶ್ರೀಮಾ, ಧನ್ಯಶ್ರೀ, ವೈಷ್ಣವೀ ವಿನಯ್ ಶರ್ಮಾ ನೃತ್ಯ ಪ್ರದರ್ಶನ ನೀಡಿದರು.
ಬದಿಯಡ್ಕ: ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ನೀರ್ಚಾಲು ಇವರ ನೇತೃತ್ವದಲ್ಲಿ ಅಗ್ರಮಾನ್ಯ ಕಲಾವಿದರ ಕೂಡುವಿಕೆಯ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು 25 ಆಗಸ್ಟ್ 2024ರಂದು ಅಪರಾಹ್ನ 2 ಗಂಟೆಗೆ ನೀರ್ಚಾಲು ಶಾಲಾ ಸಭಾಂಗಣದಲ್ಲಿ ಜರಗಲಿದೆ. ಕಾರ್ಯಕ್ರಮವನ್ನು ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಉದ್ಘಾಟಿಸಲಿದ್ದಾರೆ. ‘ಊರ್ವಶಿ ಶಾಪ’ ಹಾಗೂ ‘ಉತ್ತರನ ಪೌರುಷ’ ಪ್ರಸಂಗದ ತಾಳಮದ್ದಳೆ ನಡೆಯಲಿದ್ದು, ಭಾಗವತರಾಗಿ ಬಲಿಪ ಶಿವಶಂಕರ ಭಟ್ ಹಾಗೂ ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ ಮದ್ದಳೆಯಲ್ಲಿ ಗಣೇಶ್ ಭಟ್ ಬೆಳಾಲು, ಲಕ್ಷ್ಮೀಶ ಬೇಂತ್ರೋಡಿ ಜೊತೆಗೂಡಲಿದ್ದಾರೆ. ಅರ್ಥದಾರಿಗಳಾಗಿ ಸರ್ವ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ಪವನ್ ಕಿರಣೆರೆ, ಪಕಳಕುಂಜ ಶ್ಯಾಮ ಭಟ್, ವೈಕುಂಠ ಹೇರ್ಳೆ, ಬಾಲಕೃಷ್ಣ ಆಚಾರ್ಯ ನೀರ್ಚಾಲು ಪಾತ್ರನಿರ್ವಹಣೆ ಮಾಡಲಿದ್ದಾರೆ.