Author: roovari

ಮಂಗಳೂರು : ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನದ ವತಿಯಿಂದ ರಾಮಕೃಷ್ಣ ಮಠದ ಸಹಯೋಗದೊಂದಿಗೆ ವಿವೇಕಾನಂದ ಸಭಾಂಗಣದಲ್ಲಿ ದಿನಾಂಕ : 15-07-2023ರಂದು ‘ದಾಸ ಸೌರಭ’ ಹರಿದಾಸರ ಕೃತಿ ಕೀರ್ತನೆಗಳ ಗಾಯನ ಕಾರ್ಯಕ್ರಮ ಜರಗಿತು. ಗಾಯಕಿ ಸುರಮಣಿ ಮಹಾಲಕ್ಷ್ಮೀ ಶೆಣೈ ಅವರು ಪುರಂದರದಾಸರು, ಕನಕದಾಸರು, ವಿಜಯದಾಸರು, ವಾದಿ ರಾಜ ಗುರುಸಾರ್ವಭೌಮರ ಕೃತಿ ಸೇರಿದಂತೆ ಅನೇಕ ಹರಿದಾಸರ ಕೀರ್ತನಗಳನ್ನು ಪ್ರಸ್ತುತಪಡಿಸಿದರು. ತಬ್ಲಾದಲ್ಲಿ ರಾಜೇಶ್ ಭಾಗವತ್, ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಹಾಗೂ ತಾಳದಲ್ಲಿ ದಾಮೋದರ್ ಭಾಗವತ್ ಅವರು ಸಾಥ್ ನೀಡಿದರು. ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಕಾರ್ಯಕ್ರಮ ಪ್ರಾಯೋಜಿಸಿತ್ತು. ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಗುರುರಾಜ್ ಸ್ವಾಗತಿಸಿ, ಪ್ರಸ್ತಾವಿಸಿದರು.

Read More

ಉಡುಪಿ : ಕಾಪು ದಂಡತೀರ್ಥ ಪ್ರೌಢಶಾಲೆಯಲ್ಲಿ ದಿನಾಂಕ : 15-07-2023ರಂದು ಯಕ್ಷ ಶಿಕ್ಷಣ ತರಗತಿಯನ್ನು ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಅವರನ್ನು ಗೌರವಿಸಲಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್, ಉಪಾಧ್ಯಕ್ಷ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಯೂ ಆದ ವಿ.ಜಿ.ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾ ಸಂಸ್ಥೆಯ ಸಂಚಾಲಕರಾದ ಡಾ.ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಯಕ್ಷ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಯಕ್ಷ ಗುರುಗಳಾದ ಮಂಜುನಾಥ್ ಕುಲಾಲ್, ಉಭಯ ಶಾಲಾ ಮುಖ್ಯ ಶಿಕ್ಷಕಿಯರು ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ಮೂವತ್ತಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಯಕ್ಷಗಾನ ಕಲಿಯಲು ಆಸಕ್ತರಾಗಿರುವುದು ಸಂತಸದ ವಿಚಾರ.

Read More

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ಹಾಗೂ ಮಂಡೆಚ್ಚ ಪ್ರಶಸ್ತಿ ಸಮಿತಿ ಆಶ್ರಯದಲ್ಲಿ ಕಟೀಲು ಸರಸ್ವತೀ ಸದನದಲ್ಲಿ ದಿನಾಂಕ : 15-07-2023ರಂದು ಪ್ರಸಿದ್ಧ ಭಾಗವತರಾಗಿದ್ದ ದಾಮೋದರ ಮಂಡೆಚ್ಚ ಸ್ಮರಣಾರ್ಥ ‘ಮಂಡೆಚ್ಚ ಪ್ರಶಸ್ತಿ’ ಪ್ರದಾನ ಮತ್ತು ‘ಕುಬಣೂರು ಸಂಸ್ಮರಣೆ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಂಡೆಚ್ಚ ಪ್ರಶಸ್ತಿಯನ್ನು ಸ್ವೀಕರಿಸಿದ ಖ್ಯಾತ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್ ಮಾತನಾಡುತ್ತಾ “ಯಕ್ಷಗಾನೀಯ ಚೌಕಟ್ಟು ಪಾಲಿಸಿಕೊಂಡು ಕಲೆಯನ್ನು ಗೌರವದಿಂದ ಬೆಳೆಸಿದಾಗ ಹಿಮ್ಮೇಳ, ಮುಮ್ಮೇಳಗಳು ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಉಳಿಯಲು ಸಾಧ್ಯ” ಎಂದು ಹೇಳಿದರು. ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ್ ಶೆಟ್ಟಿ ಪ್ರಶಸ್ತಿಯನ್ನು ಪ್ರಾಯೋಜಿಸಿದ್ದು ಪ್ರಶಸ್ತಿಯು ರೂ.10,000/- ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳನ್ನು ಒಳಗೊಂಡಿತ್ತು. ಕಟೀಲು ದೇವಳದ ಭಾಗವತ ಹಾಗೂ ಪ್ರಸಂಗಕರ್ತರಾಗಿದ್ದ ಕುಬಣೂರು ಶ್ರೀಧರ ರಾವ್ ಅವರ ಸಂಸ್ಮರಣೆ ನಡೆಯಿತು. ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಂಡೆಚ್ಚ ಪ್ರಶಸ್ತಿ ಪುರಸ್ಕೃತ ಮದ್ದಳೆಗಾರ ಪದ್ಯಾಣ…

Read More

ಕರಾವಳಿಯ ಗಂಡು ಕಲೆ ಯಕ್ಷಗಾನ. ಇಂತಹ ಶ್ರೀಮಂತ ಕಲೆಯಲ್ಲಿ ಅನೇಕ ಯುವ ಕಲಾವಿದರು, ಹವ್ಯಾಸಿ ಕಲಾವಿದರು, ಮಹಿಳಾ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶನ ನೀಡುತ್ತಿದ್ದಾರೆ. ಇಂದು ನಾವು ಪರಿಚಯ ಮಾಡಲು ಹೊರಟ ಕಲಾವಿದರು ವೃತ್ತಿಯಲ್ಲಿ ಡಾಕ್ಟರ್, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆಯಾಗಿ ಮಿಂಚುತ್ತಿರುವವರು ಡಾ.ವರ್ಷ ಶೆಟ್ಟಿ. 18.07.1991ರಂದು ಶಶಿಕುಮಾರ್ ಹಾಗೂ ವಸುಧಾ ಶೆಟ್ಟಿ ಇವರ ಮಗಳಾಗಿ ಜನನ. ಡಾಕ್ಟರ್ ಹಾಗೂ PG in Hospital Administration ಇವರ ವಿದ್ಯಾಭ್ಯಾಸ. ಪ್ರಸ್ತುತ Ph.D in Hospital Administration ಮಾಡುತ್ತಿದ್ದಾರೆ. ಚಿಕ್ಕಮ್ಮನವರು ಪ್ರಮದಾ ಶೆಟ್ಟಿ, ಶುಭದ ಶೆಟ್ಟಿ ಹಾಗೂ ತಾಯಿ ವಸುಧಾ ಶೆಟ್ಟಿ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ರಕ್ಷಿತ್ ಶೆಟ್ಟಿ ಪಡ್ರೆ ಹಾಗೂ ಗಣೇಶಪುರ ಗಿರೀಶ್ ನಾವಡ ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಭಾಗವತರಲ್ಲಿ ಪ್ರಸಂಗದ ಪಾತ್ರದ ಕುರಿತು ಕೇಳಿ, ಚಿಕ್ಕಮ್ಮನವರಲ್ಲಿ ಪ್ರಸಂಗದ ಮಾಹಿತಿ ಪಡೆದುಕೊಂಡು ಹಾಗೂ ಸಹ ಕಲಾವಿದರ ಬಳಿ…

Read More

ಕುಂದಾಪುರ : ಕುಂದಾಪುರದ ‘ಶಬ್ದಗುಣ’ ಸಭಾಂಗಣದಲ್ಲಿ ದಿನಾಂಕ 16-07-2023ರಂದು ಕವಿ ವಸಂತ ಬನ್ನಾಡಿಯವರ ಎರಡು ಕವನ ಸಂಕಲನಗಳಾದ ‘ಊರು ಮನೆ ಉಪ್ಪು ಕಡಲು’ ಮತ್ತು ‘ಬೆಳದಿಂಗಳ ಮರ’ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂತೋಷ್ ನಾಯಕ್ ಪಟ್ಲ ಅವರು ಮಾತನಾಡುತ್ತಾ “ನಾನು ಗೌರವಿಸುವ ಕವಿ ವಸಂತ ಬನ್ನಾಡಿಯವರ ಎರಡು ಕವನ ಸಂಕಲನಗಳ ಬಿಡುಗಡೆಯಲ್ಲಿ ಭಾಗಿಯಾದ ಸಂತಸವಿಂದು. ಕವಿಯೊಬ್ಬ ತನ್ನ ಕಾಲದ ಕವಿಯಾಗುವುದು ಹೀಗೇನೇ ಏನೋ….. ಹಾಗಾಗಿಯೇ ಬನ್ನಾಡಿ ನಮ್ಮ ಕಾಲದ ಕವಿ” ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ಹೇರ್ಳೆ ಅವರು ‘ಬೆಳದಿಂಗಳ ಮರ’ ಸಂಕಲನದ ‘ಮಗುಚುವ ಕಡಲು’ ಹಾಗೂ ಸಂತೋಷ್ ನಾಯಕ್ ಪಟ್ಲ ಅವರು ‘ಊರು ಮನೆ ಉಪ್ಪು ಕಡಲು’ ಸಂಕಲನದ ‘ಬದಲಾದ ಕಾಲದಲ್ಲಿ’ ಕವನ ವಾಚಿಸಿದರು. ಈ ಕಾರ್ಯಕ್ರಮದಲ್ಲಿ ಉದಯ ಗಾಂವ್ಕರ್, ಸದಾನಂದ ಬೈಂದೂರು, ವಾಸುದೇವ ಗಂಗೇರ, ದಿನೇಶ ಹೆಗ್ಡೆ, ಶಶಿಧರ ಹೆಮ್ಮಾಡಿ ಮತ್ತು ತಿಮ್ಮಪ್ಪ ಗುಲ್ವಾಡಿಯವರು ಉಪಸ್ಥಿತರಿದ್ದರು. ಕವಿಯ ಬಗ್ಗೆ : ಉಡುಪಿ…

Read More

ಮುಂಬಯಿ : ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯವು ದಿನಾಂಕ : 21-07-2023ರಂದು ಶುಕ್ರವಾರ ನಾಲ್ಕು ಕೃತಿಗಳ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಡಾ.ಎಸ್.ಎಲ್ ಭೈರಪ್ಪನವರೊಂದಿಗೆ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಪದ್ಮಭೂಷಣ ಪುರಸ್ಕೃತರಾದ ಡಾ.ಎಸ್.ಎಲ್. ಭೈರಪ್ಪನವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ‘ವಿಶ್ವಮಾನ್ಯ ಲೇಖಕರಾಗಿ ಭೈರಪ್ಪ’ ಈ ವಿಷಯದ ಕುರಿತು ಪುಣೆಯ ಖ್ಯಾತ ಸಾಹಿತಿ, ವಿಮರ್ಶಕರಾಗಿರುವ ಡಾ.ಸುಪ್ರಿಯಾ ಸಹಸ್ರಬುದ್ಧೆ ಅವರು ವಿಶೇಷ ಉಪನ್ಯಾಸವನ್ನು ನೀಡುವರು. ಡಾ.ಎಸ್.ಎಲ್ ಭೈರಪ್ಪ ಡಾ.ಉಮಾ ರಾಮರಾವ್ ಡಾ.ಜಿ.ಎನ್. ಉಪಾಧ್ಯ ಕಲಾ ಭಾಗ್ವತ್ ಡಾ.ಸುಪ್ರಿಯಾ ಸಹಸ್ರಬುದ್ಧೆ – ವಿಶೇಷ ಉಪನ್ಯಾಸ ಇದೇ ಸಂದರ್ಭದಲ್ಲಿ ನಾಲ್ಕು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾಗಿರುವ ಡಾ.ಉಮಾ ರಾಮರಾವ್ ಅವರು ಸಂಪಾದಿಸಿರುವ ‘ಭಾಷೆಗಳ ಗಡಿಗೆದ್ದ ಭಾರತೀಯ’, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್. ಉಪಾಧ್ಯ ಅವರ ‘ಮುಂಬಯಿ ಕನ್ನಡ ಪರಿಸರ’, ಡಾ.ಉಮಾ ರಾಮರಾವ್ ಅವರ ‘ಸಂಶೋಧನೆಯಲ್ಲಿ ಶಿಸ್ತು ಮತ್ತು…

Read More

ಮಂಗಳೂರು : ಸ್ವಸ್ತಿಕ ನ್ಯಾಶನಲ್ ಸ್ಕೂಲ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್, ಅನಿರ್ವೇದ ಮಾನಸಿಕ ಆರೋಗ್ಯ ಸಂಪನ್ಮೂಲ ಕೇಂದ್ರ ಮತ್ತು ರೋಟರಿ ಮಂಗಳೂರು ಡೌನ್‌ಟೌನ್ ಸಹಯೋಗದಲ್ಲಿ ದಿನಾಂಕ : 13-07-2023, ಗುರುವಾರ ಕೊಡಿಯಾಲಬೈಲಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾದ ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ ಸರಣಿ-7ರಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಮಾತಾ ಬಿ. ಮಂಜಮ್ಮ ಜೋಗತಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು “ಲಿಂಗತ್ವ ಅಲ್ಪಸಂಖ್ಯಾತರು ಜನರ ಅನುನುಕಂಪದ ಬದಲಾಗಿ, ಸಮಾಜದಲ್ಲಿ ಎಲ್ಲರೊಡನೆ ಒಂದಾಗಿ ಬಾಳುವ ನಿಟ್ಟಿನಲ್ಲಿ ಏನಾದರೊಂದು ಉದ್ಯೋಗವನ್ನು ನಿರೀಕ್ಷಿಸುತ್ತಾರೆ. ಸರ್ಕಾರವೇ ಉದ್ಯೋಗ ಕೊಡಬೇಕು ಎಂದೇನಿಲ್ಲ. ಈ ಭಾಗದಲ್ಲಿ ಸಾಕಷ್ಟು ಉದ್ದಿಮೆಗಳು ಸಂಘ ಸಂಸ್ಥೆಗಳು ಇದ್ದು, ಉದ್ಯೋಗಾವಕಾಶಕ್ಕೆ ಕೊರತೆ ಇಲ್ಲ. ಆ ನಿಟ್ಟಿನಲ್ಲಿ ಒಳ್ಳೆಯ ಮನಸ್ಸುಗಳು ಹೆಚ್ಚಾಗಲಿ. ಹೆಣ್ಣಿನ ಮನಸ್ಸು, ಗಂಡಿನ ದೇಹ ಹೊಂದಿರುವ ನಾವು ಹೆಣ್ಮಕ್ಕಳಿಗಿಂತಲೂ ದುಪ್ಪಟ್ಟು ಕೆಲಸ ಮಾಡಬಲ್ಲೆವು. ನಮ್ಮಲ್ಲಿರುವ ಸಾಕಷ್ಟು ಮಂದಿ ವಿದ್ಯಾವಂತರು, ಅವಿದ್ಯಾವಂತರ ಅರ್ಹತೆಗೆ ತಕ್ಕಂತೆ ಉದ್ಯೋಗ ನೀಡಬಹುದು. ಯಾವುದೇ ಕೆಲಸವಾದರೂ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಸ್ಯಾಂಡ್ಸ್ ಪಿಟ್ ಬೆಂಗ್ರೆ ಇಲ್ಲಿನ ವಿದ್ಯಾರ್ಥಿಗಳಿಗೆ ಕನ್ನಡ ಕವನ ಗಾಯನ ಸ್ಪರ್ಧೆಯು ದಿನಾಂಕ 15-07-2023 ರಂದು ನಡೆಯಿತು . ಈ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಹಾಗೂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಸಾಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಶ್ರೀ ಮಂಜುನಾಥ ಎಸ್. ರೇವಣ್ಕರ್ ಇವರು “ಪ್ರತಿ ಶಾಲೆಯಲ್ಲಿಯೂ ಕನ್ನಡದ ಕಂಪನ್ನು ಹರಡುವ ಪ್ರಯತ್ನದಲ್ಲಿ ದ.ಕ. ಜಿಲ್ಲಾ ಕಸಾಪ ಮಂಗಳೂರು ತಾಲೂಕು ಘಟಕ ತೊಡಗಿಕೊಳ್ಳಲಿದೆ.” ಎಂದು ಹೇಳಿದರು. ಕನ್ನಡ ಭಾವಗೀತೆಗಳನ್ನು ಹಾಡುವ ಮಕ್ಕಳ ಉತ್ಸಾಹವನ್ನು ಕೊಂಡಾಡಿದ ಅವರು ಅಧ್ಯಯನ, ಪ್ರತಿಭೆ ಮತ್ತು ಹವ್ಯಾಸಗಳ ಮೂಲಕ ಜೀವನದಲ್ಲಿ ಯಶಸ್ಸು ಗಳಿಸುವ ದಾರಿಯನ್ನು ತಿಳಿಸಿಕೊಟ್ಟರು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶ್ರೀ ರಾಕೇಶ್ ವಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಗೀತ ಗಾಯನ ಸ್ಪರ್ಧೆ 7ನೇ ತರಗತಿ ವಿಭಾಗದಲ್ಲಿ ನವ್ಯ (ಪ್ರಥಮ), ಗಂಗಮ್ಮ (ದ್ವಿತೀಯ) ಗೌತಮ್ (ತೃತೀಯ),…

Read More

ಕಿನ್ನಿಗೋಳಿ : ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ನಲ್ಲಿ ಈ ಶೈಕ್ಷಣಿಕ ವರ್ಷದ ಉಚಿತ ನೃತ್ಯ ತರಗತಿ ಕಾರ್ಯಕ್ರಮದ ಉದ್ಘಾಟನೆಯು 10-07-2023 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಿನ್ನಿಗೋಳಿಯ ಶಿವಪ್ರಣಾಮ್ ನೃತ್ಯ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಅನ್ನಪೂರ್ಣ ರಿತೇಶ್ “ವಿದ್ಯೆ ನಮ್ಮನ್ನು ಬಾಹ್ಯವಾಗಿ ರೂಪಿಸಿ ಬದುಕನ್ನು ನೀಡುತ್ತದೆ. ಕಲೆ ನಮ್ಮ ಅಂತಃ ರಂಗವನ್ನು ಪ್ರಚೋದಿಸಿ ಹೃದಯವನ್ನು ಅರಳಿಸುತ್ತದೆ. ಬಾಹ್ಯ ಹಾಗೂ ಅಂತಃ ರಂಗದ ವೃದ್ಧಿಯಿಂದ ಜೀವನ ಸಮೃದ್ಧವಾಗುತ್ತದೆ ಹಾಗೂ ಪ್ರಬುದ್ಧವಾಗುತ್ತದೆ. ಆ ಕಡೆಗೆ ಸಾಗುವ ಮನಸ್ಸು, ಶಿಕ್ಷಣ ಮತ್ತು ನೃತ್ಯಕಲೆಯಿಂದ ಇದು ಸಾಧ್ಯವಾಗಲಿದೆ. ಜೀವನದ ಪರಿಪೂರ್ಣತೆಗಾಗಿ ನೃತ್ಯಕಲೆ ಪೂರಕವಾಗಬಲ್ಲದು” ಎಂದು ಶುಭ ಹಾರೈಸಿದರು. ಶ್ರೀ ಶಾರದಾ ಸೊಸೈಟಿಯ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, “ನೃತ್ಯಕಲೆ ನಮ್ಮ ಹೃದಯದ ಭಾಷೆ. ಈ ಕಲೆಯಲ್ಲಿ ಎಲ್ಲಾ ಶಿಕ್ಷಣವೂ ಇದೆ. ಹಾಗಾಗಿ ಶಿಕ್ಷಣದಲ್ಲಿ ನೃತ್ಯಕಲೆ ಇರಲೇಬೇಕು. ಇದರಿಂದ ಹೃದಯವಂತ ಮತ್ತು ಸುಸಂಸ್ಕೃತ ವ್ಯಕ್ತಿಗಳ ಪೀಳಿಗೆಯ ನಿರ್ಮಾಣ ಸಾಧ್ಯವಾಗುತ್ತದೆ.” ಎಂದು…

Read More

ಮಡಿಕೇರಿ: ದಿನಾಂಕ 14-07-2023 ರಂದು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಶ್ರೀಮತಿ ಕಡ್ಲೇರ ತುಳಸಿ ಮೋಹನ್ ರವರನ್ನು ಆಯ್ಕೆಗೊಳಿಸಲಾಗಿದೆ. ಗೌರವ ಕಾರ್ಯದರ್ಶಿಗಳಾಗಿ ಪುದಿಯನೆರವನ ರಿಶೀತ್ ಮಾದಯ್ಯ ಮತ್ತು ಶ್ರೀಮತಿ ಬಾಳೆಯಡ ದಿವ್ಯ ಮಂದಪ್ಪ ಹಾಗೂ ಕೋಶಾಧಿಕಾರಿಯಾಗಿ ಸಿದ್ದರಾಜು ಬೆಳ್ಳಯ್ಯರವರನ್ನು ನೇಮಕಗೊಳಿಸಲಾಗಿದೆ. ಸಂಘಟನಾ ಕಾರ್ಯದರ್ಶಿಯಾಗಿ ಚೊಕ್ಕಾಡಿ ಪ್ರೇಮಾ ರಾಘವಯ್ಯ ಮತ್ತು ತಳೂರು ದಿನೇಶ್ ಕರುಂಬಯ್ಯರವರನ್ನು ಆಯ್ಕೆಗೊಳಿಸಲಾಗಿದ್ದು ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಎಚ್.ಟಿ. ಅನಿಲ್, ಮಹಿಳಾ ಪ್ರತಿನಿಧಿಗಳಾಗಿ ಶ್ರೀಮತಿ ಶೋಭಾ ಸುಬ್ಬಯ್ಯ, ಶ್ರೀಮತಿ ಗೌರಮ್ಮ ಮಾದಮಯ್ಯ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಬಿ.ಎಲ್. ಸಂದೇಶ್ ಮತ್ತು ಶ್ರೀಮತಿ ಎಚ್.ಪಿ. ಜಯಮ್ಮ, ಪರಿಶಿಷ್ಟ ಪಂಗಡ ಪ್ರತಿನಿಧಿಯಾಗಿ ಬಿ.ಎಸ್. ರಂಗಪ್ಪ,  ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಎಂ.ಎಂ. ಅಬ್ದುಲ್ಲಾ, ನಿಕಟ ಪೂರ್ವ ಅಧ್ಯಕ್ಷರಾಗಿ ಶ್ರೀ ಅಂಬೇಕಲ್ ನವೀನ್ ಕಾರ್ಯನಿರ್ವಹಿಸಲಿದ್ದಾರೆ. ಪದನಿಮಿತ್ತ ಪ್ರತಿನಿಧಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಡಿಕೇರಿ. ಶಿಕ್ಷಣಾಧಿಕಾರಿಗಳು ಮಡಿಕೇರಿ ತಾಲೂಕು ಕ್ಷೇತ್ರ, ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲರು, ಶ್ರೀ ರಾಜರಾಜೇಶ್ವರಿ…

Read More