Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಕಾಸರಗೋಡಿನ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದಿಂದ ನಿರ್ಮಿಸಲ್ಪಟ್ಟ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನವು ದಿನಾಂಕ 26-12-2023ರಂದು ಲೋಕಾರ್ಪಣೆಗೊಂಡಿತು. ಗಡಿನಾಡ ಕವಿ, ಪಾರ್ತಿ ಸುಬ್ಬರ ಯಕ್ಷ ಪ್ರಸಂಗಗಳನ್ನು ತಾಳೆ ಗರಿಗಳಲ್ಲಿ ಸಂಗ್ರಹಿಸಿ ಪುಸ್ತಕ ರೂಪಕ್ಕಿಳಿಸಿದ ಮಹಾನುಭಾವ ದಿ. ಸಿರಿಬಾಗಿಲು ವೆಂಕಪ್ಪಯ್ಯರ ಸ್ಮರಣಾರ್ಥ ಅವರ ಮಗ ಧರ್ಮಸ್ಥಳ ಮೇಳದ ಮುಖ್ಯ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ಭಗೀರಥ ಯತ್ನದ ಫಲ ಈ ಭವ್ಯ ಭವನ. ಯಕ್ಷಗಾನೀಯ ಮತ್ತು ಇನ್ನಿತರ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರವನ್ನಾಗಿಸಬೇಕೆಂಬ ಮಹದಾಸೆಯಿಂದ ನಿರ್ಮಾಣಗೊಂಡ ಈ ಭವನದಲ್ಲಿ ಸುಸಜ್ಜಿತವಾದ ಸಭಾಂಗಣ, ಗ್ರಂಥಾಲಯ, ಮ್ಯೂಸಿಯಂ, ವಿಶ್ರಾಂತಿ ಕೊಠಡಿಗಳಿದ್ದು ಈಗಾಗಲೇ ಇಲ್ಲಿ ಅನೇಕ ಕಾರ್ಯಕ್ರಮಗಳು ನಡೆದಿವೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಭವನವನ್ನು ದೀಪ ಪ್ರಜ್ವಲನಗೊಳಿಸಿ, ದಿ. ವೆಂಕಪ್ಪಯ್ಯರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಲೋಕಾರ್ಪಣೆಗೊಳಿಸಿದರು. “ಕಾಸರಗೋಡು ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯನ್ನಾಗಿ ನೀಡಿದ ನೆಲ. ಧರ್ಮಸ್ಥಳ ಮೇಳದಲ್ಲೂ ಇಲ್ಲಿನವರು ಅನೇಕರು ಇದ್ದರು, ಈಗಲೂ ಇದ್ದಾರೆ.…
ಮೂಲ್ಕಿ : ಕಾರ್ನಾಡಿನಲ್ಲಿ ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ.ಕ. ಜಿಲ್ಲಾ ಕ.ಸಾ.ಪ. ಮೂಲ್ಕಿ ತಾಲೂಕು ಘಟಕ ಆಯೋಜಿಸಿದ ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 27-12-2023ರಂದು ನಡೆಯಿತು. ಈ ಸಮ್ಮೇಳನ ಉದ್ಘಾಟಿಸಿದ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು “ಆಧುನೀಕರಣದ ಭರಾಟೆಯಲ್ಲಿ ಅಂಗ್ಲ ಮಾಧ್ಯಮದ ಪ್ರಭಾವದಿಂದ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ಬಂದಿದೆ. ಕನ್ನಡ ಮತ್ತು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು” ಎಂದರು. ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ “ಮೂಲ್ಕಿ ತಾಲೂಕಿನಲ್ಲಿ ಒಂಭತ್ತು ಯಕ್ಷಗಾನ ಮೇಳಗಳು ತಿರುಗಾಟ ನಡೆಸುತ್ತಿದ್ದು, ಕನ್ನಡ ಸಾಹಿತ್ಯಕ್ಕೆ ಭಾಷೆಗೆ ದೊಡ್ಡ ಕೊಡುಗೆ ಸಿಕ್ಕಿದೆ. ಮೂಲ್ಕಿಯಲ್ಲಿ ಆಯುರ್ವೇದ ಗಿಡಗಳಿದ್ದ ಕಾರಣ ಮೂಲಿಕಾ ಪುರವಾಗಿ ಪ್ರಸಿದ್ದವಾಗಿದೆ, ಮೂಲ್ಕಿ ತಾಲೂಕು ಅನೇಕ ಕವಿಗಳನ್ನು ಕೊಟ್ಟಿದೆ. ಇಲ್ಲಿನ ಜನಪದ ಮೌಖಿಕ ಸಂಪತ್ತು, ಕಂಬಳಗಳು, ದೇವಾಲಯಗಳು, ಪತ್ರಿಕೆಗಳು ಮಹತ್ವದ್ದು. ಏಳಿಂಜೆ, ಸೀಮಂತೂರು, ಪೊಸ್ರಾಲು, ಪಾವಂಜೆ, ಕೊಡೆತ್ತೂರು, ಬಪ್ಪನಾಡು…
ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯ ಬಯಲಾಟ ಕಾರ್ಯಕ್ರಮವು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ದಿನಾಂಕ 28-12-2023ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಪಣಂಬೂರು ನಂದನೇಶ್ವರ ದೇವಳದ ಪ್ರಧಾನ ಅರ್ಚಕರಾದ ಶ್ರೀ ದೇವದತ್ತ ಶರ್ಮರು “ಯಕ್ಷಗಾನ ಕಲೆ ಈಗ ಸರ್ವಮಾನ್ಯವಾಗಿದೆ. ಹಿಂದಿಗಿಂತಲೂ ಹೆಚ್ಚಿನ ರಾಜ ಗಾಂಭೀರ್ಯದಿಂದ ಮೆರೆದು ಸಂಪನ್ನಗೊಳ್ಳುತ್ತಿದೆ. ಕಲಾಪೋಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಕಲೆಯನ್ನು ಗೌರವ ಭಾವನೆಯಿಂದ ಕಂಡು ಸಂಭ್ರಮಿಸುತ್ತಿದ್ದಾರೆ. ಕಲಾವಿದರೂ ಹೊಸ ರೀತಿಯಲ್ಲಿ ಹಳೆಯ ಪರಂಪರೆಯನ್ನು ರಸಿಕರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇದು ಕಲೆಗೆ-ಕಲಾವಿದರಿಗೆ ನೀಡುವ ಪ್ರೋತ್ಸಾಹ. ಇಂದು ಸರಕಾರವು ಸಂಸ್ಕೃತಿ ಇಲಾಖೆಯ ಮೂಲಕ ಕಲೆಗೆ ಬೇರೆ ಬೇರೆ ರೀತಿಯಲ್ಲಿ ಸಹಕರಿಸುತ್ತಾ ಬರುತ್ತಿರುವುದು ಸ್ವಾಗತಾರ್ಹ. ಇಂದಿನ ಕಾರ್ಯಕ್ರಮವನ್ನು ಸಂಘಟಿಸಿದ ಶ್ರೀ ರವೀಂದ್ರ ಪೂಜಾರಿಯವರಿಗೆ ಅಭಿನಂದನೆಗಳು” ಎಂದು ಹೇಳಿದರು. ಹಿರಿಯ ಯಕ್ಷಗಾನ ಕಲಾವಿದ ಪಿ. ಶ್ರೀಧರ ಐತಾಳರು “ಯಕ್ಷಗಾನದಲ್ಲಿ ಹೊಸ ಹೊಸ ಕಲಾವಿದರ ಪ್ರವೇಶ ಕಲೆಯ ಬೆಳವಣಿಗೆಗೆ ಪೂರಕ. ಕಲೆಯ…
ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿವೇಕಾನಂದ ಬಿ.ಎಡ್. ಕಾಲೇಜು, ರೇಡಿಯೋ ಪಾಂಚಜನ್ಯ 90.80 ಎಫ್.ಎಂ. ಮತ್ತು ವಿದ್ಯಾಭಾರತೀ ಉಚ್ಚ ಶಿಕ್ಷಾ ಸಂಸ್ಥಾನ್- ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 27-12-2023ರಂದು ‘ಭಾರತೀಯ ಭಾಷಾ ಉತ್ಸವದ’ ಪ್ರಯುಕ್ತ ಪುತ್ತೂರಿನ ತೆಂಕಿಲದ ವಿವೇಕಾನಂದ ಬಿ.ಎಡ್. ಕಾಲೇಜಿನಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ಪುತ್ತೂರಿನ ಖ್ಯಾತ ಆಯುರ್ವೇದಿಕ್ ವೈದ್ಯರಾದ ಡಾ. ಹರಿಕೃಷ್ಣ ಪಾಣಾಜೆ ಅವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ “ದೀಪವು ಬೆಳಕನ್ನು ನೀಡಿ ಕತ್ತಲೆಯನ್ನು ಹೋಗಲಾಡಿಸುವಂತೆ ಉತ್ತಮ ಸಾಹಿತ್ಯದ ಮೂಲಕ ಜ್ಞಾನದ ಬೆಳಕು ಹರಿದು ತನ್ಮೂಲಕ ಅಜ್ಞಾನದ ಅಂಧಕಾರ ತೊಲಗಿಸಬೇಕು” ಎಂದು ಶುಭ ಹಾರೈಸುತ್ತಾ ತಮ್ಮ ಸ್ವರಚಿತ ಕವನ ಒಂದನ್ನು ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಬಿ.ಎಡ್. ಕಾಲೇಜಿನ ಸಂಚಾಲಕರಾದ ಶ್ರೀಮತಿ ಗಂಗಮ್ಮ ಎಚ್. ಶಾಸ್ತ್ರಿ ಅವರು ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಶ್ರೀ ವಸಂತ ಮಾಧವ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವಿವೇಕಾನಂದ…
ಕುಂದಾಪುರ : ಕೊಮೆ, ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಚಿಣ್ಣರು ದಿನಾಂಕ 25-12-2023ರಂದು ಕುಂದಾಪ್ರ ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷ್ಣಾರ್ಜುನರ ಕಾಳಗದ ರುಕ್ಮಿಣಿ ಸುಭದ್ರ ಸಂವಾದ ಹಾಗೂ ಕೃಷ್ಣಾರ್ಜುನರ ಸಂವಾದವನ್ನು ಹೂವಿನಕೋಲು ಪ್ರಕಾರದಲ್ಲಿ ಪ್ರಸ್ತುತಪಡಿಸಿದರು. “ಕಳೆದ ಹಲವಾರು ವರ್ಷಗಳಿಂದ ಅಳಿವಿನಂಚಿನಲ್ಲಿರುವ ಯಕ್ಷಗಾನದ ಪ್ರಕಾರವಾದ ಹೂವಿನಕೋಲು ಕಾರ್ಯಕ್ರಮವನ್ನು ಮತ್ತೆ ಮನೆ ಮನೆಗಳಲ್ಲಿ ನವರಾತ್ರಿ ಸಂದರ್ಭಗಳಲ್ಲಿ ಪ್ರಸ್ತುತ ಪಡಿಸುತ್ತಿರುವ ಸಂಸ್ಥೆ ಯಶಸ್ವೀ ಕಲಾವೃಂದದ ಕಾರ್ಯ ಸಮಾಜದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂಸ್ಥೆಯ ಕಾರ್ಯವನ್ನು ಮನಗಂಡು ಸುಪ್ರೀತಾ ಪುರಾಣಿಕ್ ಕುಂದ ಕಂಠಗಳ ಪ್ರಕೃತಿಯ ಸ್ವರ ‘ರೇಡಿಯೋ ಕುಂದಾಪ್ರ’ ಇಲ್ಲಿ ಸಮಾರೋಪವಾಗಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡದ್ದು ನಿಜಕ್ಕೂ ಹೆಚ್ಚು ಪ್ರಸ್ತುತ. ರೇಡಿಯೋ ಕುಂದಾಪುರದ ಮೂಲಕ ಇನ್ನಷ್ಟು ಜನರಿಗೆ ಕಲೆಯನ್ನು ಧ್ವನಿ ವಾಹಿನಿಯ ಮೂಲಕ ಬಿತ್ತರಿಸುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ” ಎಂದು ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಅಭಿಪ್ರಾಯಪಟ್ಟರು. “ನವರಾತ್ರಿ ಸಂದರ್ಭದಿಂದ ಮೊದಲ್ಗೊಂಡು ಶಿರಸಿಯಿಂದ ಮಂಗಳೂರು ತನಕ ತಿರುಗಾಡಿ ಸುಮಾರು 180 ಮನೆಗಳು, ದೇವಸ್ಥಾನಗಳು, ಇನ್ನಿತರ ಪ್ರದೇಶಗಳಲ್ಲಿ ಹೂವಿನಕೋಲು ಯಕ್ಷ ಪ್ರಕಾರದ…
ಮರವಂತೆ : ಮರವಂತೆಯ ಸಾಧನಾ ಸಮಾಜ ಸೇವಾ ವೇದಿಕೆ, ಹಳೆ ವಿದ್ಯಾರ್ಥಿ ಸಂಘ, ಆಸರೆ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಐ. ವಸಂತಕುಮಾರಿ ಕಲಾಂಗಣದಲ್ಲಿ ದಿನಾಂಕ 24-12-2023ರಂದು ನಡೆದ ಸಮಾರಂಭದಲ್ಲಿ ಯೋಗೀಂದ್ರ ಮರವಂತೆ ಅವರ ‘ಏರೋ ಪುರಾಣ-ವಿಮಾನ ಲೋಕದ ಅನುಭವ, ಅಚ್ಚರಿ’ ಪ್ರಬಂಧ ಸಂಕಲನ ಬಿಡುಗಡೆಯಾಯಿತು. ಕೃತಿ ಬಿಡುಗಡೆ ಮಾಡಿದ ಕತೆ, ಕಾದಂಬರಿಕಾರ, ವಿಮರ್ಶಕ ಶ್ರೀಧರ ಬಳೆಗಾರ್ ಇವರು ಮಾತನಾಡುತ್ತಾ “ಯಂತ್ರ ಜಗತ್ತು ಈಗ ಮನುಷ್ಯನನ್ನು ಜೀವ ಜಗತ್ತನಿಂದ ದೂರ ಸೆಳೆಯುತ್ತಿದೆ ಮತ್ತು ಜೀವ ಜಗತ್ತನ್ನು ನಾಶಮಾಡುತ್ತಿದೆ. ಮನುಷ್ಯನ ಜೀವನದ ಎಲ್ಲಾ ವಿಭಾಗಗಳನ್ನು ವಿಜ್ಞಾನ ಆಕ್ರಮಿಸಿರುವ ಸನ್ನಿವೇಶದಿಂದಾಗಿ ಈ ಪ್ರಕ್ರಿಯೆಯನ್ನು ತಡೆಯಲಾಗುವುದಿಲ್ಲ. ಈಗ ವೈದ್ಯರು, ವಿಜ್ಞಾನಿಗಳು ಮನುಷ್ಯನನ್ನು ಯಂತ್ರವೆಂದು ಪರಿಗಣಿಸುತ್ತಿರುವಾಗ ವಿಮಾನ ತಂತ್ರಜ್ಞ ಆಗಿರುವ ಯೋಗೀಂದ್ರ ಈ ಕೃತಿಯಲ್ಲಿ ವಿಮಾನಗಳನ್ನು ಜೀವಿಗಳಾಗಿ ಬಿಂಬಿಸುತ್ತಾರೆ. ಜೀವಿಗಳಿಗಿದ್ದಂತೆ ಅವುಗಳಿಗೆ ಹುಟ್ಟು, ಬಾಲ್ಯ, ಯೌವನ, ವೃದ್ಧಾಪ್ಯ, ಸಾವು ಇದೆ. ಅವುಗಳ ಜೀವಯಾನ ಅವುಗಳದ್ದೇ ಆದ ಸ್ಮಶಾನದಲ್ಲಿ ಅಂತ್ಯಗೊಳ್ಳುತ್ತದೆ ಎನ್ನುವುದನ್ನು ವಿವಿಧ…
ಉಡುಪಿ : ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಳದ ಆಶ್ರಯದಲ್ಲಿ ರಂಗಭೂಮಿ ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದಲ್ಲಿ ಆಯೋಜಿಸಲಾದ ಎರಡು ದಿನಗಳ ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನ ‘ಅಂಬಲಪಾಡಿ ನಾಟಕೋತ್ಸವ -2023’ವು ದೇವಳದ ಬಯಲು ರಂಗ ಮಂದಿರದಲ್ಲಿ ದಿನಾಂಕ 31-12-2023ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಲ್ಲಾಳ್ ಇವರು ಉದ್ಘಾಟಿಸಿ ಮಾತನಾಡಿ “ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಜನರನ್ನು ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ರಂಗಭೂಮಿಯ ಕೊಡುಗೆ ಅಪಾರ. ಜಗದೀಶನಾಡುವ ಜಗವೇ ನಾಟಕ ರಂಗ ಎಂದು ದಾಸರ ಹಾಡಿನಂತೆ ನಾಟಕಗಳ ಕಥಾ ವಸ್ತುಗಳು ಜನರ ಬದುಕಿನ ನಾನಾ ರೀತಿಯ ಘಟನೆಗಳಲ್ಲಿ ಹಾಸುಹೊಕ್ಕಾಗಿರುವುದರಿಂದ ಸಮಾಜದ ಅಂಕುಡೊಂಕುಗಳ ಬಗ್ಗೆ ನಾಟಕಗಳು ವಿಮರ್ಶೆ ಮಾಡುತ್ತವೆ. ಜನರಲ್ಲಿ ಸಮಾಜಕ್ಕೆ ಬೇಕಾದ ಒಳಿತು ಕೆಡುಕನ್ನು ನಿರ್ಧರಿಸುವಲ್ಲಿ ಜಾಗೃತಿ ಮೂಡಿಸುತ್ತವೆ. ಬ್ರಿಟಿಷರ ಕಾಲದಲ್ಲಿಯೂ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಲು ಇದೇ ನಾಟಕಗಳು ಕಾರಣವಾಗಿದ್ದವು. ಅಂಬಲಪಾಡಿ…
ಮಂಗಳೂರು : ಖ್ಯಾತ ಸಾಹಿತಿ ಹಿರಿಯ ಜಾನಪದ ವಿದ್ವಾಂಸರಾದ ಪ್ರೋ. ಅಮೃತ ಸೋಮೇಶ್ವರರು ದಿನಾಂಕ 06-01-2024ರಂದು ನಿಧನರಾಗದ್ದಾರೆ ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ಇರ್ವರು ಮಕ್ಕಳನ್ನು ಅಗಲಿದ್ದು, ಮೃತರು ಕಾವ್ಯ ಸಣ್ಣಕಥೆ, ನಾಟಕ, ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷವಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನ ಕೋಟೆಕ್ಕಾರು ನಿವಾಸಿಯಾಗಿದ್ದ ಶ್ರೀಯುತರು ಎಂ.ಎ. ಪದವೀಧರರಾಗಿದ್ದು, ಮಂಗಳೂರಿನ ಸಂತ ಅಲೊಶಿಯಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಬಳಿಕ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದು, ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಕನ್ನಡ ಸಂಘ, ಯಕ್ಷಗಾನ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗೆಗಾಗಿ ಶ್ರಮಿಸಿದ್ದ ಇವರು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು…
ಮಂಗಳೂರು : ಕುಡ್ಲದ ತುಳು ಕೂಟ ಸಂಸ್ಥೆಯ ಬಂಗಾರ್ ಪರ್ಬ ಸರಣಿ ವೈಭವ 10 ಸಮಾರೋಪ ಸಮಾರಂಭದಲ್ಲಿ ‘ತುಳು ನಾಡಿನ ಪಾರಂಪರಿಕ ವಾದ್ಯ ವಾದನಗಳ ಸ್ಪರ್ಧೆ’ಯು ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ಗುರು ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 30-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ದಯಾಕರ ಕುಳಾಯಿಯವರು ದೀಪ ಬೆಳಗಿಸಿ ಉದ್ಧಾಟಿಸಿ “ನಮ್ಮ ತುಳು ವೈವಿಧ್ಯತೆಯಲ್ಲೂ ಭಾಷಾ ಸೊಬಗನ್ನು ಪಡೆದಿದೆ. ನಾವು ಪಟ್ಟು ಹಿಡಿದು ಅದನ್ನು ಆಗ್ರಹಪೂರ್ವಕವಾಗಿ ಉಳಿಸಿ-ಬೆಳೆಸುವಲ್ಲಿ ಹಿಂದುಳಿಯಬಾರದು ತುಳುವಿನ ಉಳಿವು – ಅಳಿವಿನ ಪ್ರಶ್ನೆಗೆ ನಾವೇ ಬಾಧ್ಯಸ್ಥರು” ಎಂದು ಸಂಸ್ಥೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಬಂದ ಮಾಜಿ ಸೈನಿಕರ ಅಸೋಸಿಯೇಶನ್ ನ ಅಧ್ಯಕ್ಷರಾದ ಬಾಳ ಶ್ರೀ ಶ್ರೀಕಾಂತ ಶೆಟ್ಟಿಯವರು “ಈಗೀಗ ತುಳುವಿನ ಅನೇಕ ಶಬ್ದಗಳು ಕನ್ನಡೀಕರಣವಾಗಿ ತುಳುವಿನ ಮೂಲ ಅಸ್ತಿತ್ವ ಅಳಿಸಿ ಹೋಗಿ ನಮ್ಮ ಮುಂದಿನ ಪೀಳಿಗೆ ಭಾಷಾ ಗೊಂದಲದಲ್ಲಿ ಬಳಲುವಂತಾಗುತ್ತದೆ. ಅದಕ್ಕಾಗಿ ತುಳು…
ಮುಡಿಪು : ಮಂಗಳೂರು ವಿಶ್ವ ವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆದ 2023-24ನೇ ಸಾಲಿನ ಯಕ್ಷಮಂಗಳ ತಂಡದ ಯಕ್ಷನಾಟ್ಯ ತರಬೇತಿಯನ್ನು ದಿನಾಂಕ 12-12-2023ರಂದು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಗಣೇಶ್ ಸಂಜೀವ ಇವರು ಉದ್ಘಾಟಿಸಿ “ಶಿಕ್ಷಣದೊಂದಿಗೆ ಯಕ್ಷಗಾನದ ನಾಟ್ಯ ಮತ್ತು ಹಿಮ್ಮೇಳದ ಕಲಿಕೆ ವಿದ್ಯಾರ್ಥಿಗಳಲ್ಲಿ ಕಲೆಯ ಬಗೆಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ. ಹವ್ಯಾಸವಾಗಿ ಕಲೆಯೊಂದನ್ನು ರೂಢಿಸಿಕೊಂಡರೆ ಕಲಾವಿದನಾಗದಿದ್ದರೂ ಉತ್ತಮ ಪ್ರೇಕ್ಷಕರಾಗುವುದಂತೂ ಸಾಧ್ಯ. ಯಕ್ಷಗಾನ ಕಲೆಯನ್ನು ಆಸ್ವಾದಿಸುವುದಕ್ಕೂ ಯುವ ತಲೆಮಾರಿಗೆ ತರಬೇತು ನೀಡುವ ಅಗತ್ಯವಿದೆ. ಉತ್ತಮ ಪ್ರೇಕ್ಷಕವರ್ಗ ನಿರ್ಮಾಣ ಇಂದಿನ ಅಗತ್ಯ. ವಿವಿಯ ಯಕ್ಷಗಾನ ಕೇಂದ್ರವು ಹಲವು ಕಾರ್ಯಯೋಜನೆಗಳೊಂದಿಗೆ ತರಬೇತಿ ಚಟುವಟಿಕೆಗಳನ್ನು ಆಯೋಜಿಸಿ ಯಕ್ಷ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ. ಇಲ್ಲಿ ಕಲಿತ ವಿದ್ಯಾರ್ಥಿಗಳ ಮೂಲಕ ಹೊಸ ಯಕ್ಷ ಪ್ರಯೋಗಗಳನ್ನು ರೂಪಿಸಬೇಕು” ಎಂದು ಹೇಳಿದರು. ಯಕ್ಷಗುರು ದೀವಿತ್ ಶ್ರೀಧರ್ ಕೋಟ್ಯಾನ್ ಅವರು ಮಾತನಾಡಿ “ಜಾನಪದ ಕಲೆಯಾದ ಯಕ್ಷಗಾನವು ಈಗ ಶಾಸ್ತ್ರೀಯ ಚೌಕಟ್ಟನ್ನು ಹೊಂದುತ್ತಿರುವುದು ಕಲೆ ಬೆಳೆಯುತ್ತಿರುವುದರ ಲಕ್ಷಣ. ಗಾನ ನೃತ್ಯ,…