Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ‘ರಾಜ್ಯಮಟ್ಟದ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ಶಿಬಿರ’ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ‘ಬಂಜಾರ ಸಮುದಾಯದ 20 ರಿಂದ 40 ವರ್ಷದಳೊಗಿನ ಆಸಕ್ತರು 10 ಅಕ್ಟೋಬರ್ 2024ರ ಒಳಗೆ ಅರ್ಜಿ ಸಲ್ಲಿಸಬಹುದು. ಬಂದ ಅರ್ಜಿಗಳಿಂದ ಈ ಶಿಬಿರಕ್ಕೆ 50 ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಅಕ್ಟೋಬರ್‌ನಲ್ಲಿ ರಾಮನಗರ ಜಿಲ್ಲೆಯಲ್ಲಿ ಈ ಶಿಬಿರ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಎ. ಆರ್. ಗೋವಿಂದಸ್ವಾಮಿ ತಿಳಿಸಿದ್ದಾರೆ. ಅರ್ಜಿಗಳನ್ನು ಅಧ್ಯಕ್ಷರು, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಜೆ. ಸಿ. ರಸ್ತೆ, ಬೆಂಗಳೂರು. ಈ ವಿಳಾಸಕ್ಕೆ ಕಳುಹಿಸಿ ಕೊಡಬೇಕು. ಹೆಚ್ಚಿನ ಮಾಹಿತಿಗಾಗಿ 080-29917745 ಈ ಸಂಖ್ಯೆಯನ್ನು ಸಂಪರ್ಕಿಸಿ.
ಮಂಗಳೂರು : ಯಕ್ಷರಂಗದ ಸವ್ಯಸಾಚಿ ಕಲಾವಿದರೆನಿಸಿದ್ದ ದಿ. ಬಾಬು ಕುಡ್ತಡ್ಕರ ಹೆಸರಿನಲ್ಲಿ ವರ್ಷಂಪ್ರತಿ ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾಕೇಂದ್ರವು ದಿ. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸಹಕಾರದಲ್ಲಿ ನೀಡಲಾಗುತ್ತಿರುವ 2024-25ರ ಸಾಲಿನ ‘ಬಾಬು ಕುಡ್ತಡ್ಕ ಪ್ರಶಸ್ತಿ’ಗಾಗಿ ತೆಂಕು ಬಡಗು ತಿಟ್ಟು ಎರಡು ಪ್ರಕಾರಗಳಲ್ಲೂ ಖ್ಯಾತನಾಮರೆನಿಸಿದ ಯಕ್ಷಗಾನದ ಸ್ತ್ರೀ ವೇಷಧಾರಿ, ಪ್ರಸಂಗ ಕರ್ತೃ ಎಂ.ಕೆ. ರಮೇಶ್ ಆಚಾರ್ಯ ಇವರನ್ನು ಸ್ವಸ್ತಿಕ್ ಆಯ್ಕೆ ಸಮಿತಿಯ ಮೂಲಕ ಪ್ರಶಸ್ತಿಗಾಗಿ ಆಯ್ಕೆಗೊಳಿಸಲಾಗಿದೆ. ಪರಿಚಯ : ಮಲೆನಾಡು ಕಂಡ ಪ್ರತಿಭಾಶಾಲಿ ಹಾಗೂ ಹಿರಿಯ ಯಕ್ಷಗಾನ ಕಲಾವಿದರು ಎಂ.ಕೆ. ರಮೇಶ್ ಆಚಾರ್ಯರು. ಇವರು ಉಭಯ ತಿಟ್ಟುಗಳ ಸಮರ್ಥ ಸ್ತ್ರೀ ವೇಷ ದಾರಿ. ಐದನೇ ತರಗತಿಯಲ್ಲಿರುವಾಗಲೇ ಯಕ್ಷರಂಗ ಪ್ರವೇಶಿಸಿ, ವೃತ್ತಿ ಕಲಾವಿದರಾಗಿ ಐವತ್ತು ವರ್ಷಗಳ ಸಾರ್ಥಕ ಸೇವೆ ಗೈದು ಹತ್ತಾರು ಯಕ್ಷಗಾನ ಪ್ರಸಂಗಗಳಿಗೆ ಕಲಾ ನಿರ್ದೇಶನ, ಮೂವತ್ತೈದಕ್ಕೂ ಹೆಚ್ಚು ಕಾಲ್ಪನಿಕ ಪ್ರಸಂಗಗಳಿಗೆ ಪದ್ಯ ರಚನೆ, ಅನೇಕ ಪುರಾಣ ಪ್ರಸಂಗಗಳನ್ನು ಯಕ್ಷರಂಗಕ್ಕೆ ನೀಡಿರುವ ವೇಧಾವಿ. ಶೇಣಿ- ಸಾಮಗರಂತಹ ಯಕ್ಷ ದಿಗ್ಗಜರೊಂದಿಗೆ, ದ್ರೌಪದಿ, ಚಂದ್ರಮತಿ, ಶಾಂತಲೆ, ಮೇನಕ,…
ಮಂಗಳೂರು: ಮಂಗಳೂರಿನ ಜೆನೆಸಿಸ್ ಪ್ರಕಾಶನದ ವ್ಯವಸ್ಥಾಪಕ ಮಾರ್ಸೆಲ್ ಎಂ. ಡಿಸೋಜ (ಮಿಚ್ಚಾ ಮಿಲಾರ್) ಬರೆದಿರುವ 400 ಚುಟುಕುಗಳ ಸಂಕಲನ ‘ಚುಟುಕಾಂ’ ಇದರ ಲೋಕಾರ್ಪಣಾ ಸಮಾರಂಭವು 21 ಸೆಪ್ಟೆಂಬರ್ 2024ರ ಶನಿವಾರದಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಪುಸ್ತಕ ಲೋಕಾರ್ಪಣೆಗೊಳಿಸಿದ ಎಂ. ಸಿ. ಸಿ. ಬ್ಯಾಂಕ್ ಇದರ ಅಧ್ಯಕ್ಷರಾದ ಅನಿಲ್ ಲೋಬೋ ಮಾತನಾಡಿ “ಕೊಂಕಣಿ ಭಾಷಿಕರಿಗೆ ಅತ್ಯುತ್ತಮ ಸಂದೇಶ ನೀಡುವ ಕೃತಿ ಇದಾಗಿದೆ. ಕೊಂಕಣಿ ಭಾಷೆಯಲ್ಲಿ ಬರೆಯುವವರ ಸಂಖ್ಯೆ ಕಡಿಮೆಯಾಗಿದ್ದು, ಮಾರ್ಸೆಲ್ ಅವರ ಈ ಕೃತಿಯು ಯುವಕರಿಗೆ ಮಾರ್ಗದರ್ಶನವಾಗಲಿದೆ.” ಎಂದರು. ಲೇಖಕರಾದ ಮಾರ್ಸೆಲ್ ಡಿ’ಸೋಜಾ ಮಾತನಾಡಿ “ಕೊಂಕಣಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 15 ಪುಸ್ತಕಗಳನ್ನು ಹಾಗೂ ಇಂಗ್ಲಿಷ್‌ನಲ್ಲಿ 2 ಪುಸ್ತಕಗಳನ್ನು ಈವರೆಗೆ ಪ್ರಕಟಿಸಿದ್ದೇನೆ. ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿ ಮೂರು ಪುಸ್ತಕ ಬಿಡುಗಡೆಯಾಗಲಿದೆ. ‘ಚುಟುಕಾಂ’ ಕೃತಿಯಲ್ಲಿ 400 ಚುಟುಕುಗಳಿವೆ.” ಎಂದರು. ಅತಿಥಿಗಳಾಗಿ ಹಿರಿಯ ಕೊಂಕಣಿ ಸಾಹಿತಿ ಜೆ. ಎಫ್. ಡಿ’ಸೋಜಾ, ಕಲ್ಲಚ್ಚು ಪ್ರಕಾಶನದ ವ್ಯವಸ್ಥಾಪಕ ಮಹೇಶ್ ನಾಯಕ್, ಮಾರ್ಸೆಲ್ ಡಿ’ಸೋಜಾ ಇವರ ಪತ್ನಿ ಜಾನೆಟ್…
ಧಾರವಾಡ : ಧಾರವಾಡದ ರಾಘವೇಂದ್ರ ‘ಪಾಟೀಲ ಸಾಹಿತ್ಯ ವೇದಿಕೆಯು ‘ರಾಘವೇಂದ್ರ ಪಾಟೀಲ ಕಥಾಪ್ರಶಸ್ತಿ’ಗಾಗಿ ಅಪ್ರಕಟಿತ ಹಸ್ತಪ್ರತಿಗಳನ್ನು ಆಹ್ವಾನಿಸುತಿದ್ದು, ಈ ಪ್ರಶಸ್ತಿಯು ರೂಪಾಯಿ 20 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಸ್ಪರ್ಧೆಗೆ ಲಿಂಗ, ವಯಸ್ಸು, ಜಾತಿ, ಧರ್ಮ, ಪ್ರದೇಶ ಇತ್ಯಾದಿ ಯಾವುದೇ ಕೃತಕ ಮಾನದಂಡಗಳು ಮತ್ತು ಯಾವುದೇ ಪ್ರವೇಶ ಶುಲ್ಕ ಇಲ್ಲ. ಕಥೆಗಳು ಈ ಮೊದಲು ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ (ಪ್ರಿಂಟ್ ಅಥವಾ ಡಿಜಿಟಲ್ ಮೀಡಿಯಾ)ದಲ್ಲಿ ಪ್ರಕಟವಾಗಿದ್ದರೂ ಪುಸ್ತಕರೂಪದಲ್ಲಿ ಪ್ರಕಟವಾಗಿರಬಾರದು. ಕನಿಷ್ಠ 5ರಿಂದ ಗರಿಷ್ಠ 20 ಅಪ್ರಕಟಿತ ಕಥೆಗಳನ್ನು ಕಳುಹಿಸಬಹುದು. ಎ-4 ಕಾಗದದಲ್ಲಿ 12 ಫಾಂಟ್ ಸೈಜಿನಲ್ಲಿ ತಪ್ಪಿಲ್ಲದಂತೆ ಟೈಪ್ ಮಾಡಿ, ಬೈಂಡ್ ಮಾಡಲಾದ, 120 ಪುಟಗಳಿಗೆ ಮೀರದ ಕಥೆಗಳ ನಾಲ್ಕು ಪ್ರತಿಗಳನ್ನು 25 ಅಕ್ಟೋಬರ್ 2024ರ ಒಳಗಾಗಿ ಸಾಹಿತ್ಯ ವೇದಿಕೆಯ ವಿಳಾಸಕ್ಕೆ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಹಸ್ತಪ್ರತಿಗಳ ಸಾಫ್ಟ್ ಕಾಪಿ ಸ್ವೀಕರಿಸಲಾಗುವುದಿಲ್ಲ. ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಲೇಖಕ/ಕಿಯರ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ, ಒಂದು ಭಾವಚಿತ್ರವನ್ನು ಹಸ್ತಪ್ರತಿಯೊಡನೆ ಪ್ರತ್ಯೇಕವಾಗಿ ಲಗತ್ತಿಸಬೇಕು.…
ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಅರ್ಪಿಸುವ ಕಾರ್ಯಕ್ರಮ -33 ಉಪನಿಷದ್ ವರ್ಷದ ಪ್ರಯುಕ್ತ ‘ತಿಂಗಳ ಉಪನ್ಯಾಸ ಮಾಲೆ’ಯು ದಿನಾಂಕ 28 ಸೆಪ್ಟೆಂಬರ್ 2024ರಂದು ಸಂಜೆ 5-00 ಗಂಟೆಗೆ ಕಾರ್ಕಳ ಹೊಟೇಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಡಾ. ಕಾರ್ತಿಕ್ ವಾಗೈ ಪಂಚನಬೆಟ್ಟು ಇವರು ಮಾಂಡುಕ್ಯ ಉಪನಿಷದ್ ಕುರಿತು ಉಪನ್ಯಾಸ ನೀಡಲಿರುವರು. ಡಾ. ಕಾರ್ತಿಕ್ ವಾಗ್ಳೆ : ಡಾ. ಕಾರ್ತಿಕ್ ವಾಗ್ಳೆಯವರು ಮೂಲತಃ ಉಡುಪಿಯ ಹಿರಿಯಡ್ಕ ಸಮೀಪದ ಪಂಚನಬೆಟ್ಟಿನವರು. ಪ್ರಬೋಧಿನೀ ಗುರುಕುಲ ಮತ್ತು ವೇದವಿಜ್ಞಾನ ಗುರುಕುಲಗಳಲ್ಲಿ 12 ವರ್ಷಗಳ ಕಾಲ ವೇದ (ಕೃಷ್ಣಯಜುರ್ವೇದ ಮೂಲಾಂತ) ವೇದಾಂತ (ಪ್ರಸ್ಥಾನತ್ರಯ – ಶಾಂಕರ ಭಾಷ್ಯ ಸಹಿತ) ಯೋಗಗಳ ಅಧ್ಯಯನ ನಡೆಸಿರುತ್ತಾರೆ. ಯೋಗ ಮತ್ತು ಸಾಹಿತ್ಯ (ಸ್ವರ್ಣ ಪದಕ ಸಹಿತ) ಸ್ನಾತಕೋತ್ತರ ಪದವಿಯನ್ನು ಪಡೆದು “ಪ್ರಾಚೀನ ಭಾರತೀಯ ಆಡಳಿತ ವ್ಯವಸ್ಥೆಯ ಪ್ರಸ್ತುತ ಕಾಲದ ಆಡಳಿತದಲ್ಲಿ ಅನ್ವಯ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ…
ಬೆಂಗಳೂರು : ಅಡವಿ ಫೌಂಡೇಶನ್ ಮತ್ತು ಮಧುರಿಮ ಥಿಯೇಟರ್ ಅರ್ಪಿಸುವ ಡಾ. ಸಿದ್ಧಲಿಂಗಯ್ಯನವರ ಆತ್ಮಕಥೆ ಆಧಾರಿತ ಆಯ್ದ ಭಾಗಗಳ ನಾಟಕ ‘ಊರು ಕೇರಿ’ ಇದರ ಪ್ರದರ್ಶನವು ದಿನಾಂಕ 26 ಸೆಪ್ಟಂಬರ್ 2024ರಂದು ಗುರುವಾರ ಬೆಳಗ್ಗೆ 11-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ನಟನೆ : ನವೀನ್ ಭೂಮಿ, ಭೀಮಣ್ಣ ಮತ್ತು ವಿಶ್ವಾಸ್ ಕೆ.ಎಂ. ನಿರ್ಮಾಣ : ಶ್ರೀನಿವಾಸ್ ವಿ. ಸಂಗೀತ ನಿರ್ವಹಣೆ : ಯಶವಂತ್ ಹೆಚ್. ನಿರ್ದೇಶನ ಸಹಾಯ : ರಂಗನಾಥ್ ಶಿವಮೊಗ್ಗ ನಿರ್ವಹಣೆ ಮತ್ತು ಪ್ರಚಾರ ಕಲೆ : ಚಂದ್ರಮೌಳಿ ಕೆ.ಪಿ. ವಿನ್ಯಾಸ ಮತ್ತು ನಿರ್ದೇಶನ : ನವೀನ್ ಭೂಮಿ ಚಿನ್ನವನ್ನು ತೆಗೆದೋರು ಅನ್ನವನ್ನು ಕಾಣದೋರು ಬಟ್ಟೆಯನ್ನು ನೇಯೋರು ಬರಿಮೈಲೇ ಹೋಗೋರು ಹೇಳಿದಂತೆ ಕೇಳುತಾರೆ ನನ್ನ ಜನಗಳು ಗಾಳಿಯಲ್ಲಿ ಬಾಳುತಾರೆ ನನ್ನ ಜನಗಳು
ಬೆಂಗಳೂರು: ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಹಾಗೂ ಭಾರತೀಯ ವಿದ್ಯಾಭವನದ ವಿ. ಕೃ. ಗೋಕಾಕ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟ್ರಸ್ಟ್‌ನ ಅಧ್ಯಕ್ಷರಾದ ನರಹಳ್ಳಿ ಬಾಲ ಸುಬ್ರಹ್ಮಣ್ಯ, ಅನಿಲ್ ಗೋಕಾಕ್, ಎಚ್. ಎನ್. ಸುರೇಶ್ ಹಾಗೂ ಅಭಿನವ ರವಿಕುಮಾರ್ ಅವರು ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದು, ಕರಜಗಿ ಅವರನ್ನು 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 29 ಸೆಪ್ಟೆಂಬರ್ 2024ರಂದು ಭಾರತೀಯ ವಿದ್ಯಾಭವನದಲ್ಲಿ ಹಮ್ಮಿ ಕೊಂಡಿರುವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ದೆಹಲಿ : ಕಲಾಭಿ (ರಿ.) ತಂಡದಿಂದ ಕೆನರಾ ಕಲ್ಚರಲ್ ಅಕಾಡೆಮಿಯ ಸಹಯೋಗದೊಂದಿಗೆ ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಕೆನರಾ ಸಿ.ಬಿ.ಎಸ್.ಇ. ಶಾಲೆಯ ಶ್ರೀ ಭುವನೇಂದ್ರ ಸಭಾಂಗಣದಲ್ಲಿ ಶ್ರವಣ್ ಹೆಗ್ಗೋಡು ಇವರ ನಿರ್ದೇಶನ ಹಾಗೂ ಪರಿಕಲ್ಪನೆಯಲ್ಲಿ ಮೂಡಿಬಂದ ‘ಪುರ್ಸನ ಪುಗ್ಗೆ’ ಅನ್ನುವ ಜಪಾನ್ ಮೂಲದ ಬುನ್ರಾಕು ಬೊಂಬೆಯಾಟವು ಪ್ರದರ್ಶನಗೊಂಡಿತು. ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಈ ಪ್ರದರ್ಶನವು ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿದ್ದು, ದಿನಾಂಕ 28 ಸೆಪ್ಟೆಂಬರ್ 2024ರಂದು ತಂಡವು ಈ ‘ಪುರ್ಸನ ಪುಗ್ಗೆ’ ಬೊಂಬೆಯಾಟವನ್ನು ದೆಹಲಿಯ ಶಾದಿಪುರ್ ನಾಟಕ ಉತ್ಸವದಲ್ಲಿ ಪ್ರದರ್ಶಿಸಲಿದೆ. ರಾಷ್ಟ್ರೀಯ ಮಟ್ಟದ ಈ ಉತ್ಸವದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಎರಡು ತಂಡಗಳಲ್ಲಿ ಕಲಾಭಿ ತಂಡವೂ ಒಂದಾಗಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದ್ದು, ಈ ತಂಡಕ್ಕೆ ಹಾಗೂ ತಂಡದ ಎಲ್ಲಾ ಕಲಾವಿದರಿಗೂ ಜನತೆಯ ಪ್ರೋತ್ಸಾಹವಿರಬೇಕು ಎನ್ನುವುದು ಕಲಾಭಿ (ರಿ.) ಇದರ ಕಳಕಳಿಯಾಗಿದೆ. ಬುನ್ರಾಕು ಗೊಂಬೆಯಾಟ : ಜಪಾನಿನ ಬುನ್ರಾಕು ಮಾದರಿಯಲ್ಲಿ ನಿರ್ಜೀವ ಗೊಂಬೆಗಳಿಗೆ ರಂಗದ ಮೇಲೆ ಜೀವ-ಭಾವ ತುಂಬುವುದನ್ನು ಕರಗತ ಮಾಡಿಕೊಂಡಿರುವ ಇವರು, ಈ ನವೀನ ಮಾದರಿಯ ಪ್ರಯೋಗವನ್ನು…
ಸುರತ್ಕಲ್ : ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ, ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ.) ಮತ್ತು ಶ್ರೀ ಶಾರದಾ ಮಾತೃ ಮಂಡಳಿ ಸುರತ್ಕಲ್ ಇವರು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಸುವರ್ಣ ವರ್ಷಾಚರಣೆಯ ಪ್ರಯುಕ್ತ ನಡೆಯುತ್ತಿರುವ ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮವಾಗಿ ದಿನಾಂಕ 22 ಸೆಪ್ಟೆಂಬರ್ 2024ರಂದು ಸಾರ್ವಜನಿಕ ಭಜನಾ ಸ್ಪರ್ಧೆ ನಡೆಯಿತು. ಸುರತ್ಕಲ್ ಶಾರದಾ ಮಂದಿರದಲ್ಲಿ ನಡೆದ ಸ್ಪರ್ಧೆಯನ್ನು ಶ್ರೀ ಶಾರದಾ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ವೈ. ರಾಘವೇಂದ್ರ ರಾವ್ ವಿದ್ಯುಕ್ತವಾಗಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ, ಕಾರ್ಯದರ್ಶಿ ಶ್ರೀ ಸುರೇಶ್ ಶೆಟ್ಟಿ, ಶ್ರೀ ಶಾರದಾ ಮಾತೃ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಅನುರಾಧಾ ರಾಜೀವ್, ಗೌರವಾಧ್ಯಕ್ಷರಾದ ಶ್ರೀಮತಿ ವೀಣಾ ಟಿ. ಶೆಟ್ಟಿ, ಶ್ರೀಮತಿ ಸುನೀತಾ ಶೇಖರ್, ಶ್ರೀಮತಿ ತಾರಾ ಧನುರಾಜ್ ಉಪಸ್ಥಿತರಿದ್ದರು. ಭಜನಾ ಸ್ಪರ್ಧೆಯ ಸಂಚಾಲಕಿಯಾದ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್…
ಬೆಂಗಳೂರು : ‘ಸ್ಪಷ್ಟ ಥಿಯೇಟರ್’ನ ಬುಡಕಟ್ಟು ನಾಟಕವಾದ ‘ಕಾಡ್ ರೇಖೈ’ ಮೂಲಕ ಸೆರೆಹಿಡಿಯಲು ಸಿದ್ಧರಾಗಿ. ಬರಹಗಾರ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಗಗನ್ ಪ್ರಸಾದ್ ಇವರು ರಚಿಸಿರುವ ಈ ನಾಟಕವು ಶಮಂತ್ ಹೊಸಹೊಳಲು ಅವರ ಸಾಹಿತ್ಯ ಮತ್ತು ಸಂಭಾಷಣೆಯನ್ನು ಮತ್ತು ಅರುಣ್ ಎಸ್. ಪೂಜಾರಿಯವರ ಸಮ್ಮೋಹನಗೊಳಿಸುವ ಸಂಗೀತವನ್ನು ಒಳಗೊಂಡಿದೆ. ದಿನಾಂಕ 29 ಸೆಪ್ಟೆಂಬರ್ 2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಗ್ರ್ಯಾಂಡ್ ಪ್ರೀಮಿಯರ್ ನಡೆಯಲಿದೆ. ಬುಕ್ ಮೈ ಶೋನಲ್ಲಿ ಟಿಕೆಟ್‌ಗಳಿವೆ. ಕಾಡ್ ರೇಖೈ – ಒಂದು ಬುಡಕಟ್ಟು ಕಥೆ ‘ಅಜ್ಞಾತದ ಮುಸುಕಿನ ಆಚೆಗೆ’ : ಚಾಮರಾಜನಗರದ ದಟ್ಟ ಕಾಡಿನ ಹೃದಯಭಾಗದಲ್ಲಿ, ಒಂದು ಕಾಲದಲ್ಲಿ ಬುಡಕಟ್ಟು ಜನಾಂಗದ ಸಾಮರಸ್ಯದ ವಸ್ತ್ರವು ಅಸ್ತಿತ್ವದಲ್ಲಿತ್ತು, ಮದುವೆ ಮತ್ತು ತಲೆಮಾರುಗಳ ಸ್ನೇಹದ ಸಂಬಂಧಗಳಿಂದ ಬಂಧಿತವಾಗಿತ್ತು. ಈ ದುರ್ಬಲವಾದ ಶಾಂತಿಯನ್ನು ಯಾವುದು ಛಿದ್ರಗೊಳಿಸಿತು? ಈ ಆಕರ್ಷಕ ನಾಟಕವು ಪ್ರೀತಿ, ಸೇಡು, ನ್ಯಾಯ ಮತ್ತು ಕನಸುಗಳ ವಿಷಯಗಳನ್ನು ಅನ್ವೇಷಿಸುವ ಮಾನವನ ಭಾವನೆಯ ಆಳವನ್ನು ಪರಿಶೀಲಿಸುತ್ತದೆ. ಆಯಾ ಬುಡಕಟ್ಟುಗಳ…