Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಸಂಚಾರಿ ಥಿಯೇಟರ್ ಪ್ರಸ್ತುತ ಪಡಿಸುವ ‘ನರಿಗಳಿಗೇಕೆ ಕೋಡಿಲ್ಲ ?’ ಎಂಬ ಮಕ್ಕಳ ನಾಟಕವು ದಿನಾಂಕ 07-01-2023ರಂದು ಬೆಂಗಳೂರಿನ ರಂಗಶಂಕರದಲ್ಲಿ ಮಧ್ಯಾಹ್ನ ಗಂಟೆ 3.30ಕ್ಕೆ ಹಾಗೂ ಸಂಜೆ ಗಂಟೆ 7.30ಕ್ಕೆ ನಡೆಯಲಿದೆ. ಐವತ್ತು ಅರವತ್ತು ವರುಷಗಳ ಹಿಂದೆ ಮಕ್ಕಳ ಪುಸ್ತಕ ಎಂಬ ಹೆಸರಿನಲ್ಲಿ ಹೊರಡುತ್ತಿದ್ದ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ, ಕುವೆಂಪು ಅವರು ರಚಿಸಿರುವ ಕಥೆ ನರಿಗಳೀಗೇಕೆ ಕೋಡಿಲ್ಲ ? ಎಲ್ಲಾ ಜೀವರಾಶಿಯನ್ನು ತನ್ನ ತೆಕ್ಕೆಯಲ್ಲಿಟ್ಟು ಲಾಲಿಸುವ, ಸಮತೋಲನದಿಂದ ಕಾಪಾಡುವ, ತನ್ನೊಳಗೆ ಕಾರುಣ್ಯ, ಕಾಠಿಣ್ಯ ಎರಡೂ ಇವೆ ಎಂಬುದನ್ನು ಮನದಟ್ಟು ಮಾಡುವ, ಕೊಲ್ಲುವುದಕ್ಕಿಂತಲೂ ಕಾಯುವುದು ಮುಖ್ಯ ಎಂದು ಪಿಸುಮಾತಿನಲ್ಲಿ ಹೇಳುವ ಕತೆ ಇದು. ನಮ್ಮ ಮೇಲೆ ಸವಾರಿ ಮಾಡುವ ಅಹಂಕಾರವನ್ನು ಮುರಿದು ಎಸೆಯಬೇಕಾದ ಬಗ್ಗೆಯೂ ಮಾತನಾಡುವ, ನಿಸರ್ಗದ ತೊಟ್ಟಿಲಲ್ಲಿ ಕ್ರೌರ್ಯ ಇರಬಹುದು. ಆದರೆ ಕುತಂತ್ರಕ್ಕೆ, ಅಹಂಕಾರಕ್ಕೆ ಜಾಗವಿಲ್ಲ ಎನ್ನುವುದನ್ನು ಮನದಟ್ಟು ಮಾಡುವ ಕತೆ ಇದು. ಇದನ್ನು ಮಂಗಳಾ ಎನ್. ಮತ್ತು ಶಾಂತಾ ನಾಗರಾಜ ರಂಗರೂಪಕ್ಕೆ ತಂದಿದ್ದಾರೆ. ಶಶಿಧರ್ ಅಡಪ ಅವರ ವಿನ್ಯಾಸವಿದೆ. ಗಜಾನನ…
ಮಂಗಳೂರು : ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಸಾಹಿತ್ಯ ಸಂಗಮ (ರಿ.) ಇದರ ಆಶ್ರಯದಲ್ಲಿ ಸಂದೀಪ ಸಾಹಿತ್ಯ ಆತ್ರಾಡಿ ಮತ್ತು ಪುನ್ನಾಗ ಪ್ರಕಾಶನ ಕಾರ್ಕಳ ಇವರ ‘ಪುಸ್ತಕ ಬಿಡುಗಡೆ’ ಕಾರ್ಯಕ್ರಮವು ದಿನಾಂಕ 06-01-2024ರಂದು ಅಪರಾಹ್ನ ಗಂಟೆ 3.00ರಿಂದ ಮುಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀಮತಿ ಇಂದಿರಾ ಹಾಲಂಬಿ ಇವರ ಎರಡು ಪುಸ್ತಕಗಳಾದ ‘ಅಂಬಾ ಪ್ರತಿಜ್ಞೆ’ ಹಾಗೂ ‘ಗಯ ಗಂಧರ್ವ ಪರಾಜಯ’ ಮತ್ತು ಶ್ರೀಮತಿ ಸಾವಿತ್ರಿ ಮನೋಹರ್ ಇವರ ನಾಟಕ ಕೃತಿ ‘ಪಂಚ ಪ್ರಹಸನಗಳು’ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಕ್ಕಳ ಸಾಹಿತ್ಯ ಸಂಗಮ ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸರ್ವರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.
ಬೆಂಗಳೂರು : ಬೆಂಗಳೂರಿನ ಚಿಕ್ಕಲ್ಲಸಂದ್ರದ ಸುಮುಖ ಲೇಔಟ್ ಇಲ್ಲಿರುವ ಶ್ರೀವಾಣಿ ಸೆಂಟರ್ ಫಾರ್ ಪರ್ ಫಾರ್ಮಿಂಗ್ ಆರ್ಟ್ಸ್ (ರಿ.) 25ನೇ ವಾರ್ಷಿಕೋತ್ಸವವು ದಿನಾಂಕ 05-01-2024ರಂದು ದೊಡ್ಡಕಲ್ಲಸಂದ್ರ, ಕನಕಪುರ ರಸ್ತೆಯಲ್ಲಿರುವ ಶಂಕರ ಫೌಂಡೇಷನ್ ಮತ್ತು 07-01-2024ರಂದು ಎನ್.ಆರ್. ಕಾಲೋನಿಯ ಪತ್ತಿ ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 05-01-2024ರಂದು ಗಂಟೆ 5-10ಕ್ಕೆ ಕರ್ನಾಟಕ ಕಲಾಶ್ರೀ ಗುರು ಶ್ರೀ ಸತ್ಯನಾರಾಯಣ ರಾಜ್ ಇವರ ಶಿಷ್ಯೆಯರಾದ ವಿದುಷಿ ಪೃಥ್ವಿ ಪಾರ್ಥಸಾರಥಿ, ವಿದುಷಿ ಗೌರಿ ಸಾಗರ್ ಮತ್ತು ವಿದುಷಿ ತೇಜಸ್ವಿನಿ ರಾಜ್ ಇವರಿಂದ ‘ನೃತ್ಯ ವೈಭವಂ’ ಮತ್ತು ಗಂಟೆ 5-45ಕ್ಕೆ ನೃತ್ಯ ಗುರು ಶ್ರೀಮತಿ ಕೃಪಾ ಭಾಸ್ಕರನ್ ಇವರ ಶಿಷ್ಯೆಯರಾದ ಕು.ಕೃತಿ ಗೋಪಿನಾಥ್, ಕು.ಅನ್ವೇಷ ಗುರು, ಕು. ನವ್ಯ ಫ್ರಾನ್ಸಿಸ್ ನಂದಿದಾ ವರಿಯತೋಡಿ ಮತ್ತು ಮಹಾಲಕ್ಷ್ಮೀ ಶ್ರೀನಿವಾಸನ್, 7 ಗಂಟೆಗೆ ಗುರು ಶ್ರೀಮತಿ ಆಶಾ ಅಡಿಗ ಆಚಾರ್ಯ ಇವರ ಶಿಷ್ಯೆಯರಾದ ಕು. ಹರ್ಷಿತ್ ವೆಟ್ರಿವೇಲ್ ಮತ್ತು ಕು. ಅದಿತಿ ಆಚಾರ್ಯ ಮತ್ತು ಗಂಟೆ 7.45ಕ್ಕೆ ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ…
ಮಂಗಳೂರು : ನವಸುಮ ರಂಗಮಂಚ (ರಿ.) ಪ್ರಕಾಶನದಿಂದ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರದೊಂದಿಗೆ ಅಕ್ಷತಾ ರಾಜ್ ಪೆರ್ಲ ಇವರ ‘ಮಂದಾರ ಮಲಕ’ ಮತ್ತು ಬಾಲಕೃಷ್ಣ ಕೊಡವೂರು ಇವರ ‘ಮಾಯದಪ್ಪೆ ಮಾಯಕಂದಾಲ್’ ಎಂಬ ಎರಡು ತುಳು ನಾಟಕ ಕೃತಿಗಳ ಬಿಡುಗಡೆ ಕಾರ್ಯಕ್ರಮವು ಮಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ದಿನಾಂಕ 05-01-2024ರಂದು ನಡೆಯಲಿದೆ. ರಂಗಭೂಮಿ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್‌ಬೈಲ್ ಇವರು ಕೃತಿ ಬಿಡುಗಡೆ ಮಾಡಲಿದ್ದು, ಕೃತಿಗಳ ಕುರಿತು ನಾಟಕಕಾರರು ಹಾಗೂ ನ್ಯಾಯವಾದಿ ಶ್ರೀ ಶಶಿರಾಜ್ ರಾವ್ ಕಾವೂರು ಮತ್ತು ಬೆಸೆಂಟ್ ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರಾದ ಡಾ. ಮೀನಾಕ್ಷಿ ರಾಮಚಂದ್ರ ಇವರು ಕೃತಿ ಪರಿಚಯ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೃತಿ ಲೇಖಕರು ಹಾಗೂ ಪ್ರಕಾಶಕರು ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.
ಮಂಗಳೂರು : ರಾಗತರಂಗ ಸಂಸ್ಥೆಯಿಂದ ಮಕ್ಕಳ ಸಾಂಸ್ಕೃತಿಕ ಉತ್ಸವ, ಪ್ರತಿಭಾ ಪುರಸ್ಕಾರವಾದ ‘ಬಾಲ ಪ್ರತಿಭೋತ್ಸವ’ವು ದಿನಾಂಕ 07-01-2024ರಂದು ಸಂಜೆ 4 ಗಂಟೆಗೆ ಎಸ್.ಡಿ.ಎಮ್. ಕಾನೂನು ವಿದ್ಯಾಲಯ ಸಭಾಂಗಣದಲ್ಲಿ ನಡೆಯಲಿದೆ. ಡಾ. ದೇವರಾಜ್ ಕೆ. ಮತ್ತು ಶ್ರೀ ಚೋಲ್ಪಾಡಿ ದೇವದಾಸ ಕಾಮತ್ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಗತರಂಗ ಸಂಸ್ಥೆಯ ಗೌರವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಶುಭಾಶಂಸನೆ ಗೈಯಲಿರುವರು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆನರಾ ಹೈಸ್ಕೂಲಿನ ಮಕ್ಕಳ ಅಧ್ಯಕ್ಷೆಯಾದ ಕುಮಾರಿ ಪೂರ್ವೀ ಕೃಷ್ಣ ಇವರಿಂದ ‘ಭರತನಾಟ್ಯ’ ಮತ್ತು ಶಾರದಾ ವಿದ್ಯಾಲಯದ ಮಕ್ಕಳ ಉಪಾಧ್ಯಕ್ಷೆಯಾದ ಕುಮಾರಿ ಅನಘಾ ರಾವ್ ಇವರಿಂದ ‘ಸುಗಮ ಸಂಗೀತ’ ಹಾಗೂ ಬಾಲಪ್ರತಿಭಾ ನಿನಾದ ಸ್ಪರ್ಧಾ ವಿಜೇತ ಮಕ್ಕಳಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ವಾದ್ಯ ಸಂಗೀತ, ಛದ್ಮ ವೇಷ, ಜಾನಪದ ನೃತ್ಯ, ಏಕಪಾತ್ರಾಭಿನಯಗಳು ನಡೆಯಲಿದೆ.
ಕಲೆಯೆಂಬುದು ಯಾವ ರೀತಿಯಲ್ಲಿ ಬೇಕಾದರೂ ಪ್ರತಿಯೊಬ್ಬರನ್ನು ಆಕರ್ಷಿಸಬಹುದು. ಅದು ಹೇಗೆ ಯಾವಾಗ ಎಂದು ಹೇಳುವುದು ಅಸಾಧ್ಯ. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಆಸಕ್ತಿ ಗುರಿ ಮತ್ತು ಸಾಧಿಸುವ ಛಲ. ಕೆಲವರು ಕಲೆಯನ್ನು ನೋಡಿ ಕಲಿತರೆ ಕೆಲವರಿಗೆ ಬಾಲ್ಯದಿಂದಲೇ ಅದು ಕರಗತವಾಗಿರುತ್ತದೆ. ಚಿಕ್ಕವಯಸ್ಸಿನಲ್ಲಿ ಶಾಲೆಗೆ ಹೋದಾಗ ಅಲ್ಲಿ ಬಿಳಿಯ ಹಾಳೆಯ ಮೇಲೆ ಗೀಚಿದ ಗೆರೆಗಳಿಂದ ಹಿಡಿದು ಮುಂದಿನ ದಿನಗಳಲ್ಲಿ ತಮಗರಿವಿಲ್ಲದ ವಿಭಿನ್ನವಾದ ಕಲಾಕೃತಿಗಳ ಗುಚ್ಛವನ್ನು ಕಲಾಸಕ್ತರ ಮಡಿಲಿಗೆ ನೀಡಿದಾಗ, ಅದನ್ನು ನೋಡಿ ಅಭಿನಂದನೆಗಳ ಮಹಾಪೂರ ಬಂದಾಗ ಒಂದು ಕ್ಷಣ ತಮಗೆ ತಾವೇ ಹೆಮ್ಮೆ ಪಟ್ಟುಕೊಂಡಿದ್ದು ಇದ್ದೇ ಇರುತ್ತದೆ. ಹೀಗೆ ಬಾಲ್ಯದಿಂದಲೇ ಕಲೆಯ ಬಗ್ಗೆ ಅಪಾರ ಆಸಕ್ತಿ ಕೂಡ ಮೂಡಿಸಿಕೊಂಡು ಬಂದ ಕಲಾವಿದೆ ಶ್ರೀಮತಿ ಜಯಶ್ರೀ ಶರ್ಮ. ವೃತ್ತಿಯಲ್ಲಿ ಉಪನ್ಯಾಸಕರಾದರೂ ಕೂಡ ಕಲೆಯ ಬಲೆಗೆ ಸಿಲುಕಿ ತಮ್ಮದೇ ಆದ ಕಲಾ ಜಗತ್ತನ್ನು ಸೃಷ್ಟಿಸಿಕೊಂಡವರು ಜಯಶ್ರೀ ಶರ್ಮರವರು. ತಾನು ನೋಡಿದ್ದನ್ನು ಅನುಭವಿಸಿದ್ದನ್ನು ಕುಂಚದಲ್ಲಿ ಅರಳಿಸಿ ಎಲ್ಲರೂ ಮೆಚ್ಚುವ ಕಲಾತ್ಮಕ ಚಿತ್ರಗಳನ್ನು ನೀಡಿರುವುದು ಮೆಚ್ಚುಗೆ ವಿಷಯ. ಬಾಲ್ಯದಲ್ಲಿ ಶಾಲಾ…
ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೊಳುವಾರು ಶ್ರೀ ಅಂಜನೇಯ ಯಕ್ಷಗಾನ ಕಲಾ ಸಂಘದ 55ರ ಸಂಭ್ರಮ ಕಾರ್ಯಕ್ರಮವು ದಿನಾಂಕ 23-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ತಾಳಮದ್ದಳೆಗೆ ಸೀಮಿತವಾಗಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘವು ತನ್ನ 55ನೇ ವರ್ಷಾಚರಿಸುವುದು ನೋಡಿದರೆ ಯಕ್ಷಗಾನ ತಾಳಮದ್ದಳೆ ಎಷ್ಟು ಪ್ರಬಲವಾದ ಮಾಧ್ಯಮ ಅನ್ನುವುದನ್ನು ತೋರಿಸಿಕೊಟ್ಟಿದೆ. ಭಾಸ್ಕರಾಚಾರ್ಯ ಅವರು ಈ ಸಂಘದ ಸಾರಥ್ಯ ವಹಿಸಿಕೊಂಡು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. 10 ವರ್ಷಗಳ ಹಿಂದೆ ಮಹಿಳಾ ಸಂಘ ಪುತ್ತೂರಿನಲ್ಲಿ ಆರಂಭಿಸಿ ಹಲವು ಮಹಿಳಾ ಅರ್ಥಧಾರಿಗಳಿಗೆ ತರಬೇತಿ ನೀಡಿದ್ದಾರೆ. ಒಟ್ಟಿನಲ್ಲಿ ಈ ಸಂಘದಿಂದ ಯಕ್ಷಗಾನಕ್ಕೆ ಇನ್ನಷ್ಟು ಸೇವೆ ಸಿಗಲಿ” ಎಂದು ಹಾರೈಸಿದರು. ಸ್ವರ್ಣೋದ್ಯಮಿ ಶ್ರೀ ಲಕ್ಷ್ಮೀಕಾಂತ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, “ಕಲಾ ಸಂಘ ಮತ್ತಷ್ಟು ಬೆಳವಣಿಗೆ ಕಾಣಲಿ” ಎಂದು ಶುಭ ಹಾರೈಸಿದರು. ಹಿರಿಯ ಯಕ್ಷಗಾನ ಕಲಾವಿದ ಡಾ.…
ಉಡುಪಿ : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಮಂಗಳೂರು ಮತ್ತು ಕರಾವಳಿ ನೃತ್ಯ ಕಲಾವಿದರ ನೃತ್ಯ ಸಮ್ಮೇಳನ ಸಮಿತಿ ವತಿಯಿಂದ ಹಮ್ಮಿಕೊಂಡ ‘ನೃತ್ಯೋತ್ಕರ್ಷ 2023’ ನೃತ್ಯ ಸಮ್ಮೇಳನವನ್ನು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ದಿನಾಂಕ 24-12-2023ರಂದು ಅಲ್ಲಿಯ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಿ ಮಾತನಾಡಿ “ಮನಸ್ಸಿಗೆ ಮದ ನೀಡದೆ ಮುದ ನೀಡುವ ಮೋಹಕ ಕಲೆ ಭರತನಾಟ್ಯ. ಕರಾವಳಿಯ ನೃತ್ಯ ಕಲಾವಿದರ ಈ ಸಂಘಟನೆ ಸ್ತುತ್ಯಾರ್ಹ” ಎಂದು ಹೇಳಿದರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಸ್ಥಾಪಕ ಅಧ್ಯಕ್ಷ ಪಿ. ಕಮಲಾಕ್ಷ ಆಚಾರ್’ ಉಪಸ್ಥಿತರಿದ್ದರು. ಸಮ್ಮೇಳನದ ಅಧ್ಯಕ್ಷ ಮೈಸೂರಿನ ಪ್ರೊ. ಕೆ. ರಾಮಮೂರ್ತಿ ರಾವ್ ದಂಪತಿಯನ್ನು ಗೌರವಿಸಲಾಯಿತು. ಗೋಷ್ಠಿಗಳಲ್ಲಿ ವಿದ್ವಾನ್ ಚಂದ್ರಶೇಖರ ನಾವಡ ಅಧ್ಯಕ್ಷತೆಯಲ್ಲಿ ಗುರು ಉಷಾ ದಾತಾರ್ ದೇವಾಲಯ ನೃತ್ಯದ ಬಗ್ಗೆ, ಲಂಡನ್‌ನ ಚಿತ್ರಲೇಖ ಬೋಳಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶೀಲಾ ಚಂದ್ರಶೇಖರ್ ಭಕ್ತಿಯ ವಿವಿಧ ಆಯಾಮಗಳ ಬಗ್ಗೆ ನೃತ್ಯ ಪ್ರಾತ್ಯಕ್ಷಿಕೆ, ವಿಚಾರ ಗೋಷ್ಠಿಯಲ್ಲಿ ಭರತನಾಟ್ಯಕ್ಕೆ ಧ್ವನಿಸುರುಳಿ: ಸಜೀವ ಹಿಮ್ಮೇಳ…
ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಸಂಸ್ಥೆಯ ಐವತ್ತರ ಸಂಭ್ರಮದ ಹಬ್ಬ ‘ಯಕ್ಷ ಸಪ್ತೋತ್ಸವ’ ಕಾರ್ಯಕ್ರಮವು ದಿನಾಂಕ 01-01-2024ರ ಸೋಮವಾರದಿಂದ 07-01-2024 ಆದಿತ್ಯವಾರದವರೆಗೆ ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. ದಿನಾಂಕ 01-01-2024ರ ಸೋಮವಾರ ‘ಪುತ್ರಕಾಮೇಷ್ಟಿ’, 02-01-2024ರ ಮಂಗಳವಾರ ‘ಸೀತಾ ಕಲ್ಯಾಣ’ – ‘ಪರಶುರಾಮ ಗರ್ವಭಂಗ’, 03-01-2024ರ ಬುಧವಾರ ‘ಪಟ್ಟಾಭಿಷೇಕ ಭಂಗ’, 04-01-2024ರ ಗುರುವಾರ ‘ಸೀತಾಪಹಾರ’, 05-01-2024ರ ಶುಕ್ರವಾರ ‘ವಿಭೀಷಣ ನೀತಿ’ – ‘ಕೈಕಸಾ ನೀತಿ’, 06.01.2024ರ ಶನಿವಾರ ‘ರಾವಣ ವಧೆ’ ಹಾಗೂ ದಿನಾಂಕ 07-01-2024ರ ಆದಿತ್ಯವಾರ ದೊಂದಿ ಬೆಳಕಿನಲ್ಲಿ ‘ಅಗ್ನಿ ಪರೀಕ್ಷೆ’ – ‘ರಾಮಪಟ್ಟಾಭೀಷೇಕ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಕಲಾವಿದರುಗಳಾಗಿ ಸರ್ವಶ್ರೀಗಳಾದ ರಾಘವೇಂದ್ರ ಮಯ್ಯ ಹಾಲಾಡಿ, ಜನ್ಸಾಲೆ ರಾಘವೇಂದ್ರ ಆಚಾರ್, ಸುರೇಶ್ ಶೆಟ್ಟಿ ಶಂಕರನಾರಾಯಣ, ಪ್ರಸನ್ನ ಭಟ್ ಭಾಲ್ಕಲ್, ಪರಮೇಶ್ವರ ನ್ಯಾಕ್ ಕಾನ್‌ಗೋಡು, ಲಂಬೋದರ ಹೆಗಡೆ ನಿಟ್ಟೂರು, ಉದಯ ಕುಮಾರ ಹೊಸಾಳ, ಸುನಿಲ್ ಭಂಢಾರಿ ಕಡತೋಕ, ಬೋಳೆರೆ ಗಜಾನನ ಭಂಡಾರಿ, ಎನ್.ಜಿ.ಹೆಗೆಡೆ, ರಾಘವೇಂದ್ರ ಹೆಗಡೆ, ಶಶಿ ಆಚಾರ್,…
ಧಾರವಾಡ : ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ.) ಇದರ ವತಿಯಿಂದ ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ ಅವರ ಜನ್ಮ ದಿನಾಚರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂಗೀತೋತ್ಸವ -2023 ಕಾರ್ಯಕ್ರಮವು ದಿನಾಂಕ 31-12-2023ರಂದು ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಭಾರತ ಸರ್ಕಾರದ ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿಯವರ ಘನ ಉಪಸ್ಥಿತಿಯಲ್ಲಿ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ ಎಸ್. ಲಾಡ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮುಂಜಾನೆ 9.30ಕ್ಕೆ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕಚೇರಿಯಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ಧಾರವಾಡದ ಶ್ರೀಮತಿ ಅಕ್ಕಮಹಾದೇವಿ ಆಲೂರ, ಹುಬ್ಬಳ್ಳಿ ಡಾ. ಚಂದ್ರಿಕಾ ಕಾಮತ್, ಉಜಿರೆ ಡಾ. ಮಿಥುನ ಚಕ್ರವರ್ತಿ…