Subscribe to Updates
Get the latest creative news from FooBar about art, design and business.
Author: roovari
ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 80ರ ಸಂಭ್ರಮ ಕಾರ್ಯಕ್ರಮ, ಕೀರಿಕ್ಕಾಡು ಪುರಸ್ಕಾರ ಪ್ರದಾನ ಹಾಗೂ ಆರೋಗ್ಯ ತರಬೇತಿ ಶಿಬಿರ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ದಿನಾಂಕ 01 ಡಿಸೆಂಬರ್ 2024ರ ಭಾನುವಾರ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇವರಿಗೆ ಕೀರಿಕ್ಕಾಡು ಪುರಸ್ಕಾರವನ್ನು ಪ್ರದಾನಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಡಿ. ರಾಮಣ್ಣ ಮಾಸ್ತರ್ ಅಭಿನಂದನಾ ಭಾಷಣ ಮಾಡಿದರು. ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ರಮಾನಂದ ಬನಾರಿ, ಕಾರ್ಯದರ್ಶಿ ವಿಶ್ವವಿನೋದ ಬನಾರಿ, ನಂದಕಿಶೋರ ಬನಾರಿ ಮತ್ತಿತರರು ಉಪಸ್ಥಿತರಿದ್ದರು. ನಮಿತ ಬೆಳ್ಳಿಪ್ಪಾಡಿ ಪ್ರಾರ್ಥನೆ ಹಾಡಿ, ಪೂಜಾಶ್ರೀ ದೇಲಂಪಾಡಿ ಸ್ವಾಗತಿಸಿ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ, ರಮಾನಂದ ರೈ ವಂದಿಸಿದರು. ಬಳಿಕ ಹಿರಿಯ ಯಕ್ಷಗಾನ ಕಲಾವಿದರ ನೇತೃತ್ವದಲ್ಲಿ ಶ್ರೀರಾಮ ದರ್ಶನ…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ- 82’ರ ಕಾರ್ಯಕ್ರಮ ದಿನಾಂಕ 05 ಡಿಸೆಂಬರ್ 2024ರಂದು ತೆಕ್ಕಟ್ಟೆ ಕನ್ನುಕೆರೆಯ ನವಶಕ್ತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಧುವರರಾದ ಸತ್ಯಶ್ರೀ ಹಾಗೂ ಅರುಣ್ ಇವರನ್ನು ಅಭಿವಂದಿಸಿದ ಪ್ರಸಿದ್ಧ ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ ಮಾತನಾಡಿ “ಸಾಂಸ್ಕೃತಿಕ ಕಾರ್ಯಕ್ರಮಗಳು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಸರಿಸಿದಾಗ ಸಾಮಾಜಿಕವಾಗಿ ಬೆಳೆಯುತ್ತದೆ. ಸಾಂಸ್ಕೃತಿಕ ಸ್ಪರ್ಷ ಜೀವನಕ್ಕೆ ಬಹು ಮುಖ್ಯ. ರಾಗ, ತಾಳ, ಲಯಗಳ ಸಮ್ಮಿಳಿತದೊಂದಿಗೆ ಸಾಂಸ್ಕೃತಿಕ ಪಕ್ವತೆಯನ್ನು ಪಡೆಯುವುದು ಹೇಗೋ, ಅದೇ ತರಹ ಜೀವನದಲ್ಲಿಯೂ ಕಷ್ಟ, ಸುಖಗಳ ಸಾಮ್ಯತೆಯನ್ನು ಸಾಧಿಸಿ ಪಕ್ವತೆಯನ್ನು ಸಾಧಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜೀವನದಲ್ಲಿ ಸಮತೋಲನವನ್ನು ಸಾಧಿಸುವುದೇ ಜೀವನಕ್ಕೆ ಬಹುಮುಖ್ಯ.” ಎಂದರು. ತೆಕ್ಕಟ್ಟೆ ವೆಂಕಟೇಶ ಹತ್ವಾರ್, ಶ್ರೀಮತಿ ಕಲಾವತಿ, ಇಂದಿರಾ, ಶ್ರೀನಿಧಿ ಹತ್ವಾರ್, ಗುರು ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸ್ಕಂದಾ ಉರಾಳ್, ಪಂಚಮಿ ವೈದ್ಯ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ‘ಯಕ್ಷ ರಸ ಗಾಯನ’ ರಂಗದಲ್ಲಿ ಸಂಪನ್ನಗೊಂಡಿತು.
ವಿದ್ಯಾಗಿರಿ: ಆಳ್ವಾಸ್ (ಸ್ವಾಯತ್ತ) ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ವೇದಿಕೆಯ ಶೈಕ್ಷಣಿಕ ವರ್ಷದ ಚಟುವಟಿಕೆ ‘ಅಭಿವ್ಯಕ್ತಿ’ ಇದರ ಚಾಲನಾ ಸಮಾರಂಭವು ದಿನಾಂಕ 03 ಡಿಸೆಂಬರ್ 2024ರ ಮಂಗಳವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುಲಸಚಿವ (ಮೌಲ್ಯಮಾಪನ) ಡಾ. ಎನ್. ಪಿ. ನಾರಾಯಣ ಶೆಟ್ಟಿ ಮಾತನಾಡಿ “ಆಲಿಸುವ ಹಾಗೂ ಚರ್ಚಿಸಿ ನಿರ್ಧರಿಸುವ ಮನೋಭಾವವೇ ಯಶಸ್ಸು ಕಾಣುವ ಮಾರ್ಗ. ಪತ್ರಿಕೋದ್ಯಮದಲ್ಲಿ ಯಶಸ್ಸು ಕಾಣಲು ಸಂಯಮದ ಆಲಿಸುವ ಮನೋಭಾವ ಬಹುಮುಖ್ಯ. ಯಾವುದೇ ಕಾರ್ಯಕ್ರಮ ಯೋಜಿಸುವ ಮೊದಲು ಸಾಕಷ್ಟು ಚರ್ಚೆ ನಡೆಸಬೇಕು. ಹಿರಿಯರು- ಕಿರಿಯರು ಎನ್ನದೇ ಸಲಹೆ – ಸೂಚನೆಗಳನ್ನು ಸ್ವೀಕರಿಸಿಕೊಂಡು ನಿರ್ಧಾರಕ್ಕೆ ಬರಬೇಕು. ಭಾಷೆಯ ಮೇಲಿನ ಹಿಡಿತ ಹಾಗೂ ತಂತ್ರಜ್ಞಾನದ ಸ್ಪರ್ಶ ಇಂದಿನ ಮಾಧ್ಯಮ ಜಗತ್ತಿಗೆ ಅನಿವಾರ್ಯ ಎಂದ ಅವರು, ಜ್ಞಾನ ಮತ್ತು ಅಭಿವ್ಯಕ್ತಿ ಪತ್ರಿಕೋದ್ಯಮದ ಎರಡು ಕಣ್ಣುಗಳು.” ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ “ನಾವು ಏನು ಆಗಿಲ್ಲವೋ, ಆ…
ಮಂಗಳೂರು : ತುಳು ಪರಿಷತ್ ಇದರ ನೂತನ ಅಧ್ಯಕ್ಷರಾಗಿ ಕಂಚಿಲ ಶುಭೋದಯ ಆಳ್ವ ಆಯ್ಕೆಯಾಗಿದ್ದಾರೆ. ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ದಿನಾಂಕ 28 ಸೆಪ್ಟೆಂಬರ್ 2024ರಂದು ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಧರಣೇಂದ್ರ ಕುಮಾರ್, ಡಾ. ಮೀನಾಕ್ಷಿ ರಾಮಚಂದ್ರ, ಚಂದ್ರಕಲಾ ರಾವ್, ಸುಮತಿ ಹೆಗ್ಡೆ, ಗಣೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಬೆನೆಟ್ ಜಿ. ಅಮ್ಮನ್ನ ಆಯ್ಕೆಯಾಗಿದ್ದಾರೆ. ಜತೆ ಕಾರ್ಯದರ್ಶಿಯಾಗಿ ಜಿನೇಶ್ ಪ್ರಸಾದ್, ರಾಜಶ್ರೀ ಜೆ. ಪೂಜಾರಿ, ಉಮರ್ ಕುಂಞ ಸಾಲೆತ್ತೂರು, ಕೋಶಾಧಿಕಾರಿಯಾಗಿ ಯೋಗೀಶ್ ಕುಮಾರ್ ಆಯ್ಕೆಯಾದರು. ಗೌರವ ಅಧ್ಯಕ್ಷರಾಗಿ ಡಾ. ಪ್ರಭಾಕರ್ ನೀರುಮಾರ್ಗ, ಸ್ವರ್ಣ ಸುಂದರ್, ತಾರಾನಾಥ್ ಗಟ್ಟಿ ಕಾಪಿಕಾಡ್ ಆಯ್ಕೆಯಾಗಿದ್ದಾರೆ.
ಈ ಜಗತ್ತು ಶಬ್ದದಿಂದ ತುಂಬಿದೆ, ನಾದದಿಂದ ಕೂಡಿದೆ, ಅದೇ ರೀತಿ ಚಿತ್ರಗಳಿಂದಲೂ ಆವರಿಸಿದೆ. ಈಗಿನ ತಂತ್ರಜ್ಞಾನಗಳು ಅದನ್ನು ಸಾಬೀತು ಪಡಿಸುತ್ತಲೂ ಇದೆ. ಗಾಳಿಯಲ್ಲೇ ನಿಮಗೆ ಎಲ್ಲವೂ ಗೋಚರವಾಗುತ್ತದೆ. ಆದರೂ ನಮಗೆ ಗೋಡೆ ಮೇಲೆ ಚೌಕಟ್ಟಿನಿಂದ ಕೂಡಿದ ಚಿತ್ರ ನೋಡಿದಾಗ ಮಾತ್ರ ಸಮಾಧಾನ. ಅದಕ್ಕೆ ಡಿ.ವಿ.ಜಿ.ಯವರು, “ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು ? ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು, ನಿತ್ಯ ಸತ್ತ್ವವೆ ಭಿತ್ತಿ, ಜೀವನ ಕ್ಷಣ ಚಿತ್ರ, ತತ್ತ್ವವೀ ಸಂಬಂಧ – ಮಂಕುತಿಮ್ಮ” ಅಂದಿದ್ದಾರೆ. ಚಿತ್ರಕ್ಕೊಂದು ಗೋಡೆ ಆಧಾರ ಬೇಕು. ಹಾಗೆಯೇ ಗೋಡೆ ಸುಂದರವಾಗಿರಬೇಕೆಂದರೆ ಒಂದು ಚಿತ್ರ ಬೇಕು. ಒಂದಕ್ಕೊಂದು ಸಂಬಂಧ ಇರುವುದು ನಮಗೆ ಅರಿವಾಗುತ್ತದೆ. ಪರಮಾತ್ಮನಿಗೆ ಈ ಬ್ರಹ್ಮಾಂಡವೇ ಒಂದು ಕ್ಯಾನ್ವಾಸ್, ಈ ಜಗತ್ತೆ ಒಂದು ಚಿತ್ರ. ದಿನಾಂಕ 30 ನವೆಂಬರ್ 2024ರಂದು ಇಂದಿರಾ ನಗರದ ಪ್ರತಿಷ್ಠಿತ ಜಾಗದಲ್ಲಿ ‘ಆರ್ಟಿಸೆರಾ’ ತನ್ನ ಕಲಾತ್ಮಕ ಕಲಾ ಗ್ಯಾಲರಿಯನ್ನು ಪ್ರತಿಷ್ಠಾಪಿಸಿದೆ. “A Realm of possibilities” ಕಲಾ ಪ್ರದರ್ಶನದ ಮೂಲಕ ಕಲಾ ಲೋಕಕ್ಕೆ ತನ್ನನ್ನು ತೆರೆದುಕೊಂಡಿದೆ. ಅಭಿರುಚಿಗಳು ವಿಸ್ತಾರಗೊಳ್ಳುವುದೇ…
ಮಂಗಳೂರು : ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ತುಳುಕೂಟದ ನೂತನ ಅಧ್ಯಕ್ಷರಾಗಿ ಮರೋಳಿಯ ಶ್ರೀಮತಿ ಹೇಮಾ ಡಿ. ನಿಸರ್ಗ ಆಯ್ಕೆಯಾಗಿದ್ದಾರೆ. ರೊ. ಜೆ. ವಿ. ಶೆಟ್ಟಿ, ಉದ್ಯಮಿ ಪೆಲತ್ತಡಿ ಪದ್ಮನಾಭ ಕೋಟ್ಯಾನ್ ಉಪಾಧ್ಯಕ್ಷರಾಗಿ, ಪ್ರ. ಕಾರ್ಯದರ್ಶಿಯಾಗಿ ವರ್ಕಾಡಿ ರವಿ ಅಲೆವೂರಾಯ, ಕೋಶಾಧಿಕಾರಿಯಾಗಿ ಚಂದ್ರಶೇಖರ ಸುವರ್ಣ, ಪಿ. ಗೋಪಾಲಕೃಷ್ಣ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಉಳಿದಂತೆ ಎಂ. ರತ್ನ ಕುಮಾರ್, ಭಾಸ್ಕರ ಕುಲಾಲ್ ಬರ್ಕೆ, ರಮೇಶ್ ಕುಲಾಲ್ ಬಾಯಾರು, ಡಾ. ರಾಕೇಶ್ ಕುಮಾರ್ ಬಿ, ದಿನೇಶ್ ಬಗಂಬಿಲ, ನಾಗೇಶ್ ದೇವಾಡಿಗ ಕದ್ರಿ, ಸಂಜೀವ ಅಡ್ಯಾರ್, ವಿಶ್ವನಾಥ ಪೂಜಾರಿ ಸೋಣಳಿಕೆ, ಶ್ರೀಮತಿ ಕಾಮಾಕ್ಷಿ ಸುಭಾಸ್, ಮಮತಾ ಪ್ರವೀಣ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿನಾಂಕ 01 ಡಿಸೆಂಬರ್ 2024ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದರು
ಬೆಂಗಳೂರು : ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2022ನೇ 2023ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2023ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ ಹದಿನೆಂಟನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2024ಕ್ಕೆ ಶಿಲ್ಪಕಲಾ ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಿರುತ್ತದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಕೆಳಕಂಡಂತೆ ಶಿಲ್ಪಿಗಳನ್ನು 2022ನೇ ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿರುತ್ತದೆ. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.50,000/- ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 2022ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು 1. ಶ್ರೀ ವೀರಭದ್ರಪ್ಪ ಕಾಳಪ್ಪ ಕವಲೂರು (ಸಂಪ್ರದಾಯ ಶಿಲ್ಪ) – ಗದಗ ಜಿಲ್ಲೆ 2. ಶ್ರೀ ಎಸ್.ಪಿ. ಪಣಿಯಾಚಾರ್ (ಸಂಪ್ರದಾಯ ಶಿಲ್ಪ) – ಚಿಕ್ಕಮಗಳೂರು ಜಿಲ್ಲೆ 3. ಶ್ರೀ ಬನಪ್ಪ ಬಡಿಗೇರ (ಜಾನಪದ ಶಿಲ್ಪ) – ಯಾದಗಿರಿ ಜಿಲ್ಲೆ 4. ಶ್ರೀ ಗೋಪಿನಾಥ್ ಎಸ್. (ಸಮಕಾಲೀನ ಶಿಲ್ಪ) – ಬೆಂಗಳೂರು 5. ಶ್ರೀ ಸಿ.ವಿ.…
ಮಂಗಳೂರು : ಸಾಧನ ಬಳಗ ಮಂಗಳೂರು ವತಿಯಿಂದ ‘ಸ್ನೇಹ ಮಿಲನ-25’ ಕಾರ್ಯಕ್ರಮ ವಿ.ಟಿ.ರಸ್ತೆಯ ಕೃಷ್ಣ ಮಂದಿರದಲ್ಲಿ ದಿನಾಂಕ 17 ನವೆಂಬರ್2024 ರಂದು ನಡೆಯಿತು. ಡಾ. ಕುಂಬಳೆ ಅನಂತ ಪ್ರಭು ಹಾಗೂ ಉದ್ಯಮಿ ಮಹೇಶ್ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉದ್ಯಮಿ ಮಹೇಶ್ ಕಾಮತ್ “ಸಂಗೀತ ನೃತ್ಯ ಹಾಗೂ ನಾಟಕಗಳನ್ನು ಕಲಿತಾಗ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಧೈರ್ಯ ಬರುತ್ತದೆ.” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾಧಕರಾದ ಚಿ. ಸಮರ್ಥ ಶೆಣೈ ಹಾಗೂ ಡಾ. ಅನಂತ ಪ್ರಭು ಇವರನ್ನು ಸಮ್ಮಾನಿಸಲಾಯಿತು. ಸಭಾ ಕರ್ಯಕ್ರಮದ ಬಳಿಕ ವಿದುಷಿ ವೃಂದಾ ನಾಯಕ್ ನೇತೃತ್ವದಲ್ಲಿ ಸಮೂಹ ನೃತ್ಯ, ಗಾಯನ ಹಾಗೂ ಯು.ಪ್ರಕಾಶ ಶೆಣೈ ಮತ್ತು ಪುಷ್ಪಲತಾ ಭಟ್ ಇವರ ನಿರ್ದೇಶನದಲ್ಲಿ ಕಲಾ ಸಾಧನ ಮಕ್ಕಳಿಂದ ‘ಪತ್ತೋಳಿ ರೂಕ’ ಎಂಬ ಕೊಂಕಣಿ ನಾಟಕ ಪ್ರದರ್ಶನಗೊಂಡಿತು. ಸಬಿತಾ ಕಾಮತ್ ಸ್ವಾಗತಿಸಿ, ಲಕ್ಷ್ಮೀ ಭಂಡಾರಿ, ವಿದ್ಯಾ ಪ್ರಭು, ಭಾಗ್ಯ ಭಟ್ ನಿರೂಪಿಸಿದರು. ಡಾ। ಕೃಷ್ಣ ಪ್ರಭು, ಮಂಜುಳಾ ಕಾಮತ್,…
ಯಾವುದೇ ಸಮಾಜದಲ್ಲಾದರೂ ಸಾರ್ವಜನಿಕ ಅಥವಾ ಸಾರ್ವತ್ರಿಕ ಎಂದು ಪರಿಭಾವಿಸಲಾಗುವ ನಿರೂಪಣೆಗಳನ್ನು ಮತ್ತು ವ್ಯಾಖ್ಯಾನಗಳನ್ನು ತಳಮಟ್ಟದ ಜನಸಾಮಾನ್ಯರವರೆಗೂ ತಲುಪಿಸಿ, ಇಡೀ ಸಮಾಜವನ್ನು ಅವುಗಳ ಪ್ರಭಾವಕ್ಕೊಳಪಡಿಸುವ ಪ್ರಕ್ರಿಯೆಯ ಹಿಂದೆ, ಆಯಾ ಸಮಾಜದ ಮೇಲೆ ಬೌದ್ಧಿಕ ಹಿಡಿತ, ಭೌತಿಕ ಪ್ರಾಬಲ್ಯ ಮತ್ತು ಸಾಂಸ್ಕೃತಿಕ ಪಾರಮ್ಯ ಸಾಧಿಸಿರುವಂತಹ ಚಿಂತನಧಾರೆಗಳು ಪ್ರಧಾನವಾಗಿ ಕಾಣುತ್ತವೆ. ಇದನ್ನೇ ಕಾರ್ಲ್ ಮಾರ್ಕ್ಸ್ ಮತ್ತು ಏಂಗೆಲ್ಸ್ ತಮ್ಮ “ಆಳುವ ವರ್ಗಗಳು ಮತ್ತು ಆಳುವ ಚಿಂತನೆಗಳು” ಎಂಬ ಪ್ರಬಂಧದಲ್ಲಿ “ಒಂದು ನಿರ್ದಿಷ್ಟ ಸಮಾಜದಲ್ಲಿ ಚಾಲ್ತಿಯಲ್ಲಿರುವ ಕಲ್ಪನೆಗಳು ಮತ್ತು ಚಿಂತನಾ ವಿಧಾನಗಳು ಆಳುವ ವರ್ಗಗಳಿಂದಲೇ ರೂಪುಗೊಳ್ಳುವುದಲ್ಲದೆ, ಅದರ ಬಲದಿಂದಲೇ ಸ್ಥಾಪಿತ ಅಭಿಪ್ರಾಯಗಳಾಗುತ್ತವೆ. ಭೌತಿಕ ಸಂಪತ್ತಿನ ಉತ್ಪಾದನೆಯನ್ನು ನಿಯಂತ್ರಿಸುವ ವರ್ಗವೇ ಸಮಾಜದ ಬೌದ್ಧಿಕ ಉತ್ಪಾದನೆಯನ್ನೂ ನಿಯಂತ್ರಿಸುತ್ತದೆ” ಎಂದು ಹೇಳುತ್ತಾರೆ. ವರ್ತಮಾನದ ಭಾರತದಲ್ಲಿ ಈ ಆಳುವ ವರ್ಗಗಳನ್ನು ಪ್ರತಿನಿಧಿಸುತ್ತಿರುವುದು ಸಾಂಪ್ರದಾಯಿಕ ಸಾಂಸ್ಕೃತಿಕ ರಾಜಕಾರಣ. ಮಾರ್ಕ್ಸ್ ನ ಈ ಮಾತುಗಳು ಸಾರ್ವಕಾಲಿಕ ಸತ್ಯ ಎನ್ನಲು ಯಾವ ಚಾರಿತ್ರಿಕ ಪುರಾವೆಯೂ ಬೇಕಿಲ್ಲ. ಸಮಕಾಲೀನ ವಸಾಹತೋತ್ತರ ಭಾರತದ, 1990ರ ಜಾಗತೀಕರಣ ಮತ್ತು ಅಯೋಧ್ಯೆ ನಂತರದ…
ಉಡುಪಿ: ಬೆಂಗಳೂರಿನ ಗಾಯನ ಸಮಾಜವು ಆಯೋಜಿಸಿದ 54 ನೇ ಸಂಗೀತ ಸಮ್ಮೇಳನವು ದಿನಾಂಕ 03 ನವೆಂಬರ್2024ರಿಂದ 10 ನವೆಂಬರ್ 2024ರ ವರೆಗೆ ಬೆಂಗಳೂರಿನ ಕೆ. ಆರ್. ರಸ್ತೆಯಲ್ಲಿರುವ ‘ಬೆಂಗಳೊರು ಗಾಯನ ಸಮಾಜ’ದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸೇವೆ ಮತ್ತು ಸಾಧನೆಗಾಗಿ ಉಡುಪಿಯ ಸಂಗೀತ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಇವರಿಗೆ “ಕರ್ನಾಟಕ ಕಲಾಚಾರ್ಯ” ಪ್ರಶಸ್ತಿ ಮತ್ತು ಐವತ್ತು ಸಾವಿರ ನಗದು ನೀಡಿ ಸನ್ಮಾನಿಸಲಾಯಿತು. ಮೇಲುಕೋಟೆ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀಯದುಗಿರಿ ಯತಿರಾಜ ನಾರಾಯಣಜೀಯರ್ ಇವರು ಪ್ರಶಸ್ತಿ ಪ್ರದಾನ ಮಾಡಿದರು. ಗಾಯನ ಸಮಾಜದ ಅಧ್ಯಕ್ಷರಾದ ಎಮ್. ಆರ್. ವಿ ಪ್ರಸಾದ್ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಮಧೂರು ಬಾಲಸುಬ್ರಹ್ಮಣ್ಯಂ ಇವರ ಸಂಗೀತ ಕಛೇರಿಯನ್ನು ಏರ್ಪಡಿಸಲಾಗಿತ್ತು.