Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಶ್ರೀ ಕಟೀಲು ಮೇಳದಲ್ಲಿ 35 ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಬಣ್ಣದ ವೇಷಧಾರಿ ನಗ್ರಿ ಮಹಾಬಲ ರೈ ಇವರಿಗೆ ಕದ್ರಿ ಯಕ್ಷ ಬಳಗ ‘ಕದ್ರಿ ವಿಷ್ಣು ಪ್ರಶಸ್ತಿ – 2024’ ನೀಡಿ ಗೌರವಿಸಿತು. ಕದ್ರಿ ಯಕ್ಷ ಬಳಗದ ವತಿಯಿಂದ ದಿನಾಂಕ 27 ನವೆಂಬರ್ 2024ರಂದು ಆಯೋಜಿಸಲಾದ ಕಟೀಲು ಮೇಳದ ಸೇವೆ ಆಟದ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಭಾಗಿತ್ವದಲ್ಲಿ ಸದಸ್ಯ ಮೋಹನ್ ಕೊಪ್ಪಳ ಕದ್ರಿ ಅವರ ಉಪಸ್ಥಿತಿಯಲ್ಲಿ ಸುಧಾಕರ ರಾವ್ ಪೇಜಾವರ ಅವರು ಕದ್ರಿ ವಿಷ್ಣು ಸಂಸ್ಮರಣೆ ಮಾಡಿದರು. ಬಳಗದ ಅಧ್ಯಕ್ಷ ನವನೀತ ಶೆಟ್ಟಿ, ಭಾಸ್ಕರ ಶೆಟ್ಟಿ, ಗುರುದೇವ್ ಕಲ್ಯಾಣ್, ಸೀತಾರಾಮ್ ಅರೆಕೆರೆಬೈಲ್, ರವೀಂದ್ರನಾಥ ಶೆಟ್ಟಿ ಮುಂಡೂರು ದೊಡ್ಡಮನೆ, ಗೋಕುಲ್ ಕದ್ರಿ, ಬೆಟ್ಟಂಪಾಡಿ ಸುಂದರ ಶೆಟ್ಟಿ, ಜಯಶೀಲ ಅಡ್ಯಂತಾಯ, ತಾರಾನಾಥ್ ಶೆಟ್ಟಿ ಬೋಳಾರ, ರಾಮಚಂದ್ರ ಭಟ್ ಎಲ್ಲೂರು, ನಿವೇದಿತಾ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಹರೀಶ್ ಕುಮಾರ್ ಚಿತ್ರಾಪುರ, ಮೂಲ್ಕಿ ಕರುಣಾಕರ ಶೆಟ್ಟಿ, ಪಣಂಬೂರು…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಮಹಿಳಾ ವಿಂಶತಿ ಸರಣಿ -18 ತಾಳಮದ್ದಳೆ ಕಾರ್ಯಕ್ರಮವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ನವಗ್ರಹ ಗುಡಿಯಲ್ಲಿ ‘ಕರ್ಣ ಪರ್ವ’ ಎಂಬ ಆಖ್ಯಾನದೊಂದಿಗೆ ದಿನಾಂಕ 02 ಡಿಸೆಂಬರ್ 2024ರ ಸೋಮವಾರ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ನಿತೀಶ್ ಎಂಕಣ್ಣ ಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪಿ.ಟಿ. ಜಯರಾಮ್ ಭಟ್, ಮುರಳಿಧರ ಕಲ್ಲೂರಾಯ ಮತ್ತು ಮಾಸ್ಟರ್ ಪರೀಕ್ಷಿತ್ ಹಂದ್ರಟ್ಟ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ (ಕರ್ಣ), ಭಾಸ್ಕರ ಬಾರ್ಯ (ಶ್ರೀ ಕೃಷ್ಣ), ಮಾಂಬಾಡಿ ವೇಣುಗೋಪಾಲ ಭಟ್ (ಅರ್ಜುನ), ಗುಡ್ಡಪ್ಪ ಬಲ್ಯ (ಶಲ್ಯ), ದುಗ್ಗಪ್ಪ ನಡುಗಲ್ಲು (ಅಶ್ವಸೇನ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ರಂಗನಾಥ ರಾವ್ ವಂದಿಸಿದರು.
ಮಂಗಳೂರು : ತಲಪಾಡಿಯ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ‘ಕನ್ನಡ ಹಬ್ಬ’ವನ್ನು ದಿನಾಂಕ 27 ನವೆಂಬರ್ 2024ರಂದು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಮತ್ತು ಅದರ ಸುತ್ತ ಇರುವ ಪಂಪ, ರನ್ನ, ಜನ್ನರಿಂದ ಹಿಡಿದು ಇತ್ತೀಚಿನ ಕವಿಗಳ ಮಹಾ ಕಾವ್ಯಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಚ್ಚೇವು ಕನ್ನಡದ ದೀಪ ಎಂಬ ಹಾಡಿನೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿನಿಯರಿಂದ ನಾಡಗೀತೆ ಗಾಯನದ ನಂತರ ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ. ಜಿ. ಗಣ್ಯರನ್ನು ಸ್ವಾಗತಿಸಿದರು. ಗಣ್ಯರಿಗೆ ಕನ್ನಡದ ಶಾಲು ಹೊದಿಸಿ ಹೂ ನೀಡಿ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಂಗಳೂರು ವಿ.ವಿ. ಇಲ್ಲಿನ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಚಾರ್ಯ ಡಾ. ಧನಂಜಯ್ ಕುಂಬ್ಳೆ ಇವರನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಇವರು ಸನ್ಮಾನಿಸಿದರು. ಉಪನ್ಯಾಸಕಿ ಸಹನಾ ಪರಿಚಯಿಸಿದರು. ಈ ವೇಳೆ ಡಾ.…
ಶಿರಿಸಿ : ರಾಗ ತಪಸ್ವಿ, ಗಾನ ಯೋಗಿ ಎಂದೆ ಪ್ರಸಿದ್ಧರಾಗಿದ್ದ ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ತಿಮ್ಮಯ್ಯ ಹೆಗಡೆ ದಿನಾಂಕ 01 ಡಿಸೆಂಬರ್ 2024ರಂದು ನಿಧನರಾದರು. ಇವರಿಗೆ 94 ವರ್ಷ ವಯಸ್ಸಾಗಿತ್ತು. ಶಿರಸಿ ಸಮೀಪದ ಬಾಳೆಹದ್ದದಲ್ಲಿ ಜನಿಸಿದ ಕೃಷ್ಣ ಭಾಗವತರು ಏಳು ದಶಕಗಳಿಗೂ ಅಧಿಕ ಕಾಲ ಯಕ್ಷಗಾನ ಪದ್ಯ ಹಾಡುತ್ತಾ ಹೊಸ ಹೊಸ ರಾಗಗಳನ್ನು ಅನ್ವೇಷಿಸುತ್ತಾ ಸಂಗೀತಕ್ಕಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಹೊಸ್ತೋಟ ಮಂಜುನಾಥ ಭಾಗವತ ಸೇರಿದಂತೆ ಆ ಕಾಲದ ಹಿರಿಯ ಕಲಾವಿದರೊಂದಿಗೆ ನಿಕಟ ಒಡನಾಟ ಹೊಂದಿದ್ದ ಇವರು ಯಕ್ಷಗಾನ ಪದ್ಯಗಳಿಗೆ ಹೊಸ ಹೊಸ ರಾಗಗಳನ್ನು ಸಂಯೋಜಿಸುತ್ತಾ ಪ್ರತೀ ವರ್ಷ ನೂರಾರು ತಾಳಮದ್ದಲೆಗಳಲ್ಲಿ ಭಾಗವಹಿಸುತ್ತಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಇವರಿಗೆ,2018ರಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಶ್ರೀಯುತರು ಪತ್ನಿ ಪುತ್ರಿ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಹಳುವಳ್ಳಿಯ ಯಕ್ಷಗಾನ ಕಲಾವಿದ ವಸಂತ ಭಟ್ ದಿನಾಂಕ 02 ಡಿಸೆಂಬರ್ 2024ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಹಳುವಳ್ಳಿಯ ಪ್ರಸಿದ್ಧ ಸ್ತ್ರೀವೇಷಧಾರಿ ಕೃಷ್ಣಯ್ಯರ ಪುತ್ರರಾದ ಇವರು ಅಮೃತೇಶ್ವರೀ, ಬಾಳೆಹೊಳೆ ಹಾಗೂ ದೀರ್ಘಕಾಲ ಗುತ್ಯಮ್ಮ ಮೇಳದಲ್ಲಿ ವೇಷಧಾರಿಯಾಗಿ ಕಲಾಸೇವೆ ಗೈದಿದ್ದಾರೆ. ದೇವೇಂದ್ರ, ಶತ್ರುಘ್ನ, ಕಮಲಭೂಪ, ಹಂಸಧ್ವಜ, ಬಲರಾಮ, ಮೊದಲಾದ ರಾಜ ವೇಷದೊಂದಿಗೆ ಬಣ್ಣದ ವೇಷ ಮಾಡಿ ಜನ ಮೆಚ್ಚುಗೆ ಗಳಿಸಿದ್ದರು. ಪ್ರಕೃತ ಗುತ್ಯಮ್ಮ ಮೇಳದ ಕಲಾವಿದರಾಗಿದ್ದ ವಸಂತ ಭಟ್ ಓರ್ವ ಸರಳ ಸಜ್ಜನಿಕೆಯ ಕಲಾವಿದರಾಗಿದ್ದರು. ಶ್ರೀಯುತರು ಪತ್ನಿ, ಈರ್ವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕದ ‘ಮನೆಯೇ ಗ್ರಂಥಾಲಯ’ ಅಭಿಯಾನದ 125ನೇ ಕೇಂದ್ರದ ಉದ್ಘಾಟನಾ ಸಮಾರಂಭವು ದಿನಾಂಕ 02 ಡಿಸೆಂಬರ್ 2024ರ ಸೋಮವಾರದಂದು ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ “ಡಿಜಿಟಲ್ ಮಾಧ್ಯಮಗಳಿಂದಾಗಿ ಇಂದು ಪುಸ್ತಕ ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕೈಯಲ್ಲಿ ಪುಸ್ತಕ ಹಿಡಿದು ಓದುವಾಗ ಲಭಿಸುವ ಸಂತಸ ಮೊಬೈಲ್ ನೋಡಿ ಓದುವಾಗ ಲಭಿಸದು. ಯುವ ಸಮುದಾಯ ಸೇರಿದಂತೆ ಎಲ್ಲ ವಯೋಮಾನದವರು ಪುಸ್ತಕ ಓದುವ ಸಂಸ್ಕೃತಿ ಮುಂದುವರಿಸಬೇಕು. ಜಿಲ್ಲಾಡಳಿತದಲ್ಲಿ ಎಲ್ಲ ಇಲಾಖೆ ಇರುವುದರಿಂದ ಸದ್ಯ ಸ್ಥಳಾವಕಾಶದ ಕೊರತೆ ಇದೆ. ಮುಂದಿನ ದಿನಗಳಲ್ಲಿ ಗ್ರಂಥಾಲಯಕ್ಕಾಗಿಯೇ ಒಂದು ಕೊಠಡಿ ಮೀಸಲಿಡಲು ಪ್ರಯತ್ನಿಸಲಾಗುವುದು.”ಎಂದು ಭರವಸೆ ನೀಡಿದರು. ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ “ಘಟಕದ ಎಲ್ಲಾ ಉತ್ಸಾಹಿ ಪದಾಧಿಕಾರಿಗಳ ಸಹಕಾರದಲ್ಲಿ ಕನ್ನಡದ ಸೇವೆಗಾಗಿ ಜಿಲ್ಲಾ ಘಟಕದ ಸಹಕಾರದಿಂದ ವಿನೂತನ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಮಣಿಪಾಲ…
ಮಂಗಳೂರು : ರಾಗತರಂಗ (ರಿ.) ಮಂಗಳೂರು ಇದರ ವತಿಯಿಂದ ಭಾರತೀಯ ವಿದ್ಯಾಭವನ ಮಂಗಳೂರು ಸಹಯೋಗದೊಂದಿಗೆ ‘ಬಾಲ ಪ್ರತಿಭಾ 2024’ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಶಾಲಾ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆಗಳನ್ನು ದಿನಾಂಕ 13 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ಮಂಗಳೂರಿನ ಪಾಂಡೇಶ್ವರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಾಯಿಸಲು 06 ಡಿಸೆಂಬರ್ 2024 ಕೊನೆಯ ದಿನಾಂಕವಾಗಿದ್ದು, ದಿನಾಂಕ 13 ಡಿಸೆಂಬರ್ 2024ರಂದು ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ದೇಶ ಭಕ್ತಿ ಗೀತೆ ಸಮೂಹ ಗಾನ, ಸುಗಮ ಸಂಗೀತ ಮತ್ತು ಆಶು ಭಾಷಣ ಸ್ಪರ್ಧೆಗಳು ನಡೆಯಲಿದೆ. ದಿನಾಂಕ 13 ಡಿಸೆಂಬರ್ 2024, 14 ಡಿಸೆಂಬರ್ 2024 ಮತ್ತು 15 ಡಿಸೆಂಬರ್ 2024ರಂದು ಖಾಸಗಿ ಹಾಗೂ ಕೇಂದ್ರೀಯ ವಿದ್ಯಾಲಯದ ಮಕ್ಕಳಿಗೆ ಸಾಮಾನ್ಯ ಜ್ಞಾನ, ಛದ್ಮವೇಷ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭಾವಗೀತೆ, ಭರತನಾಟ್ಯ, ಜನಪದ ನೃತ್ಯ, ಕರ್ನಾಟಕ ವಾದ್ಯ ಸಂಗೀತ, ಹಿಂದೂಸ್ಥಾನಿ ವಾದ್ಯ ಸಂಗೀತ…
ಪುತ್ತೂರು : ಪಾಲಿಂಜೆ ಶ್ರೀ ಮಹಾವಿಷ್ಣು ದೇವಳದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ವಿಂಶತಿ ಸಂಭ್ರಮದ ಅಂಗವಾಗಿ 17ನೇ ಸರಣಿ ತಾಳಮದ್ದಳೆ ಬೋಳೂರು ಮಧು ಕುಮಾರ್ ವಿರಚಿತ ‘ಸುದರ್ಶನ ವಿಜಯ’ ಎಂಬ ಆಖ್ಯಾನದೊಂದಿಗೆ ದಿನಾಂಕ 01 ಡಿಸೆಂಬರ್ 2024ರಂದು ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು ಹಾಗೂ ಚೆಂಡೆ, ಮದ್ದಲೆಗಳಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ತಾರಾನಾಥ ಸವಣೂರು ಮತ್ತು ಮಾಸ್ಟರ್ ಪರೀಕ್ಷಿತ್ ಹಂದ್ರಟ್ಟ ಸಹಕರಿಸಿದರು. ಮುಮ್ಮೇಳದಲ್ಲಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಮಹಾವಿಷ್ಣು), ಜಯಂತಿ ಹೆಬ್ಬಾರ್ (ಮಹಾಲಕ್ಷ್ಮಿ), ಶುಭಾ ಗಣೇಶ್ (ಸುದರ್ಶನ), ಪ್ರೇಮಲತಾ ರಾವ್ (ದೇವೇಂದ್ರ), ಹರಿಣಾಕ್ಷಿ ಜೆ. ಶೆಟ್ಟಿ (ಶತ್ರು ಪ್ರಸೂದನ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಶ್ರವಣಕುಮಾರ ಮತ್ತು ರಮೇಶ್ ಅಂಗಿಂತ್ತಾಯ ಕಲಾವಿದರಿಗೆ ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಿದರು. ಪ್ರೇಮಲತಾ ರಂಗನಾಥ್ ರಾವ್ ಪ್ರಾಯೋಜಿಸಿದ್ದರು.
ಉಡುಪಿ : ಆರ್ಟಿಸ್ಟ್ಸ್ ಫೋರಂ ಪ್ರಸ್ತುತ ಪಡಿಸುವ ‘ಆನ್ ಆರ್ಟ್ ಫ್ಯೂಷನ್’ ವೇದಿಕೆಯ ಕಲಾವಿದರ ಸದಸ್ಯರಿಂದ ‘ಚಿತ್ರಕಲೆಗಳ ಪ್ರದರ್ಶನ’ವನ್ನು ದಿನಾಂಕ 06 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ಬೆಂಗಳೂರಿನ ದ್ವಿಜ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 06 ಡಿಸೆಂಬರ್ 2024ರಂದು ಸಂಜೆ 5-30 ಗಂಟೆಗೆ ಈ ಪ್ರದರ್ಶನವು ಉದ್ಘಾಟನೆಗೊಳ್ಳಲಿದ್ದು, ಯು. ಭಾಸ್ಕರ ರಾವ್ , ಎಚ್.ಕೆ. ರಾಮಚಂದ್ರ, ಜನಾರ್ದನ ಹವಾಂಜೆ, ಖುರ್ಷಿದ್ ಯಾಕೂಬ್, ಎಸ್. ನಾಗರಾಜ್ ಹನೇಹಳ್ಳಿ, ಪವನ್ ಕುಮಾರ್ ಅತ್ತಾವರ, ರಮೇಶ್ ರಾವ್, ಸಕು ಪಂಗಳ, ಸಪ್ನ ನೋರೋನ್ಹ, ಸಂತೋಷ್ ಪೈ, ಶರತ್ ಪಲಿಮಾರ್, ಶಿವ ಹದಿಮಣಿ, ಸಿಂಧು ಕಾಮತ್, ಸಿತಾರಾ ರಾವ್ ಇವರುಗಳ ಚಿತ್ರಕಲೆಗಳ ಪ್ರದರ್ಶನ ನಡೆಯಲಿದೆ. ArtFusion
ಮಂಗಳೂರು : ಪುಸ್ತಕ ಬಹುಮಾನ – 2024 : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2024ರ ಕ್ಯಾಲೆಂಡರ್ ವರ್ಷದಲ್ಲಿ (01 ಜನವರಿ 2024ರಿಂದ 31 ಡಿಸೆಂಬರ್ 2024) ಪ್ರಕಟಿತವಾದ (1) ಕೊಂಕಣಿ ಕವನ, (2) ಕೊಂಕಣಿ ಸಣ್ಣಕತೆ ಅಥವಾ ಕಾದಂಬರಿ, (3) ಕೊಂಕಣಿಗೆ ಭಾಷಾಂತರಿಸಿದ ಕೃತಿ (ಪ್ರಥಮ ಆದ್ಯತೆ) ಅಥವಾ ಲೇಖನ/ ಅಧ್ಯಯನ/ ವಿಮರ್ಶೆ ಬಗ್ಗೆ ಲೇಖಕರಿಂದ, ಪ್ರಕಾಶಕರಿಂದ ಪುಸ್ತಕ ಬಹುಮಾನಕ್ಕಾಗಿ ಪುಸ್ತಕದ 4 ಪ್ರತಿಗಳ ಜೊತೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪುಸ್ತಕ ಬಹುಮಾನವು ರೂ.25,000/- ಗೌರವಧನ, ಹಾರ, ಪ್ರಮಾಣಪತ್ರ, ಫಲತಾಂಬೂಲವನ್ನು ಒಳಗೊಂಡಿದೆ. ಗೌರವ ಪ್ರಶಸ್ತಿ – 2024 : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನಲ್ಲಿ 1. ಕೊಂಕಣಿ ಸಾಹಿತ್ಯ, 2. ಕೊಂಕಣಿ ಕಲೆ (ಕೊಂಕಣಿ ನಾಟಕ, ಸಂಗೀತ, ಚಲನಚಿತ್ರ) 3. ಕೊಂಕಣಿ ಜಾನಪದ ಈ ಮೂರು ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ ಅರ್ಹರಿಂದ ಗೌರವ ಪ್ರಶಸ್ತಿಗಾಗಿ ಅರ್ಜಿ ಕರೆಯಲಾಗಿದೆ. ಈ ಪ್ರಶಸ್ತಿಯು ರೂ.50,000/- ಗೌರವಧನ, ಶಾಲು, ಸ್ಮರಣಿಕೆ, ಹಾರ, ಪ್ರಮಾಣ…