Author: roovari

ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಮಣಿಪಾಲ್ ಇನ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹಯೋಗದಲ್ಲಿ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರವು ಸ್ವಾತಂತ್ರೋತ್ಸವದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಉಡುಪಿ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ದಿನಾಂಕ 08 ಆಗಸ್ಟ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಇವರು ಮಾತನಾಡಿ “ದೇಶ ಪ್ರೇಮ ಎಲ್ಲರಲ್ಲಿ ಎಳವೆಯಿಂದಲೇ ಬೆಳೆಯಬೇಕು. ದೇಶದ ಬಗೆಗೆ ಪ್ರೇಮವನ್ನು ಹೊಂದಿದಾಗ ಮಾತ್ರ ಸಶಕ್ತ ಭಾರತದ ನಿರ್ಮಾಣ ಸಾಧ್ಯ. ಈ ಹಿನ್ನಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುವ ಉದ್ದೇಶದಿಂದ ರೇಡಿಯೋ ಮಣಿಪಾಲ್ ನಲ್ಲಿ ಆಯೋಜಿಸಲಾದ ದೇಶ ಭಕ್ತಿಗೀತೆ ಸಮೂಹ ಗಾಯನ ಸ್ಪರ್ಧಾ ಕಾರ್ಯಕ್ರಮ ಅಭಿನಂದನೀಯ” ಎಂದು ಹೇಳಿದರು. ಮಣಿಪಾಲ್ ಇನ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಮ್.ಐ.ಸಿ.) ಸಂಸ್ಥೆಯ ನಿರ್ದೆಶಕರಾದ ಡಾ. ಪದ್ಮಾರಾಣಿಯವರು…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪ್ರಸ್ತುತ ಪಡಿಸುವ ವಿಶೇಷ ಕಾರ್ಯಕ್ರಮ ‘ಉದಯರಾಗ – 54’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 15-08-2024 ಭಾನುವಾರ ಪೂರ್ವಾಹ್ನ ಗಂಟೆ 6-00ಕ್ಕೆ ನಡೆಯಲಿದೆ. ಶೃಂಗೇರಿಯ ಸೀತಾಪ್ರಜ್ಞಾ ಡಿ.ಎಸ್. ಇವರ ಹಾಡುಗಾರಿಕೆಗೆ ಮಂಗಳೂರಿನ ಧನಶ್ರೀ ಶಬರಾಯ ವಯಲಿನ್, ಪುತ್ತೂರಿನ ಅಚಿಂತ್ಯಕೃಷ್ಣ ಮೃದಂಗ ಹಾಗೂ ಇನ್ನಂಜೆ ಕಾರ್ತಿಕ್ ಭಟ್ ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ. ಭಾರತೀಯ ಭೂ ಸೇನೆಯ ನಿವೃತ್ತ ಯೋಧರಾದ ಶ್ರೀ ಸಚ್ಚಿದಾನಂದ ಕೆ. ಹೊಸಬೆಟ್ಟು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More

ಮೂಡುಬಿದಿರೆ : ಕನ್ನಡ ಭವನದಲ್ಲಿ ‘ಕುರಲ್ ಕಲಾವಿದೆರ್ ಬೆದ್ರ’ ಅಭಿನಯದ ಪ್ರಸಾದ್ ಆಳ್ವ ಸಾರಥ್ಯದ ‘ಯೇರ್’ ತುಳು ನಾಟಕದ ಪ್ರಥಮ ಪ್ರದರ್ಶನದ ಉದ್ಘಾಟನಾ ಸಮಾರಂಭವು ದಿನಾಂಕ 04 ಆಗಸ್ಟ್ 2024ರಂದು ನಡೆಯಿತು. ಈ ಸಮಾರಂಭವನ್ನು ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ ಇವರು ಮಾತನಾಡಿ “ತುಳು ನಾಟಕ, ಸಿನಿಮಾ, ಯಕ್ಷಗಾನ ಸೇರಿದಂತೆ ಜಿಲ್ಲೆಯ ವೈವಿಧ್ಯ ಕಲಾ ಪ್ರಕಾರಗಳಿಂದ ತುಳು ಭಾಷೆಯ ಮೇಲಿನ ಗೌರವ ಹೆಚ್ಚಿದೆ. 1933ರಲ್ಲಿ ಪ್ರದರ್ಶನಗೊಂಡ ‘ಮದ್ಮೆ’ ತುಳು ನಾಟಕದಿಂದ ಆರಂಭಗೊಂಡು ಇತ್ತೀಚಿನವರೆಗೆ ಸಾಕಷ್ಟು ತುಳು ನಾಟಕಗಳು ಜಿಲ್ಲೆಯಲ್ಲಿ ಪ್ರದರ್ಶನಗೊಂಡಿವೆ. ದೊಡ್ಡಣ್ಣ ಶೆಟ್ಟಿ, ಸಂಜೀವ ದಂಡಕೇರಿಯಂತಹ ಪ್ರಬುದ್ಧ ಕಲಾವಿದರ ಪ್ರಯತ್ನದಿಂದ ತುಳು ನಾಟಕಗಳು ಮೇಲ್ದರ್ಜೆಗೇರಿದವು. ವಿಜಯ ಕುಮಾರ್ ಕೊಡಿಯಾಲ್ ಬೈಲು, ದೇವದಾಸ್ ಕಾಪಿಕಾಡು ಇನ್ನಿತರ ಕಲಾವಿದರು, ವಿವಿಧ ನಾಟಕ ತಂಡಗಳು ತುಳು ನಾಟಕಗಳಿಗೆ ಹೊಸ ರೂಪ ಕೊಟ್ಟು ಬೆಳೆಸಿರುವುದು ತುಳು ನಾಡಿಗೆ ಹೆಮ್ಮೆ” ಎಂದು ಹೇಳಿದರು. ಉದ್ಯಮಿ ಶ್ರೀಪತಿ ಭಟ್‌ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಚೌಟರ…

Read More

ಬೆಂಗಳೂರು : ಲಯನ್ಸ್ ಇಂಟರ್‌ನ್ಯಾಷನಲ್, ಕನ್ನಡ ಮತ್ತು ಸಂಸ್ಕೃತಿ ತಂಡ ಜಿಲ್ಲೆ 317F ಮತ್ತು ರಂಗಚಂದಿರ ಟ್ರಸ್ಟ್ ಸಹಯೋಗದಲ್ಲಿ “ಕಾರ್ಮಿಕ, ರಂಗ ನಿರ್ದೇಶಕ ಮೈಕೋ ಶಿವಣ್ಣ ನೆನಪು” ನಿಮಿತ್ತ ರಂಗಸಂಗೀತ, ರಂಗಗೌರವ, ಪುಸ್ತಕ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮಗಳನ್ನು ಬೆಂಗಳೂರಿನ ಎನ್.ಆರ್.ಕಾಲೋನಿಯ ಡಾ. ಸಿ.ಅಶ್ವತ್ಥ್ ಕಲಾಭವನದಲ್ಲಿ ದಿನಾಂಕ 15 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ರಂಗಭೂಮಿ ಕಲಾವಿದರಾದ ಶ್ರೀ ಚಂದ್ರಶೇಖರ್ ಎಸ್.ಎಸ್. ಹಾಗೂ ಸಮನ್ವಯ ಸೋಮಶೇಖರ್ ಇವರುಗಳಿಗೆ ರಂಗಗೌರವ ಸಲ್ಲಿಸಲಾಗುತ್ತದೆ. ಡಾ. ಬೇಲೂರು ರಘುನಂದನ್ ಇವರ ನಿರ್ದೇಶನದ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ ಜೀವನಾಧಾರಿತ ನಾಟಕ “ಸಾಲುಮರಗಳ ತಾಯಿ ತಿಮ್ಮಕ್ಕ” ಪ್ರದರ್ಶನಗೊಳ್ಳಲಿದೆ. ಅಂಕುರ ಮಂಜುನಾಥ್ ಅವರಿಂದ ರಂಗಸಂಗೀತ ಇರುತ್ತದೆ. ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ಎನ್.ಆರ್. ಹೆಗಡೆ ವಹಿಸಲಿದ್ದು, ಲಯನ್ ಸಿ.ಎಂ. ನಾರಾಯಣ ಸ್ವಾಮಿ, ಶ್ರೀ ಮಾಲತೇಶ್ ಎನ್. ಕೊಡ್ಲಿಯಾರ್, ರಂಗಚಂದಿರ ಗೌರವಾಧ್ಯಕ್ಷ ಆರ್.ಕೆ. ಹೆಗಡೆ, ಅಧ್ಯಕ್ಷೆ ಡಾ. ಪದ್ಮ, ಆರ್. ನರೇಂದ್ರ ಬಾಬು, ಬೈಯ್ಯಪ್ಪನಹಳ್ಳಿ ನಾಗರಾಜು ಹಾಗೂ…

Read More

ಮಂಗಳೂರು : ಕೊಂಕಣಿ ಭಾಷೆಗೆ 20 ಆಗಸ್ಟ್ 1992ರಂದು ಸಾಂವಿಧಾನಿಕ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯು 20 ಆಗಸ್ಟ್ 2024ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.  ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಭಾಷಾ ಮಂಡಳ(ರಿ.)  ಇವರ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕೊಂಕಣಿ ಸಂಘ ಸಂಸ್ಥೆಗಳು ಭಾಗವಹಿಸಲಿದೆ. ಅಂದು ಬೆಳಿಗ್ಗೆ ಕೊಂಕಣಿ ದ್ವಜಾರೋಹಣದ ಮೂಲಕ ಕಾರ್ಯಕ್ರಮ ಚಾಲನೆಗೊಂಡು ಬಳಿಕ ಹೈಸ್ಕೂಲ್‌ ವಿಭಾಗ ಹಾಗೂ ಕಾಲೇಜು ವಿಭಾಗದಲ್ಲಿ ವಿದ್ಯಾರ್ಥಿಗಳಿಗಾಗಿ ಕೊಂಕಣಿ ಸಾಂಸ್ಕೃತಿಕ ವೈಭವದ ವಿವಿಧ ಸ್ರ‍್ಧೆಗಳು ನಡೆಯಲಿವೆ. ಅಪರಾಹ್ನ ಘಂಟೆ 4.30ರಿಂದ ಕೊಂಕಣಿ ಮಾನ್ಯತಾ ದಿನಾಚರಣೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ್‌ ಎಸ್‌. ತಂಗಡಗಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ವೈಭವದ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನವನ್ನು ವಿತರಣೆ ನಡೆಯಲಿದ್ದು, ಬಳಿಕ ವಿವಿಧ ಕೊಂಕಣಿ ಜಾನಪದ ಕಲಾತಂಡಗಳಿಂದ ಸಾಂಸ್ಕೃತಿಕ ವಿನೋದಾವಳಿ ನಡೆಯಲಿದೆ.

Read More

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿಯಿಂದ ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದವರಿಗೆ ನೀಡುವ ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ನಟಿ ಉಮಾಶ್ರೀ, ನಾಟಕಕಾರರಾದ ಎಚ್. ಎಸ್. ಶಿವಪ್ರಕಾಶ್ ಮತ್ತು ಕೋಟಗಾನಹಳ್ಳಿ ರಾಮಯ್ಯ ಅವರು ಆಯ್ಕೆಯಾಗಿದ್ದಾರೆ. 08 ಆಗಸ್ಟ್ 2024ರ ಗುರುವಾರ ಮೂರು ವರ್ಷಗಳ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದವರ ಹೆಸರು ಘೋಷಿಸಿದ ಅಕಾಡೆಮಿ ಅಧ್ಯಕ್ಷ ಕೆ. ವಿ. ನಾಗರಾಜಮೂರ್ತಿ, “ರಂಗಭೂಮಿ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷ ಅಕಾಡೆಮಿಯಿಂದ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ಎರಡು ಸಾಲುಗಳಲ್ಲಿ ಪ್ರಶಸ್ತಿ ನೀಡಿರಲಿಲ್ಲ. ಸದ್ಯ, 2022-23, 2023-24 ಮತ್ತು 2024-25ನೇ ಸಾಲಿಗೆ ಮೂವರಿಗೆ ಜೀವಮಾನ ಸಾಧನೆಗಾಗಿ ಗೌರವ ಪ್ರಶಸ್ತಿ, ತಲಾ 25ರಂತೆ ಒಟ್ಟು 75 ವಾರ್ಷಿಕ ಪ್ರಶಸ್ತಿ ಮತ್ತು 15 ದತ್ತಿನಿಧಿ ಪ್ರಶಸ್ತಿಗೆ ರಂಗ ಸಾಧಕರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಾದ್ಯಂತ ವೃತ್ತಿ ರಂಗಭೂಮಿಯ 30ಕ್ಕೂ ಹೆಚ್ಚು ಕಲಾವಿದರಿಗೆ ವಾರ್ಷಿಕ ಮತ್ತು ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ. ಎಲ್ಲಾ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ನ್ಯಾಯ ಮತ್ತು ಜಿಲ್ಲಾವಾರು ಅನ್ವಯವಾಗುವಂತೆ ಸಾಧಕರನ್ನು…

Read More

ಕುಶಾಲನಗರ : ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ದಿನಾಂಕ 02-08-2024ರಂದು ಪ್ರಬಂಧ ಸ್ಪರ್ಧೆ ಮತ್ತು ದೇಶ ಭಕ್ತಿ ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕುಶಾಲನಗರದ ಜೂನಿಯರ್ ಕಾಲೇಜು ದೈಹಿಕ ಶಿಕ್ಷಕ ಡಾ. ಸದಾಶಿವ ಪಲ್ಯದ ಇವರು  ಮಾತನಾಡಿ “ಕನ್ನಡ ಸಾಹಿತ್ಯಕ್ಕೆ ಮೂಲವಾಗಿರುವ ಜಾನಪದ ಸಾಹಿತ್ಯ ಇತ್ತೀಚಿಗೆ ಮರೆಯಾಗುತ್ತಿರುವುದು ಬೇಸರದ ವಿಚಾರ. 1911ರಲ್ಲಿ ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಂಘ ಎನ್ನುವ ಹೆಸರಿನಲ್ಲಿ ಸ್ಥಾಪನೆಯಾಗಿತ್ತು. ಆಗಲೇ ಸಾಹಿತ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಾರಂಭವಾಯಿತು. ಅನಂತರ ಮೈಸೂರು ಸಂಸ್ಥಾನದಿಂದ ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಗಿದ್ದು. ಈಗ ಕುಶಾಲನಗರ ತಾಲೂಕು ಘಟಕ ಸಾಹಿತ್ಯ ಅರಿವು ಮೂಡಿಸಲು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶ್ಲಾಘನೆಗೆ ಪಾತ್ರವಾಗುತ್ತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕ ಎ.ಸಿ. ಮಂಜುನಾಥ್ ಮಾತನಾಡಿ, “ಸ್ಪರ್ಧೆಗಳಲ್ಲಿ ಒಬ್ಬರು ಸೋತಾಗ ಮಾತ್ರ ಮತ್ತೊಬ್ಬರು ಗೆಲ್ಲಲು ಸಾಧ್ಯವಾಗುತ್ತದೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದವರು ಮಾತ್ರ…

Read More

ಕಾಸರಗೋಡು : ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಕಲಾ-ದೀಕ್ಷಾ (ಗುರು ಶಿಷ್ಯ ಪರಂಪರೆ) ಯೋಜನೆಯನ್ವಯ ಯಕ್ಷಗಾನ ಬೊಂಬೆಯಾಟ ಕಲಿಕಾ ತರಗತಿಯು ದಿನಾಂಕ 17 ಜುಲೈ 2024ರಂದು ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ ಇವರು ಮಾತನಾಡಿ “ಕರ್ನಾಟಕದಿಂದ ಹೊರಗುಳಿದಿರುವ ಅಚ್ಚಗನ್ನಡ ಪ್ರದೇಶವಾದ ಗಡಿನಾಡು ಕಾಸರಗೋಡಿನಲ್ಲಿ ಪ್ರಾಚೀನ ಹಾಗೂ ಪರಂಪರಾಗತ ಕಲೆ ಯಕ್ಷಗಾನ ಬೊಂಬೆಯಾಟಕ್ಕೆ ಕಾಯಕಲ್ಪ ನೀಡುತ್ತಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಸಾಧನೆ ಸ್ತುತ್ಯರ್ಹ. ನಯನ ಮನೋಹರವಾದ ಚಂದ್ರಗಿರಿಯ ತೀರದಲ್ಲಿ ನೆಲೆ ನಿಂತಿರುವ ಸಂಘದ ಯಕ್ಷಪುತ್ಥಳಿ ಬೊಂಬೆ ಮನೆಗೆ ರಾಷ್ಟ್ರದ ಪ್ರವಾಸೋದ್ಯಮ ನಕಾಶೆಯಲ್ಲಿ ವಿಶೇಷ ಸ್ಥಾನ ಕಲ್ಪಿಸಲು ಕೇಂದ್ರ, ರಾಜ್ಯ ಸರಕಾರಗಳು ಇನ್ನಾದರೂ ಪ್ರಯತ್ನಿಸಬೇಕು” ಎಂದು ಹೇಳಿದರು. ಪಿಲಿಕುಂಜೆ ಯಕ್ಷಪುತ್ಥಳಿ ಬೊಂಬೆ ಮನೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ವಹಿಸಿದ್ದರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಪ್ರೊಫೆಸರ್…

Read More

ಚನ್ನರಾಯಪಟ್ಟಣ : ಉಮೇಶ್ ತೆಂಕನಹಳ್ಳಿ ಇವರ ಅನುಭವದ ಅಂತರಾಳದ ಕೃತಿ ‘ಕಪ್ಪು ಹಲ್ಲಿನ ಕಥೆ’ ಚೊಚ್ಚಲ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 12 ಆಗಸ್ಟ್ 2024ರಂದು ಬೆಳಗ್ಗೆ 10-30 ಗಂಟೆಗೆ ಚನ್ನರಾಯಪಟ್ಟಣ ರಾಘವೇಂದ್ರ ಸಾಮಿಲ್ ರಸ್ತೆಯ ರಂಗ ಲೋಕದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಶ್ರೀ ಸಿ.ಎನ್. ಬಾಲಕೃಷ್ಣ ಇವರ ಅಧ್ಯಕ್ಷತೆ ನಡೆಯುವ ಈ ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣದ ಜನಪದ ವಿದ್ವಾಂಸರಾದ ಡಾ. ಚಂದ್ರು ಕಾಳೇನಹಳ್ಳಿ ಇವರು ಕೃತಿ ಲೋಕಾರ್ಪಣೆ ಮಾಡಲಿರುವರು.

Read More

ಮಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಮಂಗಳೂರಿನ ವಸಂತ ವಿ. ಅಮೀನ್ ಆಯ್ಕೆಯಾಗಿದ್ದಾರೆ. ನಿರಂತರ 56 ವರ್ಷಗಳಿಂದ ಕಲಾಕ್ಷೇತ್ರದಲ್ಲಿ ದುಡಿದಿರುವ ಶ್ರೀಯುತರು ಕಥೆ, ಕವನ, ಸಾಮಾಜಿಕ, ಚಾರಿತ್ರಿಕ ಹಾಗೂ ಐತಿಹಾಸಿಕ ಸಹಿತ 21 ನಾಟಕ ರಚನೆ ಮಾಡಿದ್ದಾರೆ. ತುಳು ನಾಟಕಕ್ಕೆ ಈವರೆಗೆ ಎರಡು ಸಾವಿರಕ್ಕೂ ಅಧಿಕ ಸಾಹಿತ್ಯ ರಚಿಸಿರುವ ಇವರು ಕಿಶೋರ್ ಡಿ. ಶೆಟ್ಟಿ ನೇತೃತ್ವದ  ‘ಲಕುಮಿ’ ನಾಟಕ ತಂಡದ ಎಲ್ಲ ನಾಟಕಕ್ಕೆ ಸಾಹಿತ್ಯ ರಚಿಸಿ ಅವರ ಎಲ್ಲ ನಾಟಕದಲ್ಲಿ ಅಭಿನಯಿಸಿದ್ದಾರೆ. ‘ಒರಿಯರ್ದೊರಿ ಅಸಲ್’ ಸಹಿತ ಕೆಲವು ನಾಟಕಗಳನ್ನು ನಿರ್ದೇಶನ ಮಾಡಿರುವ ಇವರು ತುಳು ಚಲನಚಿತ್ರದ ತಾಂತ್ರಿಕ ವರ್ಗದಲ್ಲೂ ದುಡಿದಿದ್ದಾರೆ. 24 ಗಂಟೆಯಲ್ಲಿ ತಯಾರಾದ ‘ಸೆಪ್ಟೆಂಬರ್ 8’ ತುಳು ಸಿನೆಮಾದ ಸಂಭಾಷಣೆ ಹಾಗೂ ಗೀತ ಸಾಹಿತ್ಯ ರಚಿಸಿದ್ದಾರೆ.

Read More