Author: roovari

ಉಡುಪಿ : ಉಡುಪಿಯ ಮುಕುಂದ ಕೃಪ ಸಂಗೀತ ಶಾಲೆಯ ವಿದ್ವಾನ್ ಮಹಾಬಲೇಶ್ವರ ಭಾಗವತ್ ಇವರ ಶಿಷ್ಯ ಜೀ ಸರಿಗಮಪ ಕನ್ನಡ ಸೀಸನ್ 9ರ ಮತ್ತು ರಾಷ್ಟ್ರೀಯ ಹಿಂದಿ ಸರಿಗಮಪ ಸೀಸನ್ 5 ವಿಜೇತ ಗಗನ್ ಜಿ. ಗಾಂವ್ಕರ್ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕಳೆದ ಸಾಲಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ನಡೆಸಿದ ರಾಜ್ಯಮಟ್ಟದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಗಳಿಸುವ ಮೂಲಕ ವಿದ್ವತ್ ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪ್ರಸಿದ್ಧ ಎಂ.ಎನ್.ಸಿ.ಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲ ಚಲನಚಿತ್ರ ಹಾಗೂ ತಾವೇ ಸಂಯೋಜಿಸಿದ ಭಾವ, ಭಕ್ತಿ, ಗೀತೆಗಳಿಗೆ ಧ್ವನಿಯಾಗಿದ್ದು, ಭವಿಷ್ಯದಲ್ಲಿ ಉತ್ತಮ ಗಾಯಕ ಹಾಗೂ ಸಂಗೀತ ಸಂಯೋಜಕನಾಗಬೇಕು ಎಂದು ಕನಸು ಕಂಡಿರುವ ಗಗನ್ ಜಿ. ಗಾಂವ್ಕರ್ ಇವರಿಗೆ ದಿನಾಂಕ 30 ಆಗಸ್ಟ್ 2025ರಂದು ಮೈಸೂರಿನಲ್ಲಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾನ್ಯ ಕುಲಪತಿಗಳು,…

Read More

ಮಧೂರು : ಉಳಿಯ ದನ್ವಂತರಿ ಯಕ್ಷಗಾನ ಕಲಾಸಂಘ ಮಧೂರು ಇದರ ವಾರದ ಕೂಟ ಉಳಿಯ ಮನೆಯ ಸುಧಾ ಮಂದಿರದಲ್ಲಿ ದಿನಾಂಕ 31 ಆಗಸ್ಟ್ 2025 ಭಾನುವಾರದಂದು ‘ಕರ್ಣ ಭೇಧ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರು ಶ್ರೀ ವಾಸುದೇವ ಕಲ್ಲೂರಾಯ ಮಧೂರು ಹಾಗೂ ಮದ್ದಳೆಯಲ್ಲಿ ಶ್ರೀ ಗೋಪಾಲ ಕೃಷ್ಣ ನಾವಡ ಮಧೂರು ಇವರುಗಳು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಕೃಷ್ಣ : ಶ್ರೀ ನರಸಿಂಹ ಬಲ್ಲಾಳ್, ಕರ್ಣ : ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಕುಂತಿ : ಶ್ರೀ ಮಯೂರ ಆಸ್ರ ಉಳಿಯ ಇವರುಗಳು ಭಾಗವಹಿಸಿದ್ದರು.

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಹಿರಿಯ ಸಾಹಿತಿ ಮನೆಗೆ ಭೇಟಿ ಕಾರ್ಯಕ್ರಮದಲ್ಲಿ ಕ.ಸಾ.ಪ.ದ ಸದಸ್ಯರು ದಿನಾಂಕ 30 ಆಗಸ್ಟ್ 2025ರಂದು ಸಾಹಿತಿ ಮುಳಿಯ ಗೋಪಾಲಕೃಷ್ಣ ಭಟ್ ಇವರ ಮನೆಗೆ ಭೇಟಿ ನೀಡಿದರು. ಸಂಮಾನ ಸ್ವೀಕರಿಸಿದ ಸಾಹಿತಿ ಮುಳಿಯ ಗೋಪಾಲಕೃಷ್ಣ ಭಟ್ “ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದು, ವಕೀಲ ವೃತ್ತಿಯನ್ನು ಕೈಗೊಂಡು, ಎಂಬತ್ತೈದನೆಯ ವಯಸ್ಸಿನಲ್ಲಿ ವಕೀಲ ವೃತ್ತಿಯನ್ನು ನಿಲ್ಲಿಸಿದ ಬಳಿಕ ಸಾಹಿತ್ಯದ ನಂಟಿನಿಂದ ಇದೀಗ ಆರು ವರ್ಷಗಳಲ್ಲಿ ಐದು ಕೃತಿಗಳನ್ನು (ಸ್ವಂತ, ಅನುವಾದಿತ) ಬರೆಯಲು ಸಾಧ್ಯವಾಗಿದೆ. ಇದರಲ್ಲಿ ತಮ್ಮ ರಾಘವಯ್ಯನ ಮತ್ತು ಮಡದಿ ಕಾವೇರಿಯ ಪಾತ್ರ ಬಹಳ ದೊಡ್ಡದು. ನನ್ನ ಬರವಣಿಗೆಯನ್ನು ಓದಿ, ತಪ್ಪಿದ್ದರೆ ತಿಳಿಸುವುದನ್ನು ಮತ್ತು ಮುದ್ರಣದ ಅಂತಿಮ ಹಂತದವರೆಗೂ ಸಹಾಯ ಮಾಡುವುದನ್ನು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕು” ಎನ್ನುತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು. ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ರೇವಣ್ಕರ್ ಲೇಖಕರನ್ನು ಸಂಮಾನಿಸಿ, ಇಂದು ಇಂತಹ ಸಜ್ಜನ ಬಂಧು, ಸಾಹಿತಿ, ಪಂಡಿತ…

Read More

ದಿನಾಂಕ 01 ಸೆಪ್ಟೆಂಬರ್ 1948ರಂದು ಪುತ್ತೂರಿನಲ್ಲಿ ಜನಿಸಿದ ಗಂಗಾ ಪಾದೇಕಲ್ ಇವರ ಮೂಲ ಹೆಸರು ಗಂಗಾರತ್ನ. ತಂದೆ ಮುಳಿಯ ಕೇಶವ ಭಟ್ ಚಿನ್ನ, ಬೆಳ್ಳಿ ವ್ಯಾಪಾರಸ್ಥರು, ತಾಯಿ ಸರಸ್ವತಿ. ಇವರ ಅಜ್ಜಿ ಮೂಕಾಂಬಿಕಾ ಹಾಡುಗಳನ್ನು ರಚಿಸುತ್ತಿದ್ದರು. ಅವುಗಳನ್ನು ಬರಹ ರೂಪಕ್ಕೆ ತಂದವರು ತಂದೆ ಕೇಶವ ಭಟ್, ಆ ರಚನೆಗಳನ್ನು ತಾಯಿ ರಾಗಬದ್ಧವಾಗಿ ಹಾಡುತ್ತಿದ್ದರು. ಹೀಗೆ ಒಂದು ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದ ಗಂಗಾ ಪಾದೇಕಲ್ ಬಾಲ್ಯದಿಂದಲೇ ಹಲವು ಪತ್ರಿಕೆಗಳನ್ನೂ ಓದುತ್ತಿದ್ದರು. ಬಾಳ ಹಾದಿಯಲ್ಲಿ ಕಂಡ ನೋವುಗಳಿಗೆ ಅಕ್ಷರ ರೂಪವನ್ನು ಕೊಟ್ಟು, ಜನರ ಮನಕ್ಕೆ, ಹೃದಯಕ್ಕೆ ತಟ್ಟುವಂತಹ ಕಥೆ-ಕಾದಂಬರಿಗಳನ್ನು ಬರೆಯುವಲ್ಲಿ ಬಾಲ್ಯದ ಅವರ ಆಸಕ್ತಿಗಳು ಸಹಾಯಕವಾಗಿದ್ದವು. ಕುಟುಂಬದ ಪರಮಾಪ್ತರನ್ನು ಕಳೆದುಕೊಂಡಾಗ ಗಂಗಾ ಪಾದೇಕಲ್ ಅವರಿಗೆ ಸಂಗಾತಿಯಾದದ್ದು ಸಾಹಿತ್ಯ, ಓದು, ಬರಹ. ಗಂಗಾ ಪಾದೇಕಲ್ ಅವರ ಸ್ನೇಹ ಸಖಿಯರೊಂದಿಗೆ ಮಂಗಳೂರಿನಲ್ಲಿ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ’ವನ್ನು ಕಟ್ಟಿದರು. ಅವರ ‘ಹೊಸ ಹೆಜ್ಜೆ’ ಕಥಾಸಂಕಲನವು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ. ‘ಪುಲಪೇಡಿ’ ಕಥೆಯು ಇಂಗ್ಲೀಷ್ ಹಾಗೂ…

Read More

ಉಡುಪಿ : ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಅಮ್ಮುಂಜೆ ಉಡುಪಿ ಇದರ ರಜತ ಮಹೋತ್ಸವ ಹಾಗೂ ನೃತ್ಯ ಮಂಥನ- 10 ಇದರ ಅಂಗವಾಗಿ ಸ್ಪಂದನ ವಿಶೇಷ ಮಕ್ಕಳ ವಸತಿ ಶಾಲೆ ಸಾಲ್ಮರ ಇಲ್ಲಿನ ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 31 ಆಗಸ್ಟ್ 2025ರಂದು ನಡೆಯಿತು. ಶ್ರೀಮತಿ ಭಾರತಿ ಸಿ. ಸುವರ್ಣ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾನಸ ವಿಶೇಷ ಮಕ್ಕಳ ವಸತಿ ಶಾಲೆಯ ಶಿಕ್ಷಕಿ ಹೇಮಲತಾ ಹಾಗೂ ಸ್ಪಂದನ ವಿಶೇಷ ಮಕ್ಕಳ ವಸತಿ ಶಾಲೆಯ ಜನಾರ್ದನ್ ಉಪಸ್ಥಿತರಿದ್ದರು. ವಿದುಷಿ ಕಾತ್ಯಾಯನಿ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀ ಭ್ರಾಮರೀ ನಾಟ್ಯಾಲಯದ ಗುರು ವಿದ್ವಾನ್ ಕೆ. ಭವಾನಿ ಶಂಕರ್ ಧನ್ಯವಾದಗೈದರು. ನಂತರ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ, ಕೂಚಿಪುಡಿ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ಜರಗಿತು.

Read More

ಉಡುಪಿ : ರಾಧಾಕೃಷ್ಣ ನೃತ್ಯ ನಿಕೇತನ ಸಂಸ್ಥೆ ಆಯೋಜಿಸಿದ್ದ ಅದಿತಿ ಜಿ. ನಾಯಕ್ ಇವರ ‘ನೃತ್ಯಾರ್ಪಣ’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 28 ಆಗಸ್ಟ್ 2025ರಂದು ಉಡುಪಿಯ ಐ.ವೈ.ಸಿ. ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಪತ್ರಕರ್ತ ಜನಾರ್ದನ್ ಕೊಡವೂರು ಇವರು ಮಾತನಾಡಿ “ಭರತನಾಟ್ಯ ಕಲೆ ದೇಶದ ಪ್ರಾಚೀನ ಕಲೆಗಳಲ್ಲಿ ಒಂದಾಗಿದ್ದು, ಇದಕ್ಕೆ ಮಕ್ಕಳು ಹೆಚ್ಚಿನ ಒತ್ತು ಕೊಡಬೇಕು. ಅಲ್ಲದೆ ಜೀವನದಲ್ಲಿ ಸಂಸ್ಕಾರವಂತರಾಗಲು ಇದೊಂದು ಆಶ್ರಯ ತಾಣ. ಹಾಗಾಗಿ ಮಕ್ಕಳು, ಯುವಕರು ನೃತ್ಯದಂತಹ ಲಲಿತ ಕಲೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು” ಎಂದು ಹೇಳಿದರು. ಅತಿಥಿಯಾಗಿ ಆಗಮಿಸಿದ ಮಂಗಳೂರಿನ ಸೌರಭ ಕಲಾ ಪರಿಷತ್ತು ನಿರ್ದೇಶಕಿ ಡಾ. ವಿದ್ಯಾ “ನೃತ್ಯ ಗುರು ವೀಣಾ ಸಾಮಗ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ, ಕೂಚುಪುಡಿ, ಜನಪದ ಮುಂತಾದ ನೃತ್ಯ ತರಗತಿಯನ್ನು ನಡೆಸುವದರ ಮೂಲಕ ಸಂಸ್ಕಾರಯುತ ಜೀವನ ನಡೆಸಲು ದಾರಿ ಮಾಡಿ ಕೊಟ್ಟಿದ್ದಾರೆ” ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ಸಂಘಟನಾ…

Read More

ವಿನಾಯಕ ಗಣಪತಿ ನಾಯಕರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಕೋಡಿಯಲ್ಲಿ ದಿನಾಂಕ 01 ಸೆಪ್ಟೆಂಬರ್ 1950ರಂದು ಜನಿಸಿದರು. ತಂದೆ ಗಣಪತಿ ನಾಯಕ ಹಾಗೂ ತಾಯಿ ಸೀತಾದೇವಿ ನಾಯಕ. ತಮ್ಮ ವಿದ್ಯಾಭ್ಯಾಸವನ್ನು ಉತ್ತರ ಕನ್ನಡದಲ್ಲಿ ಪೂರೈಸಿದ ನಾಯಕರು ಬೋಧನಾ ವೃತ್ತಿಯನ್ನು ಆರಂಭಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದ ಜನತಾ ಪದವಿ ಪೂರ್ವ ವಿದ್ಯಾಲಯದಲ್ಲಿ. ವಿಮರ್ಶಕರಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ವಿ.ಗ. ನಾಯಕರು ನಿಯಮಿತವಾಗಿ ಪತ್ರಿಕೆಗಳಿಗೆ ಬರೆದ ಅಂಕಣಗಳ ಕೃತಿ ‘ಬಿಡುಗಡೆ’, ‘ವಾಲಗ’, ‘ಕವಿಯಿಂದ ಕಿವಿಗೆ’. ಇವರ ವ್ಯಾಪಕ ಅಧ್ಯಯನದ ಕೃತಿ ‘ಹರಿಕಾಂತ ಸಂಸ್ಕೃತಿ’ ಮೀನುಗಾರ ಕುಲದ ಬಗೆಗಿನ ಆಳವಾದ ಜ್ಞಾನವನ್ನು ನೀಡುತ್ತದೆ. ತಮ್ಮ ಬಾಲ್ಯದಿಂದಲೇ ಸಾಹಿತ್ಯಾಸಕ್ತಿ ಹೊಂದಿದ್ದ ವಿ.ಗ. ನಾಯಕರು ರಚಿಸಿರುವ ಕೃತಿಗಳು ಹಲವು. ‘ಹೊನ್ನೂರ ಜಾಜಿ’, ‘ಒಳಗೂಡಿನಲ್ಲಿ’, ‘ಗೋಲಗುಮ್ಮಟ’, ‘ನೆಲಗುಮ್ಮ’ ಇವರ ಕವನ ಸಂಗ್ರಹಗಳು. ‘ಒರೆಗಲ್ಲು’, ‘ಪ್ರತಿಸ್ಪಂದನ’, ‘ಕನ್ನಡದಲ್ಲಿ ಹನಿಗವನಗಳು’, ‘ತಾರ್ಕಣೆ’ ಇವರ ವಿಮರ್ಶಾ ಗ್ರಂಥಗಳು. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇವರು ನಿರ್ವಹಿಸಿದ ಕಾರ್ಯಗಳು ಹಲವಾರು. ಅಡ್ಯನಡ್ಕದಲ್ಲಿ ಸ್ಮೃತಿ ಪ್ರಕಾಶನ ಮತ್ತು…

Read More

ಸುಮನಾ ಹೇರ್ಳೆ ಈಗಾಗಲೇ ತಮ್ಮ ಗಝಲ್, ಕವನ, ಆಧುನಿಕ ವಚನ ಹಾಗೂ ಮುಕ್ತಕಗಳ ಸಂಕಲನಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗಿದ್ದಾರೆ. ‘ಶ್ರೀ ಗುರು ನರಸಿಂಹ ಕಾವ್ಯಧಾರೆ’ ಇತ್ತೀಚೆಗೆ ಪ್ರಕಟವಾದ ಅವರ ವಿಶಿಷ್ಟ ಕೃತಿ. ಇಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ ಗುರುನರಸಿಂಹ ದೇವಸ್ಥಾನದ ಸ್ಥಳ ಪುರಾಣವನ್ನು ವಸ್ತುವಾಗಿಟ್ಟುಕೊಂಡು ಅವರು ಛಂದೋಬದ್ಧವಾಗಿ ಚೌಪದಿಯಲ್ಲಿ ರಚಿಸಿದ 300 ಪದ್ಯಗಳಿವೆ. ಒಂದು ಮಹಾಕಾವ್ಯದ ಶೈಲಿಯಲ್ಲಿ ಆರಂಭದ ಆರು ಪದ್ಯಗಳನ್ನು ದೇವರ ಪ್ರಾರ್ಥನೆಗಾಗಿ ಅವರು ಬಳಸುತ್ತಾರೆ. ಮುಂದೆ ಸೂತಮುನಿಗಳು ಹೇಳುವ ಪರಶುರಾಮ ಕ್ಷೇತ್ರವು ಹೇಗೆ ಹುಟ್ಟಿತು ಅನ್ನುವುದರ ಕಥೆಯಿದೆ. ಅನಂತರ ಸಾಲಿಗ್ರಾಮದಲ್ಲಿ ನರಸಿಂಹನು ಬ್ರಹ್ಮ, ವಿಷ್ಣು ಮತ್ತು ಶಿವ ಸ್ವರೂಪಿಯಾಗಿ, ಸಾಲಿಗ್ರಾಮ ಶಿಲೆಯಾಗಿ ನೆಲೆಸಿರುವುದರ ಕುರಿತಾದ ವಿವರಗಳಿವೆ. ಮುಂದೆ ಕದಂಬನೆಂಬ ದೈವಸ್ವರೂಪಿ ಬಾಲಕನು ಹುಟ್ಟಿ, ಅನಂತರ ಕದಂಬ ಸಾಮ್ರಾಜ್ಯ ಸ್ಥಾಪಿಸಿ, ಶ್ರದ್ಧೆಯಿಂದ ಪರಶುರಾಮ ಕ್ಷೇತ್ರವನ್ನು ಆಳುತ್ತಾನೆ. ಅವನ ಮಗ ವಸುರಾಜನೂ ಸಮರ್ಥ ರಾಜನಾಗಿ, ಅವನ ಮಗಳು ಸುಶೀಲೆಯು ಸೂರ್ಯವಂಶದ ಹೇಮಾಂಗದನನ್ನು ಮದುವೆಯಾಗುತ್ತಾಳೆ. ಶತ್ರುಗಳ ಪಿತೂರಿಗೆ ಬಲಿಯಾಗಿ ಹೇಮಾಂಗದನು ಮರಣ…

Read More

ಧಾರವಾಡ : ಅಭಿನಯ ಭಾರತಿ ಸಂಸ್ಥೆಯು ಹಿರಿಯ ಶಿಕ್ಷಣ ತಜ್ಞ ದಿ. ವಜ್ರಕುಮಾರ ಸ್ಮರಣಾರ್ಥ ‘ವಜ್ರ ಸಿರಿ ರಂಗೋತ್ಸವ 2025’ ಮೂರು ನಾಟಕ ಪ್ರದರ್ಶನವನ್ನು ದಿನಾಂಕ 03 ಮತ್ತು 04 ಸೆಪ್ಟೆಂಬರ್ 2025ರಂದು ಧಾರವಾಡದ ಕರ್ಣಾಟಕ ಕಾಲೇಜಿನ ಆವರಣ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದೆ. ದಿನಾಂಕ 03 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಜೆ.ಎಸ್.ಎಸ್. ಕಾರ್ಯದರ್ಶಿ ಡಾ. ಅಜಿತ ಪ್ರಸಾದ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದು, ಉದ್ಯಮಿ ಡಾ. ಸಿ.ಎಚ್.ಕೆ.ವಿ. ಪ್ರಸಾದ ಇವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಜೆ 6-00 ಗಂಟೆಗೆ ಬೆಳಗಾವಿಯ ರಂಗಸಂಪದ ತಂಡದವರು ವಿಜಯದಾಸರ ಜೀವನ ಆಧಾರಿತ ಭಕ್ತಿ ಪ್ರಧಾನ ಹಾಗೂ ಸಂಗೀತಮಯ ನಾಟಕವಾದ ‘ಸ್ಮರಿಸಿ ಬದುಕಿರೋ’ ನಾಟಕವನ್ನು ಮನೋಜ್ಞವಾಗಿ ಪ್ರಸ್ತುತಪಡಿಸಲಿದ್ದಾರೆ. ದಿನಾಂಕ 04 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಝಕೀರ್ ನದಾಫ್ ರಚಿಸಿ, ನಿರ್ದೇಶಿಸಿದ ‘ನೆಲಮುಗಿಲು’ ಮತ್ತು 7-00 ಗಂಟೆಗೆ ‘ಹಾಲು ಬಟ್ಟಲದೊಳಗಿನ ಪಾಲು’ ನಾಟಕವನ್ನು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ರಂಗ ಆರಾಧನಾ ತಂಡ ಪ್ರಸ್ತುತ…

Read More

ಪಿ. ಕಾಳಿಂಗ ರಾವ್ ಹೆಸರು ಕೇಳಿದ ಕೂಡಲೇ ಕನ್ನಡ ಸಾರಸ್ವತ ಲೋಕಕ್ಕೆ ನೆನಪಾಗುವುದು ಹುಯಿಲಗೋಳ ನಾರಾಯಣ ರಾಯರ ರಚನೆಯ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ. ಕನ್ನಡದ ಈ ನಾಡ ಭಕ್ತಿಗೀತೆಗೆ 1947ರಲ್ಲಿ ರಾಗ ಸಂಯೋಜನೆ ಮಾಡಿ ಹಾಡಿದವರು ಪಿ. ಕಾಳಿಂಗ ರಾಯರು. ಇದು ಕರ್ಣಾಟಕ ಏಕೀಕರಣಕ್ಕೆ ಕಾಳಿಂಗ ರಾಯರು ನೀಡಿದ ಅಮೂಲ್ಯ ಕೊಡುಗೆ. ಕನ್ನಡ ರಾಜ್ಯೋತ್ಸವದ ನಂತರ ಈ ಹಾಡಿಗಾಗಿ ಕರ್ನಾಟಕ ಸರಕಾರ ಕಾಳಿಂಗ ರಾಯರಿಗೆ ವಿಶೇಷ ಸನ್ಮಾನ ಮಾಡಿತು. ಪಿ. ಕಾಳಿಂಗ ರಾವ್ ಎಂದೆ ಪ್ರಸಿದ್ಧರಾದ ಪಾಂಡೇಶ್ವರ ಕಾಳಿಂಗ ರಾಯರು ಮೂಲತಃ ಉಡುಪಿ ಜಿಲ್ಲೆಯ ಬಾರ್ಕೂರಿನ ಮೂಡುಕೆರೆಯವರು. ಇವರು ಯಕ್ಷಗಾನದಲ್ಲಿ ಪ್ರಸಿದ್ಧರಾದ ನಾರಾಯಣ ರಾಯರ ಸುಪುತ್ರ. ನಾರಾಯಣ ರಾಯರನ್ನು ‘ಪಾಂಡೇಶ್ವರ ಪುಟ್ಟಯ್ಯ’ ಎಂದೇ ಕರೆಯುತ್ತಿದ್ದರು. ಭಾರತೀಯ ಭಾವಗೀತೆ ಮತ್ತು ಸುಗಮ ಸಂಗೀತ ಗಾಯಕ ಪಿ. ಕಾಳಿಂಗ ರಾವ್ ಜನಿಸಿದ್ದು 31 ಆಗಸ್ಟ್ 1914ರಲ್ಲಿ. ಕಾಳಿಂಗ ರಾಯರಿಗೆ ಸಾಹಿತ್ಯದ ರುಚಿ ಹತ್ತಿಸಿದವರು ಅವರ ಸೋದರ ಮಾವ. 5ನೇ ತರಗತಿಯಲ್ಲಿ…

Read More