Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕನ್ನಡಸಿರಿ ಸ್ನೇಹ ಬಳಗ ಕುಶಾಲನಗರ ಕೊಡಗು ಜಿಲ್ಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ವಿಚಾರ ಮಂಡನೆ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 05-07-2024ರಂದು ಬೆಳಿಗ್ಗೆ 10-30 ಗಂಟೆಗೆ ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಲಿದೆ. ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪಿ.ಆರ್. ವಿಜಯ್ ಇವರ ಅಧ್ಯಕ್ಷತೆಯಲ್ಲಿ ಮಡಿಕೇರಿ ನಗರಸಭೆ ಮಾನ್ಯ ಸದಸ್ಯರಾದ ಶ್ರೀ ಕೆ.ಎಸ್. ರಮೇಶ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಶ್ರೀ ಲೋಕೇಶ್ ಸಾಗರ್ ಬಿ.ಎಸ್. ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ಅನಂತಶಯನ ಇವರು ಖ್ಯಾತ ಸಾಹಿತಿಗಳಾದ ಕಿಗ್ಗಾಲು ಗಿರೀಶ್ ಇವರ ‘ಕಳೆದುಕೊಂಡವನು ಮತ್ತು ಇನ್ನಿತರ ಕಥೆಗಳು’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಡಿಕೇರಿಯ ಶ್ರೀಮತಿ ಜಯಲಕ್ಷ್ಮಿ ಶೇಖರ್ ಇವರು…
ಬೆಂಗಳೂರು : ಎಂ.ಎ. ನರಸಿಂಹಾಚಾರ್ ಮ್ಯೂಜಿಕ್ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ಸಂಗೀತ ಭೂಷಣ ಎಂ.ಎ. ನರಸಿಂಹಾಚಾರ್ ಇವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಯುಟ್ಯೂಬ್ ನಲ್ಲಿ ಖ್ಯಾತರಾದ ಗಾಯಕರ ಸಂಗೀತ ಕಾರ್ಯಕ್ರಮವು ದಿನಾಂಕ 07-07-2024ರಂದು ಬೆಂಗಳೂರಿನ ಕೆ.ಆರ್. ರೋಡಿನಲ್ಲಿರುವ ಬೆಂಗಳೂರು ಗಾಯನ ಸಮಾಜ ಹಾಲ್ ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ಪೂರ್ತಿ ರಾವ್ ಇವರ ಹಾಡುಗಾರಿಕೆಗೆ ಶ್ರೀಲಕ್ಷ್ಮೀ ಭಟ್ ವಯೋಲಿನ್, ಅನಿರುದ್ಧ ಭಟ್ ಮೃದಂಗ, ಸುನಾದ ಅನೂರ್ ಖಂಜೀರದಲ್ಲಿ ಸಹಕರಿಸಲಿದ್ದಾರೆ. ಸೂರ್ಯಗಾಯತ್ರಿಯವರ ಭಕ್ತಿಗೀತೆಗಳಿಗೆ ಪ್ರದೇಶಾಚಾರ್ ವಯೋಲಿನ್, ಕೃಪಾಲ್ ಸಾಯಿ ರಾಮ್ ಮೃದಂಗ, ಪ್ರಶಾಂತ್ ಶಂಕರ್ ತಬಲಾ ಮತ್ತು ಶೈಲೇಶ್ ಮರಾರ್ ಹೆಚ್ಚುವರಿ ತಾಳವಾದ್ಯದಲ್ಲಿ ಸಾಥ್ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಗಾನ ಕಲಾ ಮಂದಿರದ ವಿದ್ಯಾರ್ಥಿಗಳಿಂದ ಗುರು ವಂದನ ನಡೆಯಲಿದೆ. ಸಾಯಿ ವಿಘ್ನೇಶ್ ಕರ್ನಾಟಿಕ್ ಫ್ಯೂಶನ್ ಬಾಂಡ್ ನಲ್ಲಿ ಎಸ್. ವೆಂಕಟರಮಣ್ ಕೀಬೋರ್ಡ್, ತ್ರಿರುಚೇರೈ ಕಾರ್ತಿಕ್ ವಯೋಲಿನ್, ಅಮೋಘವರ್ಷ ಡ್ರಮ್ಸ್ ಮತ್ತು ಕೌಶಿಕ್ ಶ್ರೀಧರ್ ತಾಳವಾದ್ಯದಲ್ಲಿ ಹಾಗೂ ರಾಹುಲ್ ವೆಲ್ಲಾಳ್ ಇವರ ಹಾಡುಗಾರಿಕೆಗೆ…
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಖ್ಯಾತ ಪತ್ರಕರ್ತ ಎಂ.ಐ.ಸಿ. ಮಣಿಪಾಲದ ಪ್ರಾಧ್ಯಾಪಕರಾಗಿರುವ ಸತ್ಯಬೋಧ ಜೋಶಿಯವರನ್ನು ದಿನಾಂಕ 01-07-2024ರಂದು ಪತ್ರಿಕಾ ದಿನಾಚರಣೆಯ ಅಂಗವಾಗಿ ಅಭಿನಂದಿಸಿ ಗೌರವಿಸಲಾಯಿತು. ಕೀಲಿಮಣೆ ತಜ್ಞ ವಿದ್ವಾಂಸ ನಾಡೋಜ ಕೆ.ಪಿ. ರಾವ್ ಇವರು ಶಾಲು ಹೊದೆಸಿ, ಸ್ಮರಣಿಕೆಯೊಂದಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ.ಸಾ.ಪ. ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಸಾಮಾಜಿಕ ಜಾಲ ನಿರ್ವಾಹಕರಾದ ಶಶಿಕಾಂತ ಶೆಟ್ಟಿ, ಸದಸ್ಯ ವಸಂತ್, ರಾಘವೇಂದ್ರ ಪ್ರಭು ಕರ್ವಾಲು, ಎಂ.ಐ.ಸಿ. ಮಣಿಪಾಲದ ಪ್ರಾಧ್ಯಾಪಕಿ ಹೆಚ್.ಎಸ್. ಶುಭ, ಸಹಾಯಕ ಪ್ರಾಧ್ಯಾಪಕ ವಿನ್ಯಾಸ್ ಹೆಗ್ಡೆ ಉಪಸ್ಥಿತರಿದ್ದರು.
ಮಂಗಳೂರು : ಭರತಾಂಜಲಿ (ರಿ.) ಕೊಟ್ಟಾರ ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ನೃತ್ಯಾಮೃತಮ್ -2024’ ನೃತ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 07-07-2024ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಈ ನೃತ್ಯ ಸಂಭ್ರಮವನ್ನು ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಇವರು ಉದ್ಘಾಟಿಸಲಿದ್ದು, ಕರ್ನಾಟಕ ಕಲಾಶ್ರೀಗಳಾದ ಗುರು ಕಮಲ ಭಟ್ ಮತ್ತು ಗುರು ರಾಜಶ್ರೀ ಉಳ್ಳಾಲ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಂಕುರ, ವಲ್ಲರಿ ಮತ್ತು ತರು ತಂಡಗಳು ನೃತ್ಯ ಕಾರ್ಯಕ್ರಮ ನೀಡಲಿರುವರು.
ಮೂಡುಬಿದ್ರೆ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ‘ವಿಂಶತಿ’ ಕಾರ್ಯಕ್ರಮದ ಅಂಗವಾಗಿ ಸರಣಿ ತಾಳಮದ್ದಳೆಯು ಪರಮ ಪೂಜ್ಯ ಡಾ. ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಮೂಡುಬಿದ್ರೆ ಇವರು ಹಮ್ಮಿಕೊಂಡ ನಿರಂತರ ತಾಳಮದ್ದಳೆ ಅಂಗವಾಗಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಇದರ ಆಶ್ರಯದಲ್ಲಿ ಪಾರ್ತಿಸುಬ್ಬ ವಿರಚಿತ ‘ಭರತಾಗಮನ’ ತಾಳಮದ್ದಳೆಯು ದಿನಾಂಕ 30-06-2024ರಂದು ನಡೆಯಿತು. ಹಿಮ್ಮೇಳದಲ್ಲಿ ಭರತ್ ಶೆಟ್ಟಿ ಸಿದ್ದಕಟ್ಟೆ, ದೇವಾನಂದ ಭಟ್ ಬೆಳುವಾಯಿ, ದಿವಿಜೇಶ್ ಬೆಳುವಾಯಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಭರತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಶ್ರೀ ರಾಮ), ಶುಭಾ ಗಣೇಶ್ (ವಸಿಷ್ಠ ಮತ್ತು ಲಕ್ಷ್ಮಣ) ಸಹಕರಿಸಿದರು. ಪೂಜ್ಯ ಶ್ರೀಗಳು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿ ಕಲಾವಿದರನ್ನು ಗೌರವಿಸಿದರು. ಸಂಘದ ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು.
ಕರ್ನಾಟಕದವರಾಗಿ ಅಮೇರಿಕದಲ್ಲಿ ನೆಲೆಸಿರುವ ಶ್ರೀ ಯೋಗೇಶ್ವರ್ ಮತ್ತು ಶ್ರೀಮತಿ ಪ್ರಜ್ಞಾ ಅವರ ಮೂವರು ಮಕ್ಕಳಲ್ಲಿ ಹಿರಿಯವನೇ 15ರ ಹರೆಯದ ಮಾಸ್ಟರ್ ಅಕುಲ್ ಗೊಂಚಿಗಾರ್. ಅಮೇರಿಕಾದಲ್ಲಿ ಹುಟ್ಟಿ ಬೆಳೆದ ಈ ಬಾಲಕನಿಗೆ ತಂದೆ ತಾಯಂದಿರ ಪ್ರಯತ್ನದಿಂದ ಕರ್ನಾಟಕ ಸಂಗೀತದ ಬಗ್ಗೆ ಒಲಮೆ ಹುಟ್ಟಿಕೊಂಡಿತು. ಬಳಿಕ ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಅವರ ಸಂಗೀತ ಪಾಠ ಆತನಲ್ಲಿ ಸಂಗೀತದ ಬಗ್ಗೆ ಹೆಚ್ಚು ಆಕರ್ಷಣೆಯನ್ನು ಉಂಟು ಮಾಡಿರಬೇಕು. ಬೆಂಗಳೂರಿನ ಜಯನಗರದ ವಿವೇಕ ಸಭಾಂಗಣದಲ್ಲಿ ಅಕುಲ್ ಬಂಧುಗಳೇ ಹೆಚ್ಚಾಗಿ ಇದ್ದ ಉತ್ತಮ ಸಂಖ್ಯೆಯ ಶ್ರೋತೃಗಳ ಸಮ್ಮುಖದಲ್ಲಿ ದಿನಾಂಕ 29-06- 2024ರಂದು ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಸಂಜೆ ಗಂಟೆ 7-00ಕ್ಕೆ ವಿದ್ವಾನ್ ಕೇಶವ ಮೋಹನ್ ಕುಮಾರ್, ವಿದ್ವಾನ್ ಆನೂರು ವಿನೋದ್ ಶ್ಯಾಮ್ ಮತ್ತು ವಿದ್ವಾನ್ ರಘುನಂದನ್ ಬಿ.ಎಸ್.ರಂತಹ ಅನುಭವೀ ಪಕ್ಕವಾಕ್ಯದೊಂದಿಗೆ ಸಂಗೀತ ಕಚೇರಿ ಪ್ರಾರಂಭವಾಯಿತು. ತೋಡಿ ರಾಗ – ಆದಿತಾಳ ವರ್ಣ, ಖರಹರಪ್ರಿಯ ರಾಗದ ತ್ಯಾಗರಾಜರ ಪಕ್ಕಲ ನಿಲಬಡಿ ಕೃತಿ, ಹಂಸಧ್ವನಿ ರಾಗದ ವಿದ್ವಾನ್ ಸಾಯಿ ನರಸಿಂಹನ್…
ಕುಂಬಳೆ : ಕನ್ನಡ ಭಾಷೆ, ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ‘ಸಾಹಿತ್ಯ ಪರಿಷತ್ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದ ಅಂಗವಾಗಿ ಹಿರಿಯ ಕನ್ನಡ ಧುರೀಣ, ನಿವೃತ್ತ ಮುಖ್ಯ ಶಿಕ್ಷಕ ಕೆ. ನಾರಾಯಣ ಗಟ್ಟಿ ಮಾಸ್ಟರ್ ಅವರನ್ನು ಕುಂಬಳೆ ಸಮೀಪದ ಮಳಿಯಲ್ಲಿರುವ ಅವರ ನಿವಾಸದಲ್ಲಿ ದಿನಾಂಕ 30-06-2024ರಂದು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ನಾರಾಯಣ ಗಟ್ಟಿ ಅವರನ್ನು ಅಭಿನಂದಿಸಿದರು. ಕಣಿಪುರ ಪತ್ರಿಕೆಯ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಅಭಿನಂದನಾ ಭಾಷಣ ಮಾಡಿದರು. ಕಥೆಗಾರ್ತಿ ಸ್ನೇಹಲತಾ ದಿವಾಕರ, ಕವಯತ್ರಿ ದಿವ್ಯಾ ಗಟ್ಟಿ ಪರಕ್ಕಿಲ, ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಭಟ್ ಧರ್ಮತ್ತಡ್ಕ ಇವರೆಲ್ಲರು ಕೆ. ನಾರಾಯಣ ಗಟ್ಟಿ ಮಾಸ್ಟರ್ ಅವರ ವ್ಯಕ್ತಿತ್ವವನ್ನು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು. ಸನ್ಮಾನಕ್ಕೆ ಕೃತಜ್ಞತೆ…
ಮಂಗಳೂರು : ಕೊಂಕಣಿ ಬರಹಗಾರರಿಗೆ, ಲೇಖಕರಿಗೆ ಪ್ರೋತ್ಸಾಹ ನೀಡಿ, ಸಾಹಿತ್ಯಕ್ಕೆ ಆದ್ಯತೆ ಕೊಡುವ ಉದ್ದೇಶದಿಂದ ಪುಸ್ತಕಗಳ ಸಗಟು ಖರೀದಿ ಯೋಜನೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿರುತ್ತದೆ. ಈ ಯೋಜನೆಯಲ್ಲಿ 2023-24 ಹಾಗೂ 2024-25ರ (ಎಪ್ರಿಲ್ ನಿಂದ ಮಾರ್ಚ್) ಕ್ಯಾಲೆಂಡರ್ ವರ್ಷದಲ್ಲಿ ಪ್ರಕಟಗೊಂಡ ಯಾವುದೇ ಪ್ರಕಾರದ ಕೊಂಕಣಿ ಪುಸ್ತಕಗಳನ್ನು 20% ರಿಯಾಯಿತಿ ನೀಡಿ ರೂ 2.000/- ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗುವುದು. ಅಕಾಡೆಮಿಯ ವಾಚನಾಲಯದ ಉಪಯೋಗಕ್ಕಾಗಿ ಕೊಂಕಣಿ ಭಾಷೆ, ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಭಾಷೆಯ ಪುಸ್ತಕಗಳ ಗರಿಷ್ಠ 1.000/- ಮೌಲ್ಯದ ಪ್ರತಿಗಳನ್ನು ಖರೀದಿಸಲಾಗುವುದು. ಆಸಕ್ತರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಯಕ್ಷ ಶಿಕ್ಷಣ ನಾಟ್ಯ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 01.07.2024 ರಂದು ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ನಡೆಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಿಕೆ ಪಟ್ಲ ಫೌಂಡೇಶನ್ನಿನ ಕಾರ್ಯಚಟುವಟಿಕೆಗಳು, ಧ್ಯೇಯೋದ್ದೇಶಗಳ ಬಗ್ಗೆ ಸವಿವರ ಮಾಹಿತಿ ನೀಡಿ ನಾಟ್ಯ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಲಾ ನೈಪುಣ್ಯತೆ ಪಡೆಯುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶಿವಪ್ರಸಾದ್ ಸೊರಂಪಳ್ಳ ವಹಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಕುಮಾರ್ ಬಾಳೆಕಲ್ಲು ಮಾತನಾಡಿ ತರಬೇತಿ ತರಗತಿಗಳಿಗೆ ಶುಭ ಕೋರಿದರು. ಎಸ್.ಡಿ.ಎಂ.ಸಿ. ಸದಸ್ಯರಾದ ವಿಷ್ಣು ಕನ್ನಡಗುಳಿ ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡಲಾಗುವ ಈ ಉಚಿತ ಯಕ್ಷಗಾನ ನಾಟ್ಯ ತರಗತಿಗಳಿಗಾಗಿ ಪ್ರಾಯೋಜಕರನ್ನು ಅಭಿನಂದಿಸಿದರು. ಯಕ್ಷ ಗುರು ಗಣೇಶ್ ಕೊಂದಲಕೋಡಿ ಪ್ರಶಿಕ್ಷಣಾರ್ಥಿಗಳಿಗೆ ಸಾಂಕೇತಿಕವಾಗಿ…
ಬೆಳ್ತಂಗಡಿ : ಉಜಿರೆ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕ ಹಿರಿಯ ಸಾಹಿತಿ ಪ್ರೊ. ಎನ್.ಜಿ. ಪಟವರ್ಧನ್ (81) ಅವರು ದಿನಾಂಕ 01-07-2024ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮುಂಡಾಜೆ ಗ್ರಾಮದ ಕಡಂಬಳ್ಳಿ ಮೂಲದವರಾಗಿದ್ದ ಅವರು ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ 32 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಕನ್ನಡ ವಿಭಾಗದ ಮುಖ್ಯಸ್ಥರೂ ಆಗಿದ್ದರು. ಅವರ ಸಾಹಿತ್ಯ ಪ್ರೀತಿಯಿಂದಾಗಿ ಹಂಸಧ್ವನಿ ಪ್ರಕಾಶನದ ಮೂಲಕ ಕನ್ನಡ ವ್ಯಾಕರಣ, ಕವನ ಸಂಕಲನಗಳು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಉಜಿರೆಯ ಶಿವಾಜಿನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು ಪ್ರೇಮ ಲಹರಿ, ಅಕ್ಷಯ, ಮಾನಸ, ಚಿಲುಮೆ, ಸಿಂಚನ, ತುಂತುರು, 200 ಮುಕ್ತಕಗಳು, ಹೂಮಳೆ, ಸಾವಿರಾರು ಮುಕ್ತಕಗಳು, 58 ಕವನಗಳು ಇತ್ಯಾದಿ ಕವನ ಸಂಕಲನ, ಮೃತ್ಯುಂಜಯದ ಮಡಿಲಲ್ಲಿ ಮುಗುಳ್ಳಗೆ, ತೆರೆದ ಮನ, ವಿಚಾರ ವಿಹಾರ ಮೊದಲಾದ ಪ್ರಬಂಧ ಸಂಕಲನ, ಸ್ಥಿತ್ಯಂತರ ಮತ್ತು ಇತರ ಕಥೆಗಳು ಕೊರಡು ಕೊನರಿತು, ಮರೀಚಿಕೆ ಮೊದಲಾದ ಕಥಾ ಸಂಕಲನ,…