Subscribe to Updates
Get the latest creative news from FooBar about art, design and business.
Author: roovari
ಹಂಗಾರಕಟ್ಟೆ : ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ಆಶ್ರಯದಲ್ಲಿ ಕಲಾಕೇಂದ್ರದ ಸಂಸ್ಥಾಪಕ ದಿ. ಐರೋಡಿ ಸದಾನಂದ ಹೆಬ್ಬಾರರ ಸಂಸ್ಮರಣೆ, ಸದಾನಂದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಕ್ಷ ಸಪ್ತೋತ್ಸವದ ಸಮಾರೋಪ ಸಮಾರಂಭವು ದಿನಾಂಕ 27 ಅಕ್ಟೋಬರ್ 2024ರಂದು ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ನಡೆಯಿತು. ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಶಿ ಮಾತನಾಡಿ, “ಯಕ್ಷಗಾನ ಕ್ಷೇತ್ರಕ್ಕೆ ಸದಾನಂದ ಹೆಬ್ಬಾರ್ ಇವರ ಕೊಡುಗೆ ಮಹತ್ವದ್ದು. ಯಕ್ಷಗಾನ ಕಲಾಕೇಂದ್ರದ ಮೂಲಕ ಸಾವಿರಾರು ಉತ್ತಮ ಶಿಷ್ಯರನ್ನು ಅವರು ತಯಾರು ಮಾಡಿದ್ದು, ಕಲೆಯ ಮೂಲ ಸತ್ವವನ್ನು ಉಳಿಸಿಕೊಂಡು ಮಂದೆ ಸಾಗಬೇಕಾದರೆ ಇಂತಹ ಕೇಂದ್ರಗಳು ಅಗತ್ಯ” ಎಂದರು. ಅಧ್ಯಕ್ಷತೆ ವಹಿಸಿದ್ದ ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ. ಕುಂದರ್ ಮಾತನಾಡಿ, “ಈ ಸಂಸ್ಥೆಯು 50 ವರ್ಷ ಪೂರೈಸಿದ್ದು, ಮುಂದಿನ ದಿನಗಳಲ್ಲಿ ಕೇಂದ್ರದ ಅಸ್ತಿತ್ವಕ್ಕೆ ತೊಡಕಾಗಬಾರದು ಎನ್ನುವುದು ಎಲ್ಲಾ ಕಲಾಸಕ್ತರ ಆಶಯ. ಹೀಗಾಗಿ ಕನಿ಼ಷ್ಠ ರೂ. ಎರಡು ಕೋಟಿಯನ್ನು ಕಲಾಭಿಮಾನಿಗಳ ಸಹಕಾರದಿಂದ ಠೇವಣಿ ಇಟ್ಟು, ಅದರ ಬಡ್ಡಿ ಮೊತ್ತದಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸುವ…
ಬಂಟ್ವಾಳ : ಮಕ್ಕಳ ಕಲಾಲೋಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇವರು ಕಡೇಶಿವಾಲಯ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ಧ ಬಂಟ್ವಾಳ ತಾಲೂಕು ಮಕ್ಕಳ 17ನೇ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಲಹರಿ’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 30 ಅಕ್ಟೋಬರ್ 2024ರಂದು ಕಡೇಶಿವಾಲಯ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದ ಎಸ್. ವಿ. ಎಸ್. ದೇವಳ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರ ಆಳ್ವ ಮಾತನಾಡಿ “ಪುಸ್ತಕದ ಒಳನೋಟಗಳನ್ನು ನೋದಿದಾಗ ಇದು ಉತ್ತಮ ಮತ್ತು ಸಂಗ್ರಹಯೋಗ್ಯವಾದ ದಾಖಲೆ.” ಎಂದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಂಟ್ವಾಳ ಇದರ ಸಂಚಾಲಕ ಹಾಗೂ ಸ್ಮರಣ ಸಂಚಿಕೆಯ ಗೌರವ ಸಂಪಾದಕರಾದ ತುಕಾರಾಮ ಪೂಜಾರಿ ಮಾತನಾಡಿ ದಾಖಲೆಗಳನ್ನು ಮಾಡಿಡಬೇಕಾದ ಅಗತ್ಯ ಮತ್ತು ಅವುಗಳ ಮಹತ್ವದ ಬಗ್ಗೆ ತಿಳಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ…
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಆಶ್ರಯದಲ್ಲಿ ಅನಂತಮೂರ್ತಿ ಪ್ರೌಢಶಾಲೆಯಲ್ಲಿ ದಿನಾಂಕ 01 ನವೆಂಬರ್ 2024ರಂದು ಜರಗಿದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಿವೃತ್ತ ಆಂಗ್ಲ ಉಪನ್ಯಾಸಕಿ ಹಿರಿಯ ಸಾಹಿತಿ ಕ.ಸಾ.ಪ. ಹಿರಿಯ ಸದಸ್ಯೆ ಶ್ರೀಮತಿ ಉಮಾದೇವಿ ಉರಾಳ್, ಗೃಹ ರಕ್ಷಕ ದಳದಲ್ಲಿ ಉತ್ತಮ ಸೇವೆಗಾಗಿ ಕಳೆದ ವರ್ಷ ರಾಜ್ಯ ಪ್ರಶಸ್ತಿ ಪಡೆದ ಎಚ್.ಆರ್. ರಾಘವೇಂದ್ರ ಹಾಗೂ ಸಾರ್ವಜನಿಕ ಜೆ.ಸಿ. ಆಸ್ಪತ್ರೆಯ ಮರಣೋತ್ತರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ದಯಾನಂದ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಇವರು, “ಶಿಕ್ಷಕರು ವಿದ್ಯಾರ್ಥಿಗಳಿಗೆ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ, ಆಸಕ್ತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತವರು. ಶಿಕ್ಷಕರು ನಾಡು ನುಡಿಯ ಬಗ್ಗೆ ಆಸಕ್ತಿ ವಹಿಸಿ ವಿದ್ಯಾರ್ಥಿಗಳಲ್ಲೂ ಕನ್ನಡದ ಕುರಿತು ಅಭಿಮಾನ ಮೂಡಿಸಬೇಕು” ಎಂದು ಹೇಳಿದರು. ಮೂವರು ಸನ್ಮಾನಿತರ ಸೇವೆಯನ್ನು ಪ್ರಶಂಸಿಸಿ ಅವರನ್ನು ಅಭಿನಂದಿಸಿದರು.…
ಮಂಗಳೂರು : ಕೆನರಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಸಾಹಿತಿ ರಘು ಇಡ್ಕಿದು ಇವರ 31ನೇ ಕೃತಿ ‘ಅರಿಮುಡಿ’ ನಗರದ ಪ್ರೆಸ್ ಕ್ಲಬ್‌ನಲ್ಲಿ ದಿನಾಂಕ 04 ನವೆಂಬರ್ 2024ರಂದು ಲೋಕಾರ್ಪಣೆಗೊಂಡಿತು. ಕೃತಿ ಬಿಡುಗಡೆಗೊಳಿಸಿದ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಈ ವೇಳೆ ಮಾತನಾಡಿ “ಬರಹಗಾರರಲ್ಲಿ ವಿನಮ್ರತೆ ಮತ್ತು ಸರಿಯಾದ ವಿಚಾರ ಇದ್ದ ಸಂದರ್ಭದಲ್ಲಿ ಜನರಿಗೆ ಇಷ್ಟವಾಗುತ್ತದೆ” ಎಂದರು. ಕೃತಿ ಬಗ್ಗೆ ಮಾತನಾಡಿದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ, “ಈ ಕೃತಿಗೆ ‘ಅರಿಮುಡಿ’ ಎನ್ನುವ ಶೀರ್ಷಿಕೆ ವಿಶಿಷ್ಟವಾಗಿದೆ. ತುಳುವಿಗೆ ಸಂಬಂಧಿಸಿದ ವಿಷಯಗಳು ಕೃತಿಯಲ್ಲಿದ್ದು, ಕನ್ನಡದಲ್ಲಿ ಕೃತಿ ರಚಿಸಲಾಗಿದೆ” ಎಂದರು. ಅತಿಥಿಗಳಾಗಿದ್ದ ಕೆನರಾ ಪದವಿ ಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಕೆ.ಎಂ. ಹಾಗೂ ಪ್ರಾಂಶುಪಾಲೆ ಲತಾ ಮಹೇಶ್ವರಿ ಕೆ.ಬಿ. ಇವರುಗಳು ಶುಭ ಹಾರೈಸಿದರು. ಪ್ರಕಾಶಕಿ ವಿದ್ಯಾ ಯು. ಮತ್ತು ಕೃತಿಕಾರ ರಘು ಇಡ್ಕಿದು ಉಪಸ್ಥಿತರಿದ್ದರು.
ಬದಿಯಡ್ಕ : ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನ ವಳಮಲೆ ಬದಿಯಡ್ಕ ಕಾಸರಗೋಡು (ರಿ.) ಇದರ ವತಿಯಿಂದ ಕಾಸರಗೋಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ದಿನಾಂಕ 06 ನವೆಂಬರ್ 2024ರಂದು ಮಧ್ಯಾಹ್ನ 2-00 ಗಂಟೆಗೆ ಬದಿಯಡ್ಕ ವಳಮಲೆ ಇರ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಗಂಗಾಧರ ಆಳ್ವ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶ್ರೀಮತಿ ಮಮತಾ ಗಟ್ಟಿ ಇವರು ಉದ್ಘಾಟನೆ ಮಾಡಲಿದ್ದಾರೆ. ಟಿ. ಸುಬ್ರಾಯ ನಾಯ್ಕ್ ಇವರು ಕೃತಿ ಲೋಕಾರ್ಪಣೆಗೊಳಿಸಲಿದ್ದು, ಕೃತಿಕಾರರಾದ ಶೇ ಪರಮೇಶ್ವರ ನಾಯ್ಕ ಅರ್ತಲೆ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು.
ಉಡುಪಿ : ಚಿರಂತನ ಚ್ಯಾರಿಟೇಬಲ್ ಟ್ರಸ್ಟ್ ಸುರತ್ಕಲ್ ಮತ್ತು ಮ್ಯಾಕ್ಸ್ ಮೀಡಿಯಾ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಿಂದುಸ್ತಾನಿ ಕಛೇರಿಗಳ ಸಂಗೀತ ಹಬ್ಬ ‘ಸ್ವರಸ್ವಾದ್’ ಕಾರ್ಯಕ್ರಮವು ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ದಿನಾಂಕ 26 ಅಕ್ಟೋಬರ್ 2024ರಂದು ಜರುಗಿತು. ಕಾರ್ಯಕ್ರಮದಲ್ಲಿ ಉಸ್ತಾದ್ ರಫೀಕ್ ಖಾನ್, ಶ್ರೀ ಟಿ. ರಂಗ ಪೈ, ಶ್ರೀ ಎಮ್. ಗಂಗಾಧರ್, ಶ್ರೀ ಮುರಳಿ ಕಡೇಕಾರ್ ಹಾಗೂ ಶ್ರೀ ರತ್ನಕುಮಾರ್ ಜೊತೆ ಸೇರಿ ದೀಪ ಪ್ರಜ್ವಲನವನ್ನು ನಡೆಸಿಕೊಟ್ಟರು. ಚಿರಂತನದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಭಾರವಿ ದೇರಾಜೆ ಹಾಗೂ ಮ್ಯಾಕ್ಸ್ ಮೀಡಿಯಾದ ಶ್ರೀ ಜಯಂತ್ ಐತಾಳ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಪಂಡಿತ್ ಗಣಪತಿ ಭಟ್ ಹಾಸಣಗಿ ಹಾಗೂ ವಿದುಷಿ ಸಂಗೀತ ಕಟ್ಟಿಯವರ ಶಿಷ್ಯೆ ಉಡುಪಿಯ ಯುವ ಕಲಾವಿದೆ ಕುಮಾರಿ ಅನುರಾಧ ಭಟ್ ಇವರು ರಾಗ ಕೇದಾರದಲ್ಲಿ ವಿಲಂಬಿತ್ ತೀನ್ ತಾಲ್ ಹಾಗೂ ದೃತ್ ತೀನ್ ತಾಲ್ ಇದರ ಬಂಧಿಶ್‌ಗಳನ್ನು…
ಬೆಂಗಳೂರು : ಸಂಸ್ಕೃತಿ ನೃತ್ಯ ಅಕಾಡಮಿ (ರಿ.) ಬೆಂಗಳೂರು ನೃತ್ಯ ಸಂಸ್ಥೆಯು ವಾರ್ಷಿಕೋತ್ಸವ ಪ್ರಯುಕ್ತ ದಿನಾಂಕ 10 ನವೆಂಬರ್ 2024ರಂದು ಮಧ್ಯಾಹ್ನ 2-00 ಗಂಟೆಗೆ ಬೆಂಗಳೂರಿನ ಸಂಜಯ ನಗರದ ಶ್ರೀ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ‘ನೂಪುರ ನಿನಾದ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವಿನಾಯಕ ನಾಯಕ ಇವರು ವಹಿಸಿದ್ದು, ಉದ್ಘಾಟಕರಾಗಿ ಧಾರವಾಡದ ರತಿಕಾ ನೃತ್ಯ ನಿಕೇತನದ ನಿರ್ದೇಶಕರಾದ ಹಿರಿಯ ನೃತ್ಯಗುರು ವಿದುಷಿ ನಾಗರತ್ನಾ ನಾಗರಾಜ ಹಡಗಲಿ, ಮುಖ್ಯ ಅತಿಥಿಗಳಾಗಿ ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಹಾಗೂ ಗೌರವ ಅತಿಥಿಗಳಾಗಿ ಶ್ರೀ ಕೆ.ಸಿ. ಸಿಂಗ್ ಇವರು ಉಪಸ್ಥಿತರಿರುವರು. ನೂಪುರ ನಿನಾದ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಯುವ ಸಾಹಿತಿ ಡಾ. ವಿಶ್ವನಾಥ ಎನ್. ನೇರಳಕಟ್ಟೆ ರಚಿಸಿದ ‘ವೀರ ಸಂನ್ಯಾಸಿ’ ನೃತ್ಯ ರೂಪಕ ಮೂಡಿಬರಲಿದೆ ಎಂದು ಸಂಸ್ಥೆಯ ನಿರ್ದೇಶಕಿ ವಿದುಷಿ ಶೃತಿ ನಾಯಕ ಮತ್ತು ಕಾರ್ಯದರ್ಶಿಗಳಾದ ಶ್ರೀ ಶರದ ನಾಯಕ ತಿಳಿಸಿರುತ್ತಾರೆ.
ಬಂಟ್ವಾಳ : ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ.) ಹೂವಿನಹಡಗಲಿ, ಜಿಲ್ಲಾ ಬರಹಗಾರರ ಸಂಘ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕರ್ನಾಟಕ ಪ್ರೌಢ ಶಾಲೆ ಮಾಣಿ ಬಂಟ್ವಾಳ ತಾಲೂಕು ಇವರ ಸಹಯೋಗದಲ್ಲಿ ದಿನಾಂಕ 01 ನವೆಂಬರ್ 2024ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಚುಟುಕು ಕವನ ರಚನಾ ಕಮ್ಮಟ’ ನಡೆಯಿತು. ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ, ಕವಿ, ಸಾಹಿತಿ ಶಾಂತಾ ಪುತ್ತೂರು ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬರಹಗಾರರ ಸಂಘದ ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಮುಖ್ಯ ಅತಿಥಿಯಾಗಿ ಕನ್ನಡ ನಾಡು ನುಡಿ, ಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡಿದರು. ರಾಜ್ಯೋತ್ಸವ ಕವಿಗೋಷ್ಠಿಗೆ ಉಪನ್ಯಾಸಕಿ ಗೀತಾ ಕೊಂಕೋಡಿ ಇವರು ಕವನ ವಾಚಿಸಿ ಚಾಲನೆ ನೀಡಿದರು. ಹಿರಿಯ ಕವಿಗಳಾದ ಎಂ.ಡಿ. ಮಂಚಿ, ಡಾ. ಮೈತ್ರಿ ಭಟ್ ವಿಟ್ಲ, ಆನಂದ ರೈ ಅಡ್ಕಸ್ಥಳ, ಸತೀಶ್ ಬಿಳಿಯೂರು, ಎಸ್. ಜಯಶ್ರೀ ಶೆಣೈ ಬಂಟ್ವಾಳ, ರವೀಂದ್ರ ಕುಕ್ಕಾಜೆ, ಹೇಮಂತ್ ಕುಮಾರ್ ಡಿ., ಶ್ವೇತಾ ಡಿ. ಬಡಗಬೆಳ್ಳೂರು, ವಿಸ್ಮಿತಾ ಎಂ. ಪಡುಮಲೆ,…
ಮೈಸೂರು : ಪರಿವರ್ತನ ಹಾಗೂ ನಮನ ಕಲಾವೇದಿಕೆ ಜಂಟಿಯಾಗಿ ಆಯೋಜಿಸಿರುವ ‘ರಂಗ ತರಬೇತಿ ಶಿಬಿರ’ವು ದಿನಾಂಕ 19 ನವೆಂಬರ್ 2024ರಿಂದ 28 ನವೆಂಬರ್ 2024ರವರೆಗೆ ಸಂಜೆ 5-00ರಿಂದ 7-30 ಗಂಟೆವರೆಗೆ ಮೈಸೂರಿನ ಕೃಷ್ಣಮೂರ್ತಿಪುರಂ ನಮನ ಕಲಾ ಮಂಟಪದಲ್ಲಿ ನಡೆಯಲಿದೆ. ಅಭಿನಯ ಕಲೆ, ಧ್ವನಿ ಬಳಕೆ, ದೃಶ್ಯ ಕಟ್ಟುವ ವಿಧಾನ ಈ ವಿಷಯಗಳ ಕುರಿತಂತೆ ರಂಗ ಕಾರ್ಯಾಗಾರ ಮತ್ತು ಪರಿವರ್ತನ ತಂಡದ ನಾಟಕ ಪ್ರಯೋಗಕ್ಕೆ ಪೂರ್ವಬಾವಿಯಾಗಿ ಈ ತರಬೇತಿ ಶಿಬಿರ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಯುವಕ ಯುವತಿಯರಿಗಾಗಿ ಈ ಶಿಬಿರ ನಡೆಯಲಿದ್ದು, 20 ಮಂದಿಗೆ ಮಾತ್ರ ಅವಕಾಶ ಮೊದಲು ಬಂದವರಿಗೆ ಆದ್ಯತೆ. ಹೆಸರು ನೋಂದಾಯಿಸಲು ಸಂಪರ್ಕಿಸಿರಿ 98451 11038.
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವು ಎಂ.ಜಿ.ಎಂ. ಕಾಲೇಜಿನ ಮುಂಭಾಗದ ಆಟೋ ನಿಲ್ದಾಣದಲ್ಲಿ ದಿನಾಂಕ 01 ನವೆಂಬರ್ 2024ರಂದು ನಡೆಯಿತು. ಈ ಸಂದರ್ಭದಲ್ಲಿ ಎಲ್ಲಾ ರಿಕ್ಷಾಗಳಿಗೆ ಕನ್ನಡ ಧ್ವಜ ನೀಡಿ ಸಿಂಗರಿಸಲಾಯಿತು. ಕನ್ನಡ ಧ್ವಜ ಹಸ್ತಾಂತರಿಸಿ ಮಾತನಾಡಿದ ಕ.ಸಾ.ಪ. ಜಿಲ್ಲಾ ಕಾರ್ಯಕಾರಿ ಸದಸ್ಯ ಭುವನ ಪ್ರಸಾದ್ ಹೆಗ್ಡೆ, “ರಾಜ್ಯೋತ್ಸವ ನಾಡಿನ ಶ್ರೇಷ್ಠ ಹಬ್ಬವಾಗಿದೆ. ನಮ್ಮ ನಾಡು ನುಡಿ ಸಂಸ್ಕೃತಿಗಾಗಿ ನಾವೆಲ್ಲರೂ ಕಟಿಬದ್ಧರಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಕ.ಸಾ.ಪ.ದ ಕಾರ್ಯ ಶ್ಯಾಘನೀಯ” ಎಂದರು. ಬ್ರಹ್ಮಾವರ ತಾಲೂಕು ಕ.ಸಾ.ಪ. ಪೂರ್ವ ಅಧ್ಯಕ್ಷ ನಾರಾಯಣ ಮಡಿ “ನಮ್ಮ ರಾಜ್ಯ ನಮ್ಮ ದೇಶದಲ್ಲಿ ಅಪೂರ್ವದ ರಾಜ್ಯವಾಗಿದ್ದು ಭಾಷಾವಾರು ಪ್ರಾಂತ್ಯದ ಒಗ್ಗೂಡಿಸಿದ ಬಳಿಕ ನಮ್ಮ ರಾಜ್ಯ 68ನೇ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕನ್ನಡ ಭಾಷೆಯು ನಮ್ಮೆಲ್ಲರ ಮನೆ ಮನದಲ್ಲಿರಬೇಕು” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ.…