Author: roovari

ಬೆಳಗಾವಿ: ಕವಿ ಡಿ.ಎಸ್.ಕರ್ಕಿ ಅವರ 116ನೇ ಜನ್ಮದಿನೋತ್ಸವದ ಪ್ರಯುಕ್ತ ಬೆಳಗಾವಿಯ ಡಿ.ಎಸ್.ಕರ್ಕಿ ಪ್ರತಿಷ್ಠಾನ ಟ್ರಸ್ಟ್ 2022-23ನೇ ಸಾಲಿನ ‘ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನಿಸಿದೆ. 2022ರಲ್ಲಿ ಪ್ರಕಟಗೊಂಡ ಕವನ ಸಂಕಲನದ ಎರಡು ಪ್ರತಿಗಳನ್ನು 25-11-2023ರೊಳಗೆ ಕಳುಹಿಸಬೇಕು.  ಪ್ರಶಸ್ತಿ ಪ್ರದಾನ  ಸಮಾರಂಭ ಬೆಳಗಾವಿ ಯಲ್ಲಿ ಇದೇ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ . ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ರಮೇಶ್ ಮುರಿಗೆಪ್ಪ ಕರ್ಕಿ.ಅವರು ತಿಳಿಸಿದ್ದಾರೆ ಕವನ ಸಂಕಲನ ಕಳುಹಿಸಬೇಕಾದ ವಿಳಾಸ: ಸತೀಶ ಮು.ಕರ್ಕಿ, ಪ್ಲಾಟ್ ನಂ.354, ಗಂಗೋತ್ರಿ, ರಾಮತೀರ್ಥನಗರ, ಬೆಳಗಾವಿ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9449650174, 7975376501.

Read More

ಕಡಬ : ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪುತ್ತೂರು ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಕಡಬ ಸಂಯುಕ್ತ ಆಶ್ರಯದಲ್ಲಿ ಕಡಬದ ಸೈಂಟ್ ಜೋಕಿಮ್‌ ಪ್ರೌಢ ಶಾಲೆಯ ಆತಿಥ್ಯದಲ್ಲಿ ದಿನಾಂಕ 30-10-2023ರಂದು ಕಡಬ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ‘ಪ್ರತಿಭಾ ಕಾರಂಜಿ 2023-24’ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್‌.ಆರ್. ಮಾತನಾಡುತ್ತಾ “ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತವಾದ ಪ್ರತಿಭೆ ಹುದುಗಿರುತ್ತದೆ. ಅಂತಹ ಪ್ರತಿಭೆಗಳು ಬೆಳಕಿಗೆ ಬರಲು ಅವಕಾಶಗಳು ಮುಖ್ಯ. ಅದನ್ನು ಪ್ರತಿಭಾ ಕಾರಂಜಿಯಂತಹ ವೇದಿಕೆಗಳು ಒದಗಿಸಿಕೊಡುತ್ತದೆ. ಪಠ್ಯ ಚಟುವಟಿಕೆಗಳಷ್ಟೇ ಪ್ರಾಮುಖ್ಯತೆ ಪಠ್ಯೇತರ ಚಟುವಟಿಕೆಗಳಿಗೂ ಇದೆ. ಅದಕ್ಕಾಗಿಯೇ ಸರಕಾರವು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆಯನ್ನು ನೀಡುತ್ತಿದೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಡಬದ ಸೈಂಟ್ ಜೋಕಿಮ್ ವಿದ್ಯಾ ಸಂಸ್ಥೆಗಳ ಸಂಚಾಲಕ ಫಾ. ಪಾವ್ಲ್ ಪ್ರಕಾಶ್ ಡಿ’ಸೋಜ, “ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಶಿಕ್ಷಕರು ಮತ್ತು ಹೆತ್ತವರು ಪ್ರಮುಖ ಪಾತ್ರ…

Read More

ಸುರತ್ಕಲ್ : ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ  ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ದಿನಾಂಕ 01-11-2023ರಂದು  ತಾಯಿ ಭುವನೇಶ್ವರಿಯ ಛಾಯಾ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು . ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಗೋವಿಂದ ದಾಸ ಕಾಲೇಜಿ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿಯವರು “ಮೈಸೂರು ರಾಜ್ಯವಾಗಿದ್ದ ನಮ್ಮ ರಾಜ್ಯವು ಕರ್ನಾಟಕ ರಾಜ್ಯವಾಗಿ ರೂಪುಗೊಂಡು ಐದು ದಶಕಗಳಾಗುತ್ತಿದೆ. ಕನ್ನಡ ನಾಡಿನ ಭಾಷೆ, ಕಲೆ, ಸಂಸ್ಕೃತಿಯು ಶ್ರೀಮಂತಿಕೆ ಮತ್ತು ವೈವಿಧ್ಯತೆಯಿಂದ ಕೂಡಿದ್ದು ವಿದ್ಯಾರ್ಥಿಗಳು ಇವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಬೇಕು” ಎಂದರು. ವಿದ್ಯಾರ್ಥಿಗಳು ಕನ್ನಡದ ಹೆಸರಾಂತ ಕವಿಗಳಾದ ಹುಯಿಲಗೋಳ ನಾರಾಯಣ ರಾವ್ ಇವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ರಚಿಸಿದ ‘ಎಲ್ಲಾದರು ಇರು ಎಂತಾದರು ಇರು’, ದ.ರಾ ಬೇಂದ್ರೆ ಇವರ ‘ಒಂದೇ ಒಂದೇ ಕರ್ನಾಟಕ ಒಂದೇ’, ಸಿದ್ದಯ್ಯ ಪುರಾಣಿಕ ಇವರ ‘ಹೊತ್ತಿತೊ ಹೊತ್ತಿತ್ತು’ ಹಾಗೂ ಚೆನ್ನವೀರ ಕಣವಿಯವರ ಹೆಸರಾಯಿತು ‘ಕರ್ನಾಟಕ ಉಸಿರಾಗಲಿ ಕನ್ನಡ’ ಸಾಹಿತ್ಯಕ್ಕೆ ಧ್ವನಿಯಾಗುವ ಮೂಲಕ ನಾಡಿಗೆ ಗಾನ ನಮನ…

Read More

ಕೊಲ್ಯ : ಶ್ರೀ ಕೊಲ್ಯ ಮಠ, ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನ (ತೆಂಕಣ ಕೊಲ್ಲೂರು) ಜಗದ್ಗುರು ಶ್ರೀ ಶ್ರೀ ಶ್ರೀ ರಮಾನಂದ ಸ್ವಾಮೀಜಿ ಮಹಾಸಂಸ್ಥಾನಮ್ ಚಾರಿಟೇಬಲ್ ಟ್ರಸ್ಟ್ (ರಿ.) ಇಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ದಿನಾಂಕ 18-10-2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ‘ಶರಸೇತು ಬಂಧ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಮುರಳೀಕೃಷ್ಣ ಶಾಸ್ತ್ರಿ ತೆಂಕಬೈಲು, ಚೆಂಡೆ ಮದ್ದಳೆಗಳಲ್ಲಿ ಶ್ರೀ ದಯಾನಂದ ಕೋಡಿಕಲ್ ಮತ್ತು ಶ್ರೀ ರಾಕೇಶ್ ಅರ್ಕುಳ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಶುಭಾ ಅಡಿಗ (ಹನೂಮಂತ), ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ), ಶ್ರೀಮತಿ ಹರಿಣಾಕ್ಷಿ ಜೆ. ಶೆಟ್ಟಿ (ವೃಧ್ಧ ಬ್ರಾಹ್ಮಣ ಹಾಗೂ ಶ್ರೀ ರಾಮ) ಸಹಕರಿಸಿದರು. ನಿರ್ದೇಶಕ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿದರು. ಹರಿದಾಸ ಶ್ರೀ ದೇವಕಿತನಯ (ಮಹಾಬಲ ಶೆಟ್ಟಿ) ಕೂಡ್ಲು ವಂದಿಸಿದರು.

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ಪ್ರಸಿದ್ಧ ಕಾದಂಬರಿಕಾರರಾದ ಯಂಡಮೂರಿ ವೀರೇಂದ್ರನಾಥ್ ಅವರನ್ನು ಗೌರವಿಸಲಾಯಿತು. ಉಡುಪಿ ಬನ್ನಂಜೆಯ ನಾರಾಯಣ ಗುರು ಸಭಾಂಗಣದಲ್ಲಿ ದಿನಾಂಕ 30-10-2023 ರಂದು ನಡೆದ ಕಾರ್ಯಕ್ರಮದಲ್ಲಿ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಗೌರವಿಸಿದರು. ಸಮಾರಂಭದಲ್ಲಿ ಡಾ. ಎ. ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಪಿ. ವಿ ಭಂಡಾರಿ, ಹರ್ಷ ಇದರ ಆಡಳಿತ ನಿರ್ದೇಶಕರಾದ ಸೂರ್ಯಪ್ರಕಾಶ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಮನೋರೋಗ ತಜ್ಞ ಡಾ. ವಿರೂಪಾಕ್ಷ ದೇವರಮನೆ, ಬಿಲ್ಲವರ ಸೇವಾ ಸಂಘ ಬನ್ನಂಜೆ ಇದರ ಅಧ್ಯಕ್ಷ ಮಾಧವ ಬನ್ನಂಜೆ, ತಾಲೂಕು ಕ ಸಾ ಪ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಮೋಹನ್ ಉಡುಪ, ಕಸಾಪ ಬೈದೂರು ತಾಲೂಕು ಅಧ್ಯಕ್ಷ ಡಾ. ರಘು ನಾಯ್ಕ, ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾದ೯ನ್, ಹಾಸ್ಯ ಭಾಷಣಕಾರರಾದ ಸಂಧ್ಯಾ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಕವನ ರಚನಾ ಕಮ್ಮಟ ಕಾರ್ಯಕ್ರಮವು ದಿನಾಂಕ 01-11-2023 ರಂದು ಮಂಗಳೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ತಾರಾನಾಥ “ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡವನ್ನು ವ್ಯಾಪಕವಾಗಿ ಬಳಸಿದ ಹಾಗೆ ಕನ್ನಡವನ್ನು ಉಳಿಸಲು ಸಾಧ್ಯ“ ಎಂದರು. ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ ಬಾಲಕೃಷ್ಣ  ಅವರು ರಾಜ್ಯೋತ್ಸವ ಆಚರಣೆಯ ಹಿಂದೆ ಸಂಘರ್ಷದ ಇತಿಹಾಸ ಇದೆ ಎಂದು ರಾಜ್ಯೋತ್ಸವ ಸಂದೇಶವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ ಶ್ರೀನಾಥ ಅವರು ವಹಿಸಿಕೊಂಡಿದ್ದರು. ಲೇಖಕಿ ಅಕ್ಷತಾ ರಾಜ್ ಪೆರ್ಲ ವಿದ್ಯಾರ್ಥಿಗಳಿಗೆ ಕವನ ರಚನಾ ಕಮ್ಮಟವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ ಕೇಂದ್ರ ಕಾರ್ಯಕಾರಿ ಸಮಿತಿ…

Read More

ಮೂಡುಬಿದಿರೆ : ನಾರಾವಿಯ ಧರ್ಮಶ್ರೀ ಸಭಾಭವನದಲ್ಲಿ ನಿರಂಜನ್ ಜೈನ್ ಕುದ್ಯಾಡಿ ಅವರು ರಚಿಸಿದ ‘ಶಿಖರ್ಜಿಯಲ್ಲಿ ನಿರಂಜನನ ದರ್ಶನ’ ಮತ್ತು ‘ಜಿನಭಕ್ತಿ ಲಹರಿ’ ಕೃತಿ ದಿನಾಂಕ 23-10-2023ರಂದು ಲೋಕಾರ್ಪಣೆಗೊಳಿಸಿದ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡುತ್ತಾ “ಒಂದು ಸಮುದಾಯದ ಒಳಗಿನ ವಿಚಾರಗಳ ಕುರಿತಾಗಿ ಪ್ರಕಟವಾಗುವ ಯಾವುದೇ ಪುಸ್ತಕಗಳು ಎಲ್ಲಾ ಸಮುದಾಯದವರಲ್ಲಿ ಕೊಡುಕೊಳ್ಳುವಿಕೆಗೆ ಒಳಗಾದಾಗ ಆ ಪುಸ್ತಕದ ಸಾರ್ಥಕತೆಯಾಗುತ್ತದೆ. ಒಂದು ಧರ್ಮ ಅಥವಾ ಸಮುದಾಯವನ್ನು ಮತ್ತೊಂದು ಧರ್ಮ ಪರಸ್ಪರ ಅರ್ಥ ಮಾಡಿಕೊಳ್ಳಬೇಕಾದರೆ ಪುಸ್ತಕಗಳ ಕೊಡುಕೊಳ್ಳುವಿಕೆಯ ಅಗತ್ಯವಿದೆ” ಎಂದು ಹೇಳಿದರು. ಕನ್ನಡ ಭಾಷಾ ಪಂಡಿತ ಬಿ.ಪಿ. ಸಂಪತ್ ಕುಮಾರ್ ಮೂಡುಬಿದಿರೆ ಕೃತಿಯನ್ನು ಪರಿಚಯಿಸಿದರು. ಮುಖ್ಯ ಅತಿಥಿಗಳಾದ ಭಾರತೀಯ ಜೈನ್ ಮಿಲನ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮತ್ತು ಅನಿತಾ ಸುರೇಂದ್ರ ಕುಮಾ‌ರ್ ಶುಭಾಶಂಸನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪುಸ್ತಕದ ಪ್ರಕಾಶಕರೂ ಆಗಿರುವ ಬೆಂಗಳೂರಿನ ರತ್ನತ್ರಯ ಕ್ರಿಯೇಷನ್ಸ್ ಅದರ ಮುಖ್ಯಸ್ಥೆ ಡಾ. ನೀರಜಾ ನಾಗೇಂದ್ರ ಕುಮಾರ್ ಮಾತನಾಡುತ್ತಾ “ಈ ಕೃತಿಯಲ್ಲಿ…

Read More

ಧಾರವಾಡ : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ಕವನ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟಗೊಂಡಿದೆ. ಪ್ರಥಮ ಬಹುಮಾನ ಶ್ರೀಮತಿ ಸ್ನೇಹಲತಾ ದಿವಾಕರ್ ಕುಂಬ್ಳೆ (ಕಾಸರಗೋಡು) ದ್ವಿತೀಯ ಬಹುಮಾನ ಶ್ರೀ ಸದಾಶಿವ ಸೊರಟೂರು (ಹೊನ್ನಾಳಿ) ತೃತೀಯ ಬಹುಮಾನ ಶ್ರೀಮತಿ ರಂಜಿತಾ ಪಿ. ಆರ್ (ಮೈಸೂರು) ಮೆಚ್ಚುಗೆಯ ಬಹುಮಾನ ಶ್ರೀ ಶಿವಕುಮಾರ ಚೆನ್ನಪ್ಪನವರ (ರಾಣಿಬೆನ್ನೂರು) ಮೆಚ್ಚುಗೆಯ ಬಹುಮಾನ ಶ್ರೀ ಚೌಡಪ್ಪ (ಹಂಪಿ) ಈ ಬಾರಿ ಒಟ್ಟು 127 ಕವನಗಳು ಬಂದಿದ್ದು ಡಾ. ಸುಭಾಷ್ ಪಟ್ಟಾಜೆ ಮತ್ತು ಕುಮಾರಿ ಭವ್ಯ ಭಟ್ ಅವರು ತೀರ್ಪುಗಾರರಾಗಿ ಸಹಕರಿಸಿದ್ದಾರೆ. ಸ್ಪರ್ಧೆಯ ಬಗ್ಗೆ ಮಾತನಾಡಿದ ತೀರ್ಪುಗಾರ ಡಾ. ಸುಭಾಷ್ ಪಟ್ಟಾಜೆ “ಜನ ಸಾಮಾನ್ಯರ ಬದುಕಿನ ನೋವು ನಲಿವುಗಳಿಗೆ ಸ್ಪಂದಿಸುವ, ಸಂಸ್ಕೃತಿಯ ಸೂಕ್ಷ್ಮಗಳನ್ನು ಪ್ರತಿಪಾದಿಸಿದ ಕವಿತೆಗಳಿಗೆ ಆದ್ಯತೆಯನ್ನು ನೀಡಲಾಗಿದೆ. ವರದಿಯಾಗಿ, ಘೋಷಣೆಯಾಗಿ ಮತ್ತು ಕೇವಲ ಸ್ವಗತವಾಗಿ ಮೂಡಿಬಂದರೆ ಕವಿತೆ ಎನಿಸಿಕೊಳ್ಳುವುದಿಲ್ಲ. ಚಿಂತನೆಗೆ ಹಚ್ಚುವ, ವೈಚಾರಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿಯನ್ನು ಹಿಡಿಯುವ, ವಾಸ್ತವ ಸತ್ಯವನ್ನು…

Read More

ಮೂಡುಬಿದಿರೆ : ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ ‘ಚಾರುವಸಂತ’ ನಾಟಕವನ್ನು ದಿನಾಂಕ 29-10-2023ರಂದು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ ಕೃತಿಕಾರ ಡಾ. ಹಂ.ಪ. ನಾಗರಾಜಯ್ಯ (ಹಂಪನಾ) ಅವರು ಮಾತನಾಡುತ್ತಾ “ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದ ಕುಟುಂಬದ ಬಿಂಬ ಚಾರುವಸಂತ. ಇದು ನನ್ನ ಕನಸು ನನಸಾದ ದಿನ. ನಾನು ಯುವಕ ಅಲ್ಲ. ಆದರೆ ಯುವಕನಾಗಲು ಬಯಸುತ್ತೇನೆ. ಭಾರತೀಯ ಕುಟುಂಬಗಳಲ್ಲಿ ಮಾತ್ರವಲ್ಲ, ಎಲ್ಲಾ ಕುಟುಂಬಗಳಲ್ಲೂ ಏಳುಗಾಲ ಹಾಗೂ ಬೀಳುಗಾಲ ಇರುತ್ತದೆ. ಏಳು ಬೀಳುಗಳ ಜೀವನದ ಕಥನವೇ ಚಾರುವಸಂತ. ಎಲ್ಲಾ ಧರ್ಮ, ಮತವನ್ನು ಗೌರವಿಸಬೇಕು. ದ್ವೇಷ, ಅಸೂಯೆ ಬಿಡಬೇಕು. ಮೋಹನ ಆಳ್ವ ಅವರ ಅಂತರಂಗಕ್ಕೆ ಬಿದ್ದ ಯಾವುದೇ ಕಲೆಯಾದರೂ ಕೃತಿಯಾಗುತ್ತದೆ” ಎಂದು ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, “ಕೃತಿಗಳು ಹೆಚ್ಚು ಮಾತನಾಡಬೇಕು. ಪರಿಸರ ರಕ್ಷಣೆಯ ಮಹತ್ವ ಮತ್ತು ಸುಖ-ದುಖವನ್ನು ಸಮಾನವಾಗಿ ಸ್ವೀಕರಿಸಿ…

Read More

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ 2023ನೇ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಬೆಂಗಳೂರಿನ ಡಾ. ಲಕ್ಷ್ಮಣ ವಿ.ಎ. ಅವರ ‘ಕಾಯಿನ್ ಬೂತ್’ ಎಂಬ ಕವನ ಸಂಕಲನದ ಹಸ್ತಪ್ರತಿಯು ಗೆದ್ದುಕೊಂಡಿದೆ ಎಂದು ಸಂಘದ ಸ್ಥಾಪಕಾಧ್ಯಕ್ಷರಾದ ಡಾ.ನಾ.ಮೊಗಸಾಲೆಯವರು ಘೋಷಿಸಿದ್ದಾರೆ. ಈ ಸಾಲಿನ ಸ್ಪರ್ಧೆಗೆ ಐವತ್ತ ಒಂಬತ್ತು ಹಸ್ತಪ್ರತಿಗಳು ಬಂದಿದ್ದು ಪ್ರಸಿದ್ಧ ವಿಮರ್ಶಕರಾದ ಡಾ. ರಾಜಶೇಖರ ಹಳೆಮನೆ, ಬೆಳಗೋಡು ರಮೇಶ ಭಟ್ (ವಿಭಾವರಿ ಭಟ್), ಮತ್ತು ಡಾ. ಚಿದಾನಂದ ಸಾಲಿ ಅವರುಗಳು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ. 1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಹತ್ತು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು ಪ್ರತೀ ವರುಷದಂತೆ ಈ ವರುಷದ ಪ್ರಶಸ್ತಿ ಪ್ರದಾನ ಸಮಾರಂಭವು 2024ರ ಫೆಬ್ರವರಿ ತಿಂಗಳಲ್ಲಿ ಕಾಂತಾವರದ ‘ಕನ್ನಡ ಭವನ’ದಲ್ಲಿ ನಡೆಯಲಿದ್ದು, ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನವನ್ನು…

Read More