Author: roovari

ಸಾಣೇಹಳ್ಳಿ : ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ದಿನಾಂಕ 28-06-2204ರಂದು 2024-25ನೆಯ ಸಾಲಿನ ‘ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ’ ಸಮಾರಂಭವು ನಡೆಯಿತು. ಈ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ “ಪ್ರೌಢಶಾಲೆ ಎಷ್ಟು ಮುಖ್ಯವೋ ಪ್ರಾಥಮಿಕ ಶಾಲೆಯೂ ಅಷ್ಟೇ ಮುಖ್ಯ. ಅಧ್ಯಾಪಕರು ಆಸಕ್ತಿಯನ್ನು ವಹಿಸಿ ಬೋಧನೆ ಮಾಡಬೇಕು, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕೇಳಬೇಕು. ಆಗ ಮಾತ್ರ ಕಲಿಕೆಯಲ್ಲಿ ಮುಂದುವರಿಯಲು ಸಾಧ್ಯ. ಕೇವಲ ಅಂಕಗಳಿಂದಲೇ ವಿದ್ಯಾರ್ಥಿಯ ಗುಣಮಟ್ಟವನ್ನು ಅಳೆಯುವುದು ಸರಿಯಾದ ಕ್ರಮವಲ್ಲ. ವಿದ್ಯಾರ್ಥಿಗಳು ಓದಿನ ಜೊತೆ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಓದುವುದರೊಂದಿಗೆ ನಮ್ಮ ನಡೆ ನುಡಿಗಳೂ ಮುಖ್ಯ. ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಿ ಮತ್ತು ಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ನೀಡುವ ಕೆಲಸವೂ ಆಗಬೇಕು” ಎಂದರು. ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಕಾರ್ಯ ನೆರವೇರಿಸಿದ ಹಿರಿಯೂರು…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯನ್ನು ದಿನಾಂಕ 01-07-2024ರಂದು ಬೆಳಗ್ಗೆ 11-00 ಗಂಟೆಗೆ ಲೇಡಿಹಿಲ್-ಉರ್ವ ಮಾರ್ಕೆಟ್ ರಸ್ತೆಯ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಸಭೆ ಸಭಾಪತಿಗಳಾದ ಯು.ಟಿ. ಖಾದರ್ ಇವರು ಈ ಸಮಾರಂಭದ ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ತಾರಾನಾಥ ಕಾಮತ್ ಇವರಿಗೆ ಸನ್ಮಾನಿಸಲಾಗುವುದು. ನಿವೃತ್ತ ಉಪನ್ಯಾಸಕರು ಹಾಗೂ ಅಂಕಣಕಾರರಾದ ಶ್ರೀಮತಿ ಭುವನೇಶ್ವರಿ ಹೆಗಡೆ ಇವರು ‘ಮಾಧ್ಯಮ ಹಾಗೂ ಸಾಮಾಜಿಕ ಜವಾಬ್ದಾರಿ’ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಜುಲೈ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 01-07-2024, 08-07-2024, 15-07-2024, 22-07-2024 ಮತ್ತು 29-07-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 01-07-2024ರಂದು ನಡೆಯಲಿರುವು ಸರಣಿ 52ರಲ್ಲಿ ಮಂಗಳೂರಿನ ಶ್ರೀಮತಿ ಅನ್ನಪೂರ್ಣ ರಿತೇಶ್, ದಿನಾಂಕ 08-07-2024ರಂದು ನಡೆಯಲಿರುವು ಸರಣಿ 53ರಲ್ಲಿ ಬೆಂಗಳೂರಿನ ಅರ್ಚನ ಹೆಚ್.ಆರ್., ದಿನಾಂಕ 15-07-2024ರಂದು ನಡೆಯಲಿರುವು ಸರಣಿ 54ರಲ್ಲಿ ಉಡುಪಿಯ ಕುಮಾರಿ ಗೌತಮಿ, ದಿನಾಂಕ 22-07-2024ರಂದು ನಡೆಯಲಿರುವು ಸರಣಿ 55ರಲ್ಲಿ ಉಡುಪಿಯ ವಿದುಷಿ ಕುಮಾರಿ ವಸುಂಧರಾ ಮತ್ತು ದಿನಾಂಕ 29-07-2024ರಂದು ನಡೆಯಲಿರುವು ಸರಣಿ 56ರಲ್ಲಿ ಕುಮಾರಿ ಖುಷಿ ಕನ್ನರ್ಪಾಡಿ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.

Read More

ಸುಬ್ರಹ್ಮಣ್ಯ : ಕುಮಾರಸ್ವಾಮಿ ವಿದ್ಯಾಲಯದಲ್ಲಿ ನೂತನವಾಗಿ ಪ್ರಾರಂಭಗೊಂಡ ರಂಗಪ್ರೇರಣ ನಾಟಕ ತಂಡದ ಹೊಸ ನಾಟಕ ‘ನಾಣಿ ನಾರಾಯಣ’ ಇದರ ಪ್ರಥಮ ಪ್ರದರ್ಶನ ದಿನಾಂಕ 24-06-2024ರಂದು ನಡೆಯಿತು. ಈ ನಾಟಕ ಪ್ರದರ್ಶನದ ಉದ್ಘಾಟನೆಯನ್ನು ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಸುಬ್ರಹ್ಮಣ್ಯ ಇವರು ನೆರವೇರಿಸಿದರು. ಈ ನಾಟಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದರು. ಈ ನಾಟಕದ ರಂಗರೂಪ ಶ್ರೀ ವಿಧೇಯನ್, ಸಾಹಿತ್ಯ ಸುರೇಶ್ ಬಾಳಿಲ, ಸಂಗೀತ ಶ್ರೀ ದಿವಾಕರ್ ಕಟೀಲು ಹಾಗೂ ಗೌತಮ್ ಬಿರುವ, ನಿರ್ದೇಶನ ಶ್ರೀ ವಿದ್ದು ಉಚ್ಚಿಲ. ನಾಟಕ ತಂಡ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಶ್ರೀ ಗಣೇಶ್ ಪ್ರಸಾದ್, ಸಂಚಾಲಕ ಚಂದ್ರಶೇಖರ್ ನಾಯರ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ಹಾಗೂ ರಂಗಪ್ರೇರಣ ನಾಟಕ ತಂಡದ ಸಂಯೋಜಕರಾದ ಶ್ರೀ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು. ನಾಟಕದ ವೀಕ್ಷಣೆಯನ್ನು ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಮಾಡಿದರು.

Read More

ಉಜಿರೆ : ವಿದುಷಿ ಚೈತ್ರಾ ಭಟ್ ಇವರ ಭರತನಾಟ್ಯ ರಂಗಪ್ರವೇಶ ಸಮಾರಂಭವು ದಿನಾಂಕ 22-06-2024ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಇವರು ಮಾತನಾಡಿ “ಭಾರತದ ಅಪೂರ್ವ ಕಲೆಗಳು ಮತ್ತು ಮಾನವಸಂಪನ್ಮೂಲ ಇವು ದೇಶದ ಅಮೂಲ್ಯ ಸಂಪತ್ತು ಹಾಗೂ ವರದಾನವಾಗಿದೆ. ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಕಲೆಗಳನ್ನೂ ಹವ್ಯಾಸವಾಗಿ ಕರಗತ ಮಾಡಿಕೊಳ್ಳಬೇಕು. ಎಂಟು ವಿಧದ ಶಾಸ್ತ್ರೀಯ ನೃತ್ಯಗಳಲ್ಲಿ ಭರತನಾಟ್ಯ ಸರ್ವಶ್ರೇಷ್ಠ ಕಲೆಯಾಗಿದೆ. ಹಿಂದೆ ಕೇವಲ ಬೆರಳಣಿಕೆಯಷ್ಟು ನೃತ್ಯ ಶಿಕ್ಷಕರಿದ್ದರೆ ಇಂದು ಕರ್ನಾಟಕದಲ್ಲಿ ಸುಮಾರು ಮೂರು ಸಾವಿರ ನೃತ್ಯ ಶಿಕ್ಷಕರಿದ್ದಾರೆ. ನೃತ್ಯ ಅಭ್ಯಾಸ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ” ಎಂದರು. ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, “ಭಾವ ಪ್ರಧಾನವಾದ ನಾಟ್ಯಕ್ಕೆ ಭಾಷೆಯ ಹಂಗಿಲ್ಲ” ಎಂದರು. ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ “ಯುವ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು” ಎಂದು ಹೇಳಿದರು. ರಾಜಶ್ರೀ ಉಳ್ಳಾಲ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ‘ಚಾವುಂಡರಾಯ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭವು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ದಿನಾಂಕ 28-06-2024ರಂದು ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಮಾತನಾಡಿ “ಕನ್ನಡ ಸಾಹಿತ್ಯಕ್ಕೆ ಜೈನರು ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಅದರ ಅಡಿಪಾಯದ ಮೇಲೆ ನಮ್ಮ ಭವ್ಯ ಸಾಹಿತ್ಯ ಸೌಧ ನಿರ್ಮಾಣಗೊಂಡಿದೆ. ಇವತ್ತು ಜೈನರ ಒಟ್ಟು ಜನಸಂಖ್ಯೆಯ ಪ್ರಮಾಣ ಶೇಕಡಾ ಒಂದಕ್ಕಿಂತ ಕಡಿಮೆ ಇರಬಹುದು. ಆದರೆ ಪ್ರಾಚೀನ ಕನ್ನಡ ಸಾಹಿತ್ಯದ ಆರಂಭದಿಂದ ತೊಡಗಿ ನಡುಗನ್ನಡವನ್ನೂ ಸೇರಿಸಿಕೊಂಡರೆ ಅವರ ಕೊಡುಗೆ ಸಂಖ್ಯೆಯಲ್ಲಿ ಮಾತ್ರ ಅಲ್ಲ, ಗುಣಮಟ್ಟದಲ್ಲೂ ಕನ್ನಡ ಸಾಹಿತ್ಯದ ಅರ್ಧಭಾಗವನ್ನು ಗಾಢವಾಗಿ ಆವರಿಸುತ್ತದೆ. ಒಂದು ಅಂದಾಜಿನ ಪ್ರಕಾರ ಸುಮಾರು 450 ಜೈನ ಕವಿಗಳು, 520ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಪುರಾಣ, ಮಹಾಕಾವ್ಯ, ಜನಪದ ಕಥೆ, ಕಾವ್ಯಶಾಸ್ತ್ರ, ಛಂದಸ್ಸು, ವ್ಯಾಕರಣ, ಸೂಪಶಾಸ್ತ್ರ, ಗಣಿತಶಾಸ್ತ್ರ, ಚಂಪೂ, ಗದ್ಯ, ಸಾಂಗತ್ಯ, ಮುಕ್ತಕ -ಹೀಗೆ ಹಲವು ಪ್ರಕಾರಗಳಲ್ಲಿ ಹಲವು…

Read More

ಕಿನ್ನಿಗೋಳಿ : ಶಿವಪ್ರಣಂ (ರಿ.) ನೃತ್ಯ ಸಂಸ್ಥೆ ಇದರ ದಶ ಸಂಭ್ರಮದ ಪ್ರಯುಕ್ತ ಕಿನ್ನಿಗೋಳಿಯ ಯುಗಪುರುಷ ಮತ್ತು ನೇಕಾರ ಸೌಧ ಇವುಗಳ ಸಹಯೋಗದೊಂದಿಗೆ ‘ಶಿವಾಂಜಲಿ 2024’ ನೃತ್ಯ ಪ್ರದರ್ಶನದ ಮೂರನೇ ದಿನದ ಕಾರ್ಯಕ್ರಮವು ದಿನಾಂಕ 15-06-2024ರಂದು ಕಿನ್ನಿಗೋಳಿಯ ಯುಗಪುರುಷದಲ್ಲಿ ನಡೆಯಿತು. ಗುರು ಪರಂಪರೆಗೆ ಸಾಕ್ಷಿಯಾದ ಈ ಕಾರ್ಯಕ್ರಮವನ್ನು ಕೊಲ್ಯದ ನಾಟ್ಯ ನಿಕೇತನದ ಗುರು, ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಮೋಹನ್ ಕುಮಾರ್ ಉಳ್ಳಾಲ ಮತ್ತು ಉರ್ವದ ನಾಟ್ಯಾಲಯದ ಗುರು ಕರ್ನಾಟಕ ಕಲಾಶ್ರೀ ಶ್ರೀಮತಿ ಕಮಲಾ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಭುವನಾಭಿರಾಮ ಉಡುಪ, ಮಾಧವ ಶೆಟ್ಟಿಗಾರ್, ಗುರು ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರತಿಮ ಶ್ರೀಧರ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕಿ ಅನ್ನಪೂರ್ಣ ರಿತೇಶ್ ಇವರು ಗುರುಗಳಿಗೆ ಗೌರವಾರ್ಪನೆ ಸಲ್ಲಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಪುಣ್ಯಾಃ ಡಾನ್ಸ್ ಕಂಪೆನಿಯ ಶ್ರೀ ಪಾರ್ಶ್ವನಾಥ್ ಉಪಾದ್ಯೆ, ಆದಿತ್ಯ ಜಿ.ಎಸ್., ಜಾನ್ಕಿ ಡಿ.ವಿ. ಮತ್ತು ಶ್ರೇಯ ಜಿ.…

Read More

ಬಂಟ್ವಾಳ : ಬಂಟ್ವಾಳ ತಾಲೂಕಿನ ಬೋಳಂತೂರು ಚಿಣ್ಣರ ಲೋಕ ಸೇವಾ ಬಂಧು ದತ್ತು ಸ್ವೀಕರಿಸಿ ಉನ್ನತೀಕರಿಸಿದ ಸರಕಾರಿ ಶಾಲೆಯಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಷನ್ ಪ್ರಾಯೋಜಿತ ಯಕ್ಷ ಧ್ರುವ ಯಕ್ಷ ಶಿಕ್ಷಣವನ್ನು ದಿನಾಂಕ 25-06-2024ರಂದು ಶಾಲಾ ಮೇಲುಸ್ತುವಾರಿ ಅಧ್ಯಕ್ಷರಾದ ಕೃಷ್ಣಪ್ಪ ಸಪಲ್ಯರ ಅಧ್ಯಕ್ಷತೆಯಲ್ಲಿ ಸರಳ ಸಮಾರಂಭದ ಮೂಲಕ ಉದ್ಘಾಟನೆ ಮಾಡಲಾಯಿತು. ಪ್ರಾಸ್ತಾವಿಕವಾಗಿ ಮಾತಾಡಿದ ಖ್ಯಾತ ಯಕ್ಷಗಾನ ಕಲಾವಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ ಶೆಟ್ಟಿಯವರು “ಯಕ್ಷ ಧ್ರುವ ಪಟ್ಲ ಸತೀಶ ಶೆಟ್ಟಿಯವರ ದೂರದೃಷ್ಟಿಯ ಈ ಯಕ್ಷ ಶಿಕ್ಷಣ ಸ್ವಸ್ಥ ಸಮಾಜ ನಿರ್ಮಾಣ ಆಗುವಲ್ಲಿ ಮಹತ್ತರ ಪರಿಣಾಮ ಬೀರಲಿದೆ. ಅಲ್ಲದೆ ನಮ್ಮ ಸನಾತನ ಧರ್ಮದ ಬಗ್ಗೆ ಹಾಗೂ ಪುರಾಣ ಪುಣ್ಯ ಪುರುಷರ ಆದರ್ಶಗಳನ್ನು ಮಕ್ಕಳಿಗೆ ಈ ಯಕ್ಷ ಕಲೆಯ ಮೂಲಕ ತಿಳಿಸಿಕೊಟ್ಟಾಗ ಬಾಲ್ಯದಲ್ಲೇ ಸಂಸ್ಕಾರ ಪ್ರಾಪ್ತಿಸುವುದು” ಎಂದರು. ವೇದಿಕೆಯಲ್ಲಿ ಸರಪಾಡಿ ಘಟಕದ ಅಧ್ಯಕ್ಷರಾದ ಶಶಿಕಾಂತ ಜೆ. ಶೆಟ್ಟಿ, ಚಿಣ್ಣರ ಲೋಕದ ಸ್ಥಾಪಕರಾದ ಮೋಹನ್ ದಾಸ್ ಕೊಟ್ಟಾರಿ, ರಾಮಕೃಷ್ಣ ರಾವ್, ಓಂ ಪ್ರಕಾಶ್…

Read More

ಮಡಿಕೇರಿ : ಭಾರತೀಯ ವಿದ್ಯಾಭವನದಲ್ಲಿ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯರವರ ‘ಪಾರು’ ಇಂಗ್ಲೀಷ್ ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 27-06-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಇವರು ಮಾತನಾಡಿ “ಕೊಡಗಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಪುಸ್ತಕಗಳ ಮೂಲಕ ಎಲ್ಲರಿಗೂ ಪರಿಚಯವಾಗುತ್ತಿದ್ದು, ಇದು ಉತ್ತಮ ಬೆಳವಣಿಗೆ. ಪುಸ್ತಕಗಳ ಮೂಲಕ ಸಂಸ್ಕೃತಿಯ ಪರಿಚಯವಾಗುತ್ತದೆ ಮತ್ತು ಸಾಹಿತ್ಯದ ಬೆಳವಣಿಗೆಯಾಗುತ್ತದೆ. ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ಶಕ್ತಿ ಕೂಡ ಪುಸ್ತಕಗಳಿಗಿದೆ. ಆದ್ದರಿಂದ ಹೆಚ್ಚು ಹೆಚ್ಚು ಪುಸ್ತಕಗಳು ರಚನೆಯಾಗಬೇಕು. ಆಧುನಿಕತೆಯ ಭರಾಟೆಯಿಂದಾಗಿ ಹಿಂದಿನ ಪ್ರೀತಿ, ವಿಶ್ವಾಸ, ಅಭಿಮಾನ ಇಂದು ಕಾಣುತ್ತಿಲ್ಲ. ಹಿರಿಯರು ಅಂದು ಅನುಭವಿಸಿದ ಅನುಭವಗಳನ್ನು ಇಂದು ಪುಸ್ತಕದ ಮೂಲಕ ಓದಿ ತಿಳಿದುಕೊಳ್ಳುವಂತಾಗಿದೆ. ಎಂದು ಹೇಳಿದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ನಡೆಯುವ ವಿಭಿನ್ನ ವಿಚಾರಗಳ ಕುರಿತು ‘ಪಾರು’ ಪುಸ್ತಕದಲ್ಲಿ ವಿವರಿಸಲಾಗಿದ್ದು, ಇದು ಎಲ್ಲರೂ…

Read More

ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಸಾಹಿತ್ಯ ಪರ ಅಮೃತ ಪ್ರಕಾಶ ಪತ್ರಿಕೆಯ ವತಿಯಿಂದ ನಡೆದ 41ನೇ ಸರಣಿ ಕೃತಿ ಲೇಖಕ ಹಾಗೂ ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕರಾದ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿಯವರ ‘ಪ್ರಕೃತಿಯೇ ಮಹಾಮಾತೆ’ ಇದರ ಲೋಕಾರ್ಪಣೆ ಸಮಾರಂಭವು ದಿನಾಂಕ 27-06-2024ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ಕೈಡಿಟ್ ಕೋ-ಅಪರೇಟಿವ್ ಸೊಸೈಟಿ ಮಂಗಳೂರು ಇದರ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈ ವಹಿಸಿದ್ದರು. ‘ಪ್ರಕೃತಿಯೇ ಮಾಹಾಮಾತೆ’ ಕೃತಿಯನ್ನು ಎಸ್. ಡಿ. ಎಂ. ಪಿ. ಜಿ. ಮ್ಯಾನೇಜ್‌ಮೆಂಟ್ ಸೆಂಟರ್‌ನ ನಿವೃತ್ತ ಪ್ರಾಂಶುಪಾಲರು ಮತ್ತು ನಿದೇರ್ಶಕರಾದ ಡಾ. ದೇವರಾಜ್ ಕೆ. ಲೋಕಾರ್ಪಣೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ, ಸಮಾಜಸೇವಕ ಹಾಗೂ ವಿಕಾಸ ಸೇವಾ ಪ್ರತಿಷ್ಠಾನ ಸಂಘದ ಅಧ್ಯಕ್ಷರಾದ ಸದಾನಂದ ಉಪಾಧ್ಯಾಯ, ಕೃತಿಯ ಲೇಖಕರಾದ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಅಮೃತಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು.

Read More