Author: roovari

ಉಡುಪಿ: ಉಡುಪಿ ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಪಂಡಿತ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಅನುಕ್ರಮವಾಗಿ ಅರ್ಥಧಾರಿ, ಪತ್ರಕರ್ತ, ಲೇಖಕ, ವಿಮರ್ಶಕ, ಸಂಘಟಕ ಶ್ರೀಕರ ಭಟ್ ಹಾಗೂ ಅರ್ಥಧಾರಿ, ಸಂಶೋಧಕ, ಲೇಖಕ, ಪ್ರವಚನಕಾರ ಡಾ. ಪಾದೆಕಲ್ಲು ವಿಷ್ಣು ಭಟ್ ಆಯ್ಕೆಯಾಗಿದ್ದಾರೆ. ಸಂಸ್ಥೆಯ ತಾಳಮದ್ದಲೆ ಸಪ್ತಾಹ ಮೇ 21 ರಿಂದ 27ರ ವರೆಗೆ ನಡೆಯಲಿದ್ದು, ಮೇ 27 ಶನಿವಾರ ಸಂಜೆ 5.00 ಗಂಟೆಗೆ ಶಿರ್ವದ ಮಹಿಳಾ ಸೌಧದಲ್ಲಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ರೂ. 20,000/- ನಗದು ಪುರಸ್ಕಾರ ಒಳಗೊಂಡಿರುತ್ತದೆ.

Read More

ಕಾಸರಗೋಡು: ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ದಿನಾಂಕ 06-05-2023 ಕಾಸರಗೋಡಿನ ಕುಂಬಳೆಯಲ್ಲಿ ಗಡಿ ಉತ್ಸವ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮವು ಅದ್ದೂರಿಯಿಂದ ನಡೆಯಿತು. ಗೀತಾರವರ ಪ್ರಾರ್ಥನಾ ನಂತರ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸದ್ರಿ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀ ಮತಿ ರಾಣಿ ಪುಷ್ಪಲತಾ ದೇವಿಯವರು ಗಡಿನಾಡಿನಲ್ಲಿ ಆಗುತ್ತಿರುವ ಕನ್ನಡ ಭಾಷೆಗೆ ಸಿಗುವ ಮಾನ್ಯತೆ ಇಳಿಮುಖವಾಗುವಾಗ ಕೇರಳ ಗಡಿ ಪ್ರದೇಶದ ಹಲವಾರು ಕಡೆ ಕನ್ನಡ ಭಾಷೆಯ ಉನ್ನತೀಕರಣಕ್ಕಾಗಿ ಹಾಕುತ್ತಿರುವ ಈ ಹೆಜ್ಜೆಗಳು ಸಾರ್ಥಕವಾಗಲಿ ಎಂದು ಆಶಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊಫೆಸರ್ ರಾಧಾಕೃಷ್ಣ ಬೆಳ್ಳೂರು ಮಾತನಾಡಿ ಕಾಸರಗೋಡಿನಲ್ಲಿ ಮೂರು ಮಾದರಿಯ ಕನ್ನಡ ಹೋರಾಟ ನಡೆದಿದೆ. ಒಂದನೆಯದು ಬೀದಿಗಿಳಿದು ನಡೆಸುವ ಹೋರಾಟ. ಅದರ ಕಾವು ಈಗ ತಗ್ಗುತ್ತಾ ಬಂದಿದೆ. ಎರಡನೆಯದು ಸಾಹಿತ್ಯಕ ಮತ್ತು ಸಾಂಸ್ಕೃತಿಕವಾದ ಹೋರಾಟ. ಅದು ಮುಂದಿನ ತಲೆಮಾರಿಗೆ…

Read More

ಉಡುಪಿ : ಮಾಹೆ ಮಣಿಪಾಲದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ -2023ಕ್ಕೆ ಲೇಖಕ ಶಂಕರ್ ಸಿಹಿಮೊಗ್ಗೆ ಅವರ ‘ಇರುವೆ ಮತ್ತು ಗೋಡೆ’ ಅಪ್ರಕಟಿತ ಕವನ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿಯು 10,000 ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಮಲೆನಾಡು ಶಿವಮೊಗ್ಗದಲ್ಲಿ ಜನಿಸಿದ ಶ್ರೀ ಶಂಕರ್ ಸಿಹಿಮೊಗ್ಗೆಯವರು ಶ್ರೀ ಗೋವಿಂದರಾಜು ಹಾಗೂ ಶ್ರೀಮತಿ ನಾಗಮ್ಮನವರ ಸುಪುತ್ರ. ಪ್ರಸ್ತುತ ತನ್ನ ಜನ್ಮದಾತರು ಹಾಗೂ ಬಾಳ ಗೆಳತಿ ಅನುಷಾ ಹೆಗ್ಡೆಯವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಇವರು ಖಾಸಗಿ ಕಂಪೆನಿಯೊಂದರಲ್ಲಿ ಸೀನಿಯರ್ ಸ್ಟಾಫ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ, ಚಾರಣ ಮತ್ತು ನಾಟಕ ಮುಂತಾದ ಸೃಜನಶೀಲ ಕಾರ್ಯಗಳು ಇವರ ಹವ್ಯಾಸ. ವಿದ್ಯಾರ್ಥಿಯಾಗಿರುವಾಗಲೇ ರಂಗಭೂಮಿ ತರಬೇತಿಯನ್ನು ಪಡೆದುಕೊಂಡು ‘ನೀನಾಸಂ’ ಶಿಬಿರಗಳಲ್ಲಿ ಭಾಗವಹಿಸಿ, ಅಲ್ಲಿ ನಡೆಯುವ ಸಾಹಿತ್ಯ ಸಂವಾದ, ವಿಮರ್ಶೆಗಳಲ್ಲಿ ಪಾಲ್ಗೊಂಡು ತನ್ನ ಕಲಿಕೆಯ ಮೇಲೆ…

Read More

ಕಾಸರಗೋಡು : ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ನಡೆಸಿದ ‘ಮಕ್ಕಳ ಕಲಾ ಶಿಬಿರ’ದ ಉದ್ಘಾಟನೆಯು ದಿನಾಂಕ 05-05-2023ರಂದು ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ನಡೆಯಿತು. ಬಾಲಗೋಕುಲ ಕಾಸರಗೋಡು ತಾ. ಶಿಕ್ಷಣ ಪ್ರಮುಖ್ ದೇವದಾಸ್ ನುಳ್ಳಿಪ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ಅರಿವಳಿಕೆ ತಜ್ಞ ಡಾ. ವೆಂಕಟಗಿರಿ ಶಿಬಿರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನಾರವರು “ಪ್ರತಿಭಾ ಪ್ರದರ್ಶನ ಮತ್ತು ವ್ಯಕ್ತಿತ್ವ ವಿಕಾಸವು ಕಲಾ ಶಿಬಿರಗಳಿಂದ ಸಾಧ್ಯ. ರಂಗಭೂಮಿ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುತ್ತದೆ. ಅಲ್ಲದೆ ಮಾನವೀಯ ಮೌಲ್ಯಗಳನ್ನು ತಿಳಿಸುತ್ತದೆ. ಕಾಸರಗೋಡಿನಂತಹ ಸಂಸ್ಕೃತಿ ಸಂಪನ್ನವಾದ ನೆಲದಲ್ಲಿ ಕಲಾ ಶಿಬಿರಗಳು ಹೆಚ್ಚು ನಡೆಯಬೇಕಾದ ಅನಿವಾರ್ಯತೆಯಿದೆ” ಎಂದು ಹೇಳಿದರು. ಕಾಸರಗೋಡು – ದ್ವಾರಕಾನಗರ ಶ್ರೀ ಲಕ್ಷ್ಮೀವೆಂಕಟೇಶ ವಿದ್ಯಾಲಯದ ನಿರ್ದೇಶಕಿ ಸಾಯಿರತ್ನ ಶುಭ ಹಾರೈಸಿದರು. ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರು ಪ್ರಸಾದ್ ಕೋಟೆಕಣಿ ಪ್ರಸ್ತಾವಿಸಿದರು. ತ್ರಿವೇದ್…

Read More

ನಾಟಕಕಾರ, ನಿರ್ದೇಶನ ಬೇಲೂರು ರಘುನಂದನ್ ಬರೆದಿರುವ ಹತ್ತು ಕತೆಗಳ ಸಂಕಲನ ‘ಅಪ್ಪ ಕಾಣೆಯಾಗಿದ್ದಾನೆ’. ಈ ಶೀರ್ಷಿಕೆಯ ಕತೆಯಲ್ಲಿ ಅಪ್ಪ ನಾಪತ್ತೆಯಾಗಿದ್ದಾನೆ. ಕುಟುಂಬವನ್ನು ಸಾಕುವ, ಮಕ್ಕಳನ್ನು ಬೆಳೆಸುವ, ಕುಟುಂಬದ ಗೌರವವನ್ನು ಉಳಿಸುವ ಹೊಣೆ ತಾಯಿ ಸೂರಾಪುರದ ಸೀತಕ್ಕನ ಮೇಲೆ ಬಿದ್ದಿದೆ. ಸೀತಕ್ಕನಿಗೆ ಜೀವನದಲ್ಲಿ ಸುಖವಿಲ್ಲ. ಬಡತನ ಮತ್ತು ಅವಮಾನದ ನಡುವೆ ಜೀಕುತ್ತಿರುವ ಜೀವ ಅದು. ಕತೆ ಶುರುವಾಗುವ ಹೊತ್ತಿಗೆ ಮಾರ್ನಮಿ ಹಬ್ಬ ಸಮೀಪಿಸುತ್ತಿದೆ. ಅ೦ದು ಎಲ್ಲರೂ ಹಿರಿಯರಿಗೆ ಧೂಪ ಹಾಕುವುದು ಶಾಸ್ತ್ರ. ಹಾಕದೇ ಹೋದರೆ ಅಪಶಕುನ ಎಂಬ ನಂಬಿಕೆ. ಆ ಕಾರ್ಯಕ್ರಮ ಸೀತಕ್ಕನ ಮನೆಯಲ್ಲಿ ನಡೆಯುತ್ತದೆ. ಊಟ ಬಂದವರಿಗೆ, ಕೆಲಸ ಸೀತಕ್ಕನಿಗೆ, ಅವಳ ಮನೆಯಲ್ಲಿ ಇತಿಹಾಸ ಅಂತ ಇರುವುದು ನೀರು ಕಾಯಿಸುವ ಹ೦ಡೆಗೆ ಮಾತ್ರ. ಹೀಗೆ ರಘುನಂದನ್ ತಾನು ಕಂಡ ಕತೆಗಳನ್ನು ತನ್ನಿಷ್ಟದ ಭಾಷೆಯಲ್ಲಿ ಕಟ್ಟುತ್ತಾ ಹೋಗುತ್ತಾರೆ. ಗೆಂಡೇಹಳ್ಳಿ, ಸೂರಾಪುರ, ಮೂಡಿಗೆರೆ ಸಮೀಪದ ಊರುಗಳು, ಹೆಸರಿಲ್ಲದ ಮಲೆನಾಡಿನ ಹಳ್ಳಿಗಳ ಕತೆಗಳೆಲ್ಲ ಈ ಸಂಕಲನದ ಕತೆಗಳ ಒಳಗೆ ಸೇರಿಕೊಂಡಿವೆ. ಇಂಥ ಕತೆಗಳ ನಡುವೆ ಕೊಂಚ…

Read More

ಮಂಗಳೂರು : ಮುಸ್ಲಿಮ್ ಲೇಖಕರ ಸಂಘವು ದಿನಾಂಕ 12-05-2023ನೇ ಶುಕ್ರವಾರ ಕಂಕನಾಡಿ, ಜಮೀಯತುಲ್ ಫಲಾಹ್ ಸಭಾಂಗಣ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿವಂಗತ ಯು.ಟಿ.ಫರೀದ್ ಸ್ಮರಣಾರ್ಥ ನೀಡುವ 2021ನೇ ಸಾಲಿನ ”ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿದ ಬರಹಗಾರ ಬೆಂಗಳೂರಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಯಾಗಿರುವ ಡಾ. ನೂರ್ ಸಮದ್‌ ಅಬ್ಬಲಗೆರೆ ಅವರು ಮಾತನಾಡುತ್ತಾ “ಪ್ರತಿಫಲದ ನಿರೀಕ್ಷೆಯಿಲ್ಲದೆ, ನಿಷ್ಠೆ, ಬದ್ಧತೆಯಿಂದ ಕೆಲಸ ಮಾಡಿದರೆ ಪ್ರಪಂಚದಲ್ಲಿ ಏನನ್ನು ಬೇಕಾದರೂ ದಕ್ಕಿಸಿಕೊಳ್ಳಬಹುದು. ಪ್ರತಿಯೊಬ್ಬರ ಮಿದುಳಿನಲ್ಲೂ ದೇವರು ಜ್ಞಾನದ ಬೀಜ ಬಿತ್ತಿರುತ್ತಾನೆ. ಅದಕ್ಕೆ ಪೋಷಕಾಂಶ ನೀಡಿ ಜ್ಞಾನ ಉದ್ದೀಪನಗೊಳಿಸಿಕೊಳ್ಳುವುದು ನಮ್ಮ ಹೊಣೆಗಾರಿಕೆಯಾಗಿದೆ.” ಎಂದರು. ‘ಪ್ರಜಾವಾಣಿಯ ಸಹಪಾಠಿ’ ಪತ್ರಿಕೆಯ ಕೀಟ ಪ್ರಪಂಚ ಅಂಕಣದಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ ‘ವಿಸ್ಮಯ ಕೀಟ ಪ್ರಪಂಚ’ ಕೃತಿಗೆ ಈ ಪ್ರಶಸ್ತಿ ದೊರೆತಿರುವುದಕ್ಕೆ ಅವರು, ಪತ್ರಿಕೆಯನ್ನು ಸ್ಮರಿಸಿದರು. ಪ್ರಶಸ್ತಿಯು ರೂ.10,000 ನಗದು, ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಯು.ಟಿ.ಖಾದರ್ ಮಾತನಾಡಿ, “ಸಮಾಜದಲ್ಲಿ ಸಮುದಾಯಗಳ ನಡುವೆ ಪರಸ್ಪರ ಪ್ರೀತಿ ಬೆಳೆಸುವ, ಮನಸ್ಸುಗಳನ್ನು ಜೋಡಿಸುವ ಶಕ್ತಿ ಸಾಹಿತ್ಯಕ್ಕಿದೆ.…

Read More

ಮಂಗಳೂರು: ಕಲಾಭಿ ಥಿಯೇಟರ್ ಮಂಗಳೂರು ಪ್ರಸ್ತುತ ಪಡಿಸುವ ಬುನ್ರಾಕು ಗೊಂಬೆಯಾಟ ‘ಪುರ್ಸನ ಪುಗ್ಗೆ’ಯು ದಿನಾಂಕ 28-05-2023 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ  ಕೆನರಾ ಪ್ರೌಢಶಾಲೆಯ  ಶ್ರೀ ಭುವನೇಂದ್ರ ಸಭಾಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಆ ದಿನ ಗಂಟೆ 3.30, 5.30 ಮತ್ತು 7.30 ಹೀಗೆ 3 ಪ್ರದರ್ಶನಗಳಿದ್ದು ಪ್ರವೇಶ ದರವಾಗಿ ರೂಪಾಯಿ 100ನ್ನು ನಿಗದಿಪಡಿಸಲಾಗಿದೆ ಬುನ್ರಾಕು ಗೊಂಬೆಯಾಟ ಬುನ್ರಾಕು ಗೊಂಬೆಯಾಟ ಮೂಲತಃ ಜಪಾನಿನ ಜಾನಪದ ಕಲೆಯಾಗಿದ್ದು, ಜಪಾನಿನ ಅತ್ಯಂತ ಪ್ರಾಚೀನ ಹಾಗೂ ಪ್ರಸಿದ್ಧ ಕಲಾ ಪ್ರಕಾರವಾಗಿದೆ. ತನ್ನ ಉತ್ಕೃಷ್ಟ ಕಲಾತ್ಮಕ ತಂತ್ರಗಾರಿಕೆ ಹಾಗೂ ಸೂತ್ರಗಳು ಇಲ್ಲದೆಯೇ ನೇರ ಕೈಗಳ ಬಳಕೆಯಿಂದ ಗೊಂಬೆಗಳಿಗೆ ಜೀವ ತುಂಬುವ ಕ್ರಮದಿಂದಾಗಿ ರಂಗದ ಮೇಲೆ ನಮ್ಮ ವಾಸ್ತವಕ್ಕೆ ತೀರಾ ಹತ್ತಿರ ಎಂಬುವಷ್ಟು ಭಾವನೆ, ಚಲನವಲನಗಳ ಸಾದ್ಯತೆಗಳನ್ನು ಕಲ್ಪಿಸಿ ಬೇರೆ ಎಲ್ಲ ಮಾದರಿಯ ಗೊಂಬೆಗಳಿಂದ ಭಿನ್ನವಾಗಿ ನಿಲ್ಲುವುದು ಇದರ ವಿಶೇಷತೆ. ಇಲ್ಲಿ ಮೂರು ಜನ ಸೇರಿ ಒಂದು ಬೊಂಬೆಯನ್ನು ಅಡಿಸುತ್ತಿರುತ್ತಾರೆ. ಪ್ರಸ್ತುತ ನಾಟಕದಲ್ಲಿ ಬರುವ ಗೊಂಬೆಗಳು ಈ ಬುನ್ರಾಕು ಕಲಾಪ್ರಕಾರದ…

Read More

ಮಂಗಳೂರು : ತುಳು ಕೂಟ (ರಿ.) ಕುಡ್ಲ ಆಯೋಜಿಸುವ ಬಂಗಾರ ಪರ್ಬ ಸರಣಿ ಕಾರ್ಯಕ್ರಮ -3 ಇದರ ಅಂಗವಾಗಿ ‘ತುಳುವೆರೆ ಪರ್ಬದ ಸಂಭ್ರಮ’ ‘ಪತ್ತನಾಜೆ–ಆಟಿ–ಸೋಣ’ (ಹತ್ತನಾವಧಿ–ಆಷಾಢ–ಶ್ರಾವಣ) ಕಾರ್ಯಕ್ರಮವು ದಿನಾಂಕ 19-05-2023ನೇ ಶುಕ್ರವಾರ ಸಂಜೆ 4-30ಕ್ಕೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ತುಳು ಕೂಟದ ಅಧ್ಯಕ್ಷರಾದ ಶ್ರೀ ಬಿ. ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಶ್ರೀ ಮಹತೋಭಾರ ಮಂಗಳಾದೇವಿ ದೇವಸ್ಥಾನದ ಶ್ರೀ ರಮಾನಾಥ ಹೆಗ್ಡೆ ಇವರು ದೀಪ ಪ್ರಜ್ವಲನೆ ಗೈದು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಆರ್.ಆರ್. ಮಸಾಲ ಇದರ ಮಾಲಕರಾದ ಶ್ರೀ ಶೈಲೇಂದ್ರ ವೈ. ಸುವರ್ಣ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮೀ ಶೆಟ್ಟಿ ಭಾಗವಹಿಸಲಿರುವರು. ಪತ್ತನಾಜೆ (ಹತ್ತನಾವಧಿ)ಯ ಬಗ್ಗೆ ತುಳು ವರ್ಲ್ಡ್ ಇದರ ನಿರ್ದೇಶಕರಾದ ಡಾ. ರಾಜೇಶ್ ಆಳ್ವ, ‘ಆಟಿ’ (ಆಷಾಢ)ಯ ಬಗ್ಗೆ ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕರಾದ ಡಾ. ವಸಂತ ಕುಮಾರ್ ಪೆರ್ಲ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು…

Read More

ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಪುರಂದರ ದಾಸವರೇಣ್ಯರು “ಆಡಿದನೋ ರಂಗ” ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ. ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಚಲಿತವಿದೆ. ಇಂತಹ ಒಂದು ಪಾರಂಪರಿಕ ನೃತ್ಯ ಕಲೆಯಲ್ಲಿ ತಮ್ಮ ಪ್ರತಿಭೆ ಹಾಗೂ ಅನೇಕ ಯುವ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಗುರುವಾಗಿ “ನಟನಂ ನೃತ್ಯ ವಿದ್ಯಾಲಯ ಗಂಜಿಮಠ, ಗುರುಪುರ” ಸಂಸ್ಥೆಯ ಮೂಲಕ  ಹೇಳಿಕೊಡುತ್ತಿರುವವರು ವಿದುಷಿ ಕು.ವೈಷ್ಣವಿ ವಿ ಪ್ರಭು. 21.01.2002ರಂದು ವಿವೇಕ್ ಆರ್ ಪ್ರಭು ಹಾಗೂ ಶಾಂತೇರಿ ವಿ ಪ್ರಭು ಇವರ ಮಗಳಾಗಿ ಜನನ. ಮಂಗಳೂರಿನ ಕೆನರಾ ಕಾಲೇಜ್ ಕೊಡಿಯಾಲ್ ಬೈಲ್ ನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಭರತನಾಟ್ಯ ಕಲೆಯೆಡೆಗೆ ಆಕರ್ಷಿತರಾದದ್ದು ಹೇಗೆ ಹಾಗೂ ಭರತನಾಟ್ಯ ಕಲಾವಿದೆಯಾಗಿ  ಬೆಳೆದ ಬಗ್ಗೆ ಹೇಗೆ :- ನೃತ್ಯದಲ್ಲಿ ಇರುವ ಆಸಕ್ತಿಯನ್ನು ನೋಡಿ ನನ್ನ ತಂದೆ ತಾಯಿ 6ನೇ ವಯಸ್ಸಿನಲ್ಲಿ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕಗಳಿಗೆ ನೀಡಲಾಗುವ ವಿವಿಧ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ ಮಾಡಲಾಗಿದೆ. 2022 ಜನವರಿ 01ರಿಂದ ಡಿಸೆಂಬರ್ 31ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳಿಸಿಕೊಡಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  2022ನೆಯ ಸಾಲಿನಲ್ಲಿ ಪ್ರಕಟಗೊಂಡಿರುವ ಒಟ್ಟು 51 ಪ್ರಕಾರಗಳ ಪುಸ್ತಕಗಳಿಗೆ ವಿವಿಧ ದತ್ತಿ ಪುರಸ್ಕಾರಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿದೆ. ಅದಕ್ಕಾಗಿ ಬೇರೆ ಬೇರೆ ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದು, ಇದಕ್ಕಾಗಿ 51 ವಿವಿಧ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪ್ರತೀ ದತ್ತಿ ಪ್ರಶಸ್ತಿಯ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು, ಯಾವ ದತ್ತಿಗಾಗಿ ಎನ್ನುವುದನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ಬರೆದು ‘ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು – 560018’ ಅವರಿಗೆ ಕಳುಹಿಸಲು ಪ್ರಕಟಣೆಯಲ್ಲಿ ಕೋರಿದೆ. ಹೆಚ್ಚಿನ ಮಾಹಿತಿಯನ್ನು…

Read More