Subscribe to Updates
Get the latest creative news from FooBar about art, design and business.
Author: roovari
ಡೋಣಿ : ಸಂಗೀತ ನೃತ್ಯ ನಾಟಕ ಸಂಸ್ಥೆ (ಎಸ್.ಸಿ.) (ರಿ.) ಡೋಣಿ ಇದರ ವತಿಯಿಂದ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 28-06-2024ರಂದು ಬೆಳಗ್ಗೆ 11-00 ಗಂಟೆಗೆ ಡೋಣಿಯ ಬಾಲಕಿಯರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಪ್ರಧಾನ ಗುರುಗಳಾದ ಶ್ರೀ ಆರ್.ಹೆಚ್. ಅಂಗಡಿ ಇವರ ಅಧ್ಯಕ್ಷತೆಯಲ್ಲಿ ಎಸ್.ಡಿ.ಎಂ.ಸಿ. ಇದರ ಅಧ್ಯಕ್ಷರಾದ ಶ್ರೀ ಶರಣಪ್ಪ ಗೋಣಿಸ್ವಾಮಿ ಇವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಗದಗದ ಚಿತ್ರಕಲಾ ಶಿಕ್ಷಕರಾದ ಶ್ರೀ ವಿಜಯ ಕಿರೇಸೂರ ಇವರು ಉಪನ್ಯಾಸ ನೀಡಲಿದ್ದಾರೆ.
ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ‘ಕನಕ ಸ್ಮೃತಿ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 25-06-2024ರ ಮಂಗಳವಾರದಂದು ಮಂಗಳಗಂಗೋತ್ರಿಯ ಡಾ. ಯು.ಆರ್. ರಾವ್ (ಹಳೆಯ ಸೆನೆಟ್) ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನರೇಂದ್ರ ರೈ ದೇರ್ಲ ಮಾತನಾಡಿ “ಕರಾವಳಿ ಇಂದು ಶಿಕ್ಷಣದ ವ್ಯಾಪಾರೀಕರಣ ಮತ್ತು ಅಭಿವೃದ್ಧಿಯ ಭೌತಿಕತೆಯ ಭಾರದಲ್ಲಿ ಕುಸಿಯುತ್ತಿದೆ. ಮಾನವೀಯತೆ ಮಾಯವಾಗಿದೆ. ಮನುಷ್ಯ ಇನ್ನೊಬ್ಬರನ್ನು ಪ್ರೀತಿಯಿಂದ ನೋಡದೆ ಅನುಮಾನ, ಭಯದಿಂದ ನೋಡುವಂತಾಗಿದೆ. ಕನಕ ಹಾಗೂ ನಾರಾಯಣ ಗುರುಗಳಂತಹ ಸಂತರ ಸಂದೇಶ ಹೃದಯವನ್ನು ಮುಟ್ಟಿದರೆ ನಾವು ಮತ್ತೆ ಮನುಷ್ಯರಾಗುತ್ತೇವೆ. ಕನಕದಾಸರಿಗೆ ಅವಸರ ಪಡದೆ, ಪ್ರತಿಭಟಿಸದೆ ಕಾಯುವ ತಾಳ್ಮೆಯಿತ್ತು. ಕಾಯುವುದರ ಮೂಲಕ ಒಂದು ಅರಿವು ಸೃಷ್ಟಿಯಾಗುತ್ತದೆ ಎಂಬುದನ್ನು ನಾವು ಕನಕರಿಂದ ಹಾಗೂ ಅವರ ಚಿಂತನೆಗಳಿಂದ ಅರ್ಥ ಮಾಡಿಕೊಳ್ಳಬೇಕು. ನೈಜವಾಗಿ ಕನಕದಾಸರ ಅರಿವೇ ಭಗವಂತ ಅಥವಾ ಕೃಷ್ಣನಾಗಿದ್ದಾನೆ. ಮಂಗಳೂರು ವಿವಿಯ ಕನಕ ಅಧ್ಯಯನ ಕೇಂದ್ರ…
ಪುತ್ತೂರು : ಮಂಗಳೂರಿನ ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇದರ ತ್ರಿಂಶೋತ್ಸವದ ಅಂಗವಾಗಿ ನಡೆದ ‘ನೃತ್ಯಾಮೃತ’ ಸರಣಿ ನೃತ್ಯ ಕಾರ್ಯಕ್ರಮಗಳ ಅಂಗವಾಗಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಇದರ ‘ನೃತ್ಯಾಂತರಂಗ’ ಸರಣಿ ಕಾರ್ಯಕ್ರಮದ ಸಹಯೋಗದೊಂದಿಗೆ ನಡೆದ ‘ಹಾಡೊಂದು ಭಾವ ಹಲವು’ ಕಾರ್ಯಕ್ರಮವು ದಿನಾಂಕ 23-06-2024ರಂದು ಪುತ್ತೂರಿನ ಶಶಿಶಂಕರ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ತಾಳಮದ್ದಳೆಯ ಅರ್ಥಧಾರಿ ಶ್ರೀ ಹರೀಶ ಬಳಂತಿಮೊಗರು “ಭರತನಾಟ್ಯ ಕಲೆಯಲ್ಲಿ ಒಂದೇ ಹಾಡಿಗೆ ಹಲವು ದೃಷ್ಟಿಕೋನಗಳಲ್ಲಿ ರಂಗ ಪ್ರಸ್ತುತಿ ನೀಡಿದ ಪ್ರಯತ್ನ ಶ್ಲಾಘನೀಯ. ಇಂತಹ ಪ್ರಸ್ತುತಿಗಳಾದಾಗ ಕಲೆ ಶ್ರೀಮಂತವಾಗಿ ಬೆಳೆಯುತ್ತದೆ.” ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ನಗರಸಭಾ ಸದಸ್ಯ ಹಾಗೂ ವಾಸ್ತು ಶ್ರೀ ಪಿ.ಜಿ. ಜಗನ್ನಿವಾಸ ರಾವ್ ಮಾತನಾಡಿ ಹೊಸ ಕಲ್ಪನೆಯನ್ನು ಭರತನಾಟ್ಯದಲ್ಲಿ ರೂಪಿಸಿದ ಕಾರ್ಯಕ್ರಮದ ಕುರಿತು ಮೆಚ್ಚುಗೆ ಸೂಚಿಸಿದರು. ನೃತ್ಯ ಕಾರ್ಯಕ್ರಮದಲ್ಲಿ ವಿದುಷಿ ಅಕ್ಷತಾ ಕೆ. (ನೆರೆಮನೆಯ ಗೋಪಿಕೆಯಾಗಿ- ವಾತ್ಸಲ್ಯ), ಕುಮಾರಿ ಧರಿತ್ರಿ ಭಿಡೆ (ಕೃಷ್ಣನ ಪ್ರೇಮಿಯಾಗಿ-…
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು ಇದರ ಆಶ್ರಯದಲ್ಲಿ ಮಧುರಧ್ವನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಪ್ರಭಾತ 42ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಸೇವಾ ಕಾರ್ಯಕ್ರಮವು ದಿನಾಂಕ 30-06-2024ರಂದು ಬೆಳಗ್ಗೆ 7-30 ಗಂಟೆಗೆ ಕಟೀಲು ದೇವಸ್ಥಾನದಲ್ಲಿ ನಡೆಯಲಿದೆ. ಕುಮಾರಿ ಪ್ರಣತಿ ಕೂಳೂರು ಇವರ ಹಾಡುಗಾರಿಕೆಗೆ ಶ್ರೀ ನಾಗಶಯನ ಪದಕಣ್ಣಾಯ ಪಿಟೀಲು ಮತ್ತು ಮಾಸ್ಟರ್ ಪ್ರಣವ್ ಕೂಳೂರು ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ. ಪ್ರಣತಿಯು ಪ್ರಸ್ತುತ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ.ಯ ವಿದ್ಯಾರ್ಥಿನಿಯಾಗಿದ್ದು ಶಾಸ್ತ್ರೀಯ ಸಂಗೀತವನ್ನು ಹತ್ತು ವರ್ಷಗಳ ಕಾಲ ದಿವಂಗತ ವಿದುಷಿ ಶೀಲಾ ದಿವಾಕರ್ ಇವರಲ್ಲಿ ಅಭ್ಯಾಸ ಮಾಡುತ್ತಿದ್ದು, ಪ್ರಸ್ತುತ ಅವರ ಶಿಷ್ಯರಾಗಿರುವ ಆದರ್ಶ್ ಮುಲ್ಕಿ ಇವರಲ್ಲಿ ಅಭ್ಯಾಸ ಮುಂದುವರಿಸುತ್ತಿದ್ದಾರೆ. ಅದಲ್ಲದೆ ಭರತನಾಟ್ಯದಲ್ಲಿ ಸೀನಿಯರ್ ಗ್ರೇಡ್ ಮುಗಿಸಿ ವಿದ್ವತ್ತಿಗಾಗಿ ಗುರುಗಳಾದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರಣವರವರು ಪ್ರಸ್ತುತ ಜೆ.ಎಸ್.ಎಸ್. ವಿಶ್ವವಿದ್ಯಾಲಯ, ಮೈಸೂರಿನಲ್ಲಿ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಮೃದಂಗ ಅಭ್ಯಾಸವನ್ನು ಹಲವು ವರ್ಷಗಳಿಂದ ವಿದ್ವಾನ್ ಶ್ರೀ…
ಪುತ್ತೂರು : ಬಹುವಚನಂ ವಿದ್ಯಾನಗರ ದರ್ಬೆ ಪುತ್ತೂರು ಇವರ ವತಿಯಿಂದ ನಿರಂಜನರಿಗೆ 100 ವರುಷಗಳು ನೆನಪಿನ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 30-06-2024ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ದರ್ಬೆ ವಿದ್ಯಾನಗರದ ಪದ್ಮಿನೀ ಸಭಾಭವನದಲ್ಲಿ ಆಯೋಜಿಸಿಲಾಗಿದೆ. ಡಾ. ವರದರಾಜ ಚಂದ್ರಗಿರಿಯವರಿಂದ ಕುಳ್ಕುಂದ ಶಿವರಾಯರು (ನಿರಂಜನ) ಇವರ ಬಗ್ಗೆ ವಿಶೇಷ ಉಪನ್ಯಾಸ ನೀಡಲಿರುವರು.
ಕಾವೂರು : ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಮಧುರಧ್ವನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತೀ ತಿಂಗಳು ನಡೆಯುವ ಸುಪ್ರಭಾತ ಸಂಗೀತ ಸೇವೆಯ ಐವತ್ತನೇ ಕಾರ್ಯಕ್ರಮದ ಭಾಗವಾಗಿ ದಿನಾಂಕ 17-06-2024ರಂದು ಬೆಳಗ್ಗೆ 6.06ರಿಂದ ಸಂಜೆವರೆಗೆ ಕರ್ನಾಟಕ ಶಾಸ್ತ್ರೀಯ ‘ಉದಯಾಸ್ತಮಾನ ಸಂಗೀತ ಸೇವೆ’ ನಡೆಯಿತು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಿಂದ ಸಂಗೀತ ವಿದ್ಯಾರ್ಥಿಗಳು, ಗುರುಗಳು, ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರೀ ಶಂಕರ ಶಗ್ರಿತ್ತಾಯ ಇವರು ದೀಪ ಪ್ರಜ್ವಾಲನೆ ನೆರವೇರಿಸಿದರು. ಇದೇ ವೇಳೆ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರೊಫೆಸರ್ ಡಾ. ಸುಬ್ರಹ್ಮಣ್ಯ ಇವರನ್ನು ಸಮ್ಮಾನಿಸಲಾಯಿತು. ಕಾವೂರು ಮಹಾಲಿಂಗೇಶ್ವರ ದೇಗುಲದ ಪ್ರಧಾನ ಅರ್ಚಕ ವೇದ ಮೂರ್ತಿ ಶ್ರೀನಿವಾಸ ಭಟ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಸದಾಶಿವ, ಪ್ರಸನ್ನ ಭಟ್, ದಾಮೋದರ ಆಚಾರ್ಯ, ಸುರೇಶ್ ರಾವ್, ಶಿವಳ್ಳಿ ಸ್ಪಂದನ ಕಾವೂರಿನ ನವೀನ್, ಅರವಿಂದ ಹೆಬ್ಬಾರ್ ಉಪಸ್ಥಿತರಿದ್ದರು. ಮಧೂರು ಪಿ. ಬಾಲಸುಬ್ರಹ್ಮಣ್ಯಂ ವಂದಿಸಿದರು.
ಧಾರವಾಡ : ಉತ್ತರ ಕರ್ನಾಟಕದ ಜನಪ್ರಿಯ ರಂಗ ಸಂಸ್ಥೆಯಾದ ಅಭಿನಯ ಭಾರತಿ ತನ್ನ 44ನೇ ವರ್ಷದ ಆರಂಭವನ್ನು ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿನಾಂಕ 01-07-2024 ಮತ್ತು 02-07-2024ರಂದು ಸಂಜೆ 6-00 ಗಂಟೆಗೆ ‘ವಸಂತೋತ್ಸವ’ ಕಾರ್ಯಕ್ರಮದಲ್ಲಿ ಮೂರು ನಾಟಕಗಳ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಮೂರು ನಾಟಕಗಳ ವಿವರ ಹೀಗಿವೆ : ದಿನಾಂಕ 01-07-2024ರಂದು ಸಂಜೆ ಗಂಟೆ 6ಕ್ಕೆ ಹಾಸ್ಯ ನಾಟಕ : “ನಾ ತುಕಾರಾಂ ಅಲ್ಲ” ರಚನೆ : ಶ್ರೀ ಎನ್. ಸುರೇಂದ್ರನಾಥ ನಿರ್ದೇಶಕರು : ಶ್ರೀ ಶ್ರೀಪತಿ ಮಂಜನಬೈಲ್ ಅವಧಿ : 100 ನಿಮಿಷ ದಿನಾಂಕ 02-07-2024ರಂದು ಸಂಜೆ ಗಂಟೆ 6ಕ್ಕೆ ನಾಟಕ : “ಉರಿಯ ಉಯ್ಯಾಲೆ” ರಚನೆ : ಡಾ. ಎಚ್.ಎಸ್. ವೆಂಕಟೇಶಮೂರ್ತಿ ನಿರ್ದೇಶಕರು : ಶ್ರೀಪತಿ ಮಂಜನ ಬೈಲ್ ಅವಧಿ : 80 ನಿಮಿಷ ದಿನಾಂಕ 02-07-2024ರಂದು ಸಂಜೆ ಗಂಟೆ 7.30ಕ್ಕೆ ನಾಟಕ : “ಎಸಿ ವರ್ಸಸ್ ಡಿಸಿ” (ಹಾಸ್ಯ + ವಿಜ್ಞಾನ ಪ್ರಾಮುಖ್ಯತೆ ಪಡೆದ ನಾಟಕ) ರಚನೆ :…
ಬೆಂಗಳೂರು : ‘ಕಣ’ ಇದರ ವತಿಯಿಂದ ಸಿದ್ಧಾರ್ಥ ಮಾಧ್ಯಮಿಕಾ ಇವರಿಂದ ಮೂರು ತಿಂಗಳುಗಳ ಕಾಲ ನಡೆಯಲಿರುವ ‘ನಟನಾ ಕಾರ್ಯಾಗಾರ’ವು ದಿನಾಂಕ 29-06-2024ರಂದು ಬೆಂಗಳೂರಿನ ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಪ್ರಾರಂಭವಾಗಲಿದೆ. ಈ ಕಾರ್ಯಾಗಾರದಲ್ಲಿ ಪ್ರತಿ ವಾರಾಂತ್ಯ ಶನಿವಾರ ಮತ್ತು ಭಾನುವಾರ 10-00ರಿಂದ 1-00 ಗಂಟೆಯವರೆಗೆ ಮೂರು ತಾಸುಗಳು ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9663704395 ಸಂಪರ್ಕಿಸಿರಿ. * ಕತೆ ಅಂದರೆ ಏನು ? * ಮೊಟ್ಟ ಮೊದಲು ಕತೆ ಹೇಳಿದವರು ಯಾರು ? * ಮೊದಲ ಕತೆ ಹೇಳಿದವರು ಅದನ್ನು ಯಾಕಾಗಿ ಹೇಳಿದ್ದರು ? * ಕಾಲ ಕ್ರಮೇಣ ಕತೆ ಹೇಳುವ ಪ್ರಕ್ರಿಯೆ ತನ್ನೊಳಗೆ ಏನೇನನ್ನೆಲ್ಲಾ ಹುದುಗಿಸುಕೊಳ್ಳುತ್ತಾ ಬರುತ್ತಿದೆ ? * ಇವತ್ತಿನ ಕಾಲಮಾನದಲ್ಲಿ ನಾವು ಕತೆಯನ್ನು ಯಾಕೆ ಹೇಳಬೇಕು ? * ಕಲಾವಿದರು ಅಂದರೆ ಯಾರು ? * ಕಲೆ ಎಂದರೆ ಏನು ? ಹೀಗೆ ಹತ್ತು ಹಲವು ಕುತೂಹಲ ಭರಿತ ಪ್ರಶ್ನೆಗಳೊಂದಿಗೆ ಶುರವಾಗುವ ಮೂರು ತಿಂಗಳುಗಳ ಕಾಲದ ಈ…
ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಉಚಿತ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷ ಶಿಕ್ಷಣದ ಉದ್ಘಾಟನಾ ಸಮಾರಂಭವು ದಿನಾಂಕ 25-06-2024ರಂದು ಕೊಯಿಲ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ದುರ್ಗಾ ದಾಸ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಸರಪಾಡಿ ಘಟಕದ ಸಂಚಾಲಕರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ ಶೆಟ್ಟಿ ಪ್ರಸ್ತಾಪನೆ ಮೂಲಕ ಯಕ್ಷಧ್ರುವ ಯಕ್ಷ ಶಿಕ್ಷಣ ಇದರ ಮಹತ್ವವನ್ನು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಸ್ವಾಗತಿಸಿದರು. ಸರಪಾಡಿ ಘಟಕದ ಅಧ್ಯಕ್ಷರಾದ ಶಶಿಕಾಂತ್ ಜೆ. ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೆಟ್ಟು, ವಸಂತ ಕುಮಾರ್ ಅಣ್ಣಳಿಕೆ, ಪರಮೇಶ್ವರ ರಾಯಿ, ಯಕ್ಷಗಾನ ಗುರುಗಳಾದ ಪ್ರೇಮರಾಜ್ ಕೊಯಿಲ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕರಾದ ಜನಾರ್ದನ್ ಇವರು ಧನ್ಯವಾದ ಸಮರ್ಪಣೆಗೈದರು. ತರಬೇತುದಾರರಾದ ಪ್ರೇಮ್ ರಾಜ್ ಕೊಯಿಲ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹೆಜ್ಜೆ ಕಲಿಸಿ ತರಬೇತಿಗೆ…
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ‘ಚಾವುಂಡರಾಯ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭವು 28-06-2024ರ ಶುಕ್ರವಾರ ಸಂಜೆ ಘಂಟೆ 5.00ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನವನ್ನು ಚಾಮರಾಜನಗರ ಜಿಲ್ಲೆಯ ಕನಕಗಿರಿ ಕ್ಷೇತ್ರದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮಿಗಳು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿ(ರಿ.) ಉಜಿರೆ ಇಲ್ಲಿನ ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ಅವರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಹಿಸಲಿದ್ದು, 2023ನೆಯ ಸಾಲಿನ ಪ್ರಶಸ್ತಿ ಪುರಸ್ಕೃತರಾದ ಡಾ. ಪ್ರೀತಿ ಶುಭಚಂದ್ರ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಶ್ರವಣಬೆಳಗೊಳ ಶ್ರೀಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ವಿಂದ್ಯಗಿರಿಯಲ್ಲಿ ಬಾಹುಬಲಿ ಏಕಶಿಲಾ ಮೂರ್ತಿಯನ್ನು ಸ್ಥಾಪಿಸಿದ್ದ ಚಾವುಂಡರಾಯನ ಹೆಸರಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು, ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡದಲ್ಲಿ ಕೃತಿ ರಚನೆ ಮಾಡಿರುವ ಲೇಖಕರನ್ನು, ಪ್ರಾಚೀನ ಜೈನಗ್ರಂಥಗಳ ಸಂಪಾದನೆ…