Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು:ನವೋದಯದಿಂದ ನವ್ಯದೆಡೆಗೆ ಹೊರಳಿದ ಕನ್ನಡ ಸಾಹಿತ್ಯ ವಲಯದ ಸಂಧಿ ಕಾಲಘಟ್ಟದಲ್ಲಿ ಕಾಸರಗೋಡಿನ ಸಾಹಿತ್ಯ ವಲಯದಲ್ಲಿ ಪ್ರಧಾನ ಭೂಮಿಕೆಯೊದಗಿಸಿದ ಪ್ರಮುಖರಲ್ಲಿ ದಿ. ಎಂ. ಗಂಗಾಧರ ಭಟ್ಟರು ಮಹತ್ತರ ಪಾತ್ರ ವಹಿಸಿದ್ದರು ಎಂದು ಸಾಹಿತಿ, ರಂಗಕರ್ಮಿ ಬಿ. ರಾಮಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಕಲ ವಲಯದ ಆದ್ಯ ಪ್ರವರ್ತಕರಾಗಿ ಗಂಗಾಧರ ಭಟ್ಟರ ಬದುಕು-ಬರಹ ಸ್ತುತ್ಯರ್ಹ: ಬಿ.ರಾಮಮೂರ್ತಿ-ಗಂಗಾಧರ ಭಟ್ ಸಂಸ್ಮರಣೆಯಲ್ಲಿ ಅಭಿಮತ ಸಾಮಾಜಿಕ, ಸಾಂಸ್ಕಂತಿಕ ಸಂಘಟನೆಯಾದ ರಂಗಚಿನ್ನಾರಿ ಕಾಸರಗೋಡು ನೇತೃತ್ವದಲ್ಲಿ ದಿನಾಂಕ 28 ಅಕ್ಟೋಬರ್ 2024ರ ಸೋಮವಾರ ಅಪರಾಹ್ನ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆದ ಕವಿ, ಕನ್ನಡ ಹೋರಾಟಗಾರ, ಪತ್ರಕರ್ತ, ಅಧ್ಯಾಪಕ ದಿ. ಎಂ. ಗಂಗಾಧರ ಭಟ್ ಅವರ 29ನೇ ಸಂಸ್ಮರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಕಲ ಕಲಾ ಸಾಧಕರಾಗಿ ಶತಾಯುಷ್ಯದಲ್ಲಿ ಮಾಡಬಹುದಾದ ಸಾಧನೆಗಳನ್ನು ಅಲ್ಪ ಅವಧಿಯಲ್ಲೇ ನಿರ್ವಹಿಸಿ ಅಕಾಲದಲ್ಲಿ ಅಗಲಿದ ಗಂಗಾಧರ ಭಟ್ಟರು ಕಾಸರಗೋಡಿನ ಕನ್ನಡ ಚಳವಳಿಯ 1972ರ ಕಾಲಘಟ್ಟದ ಹೊಸ ಹೊರಳುವಿಕೆಯಲ್ಲಿ ನೇತೃತ್ವ ವಹಿಸಿದ್ದವರು. ಇಲ್ಲಿಯ ಸಾಹಿತ್ಯ, ಸಾಂಸ್ಕøತಿಕ, ಭಾಚಾ ಚಳವಳಿಯ…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮತ್ತು ತುಳು ನಾಟಕ ಕಲಾವಿದರ ಒಕ್ಕೂಟ ವತಿಯಿಂದ ಇತ್ತೀಚೆಗೆ ನಿಧನರಾದ ಯಕ್ಷಗಾನದ ಹಿರಿಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ದಿನಾಂಕ 25 ಅಕ್ಟೋಬರ್ 2024ರ ಶುಕ್ರವಾರದಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ತುಳು ಅಕಾಡೆಮಿಯ ತುಳು ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಹಿರಿಯ ಯಕ್ಷಗಾನ ಅರ್ಥದಾರಿ ಹಾಗೂ ವಿದ್ವಾಂಸರಾದ ಡಾ. ಪ್ರಭಾಕರ ಜೋಶಿ ಮಾತನಾಡಿ “ಜಯರಾಮ ಆಚಾರ್ಯ ಅತ್ಯಂತ ಸೂಕ್ಷ್ಮ ಪ್ರಜ್ಞೆಯ ಕಲಾವಿದರಾಗಿದ್ದರು. ಕಲಾ ಶಿಸ್ತು ಹಾಗೂ ನೈಪುಣ್ಯತೆ ಮೂಲಕ ಬಂಟ್ವಾಳ ಜಯರಾಮ ಆಚಾರ್ಯರು ಯಕ್ಷಗಾನದ ಹಾಸ್ಯ ಪಾತ್ರಕ್ಕೆ ಗೌರವ ತಂದವರು. ಸ್ವಾಭಿಮಾನಿಯಾಗಿದ್ದ ಜಯರಾಮ ಆಚಾರ್ಯರ ಕುಟುಂಬದ ಜತೆಗೆ ಅಭಿಮಾನಿಗಳು ನಿಲ್ಲುವ ಆವಶ್ಯವಿದೆ.” ಎಂದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಅತ್ಯಂತ ಸಜ್ಜನ ಹಾಗೂ ಸ್ವಾಭಿಮಾನಿ…
ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘ, ಪ್ರವರ್ತಿತ ರೇಡಿಯೋ ಪಾಂಚಜನ್ಯದ ಆಶ್ರಯದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಮತ್ತು ರೋಟರಿ ಯುವ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕನ್ನಡ ಗೀತೆ ಗಾಯನ ಸ್ಪರ್ಧೆ’ಯನ್ನು ದಿನಾಂಕ 11 ನವೆಂಬರ್ 2024ರಂದು ಪುತ್ತೂರಿನ ರೇಡಿಯೋ ಪಾಂಚಜನ್ಯ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಯಲಿದ್ದು, ಕನ್ನಡ ಭಾಷೆ, ಕನ್ನಡ ನಾಡು, ಕನ್ನಡ ನುಡಿಗೆ ಸಂಬಂಧಿಸಿದ ಉತ್ತಮ ಸಾಹಿತ್ಯ ಉಳ್ಳ ಭಾವಗೀತೆ, ಸಿನಿಮಾ ಹಾಡುಗಳಿಗೆ ಅವಕಾಶವಿದೆ. ಹೆಸರು ನೋಂದಾಯಿಸಲು 8050809885 ಮತ್ತು 9164070290 ಸಂಪರ್ಕಿಸಿರಿ.
ಧಾರವಾಡ : ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಪಂ. ‘ಪುಟ್ಟರಾಜ ಸಾಹಿತ್ಯೋತ್ಸವ-24’ ಕಾರ್ಯಕ್ರಮವು ದಿನಾಂಕ 20 ಅಕ್ಟೋಬರ್ 2024 ರಂದು ಧಾರವಾಡದ ರಂಗಾಯಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗದಗ ಕಡಣಿ ಸಂಸ್ಥಾನ ಹಿರೇಮಠದ ವೇ. ಚನ್ನವೀರ ಸ್ವಾಮಿಗಳು ಮಾತನಾಡಿ “ಕವಿ ಡಾ. ಪಂಡಿತ ಪುಟ್ಟರಾಜ ಗವಾಯಿಯವರು ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ರಚಿಸಿದ್ದು, ಸರಕಾರವೇ ಪೂಜ್ಯರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಿಸಿ ಅವರ ಸಾಹಿತ್ಯ, ಜನ ಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಲಿದೆ. ಪಂ. ಪುಟ್ಟರಾಜರ ಹುಟ್ಟು ಹಬ್ಬವನ್ನು ಸರಕಾರದಿಂದ ಆಚರಿಸಬೇಕು ಎಂದು ಸೇವಾ ಸಮಿತಿಯಿಂದ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು, ಸರಕಾರ ಸ್ಪಂದಿಸಿ ಪೂಜ್ಯರ ಹುಟ್ಟುಹಬ್ಬ ಆಚರಣೆಗೆ ಚಾಲನೆ ನೀಡಲಿ.” ಎಂದರು. ಕ. ವಿ. ವಿ. ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕರಾದ ಸಾಹಿತಿ ಡಾ. ಎ. ಎಲ್.…
ಮೈಸೂರು : ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ, ಕನ್ನಡ ಭವನ ಸಾರ್ವಜನಿಕ ವಾಚನಾಲಯ ರೂವಾರಿಗಳಾದ ಶ್ರೀ ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಇವರಿಗೆ ಆದರ್ಶ ಕನ್ನಡ ದಂಪತಿಗಳು ಪರಿಗಣನೆಯಲ್ಲಿ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಹಾಗೂ ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ (ರಿ.) ವಿಜಯನಗರ ಬಳ್ಳಾರಿ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ಮೈಸೂರು ಸಭಾ ಭವನದಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಶ್ರೀ ವಾಮನ್ ರಾವ್ ಬೇಕಲ್ – ಸಂದ್ಯಾ ರಾಣಿ ಟೀಚರ್ ಇವರಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು ದಿನಾಂಕ 3 ನವೆಂಬರ್ 2024ರಂದು ನೀಡಿ ಗೌರವಿಸಲಾಗುವುದು. ಕಳೆದ 24 ವರ್ಷಗಳಿಂದ ಕನ್ನಡ ಭವನ ಗ್ರಂಥಾಲಯ, ಪ್ರಸ್ಥಾನವನ್ನು ವಿದ್ಯುಕ್ತವಾಗಿ ಆರಂಭಗೊಳಿಸಿ, ಸಾಹಿತ್ಯ, ಕಲೆ, ಧಾರ್ಮಿಕತೆ,…
ಕನ್ನಡ ಸಾರಸ್ವತ ಲೋಕದಲ್ಲಿ ‘ಎನ್ನೆಸ್ಸೆಲ್’ ಎಂದು ಪ್ರಸಿದ್ಧರಾಗಿರುವ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಭಾವಗೀತೆಗಳ ಮೂಲಕ ಕನ್ನಡಿಗರ ಮನೆಮಾತಾದವರು. ಬದುಕಿನಲ್ಲಿ ಸದಾ ಲವಲವಿಕೆ ಇರಬೇಕೆನ್ನುವ ಹಂಬಲವನ್ನು ಅವರು ತಮ್ಮ ಭಾವಗೀತೆಗಳ ಮೂಲಕ ಅಭಿವ್ಯಕ್ತಗೊಳಿಸಿದವರು. ತಮ್ಮ ಗೀತೆಗಳಲ್ಲಿ ಸೊಗಸಾದ ನವಯವ್ವೌನವನ್ನು ತುಂಬಿ ಸುಮಧುರ ಭಾವವನ್ನು ಶೋತೃಗಳ ಕಿವಿಗೆ ಉಣಬಡಿಸಿದವರು. “ಈ ಬಾನು, ಈ ಚುಕ್ಕಿ, ಈ ಹೂವು, ಈ ಹಕ್ಕಿ, ತೇಲಿಸಾಗುವ ಮುಗಿಲು ಹರುಷ ಉಕ್ಕಿ” ಎಂದು ಪ್ರಕೃತಿಯ ನಡುವೆ ಸಾಹಿತ್ಯದ ರಸಧಾರೆಯನ್ನು ಉಕ್ಕಿಸಿದವರು ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು. 1936ರ ಅಕ್ಟೋಬರ್ 29ರಂದು ಪ್ರಾಕೃತಿಕ ಸೊಬಗಿನ ಮಲೆನಾಡಿನ ಶಿವಮೊಗ್ಗದಲ್ಲಿ ಜನಿಸಿದ ಇವರು, ಮೈಸೂರಿನಲ್ಲಿ ವ್ಯಾಸಂಗ ಮಾಡಿ ನಂತರ ಬೆಂಗಳೂರಿನಲ್ಲಿ ಅಧ್ಯಾಪನ ವೃತ್ತಿಯನ್ನು ಆರಂಭಿಸಿದರು. ವ್ಯಾಸಂಗದ ಅವಧಿಯಲ್ಲಿ ಮೈಸೂರಿನಲ್ಲಿ ತ.ಸು.ಶಾಮರಾಯರ ಮನೆಯಲ್ಲಿ ವಾರಾನ್ನ ಮಾಡಿ ಓದಿದ ನೆನಪನ್ನು ಭಟ್ಟರು ಯಾವಾಗಲೂ ಸ್ಮರಿಸುತ್ತಾರೆ. ಚೆನ್ನಾಗಿ ಓದಿದ ಅವರು ಬಿ.ಎ. ಹಾಗೂ ಎಂ.ಎ.ನಲ್ಲಿ ರ್ಯಾಂ ಕ್ ಪಡೆದರು. ತೀ.ನಂ.ಶ್ರೀಕಂಠಯ್ಯನವರ ಮಾರ್ಗದರ್ಶನವೂ ಅವರಿಗೆ ಈ ಸಂದರ್ಭದಲ್ಲಿ ದೊರೆಯಿತು. ಈ…
ಮಂಗಳೂರು : ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ರಾಲ್ಫ್ ರೋಶನ್ ಕ್ರಾಸ್ತಾ ಇವರು ಕರ‍್ವಾಲ್ ಕುಟುಂಬ ಹಾಗೂ ಮಾಂಡ್ ಸೊಭಾಣ್ ಜಂಟಿಯಾಗಿ ಕೊಡ ಮಾಡುವ 2024ನೇ ಸಾಲಿನ ‘ಕಲಾಕಾರ್ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ. ಬೇಳ ಮೂಲದ ಪ್ರಸ್ತುತ ಮಂಗಳೂರಿನ ಕೆಲರಾಯ್ ಇಲ್ಲಿ ವಾಸ್ತವ್ಯ ಹೊಂದಿರುವ ರೋಶನ್ ಇವರು ಸಂತ ಎಲೋಶಿಯಸ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಗಿಟಾರ್ ಮೇಲೆ ಪ್ರೀತಿ ಬೆಳೆಸಿದ ಇವರು ಸ್ವಪರಿಶ್ರಮದಿಂದ ಗಿಟಾರಿನಲ್ಲಿ ಪ್ರಾವೀಣ್ಯ ಪಡೆದು ಹಲವಾರು ಸಂಗೀತ ತಂಡಗಳಲ್ಲಿ ಸಕ್ರಿಯ ಸದಸ್ಯರಾಗಿ ದುಡಿದಿದ್ದಾರೆ. ಸಂಗೀತಗಾರರಾದ ಹೆನ್ರಿ ಡಿಸೋಜ, ಲರ‍್ನಾ, ವಿಕ್ಟರ್ ಕೊನ್ಸೆಸೊ, ಮೆಲ್ವಿನ್ ಪೆರಿಸ್, ಮಿಕ್ ಮ್ಯಾಕ್ಸ್, ರೋಶನ್ ಬೆಳ್ಮಣ್, ಲೊಯ್ಡ್ ರೇಗೊ, ಪ್ರಜೋತ್ ಡೆಸಾ ಹಾಗೂ ಇತರರ ಸಂಗೀತ ರಸಮಂಜರಿಗಳಲ್ಲಿ ಲೀಡ್ ಗಿಟಾರ್ ನುಡಿಸಿದ್ದಾರೆ. ಕರ್ನಾಟಕ ಮತ್ತು ಗೋವಾದ ಯುವ ಗಾಯಕರಿಗಾಗಿ ಆಯೋಜಿಸಿದ `ಸೋದ್ – 5 ಮ್ಯಾಂಗೋವಾ’ ಗಾಯನ ಟಿವಿ ರಿಯಾಲಿಟಿ ಶೋ ಇದರ ಸಂಗೀತ ನಿರ್ದೇಶಕರಾಗಿ ದುಡಿದಿದ್ದಾರೆ. ಹಲವಾರು ಧ್ವನಿಸುರುಳಿಗಳಿಗೆ,…
ಬೆಳಗಾವಿ : ಹಿರಿಯ ಸಾಹಿತಿ ಡಾ. ಡಿ.ಎಸ್. ಕರ್ಕಿ ಅವರ 117ನೇ ಜನ್ಮದಿನ ಪ್ರಯುಕ್ತ ಬೆಳಗಾವಿಯ ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ನೀಡಲಾಗುವ 2024ನೇ ಸಾಲಿನ ರಾಜ್ಯಮಟ್ಟದ ‘ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ಗೆ 2023ರಲ್ಲಿ ಪ್ರಕಟವಾದ ಸ್ವರಚಿತ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ದಿನಾಂಕ 15 ನವೆಂಬರ್ 2024ರೊಳಗೆ ಸತೀಶ ಕರ್ಕಿ, ಪ್ಲಾಟ್ ನಂ. 354, ಗಂಗೋತ್ರಿ ರಾಮತೀರ್ಥ ನಗರ, ಬೆಳಗಾವಿ ಅವರಿಗೆ ಪ್ರಕಟವಾದ ಎರಡು ಕವನ ಸಂಕಲನಗಳ ಪ್ರತಿಗಳನ್ನು ಕಳುಹಿಸಬೇಕು ಎಂದು ಪ್ರತಿಷ್ಠಾನದ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ ಕರ್ಕಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9449650174, 7975376501.
ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ಹಾಗೂ ಮೋಹನ ತರಂಗಿಣಿ ಸಂಗೀತ ಸಭಾ ಇದರ ‘76ನೇ ವಾರ್ಷಿಕ ಸಾಂಸ್ಕೃತಿಕ ಸಂಗೀತ ನೃತ್ಯ ಮಹೋತ್ಸವ ಹಾಗೂ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಸಂಗೀತ ಸೇವಾ ಸಮರ್ಪಣಾ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 31 ಅಕ್ಟೋಬರ್ 2024ರಂದು ಮಧ್ಯಾಹ್ನ 3-00 ಗಂಟೆಗೆ ನಾದಬ್ರಹ್ಮ ಶಾರದ ಮಂದಿರದಲ್ಲಿ ಆಹ್ವಾನಿತ ಸಂಗೀತ ಕಲಾವಿದರುಗಳಿಂದ ಗಾಯನ ವಾದನ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸಂಗೀತ ಪಿಟೀಲು ವಾದಕ ವಿದ್ವಾನ್ ಶ್ರೀ ಬಿ. ಎಸ್. ನಾಗರಾಜ, ಲಯವಾದ್ಯ ಮೃದಂಗ ವಾದಕ ವಿದ್ವಾನ್ ಶ್ರೀ ಎನ್. ಗುರುಮೂರ್ತಿ ಮತ್ತು ಲಯವಾದ್ಯ ಮೃದಂಗ ವಾದಕ ವಿದ್ವಾನ್ ಶ್ರೀ ಬೆಟ್ಟ ಎಂ. ವೆಂಕಟೇಶ್ ಇವರುಗಳಿಗೆ ‘ಮಂಜುದಾಸ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಬಂಟ್ವಾಳದ ತುಂಬೆಗುತ್ತು ಮನೆತನದ ಸುಬ್ಬಯ್ಯ ಆಳ್ವ ಮತ್ತು ತುಂಗಮ್ಮ ದಂಪತಿಗಳ ಹಿರಿ ಮಗಳಾಗಿ 29 ಅಕ್ಟೋಬರ್ 1916ರಂದು ಜನಿಸಿದ ಚಂದ್ರಭಾಗಿ ರೈಯವರು ಸ್ವತಂತ್ರ ಪೂರ್ವದಿಂದಲೇ ಲೇಖಕಿಯಾಗಿ ಗುರುತಿಸಿಕೊಂಡವರು. ಸಾಹಿತ್ಯ ಪ್ರೇಮಿಯಾದ ತಂದೆಯಿಂದಾಗಿ ಚಂದ್ರಭಾಗಿ ರೈಯವರಿಗೆ ಓದುವ ಹವ್ಯಾಸ ಬೆಳೆಯಿತು. ಸಂಗೀತ, ನಾಟಕ, ಆಶು ಕವಿತೆ ರಚನೆಯೂ ಅವರ ಆಸಕ್ತಿಯ ವಿಷಯವಾಗಿತ್ತು. ಬಾಲ್ಯದಲ್ಲಿಯೇ ಸುತ್ತಮುತ್ತಲ ಮಕ್ಕಳನ್ನು ಸೇರಿಸಿ, ತಾನೇ ಬರೆದ ನಾಟಕಗಳನ್ನು, ಹಾಡುಗಳನ್ನು ಕಲಿಸಿ ಪ್ರದರ್ಶನ ಮಾಡುತ್ತಿದ್ದರು ಎಂಬುದನ್ನು ಅವರ ತಮ್ಮ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಸ್ಮರಿಸಿಕೊಳ್ಳುತ್ತಿದ್ದರು. ಸೃಷ್ಠಿಶೀಲ ಪ್ರತಿಭೆಯುಳ್ಳ ಚಂದ್ರಭಾಗಿ ರೈಯವರು ದೇರಾಜೆಯ ಕೃಷ್ಣ ರೈಯವರನ್ನು ವಿವಾಹವಾದರು. ತನ್ನ ವಿವಾಹದ ಆರತಿಯ ಹಾಡನ್ನೂ ತಾನೇ ರಚಿಸಿ, ರಾಗ ಹಾಕಿ ಮದುವೆಯ ದಿನದಂದು ಹಾಡಿಸಿದ್ದರಂತೆ. ಕೃಷ್ಣ ರೈಗಳಿಗೆ ಸಾಹಿತ್ಯ ಸಂಗೀತಗಳಲ್ಲಿ ಆಸಕ್ತಿ ಇಲ್ಲದ ಕಾರಣ ಹೆಚ್ಚಿನ ಪ್ರೋತ್ಸಾಹ ಸಿಗದಿದ್ದರೂ ಕಂಗೆಡದೆ ಚಂದ್ರಭಾಗಿ ರೈಯವರು ಸೀಮಿತ ಅವಕಾಶದೊಳಗೂ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರ ಕವನ, ಲೇಖನ, ಕತೆಗಳು ಆ ಕಾಲದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.…