Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಶರದೃತುವಿನ ಅಶ್ವಯುಜ ಮಾಸದ ಮೊದಲ 9 ದಿನಗಳಲ್ಲಿ ನಡೆಯುವ ಶಕ್ತಿ ದೇವತೆ ದುರ್ಗಾದೇವಿಯ ಆರಾಧನೆಯ ಸಂದಭ೯ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ – 2023’ವು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕ ಮತ್ತು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ದಿನಾಂಕ 22-10-2023ರಂದು ನಡೆಯಿತು. ದ.ಕ. ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ಮಾತನಾಡಿ “ಮೌಲ್ಯಯುತ ಚಿಂತನೆಗಳೊಂದಿಗೆ ಬದುಕು ಸಾಕಾರಗೊಳಿಸಬೇಕು. ಸಂಸ್ಕೃತಿ ಸಂರಕ್ಷಣೆಯ ಜಾಗ್ರತಿ ನಮ್ಮ ಜವಾಬ್ದಾರಿ” ಎಂದು ನುಡಿದರು. ಅಂತರ್ ರಾಜ್ಯ ಯುವ ಪ್ರತಿಭಾ ಪ್ರಶಸ್ತಿ ‘ಭರವಸೆಯ ಬೆಳಕು’ 2023 ಪ್ರಶಸ್ತಿ ಪ್ರಧಾನ ಮಾಡಿ ಯುವ ಪ್ರತಿಭೆಗಳಿಗೆ ಶುಭ ಹಾರೈಸಿದರು. ಶ್ರೀಮದ್ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶುಭಾಶೀರ್ವಚನ ನೀಡಿ ಯುವ ಪ್ರಶಸ್ತಿ ವಿಜೇತರನ್ನು ಅಭಿನಂದಿಸುತ್ತಾ “ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಗೊಳ್ಳಲು ಪ್ರೋತ್ಸಾಹ…
ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಬರಹದ ಮೊದಲ ಮೆಟ್ಟಿಲಿನ ಕಾಲಘಟ್ಟದಲ್ಲಿ ಬರವಣಿಗೆಯ ಪ್ರೀತಿ ಮತ್ತು ಉತ್ಸಾಹವನ್ನು ತನ್ನದನ್ನಾಗಿಸಿಕೊಂಡು ಬರೆದವರಲ್ಲಿ ಪ್ರಮುಖ ಲೇಖಕಿ ಚಂದ್ರಭಾಗೀ ಕೆ.ರೈ. ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಮರ್ಮು ಎಂಬಲ್ಲಿ ಶ್ರೀ ಸುಬ್ಬಯ್ಯ ಆಳ್ವ ಮತ್ತು ಶ್ರೀಮತಿ ತಂಗಮ್ಮ ದಂಪತಿಗಳಿಗೆ ಮಗಳಾಗಿ 29.10 1916ರಲ್ಲಿ ಜನಿಸಿದವರು ಇವರ ಶಾಲಾ ಅಭ್ಯಾಸ ನಾಲ್ಕನೇ ತರಗತಿಯವರೆಗೆ. ಪುರಾಣ ಶಾಸ್ತ್ರಗಳಲ್ಲಿ ಪರಿಣಿತರಾಗಿ, ಬಾಲ್ಯದಲ್ಲಿಯೇ ನಾಟಕಗಳ ರಚನೆಯನ್ನು ಮಾಡುತ್ತಿದ್ದರು. ಮನೆಯಲ್ಲಿ ಇದ್ದ ಸಾಹಿತ್ಯಿಕ ವಾತಾವರಣ ಅವರಿಗೆ ಉತ್ತಮ ಪುಸ್ತಕಗಳನ್ನು ಓದುವುದಕ್ಕೆ ಅವಕಾಶ ಒದಗಿಸಿತ್ತು. ಕರಾವಳಿ ಕರ್ನಾಟಕದ ಸಾಹಿತ್ಯಕ ಸಾಂಸ್ಕೃತಿಕ ಜಗತ್ತಿನಲ್ಲಿ ಭೀಷ್ಮನಂತೆ ಗುರುತಿಸಿಕೊಂಡಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಸಹೋದರಿ ಇವರು. ‘ತನ್ನ ಸಾಹಿತ್ಯದ ಒಲುಮೆಯ ತಾಯಿ ಬೇರು ತನ್ನ ತಂದೆಯಿಂದ ಲಭಿಸಿತು’ ಎಂದು ಹೆಮ್ಮೆಯಿಂದ ನೆನೆಯುತ್ತಿದ್ದರು. ಆ ಕಾಲಘಟ್ಟದ ರೀತಿ ನೀತಿಗಳಂತೆ ಎಳವೆಯಲ್ಲಿಯೇ ರಾಯಿಯ ಶ್ರೀ ಕೃಷ್ಣಪ್ಪ ರೈಯವರೊಂದಿಗೆ ಇವರ ವಿವಾಹ ನಡೆದು, ಕೂಡು ಕುಟುಂಬದಲ್ಲಿ, ಕೃಷಿ ಮನೆತನದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಕನ್ನಡ ನಾಡಲ್ಲಿ…
ಯಲ್ಲಾಪುರ : ಸಂಕಲ್ಪ ಸೇವಾ ಸಂಸ್ಥೆ ಪ್ರಸ್ತುತ ಪಡಿಸುವ ‘ಸಂಕಲ್ಪ ಉತ್ಸವ 37’ವು ದಿನಾಂಕ 01-11-2023ರಿಂದ 05-11-2023ರವರೆಗೆ ಭಕ್ತಿ ಸಂಕಲ್ಪ, ಸಾಂಸ್ಕೃತಿಕ ಸಂಕಲ್ಪ, ಪ್ರಕೃತಿ ಸಂಕಲ್ಪ, ಸಾಮಾಜಿಕ ಸಂಕಲ್ಪದೊಂದಿಗೆ ಯಲ್ಲಾಪುರದ ಗಾಂಧಿ ಕುಟೀರದಲ್ಲಿ ನಡೆಯಲಿದೆ. ದಿನಾಂಕ 01-11-2023ರಂದು ಸಂಜೆ ಗಂಟೆ 5ಕ್ಕೆ ಶ್ರೀಮತಿ ಮುಕ್ತಾಶಂಕರ ಮತ್ತು ಶ್ರೀ ಡಿ.ಕೆ. ಗಾಂವ್ಕರ ಇವರಿಂದ ಗಮಕ ವಾಚನ, 6 ಗಂಟೆಗೆ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಗಳಿಂದ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿರುವುದು. ಸಭಾ ಕಾರ್ಯಕ್ರಮದ ನಂತರ ‘ನೃತ್ಯ ರೂಪಕ’ವನ್ನು ವಿದುಷಿ ಸೀಮಾ ಭಾಗ್ವತ್ ತಂಡದವರು ಪ್ರಸ್ತುತ ಪಡಿಸುವರು. ‘ಭೀಷ್ಮ ವಿಜಯ’ ಯಕ್ಷಗಾನ ನಡೆಯಲಿದೆ. ದಿನಾಂಕ 02-11-2023ರಂದು ಸಂಜೆ ಗಂಟೆ 5ಕ್ಕೆ ಗೌರವಾನ್ವಿತ ಪ್ರತಿಮಾ ಭಟ್ಟ ಕೋಡುರ ಇವರಿಂದ ಕೀರ್ತನೆ, 6.30ಕ್ಕೆ ಸಭಾ ಕಾರ್ಯಕ್ರಮ ಹಾಗೂ 7.30ರಿಂದ ‘ಸುಧನ್ವಾರ್ಜುನ’ ಯಕ್ಷಗಾನ ನಡೆಯಲಿದೆ. ದಿನಾಂಕ 03-11-2023ರಂದು ಸಂಜೆ ಗಂಟೆ 5ಕ್ಕೆ ಶ್ರೀ ದತ್ತಾತ್ರೇಯ ವೇಲಣಕರ ತಂಡದವರಿಂದ ಭಕ್ತಿ ಸಂಗೀತ, 6.30ಕ್ಕೆ…
ಉಡುಪಿ : ಉಡುಪಿಯ ಅಂಬಲಪಾಡಿ ದೇಗುಲದ ಭವಾನಿ ಮಂಟಪದಲ್ಲಿ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಸಂಯೋಜನೆಯಲ್ಲಿ ಡಿಸೆಂಬರ್ 24 ಮತ್ತು 25ರಂದು ನಡೆಯುವ ಕರ್ನಾಟಕ ಕರಾವಳಿ ನೃತ್ಯ ಕಲಾವಿದರ ‘ನೃತ್ಯೋತ್ಕರ್ಷ 2023’ ನೃತ್ಯ ಸಮ್ಮೇಳನದ ಲಾಂಛನವನ್ನು ದಿನಾಂಕ 11-10-2023ರಂದು ಬಿಡುಗಡೆಗೊಳಿಸಲಾಯಿತು. ಎಲ್ಲ ಉಪಸಮಿತಿಗಳ ಸಂಚಾಲಕರ ಮತ್ತು ಸಮ್ಮೇಳನ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಮಿತಿಯ ಅಧ್ಯಕ್ಷ ಪಿ. ಕಮಲಾಕ್ಷ ಆಚಾರ್ ಅವರು ಲಾಂಛನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕಾರ್ಯಾಧ್ಯಕ್ಷ ಯು.ಕೆ. ಪ್ರವೀಣ್, ಉಪಾಧ್ಯಕ್ಷ ಚಂದ್ರಶೇಖರ ನಾವಡ, ಶಾರದಾಮಣಿ ಶೇಖರ್, ರಾಜಶ್ರೀ ಉಳ್ಳಾಲ, ಕೋಶಾಧಿಕಾರಿ ಸುರೇಶ್ ಅತ್ತಾವರ್, ಪ್ರಧಾನ ಕಾರ್ಯದರ್ಶಿ ಕೆ.ಸುಧೀರ್ ರಾವ್, ಸ್ವಾಗತ ಸಮಿತಿಯ ಸಂಚಾಲಕ ರಾಮಕೃಷ್ಣ ಕೊಡಂಚ, ಸ್ಮರಣಸಂಚಿಕೆ ಸಮಿತಿಯ ಪ್ರಧಾನ ಸಂಪಾದಕಿ ಸುಮಂಗಲಾ ರತ್ನಾಕರ್, ಕಾರ್ಯಕ್ರಮ ಸಂಯೋಜನ ಸಮಿತಿಯ ಸದಸ್ಯೆ ಪ್ರತಿಮಾ ಶ್ರೀಧರ್, ಸೌಮ್ಯಾ ಸುಧೀಂದ್ರ, ಗಿರೀಶ್ ಪುತ್ತೂರು ಉಪಸ್ಥಿತರಿದ್ದರು.
ಮಂಗಳೂರು : ಉರ್ವ ಹೊಯಿಗೆಬೈಲಿನಲ್ಲಿರುವ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಸುಮಾರು 2013ರಲ್ಲಿ ಹರಕೆಗಾಗಿ ಬಂದ ಚೆಂಡೆ ಮತ್ತು ಮದ್ದಳೆಗಳನ್ನು ತಾಳಮದ್ದಳೆಯಲ್ಲಿ ಉಪಯೋಗಿಸಿಕೊಳ್ಳಲಾಯಿತು. ವಾರದಲ್ಲಿ ಒಂದು ದಿನದಂತೆ ಪ್ರತೀ ವಾರ ತಾಳಮದ್ದಳೆಯ ಸೇವೆ ದೇವರಿಗೆ ನಡೆಯುತಿತ್ತು. ಸುಮಾರು 2016ರಲ್ಲಿ ಯಕ್ಷಗಾನ ನಾಟ್ಯ ತರಗತಿ ಆರಂಭವಾಗಿ ಪರಿಸರದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಯಿತು. ಶ್ರೀಕೃಷ್ಣ ಲೀಲೆ, ಕಂಸ ವಧೆ, ಮಹಿಷ ಮರ್ಧಿನಿ, ಸುದರ್ಶನ ವಿಜಯ, ಏಕಾದಶಿ ದೇವಿ ಮಹಾತ್ಮೆ ಇವುಗಳ ಯಶಸ್ವೀ ಪ್ರದರ್ಶನ ಹಾಗೂ ಮತ್ತೊಂದು ಬಾರಿ ಹರಕೆ ರೂಪದಲ್ಲಿ ‘ಸುದರ್ಶನ ವಿಜಯ’ ರಂಗಸ್ಥಳದಲ್ಲಿ ಪ್ರದರ್ಶಿಸಿ ಜನಮೆಚ್ಚುಗೆ ಪಡೆಯಿತು. ಇವು ಈವರೆಗೂ ನಡೆದ ಪ್ರದರ್ಶನಗಳು. ಈ ರೀತಿ ಅಭಿವೃದ್ಧಿ ಹೊಂದಿ ಈಗ ಸ್ವಂತ ರಂಗಸ್ಥಳದ ವ್ಯವಸ್ಥೆಯೊಂದಿಗೆ ‘ಶ್ರೀ ಚಾಮುಂಡೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ’ ಎಂಬ ಹೆಸರಿನಲ್ಲಿ ನೂತನ ಹವ್ಯಾಸಿ ಯಕ್ಷಗಾನ ಮೇಳ ದಿನಾಂಕ 22-10-2023ರಂದು ಆರಂಭಗೊಂಡಿತು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಅಶೋಕನಗರ-ಉರ್ವ ಬಂಟರ ಸಂಘದ ಅಧ್ಯಕ್ಷ ರವಿಚಂದ್ರ ಶೆಟ್ಟಿ ಅಶೋಕನಗರ, ಮಂಗಳೂರಿನ ಕಸ್ತೂರ್ಬಾ…
ಯಕ್ಷಗಾನ ರಂಗದಲ್ಲಿ ಬಹುಮುಖ ಪ್ರತಿಭೆಯ ಅನೇಕ ಕಲಾವಿದರು ನಮಗೆ ಕಾಣಸಿಗುತ್ತಾರೆ. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು, ಯಕ್ಷಗಾನ ರಂಗದಲ್ಲಿ ಬೆಳೆಯುತ್ತಿರುವವರು ಕೇವಲ ಕೆಲವೇ ಮಂದಿ ಮಾತ್ರ. ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡು ಯಕ್ಷಗಾನ ರಂಗದ ಭಾಗವತಿಕೆಯಲ್ಲಿಯೂ ಕೂಡ ಅಷ್ಟೇ ಯಶಸ್ಸನ್ನು ಪಡೆದವರು ಸೃಜನ್ ಗಣೇಶ್ ಹೆಗಡೆ ಗುಂಡೂಮನೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಗುಬ್ಬಿಗ ಗ್ರಾಮದಲ್ಲಿ ಶ್ರೀಧರ್ ಹೆಗಡೆ ಗುಂಡೂಮನೆ ಮತ್ತು ಜಯಲಕ್ಷ್ಮಿ ಹೆಗಡೆ ಇವರ ಮಗನಾಗಿ 26.09.1997ರಂದು ಜನನ. ಎಂ.ಎ(ಕನ್ನಡ) ಸ್ಪೆಷಲ್ ಎಜ್ಯುಕೇಶನ್ ಇನ್ ಕಂಪೇರಿಟಿವ್ ಸ್ಟಡೀಸ್ ಇವರ ವಿದ್ಯಾಭ್ಯಾಸ. ಯಕ್ಷಗಾನದ ಮೇಲೆ ಇದ್ದ ಪ್ರೀತಿ ಯಕ್ಷಗಾನಕ್ಕೆ ಬರಲು ಪ್ರೇರಣೆ. ಭಾಸ್ಕರ್ ನೀರೇರಿ ಮತ್ತು ಕೆ.ಪಿ.ಹೆಗಡೆ ಇವರ ಯಕ್ಷಗಾನ ಗುರುಗಳು. ಹಿಂದಿನ ಭಾಗವತರಿಂದ ಇಂದಿನ ತಲೆಮಾರಿನ ಭಾಗವತರ ತನಕವೂ ಅನೇಕ ಭಾಗವತರ ಭಾಗವತಿಕೆಯನ್ನು ಇಷ್ಟಪಟ್ಟು ಅನೇಕ ಶೈಲಿಯನ್ನು ತಾವೂ ಸ್ವತಃ ರೂಢಿಸಿಕೊಂಡಿದ್ದಾರೆ. ಕಲ್ಯಾಣಿ, ಭೀಮ್ ಪಲಾಸ್, ಹಿಂದೋಳ ಇತ್ಯಾದಿ ನೆಚ್ಚಿನ ರಾಗಗಳು.…
ಯಕ್ಷಗಾನದಲ್ಲಿ ಹೊಸತನ, ನಾವೀನ್ಯ ಪ್ರಯೋಗಶೀಲತೆಗಳು ನಿತ್ಯನೂತನ, ಯಕ್ಷ ಸಂವಿಧಾನದ ಒಳಗಡೆಯೇ ಒಂದಿಷ್ಟು ವಿಭಿನ್ನ- ವಿನೂತನ ಆಶಯಗಳನ್ನು ಪ್ರಸ್ತುತ ಪಡಿಸುವ ಪ್ರಕ್ರಿಯೆಗಳು ಇಂದು ಕಂಡು ಬರುತ್ತಿವೆ. ನಿಜ ಜೀವನದಲ್ಲಿ ಸತಿಪತಿಗಳಾಗಿರುವ ಹವ್ಯಾಸಿ ಕಲಾವಿದರು ಪ್ರಸಂಗದಲ್ಲಿ ಸತಿಪತಿಗಳ ಯುಗಳ ಪಾತ್ರ ನಿರ್ವಹಿಸುವ ಮೂಲಕ ಗಮನ ಸಳೆದಿದ್ದು ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ರಚನೆಯ ಚಿತ್ರ-ಫಲ್ಗುಣ ಎನ್ನುವ ಯಕ್ಷಕಥಾ ರೂಪಕದಲ್ಲಿ. ದಿನಾಂಕ 15-10-2023ರಂದು ಹೀಗೊಂದು ಪರಿಕಲ್ಪನೆ ರಂಗಾರ್ಪಣೆಗೊಂಡಿತು. ನೇಪಥ್ಯದ ಪೌರಾಣಿಕ ಕಥೆಯೊಂದರ ಎಳೆ ಅನುಸರಿಸಿ ಮೊಗೆಬೆಟ್ಟು ಎರಡು ಪಾತ್ರಗಳನ್ನು ಚಿತ್ರಿಸಿ, ಅದಕ್ಕೆ ಅನುಗುಣವಾಗಿ ನೃತ್ಯ, ಪರಿಣಾಮಕಾರಿ ಪದ್ಯಗಳ ರಚಿಸಿದರು. ಪ್ರಸಿದ್ಧ ಹವ್ಯಾಸಿ ಕಲಾವಿದರಾದ ಶಶಾಂಕ್ ಪಟೇಲ್ ಹಾಗೂ ಅವರ ಪತ್ನಿ ಶೃತಿಕಾಶಿ ಇದರಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. ಚಿತ್ರ ಫಲ್ಗುಣ ಕುತೂಹಲ ಹಾಗೂ ಸಾಕಷ್ಟು ಪ್ರತೀಕ್ಷೆಗಳನ್ನು ಸೃಷ್ಟಿಸಿತ್ತು. ನಿಜ ಜೀವನದ ದ೦ಪತಿಗಳು, ಯಕ್ಷಗಾನದಲ್ಲಿಯೂ ಜೋಡಿಯಾಗಿ ಕಾಣಿಸಿಕೊಳ್ಳುವುದೆ೦ದರೆ ನಿರೀಕ್ಷೆಗಳು ಸಹಜ. ದಂಪತಿಗಳ ಕಲಾಭಿವ್ಯಕ್ತಿ, ಸನ್ನಿವೇಶಗಳ ಸೃಷ್ಟಿ, ರಂಗ ಚಲನೆ, ಮುಖ್ಯವಾಗಿ ಸಂಭಾಷಣೆ ಚುಟುಕಾಗಿದ್ದರೂ ಕಲಾವಿದರು ಭಾವನೆಗಳನ್ನು…
ಮೂಡುಬಿದಿರೆ : ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ಆಯೋಜಿಸಿದ್ದ ಸುಮ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸಿದ್ದ ಲೇಖಕಿ ಸುರೇಖಾ ಭೀಮಗುಳಿಯವರ ಕೃತಿ “ತಲ್ಲಣ” ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 08-10-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆ ಮಾಡಿದ ನಿವೃತ್ತ ಕನ್ನಡ ಉಪನ್ಯಾಸಕ, ಪುಸ್ತಕ ವಿಮರ್ಶಕ ಎಸ್.ಪಿ. ಅಜಿತ್ ಪ್ರಸಾದ್ ಇವರು ಮಾತಾನಾಡುತ್ತಾ “ಯಾವುದೇ ಕತೆ, ಕಾವ್ಯದಲ್ಲಿನ ವ್ಯಕ್ತಿಯನ್ನು ಬೇರೆ ಸಾಹಿತ್ಯಕ್ಕೆ ಪರಿಚಯಿಸುವಾಗ ಅಥವಾ ವಿಮರ್ಶಿಸುವಾಗ ಅಲ್ಲೊಂದು ಹೀಗೆಯೇ,ಇಷ್ಟು ಮಾತ್ರ ಎನ್ನುವ ಹಾಗೆ ನಿರ್ಧಿಷ್ಟ ಚೌಕಟ್ಚು ನಿರ್ಮಿಸಿಕೊಳ್ಳಬಾರದು. ಆತ ಅಥವಾ ಆಕೆ ಅಷ್ಟಕ್ಕೆ ಸೀಮಿತವಾಗಿರುವುದಿಲ್ಲ. ಎಲ್ಲರ ದೃಷ್ಠಿಕೋನವೂ ಒಂದೇ ಆಗಿರುವುದಿಲ್ಲವಾಗಿರುವಾಗ ವಿವಿಧ ಆಯಾಮಗಳಲ್ಲಿ ಕಾಣಬೇಕು. ಪೌರಾಣಿಕ ಕಥಾನಕಗಳಿಗೆ ಹೊಸ ಸಾಹಿತ್ಯಿಕ ಲೇಪನ ಕೊಟ್ಟು ಕತೆಯಲ್ಲಿನ ಪಾತ್ರಧಾರಿಗಳನ್ನು ತನ್ನ ಬರಹದಲ್ಲಿ ಮಾತನಾಡಿಸುವ ಬರವಣಿಗೆಯಲ್ಲಿ ನಿಷ್ಣಾತರಾಗಿರುವ ಸುರೇಖಾ ಭೀಮಗುಳಿಯವರ ಬರವಣಿಗೆ ಶೈಲಿ ಚೆನ್ನಾಗಿದೆ. ಮಹಾಭಾರತದ ಕತೆಯಲ್ಲಿನ ಏಳು ಪಾತ್ರಗಳ ಬಗ್ಗೆ, ಅಲ್ಲಿ ಬರುವ ಪಾತ್ರಧಾರಿಗಳ ಸಂಕಟಗಳು, ಅಸಾಹಯಕತೆಗಳನ್ನು ಉಲ್ಲೇಖಿಸಿ ಬರೆದಿರುವ ಕೃತಿಯ…
ಹುಬ್ಬಳ್ಳಿ : ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ ‘ಸಂಗಮ ಸಿರಿ-23’ರ ಪ್ರಶಸ್ತಿಯು ವಚನ ರಚನೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಸರೂರ್ ಗ್ರಾಮದ ಶ್ರೀ ಸಿದ್ದನಗೌಡ ಬಿಜ್ಜೂರ ಅವರು ರಚಿಸಿದ ‘ಮೃದು ವಚನ’ ಆಧುನಿಕ ವಚನ ಸಂಕಲನಕ್ಕೆ ನೀಡಲಾಗಿದೆ. ಪ್ರಶಸ್ತಿಯು ರೂ.10,000/- ನಗದು ಹಾಗೂ ಫಲಕವನ್ನು ಒಳಗೊಂಡಿದ್ದು, ನವೆಂಬರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು. ಈ ಕುರಿತು ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ. ಗೌಡಪ್ಪಗೊಳ ಅದ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಕಳೆದ ವರ್ಷ ಸಂಶೋಧನ ಕ್ಷೇತ್ರದಲ್ಲಿ ಡಾ.ದಂಡೆ ದಂಪತಿಗೆ ಪ್ರಶಸ್ತಿ ನೀಡಲಾಗಿತ್ತು. ಆಯ್ಕೆ ಸಮಿತಿ ಸಭೆಯಲ್ಲಿ ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ,ಪ್ರಧಾನ ಕಾರ್ಯದರ್ಶಿ ಡಾ. ವೀರೇಶ್ ಹಂಡಗಿ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಸಾಹಿತಿ ಮಹಾಂತಪ್ಪ ನಂದೂರು, ಸುಶೀಲೇಂದ್ರ ಕುಂದರಗಿ, ಜಿ.ಎಸ್. ಅಂಗಡಿ, ಡಾ. ಬಿ.ಎಸ್. ಮಾಳವಾಡ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ್ ಅಂಗಡಿ, ಕಾರ್ಯದರ್ಶಿ ರವೀಂದ್ರ ರಾಮದುರ್ಗಕರ್ ಇತರರು ಪಾಲ್ಗೊಂಡಿದ್ದರು. ಕವಿ ಪರಿಚಯ : ಸಿದ್ದನಗೌಡ ಬಿಜ್ಜುರ್…
ಧಾರವಾಡ : ಹೆಸರಾಂತ ವೇಣು ವಾದಕ ಪಂ.ಪ್ರವೀಣ ಗೋಡ್ಖಿಂಡಿ ಇವರಿಗೆ ‘ಸಂಗೀತ ಸಾಧಕ ಪ್ರಶಸ್ತಿ’ಯನ್ನು ದಿನಾಂಕ 08-10-2023ರ ಭಾನುವಾರ ಪ್ರದಾನ ಮಾಡಲಾಯಿತು. ಧಾರವಾಡ ಘರಾಣೆಯ 6ನೇ ತಲೆಮಾರಿನ ಸಿತಾರ ವಾದಕ ಉಸ್ತಾದ್ ಹಮೀದ್ ಖಾನರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ವಿಜಯಕುಮಾರ ಪಾಟೀಲ ಹಾಗೂ ವಿನಾಯಕ ಹೆಗಡೆ ಅವರ ಗಾಯನದ ಜುಗಲ್ಬಂದಿ, ಪ್ರಶಸ್ತಿ ಪುರಸ್ಕೃತ ಪಂ.ಪ್ರವೀಣ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಸಂಗೀತ ಪ್ರಿಯರ ಮನ ಸೆಳೆಯಿತು. ನಂತರ ನಡೆದ ಹಮೀದ ಖಾನ್ ಮತ್ತು ಮೊಹಸಿನ್ ಖಾನ್ ಶಿಷ್ಯ ವೃಂದದವರಿಂದ ‘ಸಿತಾರ ಮಾಧುರ್ಯ’ ಎಂಬ ಸಾಮೂಹಿಕ ಸಿತಾರವಾದನದ ಝೇಂಕಾರ ಸಂಗೀತೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು. ಎಲ್ಲ ಕಲಾವಿದರಿಗೆ ಪಂ.ರವೀಂದ್ರ ಯಾವಗಲ್, ಕೇಶವ ಜೋಶಿ, ಬಸು ಹಿರೇಮಠ, ಚಿನ್ಮಯ ನಾಮಣ್ಣನವರ, ಗೋಪಿಕೃಷ್ಣ, ದಯಾನಂದ ಸುತಾರ, ಚಾರುದತ್ತ ಮಹಾರಾಜ, ನಿಶಾಂತ ದಿವಟೆ ಅವರು ವಿವಿಧ ವಾದ್ಯಗಳ ಸಾಥ್ ಸಂಗತ್ ನೀಡಿದರು. ಈ…