Author: roovari

ಮಂಗಳೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಮಂಗಳೂರು ಗಮಕ ಕಲಾ ಪರಿಷತ್ತು ಜಂಟಿಯಾಗಿ ಮನೆಮನೆ ಗಮಕ ಪಲ್ಲವ -2ನೇ ಕಾರ್ಯಕ್ರಮವು ದಿನಾಂಕ 27-04-2023 ಗುರುವಾರದಂದು ಮಂಗಳೂರಿನ ಡೊಂಗರಕೇರಿ ವೆಂಕಟರಮಣ ದೇವಾಲಯದ ಕಟ್ಟೆಮಾರಿನ ಬಳಿ, ಭೋಜರಾವ್ ಲೇನ್, ಚಿತ್ರಾಹಾರ್ ಅಪಾರ್ಟೆಂಟ್ ನಲ್ಲಿ ಇರುವ ವರದಕುಮಾರಿ ಮಿಯಾಳ ಅವರ ಮನೆಯಲ್ಲಿ ಯಶಸ್ವಿಯಾಗಿ ಜರಗಿತು. ಈ ಕಾರ್ಯಕ್ರಮದಲ್ಲಿ ಡಾ. ಶ್ರೀ ಕೃಷ್ಣ ಭಟ್ ಸುಣ್ಣಗೊಳಿ ಅವರ ವಾಚನ ಮತ್ತು ಶ್ರೀಮತಿ ಯಶೋದಾ ಕುಮಾರಿ ಅವರ ವ್ಯಾಖ್ಯಾನದಲ್ಲಿ ಕವಿ ಕುಮಾರವ್ಯಾಸ ವಿರಚಿತ ಕರ್ಣಾಟ ಭಾರತ ಕಥಾಮಂಜರಿ ಕಾವ್ಯದ ‘ದ್ರೌಪದಿ ಸ್ವಯಂವರ’ ಪ್ರಸಂಗವು ಸೇರಿದ ಪ್ರೇಕ್ಷಕ ವರ್ಗದ ಮೆಚ್ಚುಗೆ ಪಡೆಯಿತು. ನಮ್ಮ ಮಂಗಳೂರು ಗಮಕ ಕಲಾ ಪರಿಷತ್ತಿನ ಅಧ್ಯಕ್ಷರು ಶ್ರೀ ಸುರೇಶ್ ರಾವ್ ಅತ್ತೂರು ಅವರು ಎಲ್ಲರನ್ನೂ ಸ್ವಾಗತಿಸಿ, ವಂದಿಸುವ ಜೊತೆಗೆ ಗಮಕದ ಕಿರು ಪರಿಚಯವನ್ನು ಮಾಡಿದರು. “ಗಮಕಂ ಗೆಲ್ಲೆ, ಗಮಕಂ ಬಾಳ್ಗೆ.”

Read More

ಕುಂದಾಪುರ : ಮಯೂರ ಸ್ಕೂಲ್ ಆಫ್ ಆರ್ಟ್ಸ್ ಪ್ರಸ್ತುತ ಪಡಿಸುವ ‘ಪಂಚತರಂಗ’ ಬೇಸಿಗೆ ಶಿಬಿರವು ಇದೇ ಬರುವ ಮೇ 3ರಿಂದ 7ರವರೆಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯ ಜೆ.ಸಿ.ಐ. ಸಭಾಭವನದಲ್ಲಿ ನಡೆಯಲಿದೆ. ಈ ಶಿಬಿರವು ಹಾಡು ಮತ್ತು ಕಥೆ, ಮಕ್ಕಳಿಗಾಗಿ ನಗೆ ಹಬ್ಬ, ಮಂಡಲ ಆರ್ಟ್, ವಿನೂತನ ರಂಗೋಲಿ ಕಲೆ ಹಾಗೂ ಪುಷ್ಪ ಮಾಲ ವಿನ್ಯಾಸ ಮುಂತಾದ ವಿಷಯಗಳನ್ನೊಳಗೊಂಡಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ರತ್ನಾವತಿ ಬೈಕಾಡಿ, ಅಕ್ಷತಾ ಬೈಕಾಡಿ ಮಂಗಳೂರು, ಪಟ್ಟಾಭಿರಾಮ ಸುಳ್ಯ, ಮಹೇಶ್ ರಾವ್, ಉಡುಪಿ, ವಿದ್ಯಾ ವಿಶ್ವೇಶ್, ವೈಷ್ಣವಿ, ಮಂಗಳೂರು, ರೂಪ ವಸುಂದರಾ, ಪಡುಬಿದ್ರೆ ಭಾಗವಹಿಸಲಿದ್ದಾರೆ. ಈ ಶಿಬಿರವು 5ರಿಂದ 15ನೇ ವಯಸ್ಸಿನ ಮಕ್ಕಳಿಗಾಗಿದ್ದು, ಮೊದಲು ನೊಂದಿಯಿಸಿದ 50 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನಿಗದಿಪಡಿಸಲಾಗಿದೆ. ಶಿಬಿರದ ಶುಲ್ಕವು 800 ರೂ. ಗಳಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9448925539 ಮತ್ತು 7483620524 ಸಂಖ್ಯೆಯನ್ನು ಸಂಪರ್ಕಿಸಬಹುದು.

Read More

ಮಂಗಳೂರು : ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ (ರಿ.) ದಿನಾಂಕ 23-04-2023 ಭಾನುವಾರ ಸಂಜೆ ಉರ್ವಾಸ್ಟೋರಿನ ಶ್ರೀ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದಲ್ಲಿ ಶ್ರೀ ಷ| ಬ್ರ|| ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ‘ಬಸವೇಶ್ವರ ಜಯಂತಿ’ ಆಚರಿಸಲಾಯಿತು. ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ಕೆ.ಎಸ್. ಜಯಪ್ಪ ಇವರ ಅಧ್ಯಕ್ಷತೆಯಲ್ಲಿ ಸಮಾಜ ಸೇವಕರಾದ ಶ್ರೀ ಸುನಿಲ್ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬಸವೇಶ್ವರ ಜಯಂತಿ ಈ ಕಾಲದಲ್ಲಿ ಏಕೆ ಅಚರಿಸಬೇಕು ಎಂಬುದನ್ನು ತಿಳಿಸಿ ಹೇಳಿದರು. ಕವಯತ್ರಿ ಹಾಗೂ ಲೇಖಕರಾದ ಶ್ರೀಮತಿ ಅರುಣಾ ನಾಗರಾಜ್ ಇವರು ‘ವಚನ ಸಾಹಿತ್ಯ ಹಾಗೂ ಬಸವಣ್ಣನವರು ಮಾಡಿದ ಕ್ರಾಂತಿ’ ಎಂಬ ವಿಷಯದಲ್ಲಿ ತಮ್ಮ ಸರಳ ಹಾಗೂ ಅರ್ಥವತ್ತಾದ ಉಪನ್ಯಾಸ ನೀಡಿದರು. ಇದೇ ವೇದಿಕೆಯಲ್ಲಿ 2022ನೇ ಇಸವಿಯಲ್ಲಿ ಉತ್ತಮ ಅಂಕಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕುಮಾರಿ ಕೆ. ಗೌರಿ, ಕುಮಾರಿ ಮಹಾಲಕ್ಷ್ಮೀ ಭಾವಿ ಹಾಗೂ ಮಾಸ್ಟರ್ ಮನ್ವಿತ್ ಎಚ್. ಎಲ್. ಇವರನ್ನು…

Read More

ಕಲಾಭಿ ಥಿಯೇಟರ್ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಮಂಗಳೂರು ಜಂಟಿಯಾಗಿ ಬೇಸಿಗೆ ಶಿಬಿರವೊಂದನ್ನು ಡೊಂಗರಕೇರಿಯ ಕೆನರಾ ಪ್ರೈಮರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಿತು. ‘ಅರಳು’ವ ಪ್ರತಿಭೆಗಳನ್ನು ಮತ್ತಷ್ಟು ಅರಳಿಸುವುದೇ ಶಿಬಿರದ ಉದ್ದೇಶ. ಹತ್ತು ದಿನಗಳ ಶಿಬಿರ ಮಕ್ಕಳ ಪಾಲಿಗೆ ಅಸಾಧಾರಣ ಅನುಭವ‌ ಕೊಟ್ಟಿತು. ಸುತ್ತಣ ರಂಗತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ರಂಗಭೂಮಿ ತರಬೇತಿಯ ಜೊತೆಜೊತೆಗೇ ಒಂದಲ್ಲಾ, ಎರಡಲ್ಲಾ ಮೂರು ಮಕ್ಕಳ ನಾಟಕಗಳನ್ನು ಕೈಗೆತ್ತಿಕೊಂಡು ಸಿದ್ಧಪಡಿಸಿದ್ದೊಂದು ವಿಶೇಷವೆ. ನೂರರಷ್ಟು ಶಿಬಿರಾರ್ಥಿಗಳು ಮೂರು ನಾಟಕಗಳಲ್ಲಿ ಅಭಿನಯಿಸಿದರು. ಎಪ್ರಿಲ್ 26ರಂದು ಕೆನರಾ ಜ್ಯೂನಿಯರ್ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಆ ಮೂರೂ ಮಕ್ಕಳ ನಾಟಕಗಳು ಪ್ರದರ್ಶಿಸಲ್ಪಟ್ಟವು. ‘ದ ಜಂಗಲ್ ಬುಕ್’ನ ರಂಗರೂಪ ‘ಮೊಗ್ಲಿ’ಯನ್ನು ಭುವನ್ ಮಣಿಪಾಲ ನಿರ್ದೇಶಿಸಿದರೆ, ಶಂಕ್ರಯ್ಯ ಘಂಟಿ ರಚಿಸಿದ ‘ರಾಜನ ಸವಾಲ್, ಮಕ್ಕಳ ಕಮಾಲ್’ ನಾಟಕವನ್ನು ಬಿಂದು ರಕ್ಷಿದಿ ನಿರ್ದೇಶಿಸಿದ್ದರು. ಗಜಾನನ ಶರ್ಮ ರಚಿಸಿದ ‘ಮೃಗ ಮತ್ತು ಸುಂದರಿ’ಯನ್ನು ನವೀನ್ ಸಾಣೇಹಳ್ಳಿ ವೇದಿಕೆಯೇರಿಸಿದರು. ವೇದಿಕೆಯ ಕೆಳಗಡೆ ಮಕ್ಕಳ ಹೆತ್ತವರೂ ಪ್ರೇಕ್ಷಕರಾದರು! ವರ್ಣರಂಜಿತವಾದ ಮಕ್ಕಳ…

Read More

ಮಂಗಳೂರು: ಶ್ರೀ ಕಟೀಲು ಮೇಳದಲ್ಲಿ ಕಳೆದ 42 ವರ್ಷಗಳಿಂದ ನಿರಂತರ ಯಕ್ಷಗಾನ ಕಲಾ ಸೇವೆ ಮಾಡುತ್ತಿರುವ ಅನುಭವಿ ಕಲಾವಿದ, ಮೇಳದ ಪ್ರಬಂಧಕ ಶ್ರೀ ಶ್ರೀಧರ ಪಂಜಾಜೆ ಅವರಿಗೆ ಮೇ 13, ಶನಿವಾರ ಕದ್ರಿ ಕಂಬಳ ಗುತ್ತುನಲ್ಲಿ, ಡಾ.ಬಿ.ನಿಶಾಕಾಂತ ಶೆಟ್ಟಿ ಅವರ ಕಟೀಲು ಮೇಳದ ಸೇವೆ ಆಟದ ಸಂದರ್ಭದಲ್ಲಿ, ‘ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ’ ನೀಡಲಾಗುವುದು ಎಂದು ಸಂಯೋಜಕ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ. ಪುಂಡು ವೇಷಧಾರಿಯಾಗಿ ಪೌರಾಣಿಕ ಪಾತ್ರಗಳ ನಿರ್ವಹಣೆಯಲ್ಲಿ ಸಿದ್ಧಿ ಪ್ರಸಿದ್ಧಿ ಪಡೆದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಶ್ರೀಧರ್ ಅವರು ಕಲ್ಲಾಡಿ ವಿಠ್ಠಲ ಶೆಟ್ಟಿ ಅವರ ಪ್ರೇರಣೆ, ಮಾರ್ಗದರ್ಶನದಲ್ಲಿ ಯಕ್ಷಗಾನ ಕಲಿತು, ಮೇಳ ಸೇರಿದವರು. 15 ವರ್ಷಗಳಿಂದ ಕಟೀಲು ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕದ್ರಿ ಶ್ರೀ ಮಂಜುನಾಥ ಯಕ್ಷಗಾನ ಸಂಘದಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕನಾಗಿ, ಮಂಗಳೂರು ನಗರದ ಹವ್ಯಾಸಿ ವಲಯದ ಹಿರಿಯ ಅರ್ಥಧಾರಿಗಳಾಗಿದ್ದ ಕೀರ್ತಿಶೇಷ ಕದ್ರಿ ಕಂಬಳ ಗುತ್ತು ಶ್ರೀ ಬಾಲಕೃಷ್ಣ ಶೆಟ್ಟಿ ಅವರ ಸ್ಮರಣಾರ್ಥ…

Read More

ಬಂಟ್ವಾಳ : ಪರಾರಿಗುತ್ತು ಮನೆ ವಠಾರದಲ್ಲಿ ದಿನಾಂಕ 28-04-2023ರಂದು ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಬಯಲಾಟ ಸಂದರ್ಭ ಏರ್ಪಡಿಸಲಾದ ‘ಪರಾರಿಗುತ್ತು ಬಾಲಕೃಷ್ಣ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಹಾಗೂ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಕಲೆಯಿಂದಾಗಿ ಕಲಾವಿದನಿಗೆ ಬದುಕು; ಕಲಾವಿದನಿಂದ ಕಲೆಗೆ ಬೆಳಕು. ಆದ್ದರಿಂದ ಕಲೆ ಮತ್ತು ಕಲಾವಿದರ ನಡುವೆ ಅವಿನಾಭಾವ ಸಂಬಂಧವಿದೆ. ಹಿರಿಯರನ್ನು ಗೌರವಿಸುವುದು ಮತ್ತು ಕಲೆಯನ್ನು ಆರಾಧಿಸುವುದು ಇವೆರಡೂ ಪವಿತ್ರ ಕಾರ್ಯಗಳು.” ಎಂದವರು ಬಯಲಾಟದ ಸೇವಾದಾರರನ್ನು ಅಭಿನಂದಿಸಿದರು. ಪೊಳಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಮದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ರತ್ನಾಕರ ಶೆಟ್ಟಿ ಮುಂಡಡ್ಕಗುತ್ತು ಮತ್ತು ರಾಮಕೃಷ್ಣ ಆಳ್ವ ಪೊನ್ನೋಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಮರಣೆ – ಪ್ರಶಸ್ತಿ ಪ್ರದಾನ: ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಜಿ.ಶಂಕರ…

Read More

ಯಕ್ಷಗಾನ ಅರ್ಥಧಾರಿಗಳು, ಆಮ್ನಾಯಃ ಭಾರತೀಯ ದಿನದರ್ಶಿಕೆ ಗಾಳಿಮನೆ ಗನ್ಧವಹಸದನಮ್ ನ ಸ್ಥಾಪಕರು ಪ್ರವರ್ತಕರು, ಸಂಸ್ಕೃತ ಪ್ರಾಧ್ಯಾಪಕರು, ಕಾಲಗಣನ ತಜ್ಞರು, ವೈದಿಕರು, ಶಿಕ್ಷಣ ತಜ್ಞರು, ಧಾರ್ಮಿಕ ಚಿಂತಕರು, ಲೇಖಕರು ಮತ್ತು ಪ್ರವಚನಕಾರರು ಡಾ.ವಿನಾಯಕ ಭಟ್ಟ ಗಾಳಿಮನೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಟ್ಠಳ್ಳಿ ಗ್ರಾಮದ  ಗಾಳಿಮನೆಯ ವಿದ್ವಾನ್ ಚಂದ್ರಶೇಖರ ಭಟ್ಟ ಹಾಗೂ ಶ್ರೀಮತಿ ಸವಿತಾ ಭಟ್ಟ ಇವರ ಮಗನಾಗಿ ವೈಶಾಖ ಶುದ್ಧ ನವಮೀ ಕರ್ಕರಾಶಿ, ಆಶ್ಲೇಷಾ ನಕ್ಷತ್ರದಲ್ಲಿ  (23.04.1980) ವಿನಾಯಕ ಭಟ್ಟ ಗಾಳಿಮನೆ ಜನನ. MA Sanskrit,  ಭಗವದ್ಗೀತೆಯಲ್ಲಿ Ph.D., ಕನ್ನಡಭಾಷೆಯಲ್ಲಿ B.Ed., ಸಂಸ್ಕೃತದಲ್ಲಿ ತರ್ಕಶಾಸ್ತ್ರದಲ್ಲಿ ವಿದ್ವತ್ , ಹಿಂದಿಯಲ್ಲಿ ರಾಜಭಾಷಾ ವಿದ್ವಾನ್ ಹೀಗೆ ಕನ್ನಡ ಸಂಸ್ಕೃತ ಹಿಂದಿ ಹೀಗೆ  ಮೂರೂ ಭಾಷೆಗಳಲ್ಲಿ‌  ವಿಶೇಷ ಉನ್ನತ ಅಧ್ಯಯನ.. ಇದು ಇವರ ವಿದ್ಯಾಭ್ಯಾಸ. ಇವರ ಕಾರ್ಯಕ್ಷೇತ್ರ ವ್ಯಾಪ್ತಿ ವಿಭಿನ್ನ ವಿಸ್ತೃತ. ಅದರ ಮೇಲೊಂದು ಪಕ್ಷಿನೋಟ ಯಕ್ಷಗಾನ ಅರ್ಥಧಾರಿಗಳು, ಸಂಸ್ಕೃತ ಪ್ರಾಧ್ಯಾಪಕರು, ಕಾಲಗಣನ ತಜ್ಞರು, ಪಾರಂಪರಿಕ ಪುರೋಹಿತರು ಮತ್ತು ವೈದಿಕರು, ಶಿಕ್ಷಣ ತಜ್ಞರು, ಧಾರ್ಮಿಕ…

Read More

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಸುಮಾರು 5400ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಪ್ರೊ. ಬಿ.ಎ. ವಿವೇಕ ರೈ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಹಾಗೂ ಗ್ರಂಥಾಲಯದ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ 25-04-2023ರಂದು ಮ.ವಿ.ವಿ ಗ್ರಂಥಾಲಯದಲ್ಲಿ ನಡೆಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ಬಿ.ಎ. ವಿವೇಕ ರೈ “ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಮಂಗಳೂರು ವಿವಿಯ ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ್ದೇನೆ. ಈ ಒಂದು ಪ್ರೀತಿ ಅಭಿಮಾನಕ್ಕೆ ಪ್ರತಿಯಾಗಿ ನಾನು ನನ್ನಲ್ಲಿರುವ ಅಪಾರ ಸಂಖ್ಯೆಯ ಪುಸ್ತಕಗಳನ್ನು ಮ.ವಿ.ವಿ. ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದೇನೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಸಂಶೋಧಕರು ಹಾಗೂ ಯುವಜನತೆ ಪಡೆದುಕೊಳ್ಳಬೇಕು. ಜೊತೆಗೆ ಮಂಗಳೂರು ವಿ.ವಿ. ಅಭಿವೃದ್ದಿ ಪಥದಲ್ಲಿ ಮುಂದುವರೆಯಲಿ” ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಮಂ.ವಿ.ವಿ. ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯರು ಮಾತನಾಡುತ್ತ “ಬಿ.ಎ. ವಿವೇಕ ರೈ ಇವರ ಸೇವಾ ಮನೋಭಾವನೆ ಪಾಂಡಿತ್ಯ ನಮಗೆಲ್ಲ ಸ್ಪೂರ್ತಿಯಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಪುಸ್ತಕಗಳ ಮಹತ್ವದ ಬಗ್ಗೆ…

Read More

Mangaluru: The annual summer camps of music and dance organized by Sandesha Foundation for Culture and education ended today with  a grand fiesta of music and dance. Swaraj Shetty of Kantara Fame, chief guest of the day exhorted the student to recognize their passion, abilities and aptitudes and work hard to make a mark in the area they choose. He reminiscenced his childhood where he would stand behind the Television as he wanted to appear in the Television. He made his dream come true after fulfilling his mother’s dream that he wanted to see him as an Engineer. After he…

Read More

ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಎಪ್ರಿಲ್ 16 ಮತ್ತು 17ರಂದು ನಡೆದ ಎರಡು ದಿವಸಗಳ 13ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆದು ಕಲಾಸಕ್ತರ ಮನ ಸೂರೆಗೊಂಡಿತು. ಅಖಿಲ ಕರ್ನಾಟಕ ಗಮಕ ಕಲಾ ಪರಿಷತ್ತು ರಾಜ್ಯ ಮತ್ತು ಬೆಳಗಾವಿ ಜಿಲ್ಲಾ ಘಟಕ ಹಾಗೂ ಶ್ರೀ ವಾಗ್ದೇವಿ ಗಮಕ ಸಂಸ್ಥೆಗಳ ಮೂಲಕ ನಡೆದ ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಗಮಕ ವಿದ್ವಾನ್ ಗಮಕ ಕಲಾಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ವಹಿಸಿದ್ದರು. ದಿನಾಂಕ 16ರಂದು ರವಿವಾರ ಬೆಳಿಗ್ಗೆ 9.30ಕ್ಕೆ ಅಲಂಕೃತ ರಥದಲ್ಲಿ ಸರ್ವಾಧ್ಯಕ್ಷರನ್ನು ಕಾವ್ಯಗ್ರಂಥ ಮತ್ತು ಸರಸ್ವತಿ ವಿಗ್ರಹದೊಂದಿಗೆ ಬ್ಯಾಂಡ್ ವಾದನದಲ್ಲಿ ಮೆರವಣಿಗೆಯ ಮೂಲಕ ಸಂತಮೀರಾ ಆಂಗ್ಲ ಮಾಧ್ಯಮ ಶಾಲೆಯ ಆವರಣದವರೆಗೆ ಕರೆತರಲಾಯಿತು. ಸಭಾ ಕಾರ್ಯಕ್ರಮಕ್ಕೆ ಶ್ರೀಮತಿ ಪ್ರಸನ್ನ ಮತ್ತು ಶ್ರೀಮತಿ ಶಾಂತ ಇವರ ಪ್ರಾರ್ಥನೆ, ವಾಗ್ದೇವಿ ವಿದ್ಯಾರ್ಥಿನಿಯರಿಂದ ನಾಡಗೀತೆ ಮತ್ತು ಎಲ್.ಎಸ್. ಶಾಸ್ತ್ರಿ ಅವರು ಬರೆದ ಸ್ವಾಗತಗೀತೆಯೊಂದಿಗೆ ಚಾಲನೆ ನೀಡಲಾಯಿತು. ಸಮ್ಮೇಳನದ ಸಂಚಾಲಕರಾದ ಶ್ರೀಮತಿ ಭಾರತಿ ಭಟ್ಟ…

Read More