Subscribe to Updates
Get the latest creative news from FooBar about art, design and business.
Author: roovari
ಮೂಡಬಿದ್ರೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಯಕ್ಷ ಶಿಕ್ಷಣ ಯೋಜನೆಯಡಿಯಲ್ಲಿ ಮೂಡಬಿದ್ರೆಯ ಕಡಂದಲೆ ಶ್ರೀ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಡಬಿದ್ರಿ ಘಟಕದ ಸಹಕಾರದೊಂದಿಗೆ ಯಕ್ಷಶಿಕ್ಷಣ ನಾಟ್ಯ ತರಬೇತಿ ಅಭಿಯಾನ ಕಾರ್ಯಕ್ರಮವು ದಿನಾಂಕ 21-06-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಮುಲ್ಕಿ ಮೂಡಬಿದ್ರಿ ಕ್ಷೇತ್ರದ ಶಾಸಕರಾದ ಶ್ರೀಯುತ ಉಮನಾಥ್ ಕೋಟ್ಯಾನ್ ಇವರು ಉದ್ಘಾಟಿಸಿದರು. ವೇದಿಕೆಯಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟಿನ ಮೂಡುಬಿದ್ರೆ ಘಟಕದ ಅಧ್ಯಕ್ಷರಾದ ದಿವಾಕರ್ ಶೆಟ್ಟಿ ಖಂಡಿಗೆ, ಅಭಯಚಂದ್ರ ಜೈನ್, ಶ್ರೀಪತಿ ಭಟ್, ಶಾಲಾ ಮುಖ್ಯೋಪಾಧ್ಯಾಯರಾದ ದಿನಕರ್ ಕುಂಭಾಶಿ, ನಾಟ್ಯ ಗುರುಗಳಾದ ಅನ್ವಿತಾ ಕೆರೆಕಾಡು ಉಪಸ್ಥಿತರಿದ್ದರು ಹಾಗೂ ಪಟ್ಲ ಫೌಂಡೇಶನ್ ಮೂಡುಬಿದ್ರೆ ಘಟಕದಿಂದ ಸದಾಶಿವ ನೆಲ್ಲಿಮಾರ್, ಸದಾಶಿವ ಶೆಟ್ಟಿಗಾರ್, ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಸಮಾಜ ಮಂದಿರ, ನವೀನ್ ಶೆಟ್ಟಿ, ಶಾಲಾ ಶಿಕ್ಷಕ ಶಿಕ್ಷಕಿಯರು, ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ಘಟಕದ ಸಂಚಾಲಕರಾದ ರವಿಪ್ರಸಾದ್ ಕೆ. ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿ, ಶಾಲಾ…
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ‘ಕನಕ ಸ್ಮೃತಿ’ ಕಾರ್ಯಕ್ರಮವನ್ನು ದಿನಾಂಕ 25-06-2024ರಂದು ಮಂಗಳಗಂಗೋತ್ರಿ ಡಾ. ಯು.ಆರ್. ರಾವ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ, 2023-24ನೇ ಸಾಲಿನ ‘ಕನಕ ಪುರಸ್ಕಾರ ಪ್ರದಾನ’ ಮತ್ತು ಕನಕ ಪುರಸ್ಕಾರ ಪಡೆದ ಆಯ್ದ ಗಾಯಕರಿಂದ ಕನಕ ಕೀರ್ತನ ಪ್ರಸ್ತುತಿ ನಡೆಯಲಿದೆ. ವಿಧಾನ ಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನರೇಂದ್ರ ರೈ ದೇರ್ಲ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಬೆಂಗಳೂರು : ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದ ನಾಡೋಜ ಕಮಲಾ ಹಂಪನಾ ಇವರು ದಿನಾಂಕ 22-06-2024 ರ ಶನಿವಾರದಂದು ರಾಜಾಜಿನಗರದ ಮನೆಯಲ್ಲಿ ಮಲಗಿದ್ದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಇವರಿಗೆ 89ವರ್ಷ ವಯಸ್ಸಾಗಿತ್ತು. ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿರುವ ಪ್ರೊ. ಕಮಲಾ ಹಂಪನಾ ಇವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ. ಡಾ. ಕಮಲಾ ಹಂಪನಾ ಅವರ ಬರವಣಿಗೆಯ ಹರಹು ದೊಡ್ಡದು. ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಪ್ರಕಟವಾದ 60ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನಕೃತಿಗಳೂ ಸೇರಿವೆ. ನಾಟಕ, ಕತೆಗಳು ಮತ್ತು ವಚನಗಳಲ್ಲಿ ಸೃಷ್ಟಿಶಕ್ತಿಯ ವಿನ್ಯಾಸ ಕೆನೆಕಟ್ಟಿದೆ. ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas, ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕ…
ಮಂಗಳೂರು : ಯಕ್ಷಗಾನ ಚಿಕ್ಕಮೇಳ ತಿರುಗಾಟದಲ್ಲಿ ಶಿಸ್ತು ಮೂಡಿಸುವ ಉದ್ದೇಶದೊಂದಿಗೆ ‘ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿ ದ .ಕ. ಜಿಲ್ಲೆ’ ಹೆಸರಿನ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿಯ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ದಿನಾಂಕ 17-06-2024ರ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ “ಈ ಹಿಂದೆ ಚಿಕ್ಕಮೇಳಗಳ ತಿರುಗಾಟದ ಸಂದರ್ಭದಲ್ಲಿ ಶಿಸ್ತು ಉಲ್ಲಂಘನೆ, ಯಕ್ಷಗಾನ ಕಲಿಯದವರಿಂದ ಚಿಕ್ಕಮೇಳ ತಿರುಗಾಟ ಹೀಗೆ ಅನೇಕ ದೂರುಗಳು ಕೇಳಿಬಂದಿತ್ತು. ಇದೇ ಕಾರಣಕ್ಕೆ ಸಮಾನ ಮನಸ್ಕರು ಒಟ್ಟುಸೇರಿ ಚಿಕ್ಕಮೇಳಗಳ ಒಕ್ಕೂಟ ರಚಿಸಿದ್ದೇವೆ. ಈಗಾಗಲೇ 45 ತಂಡಗಳು ಒಕ್ಕೂಟದಲ್ಲಿ ನೋಂದಣಿ ಮಾಡಿಕೊಂಡಿವೆ. ಇನ್ನೂ ಕೆಲವು ತಂಡಗಳು ನೋಂದಣಿ ಮಾಡಿಕೊಳ್ಳಲಿವೆ.” ಎಂದರು. ಚಿಕ್ಕಮೇಳಗಳು ನೋಂದಣಿಗೊಂಡ ನಂತರ ತಂಡಗಳು ಒಕ್ಕೂಟದ ಅಧಿಕೃತ ಪರವಾನಿಗೆ ಪಡೆದು ತಿರುಗಾಟ ನಡೆಸಲಿದ್ದಾರೆ. ಸಂಜೆ ಘಂಟೆ 6.00 ರಿಂದ ರಾತ್ರಿ 10.30ರ ವರೆಗೆ ಕನ್ನಡ ಅಥವಾ ತುಳುವಿನ ಯಾವುದಾದರೂ ಒಳ್ಳೆಯ ಸಂದೇಶ ಇರುವ ಸನ್ನಿವೇಶದ ಪ್ರದರ್ಶನವನ್ನು ಪ್ರದರ್ಶಿಸಲಿದೆ.…
ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಯು. ಎ. ಇ. ಪ್ರಸ್ತುತಪಡಿಸಿದ “ದುಬೈ ಯಕ್ಷೋತ್ಸವ 2024- ದಾಶರಥಿ ದರ್ಶನ” ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವು ದಿನಾಂಕ 09-06-2024 ರಂದು ದುಬೈಯ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ರಾಮಾಯಣ ಕಥೆ ಆಧಾರಿತ ‘ದಾಶರಥಿ ದರ್ಶನ’ ಯಕ್ಷಗಾನ ಪ್ರದರ್ಶನ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿ ಮುಖತಃ ನೋಡಿದ ಹಾಗೂ ಜಾಲತಾಣಗಳ ಮೂಲಕವಾಗಿ ನೋಡಿದ ದೇಶ ವಿದೇಶದ ಕಲಾಭಿಮಾನಿಗಳ ಮುಕ್ತ ಕಂಠದ ಪ್ರಶಂಸೆಗೆ ಪಾತ್ರವಾಯಿತು. ಪ್ರಾರಂಭದಲ್ಲಿ ಭಜನೆ ಬಳಿಕ ಚೌಕಿ ಪೂಜೆ, ಪೂರ್ವರಂಗ ಪ್ರದರ್ಶನದ ಮೂಲಕ ರಂಗಚಾಲನೆ ಪಡೆಯಿತು. ಪೂರ್ವರಂಗದಲ್ಲಿ ಕಾಣಿಸಿಕೊಂಡ ಯಕ್ಷಗಾನದ ಪ್ರಾಚೀನ ಪರಂಪರೆಯ ಗಣಪತಿ ಕೌತುಕ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು. ದುಬೈ ಯಕ್ಷಗಾನ ಅಭ್ಯಾಸ ಕೇಂದ್ರ ಪ್ರಾಯೋಜಿತ ‘ಯಕ್ಷಶ್ರೀ ರಕ್ಷಾ’ ಗೌರವ ವಾರ್ಷಿಕ ವಿಶೇಷ ಪ್ರಶಸ್ತಿ -2024ನ್ನು ಸ್ಥಳೀಯ ಯಕ್ಷಗಾನ ಹಿಮ್ಮೇಳ ಕಲಾವಿದ ವೆಂಕಟೇಶ ಶಾಸ್ತ್ರಿ ಪುತ್ತಿಗೆ ಇವರಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಭೀಮ ಜ್ಯುವೆಲ್ಲರಿಯ ನಾಗರಾಜ…
ಪುತ್ತೂರು : ಪ್ರಧಾನ ಮಂತ್ರಿ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ದತ್ತು ತೆಗದುಕೊಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿ ‘ಶಿಕ್ಷಣದಲ್ಲಿ ರಂಗಭೂಮಿ’ ಕಾರ್ಯಗಾರ ಕಾರ್ಯಕ್ರಮವು ದಿನಾಂಕ 16-06-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದ ರಂಗ ಕಲಾವಿದೆ ವಸಂತ ಲಕ್ಷ್ಮಿ ಪುತ್ತೂರು ಮಾತನಾಡಿ “ನಾವು ಭಾವನೆಗಳೊಂದಿಗೆ ಬದುಕು ಸಾಗಿಸುತ್ತೇವೆ. ರಂಗಭೂಮಿ ಭಾವನೆಗಳ ಭಾಷ್ಯ. ಮಕ್ಕಳ ಕನಸುಗಳಿಗೆ ವೇದಿಕೆ ಕಲ್ಪಿಸಿಕೊಡುವ ಭಾವನೆಗಳು ಶಾಲೆಗಳಲ್ಲಿ ಮೂಡಿಬಂದಾಗ ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳಿಗೆ ಬೆಳಕು ಚೆಲ್ಲಿದಂತಾಗುತ್ತದೆ.” ಎಂದು ನುಡಿದರು. ಶಾಲಾ ಶಿಕ್ಷಣದಲ್ಲಿ ರಂಗಭೂಮಿ ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿ ಶನಿವಾರ ಮಧ್ಯಾಹ್ನದ ನಂತರದ ಅವಧಿಯಲ್ಲಿ ನಡೆಯುವ ರಂಗ ತರಬೇತಿ ಕಾರ್ಯಕ್ರಮವನ್ನು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿದ್ದು, ಈಗಾಗಲೇ ಯಕ್ಷಗಾನ ಹಾಗೂ ಭರತನಾಟ್ಯ ತರಗತಿಗಳು ನಡೆಯುತ್ತಿದೆ. ಈ ವರ್ಷ ವಿಶೇಷವಾಗಿ ನಾಟಕ ತರಬೇತಿ ಕಾರ್ಯಾಗಾರವನ್ನು ಮಕ್ಕಳಿಗೆ ಉಚಿತವಾಗಿ…
ಎರಡು ವಿಷಯಗಳು ನಮ್ಮನ್ನು ಸಂತೋಷದಿಂದ ದೂರ ಮಾಡುತ್ತವೆ. ಒಂದು ಗತದಲ್ಲಿ ಬದುಕುವುದು. ಇನ್ನೊಂದು ಬೇರೆಯವರಂತೆ ನಾವು ಬದುಕಬೇಕೆಂದು ಆಸೆ ಪಡುವುದು. ಸುಂದರವಾದ ಬದುಕು ಕಟ್ಟಿಕೊಳ್ಳುವಲ್ಲಿ ಇವು ಮುಳ್ಳುಗಳು. ಉತ್ತಮ ಹವ್ಯಾಸಗಳು ಇಂಥಹಾ ಮುಳ್ಳುಗಳ ಮೊನಚಿನ ತೀವೃತೆಯನ್ನು ಕಡಿಮೆ ಮಾಡುತ್ತದೆ. ಓದು, ಜಪ, ಧ್ಯಾನಗಳ ಜೊತೆ ಬಹಳ ಸುಲಭವಾಗಿ ಮನಸ್ಸಿಗೆ ಸಮಾಧಾನ ಕೊಡುವ ಸಾಧನ ಸಂಗೀತ. ಸ್ವರ, ತಾಳ, ಲಯಗಳ ಮಿಲನದೊಂದಿಗೆ ಭಾವಗಳು ಸಂಗಮಗೊಂಡು ಅಂತರಂಗದ ತುಡಿತಕ್ಕೆ ಕಾರಣವಾಗುವುದನ್ನು ಸಂಗೀತ ಎನ್ನಬಹುದು. ಸಂಗೀತಕ್ಕೆ ಮನ ಸೋಲದವರಿಲ್ಲ. ಮನುಷ್ಯರಲ್ಲದೆ ಪ್ರಕೃತಿಯೂ ಸಂಗೀತಕ್ಕೆ ತಲೆದೂಗುತ್ತದೆ. ಸಸ್ಯಗಳು ಫಲ ಕೊಡುವಲ್ಲಿ, ಹಸುಗಳು ಹಾಲು ಕೊಡುವಲ್ಲಿ ಸಂಗೀತ ಪರಿಣಾಮಕಾರಿಯಾಗಿದೆ ಎಂಬುದು ವಿಜ್ಞಾನಿಗಳ ಸಂಶೋಧನೆಯ ಫಲ. ಪ್ರತೀ ಜೀವಿಯಲ್ಲೂ ಸಂಗೀತ ಇದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಎಳೆಯ ಮಕ್ಕಳು ಶಾಲೆ ಹಾಗೂ ಮನೆ ಎರಡೂ ಕಡೆ ಒತ್ತಡದಿಂದಲೇ ಬೆಳೆಯುತ್ತಿದ್ದರೆ, ಮಕ್ಕಳ ಹೆತ್ತವರೂ ಕೆಲಸ ಕಛೇರಿ ಮತ್ತು ಮನೆ ನಿರ್ವಹಣೆ ಹೀಗೆ ಒತ್ತಡದಿಂದಲೇ ಬದುಕುತ್ತಿದ್ದಾರೆ. ಮಕ್ಕಳಿಗೆ ವಿದ್ಯಾರ್ಜನೆಯಲ್ಲಿ ಶ್ರದ್ಧೆ…
ಮುಳ್ಳೇರಿಯ : ಕಾರಡ್ಕ ಸರಕಾರಿ ಶಾಲೆಯ ಕನ್ನಡ ಮಾಧ್ಯಮದ 9ನೇ ತರಗತಿಯ ವಿದ್ಯಾರ್ಥಿಗಳೇ ಹೊರತಂದಿರುವ ‘ರಜಾ ಮಜಾ’ ಡಿಜಿಟಲ್ ರೂಪದ ಪುಸ್ತಕ ಬಿಡುಗಡೆ ಕಾರ್ಯಕ್ರಮ ದಿನಾಂಕ 20-06-2024ರಂದು ನಡೆಯಿತು. ಕಾರಡ್ಕ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಅಧ್ಯಾಪಿಕೆ ಅಂಬಿಕಾ ಟೀಚರ್ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ “ಬೇಸಿಗೆ ರಜಾ ಕಾಲದ ಸವಿಗಳನ್ನು ಬರವಣಿಗೆ ರೂಪಕ್ಕಿಳಿಸಿರುವುದು ಒಳ್ಳೆಯ ವಿಚಾರವಾಗಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಪೂರ್ಣವಾಗಿ ವಿದ್ಯಾರ್ಥಿಗಳೇ ಶ್ರಮವಹಿಸಿ ಈ ಡಿಜಿಟಲ್ ಪುಸ್ತಕವನ್ನು ಹೊರ ತಂದಿರುವುದು ಶ್ಲಾಘನೀಯ” ಎಂದು ಹೇಳಿದರು. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಕಥೆ, ಕವಿತೆ, ಓದಿನ ಟಿಪ್ಪಣಿ, ಪ್ರವಾಸ ಕಥನ, ಪ್ರಬಂಧ, ನಾಟಕ ಮೊದಲಾದವುಗಳನ್ನು ಈ ಕೃತಿಯು ಒಳಗೊಂಡಿದೆ. 8ನೇ ತರಗತಿಯ ದೇವಿಕಾ ಅವರು ಓದಿನ ಮಹತ್ವದ ಬಗ್ಗೆ ತಿಳಿಸಿದರು. ಸಹಶಿಕ್ಷಕರಾದ ಡಾ. ಶ್ರೀಶ ಕುಮಾರ, ರತೀಶ, ಚೈತ್ರಾ, ಚೈತ್ರಾ ನಾಯಕ್, ಅಖಿಲಾ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಂಜುಳಾ ಸ್ವಾಗತಿಸಿ, ಭೂಮಿಕಾ ವಂದಿಸಿ, ಸಹನಾ ನಿರೂಪಿಸಿದರು. ವಾಚನ ವಾರಾಚರಣೆಯ ವಿಶೇಷ…
‘ಕವಚ’ ಎಂಬ ಕೃತಿಯು ರಾಧಕೃಷ್ಣ ಕಲ್ಚಾರ್ ಇವರ ಎರಡನೇ ಕಾದಂಬರಿಯಾಗಿದೆ. ಮಹಾಭಾರತದ ಪಾತ್ರಗಳ ಪೈಕಿ ಮುಂಚೂಣಿಯಲ್ಲಿರುವ ದಿಟ್ಟ ನಾಯಕರಲ್ಲಿ ಒಬ್ಬನಾಗಿರುವ ಕರ್ಣನ ಬದುಕಿನ ಕುರಿತು ಹೆಣೆದ ವಿಚಾರಗಳು ಇಲ್ಲಿನ ಕಥಾವಸ್ತು. ಕ್ಷತ್ರಿಯನಾಗಿ ಹುಟ್ಟಿದರೂ ಕ್ಷತ್ರಿಯನಾಗಿ ಬದುಕದೆ ‘ಸೂತಸುತ’ ಎಂಬ ಹಣೆಪಟ್ಟಿಯನ್ನು ಹೊತ್ತು ಅನುಭವಿಸಿದ ತುಮುಲಗಳನ್ನು ಪ್ರಸ್ತುತ ಕಾದಂಬರಿಯಲ್ಲಿ ಕಾಣಬಹುದು. ‘ಯಾರದೋ ತೋಳುಗಳು ನನ್ನನ್ನೆತ್ತಿಕೊಂಡವು’ ಎಂಬ ಸ್ವಗತದಿಂದ ತೊಡಗುವ ಕಾದಂಬರಿ ಸ್ವಗತದ ಹಾದಿಯಲ್ಲಿ ಮುಂದುವರೆಯುತ್ತಾ ಸಾಗುವುದು ಕಾದಂಬರಿಯ ವೈಶಿಷ್ಟ್ಯವಾಗಿದೆ. ಪೌರಾಣಿಕ ಪಾತ್ರವನ್ನು ಪ್ರಥಮ ಪುರುಷದಲ್ಲಿ ನಿರೂಪಿಸದೆ ಉತ್ತಮ ಪುರುಷ ವಾಚಕದಲ್ಲಿ ಪರಿಭಾವಿಸಿ ಪಾತ್ರಕ್ಕೊಪ್ಪುವ ಭಾವಗಳನ್ನು ನಿರಂತರವಾಗಿ ವಿವರಿಸುವುದು ತ್ರಾಸದಾಯಕವಾದರೂ ಲೇಖಕರು ಅದರಲ್ಲಿ ಗೆದ್ದಿದ್ದಾರೆ. ದೂರ್ವಾಸ ಮುನಿಗಳನ್ನು ಸತ್ಕರಿಸಿದುದರ ಫಲವಾಗಿ ವರದ ರೂಪದಲ್ಲಿ ಕುಂತಿಗೆ ಅನುಗ್ರಹದ ರೂಪದಲ್ಲಿ ದೊರಕಿದ ಮಂತ್ರಗಳನ್ನು ತೀವ್ರ ಕೌತುಕದಿಂದ ಪರೀಕ್ಷಿಸಲು ಮುಂದಾಗಿದ್ದೇ ಭವಿಷ್ಯದಲ್ಲಿ ಆಕೆಯೂ ಸೇರಿದಂತೆ ಆಕೆಯ ಪುತ್ರರು ಎದುರಿಸಿದ ಹಲವು ಘಟನೆಗಳಿಗೆ ಕಾರಣವಾಯಿತು. ಮೂಡಣದಲ್ಲಿ ಮಿಂಚುತ್ತಿದ್ದ ಸೂರ್ಯನಿಂದ ಪಡೆದ ಕಂದನನ್ನು ಸಮಾಜದ ಕಣ್ಣುಗಳಿಗೆ ಹೆದರಿ, ನದಿಯಲ್ಲಿ ತೇಲಿ ಬಿಟ್ಟ…
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ನಗರ ಘಟಕ ಇದರ ಮುಖಾಂತರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಲೆಗಳಲ್ಲಿ ನಡೆಯುವ ಯಕ್ಷಧ್ರುವ – ಯಕ್ಷ ಶಿಕ್ಷಣ ತರಗತಿ ವತಿಯಿಂದ ‘ಉಚಿತ ಯಕ್ಷಗಾನ ತರಬೇತಿ’ಯ ಉದ್ಘಾಟನಾ ಸಮಾರಂಭವನ್ನು ಶಕ್ತಿನಗರ ನಾಲ್ಯಪದವು ಇಲ್ಲಿರುವ ಪಿ.ಎಂ. ಶ್ರೀ ಕುವೆಂಪು ಶತಮನೋತ್ಸವ ಉ.ಮಾ.ಹಿ.ಪ್ರಾ. ಶಾಲೆಯಲ್ಲಿ ದಿನಾಂಕ 22-06-2024ರಂದು ಆಯೋಜಿಸಲಾಗಿದೆ. ಈ ಸಮಾರಂಭವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ಉದ್ಘಾಟನೆ ಮಾಡಲಿದ್ದಾರೆ.